ಮಹಿಳಾ ದಿನದಂದು ಮದುವೆ ವಿಚಾರಕ್ಕೆ ಬೇಸತ್ತು ತಲೆಬೋಳಿಸಿಕೊಂಡ ಯುವತಿ! ವಿಡಿಯೊ ವೈರಲ್
Viral Video: ಹಿಂದಿನ ಕಾಲದಲ್ಲಿ ಹುಡುಗಿಯರು 18 ವರ್ಷ ವಯಸ್ಸು ಹಾಗೆಯೇ ಹುಡುಗರಿಗೆ 21 ವರ್ಷವನ್ನು ತಲುಪಿದಾಗ ಮದುವೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಉದ್ಯೋಗ, ವೈಯಕ್ತಿಕ ಸ್ವಾತಂತ್ರ್ಯ ಹೀಗೆ ನಾನಾ ಕಾರಣದಿಂದ ಯುವ ಜನರು ಹಿಂಜರಿಯುತ್ತಿದ್ದಾರೆ. ಇದೀಗ ಯುವತಿಯೊಬ್ಬಳು ಮಹಿಳಾ ದಿನದಂದೇ ಮದುವೆ ವಿಚಾರಕ್ಕೆ ಬೇಸೆತ್ತು ತಲೆ ಬೊಳಿಸಿ ಕೊಂಡಿರುವ ಘಟನೆಯೊಂದು ವರದಿಯಾಗಿದೆ.
ಮದುವೆ ವಿಚಾರಕ್ಕೆ ಬೇಸತ್ತು ತಲೆಬೋಳಿಸಿಕೊಂಡ ಯುವತಿ -
ಬೆಂಗಳೂರು, ಮಾ.9: ಮದುವೆ (Marriage) ಎನ್ನುವುದು ಎಲ್ಲರ ಜೀವನದ ಒಂದು ಮಹತ್ವದ ಕ್ಷಣವಾಗಿದೆ. ಆದರೆ ಇತ್ತೀಚೆಗೆ ಮದುವೆ ವಿಚಾರ ಅಂತ ಬಂದಾಗ ಯುವ ಜನರು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹುಡುಗಿಯರು 18 ವರ್ಷ ವಯಸ್ಸು ಹಾಗೆಯೇ ಹುಡುಗರಿಗೆ 21 ವರ್ಷವನ್ನು ತಲುಪಿದಾಗ ಮದುವೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಉದ್ಯೋಗ, ವೈಯಕ್ತಿಕ ಸ್ವಾತಂತ್ರ್ಯ ಹೀಗೆ ನಾನಾ ಕಾರಣದಿಂದ ಯುವ ಜನರು ಹಿಂಜರಿಯುತ್ತಿದ್ದಾರೆ. ಇದೀಗ ಯುವತಿಯೊಬ್ಬಳು ಮಹಿಳಾ ದಿನದಂದೇ ಮದುವೆ ವಿಚಾರಕ್ಕೆ ಬೇಸೆತ್ತು ತಲೆ ಬೊಳಿಸಿಕೊಂಡಿರುವ ಘಟನೆಯೊಂದು ವರದಿಯಾಗಿದೆ.
ತನ್ನ ಕುಟುಂಬದಿಂದ ಹೆಚ್ಚುತ್ತಿರುವ ವಿವಾಹದ ಒತ್ತಡದಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ತಲೆ ಬೋಳಿಸಿಕೊಂಡಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಹಿಳೆಯರ ಮೇಲೆ ಇರಿಸಲಾದ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ಯುವತಿ ಬೇಸರಗೊಂಡಿದ್ದು ಮಹಿಳಾ ದಿನವೇ ಕೂದಲನ್ನು ಬೊಳಿಸಿಕೊಂಡಿದ್ದಾರೆ.
ವಿಡಿಯೋ ನೋಡಿ:
ಮನೆಯವರ ನಿರಂತರ ಮದುವೆ ಒತ್ತಡದಿಂದ ಪಾರಾಗಲು ಈ ಹೆಜ್ಜೆ ಇಟ್ಟಿದ್ದೇನೆ ಎಂದು ಆಕೆ ಹೇಳಿದ್ದಾಳೆ. ವೀಡಿಯೊದಲ್ಲಿ, ಮಹಿಳೆ ತನ್ನ ಕೂದಲನ್ನು ಕತ್ತರಿಸುವುದು ತನಗೆ ನಿಜವಾಗಿಯೂ ಇಷ್ಟಿರಲಿಲ್ಲ ಎಂದು ವಿವರಿಸುತ್ತಾಳೆ. ಇತರ ಅನೇಕ ಮಹಿಳೆಯರಂತೆ ತಾನು ತನ್ನ ಕೂದಲನ್ನು ಅತೀಯಾಗಿ ಪ್ರೀತಿಸುತ್ತಿದ್ದೆ, ಆದರೆ ಮದುವೆಯಾಗಲು ತನ್ನ ಕುಟುಂಬದಿಂದ ನಿರಂತರ ಒತ್ತಡದಿಂದಾಗಿ ಮಣಿದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
Viral Video: ಮರವೇರಿ ಹಾಯಾಗಿ ಕುಳಿತ ಹುಲಿ; AI ವಿಡಿಯೊ ಎಂದ ನೆಟ್ಟಿಗರು
@kajals move ಎಂದು ಗುರುತಿಸಲಾದ ಬಳಕೆದಾರರು ಈ ಕ್ಲಿಪ್ ಅನ್ನು ಶೇರ್ ಮಾಡಿಕೊಂಡಿದ್ದು ಈಗಾಗಲೇ ಸುಮಾರು 3.7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ, ಅನೇಕ ಬಳಕೆದಾರರು ತಮ್ಮ ವೈಯಕ್ತಿಕ ನಿರ್ಧಾರದ ಬಗ್ಗೆ ಶ್ಲಾಘಿಸಿದ್ದಾರೆ. ಯುವತಿ ತನ್ನ ವಿಡಿಯೋದಲ್ಲಿ ಸಮಾಜದ ನಡವಳಿಕೆ, ವರ್ತನೆಯ ಬಗ್ಗೆ ಕಿಡಿಕಾರಿದ್ದಾರೆ. ಹೆಣ್ಣುಮಕ್ಕಳು ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳಲು ಸಮಾಜ ಯಾಕೆ ನಿರಾಕರಿಸುತ್ತದೆ? ಮದುವೆಯ ವಿಚಾರದಲ್ಲಿ ಹೆಣ್ಣಿನ ಭಾವನೆಗಳಿಗೆ ಬೆಲೆ ಇಲ್ಲವೆ? ಮಹಿಳೆಯರು ತಮ್ಮ ನೋಟ ಅಥವಾ ಜೀವನ ನಿರ್ಧಾರಗಳ ಬಗ್ಗೆ ಅವರೇ ಆಯ್ಕೆಗಳನ್ನು ಮಾಡಿದಾಗ ಸಮಾಜ ಏಕೆ ಈ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಬದಲಾಗಿ, ಇದೇ ರೀತಿಯ ಸಂದರ್ಭಗಳನ್ನು ಎದುರಿಸುತ್ತಿರುವ ಇತರ ಮಹಿಳೆಯರಿಗೂ ಧೈರ್ಯ ತುಂಬಿದ್ದಾರೆ. ಅವರು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಪ್ರತಿಯೊಂದು ಮಹಿಳೆಯರನ್ನು ಹುರಿದುಂಬಿಸಿದ್ದಾರೆ.