Rangaswamy Mookanahalli Column: ಪರಿಪೂರ್ಣತೆ ಬದುಕಿನ ಸಂಕೀರ್ಣತೆಯನ್ನು ಹಿಡಿದಿಡಲಾರದು !
ನೆಮ್ಮದಿಯ ಅರಸಿಕೊಂಡು ಆತ ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ನೂರಾರು ಕಿಲೋ ಮೀಟರ್ ದೂರ ಹೋಗುತ್ತಿದ್ದಾನೆ. ಅಭಿವೃದ್ಧಿಯ ಹೆಸರಿನಲ್ಲಿ ಗಂಗನ ಚುಂಬಿ ಕಟ್ಟಡ ಗಳು, ಐಷಾರಾಮಿ ಬದುಕು, ಕೆಲಸ ಇವುಗಳ ನಡುವೆ ಬದುಕನ್ನು ಕಟ್ಟಿ ಕೊಂಡ ಮನುಷ್ಯನಿಗೆ ಈ ಬದುಕು ಬಹು ಬೇಗ ಬೇಸರ ತಂದಿದೆ. ನೀವೇ ಗಮನಿಸಿ ನೋಡಿ ಸಾವಿರಾರು ವರ್ಷ ಕೃಷಿ, ಹೈನುಗಾರಿಕೆ ಇತ್ಯಾದಿಗಳು ಮೂಲವಾಗಿದ್ದ ಹಳ್ಳಿಯ ಬದುಕು ಎಂದಿಗೂ ಅವನಿಗೆ ಬೇಸರ ತರಿಸಲಿಲ್ಲ.
-
ವಿಶ್ವರಂಗ
ಮುಖದ ಮೇಲಿನ ಸುಕ್ಕು, ಪಾತ್ರೆ ತೊಳೆದು ಅಂದಗೆಟ್ಟಿರುವ ಕೈ, ಕೋಪ ಬಂದಾಗ ಮುಖದಲ್ಲಿ ಉಂಟಾಗುವ ನೆರಿಗೆ, ಒಟ್ಟಾರೆ ನಮ್ಮಲ್ಲಿರುವ ನ್ಯೂನತೆಗಳು ರಿಯಲ್. ಇಂತಹ ನ್ಯೂನತೆಗಳನ್ನು ಮೀರಿದ್ದನ್ನು ಮನಸ್ಸು ಪ್ರಥಮವಾಗಿ ಇಷ್ಟಪಡುತ್ತದೆ. ಅದಕ್ಕೆ ಅಟ್ರಾಕ್ಟ್ ಆಗುತ್ತದೆ. ಆದರೆ, ಸ್ವಲ್ಪ ಸಮಯದ ನಂತರ ಯಾವುದನ್ನೂ ಇಷ್ಟಪಟ್ಟಿದ್ದೆವೋ ಅದನ್ನು ನಾವು ತಿರಸ್ಕರಿಸಲು ಶುರು ಮಾಡುತ್ತೇವೆ.
ಮನುಷ್ಯನ ಗುಣ ನೋಡಿ. ಆತನೇ ಬಯಸಿ ಪಡೆದುಕೊಂಡ ಬದುಕು ಇವತ್ತು ಆತನಿಗೆ ಬೇಕಿಲ್ಲ. ಅದು ಅವನಿಗೆ ಬೇಜಾರಾಗಿದೆ. ಎಐ ಜಗತ್ತು, ಇಂಟರ್ ನೆಟ್ ದುನಿಯಾ ಆತನಿಗೆ ಏಕತಾನತೆ ಸೃಷ್ಟಿಸಿವೆ. ಶನಿವಾರ, ಭಾನುವಾರ ಬಂತೆಂದರೆ ಸಾಕು ಆತ ನಗರ ಪದೇಶ ಬಿಟ್ಟು ಬಹುದೂರ ಹೋಗುತ್ತಿದ್ದಾನೆ. ಅದರಲ್ಲೂ ಮೂರು ಅಥವಾ ಅದಕ್ಕಿಂತ ಹೆಚ್ಚು ದಿನ ಒಟ್ಟಾಗಿ ರಜಾ ಸಿಕ್ಕಿದರೆ ಮುಗಿಯಿತು.
ನೆಮ್ಮದಿಯ ಅರಸಿಕೊಂಡು ಆತ ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ನೂರಾರು ಕಿಲೋ ಮೀಟರ್ ದೂರ ಹೋಗುತ್ತಿದ್ದಾನೆ. ಅಭಿವೃದ್ಧಿಯ ಹೆಸರಿನಲ್ಲಿ ಗಂಗನ ಚುಂಬಿ ಕಟ್ಟಡಗಳು, ಐಷಾರಾಮಿ ಬದುಕು, ಕೆಲಸ ಇವುಗಳ ನಡುವೆ ಬದುಕನ್ನು ಕಟ್ಟಿ ಕೊಂಡ ಮನುಷ್ಯನಿಗೆ ಈ ಬದುಕು ಬಹು ಬೇಗ ಬೇಸರ ತಂದಿದೆ. ನೀವೇ ಗಮನಿಸಿ ನೋಡಿ ಸಾವಿರಾರು ವರ್ಷ ಕೃಷಿ, ಹೈನುಗಾರಿಕೆ ಇತ್ಯಾದಿಗಳು ಮೂಲವಾಗಿದ್ದ ಹಳ್ಳಿಯ ಬದುಕು ಎಂದಿಗೂ ಅವನಿಗೆ ಬೇಸರ ತರಿಸಲಿಲ್ಲ.
ಆದರೆ, ಈಗ ಎಲ್ಲವೂ ಆತನ ಕನಸಿನಂತೆ ಆಗಿದೆ. ಬದುಕು ಬಹಳ ಪರ್ಫೆಕ್ಟ್ ಆಗಿದೆ. ಆದರೆ ಅದು ಅವನಿಗೆ ಇಷ್ಟವಾಗುತ್ತಿಲ್ಲ. ಬೇಸರ ತಂದಿದೆ. ಇದು ಭಾರತದ ಬಹುದೊಡ್ಡ ನಗರಗಳಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲ ದೊಡ್ಡ ನಗರಗಳಲ್ಲಿ ಸಾಮಾನ್ಯವಾಗಿದೆ. ಈ ರೀತಿ ಏಕೆ ಆಗುತ್ತೆ ಗೊತ್ತಾ?
ಪರ್ಫೆಕ್ಷನ್ ಇಸ್ ನಾಟ್ ನ್ಯಾಚುರಲ್!
ಹೌದು ಕಣ್ರೀ, ಇವತ್ತಿನ ವಿಜ್ಞಾನ ಹೇಳುತ್ತಿರುವ ಮಾತಿದು. ಎಲ್ಲವೂ ಪರಿಪೂರ್ಣವಾಗಿದ್ದರೆ ಅಂದರೆ ಪರ್ಫೆಕ್ಟ್ ಆಗಿದ್ದರೆ ಅದು ಮನುಷ್ಯನಿಗೆ ಬಹುಬೇಗ ಬೇಸರ ತರಿಸುತ್ತೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇವತ್ತಿನ ಎಐ ನೀವು ಸರಿಯಾದ ಸೂಚನೆ ಕೊಟ್ಟರೆ ಸಾಕು ನೀವು ಕೇಳಿದ್ದೆಲ್ಲಾ ಕ್ಷಣ ಮಾತ್ರದಲ್ಲಿ ನೀಡುತ್ತದೆ. ಅದು ಮೊದಲ ಬಾರಿ, ಎರಡನೇ ಬಾರಿ ಖುಷಿ ನೀಡಬಹುದು. ಆದರೆ, ಇದನ್ನು ಪುನರಾವರ್ತನೆ ಮಾಡುತ್ತಾ ಹೋದಂತೆ ಗೊತ್ತಿಲ್ಲದೇ ಬೇಸರ ಆವರಿಸಿಕೊಳ್ಳುತ್ತದೆ.
ಇದನ್ನೂ ಓದಿ: Rangaswamy Mookanahalli Column: ಕೋಟಿಗೊಬ್ಬರಾಗುವ ಆಯ್ಕೆ ನಮ್ಮ ಕೈಲಿದೆ !
ನೀವು ಕೇಳಿದ ಲೇಖನವನ್ನೂ ಅಥವಾ ಚಿತ್ರವನ್ನೂ ಅಥವಾ ಇನ್ನೇನೋ ಅದು ಕೊಡು ತ್ತದೆ. ಆದರೆ, ಅದರಲ್ಲಿ ಜೀವವಿರುವುದಿಲ್ಲ. ಅದದೇ ಪದಗಳ ಪುನರಾವರ್ತನೆ, ಆಡಂಬರದ ಪದ ವಿನ್ಯಾಸ, ನೀರಸ ಹೋಲಿಕೆಗೆಳು, ಎಲ್ಲಕ್ಕಿಂತ ಮುಖ್ಯವಾಗಿ ಅದರಲ್ಲಿ ಮನುಷ್ಯನ ಭಾವನೆಗಳು ಇರುವುದಿಲ್ಲ. ಹೀಗಾಗಿ ಅವು ಎಷ್ಟು ಬೇಗ ಪ್ರಸಿದ್ಧಿಗೆ ಬಂದವೋ, ಎಷ್ಟು ಬೇಗ ಜನ ಮೆಚ್ಚಿಕೊಂಡರೋ ಅಷ್ಟೇ ಬೇಗ ಅದನ್ನು ತಿರಸ್ಕರಿಸುತ್ತಾರೆ.
ನಾವಿನ್ನೂ ಎಐ ಯುಗಕ್ಕೆ ಅಂಬೆಗಾಲಿಡುತ್ತಿದ್ದೇವೆ. ಆಗಲೇ ಇದು ಆದಷ್ಟು ನಿರಸವಾಗಿರ ಬಹುದು ಎನ್ನುವ ಟ್ರೈಲರ್ ನೋಡುತ್ತಿದ್ದೇವೆ. ಯಾವುದು ಸಹಜ ಅದು ಮನುಷ್ಯನಿಗೆ ಬಹುಬೇಗ ಇಷ್ಟವಾಗುತ್ತೆ. ಯಾವುದೆಲ್ಲಾ ಸಹಜವಲ್ಲ ಅದು ಆತನನ್ನು ಆಕರ್ಷಿಸುತ್ತದೆ. ಆಕರ್ಷಣೆ ಬಹಳ ಕಾಲ ಉಳಿ ಯುವುದಿಲ್ಲ. ಉದಾಹರಣೆಗೆ ನೀವೊಂದು ಸಂದೇಶ ಅಮ್ಮನಿಗೊ, ಪ್ರೇಯಸಿಗೊ ಅಥವಾ ಗೆಳೆಯನಿಗೊ ಕಳಿಸಬೇಕು ಎಂದುಕೊಳ್ಳಿ. ಅದನ್ನು ನೀವು ಪೇಪರ್ ಮೇಲೆ ಪೆನ್ನಿಡಿದು ಬರೆಯುತ್ತಾ ಹೋದರೆ ಆಗ ಭಾವನೆಗಳು ಉಂಟಾಗು ತ್ತವೆ.
ಪತ್ರದ ಉದ್ದೇಶ ಕೆಲವೊಮ್ಮೆ ಕಣ್ಣಿರಿಗೂ ಕಾರಣವಾಗಬಹುದು. ಆಗ ಕಣ್ಣೀರು ಬಿದ್ದು ಅಕ್ಷರಗಳು ಗೌಜಾಗಬಹುದು. ಆದರೆ, ಅದನ್ನು ಓದುವಾಗ ಬರೆದವರ ಮನಸ್ಥಿತಿ ಅರ್ಥ ವಾಗುತ್ತದೆ. ಹೀಗೆ ಬರೆಯುವಾಗ ಭಾವುಕತೆ ಹೆಚ್ಚಾಗಿ ಅಕ್ಷರ ದೋಷ ಕೂಡ ಉಂಟಾಗಿರು ತ್ತದೆ. ಇವೆಲ್ಲಾ ಏಕಾಗುತ್ತದೆ ಎಂದರೆ ನಾವ್ಯಾರೂ ಪರಿಪೂರ್ಣರಲ್ಲ.
ಇಮ್ಪರ್ಫೆಕ್ಟ್ ಸಹಜ, ಅಂದರೆ ಅಪರಿಪೂರ್ಣತೆ ಸಹಜವಾದದ್ದು. ಹೀಗಾಗಿ ಅದು ಇಷ್ಟ ವಾಗುತ್ತದೆ. ಒಂದಕ್ಷರ ದೋಷವೂ ಇಲ್ಲದ, ಆಡಂಬರದ ಮತ್ತು ಅತ್ಯಂತ ಔಪಚಾರಿಕ ಪದ ಬಳಕೆ ಓದುಗರಲ್ಲಿ ಬರೆದವರ ಭಾವನೆಯನ್ನು ತಲುಪಿಸುವಲ್ಲಿ ವಿಫಲವಾಗುತ್ತದೆ.
ಏಕೆಂದರೆ ಬರೆದವರು ಕೇವಲ ಪ್ರಾಂ ಕೊಟ್ಟಿರುತ್ತಾರೆ. ಅವರಲ್ಲಿ ಭಾವನೆ ಇಲ್ಲದ ಮೇಲೆ ಓದುಗನಲ್ಲಿ ಅದು ಹೇಗೆ ಭಾವನೆ ಹುಟ್ಟುಹಾಕಬಲ್ಲದು? To err is human ಎನ್ನುವುದು ಜನಜನಿತ ಮಾತು. ತಪ್ಪು ಮಾಡುವುದು ಮನುಷ್ಯ ಸಹಜ. ಹೀಗಾಗಿ ತಪ್ಪಿಲ್ಲದೆ ಪರ್ಫೆಕ್ಟ್ ಆಗಿರುವುದನ್ನು ಬಹು ಕಾಲ ಮನುಷ್ಯನ ಮಿದುಳು ಒಪ್ಪಿಕೊಳ್ಳುವುದಿಲ್ಲ.
ಎಐ ನಂಬಿಕೆ ಬಗ್ಗೆ, ಪ್ರೀತಿಯ ಬಗ್ಗೆ, ಕರುಣೆಯ ಬಗ್ಗೆ, ಹಣಕಾಸಿನ ವಿಚಾರದ ಬಗ್ಗೆ ಹೀಗೆ ಜಗತ್ತಿನಲ್ಲಿರುವ ಯಾವುದೇ ವಿಷಯದ ಬಗ್ಗೆ ನಮಗೆ ಕ್ಷಣದಲ್ಲಿ ಬರೆದು ಕೊಡಬಹುದು. ಆದರೆ, ನಂಬಿಕೆಯ ಬಗ್ಗೆ ಬರೆದ ಅದರ ಬರಹದಲ್ಲಿ ನಿಜವಾದ ನಂಬಿಕೆ ಇರುವುದಿಲ್ಲ, ಪ್ರೀತಿ ಇರುವುದಿಲ್ಲ, ಕರುಣೆ ಎನ್ನುವುದು ಔಪಚಾರಿಕ, ಇನ್ನು ಹಣಕಾಸಿನ ವಿಚಾರವಂತೂ ದೇವರಿಗೆ ಪ್ರೀತಿ!
ಇವೆಲ್ಲವೂ ಟೆಕ್ಸ್ಟ್ ಬುಕ್ ನಲ್ಲಿರುವಂತೆ ಇರುತ್ತದೆ. ಬಹಳಷ್ಟು ಜನ ಶಾಲೆಯ ಕಲಿಕೆಯಲ್ಲಿ ಏಕೆ ಹಿಂದೆ ಉಳಿಯುತ್ತಾರೆ? ಅದೇಕೆ ಅವರಿಗೆ ಕಲಿಕೆ ಇಷ್ಟಾವಾಗುವುದಿಲ್ಲ? ಏಕೆಂದರೆ ನಮ್ಮ ಶಾಲೆಯ ಕಲಿಕೆಯ ಪುಸ್ತಕಗಳಲ್ಲಿ ಜೀವಂತಿಕೆಯಿಲ್ಲ. ಯಾವುದು ಸಹಜ, ಸರಳವೂ ಆಗಿರುವುದಿಲ್ಲ ಅದನ್ನು ನಮ್ಮ ಮಿದುಳು ರಿಜೆಕ್ಟ್ ಮಾಡುತ್ತದೆ. ಪರ್ಫೆಕ್ಷನ್ ಎನ್ನುವುದು ನಿತ್ಯವೂ ಅದೇ ಊಟ, ತಿಂಡಿ ತಿಂದಂತೆ. ಹೊಟ್ಟೆ ತುಂಬುತ್ತದೆ. ಆದರೆ ಮನಸ್ಸು? ಅಪರಿಪೂರ್ಣತೆ ಹಿಂದಿನ ಮನಶಾಸ್ತ್ರ
ಯಾವುದು ನಿಜವೋ ಅಂದರೆ ರಿಯಲ್ ಆಗಿರುತ್ತದೋ ಅದನ್ನು ಮನಸ್ಸು ಇಷ್ಟಪಡುತ್ತದೆ ಎನ್ನುತ್ತದೆ ಮನಶಾಸ್ತ್ರ. ಮುಖದ ಮೇಲಿನ ಸುಕ್ಕು, ಪಾತ್ರೆ ತೊಳೆದು ಅಂದಗೆಟ್ಟಿರುವ ಕೈ, ಕೋಪ ಬಂದಾಗ ಮುಖದಲ್ಲಿ ಉಂಟಾಗುವ ನೆರಿಗೆ, ಒಟ್ಟಾರೆ ನಮ್ಮಲಿರುವ ನೂನ್ಯತೆಗಳು ರಿಯಲ್. ಇಂತಹ ನೂನ್ಯತೆಗಳನ್ನು ಮೀರಿದ್ದನ್ನು ಮನಸ್ಸು ಪ್ರಥಮವಾಗಿ ಇಷ್ಟಪಡುತ್ತದೆ. ಅದಕ್ಕೆ ಅಟ್ರಾಕ್ಟ್ ಆಗುತ್ತದೆ. ಆದರೆ, ಸ್ವಲ್ಪ ಸಮಯದ ನಂತರ ಯಾವುದನ್ನೂ ಇಷ್ಟಪಟ್ಟಿ ದ್ದೆವೋ ಅದನ್ನು ನಾವು ತಿರಸ್ಕರಿಸಲು ಶುರು ಮಾಡುತ್ತೇವೆ.
ಸೋಶಿಯಲ್ ಮೀಡಿಯಾದಲ್ಲಿ ಚೆನ್ನಾಗಿ ಕಾಣಿಸಬೇಕು ಎನ್ನುವ ಕಾರಣಕ್ಕೆ ಇಲ್ಲಸಲ್ಲದ ಫಿಲ್ಟರ್ಸ್ ಬಳಸಿ ಫೋಟೊ ಬಹಳಷ್ಟು ಚಂದವಾಗಿಸಿ ಸಾವಿರಾರು ಲೈಕು ಗಿಟ್ಟಿಸಿಕೊಳ್ಳ ಬಹುದು. ಆದರೆ, ಪದೇ ಪದೆ ಅದನ್ನೇ ಮಾಡುತ್ತಿದ್ದರೆ ಆ ರೀತಿ ಫೋಟೊ ತಿದ್ದುವವರಿಗೂ, ನೋಡುವವರಿಗೂ ಇದು ಸತ್ಯವಲ್ಲ ಎನ್ನುವುದು ಗೊತ್ತಾಗುತ್ತದೆ.
ಯಾವಾಗ ಇಲ್ಲದ್ದನ್ನು ಇದೆ ಎನ್ನುವಂತೆ ತೋರಿಸಲು ಹೋಗುತ್ತೇವೆ ಅದು ಬಹುಬೇಗ ಬೇಸರ ತರಿಸುತ್ತದೆ. ಹೆಚ್ಚು ಸೋಶಿಯಲ್ ಮೀಡಿಯಾ ಬಳಕೆ ಮಾಡುವುದರಿಂದ ಡಿಪ್ರೆಶನ್ ಅಂದರೆ ಖಿನ್ನತೆಗೆ ಒಳಗಾಗಾಗುತ್ತಾರೆ ಎನ್ನುತ್ತದೆ ಒಂದು ಸಂಶೋಧನೆ. ಯಾರೆಲ್ಲಾ ಪರಿಪೂರ್ಣರು ಎಂದು ತೋರಿಸಿಕೊಳ್ಳುವ ಚಟಕ್ಕೆ ಬಿದ್ದಿರುತ್ತಾರೆ ಅವರಲ್ಲಿ ಖಿನ್ನತೆ ಸಹಜವಾಗಿ ಉಂಟಾಗುತ್ತದೆ.
ನಮ್ಮನ್ನು ಮನುಷ್ಯರನ್ನಾಗಿ ಮಾಡಿರುವುದು ಏನು ಗೊತ್ತೇ? ನಮ್ಮಲ್ಲಿರುವ ನೂನ್ಯತೆಗಳು! ಹೌದು, ಅಪರಿಪೂರ್ಣತೆ ನಮ್ಮನ್ನು ರೋಬೋಟಿಕ್ ಆಗುವುದರಿಂದ ಬಚಾವು ಮಾಡಿದೆ. ಇಲ್ಲದಿದ್ದರೆ ಎಲ್ಲವೂ ಪರಿಶುದ್ಧವೂ ಮತ್ತು ಪರಿಪೂರ್ಣವೂ ಆಗಿರುತ್ತಿತ್ತು. ಯಾವುದೆಲ್ಲಾ ಸಿಸ್ಟಮ್ಯಾಟಿಕ್ ಆಗಿರುತ್ತದೆ, ಅವೆಲ್ಲವೂ ಬೇಗ ಬೇಸರ ತರಿಸುತ್ತದೆ.
ಇದಕ್ಕೊಂದು ಉದಾಹರಣೆ ಹೇಳುವೆ. ಜಗತ್ತು ಹಾಡಿ ಹೊಗಳಿ ಕೊಂಡಾಡುವ ಜಪಾನ್ ದೇಶದಲ್ಲಿ ಖಿನ್ನತೆ ಬಹಳ ಹೆಚ್ಚು. ಮಾತುಕತೆಯಲ್ಲಿದೆ ಒಂಟಿಯಾಗಿ ಬದುಕುವರ ಪ್ರಮಾಣ ಬಹಳ ಹೆಚ್ಚು. ಆತ್ಮಹತ್ಯೆ ಜತೆಗೆ ತಮ್ಮನ್ನು ತಾವೇ ಮಿಸ್ಸಿಂಗ್ ಮಾಡಿಸಿ ಕೊಳ್ಳುವವರ ಸಂಖ್ಯೆ ಹೆಚ್ಚು. ಖಿನ್ನತೆ ಟ್ರೀಟ್ ಮಾಡುವುದು, ಬಯಸಿ ಬಂದ ಜನರನ್ನು ನಾಪತ್ತೆ ಯಾಗುವಂತೆ ನೋಡಿಕೊಳ್ಳುವುದು ಕೂಡ ಇಲ್ಲಿ ಉದ್ಯಮ.
ಭಾರತಕ್ಕೆ ಬಂದ ಜಪಾನೀಯರು, ಪಾಶ್ಚಾತ್ಯರು ಮತ್ತೆ ಮರಳಿ ತಮ್ಮ ದೇಶಕ್ಕೆ ಹೋಗಲು ಇಷ್ಟಪಡದೆ ಇಲ್ಲೇ ಉಳಿದುಕೊಳ್ಳುವುದು ಇದೆ ಕಾರಣಕ್ಕೆ. ಬದುಕು ಎಂದರೆ ಅದು ಸ್ಟ್ರಕ್ಚರ್ಡ್ ಅಲ್ಲ. ಅದು ಗಲಾಟೆ-ಗದ್ದಲದಿಂದ ಕೂಡಿದ್ದಾಗಿದೆ. ಯಾವುದೆಲ್ಲಾ ಬಹಳ ಶಿಸ್ತುಬದ್ಧವಾಗಿರುತ್ತದೆ ಅವೆಲ್ಲವೂ ಪ್ರಾಥಮಿಕ ಹಂತದಲ್ಲಿ ಖುಷಿ ನೀಡುತ್ತದೆ. ವಾಹ್ ಎನ್ನಿಸುತ್ತದೆ. ಅದೇ ಬದುಕು ಎಂದಾಗ ನಿಧಾನವಾಗಿ ಮನಸ್ಸು ಅದನ್ನು ರಿಜೆಕ್ಟ್ ಮಾಡಲು ಶುರು ಮಾಡುತ್ತದೆ.
Uncanny valley effect, ಬಯಾಲಜಿ ಬಗೆಗಿನ ಸೈಕಾಲಜಿ
ಹೋಟೆಲ್‌ಗಳಲ್ಲಿ, ಫ್ಯಾಕ್ಟರಿಗಳಲ್ಲಿ ಇನ್ನಿತರ ಕಡೆಗಳಲ್ಲಿ ರೋಬೋಟ್ ಕೆಲಸಕ್ಕೆ ಹಾಕಿದ್ದಾರೆ ಎನ್ನುವುದು ದೊಡ್ಡ ಮಟ್ಟದ ಸುದ್ದಿಯಾಗುತ್ತೆ. ರೋಬೋಟ್‌ಗಳು ಥೇಟ್ ನಮ್ಮಂತೆ ಕಾಣುತ್ತವೆ, ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತವೆ ಎನ್ನುವುದು ಖುಷಿ ಕೊಡುತ್ತದೆ. ಆದರೆ ಯಾವಾಗ ಅದು ಹೆಚ್ಚು ನಮ್ಮನ್ನು ಹೋಲುವ ಮಟ್ಟಕ್ಕೆ ಉನ್ನತಿ ಕಾಣಲು ಶುರುವಾಗುತ್ತದೆ ಆತ ಅದನ್ನು ನಮ್ಮ ಮನಸ್ಸು ರಿಜೆಕ್ಟ್ ಮಾಡುತ್ತದೆ.
ಗಮನಿಸಿ ಲುಕ್ ಅಲೈಕ್ ಅಂದರೆ ನಮ್ಮಂತೆ ಕಾಣುವ ವ್ಯಕ್ತಿಯನ್ನು ಕಂಡಾಗ ಮೊದಲಿಗೆ ಅಚ್ಚರಿಯಾಗುತ್ತದೆ. ಆದರೆ ನಂತರ ಸಣ್ಣ ಭಯ, ಎಚ್ಚರಿಕೆ ಮನಸ್ಸಿನಲ್ಲಿ ಗೊತ್ತಿಲ್ಲದೇ ಶುರು ವಾಗುತ್ತೆ. ಯಾವುದು ಥೇಟ್ ನಮ್ಮಂತೆ/ನಮ್ಮನ್ನು ಹೋಲುವ ಸನಿಹಕ್ಕೆ ಬರುತ್ತದೆ ಅದರ ಬಗ್ಗೆ ಮನಸ್ಸಿನಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.
ಅಪನಂಬಿಕೆ ಶುರುವಾಗುತ್ತೆ. ಅಂದರೆ ದೈಹಿಕವಾಗಿ ಬಯಾಲಜಿ ಹೆಚ್ಚುಕಡಿಮೆ ಸೇಮ್ ಇದ್ದಾಗ ಉಂಟಾಗುವ ಈ ಮನಸ್ಥಿತಿಗೆ ‘ಆನ್ ಕ್ಯಾನಿ ವ್ಯಾಲಿ ಎಫೆಕ್ಟ್’ ಎನ್ನುತ್ತಾರೆ.
ನಾವು ಒಬ್ಬರಂತೆ ಒಬ್ಬರಿಲ್ಲ, ಹೀಗಾಗಿ ಸಮಾಜದಲ್ಲಿ ಈ ಮಟ್ಟದ ಗದ್ದಲವಿದೆ. ನಾವೆಲ್ಲರೂ ಒಂದೇ ರೀತಿಯಾದರೆ? ಸಮಾಜದಲ್ಲಿ ಗೌಜುಗದ್ದಲ ಇರುವುದಿಲ್ಲ. ಅದರ ಜತೆಗೆ ಬದುಕು ಕೂಡ ಇರುವುದಿಲ್ಲ. ಒಂದು ಕಾಡಿನಲ್ಲಿ ಬಹಳಷ್ಟು ತರಹದ ಪ್ರಾಣಿಗಳಿವೆ. ಗಿಡಮರಗಳಿವೆ, ಹೂವುಗಳಿವೆ. ಹೀಗಾಗಿ ಆ ಕಾಡು ಸುಂದರವಾಗಿದೆ.
ಒಮ್ಮೆ ಯೋಚಿಸಿ ನೋಡಿ, ಸಿಂಹವೂ ಜಿಂಕೆಯಾಗಿ, ಹುಲಿಯೂ ಜಿಂಕೆಯಾಗಿ, ಜಿರಾಫೆ ಯೂ ಜಿಂಕೆಯಾಗಿ, ಜಿಂಕೆಯೂ ಜಿಂಕೆಯಾಗಿದ್ದರೆ ಆ ಕಾಡು ಹೇಗಿರಬಹುದು? ಈ ಯೋಚನೆಯನ್ನೇ ನಿಮ್ಮ ಮಿದುಳು ರಿಜೆಕ್ಟ್ ಮಾಡುತ್ತಿದೆ ಅಲ್ವಾ? ಇದನ್ನೆ uncanny valley effect ಎನ್ನುವುದು.
ಇದೆ ಬಯಾಲಜಿ ಬಗೆಗಿನ ನಮ್ಮ ಸೈಕಾಲಜಿ. ಅಪರಿಪೂರ್ಣತೆ ಎನ್ನುವುದು ಭಾವನೆ ಯೊಂದಿಗೆ ತಳುಕು ಹಾಕಿಕೊಂಡಿದೆ ನಿಮ್ಮ ಮಗುವಿಗೆ ನೀವೊಂದು ಕಥೆ ಹೇಳಲು ಹೇಳಿ. ಒಂದು ಪದ್ಯವನ್ನು ಕಂಠಪಾಠ ಮಾಡಿ ಹೇಳಲು ಹೇಳಿ. ಶಾಲೆಯ ಭಾಷಣಕ್ಕೆ ತಯಾರು ಮಾಡಿ ಅಥವಾ ಇವೆಲ್ಲವನ್ನೂ ವಯಸ್ಕರು ಯಾವುದೂ ಒಂದು ಕಾರ್ಯಕ್ರಮಕ್ಕೆ ತಯಾರು ಮಾಡಿಕೊಳ್ಳುತ್ತಿದ್ದೇವೆ ಎಂದುಕೊಳ್ಳಿ.
ಇದನ್ನು ಕಾರ್ಯಗತಗೊಳಿಸುವಾಗ ನಾವು ತೊದಲುತ್ತೇವೆ, ಮರೆಯುತ್ತೇವೆ, ಉದ್ವೇಗಕ್ಕೆ ಒಳಾಗುತ್ತೇವೆ. ಎಡವುತ್ತೇವೆ, ತಿದ್ದಿಕೊಳ್ಳುತ್ತೇವೆ, ಸರಿಪಡಿಸಿಕೊಂಡು ಹೇಳಬೇಕಾದು ಹೇಳುತ್ತೇವೆ. ಏಕೆಂದರೆ ನಮ್ಮಲ್ಲಿ ಭಾವನೆಯಿದೆ. ಈ ಭಾವನೆ ಇರುವ ಕಾರಣಕ್ಕೆ ನಾವು ಪರ್ಫೆಕ್ಟ್ ಆಗಲು ಸಾಧ್ಯವಿಲ್ಲ. ನಾವು ಫೀಲ್ ಮಾಡುತ್ತೇವೆ.
ಹೀಗಾಗಿ ಕಾರ್ಯಕ್ರಮದ ಬಗ್ಗೆ ದುಗುಡ ವಿರುತ್ತದೆ. ಅದರ ಫಲಿತಾಂಶದ ಬಗ್ಗೆ ಮನಸ್ಸು ಯೋಚಿಸುತ್ತದೆ. ಹೀಗಾಗಿ ನಾವು ತಪ್ಪು ಮಾಡುತ್ತೇವೆ. ಈ ರೀತಿ ಆಗುವುದು ಸಹಜ. ಯಾವುದು ಸಹಜ ಅದನ್ನು ನಮ್ಮ ಮನಸ್ಸು ಇಷ್ಟಪಡುತ್ತದೆ. ಇದೆ ಕೆಲಸವನ್ನು ಎಐ ತಪ್ಪಿಲ್ಲದೆ ಮಾಡುತ್ತದೆ. ಹೇಳಿದ ಕಾರ್ಯಕ್ರಮವನ್ನು ಅದು ಅತ್ಯಂತ ಯಶಸ್ವಿಯಾಗಿ ಮಾಡಿಮುಗಿಸುತ್ತದೆ.
ಏಕೆಂದರೆ ಅದರಲ್ಲಿ ಭಾವನೆ ಯಿಲ್ಲ. ಭಾವನೆಯಿಲ್ಲದ ಮೇಲೆ ಸೋಲು, ಗೆಲವು, ಫಲಿತಾಂಶದ ಬಗ್ಗೆ ಅದಕ್ಕೆ ಯೋಚನೆ ಬರುವುದಿಲ್ಲ. ಅದು ತನ್ನ ಕೆಲಸವನ್ನು ರೋಬೋ ಟಿಕ್ ಯಾಂತ್ರಿಕವಾಗಿ ಮಾಡಿ ಮುಗಿಸುತ್ತದೆ. ಅಪರಿಪೂರ್ಣತೆ, ಇಂಪರ್ಫೆಕ್ಷನ್ ಎಂದರೆ ನಾವು, ಜೀವ, ಭಾವನೆ ಇರುವ ಮನುಷ್ಯರು. ಪರಿಪೂರ್ಣತೆ ಎನ್ನುವುದು ಬದುಕಿನ ಸಂಕೀರ್ಣತೆಯನ್ನು ಎಂದಿಗೂ ಹಿಡಿದಿಡಲಾರದು!
ಇಂಪರ್ಫೆಕ್ಷನ್ ಹಿಂದಿನ ಲೆಕ್ಕಾಚಾರ
ಗಣಿತವನ್ನು ನೋಡಿ! ಅಲ್ಲಿ ಎರಡು ಪ್ಲಸ್ ಎರಡು ಎಂದರೆ ನಾಲ್ಕು ಎನ್ನುವ ಉತ್ತರ ಕೊಡಬೇಕು. ಆದರೆ, ಬದುಕು ಗಣಿತವಲ್ಲ. ಇಲ್ಲಿನ ಸಾಧ್ಯತೆಗಳ ಆಯಾಮಕ್ಕೆ ಸಾವಿರ ಮುಖವಿದೆ. ಇಷ್ಟೇ ಸರಿ ಎಂದು ಹೇಳಾಗುವುದಿಲ್ಲ. ಬದುಕು ಇಷ್ಟು ದಿನವಾದರೂ ಬೇಸರ ವಾಗದೆ ಮನುಷ್ಯ ನಡೆಸಿಕೊಂಡು ಬಂದಿರುವುದು ಈ ಕಾರಣದಿಂದ! ಪರ್ಫೆಕ್ಟ್ ಎನ್ನುವುದು ಸಸ್ಟೇನೇಬಲ್ ಅಲ್ಲ. ಇಡೀ ಬ್ರಹ್ಮಾಂಡ ಸೃಷ್ಟಿಯಾಗಿರುವುದೇ ಅಪರಿಪೂರ್ಣ ತೆಯಲ್ಲಿ. ಗೌಜು ಗದ್ದಲ ಸಹಜವಾದದ್ದು. ಶಾಂತಿ, ನಿಶಬ್ದ ಅಸಹಜ.
ಬಹುಕಾಲ ಶಾಂತಿಯಲ್ಲಿ, ನಿಶಬ್ದದಲ್ಲಿ ಮನುಷ್ಯ ಬದುಕಲಾರ. ಹೀಗಾಗಿ ನಾವು ಜಗತ್ತಿನಲ್ಲಿ ಇವತ್ತಿನ ಪರಿಸ್ಥಿತಿ ಕಾಣಬಹುದು. ಇರುವುದನ್ನು ಛಿದ್ರಗೊಳಿಸುವುದು, ಮತ್ತೆ ಬದುಕನ್ನು ಕಟ್ಟಿಕೊಳ್ಳುವುದು ಸಹಜ. ಪರಿಪೂರ್ಣತೆ ಅಸಹಜ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಹುಕಾಲ ಉಳಿಯುವುದಿಲ್ಲ ಮನುಷ್ಯನಿಗೆ ಪರಿಪೂರ್ಣ ತೆ, ಪರ್ಫೆಕ್ಟ್ ಲೈಫ್ ಇಷ್ಟವಾಗುವುದಿಲ್ಲ. ಎಐ ಪರ್ಫೆಕ್ಟ್ ಜೀವನವನ್ನು ಸೃಷ್ಟಿಸುತ್ತದೆ. ಬದುಕನ್ನು ಬಹಳ ಕರಾರುವಾಕ್ಕಾಗಿಸುತ್ತದೆ. ಎಲ್ಲವೂ ಬಹಳ ಪ್ರಿಡಿಕ್ಟಬಲ್ ಆಗಿಸುತ್ತದೆ. ಯಾವುದನ್ನೂ ನಾವು ಹೀಗಿರಬೇಕು ಎಂದು ಬಯಸಿ ಕಟ್ಟಿಕೊಂಡೆವೋ ಅದೇ ಬದುಕು ಬೇಡ ಎಂದು ನಾವು ಅದರಿಂದ ದೂರ ಹೋಗುತ್ತೇವೆ.
ಮಣ್ಣು, ಕಸ, ಧೂಳು, ಸಗಣಿ ಇಷ್ಟವಾಗಲು ಶುರುವಾಗುತ್ತೆ. ಸಾವಿರಾರು ವರ್ಷ ಮನುಷ್ಯ ಅಸ್ಥಿರತೆ, ಅಪರಿಪೂರ್ಣತೆ ಮತ್ತು ನಾಳಿನ ಜೀವನ ಊಹೆಗೆ ನಿಲುಕದೆ ಒಂದು ಕುತೂಹಲ ಉಳಿಸಿದ ಕಾರಣ ಖುಷಿಯಿಂದ ಬದುಕಿದ, ಮತ್ತೆ ಮರಳಿ ಅದೇ ಬದುಕಿನಡೆಗೆ ಸಾಗುತ್ತಾನೆ. ಆ ದಿನಗಳು ದೂರವಿಲ್ಲ.