ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ಫುಟ್‌ʼಪಾತ್‌ʼಗೆ ಬಂದ ಜೀವನ ಈಗ ರೋಡಿಗೆ ಬಂದಿದೆ

ಸಿನಿಗನ್ನಡ ವಿನಯ್ ರಾಜ್‌ಕುಮಾರ್ ಅವರ ಅಭಿನಯದ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರ ಕಡೆಗೂ ಬಿಡುಗಡೆ ಆಗಿದೆ. ವಿನಯ್ ಅಭಿನಯಕ್ಕೆ, ದೇವನೂರು ಚಂದ್ರು ಅವರ ಆಶಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಒಟ್ಟಾರೆಯಾಗಿ ಸಿನಿಮಾ ಜನರಿಗೆ ಸಂಪೂರ್ಣ ಇಷ್ಟ ಆಗುವಲ್ಲಿ ಎಡವಿದೆ ಅನ್ನೋ ಟಾಕ್ ಎಲ್ಲ ಕಡೆ ಕೇಳಿಬರುತ್ತಿದೆ. ಅದೇನೇ ಇರಲಿ ವಿನಯ್ ಅವರ ಪಾತ್ರಗಳ ಆಯ್ಕೆ ಈ ಬಾರಿ ಕೂಡಾ ಹೆಸರು ಮಾಡುತ್ತಿದೆ. ಆದರೆ ಈ ಚಿತ್ರಕ್ಕೆ ಅದೇನು ಗ್ರಹಣ ಹಿಡಿದಿದೆಯೋ ಗೊತ್ತಿಲ್ಲ. ಆರಂಭದಿಂದಲೂ ಇದಕ್ಕೆ ಶನಿಕಾಟ ತಪ್ಪಿಲ್ಲ

ಫುಟ್‌ʼಪಾತ್‌ʼಗೆ ಬಂದ ಜೀವನ ಈಗ ರೋಡಿಗೆ ಬಂದಿದೆ

-

ಹರಿ ಪರಾಕ್‌
ಹರಿ ಪರಾಕ್‌ Jul 5, 2026 6:00 AM

ತುಂಟರಗಾಳಿ

ಸಿನಿಗನ್ನಡ

ಸಿನಿಗನ್ನಡ ವಿನಯ್ ರಾಜ್‌ಕುಮಾರ್ ಅವರ ಅಭಿನಯದ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರ ಕಡೆಗೂ ಬಿಡುಗಡೆ ಆಗಿದೆ. ವಿನಯ್ ಅಭಿನಯಕ್ಕೆ, ದೇವನೂರು ಚಂದ್ರು ಅವರ ಆಶಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಒಟ್ಟಾರೆಯಾಗಿ ಸಿನಿಮಾ ಜನರಿಗೆ ಸಂಪೂರ್ಣ ಇಷ್ಟ ಆಗುವಲ್ಲಿ ಎಡವಿದೆ ಅನ್ನೋ ಟಾಕ್ ಎಲ್ಲ ಕಡೆ ಕೇಳಿಬರುತ್ತಿದೆ. ಅದೇನೇ ಇರಲಿ ವಿನಯ್ ಅವರ ಪಾತ್ರಗಳ ಆಯ್ಕೆ ಈ ಬಾರಿ ಕೂಡಾ ಹೆಸರು ಮಾಡುತ್ತಿದೆ. ಆದರೆ ಈ ಚಿತ್ರಕ್ಕೆ ಅದೇನು ಗ್ರಹಣ ಹಿಡಿದಿದೆಯೋ ಗೊತ್ತಿಲ್ಲ. ಆರಂಭದಿಂದಲೂ ಇದಕ್ಕೆ ಶನಿಕಾಟ ತಪ್ಪಿಲ್ಲ. ಮೊದಲು ನಿರ್ಮಾಪಕರು ತೀರಿಕೊಂಡು ಅವರ ಮನೆಯವರು ಸಿನಿಮಾ ಕೊಡಲ್ಲ ಅಂತ ರಚ್ಚೆ ಹಿಡಿದು ನಂತರ ಅದು ಹೇಗೋ ಬಗೆಹರಿಯಿತು. ಚಿತ್ರತಂಡ ಮತ್ತೆ ಅನೇಕ ಭಾಗಗಳನ್ನು ರೀ ಶೂಟ್ ಮಾಡಿ ಸಿನಿಮಾ ಬಿಡುಗಡೆಯ ಹಂತಕ್ಕೆ ತರಲು ಹರಸಾಹಸ ಪಟ್ಟರು. ಮೊನ್ನೆ ಈ ಚಿತ್ರದ ಬಿಡುಗಡೆಯ ಖುಷಿಯಲ್ಲಿ ಚಿತ್ರದ ಮೊದಲ ಶೋಗೆ ಪತ್ರಕರ್ತರನ್ನು, ಆತ್ಮೀಯರನ್ನು ಕರೆದಿತ್ತು ಚಿತ್ರತಂಡ. ಆದರೆ ಮಾಲ್‌ನಲ್ಲಿ ಚಿತ್ರ ಸ್ಯಾಟಲೈಟ್‌ನಿಂದ ರೆಂಡರಿಂಗ್ ಆಗಲು ತಡ ಆಗಿ, ಸಮಸ್ಯೆ ಆಗಿ ಕೊನೆಗೆ ಚಿತ್ರ ಪ್ರದರ್ಶನವೇ ಆಗಲ್ಲ ಅನ್ನೋ ಮಟ್ಟಕ್ಕೆ ಹೋಗಿ ಚಿತ್ರದ ಮೊದಲ ಶೋನೇ ಕ್ಯಾನ್ಸಲ್ ಆಯ್ತು. ಪಾಪ, ಆರಂಭದಿಂದ ಹಿಡಿದ ಗ್ರಹಣ ಈ ಚಿತ್ರಕ್ಕೆ ಇನ್ನೂ ಬಿಟ್ಟಿಲ್ಲ ಅನ್ನೋದು ಈ ಮೂಲಕ ಸಾಬೀತಾಯ್ತು. ಅದರ ಜೊತೆ ಚಿತ್ರ ಪ್ರೇಕ್ಷಕರಿಗೂ ಅಷ್ಟಾಗಿ ರುಚಿಸಿಲ್ಲ ಅನ್ನೋ ಮಾತು ಕೇಳಿ ಬರೋಕೆ ಶುರು ಮಾಡಿದ ಮೇಲೆ ಗ್ರಾಮಾಯಣ ಚಿತ್ರತಂಡಕ್ಕೆ ಮತ್ತಷ್ಟು ನಿರಾಸೆ ಮೂಡಿದೆ. ಒಟ್ಟಿನಲ್ಲಿ ಒಂದು ಸದಭಿರುಚಿಯ ಸಿನಿಮಾ ಮಾಡಿದವರಿಗೆ ಮತ್ತೆ ಹಿನ್ನಡೆ ಆಗಿರೋದು ಮಾತ್ರ ನಿಜ.

ಇದನ್ನೂ ಓದಿ: Hari Paraak Column: ದೇವಸ್ಥಾನಗಳಲ್ಲಿ ಪಾದುಕೆ ಕಳ್ಳತನ ಆಗೋದು ದೊಡ್ಡ ವಿಷ್ಯ ಏನಲ್ಲ

ಲೂಸ್‌ ಟಾಕ್-‌ ಫುಟ್‌ʼಪಾತ್‌ ವ್ಯಾಪಾರಿ

ಏನ್ ಸಾರ್ ಕಾಂಗ್ರೆಸ್ ಸರ್ಕಾರ ನಿಮ್ಮನ್ನೆಲ್ಲ ಖಾಲಿ ಮಾಡಿಸ್ತಾ ಇದೆಯಲ್ಲ?

- ಏನ್ ಮಾಡೋದು?, ಫುಟ್‌ಪಾತ್‌ಗೆ ಬಂದಿತ್ತು ಜೀವನ ಈಗ ಅಲ್ಲೂ ಬದುಕೋಕೆ ಬಿಡ್ತಾ ಇಲ್ಲ

ಮತ್ತೆ, ಮುಂದೇನು?

– ಇನ್ನೇನಿರುತ್ತೆ?, ಫುಟ್‌ಪಾತ್‌ಗೆ ಬಂದ ಜೀವನ ರೋಡಿಗೆ ಬಂದಿದೆ ಅಷ್ಟೇ

ಆದ್ರೂ ಜನ ಓಡಾಡೋ ಜಾಗದಲ್ಲಿ ನೀವು ಅಂಗಡಿ ಇಡೋದು ಸರಿನಾ?

- ಅಯ್ಯೋ, ಜನ ಓಡಾಡೋ ಜಾಗದಲ್ಲಿ ವ್ಯಾಪಾರ ಆಗದೆ ಇನ್ನೆಲ್ಲಿ ಆಗುತ್ತೆ ಸರ್. ಅದಕ್ಕೇ ತಾನೇ ನಾವು ಅಂಗಡಿ ಇಟ್ಟಿದ್ದು. ಜನ ಮಾತ್ರ ಫುಟ್‌ಪಾತ್‌ನಲ್ಲಿ ನಡೀಬೇಕು. ನಮ್ಮ ಜೀವನ ನಡೀಬಾರ್ದಾ?

ಅದೂ ಸರಿನೇ, ಆದ್ರೆ, ಈಗ ಏನ್ ಮಾಡ್ತೀರಾ?

- ಇನ್ನೇನ್ ಮಾಡೋದು?, ಕೃಷ್ಣ ಬೈರೇಗೌಡ್ರಿಗೆ ಬೈಕೊಂಡು ಓಡಾಡ್‌ಬೇಕು ಅಷ್ಟೇ, ಇದೆ ಫುಟ್‌ಪಾತ್ ಮೇಲೆ

ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಆಗುತ್ತೆ ಅಂತೀರಾ?

- ಆಗದೇ ಇನ್ನೇನು? ಅವರು ಓಟ್ ಕೇಳೋಕೆ ಬರುವಾಗ ಇಲ್ಲೇ ಸುಲಭವಾಗಿ ಫುಟ್‌ಪಾತ್ ಮೇಲೆ ಸಿಕ್ತಾ ಇದ್ವಿ. ಈಗ ಮುಂದಿನ ಸಲ ಓಟ್ ಕೇಳೋಕೆ ಬಂದಾಗ ಅವರು ನಮ್ಮನೆವರೆಗೂ ಹುಡುಕ್ಕೊಂಡ್ ಬರ್ಬೇಕು ಅಷ್ಟೇ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಆಫೀಸಿನಲ್ಲಿ ಕಾಣಿಸ್ತಾ ಇರಲಿಲ್ಲ, ಅವನನ್ನು ಹುಡುಕಿಕೊಂಡು ಬಂದ ಬಾಸ್ ‘ಖೇಮು ಇನ್ನೂ ಬಂದಿಲ್ವಾ? ಅಂತ ಅ ಇದ್ದ ಸೋಮುವನ್ನು ಕೇಳಿದರು. ಅದಕ್ಕೆ ಬಂದಿದ್ದಾರೆ ಸರ್, ಆದ್ರೆ ಇಲ್ಲೇ ಎಲ್ಲೋ ಹೊರಗೆ ಹೋಗಿದ್ದಾರೆ ಅಂತ ಉತ್ತರ ಬಂತು. ಯಾವಾಗ್ಲೂ ಆಫೀಸಿನಲ್ಲಿ ಇರೋ ದಿಲ್ಲ ಇವನು, ಬರೀ ಹೊರಗೆ ಹೋಗ್ತಾನೆ, ಹೇಳೋರಿಲ್ಲ ಕೇಳೋರಿಲ್ಲ ಇವನಿಗೆ. ಕ್ಯಾಂಟೀನ್‌ನಲ್ಲಿ ಬಿದ್ದಿರಬೇಕು ಅನ್ಸುತ್ತೆ. ಆಫೀಸ್‌ನಲ್ಲಿ ಮಾತ್ರ ದುರ್ಬೀನು ಹಾಕ್ಕೊಂಡು ನೋಡಿದ್ರೂ ಕಾಣೋಲ್ಲ. ಅವ್ನು ಬಂದ ತಕ್ಷಣ ನನ್ನ ಕ್ಯಾಬಿನ್‌ಗೆ ಬರೋಕೆ ಹೇಳು ಅಂತ ಗರಂ ಆಗಿ ಹೇಳಿ ಬಾಸ್ ವಾಪಸ್ ಹೋದರು. ಸ್ವಲ್ಪ ಹೊತ್ತಾದ ಮೇಲೆ ಖೇಮು ಆಫೀಸಿಗೆ ವಾಪಸ್ ಬಂದ. ಸ್ಟೈಲ್ ಹೇರ್ ಕಟಿಂಗ್ ಮಾಡಿಸಿಕೊಂಡು ಟ್ರಿಮ್ ಆಗಿ ಬಂದಿದ್ದ. ಅವನನ್ನು ನೋಡಿದ ಸೋಮು ಹೇಳಿದ ‘ಬಾರಪ್ಪಾ, ನಿನ್ ಹುಡುಕ್ಕೊಂಡ್ ಬಾಸ್ ಬಂದಿದ್ರು. ಅವರ ಕ್ಯಾಬಿನ್‌ಗೆ ಹೋಗಬೇಕಂತೆ’ ಅಂತ ವರದಿ ಒಪ್ಪಿಸಿದ. ಸರಿ, ಹೆಂಗಿದ್ರೂ ‘ಕಟಿಂಗ್ ಮಾಡಿಸಿದ್ದುದರಿಂದ’ ಜಾಸ್ತಿ ‘ತಲೆ ಕೆಡಿಸಿಕೊಳ್ಳದೆ’ ಬಾಸ್ ಕ್ಯಾಬಿನ್‌ಗೆ ಹೋದ ಖೇಮು. ಇವನನ್ನು ನೋಡಿದ ಬಾಸ್ ಸಿಟ್ಟಿನ ಮಾತು ಶುರು ಮಾಡಿದ್ರು. ‘ಎಲ್ಲಿಗ್ರೀ ಹೋಗಿದ್ರಿ ಇಷ್ಟೊತ್ತು?’ ‘ಕಟಿಂಗ್ ಶಾಪ್‌ಗೆ ಹೋಗಿದ್ದೆ ಸರ್, ಹೇರ್‌ಕಟ್ ಮಾಡ್ಸೋಕೆ ‘ಏನು, ಆಫೀಸ್ ಅವರ್ಸಲ್ಲಿ ಕಟಿಂಗ್ ಮಾಡ್ಸೋಕೆ ಹೋಗಿದ್ರಾ?’ ಆಫೀಸ್‌ನಲ್ಲಿ ಇzಗ ಪರ್ಸನಲ್ ಕೆಲ್ಸಕ್ಕೆ ಹೋಗ್ಬಾರದು ಅಂತ ಗೊತ್ತಿಲ್ವಾ?’ ‘ಯಾಕೆ, ಕೂದಲು ಬೆಳೆಯೋದು ಆಫೀಸ್ ಅವರ್ಸ್‌ನ ಅಲ್ವಾ?’ ‘ಅದ್ಯಾಕೆ? ಬೆಳಗ್ಗೆ ಆಫೀಸ್‌ಗೆ ಬರೋಕೆ ಮುಂಚೆ, ಆಮೇಲೆ ರಾತ್ರಿ ಮನೆಗೋದ್ಮೇಲೆ ಮನೆಯಲ್ಲೂ ಕೂದಲು ಬೆಳೆಯುತ್ತಲ್ವಾ?’ ‘ಹೌದು, ನಿಜ. ಅದಕ್ಕೇ ನಾನೇನು ಪೂರ್ತಿ ತಲೆ ಬೋಳಿಸಿ ಕೊಂಡು ಬಂದಿದೀನಾ? ಆಫೀಸ್ ಅವರ್ಸ್‌ನಲ್ಲಿ ಎಷ್ಟು ಬೆಳೆದಿತ್ತೋ ಅಷ್ಟನ್ನ ಮಾತ್ರ ಕಟ್ ಮಾಡಿಸಿಕೊಂಡು ಬಂದಿದೀನಿ, ಏನಿವಾಗ?’ ನೀತಿ: ಲಾಜಿಕ್ ಅನ್ನೋದು ತುಂಬಾ ಡೆಲಿಕೇಟ್ ವಿಷಯ

ಲೈನ್‌ ಮ್ಯಾನ್

ಒಬ್ಬ ನಟ ಪೀಕ್‌ನಲ್ಲಿದ್ದಾಗ ಯಾರಾದರೂ ಅವರ ಕಾಂಟ್ಯಾಕ್ಟ್ ನಂಬರ್ ತಗೊಳ್ಳೋಕೆ ‘ನಿಮ್ಮ ನಂಬರ್ ಹೇಳಿ’ ಅಂದ್ರೆ, ತಮ್ಮ ಯಶಸ್ಸಿನ ಗುಂಗಿನಲ್ಲಿ ಅವರು ಏನು ಹೇಳ್ತಾರೆ? - ಒನ್ ತನ್ನ ಗೆಳೆಯ ಗೆಳತಿಯರನ್ನು ನೋಡಿ ತಾವೂ ಲಿವಿಂಗ್ ಟುಗೆದರ್ ಜೀವನ ಪದ್ಧತಿ ಆಯ್ದುಕೊಳ್ಳುವವರದ್ದು - ‘ಸಹವಾಸ’ ದೋಷ ‘ಯಾವಾಗ್ಲೂ -ಸ್‌ಬುಕ್, ವಾಟ್ಸಾಪ್‌ನಲ್ಲಿರೋ ಹುಡುಗಿ ಕೇಳಿದಳು ನಿನಗೆ ಯಾವ ಸ್ಟಿಕ್ಟರ್ ಇಷ್ಟ?’ - ಹುಡುಗ ಹೇಳಿದ ‘ಹುಡುಗೀರು ಹಣೆಗೆ ಇಟ್ಟುಕೊಳ್ಳೋದು’ ರಸ್ತೆಯಲ್ಲಿ ಕೆಲವು ಕಡೆ ಇರೋ ಓಪನ್ ಸಿಗ್ನಲ್‌ಗಳಲ್ಲಿ ಎಲ್ಲರೂ ಪಾಲಿಸುವ ನೀತಿ - ಗಾಡಿ ಬರದೇ ಇದ್ದಾಗ ತೂರಿಕೋ ಇಬ್ಬರು 420ಗಳು ಜಗಳ ಆಡ್ತಾ ಇದ್ದರೆ ಅದು - ಕಳ್ಳ ಕಳ್ಳ ಆಟ ಓದದೇ ಇದ್ದರೂ ಶೋ ಆ- ಮಾಡೋದಕ್ಕಾಗಿ ಪುಸ್ತಕಗಳನ್ನು ತಂದು ಶೋಕೇಸ್‌ನಲ್ಲಿ ಫ್ರೇಮ್ ಹಾಕಿ ಇಡೋನು - ‘ಪುಸ್ತಕ ಪ್ರೇಮಿ’ ಕಟಿಂಗ್ ಶಾಪ್‌ನಲ್ಲಿ ಕೆಳಗೆ ಬಿದ್ದಿರುವ ಕತ್ತರಿಸಿದ ಕೂದಲುಗಳ ರಾಶಿಯನ್ನು ಏನೆನ್ನಬಹುದು? - ಕೂದಲ ಸಂಗಮ ಡಿಕೆಶಿ ಅವರ ಮಾತು ಬೋರಿಂಗ್ ಆಗಿದ್ದರೆ - ತೂಕ‘ಡಿಕೆ’ ಅವರ ಮಾತು ಬೈಗುಳಗಳಿಂದ ತುಂಬಿದ್ದರೆ - ಥೂ‘ಕಡಿಕೆ’