R T Vittalmurthy Column: ಅರಸು. ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು
ಎಷ್ಟೇ ಆದರೂ ಮದ್ಯದ ದೊರೆಗಳು ಪಾರ್ಟಿ ಫಂಡು ಕೊಡುವವರು. ಅಂಥವರು ಬಂದು ರಾಜಶೇಖರ ಮೂರ್ತಿಯವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಸೋನಿಯಾ ಗಾಂಧಿ ಸುಮ್ಮನಿರಲು ಸಾಧ್ಯವೇ? ಹಾಗಂತಲೇ ರಾಜಶೇಖರಮೂರ್ತಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಪ್ರಪೋ ಸಲ್ಲನ್ನು ಅವರು ಕೈಬಿಟ್ಟರು. ಪರಿಣಾಮ? ನೋಡನೋಡುತ್ತಿದ್ದಂತೆಯೇ ರಾಜಶೇಖರಮೂರ್ತಿ ಅವರ ಜಾಗಕ್ಕೆ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಬಂದು ಕುಳಿತರು.

-

ಮೂರ್ತಿ ಪೂಜೆ
ಇದು 1999ರಲ್ಲಿ ನಡೆದ ಘಟನೆ. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕ ರಾಜಶೇಖರ ಮೂರ್ತಿ ಅವರನ್ನು ತರಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿರ್ಧರಿಸಿ ದ್ದರು. ಅವರು ಹೀಗೆ ನಿರ್ಧರಿಸಲು ಹಲವು ಕಾರಣಗಳಿದ್ದವು. ಈ ಪೈಕಿ ಮುಖ್ಯವಾದುದೆಂದರೆ ಜನತಾದಳದಲ್ಲಿ ನಡೆದ ಬೆಳವಣಿಗೆ. ಅರ್ಥಾತ್, ಅ ಹೊತ್ತಿಗೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಜನತಾದಳ ಆಂತರಿಕ ಸಂಘರ್ಷದಿಂದ ಕಂಗಾಲಾಗಿತ್ತು.
ಕರ್ನಾಟಕದಲ್ಲಿ ಅಧಿಕಾರ ಹಿಡಿದ ನಂತರ ಜನತಾ ಪರಿವಾರದ ಆಧಾರಸ್ತಂಭವೇ ಆಗಿದ್ದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಪಕ್ಷದಿಂದ ಉಚ್ಚಾಟಿತರಾಗಿದ್ದು ಈ ಸಂಘರ್ಷದ ಮೂಲವಾಗಿತ್ತು. ಯಾವಾಗ ಹೆಗಡೆ ಉಚ್ಚಾಟಿತರಾದರೋ, ಲಿಂಗಾಯತ ವರ್ಗ ತಿರುಗಿ ಬಿತ್ತು ಮತ್ತು ಹೆಗಡೆಯವರ ಉಚ್ಚಾಟನೆಗೆ ಕಾರಣರಾದ ದೇವೇಗೌಡರ ವಿರುದ್ಧ ಕುದಿಯುತ್ತಿತ್ತು.
ಹೀಗೆ ಜನತಾದಳದಲ್ಲಿ ಭುಗಿಲೆದ್ದಿದ್ದ ಆಂತರಿಕ ಸಂಘರ್ಷದ ಜಾಡು ಹಿಡಿದ ಕಾಂಗ್ರೆಸ್ ವರಿಷ್ಠರು 1999ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಲಿಂಗಾಯತ ನಾಯಕರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲು ಯೋಚಿಸಿದರು. ಈ ಸಂದರ್ಭದಲ್ಲಿ ಅವರ ಕಣ್ಣಿಗೆ ಕಂಡವರು ಲಿಂಗಾಯತ ಸಮುದಾಯದ ನಾಯಕ, ಮಾಜಿ ಹಣಕಾಸು ಸಚಿವರಾದ ಎಂ.ರಾಜಶೇಖರ ಮೂರ್ತಿ. ಎಷ್ಟೇ ಅದರೂ ರಾಜಶೇಖರಮೂರ್ತಿ ದಕ್ಷ ಆಡಳಿತಗಾರ ಅಂತ ಹೆಸರಾದವರು.
ಅಂಥವರು ಪಕ್ಷದ ಅಧ್ಯಕ್ಷರಾದರೆ ಸಹಜವಾಗಿಯೇ ಪಕ್ಷಕ್ಕೆ ಲಾಭ ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವಾಗಿತ್ತು. ಈ ಲೆಕ್ಕಾಚಾರ ಅನುಷ್ಠಾನಗೊಂಡಿದ್ದರೆ ಕರ್ನಾಟಕದ ರಾಜಕೀಯ ಚಿತ್ರ ಬೇರೆಯೇ ಆಗುತ್ತಿತ್ತು. ಆದರೆ ಕಾಂಗ್ರೆಸ್ ವರಿಷ್ಠರ ಈ ಲೆಕ್ಕಾಚಾರ ತಿಳಿಯುತ್ತಿದ್ದಂತೆಯೇ ಕರ್ನಾ ಟಕದ ಮದ್ಯದ ದೊರೆಗಳು ಕಂಗಾಲಾದರು. ಅಷ್ಟೇ ಅಲ್ಲ, ವಿಜಯಮಲ್ಯ ಅವರ ನೇತೃತ್ವದಲ್ಲಿ ದಿಲ್ಲಿಗೆ ಹೋಗಲು ಸಜ್ಜಾದರು. ಅವರ ಈ ನಿರ್ಧಾರಕ್ಕೆ ಒಂದು ಕಾರಣವಿತ್ತು.
ಇದನ್ನೂ ಓದಿ: R T Vittalmurthy Column: ವಿಜಯೇಂದ್ರ-ನಿಖಿಲ್ ಈಗ ಜೋಡೆತ್ತುಗಳು
ಅದೆಂದರೆ- ಹತ್ತು ವರ್ಷಗಳ ಹಿಂದೆ ನಡೆದ ಒಂದು ಘಟನೆ. ಆ ಸಂದರ್ಭದಲ್ಲಿ ವೀರೇಂದ್ರ ಪಾಟೀಲರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರ ಸಚಿವ ಸಂಪುಟದಲ್ಲಿ ಎಂ.ರಾಜಶೇಖರ ಮೂರ್ತಿ ಹಣಕಾಸು ಮಂತ್ರಿಯಾಗಿದ್ದರು. ರಾಜಶೇಖರಮೂರ್ತಿ ಮದ್ಯದ ಲಾಬಿಯ ವಿರುದ್ಧ ಯಾವ ರೀತಿ ಮುಗಿ ಬಿದ್ದರು ಎಂದರೆ, ಕೆಲವೇ ದಿನಗಳಲ್ಲಿ ಮದ್ಯದ ದೊರೆಗಳು ಕಂಗಾಲಾಗಿ ಹೋಗಿದ್ದರು.
ಹೀಗೆ ಮುಗಿ ಬಿದ್ದ ರಾಜಶೇಖರಮೂರ್ತಿ ಅವತ್ತು 700 ಕೋಟಿ ರುಪಾಯಿಗಳಿಗಿಂತಲೂ ಅಧಿಕ ಹಣವು ಸರಕಾರದ ಬೊಕ್ಕಸದಲ್ಲಿ ಸ್ಟಾಕ್ ಇರುವಂತೆ ನೋಡಿಕೊಂಡಿದ್ದರು ಎಂದರೆ ಅವರ ಪವರ್ ಹೇಗೆ ಕೆಲಸ ಮಾಡಿತ್ತು ಎಂಬುದನ್ನು ಊಹಿಸಬಹುದು. ಒಂದು ಹಂತದಲ್ಲಿ ಅವರ ಈ ಹೊಡೆತಕ್ಕೆ ಮದ್ಯದ ದೊರೆಗಳು ಯಾವ ಮಟ್ಟಿಗೆ ಕಂಗಾಲಾಗಿದ್ದರು ಎಂದರೆ, ಹಲವರು ತಮ್ಮ ಉದ್ಯಮವನ್ನೇ ಕರ್ನಾಟಕದಿಂದ ಒಕ್ಕಲೆಬ್ಬಿಸಲು ಮುಂದಾಗಿದ್ದರು.
ಹೀಗೆ ಹತ್ತು ವರ್ಷಗಳ ಹಿಂದೆ ತಮ್ಮನ್ನು ಈ ರೀತಿ ಬಡಿದಿದ್ದ ರಾಜಶೇಖರಮೂರ್ತಿ ಇವತ್ತು ಕೆಪಿಸಿಸಿ ಅಧ್ಯಕ್ಷರಾದರೆ ಸಿಎಂ ಹುದ್ದೆಗೆ ಹತ್ತಿರವಾಗುತ್ತಿದ್ದಾರೆ ಅಂತಲೇ ಅರ್ಥವಲ್ಲವೇ? ಹಾಗಂದುಕೊಂಡ ಮದ್ಯದ ದೊರೆಗಳು ವಿಜಯ್ ಮಲ್ಯ ಅವರ ನೇತೃತ್ವದಲ್ಲಿ ದಿಲ್ಲಿಗೆ ಹೋದರು. ಅಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಸಂಕಟ ತೋಡಿಕೊಂಡರು.
ಎಷ್ಟೇ ಆದರೂ ಮದ್ಯದ ದೊರೆಗಳು ಪಾರ್ಟಿ ಫಂಡು ಕೊಡುವವರು. ಅಂಥವರು ಬಂದು ರಾಜಶೇಖರಮೂರ್ತಿಯವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಸೋನಿಯಾ ಗಾಂಧಿ ಸುಮ್ಮನಿರಲು ಸಾಧ್ಯವೇ? ಹಾಗಂತಲೇ ರಾಜಶೇಖರಮೂರ್ತಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಪ್ರಪೋಸಲ್ಲನ್ನು ಅವರು ಕೈಬಿಟ್ಟರು. ಪರಿಣಾಮ? ನೋಡನೋಡುತ್ತಿದ್ದಂತೆಯೇ ರಾಜಶೇಖರಮೂರ್ತಿ ಅವರ ಜಾಗಕ್ಕೆ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಬಂದು ಕುಳಿತರು.
ಹೀಗೆ ಅವತ್ತು ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ.ಕೃಷ್ಣ ಅವರು ಮುಂದೆ ಕರ್ನಾಟಕದ ಮುಖ್ಯಮಂತ್ರಿ ಯಾದರು. ಅಷ್ಟೇ ಅಲ್ಲ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ರಾಷ್ಟ್ರ ರಾಜಕಾರಣದ ಉತ್ತುಂಗಕ್ಕೇರಿದರು.
ಅಧಿಕಾರದ ಸನಿಹ ಬಂದಿದ್ದ ಅನಂತ್
ಇನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂತಲ್ಲ? ಆ ಸಂದರ್ಭದಲ್ಲಿ ಕಾಂಗ್ರೆಸ್ -ಜೆಡಿಎಸ್ ಮಧ್ಯೆ ಮೈತ್ರಿ ಮಾತುಕತೆ ಶುರುವಾಗಿತ್ತು. ಹೀಗೆ ಮಾತುಕತೆ ನಡೆಯುತ್ತಿದ್ದ ಕಾಲದ ಬಿಜೆಪಿ ನಾಯಕ ಅನಂತಕುಮಾರ್ ಅವರು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಒಳಗಿಂದೊಳಗೇ ಮಾತುಕತೆ ಶುರುವಿಟ್ಟು ಕೊಂಡರು. ಆ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಜತೆಗೂಡಿ ಕುಮಾರಸ್ವಾಮಿಯವರ ಜತೆ ಸಂಧಾನಸಭೆ ನಡೆಸಿದ ಅನಂತಕುಮಾರ್ ಅವರು, ಸಿಎಂ ಹುದ್ದೆಗೆ ನೀವು, ಡಿಸಿಎಂ ಹುದ್ದೆಗೆ ನಾನು ಅಂತ ಹೇಳಿ ಒಪ್ಪಿಸಿದ್ದರು. ಅವತ್ತು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಿಜೆಪಿ ತಮಗೆ ನೀಡಿದ ಆಫರ್‌ನಿಂದ ಕುಮಾರಸ್ವಾಮಿ ಖುಷಿಯಾಗಿದ್ದರು.
ಆದರೆ ಅರುಣ್ ಜೇಟ್ಲಿ ಮತ್ತು ಅನಂತಕುಮಾರ್ ಅವರು ತಮ್ಮ ಮುಂದೆ ಮಂಡಿಸಿದ ಈ ಪ್ರಪೋಸಲ್ಲನ್ನು ದೇವೇಗೌಡರ ಬಳಿ ಕೊಂಡೊಯ್ದ ಕುಮಾರಸ್ವಾಮಿಯವರಿಗೆ ನಿರಾಸೆ ಕಾದಿತ್ತು. ಯಾಕೆಂದರೆ ಅವತ್ತು ದೇವೇಗೌಡರು ಬಿಜೆಪಿ ಜತೆ ಕೈ ಜೋಡಿಸಲು ಬಿಲ್ ಕುಲ್ ಒಪ್ಪಲಿಲ್ಲ.
ಕಾರಣ? ಅದುವರೆಗಿನ ತಮ್ಮ ರಾಜಕೀಯ ಬದುಕಿನಲ್ಲಿ ಸೆಕ್ಯುಲರ್ ಶಕ್ತಿಗಳ ಜತೆ ಹೆಜ್ಜೆ ಹಾಕಿದ್ದ ಗೌಡರು ಈಗ ಮಗನಿಗಾಗಿ ಬಿಜೆಪಿ ಜತೆ ಕೈಜೋಡಿಸಲು ಸಿದ್ಧರಿರಲಿಲ್ಲ. ಪರಿಣಾಮ? ಕುಮಾರಸ್ವಾಮಿ ಮಾತ್ರವಲ್ಲ, ಬಿಜೆಪಿ ನಾಯಕ ಅನಂತಕುಮಾರ್ ಕೂಡಾ ನಿರಾಸೆ ಅನುಭವಿಸಬೇಕಾಯಿತು.
ಹಾಗೊಂದು ವೇಳೆ ಅವತ್ತು ಅನಂತಕುಮಾರ್ ಮಂಡಿಸಿದ ಪ್ರಪೋಸಲ್ಲು ಕ್ಲಿಕ್ ಆಗಿ ಕುಮಾರ ಸ್ವಾಮಿ ಸಿಎಂ ಆಗಿದ್ದರೆ, ಅನಂತಕುಮಾರ್ ಡಿಸಿಎಂ ಆಗಿದ್ದರೆ ಕರ್ನಾಟಕದ ರಾಜಕಾರಣ ಬೇರೆ ಯದೇ ದಿಕ್ಕು ಹಿಡಿಯುತ್ತಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಭವಿಷ್ಯದಲ್ಲಿ ಅನಂತ ಕುಮಾರ್ ದಿಲ್ಲಿಗೆ ಹೋಗಿ ಸೆಟ್ಲಾದರೆ ಯಡಿಯೂರಪ್ಪನವರು ಡಿಸಿಎಂ ಆಗಿ, ಸಿಎಂ ಆಗಿ ಕರ್ನಾಟಕದ ರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆದು ನಿಂತರು.
ಅರಸರು ಮೇಲೆದ್ದು ನಿಂತ ಕಥೆ
ಇನ್ನು 1969ರಲ್ಲಿ ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ವಿಭಜನೆ ಯಾಯಿತಲ್ಲ? ಆ ಸಂದರ್ಭದಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ (ಓ) ಮತ್ತು ಕಾಂಗ್ರೆಸ್ (ಆರ್) ತಲೆ ಎತ್ತಿ ನಿಂತವು. ಅವತ್ತು ತಮ್ಮ ನೇತೃತ್ವದ ಕಾಂಗ್ರೆಸ್ (ಆರ್) ಘಟಕಕ್ಕೆ ಕರ್ನಾಟಕದಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಅಂತ ಯೋಚಿಸಿದ ಇಂದಿರಾ ಗಾಂಧಿ ಅವರಿಗೆ ಹೊಳೆದಿದ್ದು ಕೋಳೂರು ಮಲ್ಲಪ್ಪನವರ ಹೆಸರು. ಯಾಕೆಂದರೆ ಅಷ್ಟೊತ್ತಿಗಾಗಲೇ ಕೋಳೂರು ಮಲ್ಲಪ್ಪನವರು ರಾಜ್ಯದ ಪ್ರಬಲ ನಾಯಕರಾಗಿ ಬೆಳೆದು ನಿಂತಿದ್ದರು.
ಮುಂಬಯಿ-ಕರ್ನಾಟಕ ಮಾತ್ರವಲ್ಲದೆ, ಹೈದ್ರಾಬಾದ್-ಕರ್ನಾಟಕ ಭಾಗದಲ್ಲೂ ಪ್ರಭಾವಿಯಾಗಿದ್ದ ಕೋಳೂರು ಮಲ್ಲಪ್ಪನವರು ತಮ್ಮ ನೇತೃತ್ವದ ಕಾಂಗ್ರೆಸ್ ಘಟಕಕ್ಕೆ ಸೂಟಬಲ್ಲು ಎಂಬುದು ಇಂದಿರಾ ಗಾಂಧಿಯವರ ಲೆಕ್ಕಾಚಾರವಾಗಿತ್ತು.
ಹಾಗಂತಲೇ ಕೋಳೂರು ಮಲ್ಲಪ್ಪನವರನ್ನು ಒಮ್ಮೆ ಸಂಪರ್ಕಿಸಿದ ಇಂದಿರಾ, “ಮಲ್ಲಪ್ಪಾಜೀ, ನೀವು ರಾಜ್ಯದಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ನಮ್ಮ ಬಯಕೆ. ಇವತ್ತು ನೀವು ಅಧ್ಯಕ್ಷ ರಾದರೆ ಮುಂದಿನ ವಿಧಾನಸಭೆ ಚುನಾವಣೆಯ ನಂತರ ಸಿಎಂ ಆಗುತ್ತೀರಿ" ಎಂದರು. ಅವತ್ತು ಇಂದಿರಾ ಗಾಂಧಿ ಅವರು ನೀಡಿದ ಪ್ರಪೋಸಲ್ಲನ್ನು ಕೋಳೂರು ಮಲ್ಲಪ್ಪನವರು ಒಪ್ಪಿದ್ದರೆ ರಾಜ್ಯ ರಾಜಕಾರಣದ ಚಿತ್ರವೇ ಬೇರೆಯಾಗುತ್ತಿತ್ತು.
ಆದರೆ ಅದನ್ನು ನಯವಾಗಿ ತಿರಸ್ಕರಿಸಿದ ಕೋಳೂರು ಮಲ್ಲಪ್ಪವರು, “ಮೇಡಂ, ಇವತ್ತು ಪಕ್ಷದ ರಾಜ್ಯ ಘಟಕಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಬೇಕೆಂಬ ನಿಮ್ಮ ಇಚ್ಛೆಗೆ ನಾನು ಋಣಿ. ಅದರೆ ಈ ಜಾಗಕ್ಕೆ ನನ್ನ ಬದಲು ಪ್ರಾಮಿಸಿಂಗ್ ಲೀಡರ್ ದೇವರಾಜ ಅರಸರನ್ನು ನೇಮಕ ಮಾಡಿ. ಯಾಕೆಂದರೆ ಅವರಿಗೆ ಶೋಷಿತ ವರ್ಗಗಳ ಬಗ್ಗೆ ತುಂಬ ಕನಸರ್ನ್ ಇದೆ. ಇದರಿಂದ ಪಕ್ಷಕ್ಕೂ ಅನುಕೂಲ, ರಾಜ್ಯಕ್ಕೂ ಅನುಕೂಲ" ಎಂದರು.
ಕೋಳೂರು ಮಲ್ಲಪ್ಪನವರ ಈ ಮಾತು ಹೇಳಿದ ನಂತರವೂ ಇಂದಿರಾ ಗಾಂಧಿ ಪಟ್ಟು ಬಿಡಲಿಲ್ಲ. “ಇಲ್ಲ, ಮಲ್ಲಪ್ಪಾಜೀ ಮತ್ತೊಮ್ಮೆ ಯೋಚಿಸಿ" ಎಂದರು. ಆದರೆ ತಮ್ಮ ಮಾತಿಗೆ ಅಂಟಿಕೊಂಡಿದ್ದ ಮಲ್ಲಪ್ಪನವರು, “ಮೇಡಂ, ನಾನು ಪಕ್ಷ ಮತ್ತು ರಾಜ್ಯಕ್ಕೆ ಅನುಕೂಲವಾಗುವ ಪ್ರಪೋಸಲ್ಲು ಕೊಟ್ಟಿದ್ದೇನೆ. ದಯವಿಟ್ಟು ಅದನ್ನು ಪರಿಗಣಿಸಿ" ಎಂದರು.
ಯಾವಾಗ ಮಲ್ಲಪ್ಪನವರು ಈ ಮಾತು ಹೇಳಿದರೋ, ಆಗ ಇಂದಿರಾ ಗಾಂಧಿ ಅವರಿಗೆ ಬೇರೆ ದಾರಿ ಉಳಿಯಲಿಲ್ಲ. ಹೀಗಾಗಿ ಅವರು ದೇವರಾಜ ಅರಸರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರು. ಹೀಗೆ ಅವತ್ತು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ದೇವರಾಜ ಅರಸರು ಮುಂದೆ ಮುಖ್ಯಮಂತ್ರಿಯಾದರು, ಸಾಮಾಜಿಕ ಕ್ರಾಂತಿಯ ಹರಿಕಾರ ಅನ್ನಿಸಿಕೊಂಡರು.
ರಾಚಯ್ಯ ಅವರಿಗೆ ಆಫರ್ ಬಂದಿತ್ತು
ಅಂದ ಹಾಗೆ, ಕರ್ನಾಟಕದಲ್ಲೀಗ ದಲಿತ ಸಿಎಂ ಕೂಗು ಕೇಳಿಸುತ್ತಿದೆಯಲ್ಲ? ಇಂಥ ಕೂಗು ಮೊದಲು ಕೇಳಿಸಿದ್ದು 1968ರಲ್ಲಿ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹೀಗೆ ನೇಮಕಗೊಂಡವರು ದಿಲ್ಲಿಗೆ ಹೋಗುವ ಮುನ್ನ ಹೊಸ ಮುಖ್ಯ ಮಂತ್ರಿಯ ಅನ್ವೇಷಣೆಗಿಳಿದರು. ಇಂಥ ಸಂದರ್ಭದಲ್ಲಿ ಅವರ ಕಣ್ಣ ಮುಂದೆ ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ ಅವರ ಹೆಸರುಗಳಿದ್ದವಾದರೂ, ಮತ್ತೊಂದು ಹೆಸರು ಅವರನ್ನು ತೀವ್ರ ವಾಗಿ ಕಾಡತೊಡಗಿತ್ತು.
ಆ ಹೆಸರು- ಬಿ.ರಾಚಯ್ಯ. ಅಷ್ಟೊತ್ತಿಗಾಗಲೇ ದಲಿತ ಸಮುದಾಯದ ಪವರ್ ಫುಲ್ ನಾಯಕರಾಗಿ ಬೆಳೆದಿದ್ದ ರಾಚಯ್ಯನವರು ನಿಜಲಿಂಗಪ್ಪ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಇಂಥವರನ್ನು ಸಿಎಂ ಹುzಗೆ ತಂದು ಕೂರಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಇಮೇಜ್ ಹೆಚ್ಚುತ್ತದೆ ಎಂಬುದು ನಿಜಲಿಂಗಪ್ಪನವರ ಲೆಕ್ಕಾಚಾರವಾಗಿತ್ತು.
ಹಾಗಂತಲೇ ಒಂದು ದಿನ ರಾಚಯ್ಯನವರನ್ನು ಕರೆಸಿಕೊಂಡ ನಿಜಲಿಂಗಪ್ಪನವರು ತಮ್ಮ ಮನ ದಿಂಗಿತವನ್ನು ತೋಡಿಕೊಂಡರು. ಆದರೆ ಅಷ್ಟೊತ್ತಿಗಾಗಲೇ ಪರ್ಯಾಯ ನಾಯಕನ ಹುದ್ದೆಗೆ ತಮ್ಮ ಸಮುದಾಯದವರೇ ಬರಬೇಕು ಅಂತ ಲಿಂಗಾಯತ ಶಾಸಕರು ಎಬ್ಬಿಸಿದ್ದ ಕೂಗು ರಾಚಯ್ಯ ನವರಿಗೆ ಗೊತ್ತಿತ್ತಲ್ಲ? ಹೀಗಾಗಿ ತಾವು ನಿಜಲಿಂಗಪ್ಪನವರ ಪ್ರಪೋಸಲ್ಲು ಒಪ್ಪಿದರೆ ಪಕ್ಷದಲ್ಲಿ ಒಡಕು ಕಾಣಿಸಬಹುದು ಅಂತ ಆತಂಕಗೊಂಡ ರಾಚಯ್ಯನವರು, “ಬೇಡ, ನನಗೆ ಸಿಎಂ ಹುದ್ದೆ ಬೇಡ" ಎಂದು ಬಿಟ್ಟರು