ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ashwini Vaishnav Column: ಗಡಿಯಂಚಿನಿಂದ ಮುಂಚೂಣಿಗೆ ಬಂದ ಈಶಾನ್ಯ ಭಾರತ

ಈ ಬೆಳವಣಿಗೆಯ ಕಥನದ ಭಾಗವಾಗಿದೆ ಮಿಜೋರಾಂ. ಈ ರಾಜ್ಯವು ತನ್ನ ಶ್ರೀಮಂತ ಸಂಸ್ಕೃತಿ, ಕ್ರೀಡೆಗಳ ಮೇಲಿನ ಪ್ರೀತಿ ಮತ್ತು ಸುಂದರವಾದ ಬೆಟ್ಟಗಳಿಗೆ ಹೆಸರುವಾಸಿ ಯಾಗಿದೆ. ಆದರೂ, ದಶಕ ಗಳಿಂದ ಇದು ಸಂಪರ್ಕದ ಮುಖ್ಯವಾಹಿನಿಯಿಂದ ದೂರವಿತ್ತು. ರಸ್ತೆ ಮತ್ತು ವಾಯು ಸಂಪರ್ಕ ಸೀಮಿತವಾಗಿತ್ತು. ರೈಲ್ವೆಗಳು ಅದರ ರಾಜಧಾನಿಯನ್ನು ತಲುಪಿರಲಿಲ್ಲ. ಆಕಾಂಕ್ಷೆಗಳು ಜೀವಂತವಾಗಿ ದ್ದವು, ಆದರೆ ಬೆಳವಣಿಗೆಯ ಅಪಧಮನಿಗಳು ಕಾಣೆಯಾಗಿದ್ದವು.

ಗಡಿಯಂಚಿನಿಂದ ಮುಂಚೂಣಿಗೆ ಬಂದ ಈಶಾನ್ಯ ಭಾರತ

-

Ashok Nayak Ashok Nayak Sep 12, 2025 9:00 AM

ಈಶಾನ್ಯ ಕಥನ

ಅಶ್ವಿನಿ ವೈಷ್ಣವ್

ಮಿಜೋರಾಂ ರಾಜ್ಯವು ದಶಕಗಳಿಂದ ಸಂಪರ್ಕದ ಮುಖ್ಯವಾಹಿನಿಯಿಂದ ದೂರವಿತ್ತು. ರೈಲ್ವೆಗಳು ಅದರ ರಾಜಧಾನಿಯನ್ನು ತಲುಪಿರಲಿಲ್ಲ. ಇನ್ನು ಮುಂದೆ ಹಾಗಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರದಂದು ಬೈರಾಬಿ-ಸೈರಾಂಗ್ ರೈಲುಮಾರ್ಗ ವನ್ನು ಉದ್ಘಾಟಿಸಲಿದ್ದಾರೆ.

ಈಶಾನ್ಯ ಭಾರತವನ್ನು ಹಲವು ದಶಕಗಳಿಂದ, ‘ಅಭಿವೃದ್ಧಿಗಾಗಿ ಕಾಯುತ್ತಿರುವ ದೂರದ ಗಡಿ’ ಎಂದು ಪರಿಗಣಿಸಲಾಗಿತ್ತು. ಈಶಾನ್ಯ ರಾಜ್ಯಗಳಲ್ಲಿ ವಾಸಿಸುವ ನಮ್ಮ ಸಹೋದರ-ಸಹೋದರಿ ಯರು ಪ್ರಗತಿಯ ಆಕಾಂಕ್ಷೆಗಳನ್ನು ಹೊಂದಿದ್ದರು. ಆದರೆ ಅವರಿಗೆ ಅರ್ಹವಾದ, ಅಗತ್ಯವಾದ ಮೂಲಸೌಕರ್ಯ ಮತ್ತು ಅವಕಾಶಗಳು ದೊರೆಯುವುದು ಸಾಧ್ಯವಾಗಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು Act East ನೀತಿಯನ್ನು ಪ್ರಾರಂಭಿಸಿದಾಗ ಇದೆಲ್ಲವೂ ಬದಲಾಯಿತು. ದೂರದ ಗಡಿಯಲ್ಲಿದೆ ಎಂದು ಪರಿಭಾವಿಸಲಾಗಿದ್ದ ಈಶಾನ್ಯವು ಈಗ ಮುಂಚೂಣಿಯಲ್ಲಿದೆ ಎಂದು ಗುರುತಿಸಲ್ಪಟ್ಟಿದೆ.

ಶಾಂತಿ, ಪ್ರಗತಿ ಮತ್ತು ಸಮೃದ್ಧಿ: ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣಗಳು ಮತ್ತು ಡಿಜಿಟಲ್ ಸಂಪರ್ಕದಲ್ಲಿ ದಾಖಲೆಯ ಹೂಡಿಕೆಗಳ ಮೂಲಕ ಈ ಪರಿವರ್ತನೆ ಸಾಧ್ಯವಾಗಿದೆ.

ಶಾಂತಿ ಒಪ್ಪಂದಗಳು ಸ್ಥಿರತೆಯನ್ನು ತರುತ್ತಿವೆ. ಜನರು ಸರಕಾರಿ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ, ಈಶಾನ್ಯ ಪ್ರದೇಶವನ್ನು ಭಾರತದ ಅಭಿವೃದ್ಧಿ ಕಥನದ ಕೇಂದ್ರಬಿಂದುವಾಗಿ ನೋಡಲಾಗುತ್ತಿದೆ. ಉದಾಹರಣೆಗೆ ರೈಲ್ವೆಯಲ್ಲಿನ ಹೂಡಿಕೆಗಳನ್ನು ಪರಿಗಣಿಸಿ. 2009-14ರ ಕಾಲಘಟ್ಟಕ್ಕೆ ಹೋಲಿಸಿದರೆ ಈ ಪ್ರದೇಶಕ್ಕೆ ರೈಲ್ವೆ ಬಜೆಟ್ ಹಂಚಿಕೆ ಐದು ಪಟ್ಟು ಹೆಚ್ಚಾಗಿದೆ. ಈ ಹಣಕಾಸು ವರ್ಷವೊಂದರ 10440 ಕೋಟಿ ರು. ಹಂಚಿಕೆ ಮಾಡಲಾಗಿದೆ. 2014ರಿಂದ 2025ರವರೆಗಿನ ಒಟ್ಟು ಬಜೆಟ್ ಹಂಚಿಕೆಯು 62,477 ಕೋಟಿ ರು. ನಷ್ಟಿತ್ತು. ಇಂದು, 77000 ಕೋಟಿ ರು. ಮೌಲ್ಯದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಈ ಹಿಂದೆಂದೂ ಈಶಾನ್ಯ ಪ್ರದೇಶವು ಇಷ್ಟು ದಾಖಲೆಯ ಹೂಡಿಕೆಯನ್ನು ಕಂಡಿರಲಿಲ್ಲ.

ಇದನ್ನೂ ಓದಿ: Roopa Gururaj Column: ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಮಹಿಮೆ

ಮಿಜೋರಾಂ ಮೊದಲು: ಈ ಬೆಳವಣಿಗೆಯ ಕಥನದ ಭಾಗವಾಗಿದೆ ಮಿಜೋರಾಂ. ಈ ರಾಜ್ಯವು ತನ್ನ ಶ್ರೀಮಂತ ಸಂಸ್ಕೃತಿ, ಕ್ರೀಡೆಗಳ ಮೇಲಿನ ಪ್ರೀತಿ ಮತ್ತು ಸುಂದರವಾದ ಬೆಟ್ಟಗಳಿಗೆ ಹೆಸರುವಾಸಿ ಯಾಗಿದೆ. ಆದರೂ, ದಶಕಗಳಿಂದ ಇದು ಸಂಪರ್ಕದ ಮುಖ್ಯವಾಹಿನಿಯಿಂದ ದೂರವಿತ್ತು. ರಸ್ತೆ ಮತ್ತು ವಾಯು ಸಂಪರ್ಕ ಸೀಮಿತವಾಗಿತ್ತು. ರೈಲ್ವೆಗಳು ಅದರ ರಾಜಧಾನಿಯನ್ನು ತಲುಪಿರಲಿಲ್ಲ. ಆಕಾಂಕ್ಷೆಗಳು ಜೀವಂತವಾಗಿದ್ದವು, ಆದರೆ ಬೆಳವಣಿಗೆಯ ಅಪಧಮನಿಗಳು ಕಾಣೆಯಾಗಿದ್ದವು. ಇನ್ನು ಮುಂದೆ ಹಾಗಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರದಂದು ಬೈರಾಬಿ- ಸೈರಾಂಗ್ ರೈಲುಮಾರ್ಗದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಇದು ಮಿಜೋರಾಂ ಪಾಲಿಗೆ ಒಂದು ಐತಿಹಾಸಿಕ ಮೈಲಿಗಲ್ಲು. 8000 ಕೋಟಿ ರುಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ 51 ಕಿಲೋಮೀಟರ್ ಉದ್ದದ ಈ ಯೋಜನೆಯು ಐಜ್ವಾಲ್ ಅನ್ನು ಮೊದಲ ಬಾರಿಗೆ ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುತ್ತದೆ.

ಇದರೊಂದಿಗೆ, ಪ್ರಧಾನಮಂತ್ರಿಯವರು ಸಾಯಿರಂಗದಿಂದ ದಿಲ್ಲಿ (ರಾಜಧಾನಿ ಎಕ್ಸ್‌ಪ್ರೆಸ್), ಕೋಲ್ಕತ್ತಾ (ಮಿಜೋರಾಮ್ ಎಕ್ಸ್‌ಪ್ರೆಸ್) ಮತ್ತು ಗುವಾಹಟಿ (ಐಜ್ವಾಲ್ ಇಂಟರ್‌ಸಿಟಿ) ಗಳಿಗೆ ಮೂರು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಮಾರ್ಗವು ದುರ್ಗಮ ಭೂಪ್ರ ದೇಶದ ಮೂಲಕ ಹಾದುಹೋಗುತ್ತದೆ.

Ashwini V 1209

ಮಿಜೋರಾಂ ಅನ್ನು ಸಂಪರ್ಕಿಸಲು ರೈಲ್ವೆ ಎಂಜಿನಿಯರ್‌ಗಳು 143 ಸೇತುವೆಗಳು ಮತ್ತು 45 ಸುರಂಗಗಳನ್ನು ನಿರ್ಮಿಸಿದ್ದಾರೆ. ಒಂದು ಸೇತುವೆಯಂತೂ ಕುತುಬ್ ಮಿನಾರ್‌ಗಿಂತ ಎತ್ತರವಾಗಿದೆ. ವಾಸ್ತವವಾಗಿ ಈ ಭೂಪ್ರದೇಶದಲ್ಲಿ, ಹಿಮಾಲಯದ ಇತರ ಎಲ್ಲಾ ಮಾರ್ಗಗಳಂತೆ, ರೈಲ್ವೆ ಮಾರ್ಗ ವನ್ನು ಸೇತುವೆಯ ನಂತರ ಸುರಂಗ ಮತ್ತೆ ಸೇತುವೆ ಹಾಗೂ ಸುರಂಗ ನಿರ್ಮಾಣದ ಮೂಲಕ ಅಸ್ತಿತ್ವಕ್ಕೆ ತರಲಾಗಿದೆ.

ಹಿಮಾಲಯ ಸುರಂಗಮಾರ್ಗ ವಿಧಾನ: ಈಶಾನ್ಯ ಹಿಮಾಲಯವು ನವಿರಾದ ಪರ್ವತ ಪ್ರದೇಶ ವನ್ನು ಹೊಂದಿದ್ದು, ಮೃದುವಾದ ಮಣ್ಣು ಮತ್ತು ಸಾವಯವ ವಸ್ತುಗಳನ್ನು ಒಳಗೊಂಡಿರುವ ದೊಡ್ಡ ವಿಭಾಗಗಳನ್ನು ಹೊಂದಿದೆ. ಈ ಪರಿಸ್ಥಿತಿಗಳಲ್ಲಿ ಸುರಂಗಗಳನ್ನು ಮತ್ತು ಸೇತುವೆಗಳನ್ನು ನಿರ್ಮಿಸುವುದು ಅಸಾಧಾರಣ ಸವಾಲಿನ ಕೆಲಸ. ಸಡಿಲವಾದ ಮಣ್ಣು, ನಿರ್ಮಾಣದ ಸವಾಲು ಗಳನ್ನು ಬೆಂಬಲಿಸಲು ಸಾಧ್ಯವಾಗದ ಕಾರಣ ಇಲ್ಲಿ ಸಾಂಪ್ರದಾಯಿಕ ವಿಧಾನಗಳು ವಿಫಲಗೊಳ್ಳು ತ್ತವೆ.

ಇದನ್ನು ನಿವಾರಿಸಲು, ನಮ್ಮ ಎಂಜಿನಿಯರ್‌ಗಳು ಹೊಸ ಮತ್ತು ಚತುರ ವಿಧಾನವನ್ನು ಬಳಸಿ ಕೊಂಡರು. ಈಗ ಇದನ್ನು ‘ಹಿಮಾಲಯನ್ ಸುರಂಗಮಾರ್ಗ ವಿಧಾನ’ ಎಂದು ಕರೆಯಲಾಗುತ್ತದೆ. ಈ ತಂತ್ರದಲ್ಲಿ, ಸುರಂಗ ಮಾರ್ಗ ಮತ್ತು ನಿರ್ಮಾಣವನ್ನು ಕೈಗೊಳ್ಳಲು ಮಣ್ಣನ್ನು ಮೊದಲು ಸ್ಥಿರಗೊಳಿಸಲಾಗುತ್ತದೆ ಮತ್ತು ನಂತರ ಅದನ್ನು ಗಟ್ಟಿಗೊಳಿಸಲಾಗುತ್ತದೆ. ಈ ಪ್ರದೇಶದ ಅತ್ಯಂತ ಕಷ್ಟಕರವಾದ ಯೋಜನೆಗಳಲ್ಲಿ ಒಂದನ್ನು ಪೂರ್ಣಗೊಳಿಸಲು ಇದು ನಮಗೆ ಅನುವು ಮಾಡಿ ಕೊಟ್ಟಿತು.

ಭೂಕಂಪನ ಚಟುವಟಿಕೆಗಳ ಸಂಭಾವ್ಯತೆ ಇರುವ ಈ ಪ್ರದೇಶದಲ್ಲಿ ಹೆಚ್ಚಿನ ಎತ್ತರದಲ್ಲಿ ನಿರ್ಮಾಣ ವಾಗುವ ಸೇತುವೆಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತೊಂದು ಪ್ರಮುಖ ಸವಾಲಾ ಗಿತ್ತು. ಇಲ್ಲಿಯೂ, ಸೇತುವೆಗಳನ್ನು ಸ್ಥಿತಿಸ್ಥಾಪಕತ್ವ ಶಕ್ತಿಯ ಜತೆಗೆ ಸುರಕ್ಷಿತವಾಗಿಸಲು ವಿಶೇಷ ವಿನ್ಯಾಸಗಳನ್ನು ಮತ್ತು ಸುಧಾರಿತ ತಂತ್ರಗಳನ್ನು ಬಳಸಲಾಯಿತು. ಹೀಗೆ ಸ್ವದೇಶಿ ತಂತ್ರeನ ಅಭಿವೃದ್ಧಿಯ ಮೂಲಕ ಗಳಿಸಿದ ನಾವೀನ್ಯವು, ಪ್ರಪಂಚದಾದ್ಯಂತದ ಈ ರೀತಿಯ ಭೂಪ್ರದೇಶ ಗಳಿಗೆ ಒಂದು ಮಾದರಿಯಾಗಿದೆ. ಇದನ್ನು ಸಾಧ್ಯವಾಗಿಸಲು ಸಾವಿರಾರು ಎಂಜಿನಿಯರ್‌ ಗಳು, ಕಾರ್ಮಿಕರು ಮತ್ತು ಸ್ಥಳೀಯ ಸಮುದಾಯಗಳು ಒಟ್ಟಾಗಿ ಕೈಜೋಡಿಸಿವೆ. ಭಾರತವು ನಿರ್ಮಾಣಕ್ಕೆ ಮುಂದಾದಾಗ, ಸ್ಮಾರ್ಟ್ ಆಗಿ ನಿರ್ಮಿಸುತ್ತದೆ!

ಪ್ರದೇಶಕ್ಕೆ ಪ್ರಯೋಜನಗಳು: ರೈಲ್ವೆಯನ್ನು ‘ಬೆಳವಣಿಗೆಯ ಎಂಜಿನ್’ ಎಂದು ಪರಿಗಣಿಸಲಾಗುತ್ತದೆ. ಇದು ಹೊಸ ಮಾರುಕಟ್ಟೆಗಳನ್ನು ಹತ್ತಿರಕ್ಕೆ ತರುತ್ತದೆ ಮತ್ತು ವ್ಯಾಪಾರದ ಅವಕಾಶಗಳನ್ನು ಸೃಷ್ಟಿಸುತ್ತದೆ. ಮಿಜೋರಾಂ ಜನರ ಪಾಲಿಗೆ ಹೊಸ ರೈಲು ಮಾರ್ಗವು ಜೀವನ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ. ಮಿಜೋರಾಂನಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ಆರಂಭದೊಂದಿಗೆ, ಐಜ್ವಾಲ್ ಮತ್ತು ದಿಲ್ಲಿ ಪ್ರದೇಶದ ನಡುವಿನ ಪ್ರಯಾಣದ ಸಮಯ 8 ಗಂಟೆಗಳಷ್ಟು ಕಡಿಮೆಯಾಗುತ್ತದೆ.

ಹೊಸ ಎಕ್ಸ್ ಪ್ರೆಸ್ ರೈಲುಗಳು ಐಜ್ವಾಲ, ಕೋಲ್ಕತ್ತಾ ಮತ್ತು ಗುವಾಹಟಿ ನಡುವಿನ ಪ್ರಯಾಣವನ್ನು ಕ್ಷಿಪ್ರವಾಗಿಸುತ್ತವೆ ಮತ್ತು ಸುಲಭವಾಗಿಸುತ್ತವೆ. ರೈತರು, ವಿಶೇಷವಾಗಿ ಬಿದಿರು ಕೃಷಿ ಮತ್ತು ತೋಟ ಗಾರಿಕೆಯಲ್ಲಿ ತೊಡಗಿರುವ ರೈತರು, ತಮ್ಮ ಉತ್ಪನ್ನಗಳನ್ನು ಕ್ಷಿಪ್ರವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವಿಶಾಲ ಮಾರುಕಟ್ಟೆಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ. ಆಹಾರ ಧಾನ್ಯಗಳು ಮತ್ತು ರಸಗೊಬ್ಬರ ಗಳಂಥ ಅಗತ್ಯ ವಸ್ತುಗಳ ಸಾಗಣೆ ಸುಲಭವಾಗುತ್ತದೆ. ಮಿಜೋರಾಂನ ನೈಸರ್ಗಿಕ ಸೌಂದರ್ಯವು ಹೆಚ್ಚು ಸುಲಭವಾಗಿ ಲಭ್ಯವಾಗುತ್ತಿದ್ದಂತೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ.

ಇದು ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ ಮತ್ತು ಯುವಜನರಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಯು ಜನರಿಗೆ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಉದ್ಯೋಗಕ್ಕೆ ಉತ್ತಮ ಅವಕಾಶಗಳನ್ನು ಕಲ್ಪಿಸಲಿದೆ. ಮಿಜೋರಾಂಗೆ, ಈ ಸಂಪರ್ಕವು ಎಲ್ಲವನ್ನೂ ಮತ್ತು ಅದಕ್ಕಿಂತ ಇನ್ನೂ ಹೆಚ್ಚಿನ ಭರವಸೆಯನ್ನು ನೀಡುತ್ತದೆ. ಹೀಗಾಗಿ, ಐಜ್ವಾಲ್ ಇನ್ನು ಮುಂದೆ ದೂರದ ಪ್ರದೇಶ ಎಂದೆನಿಸುವುದಿಲ್ಲ.

ರಾಷ್ಟ್ರದಾದ್ಯಂತ ಅಭಿವೃದ್ಧಿ: ದೇಶಾದ್ಯಂತ ರೈಲ್ವೆಯು ದಾಖಲೆಯ ಪರಿವರ್ತನೆಯನ್ನು ಕಾಣುತ್ತಿದೆ. ಇತ್ತೀಚೆಗೆ 100ಕ್ಕೂ ಹೆಚ್ಚು ‘ಅಮೃತ ಭಾರತ್’ ನಿಲ್ದಾಣಗಳನ್ನು ಉದ್ಘಾಟಿಸಲಾಗಿದ್ದು, ಇನ್ನೂ 1200 ನಿಲ್ದಾಣಗಳು ಅಭಿವೃದ್ಧಿಯ ಹಂತದಲ್ಲಿವೆ. ಈ ನಿಲ್ದಾಣಗಳು ಪ್ರಯಾಣಿಕರಿಗೆ ಆಧು ನಿಕ ಸೌಲಭ್ಯಗಳನ್ನೂ, ನಗರಗಳಿಗೆ ಬೆಳವಣಿಗೆಯ ಹೊಸ ಕೇಂದ್ರಗಳನ್ನೂ ಒದಗಿಸುತ್ತವೆ. 150ಕ್ಕೂ ಹೆಚ್ಚು ಹೈಸ್ಪೀಡ್ ವಂದೇ ಭಾರತ್ ರೈಲುಗಳು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿವೆ.

ಅದೇ ಸಮಯದಲ್ಲಿ, ರೈಲ್ವೆ ಜಾಲವು ಬಹುತೇಕ ವಿದ್ಯುದೀಕರಣದಿಂದ ಕಂಗೊಳಿಸುತ್ತಿದೆ. 2014 ರಿಂದ ಇದುವರೆಗೆ 35000 ಕಿಲೋಮೀಟರ್‌ನಷ್ಟು ಉದ್ದದ ಹಳಿಗಳನ್ನು ನಿರ್ಮಿಸಿದ್ದು, ಇದು ಹಿಂದಿನ ಆರು ದಶಕಗಳಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚಿನದಾಗಿದೆ. ಕಳೆದ ವರ್ಷವೊಂದರ, 3200 ಕಿಲೋ ಮೀಟರ್‌ನಷ್ಟು ಹೊಸ ರೈಲು ಮಾರ್ಗಗಳನ್ನು ಸೇರ್ಪಡೆಗೊಳಿಸಲಾಗಿದೆ.

ಅಭಿವೃದ್ಧಿ ಮತ್ತು ರೂಪಾಂತರದ ಈ ವೇಗವು ಈಶಾನ್ಯ ಭಾರತದಲ್ಲಿಯೂ ಗೋಚರಿಸುತ್ತಿದೆ. ಈಶಾನ್ಯಕ್ಕಾಗಿ ಮುನ್ನೋಟ: ‘ನಮಗೆ, ಪೂರ್ವ ಭಾರತ ಎಂದರೆ- ಸಬಲೀಕರಣ, ಕ್ರಿಯೆ, ಬಲಪಡಿಸು ವಿಕೆ ಮತ್ತು ಪರಿವರ್ತನೆ’ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಈ ಮಾತುಗಳು ಈಶಾನ್ಯ ಭಾರತಕ್ಕೆ ಸಂಬಂಧಿಸಿ ಅವರ ಕಾರ್ಯವಿಧಾನದ ಸಾರವನ್ನು ಸೆರೆಹಿಡಿಯುತ್ತವೆ. ಬಹು ರಂಗಗಳಲ್ಲಿನ ನಿರ್ಣಾಯಕ ಕ್ರಮವು ಪ್ರದೇಶದ ಪರಿವರ್ತನೆಯನ್ನು ಖಚಿತಪಡಿಸಿದೆ.

ಅಸ್ಸಾಂನಲ್ಲಿ ಟಾಟಾ ಸಮೂಹದ ಸೆಮಿಕಂಡಕ್ಟರ್ ಸೌಲಭ್ಯ, ಅರುಣಾಚಲ ಪ್ರದೇಶದಲ್ಲಿ ‘ಟಾಟೊ’ ದಂಥ ಜಲವಿದ್ಯುತ್ ಯೋಜನೆಗಳು ಮತ್ತು ಬೋಗಿಬೀಲ್ ರೈಲು-ರಸ್ತೆ ಸೇತುವೆಯಂಥ ಪ್ರತಿಷ್ಠಿತ ಮೂಲಸೌಕರ್ಯ ಯೋಜನೆಗಳು ಈ ಪ್ರದೇಶವನ್ನು ಮರುರೂಪಿಸುತ್ತಿವೆ. ಇವುಗಳ ಜತೆಗೆ, ಗುವಾ ಹಟಿಯಲ್ಲಿ ‘ಏಮ್ಸ್’ ಸ್ಥಾಪನೆ ಮತ್ತು 10 ಹೊಸ ಗ್ರೀನ್‌ಫೀಲ್ಡ್ ವಿಮಾನ‌ ನಿಲ್ದಾಣಗಳು ಆರೋಗ್ಯ ರಕ್ಷಣೆ ಮತ್ತು ಸಂಪರ್ಕ ಕ್ಷೇತ್ರಗಳನ್ನು ಬಲಪಡಿಸಿವೆ.

ಗಡಿಯಂಚಿನಿಂದ ಮುಂಚೂಣಿಗೆ: ದಶಕಗಳ ಕಾಲ, ಮಿಜೋರಾಂನ ಜನರಿಗೆ ರಸ್ತೆಗಳು, ಶಾಲೆಗಳು ಮತ್ತು ರೈಲ್ವೆಗಳಿಗಾಗಿ ಕಾಯುವಂತೆ ಹೇಳಲಾಗುತ್ತಿತ್ತು. ಆ ಕಾಯುವಿಕೆ ಈಗ ಮುಗಿದಿದೆ. ಈ ಯೋಜನೆಗಳು ಈಶಾನ್ಯ ಭಾರತದ ಕುರಿತಾದ ನಮ್ಮ ಪ್ರಧಾನಮಂತ್ರಿಯವರ ‘ದೃಷ್ಟಿಕೋನ’ಕ್ಕೆ, ಮುನ್ನೋಟಕ್ಕೆ ಸಾಕ್ಷಿಯಾಗಿವೆ; ಅಂದರೆ ಒಂದು ಕಾಲದಲ್ಲಿ ‘ಗಡಿ’ ಎಂದು ಪರಿಗಣಿಸಲ್ಪಟ್ಟಿದ್ದ ಪ್ರದೇಶವು ಈಗ ಭಾರತದ ಬೆಳವಣಿಗೆಯ ಮುಂಚೂಣಿಯಲ್ಲಿರುವ ಭಾಗವೆಂದು ಪ್ರಶಂಸಿಸಲ್ಪಡು ತ್ತಿದೆ. ಇದು ಹೆಮ್ಮೆಯ ಸಂಗತಿಯಲ್ಲವೇ?

(ಲೇಖಕರು ಕೇಂದ್ರ ರೈಲ್ವೆ, ಇಲೆಕ್ಟ್ರಾನಿಕ್ಸ್ ಮತ್ತು‌ ಮಾಹಿತಿ ತಂತ್ರಜ್ಞಾನ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆಗಳ ಸಚಿವರು)