Hari Paraak Column: ರಾಘವ ಛಡ್ಡಾ- ಹಮ್ ʼಆಪ್ʼ ಕೇ ಹೈ ಕೌನ್
ನಿರ್ದೇಶಕ ಎಪಿ ಅರ್ಜುನ್ ಕೂಡಾ ಕೆಟ್ಟದಾಗಿ ಸಿನಿಮಾ ವಿಮರ್ಶೆ ಮಾಡುವ ಯೂಟ್ಯೂಬರ್ ಗಳ ಮೇಲೆ ಪೊಗರು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದರು. ಆದಿತ್ಯ ಅವರದ್ದು ಅದರ ಮುಂದುವರೆದ ಅಧ್ಯಾಯ ಆಗಿತ್ತು ಅಷ್ಟೇ. ಆದಿತ್ಯ ತಮ್ಮ ಚಿತ್ರದ ಹೆಸರಿಗೆ ತಕ್ಕಂತೆ ಇನ್ನೂ ಸ್ವಲ್ಪ ಮುಂದುವರಿದು ವಾಣಿಜ್ಯ ಮಂಡಳಿಯ ಛೇಂಬರ್‌ವರೆಗೂ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದರು.
-
ತುಂಟರಗಾಳಿ
ಸಿನಿಗನ್ನಡ
ಪಕ್ಕದ ರಾಜ್ಯದ ಪುಣ್ಯಾತ್ಮರೊಬ್ಬರು ಸಿನಿಮಾ ಒಂದು ಬಿಡುಗಡೆ ಆಗಿ ಒಂದು ತಿಂಗಳು ಆಗೋವರೆಗೂ ಅದನ್ನು ವಿಮರ್ಶೆ ಮಾಡಬಾರದು ಅಂತ ಕೋರ್ಟಿಗೆ ಹೋಗಿದ್ದರು. ನೆಗೆಟಿವ್ ವಿಮರ್ಶೆ ಮಾಡೋರ ವಿರುದ್ಧದ ಈ ಹೋರಾಟಕ್ಕೆ ಕೋರ್ಟ್‌ನಲ್ಲಿ ಅವರಿಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದ್ದರೂ ಇನ್ನೂ ಅಂತಿಮ ತೀರ್ಪು ಬಂದಿಲ್ಲ.
ವಿಶೇಷವಾಗಿ ಅವರು ಯೂಟ್ಯೂಬರ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನು ಹೋರಾಟ ನಡೆಸುತ್ತಿದ್ದಾರಂತೆ. ಕನ್ನಡದ ನಟ ಆದಿತ್ಯ ಕೂಡಾ ತಮ್ಮ ಮುಂದುವರೆದ ಅಧ್ಯಾಯ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಯೂಟ್ಯೂಬರ್‌ಗಳ ಮೇಲೆ ರಾಂಗ್ ಆಗಿದ್ದರು.
ನಿರ್ದೇಶಕ ಎಪಿ ಅರ್ಜುನ್ ಕೂಡಾ ಕೆಟ್ಟದಾಗಿ ಸಿನಿಮಾ ವಿಮರ್ಶೆ ಮಾಡುವ ಯೂಟ್ಯೂ ಬರ್‌ಗಳ ಮೇಲೆ ಪೊಗರು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದರು. ಆದಿತ್ಯ ಅವರದ್ದು ಅದರ ಮುಂದುವರೆದ ಅಧ್ಯಾಯ ಆಗಿತ್ತು ಅಷ್ಟೇ. ಆದಿತ್ಯ ತಮ್ಮ ಚಿತ್ರದ ಹೆಸರಿಗೆ ತಕ್ಕಂತೆ ಇನ್ನೂ ಸ್ವಲ್ಪ ಮುಂದುವರಿದು ವಾಣಿಜ್ಯ ಮಂಡಳಿಯ ಛೇಂಬರ್‌ವರೆಗೂ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದರು.
ಅಲ್ಲಿ, ಯೂಟ್ಯೂಬರ್ʼಗಳ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆ ಸಿಕ್ಕಿತ್ತಾದರೂ ಛೇಂಬರ್ ಇನ್ನೂ ಯಾವ ಕ್ರಮ ತೆಗೆದುಕೊಂಡ ಬಗ್ಗೆ ವರದಿ ಆಗಲಿಲ್ಲ. ಹಾಗಾಗಿ ಈ ವಿಷಯ ಕೋರ್ಟ್‌ನ ಮೆಟ್ಟಿಲೇರಿತ್ತು. ಆದರೆ ಈ ವಿಷಯಕ್ಕೆ ನೆಟ್ಟಿಗರು ಮಾತ್ರ ಇದು ಕೆಟ್ಟ ಬೆಳವಣಿಗೆ, ನಿಮ್ಮ ಸಿನಿಮಾ ನೋಡಿದವರೆಲ್ಲ, ಚೆನ್ನಾಗಿದೆ ಅಂತಲೇ ವಿಮರ್ಶೆ ಮಾಡ ಬೇಕಾ ಅಂತ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ: Hari Paraak Column: ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂ ಹುಲಿನೇ
ಸಿನಿಮಾ ಚೆನ್ನಾಗಿದೆ ಅಂತ ವಿಮರ್ಶೆ ಮಾಡ್ತೀವಿ ದುಡ್ಡು ಕೊಡಿ ಅಂತ ಹಿಂದೆ ಬೀಳುವ ಯೂ ಟ್ಯೂಬರ್‌ಗಳು ಇರೋದು ಸತ್ಯ. ಅವರ ಈ ದಂಧೆ ನಿರ್ಮಾಪಕರ ಪಾಲಿಗೆ ಕಂಟಕ ವಾಗಿರೋದು ಕೂಡ ಸತ್ಯ. ಕೆಲವರಂತೂ ನಿರ್ಮಾಪಕರು ಹಣ ಕೊಡದಿದ್ದರೆ, ಸಿನಿಮಾ ವಿಮರ್ಶೆಯನ್ನ ರೋಸ್ಟ್ ಅಂತಲೇ ಕರೆದುಕೊಂಡು ಬಯ್ಯಲು ತುದಿಗಾಲಲ್ಲಿ ರೆಡಿ ಯಾಗಿರುತ್ತಾರೆ. ಆದರೆ ಅವರ ಈ ದಂಧೆಯ ವಿರುದ್ಧ ಮಾತಾಡೋದು ಸರಿ. ಆದರೆ, ತೀರಾ ಕೋರ್ಟಿಗೆ ಹೋಗಿ ನಮ್ಮ ಚಿತ್ರ ಹೇಗಿದ್ದರೂ ಅದನ್ನು ಚೆನ್ನಾಗಿದೆ ಅನ್ನಬೇಕು. ಇಲ್ಲದಿದ್ದರೆ, ವಿಮರ್ಶೆ ಮಾಡೋದೇ ತಪ್ಪು ಎನ್ನುವಂತೆ ನ್ಯಾಯ ಕೇಳುತ್ತಿರೋದು ಮಾತ್ರ ಸರಿ ಅಲ್ಲ ಅನ್ನೋದು ಬಹುತೇಕರ ಅಭಿಪ್ರಾಯ.
ಲೂಸ್ ಟಾಕ್- ರಾಘವ ಛಡ್ಡಾ
ಅಲ್ಲರೀ ಹಿಂಗೆ ಇದ್ದಕ್ಕಿದ್ದಂಗೆ ಯಾಕೆ ಎಎಪಿ ಬಿಟ್ಟು ಬಿಜೆಪಿ ಸೇರ್ಕೊಂಡ್ರಿ?
- ಇದ್ದಕ್ಕಿದ್ದಂತೆ ಏನಿಲ್ಲ, ಇದೂ ಒಂಥರಾ ಪಂಚವಾರ್ಷಿಕ ಯೋಜನೆ ಆಗಿತ್ತು. ಯಾರಿಗೂ ಗೊತ್ತಾಗ್ಲಿಲ್ಲ ಅಷ್ಟೇ.
ಓಹೋ ಸರಿ. ಆದ್ರೂ ಎಎಪಿ ಬಿಡೋಕೆ ಕಾರಣ ಏನು?
- ಅಲ್ಲಿ ನನಗೆ ಹಮ್ ‘ಆಪ್’ ಕೇ ಹೈ ಕೌನ್ ಅನ್ನೋ ಪರಿಸ್ಥಿತಿ ಬಂದಿತ್ತು. ಅದಕ್ಕೆ ಬಿಟ್ಟೆ.
ನೀವ್ ಹೋಗೋದಲ್ದೇ ಜತೆಗೆ ನಾಕ್ ಜನನ್ನೂ ಕರ್ಕೊಂಡ್ ಹೋಗಿದ್ದೀರಲ್ಲ?
- ನಾನೊಬ್ನೇ ಹೋದ್ರೆ ನಾಕ್ ಜನ ನನ್ ಬಗ್ಗೆ ಏನಂದ್ಕೊಳ್ಳಲ್ಲ ಅಂತ ಯೋಚನೆ ಮಾಡಿ ಆ ನಾಕ್ ಜನನ್ನೂ ಕರ್ಕೊಂಡ್ ಹೋದೆ.
ಇಷ್ಟ್ ದಿನ ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಮಾತಾಡ್ತಾ ಇದ್ರಿ. ಈಗ ಬಿಜೆಪಿ ಸೇರಿದ್ದೀರಲ್ಲ. ಏನ್ ಮಾತಾಡ್ತೀರ?
- ಇದ್ದೇ ಇದೆಯಲ್ಲ ಪಾಕಿಸ್ತಾನ, ಹಿಂದುತ್ವ.
ಸರಿ, ಸರಿ, ಈಗ ನಿಮ್ಮನ್ನ ಜನ ಏನಂತ ಆಡಿಕೊಳ್ತಾ ಇದ್ದಾರೆ ಗೊತ್ತಾ?
- ಗೊತ್ತು ಗೊತ್ತು. ಖೆಡ್ಡಾಗೆ ಬಿದ್ದ ಛಡ್ಡ, ಚಡ್ಡಿ ಆದ ಛಡ್ಡ ಅಂತ ಆಡಿಕೊಳ್ತಾರೆ ಬಿಡಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಈ ಸುರಪಾನ ಬಂದಿದ್ದೇ ಸುರರಿಂದ, ಅಂದ್ರೆ ದೇವತೆಗಳಿಂದ ಅಲ್ವಾ. ಅವರೇ ನಮಗೆ ಇದನ್ನೆಲ್ಲಾ ಕಲಿಸಿದ್ದು. ಅದಕ್ಕೇ ಹೆಂಡನಾ ಪರಮಾತ್ಮ ಅಂತಾರೋ ಏನೋ ಗೊತ್ತಿಲ್ಲ. ಸರಿ, ಹಿಂಗೇ ಒಂದ್ಸಲ ದೇವಲೋಕದಿಂದ ನಾರದ ಭೂಮಿಗೆ ಬಂದಿದ್ದ. ಅವ್ನು ಅಲ್ಲಿ ಇಲ್ಲಿ ಬತ್ತಿ ಇಡೋ ಕೆಲ್ಸ ಮಾಡಿ ಸುಸ್ತಾಗಿ ಒಂದ್ ಬಾರಿಗೆ ಹೋಗಿ ಎಣ್ಣೆ ಕುಡಿಯೋಕ್ ಕೂತ್ಕೊಂಡ. ಅಲ್ಲಿ ಖೇಮು ವೆಯ್ಟರ್ ಕೆಲ್ಸ ಮಾಡ್ತಾ ಇದ್ದ. ನಾರದ ಬಂದ ಕೂಡಲೇ ಖೇಮು ಹೋಗಿ, ಸಾರ್ ಏನ್ ಕೊಡ್ಲಿ ಅಂದ. ಅದಕ್ಕೆ ನಾರದ ಒಂದ್ ಕ್ವಾರ್ಟರ್ ರಮ್ ಕೊಡಪ್ಪಾ ಅಂದ. ಸರಿ ಖೇಮು ಹೋಗಿ ತಂದುಕೊಟ್ಟ. ನಾರದ ಒಂದ್ ಫುಲ್ ಕ್ವಾರ್ಟರ್ ಕುಡಿದ. ಅವನಿಗೆ ಅದು ಏನೂ ಏರಲಿಲ್ಲ. ಸರಿ ಅಂತ ಖೇಮುನ ಕರೆದು ಇನ್ನೊಂದ್ ಕ್ವಾರ್ಟರ್ ತರಿಸಿದ. ಕುಡಿದ. ಅದೂ ಏರಲಿಲ್ಲ. ಇನ್ನೊಂದಾಯ್ತು.
ಫುಲ್ ಬಾಟ್ಲ್ ಆಯ್ತು. ನಾರದ ಸುಮ್ನೆ ಆರ್ಡರ್ ಮಾಡ್ತಾನೇ ಇದ್ದ. ಖೇಮು ತಂದ್ ಕೊಡ್ತಾ ಇದ್ದ. ಇವ್ನು ಕುಡಿತಾ ಇದ್ದ. ಸರಿ, ಎರಡ್ ಪುಲ್ ಬಾಟ್ಲ್ ಆಯ್ತು. ವೆಯ್ಟರ್ ಖೇಮು ನೋಡ್ತಾನೇ ಇದ್ದ. ಇವ್ನು ಮತ್ತೆ ಇನ್ನೊಂದ್ ಕ್ವಾರ್ಟರ್ ಆರ್ಡರ್ ಮಾಡೋಕೆ ಖೇಮುನ ಕರೆದ. ಖೇಮುಗೆ ಇವನು ಕುಡಿತಾ ಇರೋ ಪರಿ ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು. ಇನ್ನೊಂದ್ ಕ್ವಾರ್ಟರ್ ತಂದು ಕೊಟ್ಟು, ಸಾರ್ ನಂಗೆ ಒಂದ್ ಡೌಟು, ನೀವು ಇಷ್ಟೊಂದ್ ಕುಡಿದ್ರೂ ನಿಮಗೆ ಒಂಚೂರೂ ಏರಿಲ್ಲವಲ್ಲ ಹೆಂಗೆ ಅಂದ.
ಅದಕ್ಕೆ ನಾರದ, ಇಲ್ಲ ಕಣಮ್ಮಾ, ಹೆಂಡ ಕುಡಿದ್ರೆ ಚಿತ್ತಾಗೋದು, ಕಿಕ್ ಹೊಡೆಯೋದು, ಏರೋದು, ಇದೆಲ್ಲ ಏನಿದ್ರೂ ಬರೀ ನಿಮ್ಮಂಥ ಮನುಷ್ಯರಿಗೆ, ನಾನು ನಾರದ, ದೇವಲೋಕ ದಿಂದ ಬಂದಿದೀನಿ ಅಂದ. ಆವಾಗ ವೆಯ್ಟರ್ ಖೇಮು ಅಂದ, “ಹಾ, ಬಡ್ಡಿ ಮಗಂಗೆ ಇವಾಗ್ ಏರ್ತು ನೋಡು."
ಲೈನ್ ಮ್ಯಾನ್
ರಜೆ ಕಳೆಯೋಕೆ ಅಂತ Hill station ಗೆ ಹೋಗಿ ಅಲ್ಲಿ ಆರೋಗ್ಯ ಕೆಟ್ಟರೆ
- ಅದು Ill station
ಹೆಂಡತಿ ಗಂಡನಿಗೆ ತುಂಬಾ ಕಿರುಕುಳ ಕೊಡ್ತಾ ಇದ್ರೆ ಅವಳು
- ಮಿಸ್-ಸ್ಟ್ರೆಸ್
ಬಿಜೆಪಿಯವರು ಹೇಳೋ ಮಾತು- ಕೇಸರಿಬಾತ್
- ಎಎಪಿಯವರು ಹೇಳೋ ಮಾತು- ಕೇಜ್ರಿಬಾತ್
‘ನಮ್ ಹೊಲದಲ್ಲಿ 3 ಸಲ ಬೋರ್ ಹಾಕಿಸಿದೆ, ಆದ್ರೂ ನೀರ್ ಬೀಳಲಿಲ್ಲ, ನ್ನೊಂದ್ಸಲ ಹಾಕಿಸ್ಬೇಕು’
- ‘3 ಸಲ ಹಾಕ್ಸಿದ್ ಮೇಲೂ ನಿಮಗೆ ಬೋರ್ ಆಗಿಲ್ವಾ’
ಕೆಲವರಿಗೆ ಎಷ್ಟ್ ಹೇಳಿದ್ರೂ ಬುದ್ಧಿ ಬರಲ್ಲ ಅನ್ನೋದನ್ನು ಹಿಂಗೂ ಹೇಳಬಹುದು
- ಕುರುಡರ ಜತೆ ಕಣ್ಣಾಮುಚ್ಚಾಲೆ ಆಡೋಕಾಗುತ್ತಾ?
ಯಾರಿಗೂ ಗೊತ್ತಾಗದ ಹಾಗೆ ಮೆಲ್ಲಗೆ ಟೇಬಲ್ ಕೆಳಗಿಂದ ಹುಡುಗಿ ಕಾಲು ಟಚ್ ಮಾಡೋನು
- ‘ಜೆಂಟಲ್’ ಮ್ಯಾನ್
ಚಿಕ್ಕಣ್ಣ: ಗುರುಗಳೇ, ಇವತ್ತು ಪೇಪರ್‌ನಲ್ಲಿ ಎ ಟ್ರೂಪ್ ಆಫ್ ಟೆರರಿಸ್ಟ್ ವಾಸ್ Founded by Indian police ಅಂತ ಇತ್ತು. ನಮ್ಮ ಇಂಡಿಯಾದ ಪೊಲೀಸ್‌ನವರೂ ಟೆರರಿಸ್ಟ್ ಆಗ್ತಿದಾರಾ?
- ಸಾಧು: ಲೋ ಚಿಕ್ಕ, ಅದು Founded ಅಲ್ಲ ಕಣೋ, Found dead.
‘ಇಂಗ್ಲಿಷ್‌ನಲ್ಲಿ ರೋಡ್ ಮೂವೀಸ್’ ಅಂತಲೇ ಫೇಮಸ್ ಆಗಿರೋ ರೋಡ್ ನಲ್ಲಿ ನಡೆಯುವ ಕಥೆ ಇರುವ ಚಿತ್ರಗಳಿಗೆ ಕನ್ನಡ ಚಿತ್ರರಂಗ ಕೊಟ್ಟ ಹೊಸ ಹೆಸರು
- ‘ರೋಡಿಸಂ’ ಚಿತ್ರಗಳು
ಲೈಫ್ʼನಲ್ಲಿ ಜಾಸ್ತಿ ಜನ ಹುಡುಗೀರನ್ನ ಲವ್ ಮಾಡೋದರ ಅಪಾಯ
- ಮುಂದೆ ಮದುವೆ ಆದ ಮೇಲೆ ಎಣ್ಣೆ ಹೊಡೆದು ಸ್ಯಾಡ್ ಸಾಂಗ್ ಕೇಳುವಾಗ ಯಾವ ಗರ್ಲ್ ಫ್ರೆಂಡ್‌ನ ನೆನಪಿಸ್ಕೊಬೇಕು ಅಂತ ಕನ್ಪ್ಯೂಸ್ ಆಗುತೆ.