Rangaswamy Mookanahalli Column: ಬಣ್ಣ ಕಳೆದು ಕಪ್ಪು ಬಿಳುಪಾಗುತ್ತಿದೆ ಬದುಕು !
ಮೂರು ದಶಕದ ಹಿಂದೆ ಯಾವುದಾದರೂ ಊರಿಗೆ ಹೋದರೆ ಆ ಊರಿನ ವಿಶೇಷತೆ ಕಣ್ಣಿಗೆ ಕಾಣುತ್ತಿತ್ತು. ಹೆಂಚಿನ ಮನೆ ಇರಬಹುದು, ಹೂವು, ಹಣ್ಣು, ಜನರು ಮಾತಾಡುವ ರೀತಿ, ಅವರು ನೀಡುವ ಪ್ರೀತಿ, ಹೀಗೆ ಒಟ್ಟಾರೆ ಆ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದ ಒಂದಷ್ಟು ವಿಶೇಷತೆಯನ್ನು ಅನುಭವಿಸಿ ಬರುತ್ತಿದ್ದೆವು. ಇವತ್ತಿಗೆ ಶಿವಮೊಗ್ಗದ ಬಡಾವಣೆ, ಬೆಂಗಳೂರಿನ ಬಡಾವಣೆ, ಮೈಸೂರಿನ ಬಡಾವಣೆ ಎಲ್ಲವೂ ಒಂದೇ ಆಗಿ ಬಿಟ್ಟಿದೆ. ಶೆಟ್ಟರ ದಿನಸಿ ಅಂಗಡಿಗಳು ಕಣ್ಮರೆಯಾಗಿವೆ.
-
ವಿಶ್ವರಂಗ
ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತ ಸಾಗುತ್ತಿದೆ. ಹಿಂದೆ ಒಂದು ದಶಕದಲ್ಲಿ ಆಗುತ್ತಿದ್ದ ಬದಲಾವಣೆಗಳು ಇಂದು ವರ್ಷದಲ್ಲಿ, ಹೆಚ್ಚೆಂದರೆ ಎರಡು ವರ್ಷದಲ್ಲಿ ಆಗುತ್ತಿದೆ. ತಂತ್ರಜ್ಞಾನ ಎನ್ನುವುದು ಇಂದು ಜಗತ್ತನ್ನು ಆವರಿಸಿಕೊಂಡು ಬಿಟ್ಟಿದೆ. ಮುಂಬರುವ ವರ್ಷಗಳಲ್ಲಿ ಜಗತ್ತನ್ನು ಆಳುವುದು, ನಿಯಂತ್ರಣದಲ್ಲಿಡುವುದು ತಂತ್ರಜ್ಞಾನ, ತಂತ್ರಜ್ಞಾನದ ಮೇಲೆ ನಿಯಂತ್ರಣ ಹೊಂದಿದ ಜನ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಮಾತುಗಳನ್ನು ಕಳೆದ ಐದಾರು ವರ್ಷದಲ್ಲಿ ನಾನು ಹತ್ತಾರು ಬಾರಿ ಉಚ್ಚರಿಸಿದ್ದೇನೆ, ಬರೆದಿದ್ದೇನೆ, ಆದರೂ ಇದನ್ನು ಎಷ್ಟು ಬಾರಿ ಹೇಳಿದರೂ ಕಡಿಮೆ ಎನ್ನಿಸುತ್ತದೆ.
ಏಕೆಂದರೆ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ಜನಸಾಮಾನ್ಯ ಅನುಭವಿಸುತ್ತಿದ್ದಾನೆ. ಆದರೆ ಅದರ ಫಲಿತಾಂಶ ಅಥವಾ ಔಟ್‌ಕಮ್ ಬಗ್ಗೆ ಆತನಿಗೆ ಅರಿವಿಲ್ಲ. ಇವೆಲ್ಲವೂ ಆತನನ್ನು ನಿಯಂತ್ರಿಸಲು ಹೆಣೆದಿರುವ ಬಲೆ ಎನ್ನುವುದು ಆತನಿಗೆ ಅರಿವಾಗುತ್ತಿಲ್ಲ. ನೀವೇ ಗಮನಿಸಿ ನೋಡಿ, ಜಗತ್ತಿನ ಒಂದು ವರ್ಗ ಬದುಕಿನ ಆಟವನ್ನು ವೇಗವಾಗಿ ತಮ್ಮಿಚ್ಛೆಯ ದಾರಿಯಲ್ಲಿ ಒಯ್ಯುತ್ತಿzರೆ. ಜನಸಾಮಾನ್ಯನಿಗೆ ಅದರ ಹಿಂದೆ ಹೋಗುವುದು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಈ ಆಟದಲ್ಲಿ ಅಲ್ಪಸ್ವಲ್ಪ ತಿಳುವಳಿಕೆ ಉಳ್ಳವರು ಕೂಡ ಹೇಗೋ ಬದುಕುತ್ತಾರೆ, ಉಳಿದವರ ಪಾಡೇನು? ನಾನು ಭಾರತದಲ್ಲಿ, ಕರ್ನಾಟಕದಲ್ಲಿ ಸಂಚರಿಸಿರುವುದು ಕಡಿಮೆ. ಹೀಗಿದ್ದೂ ನನಗೆ ಅನೇಕ ಬದಲಾವಣೆ ಗಳು ಕಣ್ಣಿಗೆ ಕಾಣುತ್ತಿವೆ.
ಮೂರು ದಶಕದ ಹಿಂದೆ ಯಾವುದಾದರೂ ಊರಿಗೆ ಹೋದರೆ ಆ ಊರಿನ ವಿಶೇಷತೆ ಕಣ್ಣಿಗೆ ಕಾಣುತ್ತಿತ್ತು. ಹೆಂಚಿನ ಮನೆ ಇರಬಹುದು, ಹೂವು, ಹಣ್ಣು, ಜನರು ಮಾತಾಡುವ ರೀತಿ, ಅವರು ನೀಡುವ ಪ್ರೀತಿ, ಹೀಗೆ ಒಟ್ಟಾರೆ ಆ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದ ಒಂದಷ್ಟು ವಿಶೇಷತೆಯನ್ನು ಅನುಭವಿಸಿ ಬರುತ್ತಿzವು. ಇವತ್ತಿಗೆ ಶಿವಮೊಗ್ಗದ ಬಡಾವಣೆ, ಬೆಂಗಳೂರಿನ ಬಡಾವಣೆ, ಮೈಸೂರಿನ ಬಡಾವಣೆ ಎಲ್ಲವೂ ಒಂದೇ ಆಗಿ ಬಿಟ್ಟಿದೆ. ಶೆಟ್ಟರ ದಿನಸಿ ಅಂಗಡಿಗಳು ಕಣ್ಮರೆಯಾಗಿವೆ.
ಇದನ್ನೂ ಓದಿ:Rangaswamy Mookanahalli Column: ವಲಸಿಗರ ಬದುಕು ಸುಲಭವಲ್ಲ!
ಎಡೆ ಸೂಪರ್ ಮಾರ್ಕೆಟ್, ಮಾಲ್‌ಗಳು ತಲೆ ಎತ್ತಿವೆ. ಮನೆ ಮುಂದೆ ತರಕಾರಿ ತಳ್ಳಿಕೊಂಡು ಬರುತ್ತಿದ್ದವರ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ. ಇಂಟರ್ನೆಟ್ ಹಾವಳಿಯ ಕಾರಣ, ಮಾತಿನಲ್ಲಿನ ಸೊಗಡು ಕೂಡ ಕಣ್ಮರೆಯಾಗುತ್ತಿದೆ. ಯಾವುದೇ ಲಿಂಗಭೇದವಿಲ್ಲದೆ ಎಲ್ಲರನ್ನೂ, ಎಲ್ಲಾ ಊರುಗಳಲ್ಲೂ ಬ್ರೋ ಎನ್ನುವುದು ಸಾಮಾ ನ್ಯವಾಗಿದೆ. ಆಯಾ ಊರಿನ ಸಾಂಪ್ರದಾಯಿಕ ತಿಂಡಿಗಳು, ಇವತ್ತಿಗೆ ಕೆಲವೇ ಮನೆಗಳಲ್ಲಿ ಮಾತ್ರ ಉಳಿದುಕೊಂಡಿವೆ.
ಎಡೆ ಚೈನೀಸ್, ನಾರ್ತ್ ಇಂಡಿಯನ್ ಆಹಾರಗಳ ಸಾಮ್ರಾಜ್ಯ. ಪುಟಾಣಿ ಊರುಗಳಲ್ಲಿ ಸಹ ತರಕಾರಿ ಮಾರಲು ದೈತ್ಯ ಕಾರ್ಪೊರೇಟ್ ಹೌಸಿನ ಫ್ರಾಂಚೈಸ್ ಬಂದು ಕುಳಿತಿದೆ. ನಿಧಾನವಾಗಿ ಸಣ್ಣಪುಟ್ಟ ಊರುಗಳಲ್ಲಿ ಸಹ ಜನ ಅಪರಿಚಿತರಾಗುತ್ತಿದ್ದಾರೆ. ಕಳೆದ ಐದಾರು ವರ್ಷದಲ್ಲಿ ಮಂಗಳೂರು, ಉಡುಪಿ, ದಾವಣಗೆರೆ, ಶಿವಮೊಗ್ಗ, ಸಾಗರ ಸೇರಿದಂತೆ ಹಲವಾರು ನಗರಗಳಿಗೆ ಭೇಟಿ ನೀಡಿದೆ.
ತೀರಾ ದೊಡ್ಡ ಮಟ್ಟದ ವ್ಯತ್ಯಾಸ ಕಾಣಲಿಲ್ಲ. ಬೆಂಗಳೂರು ನಗರವನ್ನು ಈ ನಗರಗಳು ಚೆನ್ನಾಗಿ ಕಾಪಿ ಹೊಡೆದಿವೆ. ಸ್ವಚ್ಛತೆಯಲ್ಲೂ ಬೆಂಗಳೂರಿನೊಂದಿಗೆ ಸ್ಪರ್ಧೆಗೆ ಬಿದ್ದಿವೆ. ಇಂತಹ ಊರುಗಳಲ್ಲಿ ಜನರ ಬಳಿ ಹಣದ ಹರಿವು ಕಂಡು ಅಚ್ಚರಿಯೂ ಆಗಿದೆ. ಇವತ್ತಿಗೆ ನಗರ, ಹಳ್ಳಿ ಎನ್ನುವ ಯಾವ ವ್ಯತ್ಯಾಸವೂ ಇಲ್ಲದೆ ಎಲ್ಲರೂ ಹಣದ ಹಿಂದೆ ಬಿದ್ದಿzರೆ ಎನ್ನುವುದು ಕೂಡ ಕಣ್ಣಿಗೆ ಕಾಣುವ ಸತ್ಯ. ಈ ಅಬ್ಬರದಲ್ಲಿ ಬದುಕು ಬೈನರಿಯಾಗಿದೆ. ಹಳ್ಳಿಗಳು ತಮ್ಮಲ್ಲಿದ್ದ ಗುಣ ವಿಶೇಷಗಳನ್ನು ಕಳೆದು ಕೊಂಡು ಇಂದಿಗೆ ಒಂದೇ ಆಗಿಬಿಟ್ಟಿವೆ. ಹೀಗಾಗಿ ಇಲ್ಲಿ ತಪ್ಪು ಮಾಡಲು ಅವಕಾಶಗಳಿಲ್ಲ. ಖುಷಿ ಯಿಂದ ಹಾಕಿಸಿಕೊಂಡಿರುವ ಗಾಣಕ್ಕೆ ತಲೆ ಕೊಟ್ಟು ದುಡಿಯುತ್ತಿದ್ದರೆ ಬದುಕು ಹೇಗೋ ಸಾಗುತ್ತದೆ. ಇಲ್ಲ ನನ್ನಿಚ್ಛೆಯಂತೆ ಬದುಕುತ್ತೇನೆ ಎಂದು ಏನಾದರೂ ಹೊಸತನ್ನು ಮಾಡಲು ಹೋದರೆ ಅಲ್ಲಿಗೆ ಬದುಕು ಮೂರಾಬಟ್ಟೆ !
ಇದೇಕಿಷ್ಟು ಋಣಾತ್ಮಕ ಮಾತು? ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ, ಅದು ಸಹಜ. ಆದರೆ ನಾನು ಬರೆದಿರುವ ಸಾಲುಗಳು ಋಣಾತ್ಮಕವಲ್ಲ. ಪೇಸಿಮಿಸ್ಟಿಕ್, ಆಪ್ಟಿಮಿಸ್ಟಿಕ್ ತರಹ ರಿಯಲಿಸ್ಟಿಕ್ ಎನ್ನುವುದು ಕೂಡ ಇದೆ. ಇಲ್ಲಿ ಹೇಳಿರುವುದು ರಿಯಲಿಸ್ಟಿಕ್ ಮಾತುಗಳು. ಅಭಿವೃದ್ಧಿಯ ಹೆಸರಿನಲ್ಲಿ ಜನರ ಬದುಕು ಇನ್ನಷ್ಟು ಹಸನಾಗಬೇಕು, ಆದರೆ ಅದಾಗುತ್ತಿಲ್ಲ. ಬದಲಿಗೆ ನಿನ್ನೆಯ ಜೀವನವನ್ನು ಇಂದು ನಡೆಸಲು ತಿಣುಕಬೇಕಾದ ಪರಿಸ್ಥಿತಿ ಉಂಟಾಗಿದೆ.
ಇದು ಜಾಗತಿಕ ಸಮಸ್ಯೆ. ದುಬೈ ಮತ್ತು ಯೂರೋಪಿನ ದೇಶಗಳನ್ನು ಕಳೆದ 25 ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ. ದಶಕಗಳ ಹಿಂದಿನ ಜೀವನ ಇಂದಿಲ್ಲ. ಹಿಂದಿದ್ದ ಆ ಸುಖ, ಶಾಂತಿ, ನೆಮ್ಮದಿ ಮರೆಯಾಗಿದೆ. ಜಾಗತಿಕ ವಿತ್ತ ಜಗತ್ತು ಟ್ರಿಲಿಯನ್ ಮೇಲೆ ಟ್ರಿಲಿಯನ್ ಆರ್ಥಿಕತೆಯನ್ನು ದಾಖಲಿಸುತ್ತ ಮುಂದೆ ಸಾಗುತ್ತಿದೆ. ಆದರೆ ಈ ಅಬ್ಬರದಲ್ಲಿ ಸದ್ದಿಲ್ಲದೇ ಮಧ್ಯಮ ವರ್ಗ ಎನ್ನುವ ಒಂದು ಪ್ರಭೇದ ಮರೆಯಾಗುತ್ತಿದೆ. ಇದು ಭಾರತ ಮಾತ್ರವಲ್ಲ ವಿಶ್ವದೆಡೆ ಆಗುತ್ತಿದೆ.
ಇಂದು ಅತ್ಯಂತ ವೇಗವಾಗಿ ಮರೆಯಾಗುತ್ತಿರುವ ಪ್ರಭೇದ ಯಾವುದು ಗೊತ್ತಾ? ಎನ್ನುವ ಒಂದು ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದೆ. ಅದನ್ನು ಸ್ವೀಕರಿಸುವರೇ ಇರಲಿಲ್ಲ. ಅದೇ ಒಂದು ಜೋಕ್ ಬರೆದು ಹಾಕಿದರೆ ಅದಕ್ಕೆ ನೂರಾರು ಪ್ರತಿಕ್ರಿಯೆಗಳು ಬರುತ್ತವೆ. ಹೀಗೇಕೆ? ಇದಕ್ಕೂ ಉತ್ತರ ಸರಳ. ನಮ್ಮ ಅರಿವಿಗೆ ಬರದೇ ಹೋದರೆ ಅಂದರೆ ಯಾವುದೋ ಒಂದು ವಿಷಯ ಸಮಸ್ಯೆ ಎಂದು ಅನ್ನಿಸದಿದ್ದರೆ? ಇಂದು ಆಗುತ್ತಿರುವುದು ಕೂಡ ಅದೇ. ಹಣದುಬ್ಬರ ಯಾವ ಮಟ್ಟದಲ್ಲಿದೆ ಎಂದರೆ ಸದ್ದಿಲ್ಲದೇ ಮಧ್ಯಮವರ್ಗ ಎನ್ನುವ ಒಂದು ವರ್ಗ ಕುಸಿತ ಕಾಣುತ್ತಿದೆ. ಆಶ್ಚರ್ಯವೆಂದರೆ ಆ ವರ್ಗಕ್ಕೆ ಏನು ಆಗುತ್ತಿದೆ ಎನ್ನುವುದು ತಿಳಿಯುತ್ತಿದೆ ಆದರೆ ನಿಖರವಾಗಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ.
ಏನಿಲ್ಲ, ನಿಮ್ಮ ಖರೀದಿ ಶಕ್ತಿ ಕುಗ್ಗುತ್ತಿದೆ. ಎಡೆ ನಾನು ಮಧ್ಯಮವರ್ಗಕ್ಕೆ ಸೇರಿದವನು ಎಂದು ಹೇಳಿಕೊಂಡು ತಿರುಗುವ ನಾವೆಲ್ಲರೂ ಅಲ್ಲಿಂದ ಕುಸಿತ ಕಂಡು ಬಡವರಾಗಿದ್ದೇವೆ. ಈ ಆರ್ಥಿಕ ವ್ಯವಸ್ಥೆಯ ವಿಪರ್ಯಾಸ ನೋಡಿ! ಉಳ್ಳವರು ಇನ್ನಷ್ಟು ಗಳಿಸುತ್ತಿದ್ದಾರೆ, ಸಮಾಜದ ಇನ್ನೊಂದು ವರ್ಗದ ಜನರ ಆದಾಯದ ಒಂದಂಶವನ್ನು ಅವರು ಕಸಿಯುತ್ತಿದ್ದಾರೆ. ಹೀಗಾಗಿ ಹಿಂದಿನಂತೆ ಸಮಾಜದಲ್ಲಿ ಹೆಚ್ಚು ಆರ್ಥಿಕ ವರ್ಗಗಳಿಲ್ಲ!
ಇನ್ನೊಂದೈದು ವರ್ಷದಲ್ಲಿ ಉಳಿಯುವುದು ಎರಡೇ ಪ್ರಭೇದ, ಬಡವ ಮತ್ತು ಶ್ರೀಮಂತ. ಈಗ ನಾನು ಹೇಳಲು ಹೋಗುವ ಅಂಶಗಳು ನಿಮ್ಮ ಅರಿವಿಗೂ ಬಂದಿರುತ್ತದೆ ಎಂದುಕೊಳ್ಳುವೆ. ನೀವೇ ಗಮನಿಸಿ ನೋಡಿ. ಸಣ್ಣ ಪುಟ್ಟ ಊರುಗಳಲ್ಲಿ ಕೂಡ ಸೂಪರ್ ಮಾರ್ಕೆಟ್ ಚೈನ್ ಗಳು ರಾರಾಜಿಸು ತ್ತಿವೆ. ಜನ ಹಿಂದಿನಿಂದ ಇದ್ದ ಅಂಗಡಿಗೆ ಹೋಗಲು ಬಯಸುತ್ತಿಲ್ಲ. ಹತ್ತಾರು ವರ್ಷದಿಂದ ಸೊಪ್ಪು, ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ಹಳ್ಳಿಯ ಬಡ ವ್ಯಾಪಾರಿಯ ವ್ಯಾಪಾರವನ್ನು ಕೂಡ ದೊಡ್ಡ ಬ್ರ್ಯಾಂಡ್‌ಗಳು ಕಸಿಯುತ್ತಿವೆ.
ಇದು ಜಾಗತಿಕ. ಇದು ಕೇವಲ ತರಕಾರಿ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಬದುಕಿನ ಎ ಮಜಲುಗಳಲ್ಲಿ ಇದು ನಿಜ. ಮನೆಪಾಠದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಅಲ್ಲಿಗೂ ಬ್ರಾಂಡ್ ದಾಳಿಯಿಟ್ಟಿದೆ. ಹೋಟೆಲ್, ಪಾದರಕ್ಷೆ, ಎಲೆಕ್ಟ್ರಾನಿಕ್ಸ್, ಹೀಗೆ ಎಡೆಯೂ ದೊಡ್ಡ ಕಾರ್ಪೊರೇಟ್ ಹೌಸ್‌ಗಳು ಬಂದಿವೆ. ಇದರಿಂದ ಕೇವಲ ಒಂದು ಸಂಸ್ಥೆ ಬೆಳೆಯುತ್ತದೆ. ಸಾವಿರಾರು ವ್ಯಾಪಾರಿಗಳು ಅವನತಿ ಕಾಣುತ್ತಾರೆ. ಸಣ್ಣ ಪುಟ್ಟ ವರ್ತಕರು ಮಾಯವಾಗುತ್ತಿದ್ದಾರೆ.
ನೀವು ಮುಂದುವರೆದ ದೇಶಗಳಲ್ಲಿ ವ್ಯಕ್ತಿಯೊಬ್ಬ ದಿನಸಿ ಅಂಗಡಿ ಇಟ್ಟುಕೊಂಡು ಕುಳಿತದ್ದು ಇಂದಿಗೆ ಕಾಣಲಾರಿರಿ. ಮೂರು ದಶಕದ ಹಿಂದೆ ಇದು ಸಾಮಾನ್ಯವಾಗಿತ್ತು. ಭಾರತದಲ್ಲಿ ಇಂದಿಗೂ ಈ ವ್ಯವಸ್ಥೆಯಿದೆ. ಆದರೆ ಅವರ ಸಂಖ್ಯೆ ಗಣನೀಯವಾಗಿ ಮತ್ತು ವೇಗವಾಗಿ ಕುಸಿತವನ್ನು ಕಾಣು ತ್ತಿದೆ. ಏರುತ್ತಿರುವ ಹಣದುಬ್ಬರ, ಕುಸಿಯುತ್ತಿರುವ ಖರೀದಿ ಶಕ್ತಿ ಇನ್ನೊಂದು ಜಾಗತಿಕವಾಗಿ ಬಾಧಿಸು ತ್ತಿರುವ ಸಮಸ್ಯೆಯಾಗಿದೆ. ಹಣದುಬ್ಬರ ಜಗತ್ತಿನಾದ್ಯಂತ ಅತಿ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಆದಾಯ ಏರುತ್ತಿಲ್ಲ.
ಹೀಗಾಗಿ ಖರೀದಿ ಶಕ್ತಿ ಗಣನೀಯವಾಗಿ ಕುಸಿತ ಕಂಡಿದೆ. ಯೂರೋಪು ಮತ್ತು ಅಮೆರಿಕಾದಂತಹ ದೇಶದಲ್ಲಿ ಹೆಚ್ಚಿರುವ ಆಹಾರ ಪದಾರ್ಥಗಳ ಬೆಲೆ ಜನರನ್ನು ಸುಡುತ್ತಿದೆ. ಅದು ಅವರ ಗಮನಕ್ಕೆ ಬಂದಿದೆ. ಭಾರತದಲ್ಲಿ ಕೂಡ ಇದರ ಬಿಸಿ ಬಹಳಷ್ಟಿದೆ. ಬಡವನನ್ನು ಪುಕ್ಕಟೆ, ಡಿಸ್ಕೌಂಟ್ ಕಾಪಾ ಡಿದೆ. ಶ್ರೀಮಂತರಿಗೆ ಬಿಸಿ ತಟ್ಟುವುದಿಲ್ಲ. ಎ ತರಹದ ಪೆಟ್ಟು ಬೀಳುವುದು ಮಾತ್ರ ಮಧ್ಯಮವರ್ಗ ಎನ್ನುವ ಎಲ್ಲವನ್ನು ಸಹಿಸುವ, ಮಾತನಾಡದ ವರ್ಗದ ಮೇಲೆ ಮಾತ್ರ. ಅಚ್ಚರಿಯೆಂದರೆ ಈ ವಿತ್ತ ಜಗತ್ತು ನಡೆಯಲು ಈ ವರ್ಗ ಬೇಕೇಬೇಕು!
ವ್ಯವಸ್ಥೆಯನ್ನು ಕಟ್ಟುವವರಿಗೆ ಇದೇಕೆ ತಿಳಿಯುತ್ತಿಲ್ಲ? ಈ ವರ್ಗವೇ ಸಮಾಜದ, ಆರ್ಥಿಕತೆಯ ಬೆನ್ನೆಲುಬು. ವಿಭಜಿತ ಸಮಾಜ ಎನ್ನುವುದು ಇವತ್ತಿನ ರಿಯಾ ಲಿಟಿ. ಜಗತ್ತಿನ ಯಾವುದೇ ದೇಶವನ್ನು ತೆಗೆದುಕೊಳ್ಳಿ, ಅಲ್ಲಿಯು ಯಾವುದರರಲ್ಲೂ ಸಮಾಜದಲ್ಲಿ ಸಹಮತವಿಲ್ಲ. ಯಾವುದೇ ವಿಷಯ ಕ್ಕೂ 20/25 ಪ್ರತಿಶತ ಒಪ್ಪಿಗೆ ಸಿಗುತ್ತಿಲ್ಲ. ಯೂರೋಪಿನ ದೇಶಗಳಲ್ಲಿ ಇದು ಇನ್ನೂ ಹೆಚ್ಚು. ಜಗತ್ತು ಇಂದಿಗೆ ಛಿದ್ರವಾದ ಕನ್ನಡಿ. ಯಾವ ತುಂಡಿನಲ್ಲೂ, ಎಲ್ಲಾ ತುಂಡಿನಲ್ಲೂ ನಮ್ಮ ಮುಖ ಕಾಣುತ್ತದೆ, ಆದರೆ ಯಾವುದರಲ್ಲೂ ಇಲ್ಲದ ಖಾಲಿತನವೂ ಜೊತೆಯಾಗಿದೆ. ಮೋದಿಯಂತಹ ಮಹಾನ್ ನಾಯಕರಿಗೂ ಸಿಕ್ಕಿರುವುದು 35 ಪ್ರತಿಶತಕ್ಕಿಂತ ಚೂರು ಹೆಚ್ಚು ಬೆಂಬಲ ಮಾತ್ರ ಎನ್ನುವುದನ್ನು ಮರೆಯಬಾರದು.
ಸಹಮತ ಎನ್ನುವುದು ಇವತ್ತಿಗೆ ಸಮಾಜದಲ್ಲಿ ಇಲ್ಲವೆನ್ನುವಷ್ಟು ಹೆಚ್ಚಾಗಿದೆ. ಪ್ರತಿ ವಿಚಾರದಲ್ಲೂ ಕಚ್ಚಾಟ ಸಾಮಾನ್ಯವಾಗಿದೆ. ಎಡೆ ಮನೆಮಾಡಿರುವ ಅನಿಶ್ಚಿತತೆ ಎನ್ನುವ ಭೂತದ ಬಗ್ಗೆ ನಾವು ಹೆಚ್ಚು ಚಿಂತಿಸಬೇಕು. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಮಾಜದಲ್ಲಿ ಸ್ಥಿರತೆ, ಮನಸ್ಸಿನಲ್ಲಿ ಶಾಂತಿ ನೆಮ್ಮದಿಯಿzಗ ಬದುಕು ಸುಂದರ. ಆದರೆ ಇಂದಿಗೆ ಜಾಗತಿಕವಾಗಿ ಇದನ್ನು ಕದಡಲಾಗಿದೆ.
ನಾಳೆಯ ಬಗ್ಗೆ ಭರವಸೆಯನ್ನು ಜನಸಾಮಾನ್ಯನಿಂದ ಕಸಿಯಲಾಗಿದೆ. ಅಬ್ಬಾ ಇಂದು ಬದುಕಿದೆ ಎನ್ನುವ ಮಟ್ಟಕ್ಕೆ ಜೀವನವನ್ನು ತರಲಾಗಿದೆ. ಇಂದಿಗೆ 14/16 ತಾಸು ದುಡಿಯದಿದ್ದರೆ ಬದುಕಲು ಸಾಧ್ಯವಿಲ್ಲ ಎನ್ನುವ ವ್ಯಕ್ತಿಯ ಬಳಿ ನಾಳೆಯ ಬಗ್ಗೆ ಚಿಂತೆ ಮಾಡುವಷ್ಟು ಸಮಯವೆಲ್ಲಿದೆ? ಇನ್ನೊಂದು ಸಾಮಾನ್ಯವಾಗಿ ಕಂಡು ಬರುವುದು ಮೊನಾಪಲಿ ಮತ್ತು ನೆಪೋಟಿಸಂ! ತಮ್ಮ ನಡುವಿನ ನೆಟ್‌ವರ್ಕ್‌ನ ತಮ್ಮ ಸಾಮ್ರಾಜ್ಯವನ್ನು ಉಳಿಸಿ ಬೆಳೆಸಿಕೊಳ್ಳುತ್ತಿದ್ದಾರೆ.
ಸಾವಿರಕ್ಕೋ ಲಕ್ಷಕ್ಕೋ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಶ್ರಮದಿಂದ, ಬುದ್ಧಿವಂತಿಕೆಯಿಂದ, ಚಿಟಿಕೆ ಅದೃಷ್ಟದಿಂದ ಕೂಡ ಮೇಲೇರಿದ ಉದಾಹರಣೆಗಳನ್ನು ಬಿಟ್ಟರೆ, ಎಡೆ ಅವರದೇ ಸಾಮ್ರಾಜ್ಯ. ಇಲ್ಲಿ ಯಾರೂ ಇಂಚು ಜಾಗ ಬಿಟ್ಟುಕೊಡುವುದಿಲ್ಲ. ನಮ್ಮ ಜಾಗವನ್ನು ಸೃಷ್ಟಿಕೊಳ್ಳಲು ಕೂಡ ನೂರೆಂಟು ಅಡ್ಡಿ ಆತಂಕಗಳು. ಇಲ್ಲಿ ನಮ್ಮ ಜಾಗ ಸೃಷ್ಟಿಸಿಕೊಳ್ಳಲು ವಿಶೇಷ ಗುಣಗಳ ಅವಶ್ಯಕತೆ ಯಿದೆ. ಅದೇನೂ ಇಲ್ಲದ ಜನಸಾಮಾನ್ಯನನ ಬದುಕುವ ಹಕ್ಕನ್ನು ಅವನಿಗೆ ಗೊತ್ತಿಲ್ಲದೇ ಕಸಿಯಲಾಗಿದೆ.
ಇಂದಿಗೆ ಜಾಗತಿಕ ವಿತ್ತ ಜಗತ್ತು ಸಾಗುತ್ತಿರುವ ರೀತಿ ಸರಿಯಿಲ್ಲ. ಅದನ್ನು ಬದಲಿಸದಿದ್ದರೆ ಮುಂದಿನ ಐದು ವರ್ಷದಲ್ಲಿ ಜಗತ್ತಿನಲ್ಲಿ ಉಳಿಯುವುದು ಬಡವ ಮತ್ತು ಶ್ರೀಮಂತ ಎನ್ನುವ ವರ್ಗಗಳು ಮಾತ್ರ. ಆದರೆ ಆಶ್ಚರ್ಯವೆಂದರೆ ನಾವು ಇದಕ್ಕೆ ಸಂಘಟಿತರಾಗುವುದಿಲ್ಲ, ಇದನ್ನು ವಿರೋಧಿಸುವು ದಿಲ್ಲ! ಆದರೆ ಕ್ಷಣದಲ್ಲಿ ಜಾತಿ, ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ಹೊಡೆದಾಟಕ್ಕೆ ಸಿದ್ಧವಾಗುತ್ತೇವೆ. ಜಗತ್ತಿನ ಯಾವುದೇ ದೇಶವನ್ನು ನೀವು ಗಮನಿಸಿ ನೋಡಿ ಅ ಮೇಲೆ ಹೇಳಿದ ಬದಲಾವಣೆಗಳಾಗಿವೆ, ಅದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗಿದೆ.