ಈಗಿನ ಸ್ಟೇಡಿಯಂ ಸಾಲದೆ?
ಸದ್ಯ ಕ್ರಿಕೆಟ್‌ಗೆ ಕರ್ನಾಟಕದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಅತ್ಯಂತ ಸುಸಜ್ಜಿತ ವಾಗಿ, ಅಂತರಾಷ್ಟ್ರೀಯ ಮಟ್ಟದ್ದೂ ಆಗಿದೆ. ಕಳೆದ ವರ್ಷವಷ್ಟೇ ಅದನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಸದ್ಯ ನಡೆಯುತ್ತಿರುವ ಐಪಿಎಲ್ ಪಂದ್ಯಗಳೂ ವ್ಯವಸ್ಥಿತವಾಗಿ ಸಾಗುತ್ತಿದೆ. ಇಷ್ಟಾದರೂ, ಸಿದ್ದರಾಮಯ್ಯನವರು, ಬೆಂಗಳೂರು ಹೊರಗೆ ದೇಶದ ಎರಡನೇ ಬೃಹತ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಅಡಿಗಲ್ಲು ಹಾಕಿದ್ದಾರೆ.
-
ಪ್ರಸ್ತುತ
ಶಂಕರನಾರಾಯಣ ಭಟ್
ಯಾವುದೇ ಸರಕಾರವಿರಲಿ, ರಾಜ್ಯವೋ ಕೇಂದ್ರವೋ, ಅಲ್ಲ ನಡೆಯಬೇಕಾದ ಕಾಮಗಾರಿ ಗಳಿಗೂ ಪ್ರಾಶಸ್ತ್ಯ ಎಂಬುದೊಂದು ಇರಲೇ ಬೇಕಲ್ಲವೆ? ಅದಿಲ್ಲ ಅಂದರೆ, ಕೆಲವು ಕೆಲಸಗಳೇನೋ ಆಗುತ್ತವೆ. ಆದರೆ ತುರ್ತಿಗೆ ಅದರ ಅವಶ್ಯಕತೆಯೂ ಇರುವುದಿಲ್ಲ ಮತ್ತು ಬಳಕೆಯೂ ಇರುವುದಿಲ್ಲ. ಆದರೂ ಕೆಲ ಸರಕಾರಗಳು ಅಧಿಕಾರ ಇದೆಯೆಂದು ಮತ್ತು ಜಿದ್ದಿಗೆ ಬಿದ್ದು ಅನವಶ್ಯಕ ಕಾಮಗಾರಿಗೆ ಮುಂದಾಗುವುದನ್ನೂ ಕಾಣುತ್ತೇವೆ. ಈಗ ನಮ್ಮ ರಾಜ್ಯದಲ್ಲೂ ಅಂತಹುದೇ ಒಂದು ಸನ್ನಿವೇಶ ಹುಟ್ಟಿಕೊಂಡಿದೆ.
ಸದ್ಯ ಕ್ರಿಕೆಟ್‌ಗೆ ಕರ್ನಾಟಕದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಅತ್ಯಂತ ಸುಸಜ್ಜಿತವಾಗಿ, ಅಂತರಾಷ್ಟ್ರೀಯ ಮಟ್ಟದ್ದೂ ಆಗಿದೆ. ಕಳೆದ ವರ್ಷವಷ್ಟೇ ಅದನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಸದ್ಯ ನಡೆಯುತ್ತಿರುವ ಐಪಿಎಲ್ ಪಂದ್ಯಗಳೂ ವ್ಯವಸ್ಥಿತವಾಗಿ ಸಾಗುತ್ತಿದೆ. ಇಷ್ಟಾದರೂ, ಸಿದ್ದರಾಮಯ್ಯನವರು, ಬೆಂಗಳೂರು ಹೊರಗೆ ದೇಶದ ಎರಡನೇ ಬೃಹತ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಅಡಿಗಲ್ಲು ಹಾಕಿದ್ದಾರೆ. 100 ಎಕರೆ ಪ್ರದೇಶ, 80000 ಆಸನ ವ್ಯವಸ್ಥೆ ಮತ್ತು 943.46 ಕೋಟಿ ರೂ. ವೆಚ್ಚದ ಈ ಕಾಮಗಾರಿ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಗುಜರಾತದ ಬಳಿಕ ಇದೇ ದೊಡ್ಡದು ಎಂಬುದು!
ಇದನ್ನೂ ಓದಿ: Chinnaswamy Stadium: ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಟಚ್; ಆಸನ ಸಾಮರ್ಥ್ಯ 55,000ಕ್ಕೆ ಹೆಚ್ಚಳ
ಅಹಮದಾಬಾದಿನಲ್ಲಿ ‘ಮೋದಿ’ ಹೆಸರಿನ ಸ್ಟೇಡಿಯಂ ಇರುವುದೇ ಈ ಎಲ್ಲದಕ್ಕೂ ಕಾರಣ ಅಂದರೂ ತಪ್ಪಾಗಲಾರದು. ಈ ಕೆಲಸ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕು ಎಂಬ ಉದ್ದೇಶವೂ ಇದೆ. ಇವೆಲ್ಲ ವೈಯಕ್ತಿಕ ಹಿತಾಸಕ್ತಿಯೇ ಹೊರತು ಅವಶ್ಯಕತೆಯಲ್ಲ.
ಇಂದು, ಇನ್ನೂ ತುರ್ತಾಗಿ ಆಗಬೇಕಾದ ಸಾಕಷ್ಟು ಕೆಲಸಗಳಿವೆ. ಅವನ್ನೆಲ್ಲ ಬಿಟ್ಟು ಕ್ರಿಕೆಟ್ ಸ್ಟೇಡಿಯಂ ಹಿಂದೇಕೆ ಬಿದ್ದಿದ್ದಾರೆ ಎಂಬುದೂ ಅರ್ಥವಾಗುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಆಟಗಳೇನು ದಿನ ನಿತ್ಯ ನಡೆಯುವಂತಹದೇ? ಅಷ್ಟಕ್ಕೂ ಈಗಿದ್ದ ಸ್ಟೇಡಿಯಂ ಸಾಲದೇ? ವಿಷಯ ಅದಲ್ಲವೇ ಅಲ್ಲ. ಸಿದ್ದು, ಜಿದ್ದಿಗೆ ಬಿದ್ದು ತಾನೇನೂ ಕಡಿಮೆ ಅಲ್ಲ ಎಂದು ತೋರಿಸಲು ಮುಂದಾಗಿದ್ದಾರೆ. ಈ ಹೊಸ ಸ್ಟೇಡಿಯಂಗೆ ಯಾರಾದರೂ ಬೇಡಿಕೆ ಇಟ್ಟಿದ್ದರೆ? ಅದರ ಅವಶ್ಯಕತೆ ಅಷ್ಟು ತುರ್ತಾಗಿತ್ತೆ? ಮೊದಲೇ ರಾಜ್ಯದಲ್ಲಿ ಮೂಲಭೂತ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ.
ಸ್ಪೆಷಾಲಿಟಿ ಆಸ್ಪತ್ರೆ, ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕೊರತೆ, ರಸ್ತೆ, ರೈತರ ಪರದಾಟ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸೃಷ್ಟಿ, ನೀರಾವರಿ ಇತ್ಯಾದಿ. ಅವನ್ನೆಲ್ಲ ಬಿಟ್ಟು, ಅಷ್ಟೇನೂ ಅವಶ್ಯಕತೆ ಇಲ್ಲದ ಕಡೆ ಹಣ ಖರ್ಚುಮಾಡುವುದು ವಿಹಿತವೆ? ಸರಕಾರ ಇರುವುದು ಜನರ ಹಿತಕ್ಕೋ ಅಥವಾ ಆಳುಗರಿಗೋ? ಇಲ್ಲಿ ಸ್ವ - ಪ್ರತಿಷ್ಟೆಗೂ ಅವಕಾಶ ಇರಕೂಡದು.