ಆರ್ಡರ್ ಮಾಡದೇ ಇದ್ದರೂ ತಲುಪಿದ ಪಾರ್ಸೆಲ್: ಬೆಂಗಳೂರಿನಲ್ಲಿ 500 ರುಪಾಯಿಯ ಕ್ಯಾಶ್-ಆನ್-ಡೆಲಿವರಿ ಸ್ಕ್ಯಾಮ್; ಏನಿದು ಮೋಸದ ಜಾಲ? ಹೇಗೆ ಕಾರ್ಯ ನಿರ್ವಹಿಸುತ್ತೆ?
Viral Video: ಇಂದು ಆನ್‌ಲೈನ್ ವ್ಯವಹಾರದಲ್ಲಿ ಮೋಸದ ಜಾಲ ಹೆಚ್ಚಾಗಿದ್ದು, ಹಣವನ್ನು ಕಳುಹಿಸುವ ಮುನ್ನ ಸರಿಯಾಗಿ ಪರಿಶೀಲಿಸಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಹೊಸ ಸ್ಕ್ಯಾಮ್ ನಡೆಯುತ್ತಿದೆ. ಯುವತಿಯೊಬ್ಬರು ಯಾವುದೇ ವಸ್ತು ಆರ್ಡರ್ ಮಾಡದೇ ಇದ್ದರೂ ಅವರ ಹೆಸರಿಗೆ ಹಾಗೂ ವಿಳಾಸಕ್ಕೆ 500 ರುಪಾಯಿ ಮೌಲ್ಯದ ಪಾರ್ಸಲ್ ಬಂದಿದೆ. ಈ ವಂಚನೆಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಹೊಸ ವಂಚನೆಯ ಜಾಲವನ್ನು ವಿವರಿಸಿದ ಸೌಮ್ಯ ಸುರೇಶ್ -
ಬೆಂಗಳೂರು, ಆ. 4: ಇತ್ತೀಚಿಗೆ ಅಗತ್ಯ ವಸ್ತುಗಳಿಂದ ಹಿಡಿದು ದುಬಾರಿ ವಸ್ತುಗಳವರೆಗೆ ಆನ್‌ಲೈನ್ ಮೂಲಕ ಖರೀದಿಸುತ್ತೇವೆ. ಆದರೆ ಹಣದ ವ್ಯವಹಾರದ ಸುರಕ್ಷತೆ ಬಗ್ಗೆ ಹೆಚ್ಚಿನವರಿಗೆ ಭಯ ಇದ್ದೇ ಇರುತ್ತದೆ. ಇಂದು ಆನ್‌ಲೈನ್ ವ್ಯವಹಾರದಲ್ಲಿ ಮೋಸದ ಜಾಲ ಹೆಚ್ಚಾಗಿದ್ದು, ಹಣ ನಮ್ಮ ಖಾತೆಯಿಂದ ಕಳುಹಿಸುವ ಮುನ್ನ ಸರಿಯಾಗಿ ಪರಿಶೀಲಿಸಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೊಸ ರೀತಿಯ ವಂಚನೆಯೊಂದನ್ನು ಸೌಮ್ಯ ಸುರೇಶ್ ಎಂಬವರು ತಿಳಿಸಿದ್ದಾರೆ. ಯಾವುದೇ ವಸ್ತು ಆರ್ಡರ್ ಮಾಡದೇ ಇದ್ದರೂ ಅವರ ಹೆಸರಿಗೆ ಹಾಗೂ ಸರಿಯಾದ ವಿಳಾಸಕ್ಕೆ 500 ರುಪಾಯಿ ಮೌಲ್ಯದ ವಸ್ತು ಕ್ಯಾಶ್-ಆನ್-ಡೆಲಿವರಿ ಹೆಸರಲ್ಲಿ ಪಾರ್ಸಲ್ ಬಂದಿತ್ತು. ಈ ವಂಚನೆಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಶೇರ್ (Viral News) ಮಾಡಿಕೊಂಡಿದ್ದಾರೆ.
ಬೆಂಗಳೂರಿನ ನಿವಾಸಿ ಸೌಮ್ಯ ಸುರೇಶ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ತಾನು ಯಾವುದೇ ಆರ್ಡರ್ ಮಾಡದೇ ಇದ್ದರೂ 500 ರುಪಾಯಿಗಳ ಮೌಲ್ಯದ ಪಾರ್ಸೆಲ್‌ನೊಂದಿಗೆ ಬಂದ ಡೆಲಿವರಿ ಬಾಯ್ ಬಳಿ ಇದನ್ನು ಪ್ರಶ್ನಿಸಿದ್ದಾರೆ. ಇದನ್ನು ಕಳುಹಿಸಿದವರು ಯಾರು ಎಂದು? ಕೇಳಿ ಹಣ ಪಾವತಿಸಲು ನಿರಾಕರಿಸಿದ್ದಾರೆ.
ವಿಡಿಯೊ ನೋಡಿ:
⚠️ Karnataka, Stay Alert!
— ಸನಾತನ (सनातन) (@sanatan_kannada) August 4, 2026
Bengaluru resident Sowmya Suresh has shared an alarming experience. According to her, a ₹500 Cash on Delivery (COD) parcel arrived at her home in her name and address, even though she had never placed such an order. After refusing to pay and opening… pic.twitter.com/mdaW8dFwYY
ಪಾರ್ಸಲ್‌ಗೆ ಹಣ ಪಾವತಿಸಲು ನಿರಾಕರಿಸಿದ ಸೌಮ್ಯ, ತಾನು ಯಾವುದೇ ಪಾರ್ಸೆಲ್ ಆರ್ಡರ್ ಮಾಡಿಲ್ಲ. ಏಲ್ಲಿಂದ ಬಂತು? ಎಂದು ಡೆಲಿವರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡರು. ಆದಾಗ್ಯೂ ಕರೆ ಮಾಡಿದ ವ್ಯಕ್ತಿ ಇನ್‌ಸ್ಟಾಗ್ರಾಮ್ ಮೂಲಕ ಆರ್ಡರ್ ಮಾಡಿದ್ದಾಗಿ ಹೇಳಿದ್ದ.
ವೈರಲ್ ವಿಡಿಯೊದಲ್ಲಿ ಸೌಮ್ಯ, "ನಾನು ಈ ರೀತಿ ಏನನ್ನೂ ಎಂದಿಗೂ ಆರ್ಡರ್ ಮಾಡಿಲ್ಲ. ನಿಮ್ಮನ್ನು ಯಾರು ಕಳುಹಿಸಿದ್ದಾರೆ? ಖರೀದಿಸದ ವಸ್ತುವಿಗೆ ನಾನು ಏಕೆ 500 ರುಪಾಯಿ ಪಾವತಿಸಬೇಕು? ನಿಮ್ಮ ಬಾಸ್‌ಗೆ ಕರೆ ಮಾಡಿ" ಎಂದು ಹೇಳಿದ್ದಾರೆ. ನಂತರ ಡೆಲಿವರಿ ಬಾಯ್ ವ್ಯಕ್ತಿಯೋಬ್ಬನಿಗೆ ಕರೆ ಮಾಡಿ ಫೋನ್ ಅನ್ನು ಸೌಮ್ಯ ಕೈಗೆ ನೀಡಿದ್ದಾನೆ. ಆತ "ನೀವು ಇನ್‌ಸ್ಟಾಗ್ರಾಮ್ ಮೂಲಕ ಆರ್ಡರ್ ಮಾಡಿದ್ದೀರಿ" ಎಂದು ನಂಬಿಸಲು ಯತ್ನಿಸಿದ್ದಾನೆ. ಆದರೆ ಸೌಮ್ಯ ನಿರಾಕರಿಸಿ ಹಣ ಪಾವತಿಸಲಿಲ್ಲ.
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ವಿಡಿಯೊದಲ್ಲಿ ಸೌಮ್ಯ ಪಾರ್ಸೆಲ್ ಬಂದ ಬಾಕ್ಸ್ ತೆರೆದಾಗ ಅದರಲ್ಲಿ ಕೇವಲ ಅರ್ಧ ಬಾರ್ ರಿನ್ ಸೋಪ್ ಹಾಗೂ ಹಾನಿಗೊಳಗಾದ ಬಾಕ್ಸ್ ಇತ್ತು. ʼʼನೀವು ಮೋಸ ಮಾಡುತ್ತಿದ್ದೀರಿ. ಪಾರ್ಸೆಲ್ ಪರಿಶೀಲಿಸದೆ ನಾನು 500 ರುಪಾಯಿ ಪಾವತಿಸಿದ್ದರೆ ಏನಾಗಿರಬಹುದೆಂದು ಊಹಿಸಿ. ನಾನು ನನ್ನ ಹಣವನ್ನು ಕಳೆದುಕೊಳ್ಳುತ್ತಿದ್ದೆʼʼ ಎಂದು ಕಿಡಿಕಾರಿದ್ದಾರೆ.
ʼʼನಾನು ಇದನ್ನು ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಜನರನ್ನು ವಂಚಿಸುವುದನ್ನು ಮೊದಲು ನಿಲ್ಲಿಸಿʼʼ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅನುಭವ ಶೇರ್ ಮಾಡಿದ್ದಾರೆ. ಒಬ್ಬರು, ʼʼಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಜಾಗರೂಕರಾಗಿರಿ. ಆರ್ಡರ್ ಅನಿರೀಕ್ಷಿತವಾಗಿ ಕ್ಯಾಶ್ ಆನ್ ಡೆಲಿವರಿ ಆದರೆ, ಅದು ಸ್ಕ್ಯಾಮ್ʼʼ ಎಂದು ತಿಳಿಸಿದ್ದಾರೆ.