ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಲಗೇಜ್‌ ನಿರ್ವಹಣೆ

ಜಪಾನಿನಲ್ಲಿ ಒಂದು ವಿಶೇಷ ಲಗೇಜ್ ಸರ್ವಿಸ್ ಇದೆ. ನಾನು ಕ್ಯೊಟೋದಲ್ಲಿ ಉಳಿದುಕೊಂಡ ಹೋಟೆಲಿನಲ್ಲಿಯೇ ನನ್ನ ಬ್ಯಾಗುಗಳನ್ನು ನೀಡಿದರೆ ಹಾಗೂ ಮುಂದೆ ನಾನು ಉಳಿಯಲಿರುವ ಟೋಕಿಯೋ ಹೋಟೆಲಿನ ವಿವರಗಳನ್ನು ಕೊಟ್ಟರೆ, ಅದೇ ದಿನ ಸಾಯಂಕಾಲ ಅಥವಾ ಮರುದಿನ ಬೆಳಗಿನ ಹೊತ್ತಿಗೆ ಬ್ಯಾಗುಗಳು ಬಂದಿರುತ್ತವೆ.

Vishweshwar Bhat Column: ಲಗೇಜ್‌ ನಿರ್ವಹಣೆ

-

ಸಂಪಾದಕೀಯ ಸದ್ಯಶೋಧನೆ

ಜಪಾನಿನಲ್ಲಿ ನನಗೆ ಇಷ್ಟವಾದ ಸೇವೆಗಳ ಪೈಕಿ ಅಂದ್ರೆ ಲಗೇಜುಗಳ ಸಾಗಾಟ. ನೀವು ಅಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ, ಜತೆಯಲ್ಲಿ ನಿಮ್ಮ ಬ್ಯಾಗು, ಸೂಟ್‌ ಕೇಸುಗಳನ್ನು ಹೊತ್ತು ಕೊಂಡು ಹೋಗಬೇಕಿಲ್ಲ.

ನಾವು ಕ್ಯೊಟೋದಿಂದ ಟೋಕಿಯೋಕ್ಕೆ ಹೋಗುವವರಿದ್ದೆವು. ನನ್ನ ಜತೆ ಮಣಭಾರದ ಎರಡು ಬ್ಯಾಗುಗಳಿದ್ದವು. ಅವನ್ನು ಹೋಟೆಲಿನಿಂದ ಕಾರಿನಲ್ಲಿ ಟ್ಯಾಕ್ಸಿಯಲ್ಲಿ ಹಾಕಿ ಕೊಂಡು, ಬುಲೆಟ್ ಟ್ರೇನ್ ಸ್ಟೇಷನ್ ತನಕ ತಳ್ಳಿಕೊಂಡು, ಅನಂತರ ಟ್ರೇನ್ ಬರುತ್ತಿರು ವಂತೆ, ಆ ಬ್ಯಾಗುಗಳನ್ನು ಬೋಗಿಯೊಳಗೆ ತೂರಿಸಿ, ನಂತರ ಆ ಎರಡು ಬ್ಯಾಗುಗಳನ್ನು ಜನನಿಬಿಡ ಬೋಗಿಯಲ್ಲಿ ಇಡುವುದು, ಟೋಕಿಯೋ ಬರುತ್ತಿರುವಂತೆ ಅವುಗಳನ್ನು ಇಳಿಸಿಕೊಂಡು, ಪುನಃ ಟ್ಯಾಕ್ಸಿಯಲ್ಲಿ ಹೇರಿಕೊಂಡು ಹೋಟೆಲಿಗೆ ತೆಗೆದುಕೊಂಡು ಹೋಗುವುದು ನಿಜಕ್ಕೂ ಅತ್ಯಂತ ಯಾತನಾಮಯ!

ಇದನ್ನೂ ಓದಿ: Vishweshwar Bhat Column: ಸ್ಟಾರ್‌ ಹೋಟೆಲಿನಲ್ಲಿ ಕೆಲಸ ಮಾಡಿದವರು ಸಿಕ್ಕಾಗ ಏನು ಮಾಡಬೇಕು ?

ಆದರೆ ಜಪಾನಿನಲ್ಲಿ ಒಂದು ವಿಶೇಷ ಲಗೇಜ್ ಸರ್ವಿಸ್ ಇದೆ. ನಾನು ಕ್ಯೊಟೋದಲ್ಲಿ ಉಳಿದುಕೊಂಡ ಹೋಟೆಲಿನಲ್ಲಿಯೇ ನನ್ನ ಬ್ಯಾಗುಗಳನ್ನು ನೀಡಿದರೆ ಹಾಗೂ ಮುಂದೆ ನಾನು ಉಳಿಯಲಿರುವ ಟೋಕಿಯೋ ಹೋಟೆಲಿನ ವಿವರಗಳನ್ನು ಕೊಟ್ಟರೆ, ಅದೇ ದಿನ ಸಾಯಂಕಾಲ ಅಥವಾ ಮರುದಿನ ಬೆಳಗಿನ ಹೊತ್ತಿಗೆ ಬ್ಯಾಗುಗಳು ಬಂದಿರುತ್ತವೆ.

ಆ ದಿನ ಸಾಯಂಕಾಲ ಕಳೆಯಲು ಬೇಕಾದ ವಸ್ತ್ರ, ವಸ್ತುಗಳನ್ನು ಬ್ಯಾಕ್ ಪ್ಯಾಕ್ ನಲ್ಲಿ ಇಟ್ಟುಕೊಂಡರೆ ಸಾಕು. ಇದರಿಂದ ನನಗಾದ ಅನುಕೂಲ ಅಷ್ಟಿಷ್ಟಲ್ಲ. ಆ ಎರಡು ಬ್ಯಾಗು ಗಳನ್ನು ಇಡೀ ದಿನ ಪ್ರಯಾಣದುದ್ದಕ್ಕೂ ಹೊತ್ತುಕೊಂಡು ಹೋಗಬೇಕಾದ ಅಗತ್ಯವಿಲ್ಲ ಮತ್ತು ನನ್ನ ಬ್ಯಾಗುಗಳಿಂದ ಸಾರ್ವಜನಿಕ ಸಾರಿಗೆ ವಾಹನ ಅಥವಾ ಬುಲೆಟ್ ಟ್ರೇನಿನಲ್ಲಿ ಪಯಣಿಸುವ ಇತರರಿಗೆ ತೊಂದರೆ ಆಗುವುದಿಲ್ಲ.

ನನ್ನ ಹಾಗೆ ಟ್ರೇನಿನಲ್ಲಿ ಇರುವ ಇತರ ಪ್ರಯಾಣಿಕರು ಕೈಯಲ್ಲಿ ಎರಡೆರಡು ಬ್ಯಾಗುಗಳನ್ನು ಹಿಡಿದುಕೊಂಡು ಬಂದರೆ, ಬೋಗಿಗಳಲ್ಲಿರುವ ಪ್ರಯಾಣಿಕರಿಗೆ ಅದೆಷ್ಟು ತೊಂದರೆ ಆಗ ಬಹುದು, ಊಹಿಸಿ. ಇದರಿಂದ ರೈಲು ಪ್ರಯಾಣಿಕರಿಗೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ.

ನಮ್ಮ ಬ್ಯಾಗುಗಳನ್ನು ಒಂದು ನಗರದಲ್ಲಿರುವ ಹೋಟೆಲಿನಿಂದ ಮತ್ತೊಂದು ಊರಿನಲ್ಲಿ ರುವ ಹೋಟೆಲಿಗೆ ಸಾಗಿಸುವ ಕೆಲಸವನ್ನು ಹೋಟೆಲೇ ಮಾಡುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಎದುರಿಸುವ ಇನ್ನೊಂದು ಸಮಸ್ಯೆಯೂ ಬ್ಯಾಗುಗಳದೇ.

ನೀವು ಬೆಳಗ್ಗೆ ಹನ್ನೆರಡು ಗಂಟೆಗೆ ಹೋಟೆಲ್ ರೂಮನ್ನು ಖಾಲಿ ಮಾಡುತ್ತೀರಿ ಎಂದಿಟ್ಟು ಕೊಳ್ಳಿ. ನಿಮ್ಮ ವಿಮಾನ ಬೆಳಗಿನ ಜಾವ ಎರಡೋ, ಮೂರೋ ಗಂಟೆಗೆ ಇರುತ್ತದೆ. ಅಲ್ಲಿ ತನಕ ನಿಮ್ಮ ಬ್ಯಾಗುಗಳನ್ನು ಏನು ಮಾಡುವುದು? ಜತೆಯಲ್ಲಿ ಹೊತ್ತುಕೊಂಡು ತಿರು ಗಾಡುವುದು ಸಾಧ್ಯವೇ ಇಲ್ಲ.

ಅದಕ್ಕಾಗಿ ರೈಲು ನಿಲ್ದಾಣ, ಮಾಲ್, ಹೋಟೆಲ್, ಶಾಪಿಂಗ್ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ಬ್ಯಾಗ್ ಸ್ಟೋರೇಜ್ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿಗೆ ಹೋಗಿ ಬ್ಯಾಗು‌ ಗಳನ್ನು ಇಟ್ಟು ಲಾಕ್ ಮಾಡಿ ಭದ್ರವಾಗಿ ಇಡಬಹುದು. ಅಲ್ಲಿನ ರೈಲು ನಿಲ್ದಾಣಗಳು, ಶಾಪಿಂಗ್ ಮಾಲ್ʼಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಅಪಾರ ಸಂಖ್ಯೆಯಲ್ಲಿ ಲಾಕರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಈ ಲಾಕರ್‌ಗಳು ವಿವಿಧ ಗಾತ್ರಗಳಲ್ಲಿ ಲಭ್ಯವಿದ್ದು, ದೊಡ್ಡ ಸೂಟ್‌ಕೇಸ್‌ನಿಂದ ಹಿಡಿದು ಚಿಕ್ಕ ಬ್ಯಾಗ್‌ಗಳವರೆಗೆ ಇಡಬಹುದು. ಕೀ ಕಾರ್ಡ್ ಅಥವಾ ಪಿನ್ ಕೋಡ್ ನಿಯಂತ್ರಿತ ಲಾಕರ್‌ಗಳು ಸುರಕ್ಷಿತವಾಗಿರುತ್ತವೆ. ಇವನ್ನು ದಿನಪೂರ್ತಿ ಅಥವಾ ಕೆಲವು ಗಂಟೆಗಳವರೆಗೆ ಬಾಡಿಗೆಗೆ ಪಡೆಯಬಹುದು.

ಜಪಾನ್‌ನಲ್ಲಿ ’ತಾಕ್ಯೂ ಹೈಬಿನ’ ಎಂಬ ವಿಶಿಷ್ಟ ಪಾರ್ಸೆಲ್ ಡೆಲಿವರಿ ಸೇವೆ ಜನಪ್ರಿಯ ವಾಗಿದೆ. ಪ್ರವಾಸಿಗರು ತಮ್ಮ ಹೋಟೆಲ್‌ನಿಂದ ವಿಮಾನ ನಿಲ್ದಾಣ ಅಥವಾ ಇತರ ಸ್ಥಳಗಳಿಗೆ ತಮ್ಮ ಬ್ಯಾಗ್ ಕಳುಹಿಸಬಹುದಾಗಿದೆ.

ಅನೇಕರಿಗೆ ಪ್ರವಾಸದ ವೇಳೆ ಹೋಟೆಲ್‌ನಲ್ಲಿ ಬ್ಯಾಗ್ ಇಟ್ಟುಕೊಳ್ಳುವುದು ಅತಿ ಸುಲಭ ವಾದ ಆಯ್ಕೆಯಾಗುತ್ತದೆ. ಜಪಾನಿನ ಹೋಟೆಲ್ʼಗಳಲ್ಲಿ ಬ್ಯಾಗ್ ಶೇಖರಣಾ ಸೇವೆ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ. ಅಲ್ಲಿನ ಹಲವಾರು ಶಾಪಿಂಗ್ ಮಾಲ್ ಗಳಲ್ಲಿ ಖರೀದಿಸಿದ ವಸ್ತುಗಳನ್ನು ನಿಮ್ಮ ಹೋಟೆಲ್ ಅಥವಾ ಗಮ್ಯಸ್ಥಾನಕ್ಕೆ ನೇರವಾಗಿ ತಲುಪಿ ಸುವ ವ್ಯವಸ್ಥೆಯಿದೆ.

ಈ ಸೇವೆಯು ಪ್ರವಾಸಿಗರಿಗೆ ಖರೀದಿಸಿದ ವಸ್ತುಗಳನ್ನು ಹೊತ್ತೊಯ್ಯುವ ತೊಂದರೆಯಿಂದ ತಪ್ಪಿಸುತ್ತದೆ. ಜಪಾನ್ ತನ್ನ ಸುರಕ್ಷಾ ವ್ಯವಸ್ಥೆಗೆ ಪ್ರಖ್ಯಾತ. ಜನರು ತಮ್ಮ ಸಾಮಾನು ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋದರೂ ಅವುಗಳನ್ನು ಕಳ್ಳತನ ಮಾಡುವ ಸಂಭವ ಕಡಿಮೆ. ಪ್ರವಾಸಿಗರು ತಮ್ಮ ಬ್ಯಾಗ್ ಬಗ್ಗೆ ಅತಿಯಾಗಿ ಚಿಂತಿಸಬೇಕಾದ ಕಾರಣ ಗಳಿಲ್ಲ.