Viral Video: ಎತ್ತಿನ ಬಂಡಿ ಜತೆ ತೆರಳುತ್ತಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಸಾವು: ವಿಡಿಯೊ ವೈರಲ್
ಎತ್ತಿನ ಗಾಡಿ ಹರಿದು ಮಹಿಳೆ ಸಾವನಪ್ಪಿದ್ದ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯು ತನ್ನ ಎತ್ತಿನ ಗಾಡಿಯೊಂದಿಗೆ ರಸ್ತೆ ಬದಿಯಲ್ಲಿ ಅತ್ಯಂತ ಜಾಗರೂಕತೆಯಿಂದ ಬಂದರೂ ಕೂಡ ಈ ಅಪಘಾತವಾಗಿದ್ದು ವಿಚಿತ್ರವೆನಿಸಿದೆ. ಸದ್ಯ ಈ ಅಪಘಾತದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಎತ್ತಿನ ಬಂಡಿ ಜತೆ ತೆರಳುತ್ತಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಸಾವು -
ಉತ್ತರ ಪ್ರದೇಶ: ಇತ್ತೀಚಿನ ದಿನದಲ್ಲಿ ಭೀಕರ ಅಪಘಾತಗಳು ಆಗುವ ಪ್ರಮಾಣ ಹೆಚ್ಚಾಗಿದೆ. ಬೇಜವಾಬ್ದಾರಿ ತನದಿಂದ ವಾಹನ ಚಲಾಯಿಸಿದ್ದ ಪರಿಣಾಮ ಬಸ್ ಕಾರಿಗೆ ಢಿಕ್ಕಿ, ಪಾದಾಚಾರಿ ಮೇಲೆ ವಾಹನ ಹರಿದುಹೋಗುವುದು ಹೀಗೆ ನಾನಾ ತರನಾದ ಅಪಘಾತ, ಅವಘಡಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅಂತೆಯೇ ಮಹಿಳೆಯೊಬ್ಬರ ಮೇಲೆ ಎತ್ತಿನ ಗಾಡಿ ಹರಿದು ಆಕೆ ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯು ತನ್ನ ಎತ್ತಿನ ಗಾಡಿಯೊಂದಿಗೆ ರಸ್ತೆ ಬದಿಯಲ್ಲಿ ಅತ್ಯಂತ ಜಾಗರೂಕತೆಯಿಂದ ಬಂದರೂ ಕೂಡ ಈ ಅಪಘಾತವಾಗಿದ್ದು ಅಚ್ಚರಿ ಎನಿಸಿದೆ. ಸದ್ಯ ಈ ಅಪಘಾತದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಿನೌನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೈರಲ್ ಆದ ವಿಡಿಯೊದಲ್ಲಿ ಕಮಲೇಶ್ ಎಂಬ 55 ವರ್ಷದ ಮಹಿಳೆಯು ತನ್ನ ಎತ್ತಿನ ಗಾಡಿಯನ್ನು ನಿಯಂತ್ರಿಸಲು ಪ್ರಯತ್ನಿಸುವಾಗ ಈ ಅಪಘಾತ ನಡೆದಿದ್ದು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದು. ಮಹಿಳೆ ಸುಮಾರು ದೂರದ ತನಕ ತನ್ನ ಎತ್ತಿನ ಬಂಡಿಯೊಂದಿಗೆ ತೆರಳಿದ್ದಾಳೆ. ಬಳಿಕ ರಸ್ತೆ ಬದಿಯಿಂದ ತೆರಳುವಂತೆ ಎತ್ತಿಗೆ ಮಾರ್ಗದರ್ಶನ ಮಾಡಿದ್ದಾಳೆ. ಎತ್ತು ಕ್ರಾಸ್‌ನಲ್ಲಿ ತಿರುಗುತ್ತಿದ್ದಂತೆ ಎತ್ತಿನ ಗಾಡಿ ಹಾಗೂ ಪಕ್ಕದ ಗೋಡೆ ನಡುವೆ ಆಕೆ ಸಿಲುಕಿದ್ದಾಳೆ.
ವೈರಲ್ ವಿಡಿಯೊ ಇಲ್ಲಿದೆ:
मेरठ के रोहटा क्षेत्र के एक गांव में यहां बैलगाड़ी और दीवार के बीच फंसी एक महिला की दर्दनाक मौत हो गई। हादसा गांव की तंग गली में उस वक्त हुआ जब अचानक बैल बेकाबू होकर एक तरफ भागा। #meeurt #VideoViral pic.twitter.com/CXu9tyQfEG
— Pawan Kumar Sharma (@pawanks1997) November 16, 2025
ಕಮಲೇಶ್ ಕಬ್ಬು ಸುಲಿದು ತನ್ನ ಹೊಲದಿಂದ ಹಿಂತಿರುಗಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಎತ್ತಿನ ಬಂಡಿಯೊಂದಿಗೆ ಮನೆಯ ಕಡೆಗೆ ಆಕೆ ನಡೆದುಕೊಂಡು ಹೋಗುತ್ತಿದ್ದಳು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮಹಿಳೆ ತನ್ನ ಗ್ರಾಮಕ್ಕೆ ತೆರಳುತ್ತಿದ್ದಂತೆ ಎತ್ತು ಭಯಭೀತವಾಗಿ ಎಲ್ಲಿಗೆ ಹೋಗುದೆಂದು ತಿಳಿಯದೇ ಗೋಡೆಯ ಪಕ್ಕವೆ ಕ್ರಾಸ್ ಆಗಲು ಮುಂದಾಗಿದೆ. ಎತ್ತಿನ ಬಂಡಿಯ ನಡುವೆ ಆಕೆ ಸಿಲುಕಿದ್ದ ಪರಿಣಾಮ ಆಕೆಗೆ ಗಂಭೀರವಾಗಿ ಗಾಯವಾಗಿದೆ.
ಇದನ್ನು ಓದಿ:Viral Video: ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ತಳಿಸಿದ ಪ್ರಯಾಣಿಕ; ಶಾಕಿಂಗ್ ವಿಡಿಯೋ ವೈರಲ್
ಗ್ರಾಮಸ್ಥರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಿಸದೆ ಆಕೆ ಅಲ್ಲಿಯೇ ಮೃತಪಟ್ಟಿದ್ದಾಳೆ. ಕಮಲೇಶ್ ಅವರ ಪತಿ ಮಹಾವೀರ್ ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ಪತಿಯ ಮರಣದ ಬಳಿಕ ಕಮಲೇಶ್ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಜಮೀನಿನ ಕೆಲಸ ಮಾಡುತ್ತಿದ್ದಾರೆ.
ರೋಹ್ತಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ 19 ಸೆಕೆಂಡುಗಳ ಈ ವಿಡಿಯೊ ಸಂಚಲನ ಉಂಟು ಮಾಡಿದೆ. ರಸ್ತೆಯಲ್ಲಿ ಕಾರು, ಲಾರಿ, ಬಸ್‌ನಿಂದ ಪಾದಾಚಾರಿ ಸತ್ತಿದ್ದು ಕೇಳಿದ್ದೇವೆ. ಆದರೆ ಇಲ್ಲಿ ಎತ್ತಿನ ಗಾಡಿಯಿಂದಲೂ ಅಪಘಾತ ಆಗುತ್ತೆ ಎಂಬುದು ಸಾಬೀತಾಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ. ವಿಡಿಯೊ ಕಂಡರೆ ಮಹಿಳೆಗೆ ಸಣ್ಣ ಪುಟ್ಟ ಗಾಯ ಆಗಿರಬಹುದು ಎಂದು ಅನಿಸುತ್ತದೆ. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದರೆ ನಿಜಕ್ಕೂ ಶಾಕಿಂಗ್ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.