ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್‌ ದೋಚಿದ ಖದೀಮರು! ಇದಕ್ಕೆ ಯಾಯೂ ಸಹಾಯಕ್ಕೆ ಬರಲ್ಲ ಎಂದ ನೆಟ್ಟಿಗರು

Viral News: ಕಷ್ಟ ಕಾಲದಲ್ಲಿ ಸಹಾಯ ಮಾಡಿದವರಿಗೇ ಕೇಡು ಬಗೆಯುವ ಅನೇಕರಿದ್ದಾರೆ. ತೆಲಂಗಾಣದಸ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಇಂತಹದ್ದೇ ಘಟನೆ ಸದ್ಯ ಅನೇಕರ ನಿದ್ದೆಗೆಡಿಸಿದೆ. ಸಹಾಯ ಮಾಡೋದೇ ತಪ್ಪಾ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಅಪಘಾತದ ನಾಟಕವಾಡಿ ಸಹಾಯ ಮಾಡಿದ ವ್ಯಕ್ತಿಯಿಂದಲೇ ದುಬಾರಿ ಮೊತ್ತದ ಮೊಬೈಲ್ ಕದ್ದ ಘಟನೆಯೊಂದು ನಡೆದಿದೆ. ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೊ ಭಾರಿ ವೈರಲ್ ಆಗಿದೆ.

ಗಾಯಗೊಂಡಂತೆ ನಟಿಸಿ ಐಫೋನ್ ಕದ್ದ ಕಳ್ಳರು: ವಿಡಿಯೊ ವೈರಲ್‌

ಗಾಯಗೊಂಡಂತೆ ನಟಿಸಿ ಫೋನ್ ಕದ್ದ ಕಳ್ಳರು -

Profile
Pushpa Kumari Jul 6, 2026 7:12 PM

ದೆಹಲಿ, ಜು. 6: ಇತ್ತೀಚೆಗೆ ಅಪರಿಚಿತರಿಗೆ ಸಹಾಯ ಮಾಡುವ ಮುನ್ನ ನೂರು ಬಾರಿ ಯೋಚಿಸುವಂತಾಗಿದೆ. ಕಷ್ಟದಲ್ಲಿದ್ದಾ ಸಹಾಯ ಹಸ್ತ ಚಾಚುವವರಿಗೆ ತಿರುಗಿ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಅಪಘಾತದ ನಾಟಕವಾಡಿ ಸಹಾಯ ಮಾಡಿದ ವ್ಯಕ್ತಿಯಿಂದಲೆ ದುಬಾರಿ ಮೊತ್ತದ ಐಮೊಬೈಲ್ ಕದ್ದ ಘಟನೆಯೊಂದು ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಭಾರಿ ವೈರಲ್ (Viral News) ಆಗಿದೆ.

ವ್ಯಕ್ತಿಯೊಬ್ಬ ದಾರಿಹೋಕರ ಗಮನ ಸೆಳೆಯಲು ರಸ್ತೆಯ ಮಧ್ಯದಲ್ಲಿ ಬಿದ್ದ ಹಾಗೆ ನಾಟಕವಾಡಿದ್ದಾನೆ. ಹೈದರಾಬಾದ್‌ನ ಸರೂರ್‌ ನಗರದಲ್ಲಿ ಈ ಘಟನೆ ನಡೆದಿದ್ದು ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ಯು ಟರ್ನ್ ಮಾಡಿ ರಸ್ತೆ ದಾಟುತ್ತಿದ್ದ ದಾರಿ ಹೋಕನ ಕಡೆಗೆ ಬಂದಿದ್ದಾನೆ. ಸ್ವಲ್ಪ ಕ್ಷಣಗಳ ನಂತರ, ಬೈಕ್‌ನಲ್ಲಿರುವ ವ್ಯಕ್ತಿ ರಸ್ತೆಗೆ ಬಿದ್ದಂತೆ ಮಾಡಿ ತನ್ನ ಬೈಕ್‌ ಸಮತೋಲನ ಕಳೆದುಕೊಂಡಿರುವಂತೆ ನಟಿಸಿದ್ದಾನೆ. ಅವನು ಕಷ್ಟ ಪಡುತ್ತಿರುವುದನ್ನು ನೋಡಿ ಹತ್ತಿರದಲ್ಲಿ ನಡೆದುಕೊಂಡು ನಡೆಯುತ್ತಿದ್ದ ವ್ಯಕ್ತಿ, ತಕ್ಷಣ ಅವನಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾನೆ. ಮತ್ತೆ ನಡೆದಿದ್ದೇ ಯಾರೂ ಊಹಿಸದ ಘಟನೆ.

ವಿಡಿಯೊ ನೋಡಿ:



ಬೈಕರ್ ಸಹಾಯ ಮಾಡಲು ಕೆಳಗೆ ಬಾಗಿದಾಗ ಬಿದ್ದಂತೆ ನಾಟಕವಾಡಿದ ವ್ಯಕ್ತಿ ಶರ್ಟ್‌ನ ಮುಂಭಾಗದ ಜೇಬಿನಲ್ಲಿಟ್ಟಿದ್ದ ಐಫೋನ್ ಕದ್ದಿದ್ದಾನೆ‌. ಈ ಫೋನ್‌ನ ಬೆಲೆ 1 ಲಕ್ಷ ರುಪಾಯಿ ಎಂದು ತಿಳಿದು ಬಂದಿದೆ. ಫೋನ್ ಕದ್ದು ಕೆಲವೇ ಸೆಕೆಂಡುಗಳಲ್ಲಿ, ಇಬ್ಬರೂ ಖದೀಮರು ಬೈಕ್ ಹತ್ತಿ ಅಲ್ಲಿಂದ ವೇಗವಾಗಿ ಪರಾರಿಯಾಗಿದ್ದಾರೆ.

ಟಿಕೆಟ್ ರಹಿತವಾಗಿ ಪ್ರಯಾಣಿಸಲು ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು

ಇಬ್ಬರು ಕ್ಷರ್ಣಾರ್ಧದಲ್ಲೇ ಕೈ ಚಳಕ ತೊರಿದ್ದಾರೆ. ಗಾಬರಿಗೊಂಡ ಫೋನ್‌ ಕಳೆದುಕೊಂಡ ವ್ಯಕ್ತಿ ಬೈಕ್ ಸವಾರರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಳ್ಳರು ಪರಾರಿಯಾಗಿದ್ದಾರೆ. ಈ ಘಟನೆಯು ಅಲ್ಲಿದ್ದವರನ್ನು, ವಿಡಿಯೊ ನೋಡಿದ ನೆಟ್ಟಿಗರನ್ನು ಆಘಾತಕ್ಕೊಳಪಡಿಸಿದೆ. ಅನೇಕರು ತುರ್ತು ಸಂದರ್ಭಗಳಲ್ಲಿಯೂ ಅಪರಿಚಿತರಿಗೆ ಸಹಾಯ ಮಾಡುತ್ತಾರೆ. ಆದರೆ ಇಂತಹ ಘಟನೆ ನಂಬಿಕೆ ದ್ರೋಹ ಮಾಡಿದಂತೆ ಎಂದು ಕಿಡಿಕಾರಿದ್ದಾರೆ.

ನೆಟ್ಟಿಗರೊಬ್ಬರು, ʼʼಇಂತಹ ವ್ಯಕ್ತಿಗಳೂ ಇದ್ದರಾ? ಒಂದು ದಿನ ಕರ್ಮವು ಅವರನ್ನು ತೀವ್ರವಾಗಿ ಕಾಡುತ್ತದೆʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼಇವರಿಗೆ ಸರಿಯಾದ ಶಿಕ್ಷೆಯನ್ನು ಪೊಲೀಸರು ವಿಧಿಸಬೇಕುʼʼ ಎಂದು ಕಮೆಂಟ್ ಮಾಡಿದ್ದಾರೆ.