Viral Video: ಒಂದೇ ಬೈಕ್‍ನಲ್ಲಿ 6 ಮಂದಿಯ ಸವಾರಿ; ಕ್ಯಾಮರಾ ನೋಡಿ ಏನು ಮಾಡಿದ್ರು ಗೊತ್ತಾ?
Motorcycle stunt: ದೆಹಲಿಯ ರಸ್ತೆಯಲ್ಲಿನ ವಿಡಿಯೊವೊಂದು ವೈರಲ್ ಆಗಿದೆ. ಒಂದೇ ಬೈಕ್‌ನಲ್ಲಿ6 ಯುವಕರು ಸವಾರಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಕ್ಯಾಮರಾ ನೋಡಿ ಅವರು ತೋರಿದ ಪ್ರತಿಕ್ರಿಯೆ ಸದ್ಯ ಗಮನ ಸೆಳೆಯುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಒಂದೇ ಬೈಕ್‍ನಲ್ಲಿ ಆರು ಮಂದಿ ಯುವಕರ ಸವಾರಿ -
ನವದೆಹಲಿ, ಡಿ. 14: ದೆಹಲಿಯು (Delhi) ನಿಜಕ್ಕೂ ಅಚ್ಚರಿಗಳ ನಗರ. ರಾಷ್ಟ್ರ ರಾಜಧಾನಿ ಕೇವಲ ಕುತುಬ್ ಮಿನಾರ್ ಮತ್ತು ಕೆಂಪುಕೋಟೆಯಂತಹ ಐತಿಹಾಸಿಕ ಸ್ಮಾರಕಗಳಿಗೆ ಮಾತ್ರ ಸೀಮಿತವಾಗಿಲ್ಲ. ದಿನನಿತ್ಯದ ಘಟನೆಗಳ ಮೂಲಕವೂ ಈ ನಗರ ಜನರನ್ನು ಅಚ್ಚರಿಗೊಳಿಸುತ್ತದೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಮಧ್ಯೆ ಕುಸ್ತಿ ನಡೆದುದರ ವಿಡಿಯೊ ವೈರಲ್ ಆಗುವುದರಿಂದ ಹಿಡಿದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ದೃಶ್ಯಗಳವರೆಗೆ ಇಲ್ಲಿ ಪ್ರತಿದಿನವೂ ಏನಾದರೊಂದು ವಿಶೇಷ ಘಟನೆ ಸಂಭವಿಸುತ್ತಲೇ ಇರುತ್ತದೆ. ಇದೀಗ ಸಂಚಾರ ನಿಯಮ ಉಲ್ಲಂಘಿಸಿರುವ ದೃಶ್ಯದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಸ್ತೆಯಲ್ಲಿ ಒಂದೇ ಬೈಕ್ ಮೇಲೆ (Motorcycle stunt) 6 ಮಂದಿ ಪ್ರಯಾಣಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ (Viral Video).
ಒಂದು ಬೈಕ್‍ನಲ್ಲಿ ಇಬ್ಬರಷ್ಟೇ ಕುಳಿತುಕೊಳ್ಳಬಹುದು. ಆದರೆ ಕೆಲವರು ಮೂವರು ಸವಾರಿ ಮಾಡುತ್ತಾರೆ. ಇನ್ನೂ ಹೆಚ್ಚೆಂದರೆ 4 ಜನ ಸವಾರಿ ಮಾಡಬಹುದು. ಆದರೆ ಇಲ್ಲಿ ಆರು ಮಂದಿ ಯುವಕರು ಒಂದೇ ಬೈಕ್‍ನಲ್ಲಿ ಸವಾರಿ ಮಾಡಿದ್ದಾರೆ. ಈ ಅಪಾಯಕಾರಿ ಸಾಹಸದ ವಿಡಿಯೊವನ್ನು ಡಿಸೆಂಬರ್ 12ರಂದು, ಪತ್ರಕರ್ತ ಅರವಿಂದ್ ಶರ್ಮಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಕಳವಳ ವ್ಯಕ್ತಪಡಿಸಿದ್ದಾರೆ.
ಕಿರಿದಾದ ರಸ್ತೆಯಲ್ಲಿ ಸಮೋಸಾ ಟ್ರೇ ಬ್ಯಾಲೆನ್ಸ್ ಮಾಡುತ್ತಾ ವ್ಯಕ್ತಿಯ ಬೈಕ್ ಸವಾರಿ; ನೋಡುಗರು ನಿಬ್ಬೆರಗು
ರಾತ್ರಿ ವೇಳೆ ದೆಹಲಿ ರಸ್ತೆಯೊಂದರಲ್ಲಿ ಒಂದೇ ಬೈಕ್ ಮೇಲೆ ಆರು ಯುವಕರು ಸಂಚರಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ನೋಡಬಹುದು. ವಿಡಿಯೊ ಮಾಡಲಾಗುತ್ತಿದೆ ಎಂಬುದು ಗೊತ್ತಾದ ಬಳಿಕ, ಸವಾರರು ಕ್ಯಾಮರಾಗೆ ನಗುತ್ತ ಕೈ ಬೀಸಿದ್ದಾರೆ. ಕೆಲವರು ಥಮ್ಸ್-ಅಪ್ ಕೂಡ ತೋರಿಸುತ್ತಾರೆ. ಸುತ್ತಮುತ್ತ ಸಂಚಾರ ಪೊಲೀಸರು ಕಾಣಿಸುವುದಿಲ್ಲ.
ವಿಡಿಯೊ ವೀಕ್ಷಿಸಿ:
यह दिल्ली है। यहां कुछ भी हो सकता है। एक बाइक पर 6 बैठना बड़ी उपलब्धि है। इसलिए विक्ट्री साइन दिखाकर, हाथ हिलाकर अभिवादन तो बनता है। बाकी पुलिस जाने। pic.twitter.com/6wtHLjUdHB
— Arvind Sharma (@sarviind) December 12, 2025
ಇದು ದೆಹಲಿ. ಇಲ್ಲಿ ಏನೇನಾದರೂ ಆಗಬಹುದು. ಒಂದೇ ಬೈಕ್ ಮೇಲೆ ಆರು ಜನರು ಕುಳಿತುಕೊಳ್ಳುವುದು ದೊಡ್ಡ ಸಾಧನೆ. ಆದ್ದರಿಂದ ವಿಜಯದ ಸಂಕೇತ ತೋರಿಸುವುದು, ಶುಭಾಶಯ ಕೋರುತ್ತಾ ಕೈ ಬೀಸುವುದು ಮಾಮೂಲು. ಉಳಿದದ್ದು ಪೊಲೀಸರಿಗೆ ಬಿಟ್ಟದ್ದು ಎಂದು ಬರೆಯಲಾಗಿದೆ.
ಭಾರತಕ್ಕೆ ಭೇಟಿ ನೀಡಿದ್ದ ಜರ್ಮನ್ ಮಹಿಳೆಯೊಬ್ಬರು ದೆಹಲಿಯ ರಸ್ತೆಯಲ್ಲಿ ಚಾಲನಾ ಸಂಸ್ಕೃತಿಯನ್ನು ತೋರಿಸುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದನ್ನು ಅವರು ರೋಲರ್‌ಕೋಸ್ಟರ್ ಎಂದು ಕರೆದಿದ್ದಾರೆ. ಆ ವಿಡಿಯೊದಲ್ಲಿ ಕಾರುಗಳು ಲೇನ್‌ಗಳನ್ನು ತಕ್ಷಣ ಬದಲಾಯಿಸುತ್ತಾ, ಇತರ ವಾಹನಗಳಿಂದ ವೇಗವಾಗಿ ಸಾಗಲು ಪ್ರಯತ್ನಿಸುತ್ತಿರುವ ದೃಶ್ಯಗಳು ಕಾಣಿಸುತ್ತವೆ. ರಸ್ತೆಯಲ್ಲಿ ಸರಿಯಾದ ಕ್ರಮದ ಕೊರತೆಯ ಬಗ್ಗೆ ಆ ಮಹಿಳೆ ಬೇಸರ ವ್ಯಕ್ತಪಡಿಸುತ್ತಿರುವುದನ್ನೂ ವಿಡಿಯೊದಲ್ಲಿ ಕೇಳಬಹುದು.
ಇಲ್ಲಿದೆ ನೋಡಿ ವಿಡಿಯೊ:
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಏನೂ ಅಲ್ಲ, ಮುಂಬೈಗೆ ಬನ್ನಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ದೆಹಲಿಯ ರಸ್ತೆಗಳು ಪ್ರತಿದಿನವೂ ಅನನ್ಯ ದೃಶ್ಯಗಳಿಗೆ ಸಾಕ್ಷಿಯಾಗುತ್ತವೆ ಎಂಬುದನ್ನು ಈ ವಿಡಿಯೊ ತೋರಿಸುತ್ತವೆ. ರಸ್ತೆಗಳಲ್ಲಿನ ಈ ಗೊಂದಲದ ದೃಶ್ಯಗಳಿಗೆ ಸಾಟಿಯೇ ಇಲ್ಲ. ನಗರಕ್ಕೆ ಪರಿಚಯವಿಲ್ಲದವರಿಗೆ ಇದು ರೋಲರ್‌ಕೋಸ್ಟರ್‌ನಂತೆ ಕಾಣಬಹುದು. ಆದರೆ ಇಲ್ಲಿಯವರಿಗೆ ಇದು ದಿನನಿತ್ಯದ ಜೀವನದ ಅವಿಭಾಜ್ಯ ಭಾಗವೇ ಆಗಿದೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.