ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Jitendra Singh Column: ಇತರರಿಗೆ ದಾರಿ ತೋರುವ ನಾಯಕ: ತಂತ್ರಜ್ಞಾನ- ಸಮೃದ್ಧ ಭಾರತ

ಭಾರತವು ಈಗ ‘ಎಲ್ಲರಿಗೂ ಕೃತಕ ಬುದ್ಧಿಮತ್ತೆ’ ( AI for all) ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರ ಹೊಮ್ಮುತ್ತಿದೆ; ಕೃಷಿಯಿಂದ ಹಿಡಿದು ಆರೋಗ್ಯ ಮತ್ತು ಆಡಳಿತದವರೆಗೆ ಪ್ರತಿಯೊಂದು ಕ್ಷೇತ್ರಕ್ಕೂ ಬುದ್ಧಿಮತ್ತೆ ಮತ್ತು ನಾವೀನ್ಯವು ತಲುಪುವುದನ್ನು ಖಚಿತಪಡಿಸುತ್ತಿದೆ. 100ಕ್ಕೂ ಹೆಚ್ಚು ಯುನಿಕಾರ್ನ್‌ ಗಳು ಮತ್ತು ಯುವ-ನೇತೃತ್ವದ ಸ್ಟಾರ್ಟಪ್‌ಗಳ ಹುರುಪಿನ ಪರಿಸರ ವ್ಯವಸ್ಥೆ ಯೊಂದಿಗೆ, ದೇಶದ ವೈಜ್ಞಾನಿಕ ಮತ್ತು ಉದ್ಯಮಶೀಲತೆಯ ಮನೋಭಾವವು ಅಪ್ರತಿಮವಾಗಿದೆ.

ಇತರರಿಗೆ ದಾರಿ ತೋರುವ ನಾಯಕ: ತಂತ್ರಜ್ಞಾನ- ಸಮೃದ್ಧ ಭಾರತ

-

Ashok Nayak Ashok Nayak Nov 3, 2025 12:06 PM

ಪ್ರಗತಿಪಥ

ಡಾ.ಜಿತೇಂದ್ರ ಸಿಂಗ್

ಹಸಿರು ಹೈಡ್ರೋಜನ್, ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ, ಸೆಮಿಕಂಡಕ್ಟರ್ ತಯಾರಿಕೆ ಮತ್ತು ನಿಖರ ಕೃಷಿಯ ಏರಿಕೆಯನ್ನು ನೋಡಿದರೆ, ಭಾರತವು ಕೇವಲ ಜಗತ್ತನ್ನು ಹಿಂಬಾ ಲಿಸುತ್ತಿಲ್ಲ- ಅದು ಭವಿಷ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ. 2047ರ ವೇಳೆಗೆ ವಿಕಸಿತ ಭಾರತದ ಕಡೆಗೆ ವಿಶ್ವಾಸದಿಂದ ಮುನ್ನಡೆಯು ತ್ತಿರುವ ಒಂದು ಸ್ವಾವಲಂಬಿ ದೇಶದ ಲಕ್ಷಣವಿದು.

ಜಾಗತಿಕ ವೈಜ್ಞಾನಿಕ ಪುನರುಜ್ಜೀವನದ ಹೊಸ್ತಿಲಲ್ಲಿ ನಿಂತಿರುವ, ತಂತ್ರಜ್ಞಾನ-ಸಮೃದ್ಧ ಭಾರತವು ಈಗ ಅನುಯಾಯಿಯಾಗಿ ಉಳಿದಿಲ್ಲ, ಬದಲಿಗೆ ಇತರರೇ ತನ್ನನ್ನು ಹಿಂಬಾಲಿಸುವಂತೆ ಕೈಬೀಸಿ ಕರೆಯುತ್ತಿದೆ.

ಕಳೆದ ದಶಕದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಅಡಿಯಲ್ಲಿ, ದೇಶವು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯ ಕ್ಷೇತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ. ಡಿಜಿಟಲ್ ಸಬಲೀಕರಣದಿಂದ ಹಿಡಿದು ಬಾಹ್ಯಾಕಾಶ ಪರಿಶೋಧನೆ ಯವರೆಗೆ, ಸ್ವಾವಲಂಬಿ, ತಂತ್ರಜ್ಞಾನ-ಚಾಲಿತ ಭಾರತದ- ಅಂದರೆ ‘ಆತ್ಮನಿರ್ಭರ ಭಾರತ’ದ ರೂಪರೇಷೆಗಳು ನಿಸ್ಸಂದೇಹವಾಗಿ ಸ್ಪಷ್ಟವಾಗುತ್ತಿವೆ.

‘ಡಿಜಿಟಲ್ ಇಂಡಿಯಾ’ ಮತ್ತು ‘ಸ್ಟಾರ್ಟಪ್ ಇಂಡಿಯಾ’ದ ವಿಜಯಗಳಿಂದ ಹಿಡಿದು, ‘ಸ್ವಚ್ಛ ಭಾರತ್’ ಉಪಕ್ರಮದ ಯಶಸ್ಸಿನವರೆಗೆ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯದ ಮೂಲಕ ಬೃಹತ್ ಪ್ರಮಾಣದ ಪರಿವರ್ತನೆಯನ್ನು ತರಬಹುದು ಎಂಬುದನ್ನು ರಾಷ್ಟ್ರವು ನಿರೂಪಿಸಿದೆ.

‘ಯುಪಿಐ’ ಕ್ರಾಂತಿಯು ಜಾಗತಿಕವಾಗಿ ಡಿಜಿಟಲ್ ಪಾವತಿಗಳ ವ್ಯಾಖ್ಯಾನವನ್ನೇ ಬದಲಾಯಿಸಿದೆ. ಭಾರತದ ಜೈವಿಕ ಆರ್ಥಿಕತೆ 2014ರಲ್ಲಿ ಇದ್ದ ೧೦ ಬಿಲಿಯನ್‌ನಿಂದ ಹದಿನಾರು ಪಟ್ಟು ಬೆಳೆದು, 2024ರಲ್ಲಿ ೧೬೫.೭ ಬಿಲಿಯನ್‌ನಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ಕಂಡಿದೆ. ಈ ಮೂಲಕ ಜೈವಿಕ ಇಂಧನಗಳು, ಜೈವಿಕ ಪ್ಲಾಸ್ಟಿಕ್‌ಗಳು ಮತ್ತು ಹಸಿರು ರಾಸಾಯನಿಕಗಳಲ್ಲಿ ಮುಂಚೂಣಿ ಯಲ್ಲಿದೆ.

ಇದನ್ನೂ ಓದಿ: V‌ishweshwar Bhat Column: ಏರ್‌ ಕ್ರಾಫ್ಟ್‌ ಕಂಟ್ರೋಲ್‌ ಬಾಕ್ಸ್

‘ಚಂದ್ರಯಾನ’ ಮತ್ತು ‘ಗಗನಯಾನ’ ಯೋಜನೆಗಳು ಬಾಹ್ಯಾಕಾಶ ಯಾನ ಮಾಡುವ ರಾಷ್ಟ್ರಗಳ ನಡುವೆ ಭಾರತದ ಸ್ಥಾನವನ್ನು ಭದ್ರಪಡಿಸಿವೆ, ಹಾಗೆಯೇ ೫-ಜಿ ಸೇವೆ ಮತ್ತು ಡಿಜಿಟಲ್ ರಾಯಭಾರ ತ್ವವು ಕಡೆಯ ಹಂತದವರೆಗೂ ಸಂಪರ್ಕ ಮತ್ತು ಸಬಲೀಕರಣವನ್ನು ತಂದಿವೆ.

ಭಾರತವು ಈಗ ‘ಎಲ್ಲರಿಗೂ ಕೃತಕ ಬುದ್ಧಿಮತ್ತೆ’ (AI for all) ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ; ಕೃಷಿಯಿಂದ ಹಿಡಿದು ಆರೋಗ್ಯ ಮತ್ತು ಆಡಳಿತದವರೆಗೆ ಪ್ರತಿಯೊಂದು ಕ್ಷೇತ್ರಕ್ಕೂ ಬುದ್ಧಿಮತ್ತೆ ಮತ್ತು ನಾವೀನ್ಯವು ತಲುಪುವುದನ್ನು ಖಚಿತಪಡಿಸುತ್ತಿದೆ. 100ಕ್ಕೂ ಹೆಚ್ಚು ಯುನಿಕಾರ್ನ್‌ಗಳು ಮತ್ತು ಯುವ-ನೇತೃತ್ವದ ಸ್ಟಾರ್ಟಪ್‌ಗಳ ಹುರುಪಿನ ಪರಿಸರ ವ್ಯವಸ್ಥೆ ಯೊಂದಿಗೆ, ದೇಶದ ವೈಜ್ಞಾನಿಕ ಮತ್ತು ಉದ್ಯಮಶೀಲತೆಯ ಮನೋಭಾವವು ಅಪ್ರತಿಮವಾಗಿದೆ.

ಹಸಿರು ಹೈಡ್ರೋಜನ್, ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ, ಸೆಮಿಕಂಡಕ್ಟರ್ ತಯಾರಿಕೆ ಮತ್ತು ನಿಖರ ಕೃಷಿಯ ಏರಿಕೆಯನ್ನು ನೋಡಿದರೆ, ಭಾರತವು ಕೇವಲ ಜಗತ್ತನ್ನು ಹಿಂಬಾ ಲಿಸುತ್ತಿಲ್ಲ- ಅದು ಭವಿಷ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ತೋರಿಸು ತ್ತದೆ.

ಇದೇ ‘ಆತ್ಮನಿರ್ಭರ ಭಾರತ’ದ ಕಥೆ- ಸ್ವಾತಂತ್ರ್ಯದ ಶತಮಾನೋತ್ಸವ ವರ್ಷವಾದ 2047ರ ವೇಳೆಗೆ ವಿಕಸಿತ ಭಾರತದ ಕಡೆಗೆ ವಿಶ್ವಾಸದಿಂದ ಮುನ್ನಡೆಯುತ್ತಿರುವ ಒಂದು ಸ್ವಾವಲಂಬಿ, ದೂರದೃಷ್ಟಿ ಯ ಭಾರತದ ಕಥೆ ಇದು. ಸಾಧನೆಯಿಂದ ಆಕಾಂಕ್ಷೆಯ ಕಡೆಗೆ ಈ ಪ್ರಗತಿಯ ಹಿನ್ನೆಲೆಯಲ್ಲಿ, 2025ರ ನವೆಂಬರ್ ೩ರಿಂದ ೫ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ‘ಉದಯೋ ನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯ ಸಮಾವೇಶ’ (Emerging Science, Technology and Innovation Conclave- ESTIC ) ಒಂದು ದಿಟ್ಟ ಹೊಸ ಹೆಜ್ಜೆಯನ್ನು ಗುರುತಿಸು ತ್ತದೆ.

ಭಾರತ ಸರಕಾರದ ೧೩ ಸಚಿವಾಲಯಗಳಿಂದ ಆಯೋಜಿಸಲ್ಪಟ್ಟ ಇಎಸ್‌ಟಿಐಸಿ, ಕೇವಲ ಸಾಧನೆ ಗಳ ಪ್ರದರ್ಶನವಷ್ಟೇ ಅಲ್ಲ. ಇದು ಸಹಯೋಗ, ದೂರದೃಷ್ಟಿ ಮತ್ತು ರಾಷ್ಟ್ರೀಯ ಕಾರ್ಯತಂತ್ರಕ್ಕೆ ಒಂದು ವೇದಿಕೆಯಾಗಿದೆ.

ಪ್ರಧಾನಮಂತ್ರಿ ಅವರಿಂದ ಉದ್ಘಾಟನೆಗೊಳ್ಳಲಿರುವ ಇಎಸ್‌ಟಿಐಸಿ-೨೦೨೫, ಉದಯೋನ್ಮುಖ ತಂತ್ರಜ್ಞಾನಗಳ ಭವಿಷ್ಯದ ಕುರಿತು ಚರ್ಚಿಸಲು ಪ್ರಮುಖ ವಿಜ್ಞಾನಿಗಳು, ನಾವೀನ್ಯಕಾರರು, ನೀತಿ ನಿರೂಪಕರು ಮತ್ತು ಜಾಗತಿಕ ತಜ್ಞರನ್ನು ಒಟ್ಟುಗೂಡಿಸಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಭಾರತದ ಅಭಿವೃದ್ಧಿ ಆದ್ಯತೆಗಳೊಂದಿಗೆ ಹೊಂದಿಸುವಂಥ ಮಾರ್ಗೋಪಾಯಗಳನ್ನು ಸಹಯೋಗ ದೊಂದಿಗೆ ರಚಿಸಲು, ಪಾಲುದಾರಿಕೆಗಳನ್ನು ರೂಪಿಸಲು ಮತ್ತು ಕೊರತೆಗಳನ್ನು ಗುರುತಿಸಲು ಇದು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಒಂದು ರಾಷ್ಟ್ರೀಯ ಸಂಗಮ ವೇದಿಕೆಯಾಗಿದೆ. ಇದು ಶೈಕ್ಷಣಿಕ ವಲಯ, ಉದ್ಯಮ ಮತ್ತು ಸರಕಾರವನ್ನು ಒಂದೇ ಹಂಚಿಕೆಯ ಉದ್ದೇಶದ ಸುತ್ತ ಒಗ್ಗೂಡಿಸುತ್ತದೆ: ಆ ಉದ್ದೇಶವೆಂದರೆ, ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ, ನಾವೀನ್ಯ-ನೇತೃತ್ವದ ರಾಷ್ಟ್ರವನ್ನಾಗಿ ಮಾಡುವ ‘ವಿಕಸಿತ ಭಾರತ ೨೦೪೭’ರ ಪ್ರಯಾಣಕ್ಕೆ ಶಕ್ತಿ ತುಂಬುವುದು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸ್ವಾವಲಂಬನೆಗೆ ನಿರ್ಣಾಯಕವಾದ ೧೧ ವಿಷಯಾಧಾರಿತ ಕ್ಷೇತ್ರಗಳ ಸುತ್ತ ಈ ಸಮಾವೇಶವನ್ನು (ಇಎಸ್‌ಟಿಐಸಿ) ನಿರ್ಮಿಸಲಾಗಿದೆ.

ಇದು ಕಾರ್ಯತಂತ್ರದ ಸಂವಾದ, ಸಹಯೋಗ ಮತ್ತು ಭಾರತೀಯ ಶ್ರೇಷ್ಠತೆಯನ್ನು ಪ್ರದರ್ಶಿಸಲು ಒಂದು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಪ್ರಸ್ತುತ ಸಾಧನೆಗಳನ್ನು ಸಂಭ್ರಮಿಸುವುದರ ಜತೆಗೆ, ಭಾರತದ ವೈಜ್ಞಾನಿಕ ಪ್ರಗತಿಯು ಸಾಮಾಜಿಕ ಅಗತ್ಯಗಳು ಮತ್ತು ಜಾಗತಿಕ ಅವಕಾಶಗಳೊಂದಿಗೆ ನಿಕಟವಾಗಿ ಹೊಂದಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲು, ವಿಚಾರ ಮಂಥನ ಮಾಡಲು, ಕೊರತೆಗಳನ್ನು ಗುರುತಿಸಲು ಮತ್ತು ನೀತಿ ನಿರೂಪಣೆಯ ಕ್ರಮಗಳಿಗೆ ಇದು ಅವಕಾಶ ಕಲ್ಪಿಸುತ್ತದೆ.

ಮೂಲಭೂತವಾಗಿ, ಇಎಸ್‌ಟಿಐಸಿ ಎನ್ನುವುದು ಇಡೀ ಪರಿಸರ ವ್ಯವಸ್ಥೆಯನ್ನು ಜೋಡಿಸುವು ದಾಗಿದೆ. ಅಂದರೆ, ನೀತಿಗಳನ್ನು ರೂಪಿಸುವ ಸಚಿವಾಲಯಗಳು, ನಾವೀನ್ಯವನ್ನು ತರುವ ವಿಜ್ಞಾನಿ ಗಳು, ಕಲ್ಪನೆಗಳನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಉದ್ಯಮಗಳು ಮತ್ತು ಸಾಂಪ್ರದಾಯಿಕ ವ್ಯವಸ್ಥೆಯನ್ನೇ ಬದಲಾಯಿಸುವ ಸ್ಟಾರ್ಟಪ್‌ಗಳನ್ನು ಇದು ಸಂಪರ್ಕಿಸುತ್ತದೆ.

ಇದು ಸುಸ್ಥಿರ, ಸಮಗ್ರ ಮತ್ತು ಪರಿವರ್ತನಾಶೀಲ ಬೆಳವಣಿಗೆಯತ್ತ ಸಾಗುವ, ಇಲ್ಲಿಯವರೆಗಿನ ಪಯಣ ಮತ್ತು ಮುಂದಿನ ಹಾದಿ, ಎರಡನ್ನೂ ಸಂಭ್ರಮಿಸುತ್ತದೆ.

ಹನ್ನೊಂದು ಮಾರ್ಗಗಳು, ಒಂದೇ ದೃಷ್ಟಿ ಇಎಸ್‌ಟಿಐಸಿ-2025 ಸಮಾವೇಶವು, ಭಾರತದ ತಾಂತ್ರಿಕ ಮಹತ್ವಾಕಾಂಕ್ಷೆಗಳನ್ನು ಒಟ್ಟಾಗಿ ಸೆರೆ ಹಿಡಿಯುವ ಹನ್ನೊಂದು ವಿಷಯಾಧಾರಿತ ಮಾರ್ಗಗಳ ಸುತ್ತ ಕೇಂದ್ರೀಕೃತವಾಗಿರುತ್ತದೆ. ಇವುಗಳು, ರಕ್ಷಣೆ, ಬಾಹ್ಯಾಕಾಶ ಮತ್ತು ಉದ್ಯಮಕ್ಕೆ ಶಕ್ತಿ ತುಂಬಲು ಹೆಚ್ಚು ಬಲವಾದ, ಹಗುರವಾದ ಮತ್ತು ಸ್ಮಾರ್ಟ್ ವಸ್ತುಗಳನ್ನು ನಿರ್ಮಿಸುವುದಕ್ಕಾಗಿ ಸುಧಾರಿತ ವಸ್ತುಗಳು ಮತ್ತು ಉತ್ಪಾದನೆ; ಜೀವನವನ್ನು ಪರಿವರ್ತಿಸಲು ಮತ್ತು ಆಡಳಿತವನ್ನು ಹೆಚ್ಚು ಚುರುಕು ಹಾಗೂ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಕೃತಕ ಬುದ್ಧಿಮತ್ತೆ (ಎಐ); ಸುಸ್ಥಿರ ಜೈವಿಕ ಉತ್ಪನ್ನಗಳು ಮತ್ತು ವೃತ್ತಾಕಾರದ ಪರಿಹಾರಗಳೊಂದಿಗೆ ಹಸಿರು ಆರ್ಥಿಕತೆಯನ್ನು ದೊಡ್ಡಮಟ್ಟದಲ್ಲಿ ಬೆಳೆಸುತ್ತಿರುವ ಜೈವಿಕ-ಉತ್ಪಾದನೆ; ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ಸಾಗರ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುತ್ತಿರುವ ನೀಲಿ ಆರ್ಥಿಕತೆ; ೪-ಜಿಯಿಂದ ೫-ಜಿಗೆ ಮತ್ತು ಈಗ ೬-ಜಿಯತ್ತ ಸಂಪರ್ಕವನ್ನು ಹೆಚ್ಚಿಸುತ್ತಿರುವ, ಗ್ರಾಮೀಣ ಭಾರತ ವನ್ನು ಸಬಲೀಕರಣಗೊಳಿಸುತ್ತಿರುವ ಮತ್ತು ಜಾಗತಿಕ ಡಿಜಿಟಲ್ ರಾಯಭಾರತ್ವದಲ್ಲಿ ಮುನ್ನಡೆ ಸಾಧಿಸುತ್ತಿರುವ ಡಿಜಿಟಲ್ ಸಂವಹನ; ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನವನ್ನು ಸಿಲಿಕಾನ್-ಚಾಲಿತ ವಾಸ್ತವವನ್ನಾಗಿ ಪರಿವರ್ತಿಸುತ್ತಿರುವ ಇಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆ; ನಾವೀನ್ಯ, ನಿಖರತೆ ಮತ್ತು ಸುಸ್ಥಿರತೆಯ ಮೂಲಕ ಆಹಾರ ಭದ್ರತೆಯನ್ನು ಖಚಿತಪಡಿಸಬಲ್ಲ ಉದಯೋನ್ಮುಖ ಕೃಷಿ ತಂತ್ರಜ್ಞಾನಗಳು; ಜಗತ್ತಿಗೆ ಮಾದರಿಯಾಗಿ ನವೀಕರಿಸಬಹುದಾದ ಇಂಧನ ಮತ್ತು ಹಸಿರು ಜಲಜನಕದ ಬಳಕೆಯಲ್ಲಿ ಮುಂದಾಳತ್ವ ವಹಿಸುತ್ತಿರುವ ಇಂಧನ, ಪರಿಸರ ಮತ್ತು ಹವಾಮಾನ; ಆರೋಗ್ಯ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಕೈಗೆಟುಕುವ ದರದ ನಾವೀನ್ಯ ಗಳನ್ನು ತಲುಪಿಸುತ್ತಿರುವ ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನಗಳು; ಸುರಕ್ಷಿತ ಸಂವಹನ, ಸೆನ್ಸಿಂಗ್, ಕಂಪ್ಯೂಟಿಂಗ್ ಮತ್ತು ವಸ್ತು ವಿಜ್ಞಾನದಲ್ಲಿ ದೊಡ್ಡ ಮಟ್ಟದ ಪ್ರಗತಿಗಾಗಿ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ; ಮತ್ತು ತಲೆಮಾರುಗಳಿಗೆ ಸ್ಪೂರ್ತಿ ನೀಡುತ್ತಿರುವ ಹಾಗೂ ವೈಜ್ಞಾನಿಕ ಪರಿಧಿಯನ್ನು ವಿಸ್ತರಿಸುತ್ತಿರುವ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳನ್ನು ಒಳಗೊಂಡಿವೆ.

ಈ ಎಲ್ಲಾ ಟ್ರ್ಯಾಕ್‌ಗಳು ಒಟ್ಟಾಗಿ ಭಾರತದ ಸಮಗ್ರ ನಾವೀನ್ಯತಾ ನಕ್ಷೆಯನ್ನು ಪ್ರತಿಬಿಂಬಿಸುತ್ತವೆ. ಇದು ಆಳವಾದ ವಿಜ್ಞಾನ, ಉದ್ಯಮಶೀಲತೆ ಮತ್ತು ನೀತಿಗಳು ಒಗ್ಗೂಡುವ ಒಂದು ಸಂಗಮವಾಗಿದೆ. ವಿಕಸಿತ ಭಾರತ 2047ರ ಕಡೆಗೆ ಹಲವು ವಿಧಗಳಲ್ಲಿ, ಜ್ಞಾನ ಮತ್ತು ನಾವೀನ್ಯದ ನಾಯಕನಾಗಿ ಬೆಳೆಯುತ್ತಿರುವ ಭಾರತದ ಆತ್ಮವಿಶ್ವಾಸದ ರೂಪರೇಷೆಯನ್ನು ಇಎಸ್‌ಟಿಐಸಿ ಪ್ರತಿನಿಧಿಸುತ್ತದೆ.

ಇದು ಕಲ್ಪನಾಶಕ್ತಿಯನ್ನು ಪ್ರಚೋದಿಸಲು, ಯುವ ಮನಸ್ಸುಗಳಿಗೆ ಸ್ಪೂರ್ತಿ ನೀಡಲು ಮತ್ತು ಮುಂದಿನ ಶತಮಾನಕ್ಕಾಗಿ ನಾವೀನ್ಯವನ್ನು ಸೃಷ್ಟಿಸಲು ಇರುವ ಒಂದು ರಾಷ್ಟ್ರೀಯ ಅಭಿಯಾನ ವಾಗಿದೆ. ಚಿಂತನಾ ನಾಯಕರನ್ನು, ನೊಬೆಲ್ ಪ್ರಶಸ್ತಿ ವಿಜೇತರನ್ನು, ನೀತಿ ನಿರೂಪಕರನ್ನು ಮತ್ತು ಉದ್ಯಮದ ಪ್ರವರ್ತಕರನ್ನು ಒಟ್ಟುಗೂಡಿಸುವುದರ ಮೂಲಕ, ಇಎಸ್‌ಟಿಐಸಿ-2025, ಭಾರತವನ್ನು ವೈeನಿಕ ಮಹಾಶಕ್ತಿಯಾಗಿ ಮತ್ತು ನಾವೀನ್ಯ-ನೇತೃತ್ವದ ಅಭಿವೃದ್ಧಿಯ ಜಾಗತಿಕ ಕೇಂದ್ರವಾಗಿ ಪ್ರತಿಷ್ಠಾಪಿಸುತ್ತದೆ.

ಭಾರತವು 2047ರತ್ತ ಮುನ್ನುಗ್ಗುತ್ತಿರುವಾಗ, ಇಎಸ್ ಟಿಐಸಿ ಒಂದು ಸಂಕೇತವಾಗಿ ಮತ್ತು ವೇಗ ವರ್ಧಕವಾಗಿ ನಿಲ್ಲುತ್ತದೆ. ಇದು, ಭಾರತದ ವೈeನಿಕ ಸಾಧನೆಗಳು, ಅದರ ಅಭಿವೃದ್ಧಿಯ ಆಕಾಂಕ್ಷೆ ಗಳನ್ನು ಸಂಧಿಸುವ ಒಂದು ವೇದಿಕೆಯಾಗಿದ್ದು, ಪ್ರತಿಯೊಂದು ನಾವೀನ್ಯವೂ ಸ್ಥಿತಿ ಸ್ಥಾಪಕ, ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಳ್ಳುವ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ಖಚಿತಪಡಿಸುತ್ತದೆ.

(ಲೇಖಕರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು)