ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Hari Paraak Column: ತಾಜಾ ಖಬರ್‌ ಕೊಡುವ ನ್ಯೂಸ್‌ ಚಾನೆಲ್:‌ ಖಬರಿಸ್ತಾನ್

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಕೇಳಿ ಬರುವ ಮಾತಿನಂತೆ, ಸಿನಿಮಾ ಸಮಾಜದಲ್ಲೂ ಕೇಳಿಬರುವ ಮಾತು ಅಂದ್ರೆ ಇಲ್ಲಿ ಎಲ್ಲವೂ ಪುರುಷ ಪ್ರಧಾನ ಅನ್ನೋದು. ಅದು ತಕ್ಕ ಮಟ್ಟಿಗೆ ನಿಜ ಕೂಡ. ಆದ್ರೆ ಷರತ್ತುಗಳು ಅನ್ವಯಿಸುತ್ತವೆ ಅನ್ನೋ ಮಾತನ್ನು ಈ ಸಂಪ್ರದಾಯದೊಂದಿಗೆ ಸೇರಿಸಲೇಬೇಕಾಗುತ್ತದೆ. ಅದಕ್ಕೂ ಕಾರಣಗಳು ಹಲವು.

ತಾಜಾ ಖಬರ್‌ ಕೊಡುವ ನ್ಯೂಸ್‌ ಚಾನೆಲ್:‌ ಖಬರಿಸ್ತಾನ್

-

ಹರಿ ಪರಾಕ್‌
ಹರಿ ಪರಾಕ್‌ Nov 9, 2025 9:05 AM

ತುಂಟರಗಾಳಿ

ಸಿನಿಗನ್ನಡ

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಕೇಳಿ ಬರುವ ಮಾತಿನಂತೆ, ಸಿನಿಮಾ ಸಮಾಜದಲ್ಲೂ ಕೇಳಿಬರುವ ಮಾತು ಅಂದ್ರೆ ಇಲ್ಲಿ ಎಲ್ಲವೂ ಪುರುಷ ಪ್ರಧಾನ ಅನ್ನೋದು. ಅದು ತಕ್ಕ ಮಟ್ಟಿಗೆ ನಿಜ ಕೂಡ. ಆದ್ರೆ ಷರತ್ತುಗಳು ಅನ್ವಯಿಸುತ್ತವೆ ಅನ್ನೋ ಮಾತನ್ನು ಈ ಸಂಪ್ರದಾಯದೊಂದಿಗೆ ಸೇರಿಸಲೇಬೇಕಾಗುತ್ತದೆ. ಅದಕ್ಕೂ ಕಾರಣಗಳು ಹಲವು. ಇಲ್ಲಿ ನಾಯಕರಿಗೆ ಸಿಕ್ಕಷ್ಟು ಸಂಭಾವನೆ ನಾಯಕಿಯರಿಗೆ ಸಿಗೊಲ್ಲ ಅನ್ನೋ ಮಾತಿದೆ. ಅದು ನಿಜ ಕೂಡಾ. ಅದಕ್ಕೆ ತಕ್ಕಂತೆ ಅವರಿಗೆ ಸಿಗೋ ಮರ್ಯಾದೆ ಕೂಡಾ ಇವರಿಗೆ ಸಿಗಲ್ಲ. ಆದರೆ ಕೆಲವೊಮ್ಮೆ ಇದು ನಾಯಕಿಯರಿಗೆ ವರದಾನ ಆಗಿರುವ ಉದಾಹರಣೆಗಳೂ ಉಂಟು. ಅದಕ್ಕೆ ಇಂಬು ಕೊಡುವಂತೆ ಇಲ್ಲಿ ಒಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಹೊಸ ನಟಿ ಯೊಬ್ಬಳಿಗೆ ಸುಲಭವಾಗಿ ಅವಕಾಶ ಸಿಗುತ್ತದೆ. ಆದರೆ ಅದೇ ಒಬ್ಬ ಸ್ಟಾರ್ ಹೀರೋಯಿನ್ ಜತೆ ಹೊಸ ಹುಡುಗನಿಗೆ ಹೀರೋ ಆಗೋ ಅವಕಾಶ ಸಿಗುತ್ತಾ ಅನ್ನೋದು ಪ್ರಶ್ನೆ. ಸಿಕ್ಕರೂ ನಾಯಕನ ಪಾತ್ರಕ್ಕೆ ಸ್ಕೋಪ್ ಇರಲ್ಲ, ಅದನ್ನು ಸ್ಟಾರ್ ನಟರು ಮಾಡಲ್ಲ ಅನ್ನೋ ಕಾರಣಕ್ಕೆ ಸಿಗಬಹುದು ಅಥವಾ ಯಾರೋ ದೊಡ್ಡ ಹೆಸರಿರುವ ಫ್ಯಾಮಿಲಿಯ ಹೀರೋಗೆ ಸಿಗಬಹುದು ಅಷ್ಟೇ.

ಅಲ್ಲದೆ, ಒಂದು ಸಿನಿಮಾ ಸೋತರೆ ನಿರ್ಮಾಪಕರು ಅದರ ಸೋಲನ್ನು ನಾಯಕಿಯ ತಲೆಗೆ ಕಟ್ಟೋದಿಲ್ಲ. ಅದರಿಂದ ನಾಯಕಿಯ ಮುಂದಿನ ಸಿನಿಮಾ ಸಂಭಾವನೆ ಕೂಡಾ ತೀರಾ ಕಡಿಮೆ ಆಗೋದಿಲ್ಲ. ಆದರೆ ನಾಯಕನ ಪರಿಸ್ಥಿತಿ ಹಾಗಲ್ಲ. ಹಿಂದಿನ ಸಿನಿಮಾ ಗೆದ್ರೆ ಹಬ್ಬ, ಸೋತ್ರೆ ಮುಂದೈತೆ ಮಾರಿಹಬ್ಬ ಅನ್ನೋ ಪರಿಸ್ಥಿತಿ. ನಾಯಕಿಗೆ ಸಂಭಾವನೆ ಕಮ್ಮಿ ಸಿಕ್ರೂ ಆಕೆ ಆ ಫ್ಲಾಪ್ ಸಿನಿಮಾದಲ್ಲಿ ನಟಿಸಿದ್ದಳು ಅನ್ನೋದು ಮೂರು ದಿನಕ್ಕೆ ಎಲ್ಲರಿಗೂ ಮರೆತು ಹೋಗುತ್ತದೆ. ಆದೆ ನಾಯಕನಿಗೆ ಅದು ಜೀವನಪರ್ಯಂತ ಅವನೇ ಜವಾಬ್ದಾರಿ ಹೊತ್ತು ಕೊಳ್ಳಬೇಕಾದ ಫ್ಲಾಪ್ ಸಿನಿಮಾ.

ಇದನ್ನೂ ಓದಿ: H‌ari Paraak Column: ಮೇಜಿನ ಕೆಳಗೆ ತಗೊಳ್ಳೋ ಮ್ಯಾನರ್ಸ್:‌ ʼಟೇಬಲ್‌ ಮ್ಯಾನರ್ಸ್ʼ

ಅದರಿಂದ ಅವನ ಇಡೀ ಕೆರಿಯರ್‌ನಲ್ಲಿ ಏರುಪೇರು ಆಗುತ್ತದೆ. ನಿರ್ಮಾಪಕ ಈ ಸ್ಟಾರ್ ನಟನನ್ನು ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್‌ಶೀಟ್ ಕೊಡು ಅಂತ ಕೇಳ್ತಾನೆ. ಆದರೆ ಅಪ್ಪಿ ತಪ್ಪಿ ಈ ಮಾತನ್ನ ಈತ ನಾಯಕಿಗೆ ಕೇಳೋದಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಇಂಥ ನಟನ ಫ್ಲಾಪ್ ಸಿನಿಮಾ ಅಂತಲೇ ಅದು ದಾಖಲಾಗುತ್ತದೆ. ಇಷ್ಟೆ ಇರುವಾಗ ಸಿನಿಮಾ ರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ. ‌

ಲೂಸ್‌ ಟಾಕ್-ನಿವೃತ್ತ ಶಿಕ್ಷಕ

ಸರ್, ಒಬ್ಬ ನಿವೃತ್ತ ಶಿಕ್ಷಕರಾಗಿ ದೇಶದ ಮಕ್ಕಳಿಗೆ ಏನು ಸಂದೇಶ ಕೊಡ್ತೀರಿ?

- ಎಲ್ಲರೂ ‘ಬದುಕಲು ಕಲಿಯಿರಿ’ ಅಂತ ಹೇಳೋದು ಕೇಳಿದ್ದೀರಿ. ಆದ್ರೆ ಒಬ್ಬ ಶಿಕ್ಷಕನಾಗಿ ನಾನು ‘ಕಲಿಯಲು ಬದುಕಿರಿ’ ಅಂತ ಹೇಳ್ತೀನಿ.

ನಮ್ಮ ಜೀವನದಲ್ಲಿ ಟೀಚರ್ ಗಳ ಮಹತ್ವ ಏನು ಸರ್?

- ಯಾರೇ ಅಪರಿಚಿತರನ್ನು ಮಾತನಾಡಿಸುವಾಗಲೂ ‘ಸರ್’ ಅಂತಲೇ ಸಂಬೋಧಿಸುತ್ತೇವೆ. ಅದರರ್ಥ ಪ್ರತಿಯೊಬ್ಬರೂ ನಮಗೆ ಏನಾದರೊಂದು ಹೇಳಿಕೊಡೋ ಟೀಚರ್‌ಗಳೇ ಅಂತ.

ನಮ್ಮ ದೇಶದ ಶಾಲೆಗಳ ಬಗ್ಗೆ ಏನು ಹೇಳ್ತೀರಿ?

- ದೇವಸ್ಥಾನದಲ್ಲೂ ಗಂಟೆ ಹೊಡೀತಾರೆ, ಪ್ರಾರ್ಥನೆ ಮಾಡ್ತಾರೆ. ಶಾಲೆಗಳಲ್ಲೂ ಗಂಟೆ ಹೊಡೀತಾರೆ, ಪ್ರಾರ್ಥನೆ ಮಾಡ್ತಾರೆ. ಹಾಗಾಗಿ ಶಾಲೆ ಅಂದ್ರೆ ದೇವಸ್ಥಾನ ಇದ್ದ ಹಾಗೆ. ಅದ್ಸರಿ ಏನಿವತ್ತು ತುಂಬಾ ಸೀರಿಯಸ್ ಪ್ರಶ್ನೆಗಳನ್ನೇ ಕೇಳ್ತಾ ಇದೀರಿ?

ಮತ್ತೆ, ಟೀಚರ್ ಹತ್ರ ಕಾಮಿಡಿ ಮಾಡೋಕಾಗುತ್ತಾ ಸರ್. ನೀವ್ ಮಾಡಿದ್ರೆ ನಾವ್ ನಗ್ಬಹುದು ಅಷ್ಟೆ. ಸರಿ, ಇನ್ನೊಂದ್ ಪ್ರಶ್ನೆ, ಈ ಟೀಚರ್‌ಗಳಿಗೂ ಮತ್ತು ಪೊಲೀಸ ರಿಗೂ ಎಲ್ಲರೂ ಹೆದರ್ತಾರೆ, ನಿಮ್ಮ ಪ್ರಕಾರ ಟೀಚರ್‌ಗಳಿಗೂ ಪೊಲೀಸರಿಗೂ ಏನು ವ್ಯತ್ಯಾಸ?

- ಪೊಲೀಸರು ಗಲಾಟೆ ಮಾಡಿದವರನ್ನ ಒದ್ದು ಒಳಗೆ ಹಾಕ್ತಾರೆ, ಟೀಚರ್‌ಗಳು ಗಲಾಟೆ ಮಾಡಿದವರನ್ನ ಒದ್ದು ಹೊರಗೆ ಹಾಕ್ತಾರೆ.

ಓಹೋ ನೀವೇ ಕಾಮಿಡಿ ಮಾಡೋಕೆ ಶುರು ಮಾಡಿಬಿಟ್ರಾ? ಸರಿ ನಮ್ಮ ಮೂಲ ಭೂತ ಶಿಕ್ಷಣ ವ್ಯವಸ್ಥೆ ಸರಿ ಇಲ್ಲ ಅಂತಾರಲ್ಲ, ನಿಮ್ಮ ಅಭಿಪ್ರಾಯ?

- ಎಲ್ಲಾ ಸರೀನೇ ಇದೆ ಕಣ್ರೀ, ಸ್ವಾಮಿ ದೇವನೆ ‘ಲೋಕಪಾಲ’ನೆ ಅಂತ ಆ ಕಾಲದ ಲೋಕ ಪಾಲ ಮಸೂದೆ ಬಗ್ಗೆ ಹೇಳಿಕೊಟ್ಟಿದ್ವಲ್ಲ ನಾವು.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಕೆಲಸದಲ್ಲಿ ಸಂಬಳ ಜಾಸ್ತಿ ಬರ್ತಾ ಇಲ್ಲ. ಈ ದುಡ್ಡಲ್ಲಿ ಹೆಂಡ್ತಿ ಜತೆ ಸಂಸಾರ ಮಾಡೋ ಕಾಗಲ್ಲ ಅಂತ ಖೇಮು ಎಂಬಿಎ ಸೇರಿದ, ಒಂದಿನ ಖೇಮುನ ಕ್ಲಾಸ್‌ನಲ್ಲಿ ಲೆಕ್ಚರರ್ ಖೇಮುನ ಕೇಳಿದ್ರು “ಹೇಗನ್ನಿಸಿದೆ ಎಂಬಿಎ?". ಖೇಮು ಹೇಳ್ದ “ಎಲ್ಲಾ ಸರಿ ಸರ್, ಆದ್ರೆ ಈ ಲಾಜಿಕ್ ಸಬ್ಜೆಕ್ಟ್ ಅರ್ಥ ಆಗ್ತಾ ಇಲ್ಲ". ಅದಕ್ಕೆ ಲೆಕ್ಚರರ್ ಹೇಳಿದ್ರು “ಅಯ್ಯೋ ಲಾಜಿಕ್ ತುಂಬಾ ಈಸಿ ಕಣೋ, ನೋಡು ಈಗ ನಿನ್ನ ಒಂದು ಪ್ರಶ್ನೆ ಕೇಳ್ತಿನಿ, ನಿಮ್ಮ ಮನೆಯಲ್ಲಿ ಫಿಶ್ ಟ್ಯಾಂಕ್ ಇದೆಯಾ?". ಖೇಮು ಹೇಳಿದ “ಹೌದು". “ಸರಿ, ಈಗ ಲಾಜಿಕ್ ಏನಪ್ಪಾ ಅಂದ್ರೆ, ಫಿಶ್ ಟ್ಯಾಂಕ್ ಇದ್ದಮೇಲೆ ಅದರಲ್ಲಿ ಫಿಶ್ ಇರಬೇಕು ಅಲ್ವಾ?". ಖೇಮು “ಹೌದು" ಅಂದ. “ಫಿಶ್ ಇದ್ದ ಮೇಲೆ ನೀನು ಕಾಲೇಜಿಗೆ ಬಂದಾಗ ಅದಕ್ಕೆ ಊಟ ಹಾಕೋಕೆ ಮನೇಲಿ ಯಾರೋ ಒಬ್ರು ಇದ್ದಾರೆ ಅಲ್ವಾ? ಮೋ ಲೀ ನಿನ್ ಹೆಂಡ್ತಿ?".

“ಹೌದು" ಅಂದ ಖೇಮು. “ಸರಿ ಈಗ ಲಾಜಿಕ್ ಏನಪ್ಪಾ ಅಂದ್ರೆ, ಹೆಂಡ್ತಿ ಇದಾಳೆ ಅಂದ್ರೆ ನೀನು ಗೇ ಅಲ್ಲ. ಅಲ್ವಾ?". “ಹೌದು" ಎಂದ ಖೇಮು. “ನೋಡು ಇಷ್ಟೇ ಲಾಜಿಕ್ ಅಂದ್ರೆ" ಎಂದು ಹೇಳಿ ಲೆಕ್ಚರರ್ ಹೊರಟುಹೋದ್ರು. ಖೇಮು ಖುಷಿಯಾಗಿ ತನ್ನ ಗೆಳೆಯ ಸೋಮು ಹತ್ರ ಬಂದ.

ಸೋಮುವನ್ನು “ಏನಪ್ಪಾ ಹೆಂಗಿದೆ ಎಂಬಿಎ" ಅಂತ ಕೇಳಿದ ಖೇಮು. ಅದಕ್ಕೆ ಸೋಮು “ಎಲ್ಲಾ ಸರಿ ಆದ್ರೆ ಈ ಲಾಜಿಕ್ ಸಬ್ಜೆಕ್ಟ್ ಸ್ವಲ್ಪ ಅರ್ಥ ಆಗ್ತಾ ಇಲ್ಲ" ಅಂದ. ಅದಕ್ಕೆ ಖೇಮು ಶುರು ಹಚ್ಕೊಂಡ. “ಲಾಜಿಕ್ ತುಂಬಾ ಈಸಿ ಕಣೋ, ನೋಡು ಈಗ ನಿನ್ನ ಒಂದು ಪ್ರಶ್ನೆ ಕೇಳ್ತೀನಿ, ನಿಮ್ ಮನೇಲಿ ಫಿಶ್ ಟ್ಯಾಂಕ್ ಇದೆಯಾ?". ಅಂದ. ಅದಕ್ಕೆ ಸೋಮು “ಇಲ್ಲ" ಅಂದ. ಅದಕ್ಕೆ ಖೇಮು ಮುಸಿಮುಸಿ ನಗುತ್ತಾ ಹೇಳಿದ, “ಹೆ, ಹೆ ಬಡ್ಡಿಮಗ, ಗೇ ನೀನು".‌

ಲೈನ್‌ ಮ್ಯಾನ್

‘ಸರ್ಚ್ ಯುವರ್ ಲೈಫ್ ಪಾರ್ಟ್‌ನರ್’ ಅಂತ ಮ್ಯಾಟ್ರಿಮೋನಿಯಲ್ ಸೈಟ್‌ನಿಂದ ಬಂದ ಇ-ಮೇಲ್‌ಗೆ ಖೇಮು ಏನಂತ ಉತ್ತರಿಸ್ತಾನೆ?

- ಶಾಪಿಂಗ್‌ಗೆ ಅಂತ ಮಾಲ್‌ಗೆ ಬಂದಿದ್ವಿ, ನನ್ ಹೆಂಡ್ತಿ ಕಾಣ್ತಾ ಇಲ್ಲ, ಸ್ವಲ್ಪ ಹುಡುಕ್ ಕೊಡ್ತೀರಾ?

ಖೇಮುವಾದ:

- “ಲೈಬ್ರರಿಯಲ್ಲಿ ನಿಮಗೆ ಬೇಕಾದ ಪುಸ್ತಕವನ್ನು ಹುಡುಕುವುದು ಹೇಗೆ?" ಎಂಬ ಪುಸ್ತಕವನ್ನು ನೀವು ಬೇಗನೆ ಹುಡುಕಿದರೆ ನಿಮ್ಮನ್ನು ಜೀನಿಯಸ್ ಎನ್ನಬಹುದು.‌

ದಿನದ ೨೪ ಗಂಟೆಗಳೂ ತಾಜಾ ಖಬರ್ ಕೊಡುವ ನ್ಯೂಸ್ ಚಾನೆಲ್‌ಗಳನ್ನು ಏನೆನ್ನಬಹುದು?

- ಖಬರಿಸ್ತಾನ್

ಇಂದಿನ ಮಕ್ಕಳಿಗೂ ದೊಡ್ಡವರಿಗೂ ಇರೋ ವ್ಯತ್ಯಾಸ?

- ಮಕ್ಕಳು ‘ಹೋಮ್ ವರ್ಕ್’ ಮಾಡ್ತಾರೆ. ದೊಡ್ಡವರು ‘ವರ್ಕ್ ಫ್ರಮ್ ಹೋಮ್’ ಮಾಡ್ತಾರೆ.

ರನ್ನಿಂಗ್ ರೇಸ್ ಪರಿಣತ ಉಸೇನ್ ಬೋಲ್ಟ್ ನ ಏನಂತಾರೆ?

- ‘ರೇಸಿ’ ಉಸೇನ್ ಬೋಲ್ಟ್ ಕ್ರಿಕೆಟ್ ಆಡಿದ್ರೆ?

- ಹೊಡೆದಿದ್ದಕ್ಕಿಂತ ‘ಓಡಿದ್’ ರನ್ ಗಳೇ ಜಾಸ್ತಿ ಇರ್ತವೆ.

ಹೇಳದೆ ಕೇಳದೆ ಆಫೀಸಿಗೆ ರಜಾ ಹಾಕಿದ್ದು ದೊಡ್ಡ ಇಶ್ಯೂ ಆದರೆ ಅದನ್ನು ಹೇಗೆ ಮ್ಯಾನೇಜ್ ಮಾಡಬೇಕು?

- ಅಯ್ಯೋ, ಅದು ‘ಕೆಲಸಕ್ಕೆ ಬಾರದ ವಿಷಯ’, ಬಿಡಿ ಸರ್ ಎಂದುಬಿಡುವುದು.