Puneeth Rajkumar: ಅಪ್ಪು ಅಜರಾಮರ! ಪುನೀತ್ ರಾಜ್ ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ!
Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಎಲ್ಲರಿಗೂ ಬಹಳ ಇಷ್ಟ. ಅವರ ಡ್ಯಾನ್ಸ್, ಫೈಟ್, ಆ್ಯಕ್ಟಿಂಗ್ ಎಲ್ಲದಕ್ಕು ಸೈ ಎನಿಸುವಂತದ್ದು... ಸಿನಿಮಾ ಜೊತೆಗೆ ಅನೇಕ ಸಮಾಜ ಸೇವೆಯ ಕಾರ್ಯ, ವಿದ್ಯಾದಾನ ಇತ್ಯಾದಿಗಳನ್ನು ಮಾಡಿಕೊಂಡು ಬಂದ ಅವರ ಜೀವನ ಅನೇಕರಿಗೆ ಸ್ಫೂರ್ತಿ ಇದ್ದಂತೆ ಎನ್ನಬಹುದು. ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಅಪ್ಪು ಅಕಾಲಿಕ ಮರಣ ಹೊಂದಿದ್ದಾರೆ. ಅಕ್ಟೋಬರ್ 29ಕ್ಕೆ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಾಗಿದ್ದು ಈ ದಿನ ಅವರ ಸ್ಮಾರಕದ ಮುಂದೆ ಕೋಟ್ಯಾಂತರ ಅಭಿಮಾನಿಗಳು ಬೆಳಗ್ಗಿನಿಂದಲೆ ಭೇಟಿ ನೀಡುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ -
ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಅಪ್ಪು ಅಕಾಲಿಕ ಮರಣಹೊಂದಿದ್ದಾರೆ. ಅಕ್ಟೋಬರ್ 29ಕ್ಕೆ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಾಗಿದ್ದು ಈ ದಿನ ಅವರ ಸ್ಮಾರಕದ ಮುಂದೆ ಕೋಟ್ಯಾಂತರ ಅಭಿಮಾನಿಗಳು ಬೆಳಗ್ಗಿನಿಂದಲೆ ಭೇಟಿ ನೀಡುತ್ತಿದ್ದಾರೆ. ಪುಣ್ಯಸ್ಮರಣೆಯ ಹಿನ್ನೆಲೆ ಅಕ್ಟೋಬರ್ 28ರಂದೇ ಸ್ಮಾರಕ ಇದ್ದ ಸ್ಥಳವನ್ನು ಬಣ್ಣದ ಹೂವುಗಳಿಂದ ಅಲಂಕಾರಿಸಲಾಗಿದೆ. ಅಕ್ಟೋಬರ್ 29ರಂದು ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿ ಇದ್ದ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರು, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ದೂರದ ಊರುಗಳಿಂದ ಅಭಿಮಾನಿಗಳು ಸಮಾಧಿ ಬಳಿ ಸೇರಿಕೊಂಡಿದ್ದು ಅಪ್ಪು ಸ್ಮಾರಕ ನೋಡಲು ಕ್ಯೂ ನಲ್ಲಿ ನಿಂತಿದ್ದಾರೆ..
ಅಪ್ಪು ಸಮಾಧಿ ಮುಂದೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪೂಜೆಯನ್ನು ಸಲ್ಲಿಸಿದ್ದಾರೆ. ಯುವರಾಜ್ಕುಮಾರ್ ಜೊತೆ ನಟ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಪುನೀತ್ ರಾಜಕುಮಾರ್ ಸಹೋದರಿಯರು ಕೂಡ ಬಂದು ಅಪ್ಪು ಸಮಾಧಿಗೆ ನಮಸ್ಕರಿಸಿ ಪೂಜೆಯನ್ನು ಸಲ್ಲಿಸಿದ್ದಾರೆ. ಅಪ್ಪು ಕುಟುಂಬದವರು ಮತ್ತು ಆಪ್ತರು ಅವರಿಗೆ ಇಷ್ಟವಿದ್ದ ಅಡುಗೆಗಳನ್ನು ಮಾಡಿಸಿಕೊಂಡು ಬಂದು ಅದನ್ನು ಸಮಾಧಿ ಮುಂದೆ ಬಡಿಸಿದ್ದಾರೆ..
ಬೆಳಂ ಬೆಳಗ್ಗೆಯೇ ಅಭಿಮಾನಿಗಳು ನೆರೆದಿದ್ದ ಕಾರಣ ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಹಾಗೂ ಯುವ ರಾಜ್ಕುಮಾರ್ ಅವರು ಒಟ್ಟಿಗೆ ಅಭಿಮಾನಿಗಳಿಗೆ ಕೈಯ್ಯಾರೆ ಉಪಹಾರವನ್ನು ಬಡಿಸಿದ್ದರು. ಅದರೊಂದಿಗೆ ಸೆಲ್ಫಿ ಫೋಟೊಗಳಿಗೂ ಕೂಡ ಇವರು ಜೊತೆಗೆ ನಿಂತಿದ್ದರು. ಸ್ಮಾರಕದ ಸುತ್ತ ಅಪ್ಪು ಅಭಿಮಾನಿಗಳ ರಾಜ್ಯಾದ್ಯಂತ ಇರುವ ವಿವಿಧ ಸಂಘಗಳ ಸದಸ್ಯರು ಕೂಡ ಬಂದಿದ್ದು ಅಪ್ಪು ಹೆಸರನ್ನು ಜೈಕಾರ ಕೂಗಿದ್ದು ಕೂಡ ಕಂಡು ಬಂತು...
ಅಪ್ಪು ಪುಣ್ಯ ಸ್ಮರಣೆಯನ್ನು ನೆನೆದು ಅನೇಕ ಸೆಲೆಬ್ರಿಟಿಗಳು ಅವರ ಬಗ್ಗೆ ಪೋಸ್ಟ್ ಹಂಚಿ ಕೊಂಡಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ವಿಶೇಷ ಕ್ಯಾಪ್ಶನ್ ಇರುವ ಪೋಸ್ಟ್ ಅನ್ನು ತಮ್ಮ ಟ್ವಿಟ್ಟರ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಅವರ ಸವಿನೆನ ಪಿನಲ್ಲಿ 4ವರ್ಷಗಳು, ನಿಮ್ಮ ದೈನಂದಿನ ಕಾರ್ಯಗಳಲ್ಲಿ ಅಪ್ಪುವನ್ನು ಜೀವಂತವಾಗಿಟ್ಟಿರುವ ಎಲ್ಲರಿಗೂ ಅನಂತಾನಂತ ಕೃತಜ್ಞತೆಗಳು ಎಂದು ಬರೆದುಕೊಂಡು ಪುನೀತ್ ಅವರ ಫೋಟೊ ಜೊತೆಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 29, 2021 ರಂದು ಅಪ್ಪು ಅವರು ಹೃದಯಾ ಘಾತದಿಂದ 46 ನೇ ವಯಸ್ಸಿನಲ್ಲಿ ನಿಧನ ರಾದರು. ಅವರು ಬದುಕಿದ್ದಾಗ ಅನೇಕ ಸಮಾಜ ಸೇವೆ ಮಾಡಿ ಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಗಾಯಕ, ನಟ ಮತ್ತು ನಿರ್ಮಾಪಕ ರಾಗಿದ್ದ ಪುನೀತ್ ಅವರು ಇಂದು ಜೀವಂತವಾಗಿಲ್ಲದಿದ್ದರೂ ಕೂಡ ಅಭಿಮಾನಿಗಳ ಮನದಲ್ಲಿ ಚಿರಕಾಲ ಉಳಿದಿದ್ದಾರೆ...