ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೈಲ್ವೆ ಹಳಿಗಳ ಮೇಲೆ ಮಲಗಿ ರೀಲ್ಸ್ ಶೂಟ್ ಮಾಡಿದ ಯುವಕ: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

Viral Video: ಇತ್ತೀಚೆಗೆ ರೀಲ್ಸ್ ಕ್ರೇಜ್‌ಗಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿನ ಅಜಯ್ ರಾಜ್‌ಭರ್ ಎಂಬ ಯುವಕ ಹುಚ್ಚಾಟ ಮೆರೆಯಲು ಹೋಗಿದ್ದಾನೆ. ರೈಲು ಹೈ ಸ್ಪೀಡ್‌ನಲ್ಲಿದ್ದರೂ ಯುವಕ ರೈಲ್ವೆ ಹಳಿಗಳ ಮೇಲೆ ಮಲಗಿ ರೀಲ್ಸ್‌ ಶೂಟ್ ಮಾಡಿದ್ದಾನೆ.

ಚಲಿಸುವ ರೈಲಿನ ಕೆಳಗೆ ಮಲಗಿ ರೀಲ್ಸ್ ಮಾಡಿದ ಯುವಕ ಅರೆಸ್ಟ್!

ರೈಲ್ವೆ ಹಳಿಗಳ ಮೇಲೆ ಮಲಗಿ ರೀಲ್ಸ್‌ ಶೂಟ್ ಮಾಡಿದ ಯುವಕ -

Profile
Pushpa Kumari Dec 30, 2025 8:20 PM

ಲಖನೌ, ಡಿ. 30: ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆಯಬೇಕೆಂಬ ಹುಚ್ಚು ಹವ್ಯಾಸಕ್ಕೆ ಅಂಟಿಕೊಂಡ ಯುವ ಜನತೆ ರೀಲ್ಸ್‌ಗಾಗಿ ಏನು ಮಾಡಲು ಸಿದ್ದರಿದ್ದಾರೆ. ಇತ್ತೀಚೆಗೆ ರೀಲ್ಸ್ ಕ್ರೇಜ್‌ಗಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿನ ಅಜಯ್ ರಾಜ್‌ಭರ್ ಎಂಬ ಯುವಕ ಹುಚ್ಚಾಟ ಮೆರೆಯಲು ಹೋಗಿದ್ದಾನೆ. ರೈಲು ಹೈ ಸ್ಪೀಡ್‌ನಲ್ಲಿದ್ದರೂ ಯುವಕ ರೈಲ್ವೆ ಹಳಿಗಳ ಮೇಲೆ ಮಲಗಿ ರೀಲ್ಸ್‌ ಶೂಟ್ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದ್ದು ಯುವಕನ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ಉತ್ತರ ಪ್ರದೇಶದ ಕೊಟ್ವಾಲಿ ಪ್ರದೇಶದ ನಿವಾಸಿ ಅಜಯ್ ರಾಜ್‌ಬರ್ ಎಂಬ ಯುವಕ ರೈಲ್ವೆ ಹಳಿಗಳ ಮಧ್ಯಯೇ ರೀಲ್ಸ್ ಮಾಡಲು ಮುಂದಾಗಿದ್ದಾನೆ. ವೈರಲ್ ವಿಡಿಯೊದಲ್ಲಿ ಅಜಯ್ ರಾಜ್‌ಭರ್ ರೈಲ್ವೆ ಹಳಿಗಳ ಮಧ್ಯೆ ಮಲಗಿರುವುದು, ಹೈಸ್ಪೀಡ್ ರೈಲು ಅವನ ಮೇಲೆ ಹಾದು ಹೋಗುವಾಗ ಹಳಿಗಳ ನಡುವೆ ಆತ‌ ಮಲಗಿರುವುದು ಕಂಡುಬರುತ್ತದೆ. ರೈಲು ಪೂರ್ತಿಯಾಗಿ ಹಾದುಹೋದ ನಂತರ ಆತ‌ ಎದ್ದು ನಿಲ್ಲುತ್ತಾನೆ.

ವಿಡಿಯೊ ನೋಡಿ:



ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ಕೂಡ ಟ್ಯಾಗ್ ಮಾಡಿದ್ದಾರೆ. ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ದೃಢಪಡಿಸಿದ್ದಾರೆ. ರೈಲ್ವೆ ಹಳಿಗಳ ಮೇಲೆ ಅತಿಕ್ರಮ ಪ್ರವೇಶ ಮಾಡುವುದು ಮತ್ತು ಇಂತಹ ಜೀವಕ್ಕೆ ಅಪಾಯ ತರುವಂತಹ ರೀಲ್ಸ್ ಮಾಡುವುದು ಭಾರತೀಯ ರೈಲ್ವೆ ಕಾಯ್ದೆ 147ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು

ಅಜಯ್ ರಾಜ್‌ಬರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾಸ್ಯ ಮತ್ತು ತಮಾಷೆ ವಿಡಿಯೊಗಳನ್ನು ಮಾಡುವಲ್ಲಿ‌ ಹೆಸರುವಾಸಿ. ಸೋಶಿಯಲ್ ಮೀಡಿಯಾದಲ್ಲಿ ಅವರು 8,552 ಅನುಯಾಯಿಗಳನ್ನು ಹೊಂದಿದ್ದಾನೆ. ಆತನ ಹಲವು ವಿಡಿಯೊಗಳು ಜನರನ್ನು ತೊಂದರೆಗೊಳಿಸುವ ಮತ್ತು ಹೆದರಿಸುವ ಕುಚೇಷ್ಟೆಗಳನ್ನು ಒಳಗೊಂಡಿವೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಯುವಕನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯ ಘಟನೆ ಕಂಡು ಬಂದಿದ್ದು ಒಡಿಶಾದ ಪುರಿ ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಮೇಲೆ ರೀಲ್ಸ್‌ ಚಿತ್ರೀಕರಣ ಮಾಡುವಾಗ 15 ವರ್ಷದ ಬಾಲಕ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು.‌