Srinivas Murthy N Sundrahalli Column: ಬದುಕಿಗೆ ಬೇಕಿರುವುದನ್ನು ಕಲಿಸುವವನೇ ನಿಜವಾದ ಶಿಕ್ಷಕ
‘ಒಬ್ಬ ಉತ್ತಮ ಶಿಕ್ಷಕ ಕೇವಲ ಪಾಠವನ್ನು ಕಲಿಸುವುದಿಲ್ಲ. ಬದುಕನ್ನು ಕಲಿಸುತ್ತಾನೆ’ ಎಂಬ ಮಾತಿದೆ. ಕಪ್ಪು ಹಲಗೆಯ ಮೇಲೆ ಬರೆಯುವವರೆಲ್ಲಾ ಶಿಕ್ಷಕರಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಹೊರತೆಗೆಯುತ್ತಲೇ ಬದುಕಲು ಬೇಕಿರುವುದರ ಜೊತೆಗೆ ಬದುಕಿಗೆ ಬೇಕಿರುವುದುನ್ನು ಕಲಿಸುವವರು ಶಿಕ್ಷಕರೆನಿಸಿಕೊಳ್ಳುತ್ತಾರೆ. ಇಂದು ಬಿಲ್ ಮತ್ತು ಬೆಲ್‌ಗಾಗಿ ಪಾಠ ಮಾಡುವ ಶಿಕ್ಷಕರ ನಡುವೆ, ಇಲ್ಲೊಬ್ಬ ಶಿಕ್ಷಕರು ತನ್ನಿಡೀ ಬದುಕನ್ನೇ ತನ್ನ ವಿದ್ಯಾರ್ಥಿಗಾಗಿ ಸವೆಸುತ್ತಾರೆ.
-
ಗುರುನಮನ
ಶ್ರೀನಿವಾಸ ಮೂರ್ತಿ ಎನ್., ಸುಂಡ್ರಹಳ್ಳಿ
ಹೆಲೆನ್ ಕೆಲ್ಲರ್ ಅಮೆರಿಕದಲ್ಲಿ ಆಗಿ ಹೋದ ಲೇಖಕಿ, ದಿವ್ಯಾಂಗರ ಹಕ್ಕುಗಳ ಹೋರಾಟಗಾರ್ತಿ, ಭಾಷಣಗಾರ್ತಿ. ಆದರೆ ಬಾಲ್ಯದಲ್ಲೇ ಕಣ್ಣು ಕಿವಿಗಳೆರಡನ್ನೂ ಕಳೆದುಕೊಂಡಿದ್ದ ಆಕೆಗೆ ಶಿಕ್ಷಣ ಸವಾಲಾಗಿತ್ತು. ಅಂಥ ಹೊತ್ತಿನಲ್ಲಿ ಬಂದ ಶಿಕ್ಷಕಿ ಆನೆ ಸುಲ್ಲಿವಾನ್. ಕಣ್ಣಿಲ್ಲದಿದ್ದರೂ ಒಳಗಣ್ಣು ಗಳಿಂದ ಜಗತ್ತನ್ನು ನೋಡುವಂತೆ ಮಾಡುವ ಮೂಲಕ ಶಿಕ್ಷಕಿಯಾಗಿ, ಎರಡನೆಯ ತಾಯಿಯಾಗಿ, ಜೀವಮಾನದ ಗೆಳತಿಯಾಗಿ ಉಳಿದಳು
‘ಒಬ್ಬ ಉತ್ತಮ ಶಿಕ್ಷಕ ಕೇವಲ ಪಾಠವನ್ನು ಕಲಿಸುವುದಿಲ್ಲ. ಬದುಕನ್ನು ಕಲಿಸುತ್ತಾನೆ’ ಎಂಬ ಮಾತಿದೆ. ಕಪ್ಪು ಹಲಗೆಯ ಮೇಲೆ ಬರೆಯುವವರೆಲ್ಲಾ ಶಿಕ್ಷಕರಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿ ಯೊಳಗಿನ ಪ್ರತಿಭೆಯನ್ನು ಹೊರತೆಗೆಯುತ್ತಲೇ ಬದುಕಲು ಬೇಕಿರುವುದರ ಜೊತೆಗೆ ಬದುಕಿಗೆ ಬೇಕಿರುವುದುನ್ನು ಕಲಿಸುವವರು ಶಿಕ್ಷಕರೆನಿಸಿಕೊಳ್ಳುತ್ತಾರೆ. ಇಂದು ಬಿಲ್ ಮತ್ತು ಬೆಲ್‌ಗಾಗಿ ಪಾಠ ಮಾಡುವ ಶಿಕ್ಷಕರ ನಡುವೆ, ಇಲ್ಲೊಬ್ಬ ಶಿಕ್ಷಕರು ತನ್ನಿಡೀ ಬದುಕನ್ನೇ ತನ್ನ ವಿದ್ಯಾರ್ಥಿಗಾಗಿ ಸವೆಸುತ್ತಾರೆ.
ಅದು ಮಾರ್ಚ್ 3 1887. ಕಣ್ಣು ಕಿವಿ ಎರಡೂ ಇಲ್ಲದ ಏಳು ವರ್ಷದ ಬಾಲಕಿಗೆ ನಾನು ಅಕ್ಷರ ಕಲಿಸಿಯೇ ತೀರುತ್ತೇನೆಂಬ ಹಠಕ್ಕೆ ಬಿದ್ದ ಆ ಶಿಕ್ಷಕಿ ಬಾಲಕಿಯ ಮನೆಗೆ ಬರುತ್ತಾಳೆ. ಬಾಲಕಿಯೋ ತುಂಬಾ ಹಠಮಾರಿ ಮತ್ತು ಮುಂಗೋಪಿ. ಯಾವುದನ್ನೂ, ಯಾರ ಮಾತನ್ನೂ ಅಷ್ಟು ಸುಲಭವಾಗಿ ಕಲಿಯುವ ಮತ್ತು ಕೇಳುವ ಮನಸ್ಥಿತಿ ಅವಳದ್ದಾಗಿರಲಿಲ್ಲ. ಹಾಗಾಗಿ ಹೆತ್ತವರಿಗೆ ಈ ಶಿಕ್ಷಕಿ ಕಲಿಸುವು ದರ ಬಗ್ಗೆ ಕೊಂಚವೂ ವಿಶ್ವಾಸವಿರ ಲಿಲ್ಲ. ಏಕೆಂದರೆ ಇದೇ ರೀತಿ ಬಂದ ಎಷ್ಟೋ ಶಿಕ್ಷಕರು ವಿಫಲ ಯತ್ನದಲ್ಲಿ ಹಿಂದಿರುಗಿದ್ದರು.
ಈ ಸವಾಲನ್ನು ಸ್ವೀಕರಿಸಿದ ಆ ಶಿಕ್ಷಕಿ ಬೊಂಬೆಯಂತೆಯೇ ಮುದ್ದಾಗಿದ್ದ ಆ ಬಾಲಕಿಗೆ ಬೊಂಬೆ ಯೊಂದನ್ನು ಕೈಗಿತ್ತು ಅದರಿಂದಲೇ ಪಾಠ ಆರಂಭಿಸಿದಳು. ಆದರೆ ವಿದ್ಯೆಯೆಂದರೆ ಅವಳಿಗೆ ಒಗ್ಗದ ಕಷಾಯ. ಹೆತ್ತವರೂ ಕೂಡ ಕೊಂಚ ಕರುಣೆಯಿಟ್ಟು ಮುದ್ದಿನಿಂದಲೇ ಸಾಕಿದ್ದರಲ್ಲ ಅದರ ಸಲುಗೆ ಬೇರೆ ಇತ್ತು. ಆದರೆ ಅವಳಿಗಿಂತಲೂ ಹಠಮಾರಿಯೆಂಬಂತಿದ್ದ ಈ ಶಿಕ್ಷಕಿ ಏನಾದರಾಗಲಿ ಕಲಿಸಿಯೇ ತೀರುತ್ತೇನೆಂಬ ಜಿದ್ದಿಗೆ ಬಿದ್ದಿದ್ದಳು.
ಪಾಠ ಕಲಿಸುವ ವೇಳೆ ಆ ಶಿಕ್ಷಕಿ ಬಾಲಕಿಯಿಂದ ಮುಖಕ್ಕೆ ಉಗಿಸಿಕೊಂಡಳು. ನೀರಿನ ಜಗ್‌ನಿಂದ ಹೊಡೆತ ತಿಂದು ಒಂದು ಹಲ್ಲನ್ನೂ ಕೂಡ ಕಳೆದುಕೊಂಡಳು. ಹಾಗೆಂದು ತನ್ನ ಜವಾಬ್ದಾರಿಯೆಡೆಗೆ ಆಕೆ ಬೆನ್ನು ತೋರಿಸಲಿಲ್ಲ. ತನಗಾದ ನೋವು ಅವಮಾನಕ್ಕಿಂತ ತನ್ನ ವಿದ್ಯಾರ್ಥಿನಿಗೆ ವಿದ್ಯೆ ಕಲಿಸುವುದಷ್ಟೇ ಆಕೆಯ ಗಮ್ಯವಾಗಿತ್ತು. ಕೊನೆಗೆ ಆ ಗಮ್ಯವನ್ನು ತಲುಪಿದಳೂ ಕೂಡ. ಜ್ವರದ ರೂಪದಲ್ಲಿ ಬಂದಿತ್ತು ದುರ್ವಿಧಿ ಪುಟ್ಟ ಬಾಲಕಿ ಜಗತ್ತನ್ನು ಪಿಳಿ ಪಿಳಿ ಕಣ್ಣಿಟ್ಟು ನೋಡಲಾರಂಭಿಸಿ ಇನ್ನೂ 18 ತಿಂಗಳುಗಳಷ್ಟೇ ಕಳೆದಿದ್ದವು. ಆ ಸಂದರ್ಭಕ್ಕೆ ನೀರನ್ನು ಮಾತ್ರ ವಾ... ಎಂದು ಗುರ್ತಿಸಿ ಖುಷಿ ಪಡುತ್ತಿದ್ದಳಷ್ಟೇ. ಆ ಹೊರತಾಗಿ ಏನಂದರೇನನ್ನೂ ತಿಳಿಯದ ಮುಗ್ದತೆ. ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತು.
ಆಸ್ಪತ್ರೆಗೆ ದಾಖಲಿಸಿದರು. ಎಲ್ಲಾ ರೀತಿಯ ಪರೀಕ್ಷೆ ನಡೆಸಿದ ವೈದ್ಯರು ಮೆದುಳು ಜ್ವರ ಎಂದರು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೆಂಜಿಟಿಸ್ ಎನ್ನುವುದೂ ಉಂಟು. ಚಿಕಿತ್ಸೆ ಪಡೆದು ಜ್ವರ ವಾಸಿ ಮಾಡಿಕೊಂಡು ಮನೆಗೆ ಬಂದ ಕೆಲವೇ ದಿನಗಳಲ್ಲಿ ಹೆತ್ತಮ್ಮನಿಗೆ ತನ್ನ ಕರುಳ ಕುಡಿಯಲ್ಲಿ ಏನೋ ಬದಲಾವಣೆ ಕಾಣಿಸತೊಡಗಿತು. ಜ್ವರ ಬರುವ ಮುಂಚೆ ಇದ್ದ ಲವಲವಿಕೆಯಾಗಲೀ, ತಂದೆ ತಾಯಿ ಆಡಿಸುತ್ತಿದ್ದ ಆಟವನ್ನು ಆನಂದಿಸುತ್ತಿದ್ದ ಆನಂದವಾಗಲೀ, ಕಾಲ್ಗೆಜ್ಜೆಗಳ ಸಪ್ಪಳವನ್ನು ಆಲಿಸಿ ಕುಣಿಯುತ್ತಿದ್ದ ಕುಣಿತವಾಗಲೀ ಈಗ ಇಲ್ಲವಾಗಿತ್ತು.
ಊಟಕ್ಕೆ ಕರೆದಾಗಲಾಗಲೀ. ಮುಖದ ಮುಂದೆ ಕೈ ಆಡಿಸಿದಾಗ ಮಗು ಯಾವುದಕ್ಕೂ ಸ್ಪಂದಿಸು ತ್ತಿರಲಿಲ್ಲ. ಬೊಂಬೆಯಂತೆ ಶೂನ್ಯವನ್ನು ದಿಟ್ಟಿಸುತ್ತಾ ಹಾಗೆಯೇ ಕೂತಿರುತ್ತಿತ್ತು. ತಕ್ಷಣ ವೈದ್ಯರ ಬಳಿಗೆ ಓಡಿದರು. ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅರಿವಾಯಿತು. ಹಸುಗೂಸಿಗೆ ಬಂದಿದ್ದ ಮೆದುಳು ಜ್ವರ ಹೊರ ಹೋಗುವಾಗ ಶಾಶ್ವತ ಕುರುಡತ್ವ ಮತ್ತು ಕಿವುಡತ್ವ ಎರಡನ್ನೂ ಕೊಟ್ಟು ಹೋಗಿದೆ ಯೆಂದು!
ಇಂತಹ ಭೀಕರ ಉಡುಗೊರೆಯನ್ನು ಪಡೆದ ಆ ಕಂದಮ್ಮನ ಹೆಸರೇ ಹೆಲನ್ ಆಡಮ್ಸ್ ಕೆಲ್ಲರ್. ಈಕೆ ಜನಿಸಿದ್ದು 1880 ಜೂನ್ 27ರಂದು ಅಲಬಾಮ ಬಳಿಯ ಟುಸ್ಕಂಬಿಯಾ ಎಂಬಲ್ಲಿ. ತಂದೆ ಅಥರ್. ಹೆಚ್ ಕೆಲ್ಲರ್. ತಾಯಿ ಕೇಟ್ ಆಡಮ್ಸ್ . ಸಮರ್ಥ ಶಿಕ್ಷಕಿ ಮನೆಗೇ ಬಂದಳು ಆರು ವರ್ಷಗಳಾಗು ವವವರೆಗೂ ಆಕೆಗೆ ಒಂದಿಷ್ಟು ಕೈಸನ್ನೆಗಳು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಹಾಗೆಂದು ಆಕೆಯ ಹೆತ್ತವರು ತಲೆ ಮೇಲೆ ಕೈಹೊತ್ತು ಕೂರಲಿಲ್ಲ. ಮಗಳಿಗಾಗಿ ಎಂಥದೇ ತ್ಯಾಗಕ್ಕೂ ಸಿದ್ದರಾಗಿದ್ದರು. ಆಕೆ ತನಗಿರುವ ಕಿವುಡುತನ ಮತ್ತು ಕುರುಡುತನವನ್ನು ಮೆಟ್ಟಿ ನಿಲ್ಲಲು ಏನೇನೆಲ್ಲಾ ಮಾಡಬಹು ದೆಂದು ಯೋಚಿಸಿದರು.
ಅಂತಹ ವಿಶೇಷ ಮಕ್ಕಳಿಗೆಂದೇ ಇರುವ, ಅವರಿಗೆಂದೇ ಶಿಕ್ಷಣ ನೀಡುವ ಸಂಸ್ಧೆಗಳಿಗೆ ಭೇಟಿ ಕೊಟ್ಟರು. ಅಂತಹ ವಿಶಿಷ್ಟ ಮಕ್ಕಳಿಗೆ ಬೋಧಿಸುವ ಶಿಕ್ಷಕರನ್ನು ಮಾತಾಡಿಸಿದರು, ಉಪಯೋಗ ವಾಗಲಿಲ್ಲ. ಈಕೆಗೆ ಕಲಿಸಲೆಂದು ಬಂದ ಶಿಕ್ಷಕರೆಲ್ಲ ಈಕೆಯ ಹಠ ಮತ್ತು ತುಂಟಾಟ ಸಹಿಸಿಕೊಳ್ಳ ಲಾಗದೆ ಮೂರು ದಿನಗಳಿಗೆಲ್ಲ ಪೇರಿ ಕೀಳುತ್ತಿದ್ದರು. ಕೊನೆಗೆ ಟೆಲಿಫೋನ್ ಕಂಡು ಹಿಡಿದಿದ್ದ ಮತ್ತು ಆ ಸಂದರ್ಭ ಕಿವುಡ ಮಕ್ಕಳಿಗಾಗಿ ಶ್ರಮಿಸುತ್ತಿದ್ದ ಅಲೆಗ್ಸಾಂಡರ್ ಗ್ರಹಾಂಬೆಲ್ ರನ್ನು ಭೇಟಿ ಮಾಡಿದರು.
ಬೆಲ್‌ರ ಸಲಹೆ ಮೇರೆಗೆ ಬೋಸ್ಟನ್ ನಲ್ಲಿರುವ ಪರ್ಕಿನ್‌ಸನ್ ಇನ್‌ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಎಂಬ ಸಂಸ್ಧೆಯಲ್ಲಿದ್ದ ಮೈಖೆಲ್ ಅನಾಗನೊಸ್‌ರನ್ನು ಸಂಪರ್ಕಿಸಿದರು. ಆ ಬಾಲಕಿಯ ಹಿನ್ನೆಲೆ ಮತ್ತು ಪರಿಸ್ಧಿತಿಯನ್ನು ಆವಲೋಕಿಸಿದ ಮೈಖೆಲ್ ಆಕೆಗೆ ಶಿಕ್ಷಣ ನೀಡಲೆಂದು ಒಬ್ಬ ಶಿಕ್ಷಕಿಯನ್ನು ಕೆಲ್ಲರ್‌ರ ಮನೆಗೆ ಕಳುಹಿಸಿಕೊಟ್ಟರು. ಆ ಶಿಕ್ಷಕಿಯೇ ಅನ್ನೆ ಸುಲ್ಲಿವಾನ. ಹೆಲೆನ್ʼಳ ಅಪ್ಪ ಅಮ್ಮನಿಗೆ ಆನ್ನೆಯ ಬಗ್ಗೆಯೂ ನಂಬಿಕೆಯಿರಲಿಲ್ಲ!
ಏಕೆಂದರೆ, ಈ ಹಿಂದೆ ಎಷ್ಟೋ ಆತ್ಮ ವಿಶ್ವಾಸದಿಂದ ಬಂದಿದ್ದ ಶಿಕ್ಷಕರೆಲ್ಲಾ ಅವಳನ್ನು ಸಂಭಾಳಿಸ ಲಾಗದೆ ಹಿಂದಿರುಗಿದ್ದರು. ಈಕೆಯೂ ಕೂಡ ಅವರಂತೆಯೇ ಬಂದ ದಾರಿ ಹಿಡಿಯಬಹುದೆಂದೇ ಯೋಚಿಸಿದ್ದರು. ಆದರೆ ಆ ಯೋಚನೆ ತಪ್ಪಾಗಿತ್ತು. ತುಂಬಾನೆ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಯಾಗಿದ್ದ ಆನ್ನೆ ಸುಲ್ಲಿವಾನ ಕೆಲ್ಲರ್‌ಗೆ ಪಾಠ ಹೇಳಿಕೊಡಲು ಶುರುವಿಟ್ಟುಕೊಂಡಳು.
ಹೆಲೆನ್‌ಗೆ ಇಷ್ಟವಾಗಿದ್ದ ಡಾಲ್ ಒಂದನ್ನು ಆಕೆಯ ಕೈಗಿಟ್ಟು ಕಿವುಡರ ಭಾಷೆಯಾದ ಸಂಕೇತ ಬಾಷೆಯಲ್ಲಿ ಗುರ್ತಿಸುವುದು ಹೇಗೆ ಎಂಬುದನ್ನು ಹೇಳಿಕೊಡುವ ಮೂಲಕ ಅಕ್ಷರಾಭ್ಯಾಸ ಪ್ರಾರಂಭಿಸಿದಳು. ಆದರೆ ತುಂಬಾ ಹಠಮಾರಿಯಾಗಿದ್ದ ಹೆಲೆನ್ ಸುಲ್ಲಿವಾನಳಿಗೆ ಸ್ಪಂದಿಸುತ್ತಲೇ ಇರಲಿಲ್ಲ. ಕೈಗೆ ಸಿಕ್ಕಿದ್ದನ್ನೆಲ್ಲಾ ಟೀಚರ್ ಮೇಲೆ ಎಸೆಯುತ್ತಿದ್ದಳು. ಆಕಸ್ಮಿಕವಾಗಿ ಸುಲ್ಲಿವಾನಳ ಮೂತಿಗೆ ಬಿದ್ದತು ಆಕೆಯ ಒಂದು ಹಲ್ಲು ಮುರಿಯಿತು. ಒಮ್ಮೊಮ್ಮೆ ಸುಲ್ಲಿವಾನಳ ಮೇಲೆ ಎಂಜಲನ್ನು ಉಗಿಯುತ್ತಿದ್ದಳು.
ಎಷ್ಟೇ ಪ್ರಯತ್ನ ಪಟ್ಟರೂ ಒಂದಕ್ಷರವನ್ನೂ ಕಲಿಸಲಾಗಲಿಲ್ಲ. ಕೊನೆಗೆ ಅಪ್ಪ ಅಮ್ಮನ ಮುಂದೆ ಯೇ ಇದ್ದರೆ ಆಕೆ ಕಲಿಯುವುದಿಲ್ಲ ಎಂಬುದನ್ನರಿತ ಅನ್ನೆ, ತನ್ನ ಶಿಷ್ಯೆ ಹೆಲನ್‌ಳನ್ನು ಹೊರಗಿನ ಗೆಸ್ಟ್ ಹೌಸ್‌ವೊಂದಕ್ಕೆ ಕರೆದೊಯ್ದ ಆಲ್ಲಿ ಪಾಠ ಆರಂಭಿಸಿದಳು. ಅದೊಂದು ದಿನ ಹೆಲೆನ್‌ಳನ್ನು ನೀರಿನ ಕೈಪಂಪ್ ಒಂದರ ಬಳಿ ಕರೆದೊಯ್ದ ಟೀಚರ್ ಆಕೆಯ ಕೈಯನ್ನು ಕೊಳವೆಯ ಮೂತಿಗಿಟ್ಟು ನೀರನ್ನು ಪಂಪ್ ಮಾಡಿ ಅದು ಆಕೆ ಬಾಲ್ಯದಲ್ಲಿ ಗುರ್ತಿಸುತ್ತಿದ್ದ ನೀರು ಎಂಬುದನ್ನು ಆವಳ ಆನುಭವಕ್ಕೆ ತಂದು ಸಂಕೇತಾಕ್ಷರಗಳ ಮೂಲಕ ನೀರು ಎಂಬುದನ್ನು ಅರ್ಥ ಮಾಡಿಸಿದಳು. ಹೆಲೆನ್ ಅದನ್ನು ವಾ...ಟ...ರ್ ಎಂದು ಉಚ್ಛರಿಸಿದಳೂ ಕೂಡ. ಹೌದು ಹೆಲೆನ್ ಉಚ್ಛರಿಸಿದ ಮೊದಲ ಪದ ಆದು. ಹೆಲೆನ್‌ಳ ಸಂತೋಷಕ್ಕೆ ಪಾರವೇ ಇರಲಿಲ್ಲ. ನೀರಿನಲ್ಲಿ ಕುಣಿದು ಕುಪ್ಪಳಿಸಿದಳು.
ಮೈಮೇಲೆರಚಿಕೊಂಡು ಖುಷಿ ಅನುಭವಿಸಿದಳು. ಅದೊಂದೇ ದಿನ ಆಕೆ ಸುಮಾರು ಮೂವತ್ತಕ್ಕೂ ಹೆಚ್ಚಿನ ಪದಗಳನ್ನು ಕಲಿತಳು. ಅದು ಆನ್ನೆ ಟೀಚರ್‌ನ ಸಾರ್ಥಕದ ಕ್ಷಣವಾಗಿತ್ತು. ಈ ಪ್ರಯತ್ನದಲ್ಲಿ ಆಕೆ ಹೆಲನ್‌ಳಿಂದ ಮುಖಕ್ಕೆ ಉಗಿಸಿಕೊಂಡಿದ್ದಳು, ಹೊಡೆಸಿಕೊಂಡಿದ್ದಳು, ಹಲ್ಲು ಮುರಿಸಿಕೊಂಡಿದ್ದಳು, ಈ ಎಲ್ಲಾ ಆವಮಾನಗಳ ಮಧ್ಯೆಯೂ ಅವಳಿಗೆ ಕಲಿಸಿಯೇ ತೀರಬೇಕೆಂಬ ಹಠ ಇತ್ತಲ್ಲ ಆದು ಗೆದ್ದಿತ್ತು. ಹೆಲನ್‌ಗೆ ಆಕೆ ಕೇವಲ ಪದಗಳನ್ನು ಕಲಿಸಲಿಲ್ಲ. ಒಂದು ಹೊಸ ಜಗತ್ತನ್ನು ಪರಿಚಯಿಸಿದರು.
ಹೆಲೆನ್‌ಳಿಗೆ ಈಗ ತಾನು ಕಲಿತ ಪ್ರತಿ ಪದವನ್ನು ಹೇಗೆ ಉಚ್ಛರಿಸಬೇಕು ಮತ್ತು ಎದುರಿಗಿನವರು ಮಾತಾಡುವುದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಎಂಬ ಸವಾಲು ಎದುರಾಯಿತು. ಈ ಸವಾಲಿಗೆ ಜವಾಬು ಕಲಿಸಿದವಳೇ ಸಾರಾಹ್ ಪುಲ್ಲರ್, ಈಕೆ ಹೆಲೆನ್ʼಳ ಬೆರಳುಗಳನ್ನು ತನ್ನ ತುಟಿಗಳಿಗೆ ತಾಗಿಸಿ ತುಟಿಗಳ ಚಲನೆಯ ಮೂಲಕ ಎದುರಿಗಿನವರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳವುದನ್ನು ಕಲಿಸಿಬಿಟ್ಟಳು. ಅಂದರೆ ಎದುರಿಗೆ ಮಾತಾಡುತ್ತಿರುವವರ ತುಟಿಗಳಿಗೆ ತನ್ನ ಬೆರಳುಗಳನ್ನು ತಾಗಿಸಿ ಅದನ್ನು ಅರಿಯುವ ಅದ್ಭುತ ವಿದ್ಯೆ ಇದು.
ಇದನ್ನು ಟಡೋಮ ಕಲೆ ಎನ್ನುವರು. ಮೆಸ್ಸ್ಯಾಚುಯೆಟ್ಸ್ ನಲ್ಲಿದ್ದ ‘ರ್ಯಾಡ್‌ಕ್ಲಿಫ್ ಕಾಲೇಜ್ ಪಾರ್ ವಿಮೆನ್’ ಎಂಬ ಕಾಲೇಜಿಗೆ ಪದವಿ ಪಡೆಯಲು ದಾಖಲಾದಳು. ತರಗತಿಯಲ್ಲಿ ನೀಡುತ್ತಿದ್ದ ಉಪನ್ಯಾಸಗಳನ್ನು ಇವಳಿಗೆ ಅರ್ಥವಾಗುವಂತೆ ತಿಳಿ ಹೇಳಲು ಅನ್ನೆ ಸುಲ್ಲಿವಾನ ಸದಾ ಹೆಲೆನ್ʼಳ ಜತೆಯಲ್ಲಿಯೇ ಕೂರುತ್ತಿದ್ದಳು. ಅಂತೂ 1904 (ಆಗ ಆಕೆಗೆ 24 ವರ್ಷ) ರಲ್ಲಿ ಆ ಕಾಲೇಜಿನಿಂದ ಆನರ್ಸ್ ಪದವಿಯನ್ನು ಪಡೆದಳು. ಆ ಮೂಲಕ ಪದವಿ ಪಡೆದ ಮೊದಲ ಕಿವುಡಿ ಮತ್ತು ಕುರುಡಿ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು ಹೆಲೆನ್ ಕೆಲ್ಲರ್. ಪದವಿ ಪಡೆಯುವ ಸಂದರ್ಭದಲ್ಲಿಯೇ ‘ದಿ ಸ್ಟೋರಿ ಆಫ್ ಮೈ ಲೈಫ್’ ಎಂಬ ಪುಸ್ತಕ ಬರೆದಳು. ಇದು ಹೆಲೆನ್‌ಳ ಪ್ರಥಮ ಪುಸ್ತಕ.
ಆನಂತರ ‘ದಿ ವರ್ಲ್ಡ್; ಐ ಸೀ’ ಎಂಬ ಮತ್ತೊಂದು ಪುಸ್ತಕ ಸೇರಿದಂತೆ ಒಟ್ಟು 12 ಪುಸ್ತಕಗಳನ್ನು ಬರೆದಳು. ಕಣ್ಣಿಲ್ಲದಿದ್ದರೂ ಒಳಗಣ್ಣುಗಳಿಂದ ಜಗತ್ತನ್ನು ನೋಡುವಂತೆ ಮಾಡುವ ಮೂಲಕ, ಕೇವಲ ಸ್ಪರ್ಶ ಜ್ಞಾನದಿಂದಲೇ ನಿಸರ್ಗದ ಸುಂದರತೆ ಮತ್ತು ರಮಣೀಯತೆಯನ್ನು ಅನುಭವಿಸು ವಂತೆ ಮಾಡುವ ಮೂಲಕ, ಶಿಕ್ಷಕಿಯಾಗಿ, ಈಕೆಯ ಎರಡನೆಯ ತಾಯಿಯಾಗಿ, ಜೀವಮಾನದ ಗೆಳತಿಯಾಗಿ, ಉಳಿದಳು ಆನ್ನೆ ಸುಲ್ಲಿವಾನ. ಜ್ಞಾನದ ಬೆಳಕನ್ನು ಹರಡುವ ಮೂಲಕ ಅವಳ ಕತ್ತಲೆಯ ಬದುಕಲ್ಲಿ ಬೆಳಗಿನ ನಕ್ಷತ್ರವಾಗಿ ಬಿಟ್ಟಳು.
1936ರಲ್ಲಿ ಸುಲ್ಲಿವಾನ ಇಹಲೋಕ ತ್ಯಜಿಸಿದ ನಂತರ ಹೆಲೆನ್‌ಳ ಬದುಕು ತುಂಬಲಾರದ ನಷ್ಟವನ್ನು ಭರಿಸುವಂತಾಯಿತು. ಈ ಜೀವನಗಾಥೆಯಲ್ಲಿ ಪ್ರಮುಖವಾಗಿ ಗುರ್ತಿಸಬೇಕಾದುದು ಗುರು ಶಿಷ್ಯರ ನಡುವಿನ ಭಾವನಾತ್ಮಕ ಸಂಬಂಧ ಮತ್ತು ವೃತ್ತಿಯಲ್ಲಿನ ಬದ್ಧತೆ. ವಿಧ್ಯಾರ್ಥಿಗಳು ಹೋಂವರ್ಕ್ ಮಾಡಿಲ್ಲ, ಸರಿಯಾಗಿ ಅಂಕಗಳನ್ನು ಗಳಿಸಲಿಲ್ಲ ಎಂದ ಮಾತ್ರಕ್ಕೆ ಅವರನ್ನು ಹೊಡೆಯುವ, ಬೈಯ್ಯುವ ಮುಂತಾದ ದೈಹಿಕ ಮತ್ತು ಮಾನಸಿಕ ಶಿಕ್ಷೆ ನೀಡುವ ಶಿಕ್ಷಕರನ್ನು ಕಂಡಾಗ ಅಥವಾ ಆ ಬಗ್ಗೆ ಕೇಳಿದಾಗ ನೆನಪಾಗುವುದೇ ಸುಲ್ಲಿವಾನ ಮತ್ತು ಆಕೆಯ ತಾಳ್ಮೆ.
ಎಲ್ಲಾ ಸರಿಯಿರುವ ಮಕ್ಕಳಿಗೇ ವಿದ್ಯೆ ಕಲಿಸಲು ನೂರಾರು ದೂರುಗಳನ್ನು ದೂರುವ ಶಿಕ್ಷಕರಿರು ವಾಗ, ಕಣ್ಣು ಕಾಣಿಸದ, ಕಿವಿ ಕೇಳಿಸದ ಹುಡುಗಿಗೆ ಯಾವುದೇ ಶಿಕ್ಷೆ ನೀಡದೇ (ಅಗತ್ಯ ಬಿದ್ದಾಗ ಸಿಟ್ಟನ್ನು ವ್ಯಕ್ತಪಡಿಸಿದಳು ಮತ್ತು ಪ್ರೀತಿಯನ್ನೂ ತೋರಿಸಿದಳು) ಶಿಕ್ಷಣ ಕಲಿಸಿದ ಆಕೆಯನ್ನು ಆದರ್ಶ ಶಿಕ್ಷಕಿ ಎನ್ನಲಡ್ಡಿಯಿಲ್ಲ. ಸುಲ್ಲಿವಾನಳಲ್ಲಿದ್ದ ತಾಳ್ಮೆ ಎಲ್ಲ ಶಿಕ್ಷಕರಿಗೂ ಬರಲಿ. ಶಿಕ್ಷಕರ ದಿನಾಚರಣೆಯ ಶುಭಾ