Narendra Rai Column: ಪ್ರಕೃತಿಯ ರಕ್ಷಣೆ ಪ್ರವಾಸಿಗೆ ಮನ್ನಣೆ
ಭೂತಾನ್ ಎಂಬ ಪುಟ್ಟ ದೇಶದ ಬಗ್ಗೆ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟವಾಗು ತ್ತಿದ್ದಾಗಲೆಲ್ಲ ಅವುಗಳನ್ನು ಓದುವ ವಿಶೇಷ ಆಸಕ್ತಿ ನನಗೆ ಬಹಳ ವರ್ಷಗಳಿಂದ ಇತ್ತು. ಅದಕ್ಕೆ ಮುಖ್ಯ ಕಾರಣ ಅಲ್ಲಿನ ಪ್ರಕೃತಿ. ಜಗತ್ತಿನ ಅನೇಕ ದೇಶಗಳು ಪ್ರಕೃತಿಯನ್ನು ಬದಲಾಯಿಸಿ, ಅದರ ಮೇಲೆ ತಮ್ಮ ಅಭಿವೃದ್ಧಿಯ ಗುರುತುಗಳನ್ನು ಮೂಡಿಸಿ, ಅವುಗಳನ್ನೇ ಪ್ರವಾಸಿಗರಿಗೆ ತೋರಿಸುತ್ತವೆ.
-
ನರೇಂದ್ರ ರೈ, ದೇರ್ಲ
ನಮ್ಮ ನೆರೆಯ ದೇಶವಾದ ಭೂತಾನ್, ಜನಸಂಖ್ಯೆಯಲ್ಲಿ ಮತ್ತು ವಿಸ್ತೀರ್ಣದಲ್ಲಿ ಚಿಕ್ಕ ದೇಶ. ಆದರೆ, ಅಲ್ಲಿನ ಜನರು ಮತ್ತು ಪ್ರಭುತ್ವವು, ತಮ್ಮ ದೇಶದ ಪರಿಸರವನ್ನು ಉಳಿಸಿಕೊಂಡು, ಅದರೊಂದಿಗೇ ಬದುಕಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಅಭಿವೃದ್ಧಿಯ ಪಥ ಅನುಸರಿಸುವಲ್ಲಿ, ಅಪಾರ ಎಚ್ಚರಿಕೆ ವಹಿಸಿದ್ದಾರೆ. ಬೆಟ್ಟಗುಡ್ಡಗಳಿಂದ ಕೂಡಿರುವ ಆ ದೇಶದವರು ಮನಸ್ಸು ಮಾಡಿದ್ದರೆ, ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದಿತ್ತು, ಆ ಅಭಿವೃದ್ಧಿ ಕಾಮಗಾರಿ ಗಳನ್ನು ನಡೆಸಲೆಂದೇ ಸಾಕಷ್ಟು ಜನರನ್ನು ತಮ್ಮ ದೇಶಕ್ಕೆ ಕರೆಸಿಕೊಳ್ಳಬಹು ದಿತ್ತು, ಇದರಿಂದಾಗಿ, ಅಲ್ಲಿನ ಜನಸಂಖ್ಯೆಯೂ ವೃದ್ಧಿಯಾಗುತ್ತಿತ್ತು, ಹಲವು ಕಟ್ಟಡಗಳು ಮೇಲೇಳುತ್ತಿದ್ದವು, ಜಿಡಿಪಿ ಹೆಚ್ಚಳವಾಗುತ್ತಿತ್ತು! ಆದರೆ, ಅವರು ಪರಿಸರ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಂಡು ಬಾಳುವುದನ್ನು ಆಯ್ಕೆ ಮಾಡಿಕೊಂಡರು; ತಮ್ಮ ಅಮೂಲ್ಯ ಪ್ರಕೃತಿಯನ್ನು ರಕ್ಷಿಸಲು ಕಠಿಣ ಶಾಸನಗಳನ್ನೂ ತಂದರು; ಅಂತಹ ಶಾಸನದಿಂದಾಗಿ, ತಮ್ಮ ದೇಶಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಎಂಬ ನಿಲುವು ತಾಳಿದರು. ಆದ್ದರಿಂದಲೇ, ಇಂದು ಭೂತಾನ್ ದೇಶವು, ಪರಿಸರ ರಕ್ಷಣೆಯ ಜತೆಯಲ್ಲೇ, ಪ್ರವಾಸಿ ಜನರಿಗೆ ವಿಭಿನ್ನ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ ಮತ್ತು ಇಂತಹದೊಂದು ಸಕಾರಾತ್ಮಕ ಮತ್ತು ಬಿಗು ನಿಲುವಿನ ಪ್ರಯೋಗ ಜಗತ್ತಿನ ಬೇರಾವ ದೇಶದಲ್ಲೂ ನಡೆದಂತಿಲ್ಲ. ಅಲ್ಲಿನ ಪ್ರಕೃತಿ ರಕ್ಷಣೆ ಮತ್ತು ಸಂಸ್ಕೃತಿ ಪೋಷಣೆಯನ್ನು ನೋಡಲೆಂದು ಹಲವು ವರ್ಷಗಳಿಂದ ಆಸೆ ಪಟ್ಟಿದ್ದ ಲೇಖಕರೊಬ್ಬರ ಮನೋಗತ ಇಲ್ಲಿದೆ.
ಭೂತಾನ್ ಎಂಬ ಪುಟ್ಟ ದೇಶದ ಬಗ್ಗೆ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟವಾಗು ತ್ತಿದ್ದಾಗಲೆಲ್ಲ ಅವುಗಳನ್ನು ಓದುವ ವಿಶೇಷ ಆಸಕ್ತಿ ನನಗೆ ಬಹಳ ವರ್ಷಗಳಿಂದ ಇತ್ತು. ಅದಕ್ಕೆ ಮುಖ್ಯ ಕಾರಣ ಅಲ್ಲಿನ ಪ್ರಕೃತಿ. ಜಗತ್ತಿನ ಅನೇಕ ದೇಶಗಳು ಪ್ರಕೃತಿಯನ್ನು ಬದಲಾಯಿಸಿ, ಅದರ ಮೇಲೆ ತಮ್ಮ ಅಭಿವೃದ್ಧಿಯ ಗುರುತುಗಳನ್ನು ಮೂಡಿಸಿ, ಅವುಗಳನ್ನೇ ಪ್ರವಾಸಿಗರಿಗೆ ತೋರಿಸುತ್ತವೆ. ಭೂತಾನ್ ಮಾತ್ರ ಪ್ರಕೃತಿಯನ್ನು ಬಡಿದು ಬಗ್ಗಿಸಿ ಬದಲಾಯಿಸದೆ ಸಾಧ್ಯವಾದಷ್ಟು ಅದರ ಸಹಜ ಸ್ಥಿತಿಯಲ್ಲಿ ಉಳಿಸಿ ಕೊಂಡು, ಅದನ್ನೇ ಜಗತ್ತಿನ ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದೆ ಎಂಬುದು ನನ್ನನ್ನು ಆಕರ್ಷಿಸಿತ್ತು. ಆ ಆಸೆಯಿಂದಲೇ ಭೂತಾನಿಗೆ ಹೋದ ನನಗೆ ಆ ದೇಶ ನಿರಾಶೆಗೊಳಿಸಲಿಲ್ಲ.
ಬೆರಗು ಹುಟ್ಟಿಸುವ ಜಗತ್ತಿನ ದೇಶಗಳೆಲ್ಲ ತಾಂತ್ರಿಕ ಪ್ರಗತಿಯನ್ನು ತೋರಿ ಸಲು ಎತ್ತರದ ಕಟ್ಟಡಗಳನ್ನು ನಿರ್ಮಿಸುತ್ತವೆ. ಸಮುದ್ರದ ಮೇಲೆ ಸೇತುವೆಗಳನ್ನು ಕಟ್ಟುತ್ತವೆ. ಅರಮನೆಗಳು, ಕೋಟೆಗಳು, ಕೃತಕ ಸರೋವರ ಗಳು, ಈಜುಕೊಳಗಳು, ಮನರಂಜನಾ ಕೇಂದ್ರಗಳನ್ನು ರೂಪಿಸುತ್ತವೆ. ಪ್ರಕೃತಿ ಯಲ್ಲಿರುವ ಎತ್ತರ, ಆಳ, ಕಲ್ಲು, ನೀರು, ಮಣ್ಣು ಎಲ್ಲವನ್ನೂ ಮನುಷ್ಯನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿ, ಆ ಬದಲಾವಣೆಯನ್ನೇ ತನ್ನ ಸಾಧನೆ ಎಂದು ಪ್ರದರ್ಶಿಸುತ್ತವೆ. ಇನ್ನೊಂದು ಬಗೆಯ ಪ್ರವಾಸೋದ್ಯಮ ಇದೆ.
ಇದನ್ನೂ ಓದಿ: Vishwavani Global Achievers Award Ceremony at Bhutan: ಭೂತಾನ್ನಲ್ಲಿ ಕನ್ನಡ ಭಾವ ಲಹರಿ ಉಕ್ಕಿಸಿದ ವಿಶ್ವವಾಣಿ
ಅದು ಪ್ರಕೃತಿಯನ್ನು ಎಷ್ಟರಮಟ್ಟಿಗೆ ಬದಲಾಯಿಸಬಹುದು ಎಂದು ಯೋಚಿಸುವುದಕ್ಕಿಂತ, ಅದನ್ನು ಬದಲಾಯಿಸದೇ ಎಷ್ಟು ಕಾಲ ಉಳಿಸಿಕೊಳ್ಳ ಬಹುದು ಎಂದು ಯೋಚಿಸುತ್ತದೆ. ಭೂತಾನ್ ನನಗೆ ಪರಿಚಯವಾದದ್ದು ಈ ಎರಡನೆಯ ಬಗೆಯ ದೇಶವಾಗಿ. ಒಂದು ಜನವಸತಿ ಕೇಂದ್ರದಿಂದ ಮತ್ತೊಂದು ಜನವಸತಿ ಕೇಂದ್ರಕ್ಕೆ ಹೋಗ ಬೇಕಾದರೆ ಭೂತಾನಿನಲ್ಲಿ ಐದಾರು ಗಂಟೆಗಳ ಕಾಲವಾದರೂ ರಸ್ತೆಯಲ್ಲಿ ಪ್ರಯಾಣಿಸಬೇಕಾಗಬಹುದು. ಆ ಪ್ರಯಾಣವೇ ಒಂದು ಪ್ರವಾಸಾನುಭವ. ಕಣ್ಣು ಹಾಯಿಸಿದಷ್ಟು ದೂರಕ್ಕೆ ಬೆಟ್ಟಗಳು, ಪರ್ವತಗಳು, ಆಳವಾದ ಕಣಿವೆ ಗಳು, ಹೊಳೆಗಳು, ದಟ್ಟ ಹಸಿರು. ಅಲ್ಲಲ್ಲಿ ಬೆಟ್ಟದ ಇಳಿಜಾರಿನಲ್ಲಿ ಮನೆಗಳು, ಕೃಷಿಭೂಮಿ, ರಸ್ತೆ ತಿರುವುಗಳಲ್ಲಿ ಕಾಣಿಸುವ ಸಣ್ಣ ಜನವಸತಿಗಳು. ಭೂತಾನಿನಲ್ಲಿ ಬಹಳ ಹೊತ್ತು ಪ್ರಯಾಣಿಸಿದರೂ ಪ್ರಕೃತಿಯೇ ನಿಮ್ಮ ಜೊತೆಯಲ್ಲಿ ಬರುತ್ತದೆ.
ಒಂದು ತಿರುವು ದಾಟಿದರೆ ಮತ್ತೊಂದು ಕಣಿವೆ; ಒಂದು ಬೆಟ್ಟ ಇಳಿದರೆ ಮತ್ತೊಂದು ಬೆಟ್ಟ. ಪ್ರವಾಸಿಗ ರನ್ನು ಸೆಳೆಯಲು ಪ್ರಕೃತಿಗೆ ಪ್ರತ್ಯೇಕವಾದ ಅಲಂಕಾರ ಮಾಡಬೇಕಾಗಿಲ್ಲ ಎಂಬುದನ್ನು ಈ ದೇಶ ತನ್ನ ರಸ್ತೆಗಳಲ್ಲಿ ತೋರಿಸುತ್ತದೆ. ಭೂತಾನಿನ ಆರ್ಥಿಕತೆಯಲ್ಲಿ ಜಲವಿದ್ಯುತ್, ಪ್ರವಾಸೋದ್ಯಮ, ಕೃಷಿ ಮತ್ತು ಸೇವಾ ಕ್ಷೇತ್ರಗಳಿಗೆ ಮಹತ್ವವಿದೆ. ಬೆಟ್ಟಗಳ ನಡುವೆ ಹರಿಯುವ ನದಿಗಳು, ಅವುಗಳ ಇಳಿಜಾರುಗಳು ಜಲವಿದ್ಯುತ್ ಉತ್ಪಾದನೆಗೆ ನೆರವಾಗುತ್ತವೆ. ಕಣಿವೆಗಳಲ್ಲಿ ಭತ್ತ ಬೆಳೆಯುತ್ತಾರೆ.
ತರಕಾರಿ ಕೃಷಿಯೂ ಕಾಣಿಸುತ್ತದೆ. ಪ್ರಕೃತಿ ಇಲ್ಲಿನ ಆದಾಯದ ಮೂಲವೂ ಹೌದು; ಅದನ್ನು ಕಾಪಾಡಿ ಕೊಳ್ಳುವುದು ಮುಂದಿನ ಬದುಕಿನ ಅಗತ್ಯವೂ ಹೌದು. ಈ ಎರಡರ ನಡುವಿನ ಸಂಬಂಧವನ್ನು ಭೂತಾನ್ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ನೋಡಲು ಅಲ್ಲಿಗೆ ಹೋಗಬೇಕೆನಿಸಿತು. ಪ್ರಕೃತಿಯನ್ನು ಉಳಿಸಿ ಕೊಳ್ಳುವುದೆಂದರೆ ಅಭಿವೃದ್ಧಿಗೆ ವಿರೋಧವಾಗಿರುವುದಲ್ಲ; ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನೇ ಕಳೆದುಕೊಳ್ಳದಿರುವುದು ಎಂಬುದನ್ನು ಈ ದೇಶ ನೆನಪಿಸುತ್ತದೆ.
ಜನಸಂಖ್ಯೆಯಲ್ಲಿ ಮತ್ತು ವಿಸ್ತೀರ್ಣದಲ್ಲಿ ಚಿಕ್ಕ ದೇಶ. ಆದರೆ, ಅಲ್ಲಿನ ಜನರು ಮತ್ತು ಪ್ರಭುತ್ವವು, ತಮ್ಮ ದೇಶದ ಪರಿಸರವನ್ನು ಉಳಿಸಿಕೊಂಡು, ಅದರೊಂದಿಗೇ ಬದುಕಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಅಭಿವೃದ್ಧಿಯ ಪಥ ಅನುಸರಿಸುವಲ್ಲಿ, ಅಪಾರ ಎಚ್ಚರಿಕೆ ವಹಿಸಿದ್ದಾರೆ. ಬೆಟ್ಟಗುಡ್ಡಗಳಿಂದ ಕೂಡಿರುವ ಆ ದೇಶದವರು ಮನಸ್ಸು ಮಾಡಿದ್ದರೆ, ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದಿತ್ತು, ಆ ಅಭಿವೃದ್ಧಿ ಕಾಮಗಾರಿ ಗಳನ್ನು ನಡೆಸಲೆಂದೇ ಸಾಕಷ್ಟು ಜನರನ್ನು ತಮ್ಮ ದೇಶಕ್ಕೆ ಕರೆಸಿಕೊಳ್ಳಬಹುದಿತ್ತು, ಇದರಿಂದಾಗಿ, ಅಲ್ಲಿನ ಜನಸಂಖ್ಯೆಯೂ ವೃದ್ಧಿಯಾಗುತ್ತಿತ್ತು, ಹಲವು ಕಟ್ಟಡಗಳು ಮೇಲೇಳುತ್ತಿದ್ದವು, ಜಿಡಿಪಿ ಹೆಚ್ಚಳವಾಗುತ್ತಿತ್ತು!
ಆದರೆ, ಅವರು ಪರಿಸರ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಂಡು ಬಾಳುವುದನ್ನು ಆಯ್ಕೆ ಮಾಡಿಕೊಂಡರು; ತಮ್ಮ ಅಮೂಲ್ಯ ಪ್ರಕೃತಿಯನ್ನು ರಕ್ಷಿಸಲು ಕಠಿಣ ಶಾಸನಗಳನ್ನೂ ತಂದರು; ಅಂತಹ ಶಾಸನ ದಿಂದಾಗಿ, ತಮ್ಮ ದೇಶಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಎಂಬ ನಿಲುವು ತಾಳಿದರು. ಆದ್ದರಿಂದಲೇ, ಇಂದು ಭೂತಾನ್ ದೇಶವು, ಪರಿಸರ ರಕ್ಷಣೆಯ ಜತೆ ಯಲ್ಲೇ, ಪ್ರವಾಸಿ ಜನರಿಗೆ ವಿಭಿನ್ನ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ ಮತ್ತು ಇಂತಹದೊಂದು ಸಕಾರಾತ್ಮಕ ಮತ್ತು ಬಿಗುನಿಲುವಿನ ಪ್ರಯೋಗ ಜಗತ್ತಿನ ಬೇರಾವ ದೇಶದಲ್ಲೂ ನಡೆದಂತಿಲ್ಲ.
ಅಲ್ಲಿನ ಪ್ರಕೃತಿ ರಕ್ಷಣೆ ಮತ್ತು ಸಂಸ್ಕೃತಿ ಪೋಷಣೆಯನ್ನು ನೋಡಲೆಂದು ಹಲವು ವರ್ಷಗಳಿಂದ ಆಸೆ ಪಟ್ಟಿದ್ದ ಲೇಖಕರೊಬ್ಬರ ಮನೋಗತ ಇಲ್ಲಿದೆ. ತೆಗೆಯಲು ನೆರವಾಗುವುದು ಇಷ್ಟಕ್ಕೇ ಅವರ ಕೆಲಸ ಮುಗಿಯುವುದಿಲ್ಲ. ದೇಶದ ಪ್ರಕೃತಿ, ಸಂಸ್ಕೃತಿ, ಧಾರ್ಮಿಕ ನಂಬಿಕೆಗಳು, ಆಚಾರವಿಚಾರಗಳು ಮತ್ತು ಇತಿಹಾಸವನ್ನು ಪರಿಚಯಿಸುವ ಜವಾಬ್ದಾರಿಯೂ ಅವರ ಮೇಲಿದೆ. ಭೂತಾನಿನಲ್ಲಿ ಪ್ರವಾಸಿ ಮಾರ್ಗದರ್ಶಕರಿಗೆ ವಿಶೇಷ ತರಬೇತಿ ಮತ್ತು ಪರೀಕ್ಷೆಗಳ ಮೂಲಕ ಅರ್ಹತೆ ನೀಡುವ ವ್ಯವಸ್ಥೆಯಿದೆ. ಪ್ರವಾಸಿಗರಿಗೆ ಸರಿಯಾದ ಮಾಹಿತಿ ನೀಡುವುದು, ದೇಶದ ಸಂಸ್ಕೃತಿಯ ಬಗ್ಗೆ ಗೌರವ ಮೂಡಿಸುವುದು, ಪರಿಸರದ ಬಗ್ಗೆ ಜಾಗೃತಿ ಬೆಳೆಸುವುದು ಈ ತರಬೇತಿಯ ಉದ್ದೇಶಗಳಲ್ಲಿ ಸೇರಿವೆ. ಪ್ರವಾಸಿಗನೊಬ್ಬ ಭೂತಾನಿನಿಂದ ಹಿಂದಿರುಗುವಾಗ ಕೇವಲ ಚಿತ್ರಗಳನ್ನು ಹೊತ್ತುಕೊಂಡು ಹೋಗದೆ, ಆ ದೇಶದ ಬಗ್ಗೆ ಒಂದು ಒಳ್ಳೆಯ ತಿಳಿವಳಿಕೆಯನ್ನೂ ಕೊಂಡೊಯ್ಯಬೇಕು ಎಂಬ ಆಶಯ ಅವರ ಕೆಲಸದಲ್ಲಿ ಕಾಣಿಸುತ್ತದೆ.
ನಾವು ಪ್ರವಾಸಕ್ಕೆ ಹೋಗುವ ದೇಶವನ್ನು ಅರ್ಥಮಾಡಿ ಕೊಳ್ಳಲು ಅಲ್ಲಿನ ದೊಡ್ಡ ನಗರಗಳನ್ನು ಮಾತ್ರ ನೋಡಿದರೆ ಸಾಲದು. ಹಳ್ಳಿಗಳಿಗೆ ಹೋಗಬೇಕು. ಕೃಷಿಭೂಮಿಗಳ ನಡುವೆ ನಡೆಯಬೇಕು. ಜನರು ದಿನನಿತ್ಯದ ಬದುಕನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ಗಮನಿಸಬೇಕು. ಅಲ್ಲಿನ ಮಾರುಕಟ್ಟೆಗಳಲ್ಲಿ ಸುತ್ತಾಡಬೇಕು. ಜನರೊಂದಿಗೆ ಮಾತನಾಡಬೇಕು. ಹಳ್ಳಿ ದಾರಿಯಲ್ಲಿ ನಾನು ಭೂತಾನಿನಲ್ಲಿ ಹಳ್ಳಿಗಳಲೂ, ಕೃಷಿ ಪ್ರದೇಶಗಳಲ್ಲೂ, ಸಣ್ಣ ಪಟ್ಟಣ ಗಳಲ್ಲೂ ಓಡಾಡಿದೆ. ತರಕಾರಿ ಬೆಳೆದು, ಮಾರುವ ಮಾರುಕಟ್ಟೆಗಳಲ್ಲಿ ಸುತ್ತಾಡಿದೆ.
ಜನರ ನಡವಳಿಕೆಯನ್ನು ಗಮನಿಸಿದೆ. ಎಲ್ಲೂ ಅನಗತ್ಯ ಗದ್ದಲ, ಅಬ್ಬರ, ಆತುರ ಕಾಣಿಸಲಿಲ್ಲ. ಜನಸಂಖ್ಯೆ ಕಡಿಮೆಯಿರುವುದೂ ಇದಕ್ಕೆ ಒಂದು ಈ ಸಂದರ್ಭದಲ್ಲಿ ನಾನು ಕಂಡ ಮತ್ತೊಂದು ವಿಶೇಷವೆಂದರೆ ಪ್ರವಾಸಿ ಮಾರ್ಗದರ್ಶಕರ ಹೊಣೆಗಾರಿಕೆ. ಪ್ರವಾಸಿಗರಿಗೆ ದಾರಿ ತೋರಿಸುವುದು, ವಾಹನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವುದು, ಚಿತ್ರ ಕಾರಣವಾಗಿರಬಹುದು.
ಆದರೆ ಜನಸಂಖ್ಯೆ ಕಡಿಮೆ ಇದ್ದರೆ ಮಾತ್ರ ಒಂದು ಸಮಾಜದಲ್ಲಿ ಶಾಂತಿ, ಸ್ವಚ್ಛತೆ, ಶಿಸ್ತು ತಾನಾ ಗಿಯೇ ಹುಟ್ಟಿಕೊಳ್ಳುವುದಿಲ್ಲ. ಅದಕ್ಕೆ ಜನರ ನಡವಳಿಕೆಯೂ ಮುಖ್ಯ. ರಸ್ತೆ ದಾಟಬೇಕಾದಾಗ ವಾಹನ ಚಾಲಕರು ವಾಹನ ನಿಲ್ಲಿಸಿ, ನೀವು ದಾಟಿ, ಅಮೇಲೆ ಮುಂದುವರಿಯುತ್ತೇವೆ ಎಂದು ಸನ್ನೆ ಮಾಡುತ್ತಾರೆ. ಆ ಸನ್ನೆಯಲ್ಲಿ ಉದ್ಧಟತನವಿಲ್ಲ; ತಾಳ್ಮೆ ಇದೆ. ಒಬ್ಬರಿಗೊಬ್ಬರು ದಾರಿ ಬಿಡುವ ಸರಳ ಸಂಸ್ಕಾರ ವಿದೆ. ರಸ್ತೆ ಎನ್ನುವುದು ವಾಹನಗಳಿಗಷ್ಟೇ ಸೇರಿದ್ದಲ್ಲ, ನಡೆದು ಹೋಗುವ ಮನುಷ್ಯ ನಿಗೂ ಸೇರಿದ್ದು ಎಂಬ ತಿಳಿವಳಿಕೆ ಅವರ ನಡವಳಿಕೆಯಲ್ಲಿ ಕಾಣಿಸು ತ್ತದೆ. ಹಾರ್ನ್ ಹಾಕುವ ಕ್ರಮವೇ ಆ ದೇಶದಲ್ಲಿ ಇಲ್ಲ.
ನಮ್ಮಲ್ಲಿ ರಸ್ತೆಯಲ್ಲಿ ಕಾಲಿಡುವಾಗಲೇ ವಾಹನ ಚಾಲಕರ ಕೋಪವನ್ನು ಎದುರಿಸಬೇಕಾಗುವ ಸಂದರ್ಭಗಳು ಇವೆ; ಪಾದಚಾರಿಯೇ ತನ್ನ ಜೀವವನ್ನು ಪಣಕ್ಕಿಟ್ಟು ರಸ್ತೆ ದಾಟಬೇಕಾದ ಸ್ಥಿತಿಯೂ ಇದೆ. ಭೂತಾನಿನಲ್ಲಿ ಕಂಡ ಈ ಸಣ್ಣ ವ್ಯತ್ಯಾಸವೇ ಒಂದು ಸಮಾಜದ ಸಾರ್ವಜನಿಕ ಬದುಕಿನ ಬಗ್ಗೆ ಬಹಳಷ್ಟು ಹೇಳುತ್ತದೆ. ಕಾಡುದಾರಿಯಲ್ಲಿ ಪ್ರಯಾಣಿಸುವಾಗ ಕಂಡ ಒಂದು ಸೂಚನೆ ನನ್ನನ್ನು ವಿಶೇಷವಾಗಿ ಯೋಚಿಸುವಂತೆ ಮಾಡಿತು. ಕಾಡುಪ್ರಾಣಿಗಳಿಗೆ ಆಹಾರ ನೀಡ ಬಾರದು; ಹಾಗೆ ನೀಡುವುದು ಅಪರಾಧ ಎಂಬ ಎಚ್ಚರಿಕೆ ಅದು. ನಮಗೆ ಇದು ಸಾಮಾನ್ಯ ಸೂಚನೆಯಂತೆ ಕಾಣಬಹುದು. ಆದರೆ ಅದರ ಹಿಂದಿರುವ ಪರಿಸರದ ತಿಳಿವಳಿಕೆ ಮುಖ್ಯವಾದದ್ದು.
ನಮ್ಮಲ್ಲಿ ಅನೇಕ ಕಾಡುದಾರಿಗಳಲ್ಲಿ, ಬೆಟ್ಟಗಳ ಮೇಲೆ, ದೇವಾಲಯಗಳ ಬಳಿ, ಪ್ರವಾಸಿ ತಾಣಗಳಲ್ಲಿ ಮಂಗಗಳಿಗೆ ಆಹಾರ ನೀಡುವ ಜನರನ್ನು ನೋಡುತ್ತೇವೆ. ಕೆಲವರು ಪ್ರಾಣಿಗಳ ಮೇಲೆ ಪ್ರೀತಿಯಿದೆ ಎಂದು ಆಹಾರ ಕೊಡುತ್ತಾರೆ. ಇನ್ನು ಕೆಲವರು ಅವುಗಳನ್ನು ಹತ್ತಿರದಿಂದ ನೋಡುವ ಆಸೆಯಿಂದ ಹೀಗೆ ಮಾಡುತ್ತಾರೆ. ಆದರೆ ಮನುಷ್ಯ ಕೊಡುವ ಆಹಾರಕ್ಕೆ ಒಗ್ಗಿಕೊಂಡ ಪ್ರಾಣಿಗಳು ಸಹಜ ಆಹಾರ ಹುಡುಕು ವುದನ್ನು ಬಿಟ್ಟು, ವಾಹನಗಳ ಬಳಿಗೂ ಜನರ ಬಳಿಗೂ ಬರಲು ಆರಂಭಿಸುತ್ತವೆ.
ಕೆಲವೊಮ್ಮೆ ಪ್ರವಾಸಿಗರನ್ನು ಹೆದರಿಸುತ್ತವೆ; ಅವರ ಕೈಯಲ್ಲಿರುವ ಆಹಾರವನ್ನು ಕಸಿದು ಕೊಳ್ಳುತ್ತವೆ. ಪ್ರಾಣಿಗಳ ಮೇಲೆ ತೋರಿಸುವ ಪ್ರೀತಿಯೇ ಅವುಗಳ ಸಹಜ ಬದುಕಿಗೆ ತೊಂದರೆ ಯಾಗಬಹುದು. ಬೌದ್ಧ ಸಂಸ್ಕೃತಿಯ ಪ್ರಭಾವವಿರುವ ದೇಶ ಭೂತಾನ್. ಅಹಿಂಸೆಯ ಮೌಲ್ಯಕ್ಕೆ ಅಲ್ಲಿ ಮಹತ್ವವಿದೆ. ಹಾಗಿದ್ದೂ ಕಾಡುಪ್ರಾಣಿಗಳಿಗೆ ಆಹಾರ ನೀಡ ಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ಇರುವುದು ನನಗೆ ಅಚ್ಚರಿಯಾಯಿತು.
ಪ್ರಾಣಿಗಳ ಬಗ್ಗೆ ಕರುಣೆ ತೋರಿಸುವುದೆಂದರೆ ಅವುಗಳಿಗೆ ನಮ್ಮ ಆಹಾರವನ್ನು ತಿನ್ನಿಸುವುದಲ್ಲ; ಅವುಗಳ ಸಹಜ ಬದುಕಿಗೆ ನಾವು ಅಡ್ಡಿಯಾಗದಂತೆ ನೋಡಿಕೊಳ್ಳುವುದು ಎಂಬ ಅರಿವು ಇದರಲ್ಲಿದೆ. ಕಾಡಿನಲ್ಲಿ ಪ್ರಾಣಿಗಳಿಗೆ ಬೇಕಾದ ಆಹಾರ ದೊರೆಯುವಂತೆ ಅವುಗಳ ವಾಸಸ್ಥಳವನ್ನು ಉಳಿಸಿಕೊಳ್ಳು ವುದು ಮುಖ್ಯ. ಪ್ರಾಣಿಗಳಿಗೆ ಆಹಾರ ನೀಡದೆ ಇರುವುದೂ ಅವುಗಳ ಮೇಲಿನ ಕಾಳಜಿಯ ಒಂದು ರೂಪವೇ. ಏರಿಳಿತಗಳ ನಡುವೆ ಬದುಕು ಭೂತಾನಿನಲ್ಲಿ ಪ್ರಕೃತಿಯ ನಡುವೆ ಪ್ರಯಾಣಿಸುವಾಗ ನನಗೆ ಮತ್ತೊಂದು ವಿಷಯ ಗಮನಕ್ಕೆ ಬಂತು.
ವಿಮಾನ ನಿಲ್ದಾಣಗಳು, ಶಾಲಾ-ಕಾಲೇಜುಗಳ ಆಟದ ಮೈದಾನಗಳು ಮತ್ತು ಕೆಲವು ಕಣಿವೆ ಪ್ರದೇಶಗಳನ್ನು ಹೊರತು ಪಡಿಸಿದರೆ, ವಿಶಾಲವಾದ ಸಮತಟ್ಟಾದ ನೆಲ ಬಹಳ ಕಡಿಮೆ. ಬಹುಪಾಲು ಕಡೆ ಇಳಿಜಾರು, ಏರುದಾರಿ, ತಿರುವು, ಕಣಿವೆ. ಜನರು ಏರಿಳಿತಗಳ ನಡುವೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿನ ಭೌಗೋಳಿಕ ಪರಿಸ್ಥಿತಿಯೇ ದಿನನಿತ್ಯದ ಚಟುವಟಿಕೆಗಳಿಗೆ ಒಂದು ಬಗೆಯ ದೈಹಿಕ ಶ್ರಮವನ್ನು ಅನಿವಾರ್ಯಗೊಳಿಸುತ್ತದೆ.
ಎಲ್ಲವನ್ನೂ ವಾಹನದ ಬಳಿಗೆ ತಂದುಕೊಡುವ ವ್ಯವಸ್ಥೆ ಇಲ್ಲದ ಕಡೆ ಮನುಷ್ಯ ತನ್ನ ಕಾಲು ಗಳನ್ನೇ ನಂಬಬೇಕಾಗುತ್ತದೆ. ಈ ಪರಿಸರಕ್ಕೂ ಜನರ ದೈಹಿಕ ಚಟುವಟಿಕೆಗೂ ಸಂಬಂಧವಿರ ಬಹುದು. ಆದರೆ ಎಲ್ಲರೂ ಒಂದೇ ರೀತಿಯ ಆರೋಗ್ಯ ಹೊಂದಿದ್ದಾರೆ ಎಂದು ಹೇಳಲು ಸಾಧ್ಯ ವಿಲ್ಲ. ನಾನು ಕಂಡ ಜನರ ಸರಳ ಬದುಕು, ಸಹನೆ, ತಾಳ್ಮೆ ಮತ್ತು ನಗುನಗುತ್ತಾ ಮಾತನಾಡುವ ಗುಣ ಮಾತ್ರ ನನ್ನ ಮನಸ್ಸಿನಲ್ಲಿ ಉಳಿದಿದೆ. ಭೂತಾನಿನ ಸ್ವಚ್ಛತೆ ನನ್ನನ್ನು ಹೆಚ್ಚು ಆಕರ್ಷಿಸಿತು. ರಸ್ತೆಯಲ್ಲಿ ಪ್ರಯಾಣಿಸುವಾಗ, ಮಾರುಕಟ್ಟೆಗಳಲ್ಲಿ ಓಡಾಡುವಾಗ, ಹಳ್ಳಿಗಳಲ್ಲಿ ನಡೆಯು ವಾಗ ಕಸವನ್ನು ಎಲ್ಲೆಂದರಲ್ಲಿ ಎಸೆಯುವ ದೃಶ್ಯಗಳು ಬಹಳ ವಿರಳವಾಗಿ ಕಂಡವು.
ಪ್ಲಾಸ್ಟಿಕ್ ಚೀಲಗಳು, ತಿಂದು ಬಿಸಾಡಿದ ಪ್ಯಾಕೆಟ್ಗಳು, ರಸ್ತೆಬದಿಯ ಕಸದ ರಾಶಿಗಳು ನಮ್ಮಲ್ಲಿ ಸಾಮಾನ್ಯ ದೃಶ್ಯಗಳಾಗುತ್ತಿರುವಾಗ, ಭೂತಾನಿನಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕಾಳಜಿ ಎದ್ದು ಕಾಣುತ್ತದೆ. ರಸ್ತೆಯ ಬದಿಯಲ್ಲಿ ಹರಿಯುವ ನೀರನ್ನು ಕಂಡಾಗಲೂ ಅದರ ಸ್ವಚ್ಛತೆಯ ಬಗ್ಗೆ ಗಮನ ಸೆಳೆಯುತ್ತದೆ. ಎಲ್ಲ ನೀರೂ ಕುಡಿಯಲು ಯೋಗ್ಯ ವೆಂದು ಹೇಳಲು ಸಾಧ್ಯವಿಲ್ಲವಾದರೂ, ನೀರು ಮತ್ತು ಪರಿಸರವನ್ನು ಕಲುಷಿತ ಗೊಳಿಸಬಾರದು ಎಂಬ ಜಾಗೃತಿ ಅಲ್ಲಿನ ಸಾರ್ವಜನಿಕ ಬದುಕಿನಲ್ಲಿ ಕಾಣಿಸು ತ್ತದೆ. ನಮ್ಮಲ್ಲಿ ಸ್ವಚ್ಛತಾ ಅಭಿಯಾನಗಳು ನಡೆಯುತ್ತವೆ. ರಸ್ತೆಯ ಬದಿಯಲ್ಲಿ ಫಲಕಗಳಿರುತ್ತವೆ. ಆದರೂ ತಿಂದು ಬಿಸಾಡಿದ ಪ್ಯಾಕೆಟ್ಗಳು, ಪ್ಲಾಸ್ಟಿಕ್ ಬಾಟಲಿಗಳು, ತಂಬಾಕು ಮತ್ತು ಗುಟ್ಕಾದ ಕಲೆಗಳು ಕಾಣಿಸುತ್ತವೆ. ಸ್ವಚ್ಛತೆಯ ಬಗ್ಗೆ ಭಾಷಣ ಮಾಡುವುದಕ್ಕಿಂತ ಅದನ್ನು ದಿನನಿತ್ಯದ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ.
ಭೂತಾನಿನಲ್ಲಿ ನಾನು ಕಂಡದ್ದು ಈ ನಡವಳಿಕೆಯ ಮಹತ್ವವನ್ನು. ಸಮವಸ ದಲ್ಲೂ ಸ ಳೀಯ ಛಾಯೆ ಅಲ್ಲಿನ ಉಡುಪುಗಳಲ್ಲಿಯೂ ಒಂದು ಸಾಂಸ್ಕೃತಿಕ ಗುರುತು ಕಾಣಿಸುತ್ತದೆ. ಸಾಂಪ್ರದಾಯಿಕ ಉಡುಪುಗಳು ಸಾರ್ವಜನಿಕ ಬದುಕಿನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ. ಶಾಲಾ ಮಕ್ಕಳ ಸಮವಸದಲ್ಲಿಯೂ ಸ್ಥಳೀಯ ಉಡುಪಿನ ಪ್ರಭಾವ ಕಾಣಿಸುತ್ತದೆ. ಆಹಾರ, ಭಾಷೆ, ಉಡುಪು, ಧಾರ್ಮಿಕ ಆಚರಣೆ ಮತ್ತು ಸಾರ್ವಜನಿಕ ನಡವಳಿಕೆಗಳ ಮೂಲಕ ಒಂದು ದೇಶ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆಧುನಿಕ ಜಗತ್ತಿನ ಸಂಪರ್ಕ ದಲ್ಲಿದ್ದರೂ ತನ್ನದೇ ಆದ ಗುರುತನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಾರದು ಎಂಬ ಎಚ್ಚರಿಕೆ ಅಲ್ಲಿ ಕಾಣುತ್ತದೆ. ಸಂಸ್ಕೃತಿಯನ್ನು ಉಳಿಸಿಕೊಳ್ಳುವುದೆಂದರೆ ಹಳೆಯದನ್ನೆಲ್ಲ ಹಾಗೆಯೇ ಹಿಡಿದುಕೊಂಡು ಕೂರುವುದಲ್ಲ.
ಬದಲಾವಣೆಗಳ ನಡುವೆ ಯಾವ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳು ವುದು. ಅಲ್ಲಿ ರಾಜ ಧರಿಸುವ ವಸ ವಿನ್ಯಾಸವೇ ಪ್ರೈಮರಿ ಶಾಲಾ ಮಕ್ಕಳ ವಿನ್ಯಾಸವೂ ಆಗಿದೆ. ಎಂಟು ಲಕ್ಷ ಜನಸಂಖ್ಯೆ ಭೂತಾನ್ ಜನಸಂಖ್ಯೆಯಲ್ಲಿ ಚಿಕ್ಕ ದೇಶ. ಅಲ್ಲಿನ ಜನಸಂಖ್ಯೆಯನ್ನು ಸಾಮಾನ್ಯವಾಗಿ ಎಂಟು ಲಕ್ಷದ ಆಸುಪಾಸಿನಲ್ಲಿ ಉಲ್ಲೇಖಿಸಲಾಗುತ್ತದೆ. ಭಾರತದಂತಹ ವಿಶಾಲ ದೇಶದ ಸಮಸ್ಯೆಗಳನ್ನು ಭೂತಾನಿ ನೊಂದಿಗೆ ನೇರವಾಗಿ ಹೋಲಿಸುವುದು ಸರಿಯಲ್ಲ.
ಜನಸಂಖ್ಯೆ, ಭೌಗೋಳಿಕ ಪರಿಸ್ಥಿತಿ, ಆರ್ಥಿಕ ಸಂಪನ್ಮೂಲ, ಇತಿಹಾಸ ಎಲ್ಲವೂ ಬೇರೆಬೇರೆ. ಆದರೂ ಒಂದು ಸಣ್ಣ ದೇಶದಿಂದ ಕಲಿಯಬಹುದಾದ ಕೆಲವು ಸಂಗತಿಗಳಿವೆ. ಪ್ರಕೃತಿಯನ್ನು ಉಳಿಸಿಕೊಳ್ಳುವುದು, ಪ್ರವಾಸಿಗರಿಗೆ ದೇಶದ ಸಂಸ್ಕೃತಿಯನ್ನು ಪರಿಚ ಯಿಸುವುದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ವಾಗಿಡು ವುದು, ಕಾಡುಪ್ರಾಣಿಗಳ ಸಹಜ ಬದುಕಿಗೆ ಅಡ್ಡಿಯಾಗದಿರು ವುದು, ಜನರ ನಡುವೆ ಪರಸ್ಪರ ಗೌರವ ವನ್ನು ಬೆಳೆಸುವುದು ಇವುಗಳಿಗೆ ದೊಡ್ಡ ಜನಸಂಖ್ಯೆಯೇ ಅಡ್ಡಿಯಾಗ ಬೇಕಿಲ್ಲ. ಇವುಗಳನ್ನು ನಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳಲು ಸಾಧ್ಯ.
ಭೂತಾನದ ರಾಜಕೀಯ ವ್ಯವಸ್ಥೆಯೂ ತನ್ನದೇ ಆದ ಇತಿಹಾಸ ಹೊಂದಿದೆ. ಅಲ್ಲಿ ರಾಜಪ್ರಭುತ್ವದ ಪರಂಪರೆ ಯೊಂದಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯೂ ಬೆಳೆದಿದೆ. ದೇಶದ ಅಭಿವೃದ್ಧಿ ಯನ್ನು ಕೇವಲ ಆರ್ಥಿಕ ಉತ್ಪಾದನೆಯ ಅಂಕಿಅಂಶಗಳಿಂದ ಅಳೆಯಬೇಕೇ, ಅಥವಾ ಜನರ ನೆಮ್ಮದಿ, ಸಾಮಾಜಿಕ ಬದುಕು ಮತ್ತು ಪರಿಸರದ ಆರೋಗ್ಯವನ್ನೂ ಅದರಲ್ಲಿ ಸೇರಿಸಬೇಕೇ ಎಂಬ ಪ್ರಶ್ನೆಗೆ ಭೂತಾನ್ ತನ್ನದೇ ಆದ ಉತ್ತರವನ್ನು ಹುಡುಕಿದೆ. ಒಟ್ಟು ದೇಶೀಯ ಉತ್ಪನ್ನದ ಲೆಕ್ಕಾಚಾರವು ಆರ್ಥಿಕ ಚಟುವಟಿಕೆಯ ಪ್ರಮಾಣವನ್ನು ತಿಳಿಸುತ್ತದೆ. ಆದರೆ ಒಂದು ದೇಶದ ಜನರು ಎಷ್ಟು ನೆಮ್ಮದಿಯಿಂದ ಬದುಕುತ್ತಿದ್ದಾರೆ,
ಅವರ ಸುತ್ತಲಿನ ಪ್ರಕೃತಿ ಎಷ್ಟು ಸುರಕ್ಷಿತವಾಗಿದೆ, ಅವರ ಸಂಸ್ಕೃತಿಗೆ ಎಷ್ಟು ಜಾಗವಿದೆ ಎಂಬುದನ್ನು ಆ ಒಂದೇ ಅಂಕಿ ಹೇಳಲಾರದು. ಪ್ರಕ ತಿಯನ್ನು ಉಳಿಸಿಕೊಳ್ಳುವ ಸವಾಲು ಆದರೆ ಭೂತಾನನ್ನು ದೋಷಗಳೇ ಇಲ್ಲದ ಆದರ್ಶ ದೇಶವೆಂದು ಚಿತ್ರಿಸುವುದು ನನ್ನ ಉದ್ದೇಶವಲ್ಲ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸಮಸ್ಯೆಗಳಿರುತ್ತವೆ. ಪ್ರಕೃತಿಯನ್ನು ಉಳಿಸಿಕೊಳ್ಳುವ ಸವಾಲುಗಳೂ ಇರುತ್ತವೆ. ಪ್ರವಾಸೋದ್ಯಮದಿಂದ ಆದಾಯ ಗಳಿಸುವಾಗ ಪರಿಸರದ ಮೇಲೆ ಒತ್ತಡ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಅಭಿವೃದ್ಧಿಯ ಅಗತ್ಯ ಮತ್ತು ಪ್ರಕೃತಿಯ ಸಂರಕ್ಷಣೆಯ ನಡುವೆ ಸಮತೋಲನ ಸಾಽಸುವುದು ನಿರಂತರ ಪ್ರಯತ್ನವನ್ನು ಬೇಡುತ್ತದೆ. ನಾನು ಅಲ್ಲಿ ಕಂಡ ಅನುಭವಗಳು ಆ ದೇಶದ ಪ್ರತಿಯೊಂದು ಸಂಗತಿಯೂ ಪರಿಪೂರ್ಣವಾಗಿದೆ ಎಂದು ಹೇಳುವುದಕ್ಕಲ್ಲ; ಪ್ರಕೃತಿಯೊಂದಿಗೆ ಮನುಷ್ಯ ಹೇಗೆ ಬದುಕಬಹುದು ಎಂಬುದನ್ನು ಯೋಚಿಸು ವುದಕ್ಕೆ. ನಮ್ಮ ಪಶ್ಚಿಮ ಘಟ್ಟದ ನೆಲವೂ ಹಸಿರು, ಮಳೆ, ಹೊಳೆ, ಕಾಡು, ಕೃಷಿ ಮತ್ತು ಜೀ ವೈವಿಧ್ಯದಿಂದ ಸಮೃದ್ಧವಾಗಿದೆ. ನಮ್ಮಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳುವ ಪರಂಪರೆ ಇಲ್ಲವೆಂದಲ್ಲ. ಹಳ್ಳಿಗಳ ಬದುಕು, ಕೃಷಿ ಪದ್ಧತಿಗಳು, ನೀರಿನ ಮೂಲಗಳನ್ನು ಕಾಪಾಡಿಕೊಂಡ ನೆಲಜ್ಞಾನ, ಕಾಡಿನೊಂದಿಗೆ ಬೆಸೆದುಕೊಂಡ ಜೀವನ ಇವೆಲ್ಲವೂ ನಮ್ಮಲ್ಲಿಯೂ ಇವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟಗಳನ್ನು ಕತ್ತರಿಸುವಾಗ, ಹೊಳೆಗಳ ದಾರಿಯನ್ನು ಮುಚ್ಚುವಾಗ, ಕಾಡುಗಳನ್ನು ತುಂಡರಿಸುವಾಗ, ಕೃಷಿಭೂಮಿಯನ್ನು ಕಾಂಕ್ರೀಟ್ನಿಂದ ತುಂಬಿಸುವಾಗ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಮತ್ತೆ ಮತ್ತೆ ಕೇಳಿಕೊಳ್ಳಬೇಕಾಗಿದೆ.
ಒಂದು ಸುಂದರವಾದ ಕಣಿವೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವುದಕ್ಕೂ, ಅದನ್ನು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಸಂಪೂರ್ಣ ಬದಲಾಯಿಸುವುದಕ್ಕೂ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನು ಅರಿಯುವುದು ಇಂದಿನ ಪ್ರವಾಸೋದ್ಯಮಕ್ಕೆ ಬಹಳ ಮುಖ್ಯ. ಭೂತಾನಿನಲ್ಲಿ ನಾನು ಕಂಡದ್ದು ಕೇವಲ ಹಸಿರು ಪರ್ವತಗಳನ್ನಲ್ಲ. ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದಕ್ಕಿಂತ, ಪ್ರಕೃತಿಯ ಮಿತಿಗಳೊಳಗೆ ಬದುಕನ್ನು ರೂಪಿಸಿಕೊಳ್ಳುವ ಒಂದು ಪ್ರಯತ್ನವನ್ನು. ಅಲ್ಲಿನ ರಸ್ತೆಗಳು ನನ್ನನ್ನು ಒಂದು ಊರಿನಿಂದ ಮತ್ತೊಂದು ಊರಿಗೆ ಕರೆದೊಯ್ದವು. ಆದರೆ ಆ ಪ್ರಯಾಣದ ನೆನಪುಗಳು ನನ್ನನ್ನು ನಮ್ಮೂರಿನ ರಸ್ತೆಗಳ ಕಡೆಗೂ, ನಮ್ಮ ಕಾಡುಗಳ ಕಡೆಗೂ, ನಮ್ಮ ಹಳ್ಳಿಗಳ ಕಡೆಗೂ ಮತ್ತೆ ಕರೆತಂದವು. ನಾವು ಎಷ್ಟು ದೂರ ಪ್ರಯಾಣಿಸಿದ್ದೇವೆ ಎನ್ನುವುದಕ್ಕಿಂತ, ಆ ಪ್ರಯಾಣದಿಂದ ನಮ್ಮ ಬದುಕಿನ ಬಗ್ಗೆ ಏನನ್ನು ಕಲಿತಿದ್ದೇವೆ ಎನ್ನುವುದು ಮುಖ್ಯವಲ್ಲವೇ? ಭೂತಾನಿಗೆ ಹೋಗಬೇಕೆಂಬ ನನ್ನ ಬಹುವರ್ಷಗಳ ಆಸೆ ಈಡೇರಿತು. ಅಲ್ಲಿನ ಬೆಟ್ಟಗಳನ್ನು ನೋಡಿದೆ, ಕಣಿವೆಗಳನ್ನು ದಾಟಿದೆ, ಹಳ್ಳಿಗಳಲ್ಲಿ ಓಡಾಡಿದೆ, ಮಾರುಕಟ್ಟೆಗಳಲ್ಲಿ ಜನರ ಬದುಕನ್ನು ಗಮನಿಸಿದೆ. ಪ್ರವಾಸ ಮುಗಿಸಿ ಹಿಂದಿರುಗುವಾಗ ನನ್ನೊಂದಿಗೆ ವಾಪಸು ಬಂದದ್ದು ಅಲ್ಲಿನ ಛಾಯಾಚಿತ್ರಗಳು ಮತ್ತು ಅಲ್ಲಿನ ಸಂಸ್ಕೃತಿಯ ನೆನಪುಗಳು. ಅಭಿವೃದ್ಧಿಯೆಂದರೆ ಪ್ರಕೃತಿಯನ್ನು ಗೆಲ್ಲುವುದೇ, ಅಥವಾ ಅದರೊಂದಿಗೆ ಬದುಕುವುದನ್ನು ಕಲಿಯುವುದೇ ಎಂಬ ಪ್ರಶ್ನೆಯೂ ನನ್ನೊಂದಿಗೆ ಬಂದಿತು. ಆ ಪ್ರಶ್ನೆಗೆ ಭೂತಾನ್ ಅಂತಿಮ ಉತ್ತರ ನೀಡಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ ಪ್ರಕೃತಿಯನ್ನು ಸಾಧ್ಯವಾದಷ್ಟು ಉಳಿಸಿಕೊಂಡೇ ಒಂದು ದೇಶ ತನ್ನನ್ನು ಜಗತ್ತಿಗೆ ಪರಿಚಯಿಸಿಕೊಳ್ಳಬಹುದು ಎಂಬುದನ್ನು ನಾನು ಅಲ್ಲಿ ಕಣ್ಣಾರೆ ಕಂಡೆ.