ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Susan Thomas Column: ಸಣ್ಣ ಹೂವು ಕೂಡ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು !

ರವೀಂದ್ರನಾಥ ಟಾಗೋರ್ ಅವರು ‘ಮಧುಬಿ’ ಎಂದು ಕವನ ಬರೆದ ‘ಮಧುಮಾಲತಿ’, ವಸಂತದ ನವ ಹೂವು, ಸುಗಂಧಭರಿತ ಹೂಗಳಿಂದ ತುಂಬಿಕೊಂಡಿತ್ತು. ಅವು ಆರಂಭದಲ್ಲಿ ಕ್ಷೀಣವಾದ ಬಿಳಿಯಾಗಿ ಕಾಣಿಸಿಕೊಂಡು, ಮೂರನೇ ದಿನಕ್ಕೆ ಗಾಢ ಕೆಂಪಿಗೆ ಮರುಳುತ್ತವೆ. ಇವು ದುಂಬಿಗಳಿಗೆ ಪರಾಗಸ್ಪರ್ಶಕ್ಕಾಗಿ ಆಕರ್ಷಿಸುತ್ತವೆ.

ಸಣ್ಣ ಹೂವು ಕೂಡ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು !

-

Profile
Ashok Nayak Apr 20, 2026 10:23 AM

ಹೊರಸೂಸುವ ಮನ

ಸುಸಾನ್‌ ಥಾಮಸ್

ಏಪ್ರಿಲ್‌ನ ಉರಿಯುವ ಬೇಸಿಗೆಯಲ್ಲಿ, ಕಪ್ಪು ರಸ್ತೆಯ ಮೇಲಿನ ಡಾಂಬರು ಕರಗುವಷ್ಟು ಬಿಸಿಯಾಗಿರುವಾಗ, ಕಣ್ಣುಗಳು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಸಣ್ಣದಾಗಿ ಮಿಟುಕಿಸು ತ್ತಿದ್ದಾಗ, ಆ ಸಂಜೆ ನಡಿಗೆಯಲ್ಲಿ ನಿರಪರಾಧಿಯಾಗಿದ್ದ ನನ್ನ ಮೇಲೆ ಲ್ಯಾಬರ್ನಮ್ ಎಂಬ ಮರ ತನ್ನ ಬೀಜದ ಕೊಂಬೆಯನ್ನು ನನ್ನ ಮೇಲೆ ಬಿಸಾಡಿತು.

ಕೋಪದಿಂದ ಮೇಲಕ್ಕೆ ನೋಡಿದೆ... ಮೈತುಂಬಾ ಹಳದಿ ಬಣ್ಣದ ಬಂಗಾರದಂಥ ಹೂವುಗಳನ್ನು ಮುಡಿದುಕೊಂಡಿದ್ದ ಆ ಮರ ನನ್ನನ್ನು ನಗುತ್ತಾ ಸ್ವಾಗತಿಸಿತು. ನಂತರ, ಸಂಜೆಯ ಹೊತ್ತಿನಲ್ಲಿ ಸ್ಟಾರ್ಲಿಂಗ್ ಪಕ್ಷಿಗಳು ಆಕಾಶದಲ್ಲಿ ಅಲೆಗಳಂತೆ ಹಾರಾಡುತ್ತಿದ್ದಾಗ, ರಾತ್ರಿಗೆ ಅರಳಲು ಸಿದ್ಧವಾಗಿದ್ದ ಮಲ್ಲಿಗೆಯ ಸಣ್ಣ ಬಿಳಿ ಮೊಗ್ಗುಗಳನ್ನು ಕಂಡೆ; ಅದೇ ಸಮಯದಲ್ಲಿ ದಾಸವಾಳವು ತನ್ನ ದಿನದ ವ್ಯವಹಾರ ಮುಗಿಸಿಕೊಂಡಂತೆ ಮುದುಡಿಕೊಂಡಿತ್ತು.

ರವೀಂದ್ರನಾಥ ಟಾಗೋರ್ ಅವರು ‘ಮಧುಬಿ’ ಎಂದು ಕವನ ಬರೆದ ‘ಮಧುಮಾಲತಿ’, ವಸಂತದ ನವ ಹೂವು, ಸುಗಂಧಭರಿತ ಹೂಗಳಿಂದ ತುಂಬಿಕೊಂಡಿತ್ತು. ಅವು ಆರಂಭದಲ್ಲಿ ಕ್ಷೀಣವಾದ ಬಿಳಿಯಾಗಿ ಕಾಣಿಸಿಕೊಂಡು, ಮೂರನೇ ದಿನಕ್ಕೆ ಗಾಢ ಕೆಂಪಿಗೆ ಮರುಳುತ್ತವೆ. ಇವು ದುಂಬಿಗಳಿಗೆ ಪರಾಗಸ್ಪರ್ಶಕ್ಕಾಗಿ ಆಕರ್ಷಿಸುತ್ತವೆ.

ವಸಂತಋತುವೆಂದರೆ ಅದು ಹೂಗಳ ಕಾಲ. ಮೊದಲಿಗೆ ಟ್ಯುಲಿಪ್ ಹೂವುಗಳ ಬಗ್ಗೆ ಮಾತನಾ ಡೋಣ. ಭೂಮಿಯ ಅತ್ಯಂತ ಸುಂದರ ಹೂವುಗಳಲ್ಲೊಂದು ಟ್ಯುಲಿಪ್. ವಸಂತ ಋತುವಿನಲ್ಲಿ ಹಾಲೆಂಡ್‌ನ ಆಮ್‌ಸ್ಟರ್ ಡ್ಯಾಂನಲ್ಲಿರುವ ಕ್ಯೂಕೆನ್‌ಹಾಫ್ ನಿಂದ ಶ್ರೀನಗರದವರೆಗೆ ಟ್ಯುಲಿಪ್ ಹೂವುಗಳು ಅರಳಿ ನಿಲ್ಲುತ್ತವೆ.

ಇದನ್ನೂ ಓದಿ: ‌Susan Thomas Column: ಕೈಚೀಲ ಈಗ ಪ್ರಕೃತಿಯಷ್ಟೇ ಸಹಜ, ಸಾಂಕೇತಿಕ

ಹಸಿರು ನೆಲದ ಮೇಲೆ ಚಾದರ್ ಹಾಸಿದಂತೆ ಕಾಣುವ ಈ ಸುಂದರ ಹೂವುಗಳು ತಾವಿರುವ ಜಾಗ ವನ್ನು ಸ್ವರ್ಗದಂತೆ ಮಾರ್ಪಡಿಸುತ್ತವೆ. ಅವುಗಳ ಚೆಲುವಿಗೆ ಮಾರು ಹೋಗದವರಿಲ್ಲ. ಯೂರೋಪ್ ಜನರು ತುಂಬಾ ಇಷ್ಟಪಡುವ ಈ ಹೂವನ್ನು 16ನೇ ಶತಮಾನದಲ್ಲಿ ಯೂರೋಪಿಗೆ ಪರಿಚಯಿಸಿದ್ದು ಒಟ್ಟೊಮನ್ ರಾಜರು.

ಹಾಗಾಗಿ, ಟ್ಯುಲಿಪ್ ಹೂವುಗಳನ್ನು ಯೂರೋಪಿಯನ್ನು ಒಟ್ಟೊಮನ್ ರಾಜರ ಉಡುಗೊರೆ ಎಂದು ಈಗಲೂ ನೆನೆಯುತ್ತಾರೆ. ‘ಟ್ಯೂಲಿಪ್’ ಎಂಬ ಪದ ‘ದುಲೇಬಂದ್’ ಎಂಬ ತುರ್ಬಾನ್ ಆಗಿ ಬಳಸುವ ಬಟ್ಟೆಯಿಂದ ಬಂದದ್ದಾಗಿದೆ. 16ನೇ ಶತಮಾನದಲ್ಲಿ ಟ್ಯೂಲಿಪ್ ಹೂಗಳು ಕಳ್ಳತನಕ್ಕೂ ಪಾತ್ರವಾಗುವಷ್ಟು ಅಮೂಲ್ಯವಾಗಿದ್ದವು. ಹೂವುಗಳ ಕಳ್ಳತನ ಅಲ್ಲಿಗೇ ನಿಂತಿಲ್ಲ... ಈಗಲೂ ನಡೆಯುತ್ತಿದೆ.

ಇಂದು ನಮ್ಮ ಅಪಾರ್ಟ್ಮೆಂಟ್‌ನ ವಾಟ್ಸ್‌ಆಪ್ ಗುಂಪಿನಲ್ಲಿ ಉದ್ಯಾನವನದಿಂದ ಪೂಜೆಗೆ ಹೂ ಗಳನ್ನು ಕದ್ದಿದ್ದಾರೆ ಎಂಬ ಆರೋಪಗಳನ್ನು ಕೆಲವರು ಮಾಡಿದ್ದಾರೆ. ಇನ್ನೂ ಕೆಲವರು ಮನಿ ಪ್ಲಾಂಟ್ ಬಳ್ಳಿಯನ್ನು ಕತ್ತರಿಸಿದ್ದಾರೆ ಎಂದು ದೂರುತ್ತಿದ್ದಾರೆ. ಇಂಥವನ್ನೆಲ್ಲಾ ನೋಡಿದಾಗ ಹೂವುಗಳಿಗೆ, ಬಳ್ಳಿಗಳಿಗೆ ಇತಿಹಾಸದಲ್ಲಿದ್ದ ಮೌಲ್ಯ ಈಗಲೂ ಇದೆ ಎಂದೆನಿಸಿ ನಾನು ಮುಗುಳ್ನಕ್ಕೆ.

ನಾನು 1980ರ ದಶಕದಲ್ಲಿ (ಆಗ ಕೋಚಿನ್ ಎಂದೇ ಕರೆಯಲಾಗುತ್ತಿತ್ತು) Kochi Flower Show ನಲ್ಲಿ ಪ್ರತಿವರ್ಷ ಕಾಣಿಸಿಕೊಳ್ಳುತ್ತಿದ್ದ ಹೂಗಳ ಸಮೃದ್ಧಿಯಲ್ಲಿ ಬೆಳೆದವಳು. ಆ ಹೂ ಪ್ರದರ್ಶನಕ್ಕೂ ನನಗೂ ಬಹುತೇಕ ಒಂದೇ ವಯಸ್ಸು. ಏಳು ವರ್ಷದ ಮಗು ತನ್ನ ಮುಖದಷ್ಟೇ ದೊಡ್ಡದಾಗಿ ಅರಳಿದ್ದ ಕುಂಡಗಳಲ್ಲಿನ ಡಾಹ್ಲಿಯಾ ಹೂಗಳ ಸಾಲುಗಳ ಮಧ್ಯೆ ತಿರುಗಾಡುತ್ತಿದ್ದಾಗ, ಆ ಪ್ರದರ್ಶನವು ಅವಳ ಮನದಲ್ಲಿ ಹೂಗಳ ಮೇಲಿನ ಜೀವಮಾನವಿಡೀ ಮುಂದುವರಿಯುವ, ಪೂಜೆಯಂತೆಯೇ ತೋರುವ ಪ್ರೀತಿಯನ್ನು ನನ್ನಲ್ಲಿ ಹುಟ್ಟಿಸಿತು.

Flower

ಹೂಗಳ ಚಿತ್ರಗಳಿರುವ ತಟ್ಟೆಗಳಲ್ಲಿ ಊಟ ಸಿಗದಿದ್ದರೆ, ಅವಳು ಹಸಿದೇ ಉಳಿಯಲು ಸಿದ್ಧಳಾಗಿದ್ದಳು. ಅದು ಅವಳಲ್ಲಿ ಸಸ್ಯಗಳು ಮತ್ತು ಹೂಗಳ ವೈಜ್ಞಾನಿಕ ಹೆಸರುಗಳನ್ನು ಕಣ್ತುಂಬಿಕೊಳ್ಳುವ ಆಸೆಯನ್ನು ಹುಟ್ಟಿಸಿತು. ಹೂಗಳ ಬಗ್ಗೆ ಸಮಾನವಾಗಿ ಹುಚ್ಚು ಹೊಂದಿದ್ದ ತಾಯಿಯೊಂದಿಗೆ, ಅವರು ಲಾಂಟಾನಾ ಗಿಡಗಳನ್ನು ಮರದ ತುಂಡುಗಳ ಮೇಲೆ ಹತ್ತುವಂತೆ ತರಬೇತಿ ನೀಡಿದರು, ಅಪರೂಪದ ಬಣ್ಣಗಳ ಬೌಗನ್ವಿಲಾ ಗಿಡಗಳನ್ನು ಸಂಯೋಜಿಸಿದರು, ಮತ್ತು ಮನೆಯೆಡೆ ಉದ್ದವಾದ ಕಲಶಗಳಲ್ಲಿ ಬರ್ಡ್ಸ್ ಆಫ್ ಪ್ಯಾರಡೈಸ್ ಹೂಗಳನ್ನು ಅಲಂಕರಿಸಿದರು.

ಹೂವಿನ ಪ್ರದರ್ಶನಗಳಿಗೆ ಜಗತ್ತಿನಲ್ಲಿ ದೀರ್ಘ ಇತಿಹಾಸವಿದೆ. 18ನೇ ಶತಮಾನದ ಸಮುದ್ರ ಯಾನಗಳು ಮತ್ತು ಅನ್ವೇಷಣೆಗಳು ಖಂಡಗಳನ್ನು ಪರಸ್ಪರ ಪರಿಚಯಿಸಿದವು; ಅವುಗಳ ಸಸ್ಯಜಾಲ ಮತ್ತು ಪ್ರಾಣಿಜಾಲಗಳು ಒಂದರಿಂದ ಮತ್ತೊಂದಕ್ಕೆ ಹರಡಿದಂತೆ, ತೋಟಗಾರಿಕೆ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗಳು ಕಂಡುಬಂದವು.

ವಸಾಹತುಶಾಹಿಯ ಪ್ರೇರಣೆಯಿಂದ ಭಾರತದಲ್ಲಿಯೂ ಅನೇಕ ಸಸ್ಯಉದ್ಯಾನವನಗಳು ಮತ್ತು ತೋಟಗಾರಿಕಾ ಸಂಘಗಳು ಸ್ಥಾಪನೆಯಾದವು. ದಕ್ಷಿಣ ಭಾರತದ ಬಹುತೇಕ ಜನರಿಗೆ ಊಟಿಯಲ್ಲಿನ ಸಸ್ಯ ಉದ್ಯಾನಗಳಲ್ಲಿ ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಹೂ ಪ್ರದರ್ಶನ ಪರಿಚಿತವಾಗಿದೆ.

ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಗ, ಗಣರಾಜ್ಯೋತ್ಸವದ ಸಮಯದಲ್ಲಿ ನಡೆಯುತ್ತಿದ್ದ ಲಾಲ್‌ಬಾಗ್ ಹೂ ಪ್ರದರ್ಶನಕ್ಕೆ ನನ್ನ ಮಗಳನ್ನು ಕರೆದೊಯ್ಯುತ್ತಿದ್ದೆ. ಅಲ್ಲಿ ಕೆಂಪು ಗುಲಾಬಿಗಳ ಮಹತ್ತರ ಹೃದಯಾಕೃತಿಗಳ ಮುಂದೆ ನಿಂತು ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇಂದು ಗಾರ್ಡನ್ ಸಿಟಿ ಎಂದೇ ಹೆಸರಾದ ಬೆಂಗಳೂರಿನಲ್ಲಿ ತಾಬೆಬುಯಾ ಮರಗಳು ಒಂದೇ ಸಮಯದಲ್ಲಿ ಗುಲಾಬಿ ಬಣ್ಣದಲ್ಲಿ ಅರಳಿ, ಜಪಾನ್‌ನ ಸಾಕುರಾ ಹೂಗಳಂತೆ ಅದ್ಭುತ ದೃಶ್ಯವನ್ನು ಸೃಷ್ಟಿಸುವ ಪಿಂಕ್ ಪೊಯಿ ಎನ್ನುವ ಹೊಸ ಸಂಭ್ರಮವೂ ಕಾಣಿಸುತ್ತಿದೆ.

ಬೆಂಗಳೂರಿಗೆ ಪಿಂಕ್ ಪೊಯಿ ಇದ್ದರೆ, ಲಡಾಖ್‌ನಲ್ಲಿ ಅಪ್ರಿಕಾಟ್ ಹೂಗಳೂ ಅದೇ ರೀತಿ ಗುಲಾಬಿ ಬಣ್ಣದಲ್ಲಿ ಅರಳಿ ಕಣ್ಮನ ಸೆಳೆಯುತ್ತವೆ. ಮತ್ತಷ್ಟು, ಪ್ರಕಾಶಮಾನವಾದ ಬುಗನ್ವಿಲಿಯಾ (ಅವು ನಿಜವಾದ ಹೂಗಳು ಅಲ್ಲ, ಬಣ್ಣದ ಬ್ರಾಕ್ಟ್‌ಗಳು) ಇರದೇ ಇದ್ದಿದ್ದರೆ, ನಮ್ಮ ಹೆzರಿ ಪ್ರಯಾಣಗಳು ಇನ್ನಷ್ಟು ನೀರಸವಾಗುತ್ತಿದ್ದವೇನೋ!

ನಮ್ಮ ಕಲೆ ಮತ್ತು ಕೈಗಾರಿಕೆಗಳು ಹೂಗಳ ಮೇಲೆ ಆಧಾರಿಸಿಕೊಂಡೇ ಅರಳುತ್ತವೆ. ಕಾಂಚೀಪುರಂ ಸೀರೆಯಲ್ಲಿನ ‘ಕಮಲ’ (ತಾವರೆ) ಬುಟ್ಟಾ ಅಥವಾ ‘ತುತ್ತಿರಿಪೂ’ (ಇಂಡಿಯನ್ ಮ) ಅಲಂಕಾರಗಳು ಹೊಳೆಯುತ್ತವೆ. ಮೊಘಲ್ ಶೈಲಿಯ ವಾಸ್ತುಶಿಲ್ಪದಲ್ಲಿಯೂ ಹೂಗಳಿಗೆ ವಿಶೇಷ ಸ್ಥಾನವಿದೆ.

ತಾಜ್‌ಮಹಲ್ ಇದಕ್ಕೆ ಅದ್ಭುತ ಸಾಕ್ಷಿ. ಅದು ಅಮೂಲ್ಯ ರತ್ನಗಳಿಂದ ಕೆತ್ತಿದ ಹೂವಿನ ಅಲಂಕಾರ ಗಳು ಬಲು ಸೊಗಸಾಗಿ ಕಾಣಿಸುತ್ತವೆ. ಹೂಗಳು ಇರಲಿಲ್ಲವಾದರೆ, ನಮ್ಮ ಸಾಹಿತ್ಯದ ಅರ್ಧ ಭಾಗವೇ ಒಣಗಿ ಹೋಗುತ್ತಿತ್ತು. ಆಂಗ್ಲಕವಿ ವಡ್ಸ್ ವರ್ತ್‌ಅವರಿಗೆ ಕನಸು ಕಾಣಲು ಡ್ಯಾಫೋಡಿಲ್‌ಗಳು ಸಿಗು ತ್ತಿರಲಿಲ್ಲ; ಕುಮಾರನ್ ಅಸನ್ ಅವರು ಬಿದ್ದ ಹೂವಿನ ಬಗ್ಗೆ ತತ್ತ್ವಚಿಂತನೆ ಮಾಡುತ್ತಿರಲಿಲ್ಲ (‘ವೀಣ ಪೂವು’ ಮಲಯಾಳಂ ಸಾಹಿತ್ಯದ ಒಂದು ಕ್ಲಾಸಿಕ್).ಟಾಗೋರ್ ಅವರು ದೇವರನ್ನು ತಮ್ಮನ್ನು ಚಿಕ್ಕ ಹೂವಿನಂತೆ ಕಿತ್ತುಕೊಳ್ಳಲು ಬೇಡಿಕೊಳ್ಳಲಾರರು; ಅಥವಾ ಎಮಿಲಿ ಡಿಕೆನ್‌ಸನ್ ಸಣ್ಣ ಹೂವನ್ನೂ ನಾವು ಏಕೆ ನಿರ್ಲಕ್ಷಿಸಬಾರದು ಎಂದು ಬರೆಯುತ್ತಿರಲಿಲ್ಲ.

ಪ್ರೇಮ-ಅದರಲ್ಲೂ ರೋಮ್ಯಾಂಟಿಕ್ ಪ್ರೇಮ-ಗುಲಾಬಿ ಹೂಗಳಿಂದಲೇ ಪ್ರತೀಕವಾಗುತ್ತದೆ. ಜಾನ್ ಬಾಯ್ಲಿ ಓ ರೆಲ್ಲಿ ಅವರ ದೃಷ್ಟಿಯಲ್ಲಿ, ಕ್ರೀಮ-ಬಿಳಿ ಬಣ್ಣದ ಗುಲಾಬಿ ಮೊಗ್ಗು, ಅದರ ದಳಗಳ ತುದಿಯಲ್ಲಿ ಹಚ್ಚಿಕೊಂಡಿರುವ ಮೃದುವಾದ ಕೆಂಪು ಛಾಯೆಯೊಂದಿಗೆ, ಅತ್ಯಂತ ಶುದ್ಧ ಮತ್ತು ಸಿಹಿಯಾದ ಪ್ರೇಮದ ಸಂಕೇತವಾಗಿದೆ.

ಮಹಮ್ಮದ್ ರಫಿ ಅವರ ಹಾಡುಗಳಲ್ಲಿ ನಮ್ಮ ನಾಯಕರು ಇನ್ನಷ್ಟು ರೋಮ್ಯಾಂಟಿಕ್ ಆಗುತ್ತಾರೆ-ಪ್ರಿಯತಮೆಗೆ ಬರೆದ ಪತ್ರ ಬೆಳಗ್ಗೆ ಹೂವಾಗಿ, ರಾತ್ರಿ ನಕ್ಷತ್ರವಾಗಿ ಪರಿವರ್ತಿತವಾಗುತ್ತದೆ ಎಂಬ ಕಲ್ಪನೆ ಅದರಲ್ಲಿ ಜೀವಂತವಾಗುತ್ತದೆ (ಲಿಖೇನ್ ಜೋ ಖತ್ ತುಜೆ). ಮಹಾಭಾರತದ ಭೀಮ ದ್ರೌಪದಿಗೆ ತನ್ನ ಭಕ್ತಿಯನ್ನು ತೋರಿಸಲು ‘ಕಲ್ಯಾಣಸೌಗಂಽಕಾ’ ಎಂಬ ಅಮೂಲ್ಯ ಹೂವನ್ನು ತಂದುಕೊಟ್ಟನು-ಅದು ಶಾಶ್ವತ ಪ್ರೀತಿಯ ಸಂಕೇತವಾಗಿದೆ.

ಮದುವೆಗಳಲ್ಲಿ ವಧುಗಳು ಹೂಗುಚ್ಛ ಹಿಡಿದುಕೊಂಡಿರುತ್ತಾರೆ; ಜಯಮಾಲೆ ವಿನಿಮಯ ವಾಗುತ್ತದೆ; ಹೊಸ ದಂಪತಿಗಳ ಮೇಲೆ ಹೂಗಳನ್ನು ಸುರಿಸಲಾಗುತ್ತದೆ. ಜೀವಿತದ ಅಂತಿಮ ಯಾತ್ರೆ ಯಲ್ಲಿಯೂ ಹೂಗಳು ನಮ್ಮೊಂದಿಗೇ ಇರುತ್ತವೆ. ಜೀವನದ ಪ್ರತಿಯೊಂದು ಹಂತದಲ್ಲೂ ಹೂಗಳು ನಮ್ಮ ಜತೆ ನಡೆಯುತ್ತವೆ.

ಹೂಗಳಿಲ್ಲದೆ ಆಚರಣೆಗಳನ್ನು ನಾವು ಕಲ್ಪಿಸಿಕೊಳ್ಳಬಹುದೇ? ಚೈತ್ರ ಮಾಸದ ಮೊದಲ ದಿನ, ಉತ್ತರಾಖಂಡದಲ್ಲಿ ಫೂಲ್ ದೇಯಿ, ಅಥವಾ ‘ಫೂಲ್ ಸಂಕ್ರಾಂತಿ’ ಎಂದು ಕರೆಯುವ ಹಬ್ಬದಲ್ಲಿ ಚಿಕ್ಕ ಹುಡುಗಿಯರು ಪ್ರತಿಯೊಂದು ಮನೆಬಾಗಿಲಿಗೂ ಹೂಗಳನ್ನು ಇಟ್ಟು ಫೂಲ್ ದೇಯಿ, ಛಮ್ಮಾ ದೇಯಿ ಎಂದು ಹಾಡುತ್ತಾರೆ. ಅದರ ನಂತರ ನಾನು ಚರ್ಚಿನಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗ ವಹಿಸಿ, ಹೊಸನ್ನಾ ಎಂದು ಘೋಷಿಸುತ್ತಾ ಹೂಗಳನ್ನು ಅರ್ಪಿಸುವ ಸಂಪ್ರದಾಯವನ್ನು ಕಂಡೆ.

ಪಾಮ್ ಸಂಡೇ ಒಂದು ವಸಂತೋತ್ಸವದ ಸೊಗಸನ್ನು ಹೊತ್ತುಕೊಂಡಿರುವ ಮಂತ್ರಮುಗ್ಧ ಅನುಭವ ಪಡೆದು, ತಾಳೆ ಎಲೆಗಳನ್ನು ಹಿಡಿದು, ಅದರ ತುದಿಯಲ್ಲಿ ಕ್ರಾಸ್ ರೂಪಿಸಿ, ಅದನ್ನು ಗೌರವದಿಂದ ಮನೆಗೆ ತರುವುದು ವಿಶೇಷ. ಇದು ನನಗೆ ಬೃಂದಾವನದ ಬಂಕೆ ಬಿಹಾರಿ ದೇವಾಲಯ ದಲ್ಲಿ ನಡೆಯುವ ‘ಫೂಲೋನವಾಲಿ ಹೋಳಿ’ಯನ್ನು ನೆನಪಿಸುತ್ತದೆ.

ಹೂಗಳಿಂದಲೇ ಆಡುವ ಹೋಳಿ. ಬಸಂತ ಪಂಚಮಿಯಂದು, ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಹಜರತ್ ನಿಜಾಮುದ್ದಿನ್ ಔಲಿಯ ದರ್ಗಾದಲ್ಲಿ ಹಳದಿ ಸಾಸಿವೆ ಮತ್ತು ಮಾರಿ ಗೋಲ್ಡ್ ಹೂಗಳಿಂದ ಆಚರಣೆ ನಡೆಯುತ್ತದೆ. ಓಣಂ ಹಬ್ಬ ‘ಪೂಕಳಂ’ ಇಲ್ಲದೆ ಅಪೂರ್ಣ; ವಿಷು ಹಬ್ಬದ ‘ವಿಷುಕ್ಕಣಿ’ಯಲ್ಲಿ ‘ಕೊನ್ನ’ (ಲ್ಯಾಬರ್ನಮ) ಹೂಗಳ ವೈಭವ ಅತ್ಯಗತ್ಯ. ‌

ಹೀಗೆ ಹೂಗಳು ನಮ್ಮ ಸಂಸ್ಕೃತಿ, ಆಚರಣೆ, ಮತ್ತು ಬದುಕಿನ ಪ್ರತಿಯೊಂದು ಹಂತವನ್ನು ಸುಗಂಧ ಮಯಗೊಳಿಸುತ್ತವೆ. ಜೀವನ ನಿರುತ್ಸಾಹಕರವಾಗಿದಾಗ, ಯುದ್ಧದಲ್ಲಿರುವ ದೇಶಗಳು ನಿರಾಶೆಯ ಗಾಳಿ ಹರಡಿಸಿದಾಗ, ಹೂಗಳ ಸರಳ ದೃಶ್ಯವೇ ನಮ್ಮೊಳಗೆ ಹೊಸ ಆಸೆಯನ್ನು ತುಂಬುತ್ತದೆ. ದಶಕದ ಹಿಂದೆ ಹಾರ್ವಡ್ ಮೆಡಿಕಲ್ ಸ್ಕೂಲ್ ಹಾಗು ಮ್ಯಾಸಚೂಸೆಟ್ಸ್ ನಲ್ಲಿ ಎಕಾಲಜಿ ಆಫ್ ಫ್ಲವರ‍್ಸ್ ಬಗ್ಗೆ ನಡೆಸಲಾದ ಒಂದು ಅಧ್ಯಯನವು, ‌

‘ಬೆಳಗಿನ ವೇಳೆಯಲ್ಲಿ ಸಣ್ಣ ಹೂವಿನ ಅಲಂಕಾರಗಳನ್ನು ನೋಡುವುದೇ ನಮ್ಮ ಮನೋಭಾವ ವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ’ ಎಂಬುದನ್ನು ದೃಢಪಡಿಸಿದೆ. ಇನ್ನು ಬೈಬಲ್‌ನಲ್ಲಿಯೂ ಮಾನವನು ದೇವರಿಗೆ ಅಮೂಲ್ಯನೆಂದು ಹೇಳಿ, ಹೊಲದ ಲಿಲಿ ಹೂಗಳನ್ನು ನೋಡಿ ಎಂಬುದು ಸಾಕ್ಷಿಯಾಗಿ ನೀಡಲಾಗಿದೆ.

ಸೊಲೊಮೋನ್ ತನ್ನ ಎಲ್ಲ ವೈಭವದಲ್ಲಿದ್ದರೂ ಅವುಗಳಷ್ಟು ಸುಂದರನಾಗಿರಲಿಲ್ಲ; ಹೀಗಿದ್ದರೆ ದೇವರು ತನ್ನ ಮಕ್ಕಳನ್ನು ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳುವನು ಎಂಬ ತಾತ್ಪರ್ಯ ಅಡಗಿದೆ. ಹೊಲದಲ್ಲಿರುವ ಪ್ರತಿಯೊಂದು ಚಿಕ್ಕ ಹೂವೂ ಈ ಜಗತ್ತಿನಲ್ಲಿ ಯಾವುದೂ ಅಲ್ಪವಲ್ಲ ಎಂಬ ಸತ್ಯವನ್ನು ಸಾರುತ್ತದೆ.

ಇಂದು ಪಾಪ್ ಸಂಸ್ಕೃತಿ ನೀವು ನೆಡಲ್ಪಟ್ಟಿರುವ ಅರಳಿ ಎಂದು ಹೇಳುತ್ತಾ ಹೂಗಳ ಉಪಮೆಯನ್ನು ಬಳಸಿಕೊಂಡಿದ್ದರೂ, ಎಲ್ಲ ಮರಗಳೂ ಒಂದೇ ಸಮಯದಲ್ಲಿ ಅರಳುವುದಿಲ್ಲ ಎಂಬ ನಿಜವನ್ನೂ ಹೇಳುತ್ತದೆ. ಹೂಗಳು ನಮ್ಮನ್ನು ಅದ್ಭುತ ಸೌಂದರ್ಯ ಮತ್ತು ಸತ್ಯದ ಬೆಳಕಿನಲ್ಲಿ ನೆನೆಸುತ್ತವೆ. ಇನ್ನು ನನ್ನ ವಿಷಯಕ್ಕೆ ಬಂದರೆ, ಈ ಒಪ್ಪಂದ ಬಹಳ ಹಿಂದೆಯೇ ನಿಶ್ಚಯವಾಗಿತ್ತು. ನನ್ನ ಅಜ್ಜನು ನನ್ನ ಹೆಸರೇ ಹೆಬ್ರೂ ಭಾಷೆಯಲ್ಲಿ ‘ಲಿಲಿ’ ಎಂದರ್ಥ ಎಂದು ಹೇಳಿದ ದಿನದಿಂದ. ಶೋಶನ್ನಾ. ನಾನು ಹೂಗಳನ್ನು ಪ್ರೀತಿಸುವವಳು; ಸಂದೇಹ ಬಂದಾಗ ಹೂಗಳನ್ನು ಖರೀದಿಸುವವಳು.