ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಸಂಬಂಧಗಳ ಒರೆಗಲ್ಲು: ಎಲ್ಲರ ಕಣ್ಣು ತೆರೆಸಿದ ಅಷ್ಟಾವಕ್ರರ ದಿವ್ಯ ದೃಷ್ಟಿ

ಅಷ್ಟಾವಕ್ರರ ಪ್ರಕಾರ, ಒಬ್ಬ ವ್ಯಕ್ತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಪ್ರೀತಿಸುವುದು ಮತ್ತು ಅವರ ಬೆಳವಣಿಗೆಗೆ ಪೂರಕವಾಗಿರುವುದು ಶ್ರೇಷ್ಠ ಸಂಬಂಧ. ನಿಮ್ಮ ತಪ್ಪುಗಳನ್ನು ಪ್ರೀತಿಯಿಂದ ತಿದ್ದುವ ಮತ್ತು ನಿಮ್ಮ ಅಹಂಕಾರವನ್ನು ಅಳಿಸಿ ಹಾಕುವ ವ್ಯಕ್ತಿಯೇ ನಿಮ್ಮ ಶ್ರೇಷ್ಠ ಸಂಬಂಽ. ಜನಕನು ಅಷ್ಟಾವಕ್ರರನ್ನು ಆರಿಸಿಕೊಂಡಿದ್ದು ಅವರ ರೂಪಕ್ಕಲ್ಲ, ಬದಲಾಗಿ ಅವರು ನೀಡುವ ಜ್ಞಾನಕ್ಕಾಗಿ.

ಸಂಬಂಧಗಳ ಒರೆಗಲ್ಲು: ಎಲ್ಲರ ಕಣ್ಣು ತೆರೆಸಿದ ಅಷ್ಟಾವಕ್ರರ ದಿವ್ಯ ದೃಷ್ಟಿ

-

ಒಂದೊಳ್ಳೆ ಮಾತು

ಜನಕ ಮಹಾರಾಜನು ಜ್ಞಾನಪಿಪಾಸು. ಒಮ್ಮೆ ಅವನು ತನ್ನ ಆಸ್ಥಾನದಲ್ಲಿ ಅತಿದೊಡ್ಡ ಬ್ರಹ್ಮಜ್ಞಾನಿಗಳ ಸಭೆಯನ್ನು ಕರೆದಿದ್ದನು. ಅಂದು ಹನ್ನೆರಡು ವರ್ಷದ ಬಾಲಕ ಅಷ್ಟಾ ವಕ್ರನು ಆ ಸಭೆಗೆ ಆಗಮಿಸಿದನು. ತಂದೆ ಕಹೋಲ ಮುನಿಗಳ ಶಾಪದಿಂದಾಗಿ ಅವನ ದೇಹವು ಎಂಟು ಕಡೆಗಳಲ್ಲಿ ವಕ್ರವಾಗಿತ್ತು (ಸೊಟ್ಟಗಾಗಿತ್ತು). ಅವನು ಪ್ರತಿ ಹೆಜ್ಜೆ ಇಡುವಾ ಗಲೂ ಅವನ ದೇಹವು ವಿಚಿತ್ರವಾಗಿ ಬಳಕುತ್ತಿತ್ತು.

ಅಷ್ಟಾವಕ್ರರು ಸಭೆಯನ್ನು ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿದ್ದ ಘನಪಾಠಿ ಪಂಡಿತರು ಮತ್ತು ವಿದ್ವಾಂಸರು ಅಷ್ಟಾವಕ್ರರ ಆ ವಿಚಿತ್ರ ದೇಹವನ್ನು ನೋಡಿ ಅಟ್ಟಹಾಸದಿಂದ ನಗಲಾ ರಂಭಿಸಿದರು. ಇಂಥ ವಿರೂಪಿಯಾದ ಬಾಲಕನು ಜ್ಞಾನಿಗಳ ಸಭೆಯಲ್ಲಿ ಏನು ಮಾಡಬಲ್ಲ? ಎಂಬ ಗೇಲಿ ಅವರ ನಗುವಿನಲ್ಲಿತ್ತು.

ಇದನ್ನೂ ಓದಿ: Roopa Gururaj Column: ಮಾಯೆ ಎಂದರೇನು ? ಅಷ್ಟಾವಕ್ರ ಗೀತೆಯಲ್ಲಿ ಸಿಗುವ ಉತ್ತರ

ರಾಜ ಜನಕನು ಕೂಡ ಒಂದು ಕ್ಷಣ ಮೌನವಾಗಿ ಇದನ್ನು ನೋಡುತ್ತಿದ್ದನು. ಆದರೆ ಎಲ್ಲರೂ ನಗುತ್ತಿದ್ದರೆ, ಅಷ್ಟಾವಕ್ರರು ಅವರೆಲ್ಲರಿಗಿಂತ ಜೋರಾಗಿ ನಗಲು ಪ್ರಾರಂಭಿಸಿದರು! ಅವರ ನಗು ಇಡೀ ಸಭೆಯನ್ನು ನಡುಗಿಸಿತು. ಅಚ್ಚರಿಗೊಂಡ ಜನಕ ಮಹಾರಾಜನು ಎದ್ದು ನಿಂತು, “ಬಾಲಕನೇ, ಪಂಡಿತರು ನಿನ್ನ ದೇಹ ನೋಡಿ ನಗುತ್ತಿದ್ದಾರೆ ಸರಿ, ಆದರೆ ನೀನು ಾಕೆ ನಗುತ್ತಿದ್ದೀಯಾ?" ಎಂದು ಕೇಳಿದನು.

ಆಗ ಅಷ್ಟಾವಕ್ರರು ಹೇಳಿದ ಮಾತು ಇತಿಹಾಸದಲ್ಲಿ ಅಮರವಾಯಿತು: “ರಾಜನ್, ನಾನು ಬ್ರಹ್ಮಜ್ಞಾನಿಗಳ ಸಭೆಗೆ ಬಂದಿದ್ದೇನೆ ಎಂದುಕೊಂಡಿದ್ದೆ. ಆದರೆ ಇಲ್ಲಿ ಬರೀ ಚಮ್ಮಾರರು ತುಂಬಿದ್ದಾರೆ ಎಂದು ತಿಳಿದು ನನಗೆ ನಗು ಬರುತ್ತಿದೆ!" ಸಭೆ ಸ್ತಬ್ಧವಾಯಿತು.

ಜನಕನಿಗೆ ಆಘಾತವಾಯಿತು. “ಚಮ್ಮಾರರೇ? ಇವರೆಲ್ಲ ಮಹಾಪಂಡಿತರಲ್ಲವೇ?" ಎಂದನು ಜನಕ. ಅಷ್ಟಾವಕ್ರರು ಮುಂದುವರಿದು ಹೇಳಿದರು, “ರಾಜನ್, ಚಮ್ಮಾರನಿಗೆ ಮಾತ್ರ ಚರ್ಮದ ಮೇಲಿರುವ ಸುಕ್ಕು ಅಥವಾ ವಕ್ರತೆ ಕಾಣುತ್ತದೆ. ಇಲ್ಲಿರುವವರಿಗೆ ನನ್ನ ದೇಹದ ವಕ್ರತೆ ಕಾಣುತ್ತಿದೆಯೇ ಹೊರತು, ನನ್ನೊಳಗಿರುವ ಆತ್ಮದ ಸೌಂದರ್ಯವಲ್ಲ.

ಕಬ್ಬು ವಕ್ರವಾಗಿದ್ದರೂ ಅದರ ರಸ ಸಿಹಿಯಾಗಿರುತ್ತದೆ, ನದಿ ವಕ್ರವಾಗಿ ಹರಿದರೂ ಅದರ ನೀರು ಪವಿತ್ರವಾಗಿರುತ್ತದೆ. ಹಾಗೆಯೇ ದೇಹ ವಕ್ರವಾಗಿದ್ದ ಮಾತ್ರಕ್ಕೆ ಜ್ಞಾನವು ವಕ್ರ ವಾಗುವುದಿಲ್ಲ. ಕೇವಲ ಚರ್ಮವನ್ನು ನೋಡಿ ಮನುಷ್ಯನನ್ನು ಅಳೆಯುವವರು ಜ್ಞಾನಿ ಗಳಾಗಲು ಹೇಗೆ ಸಾಧ್ಯ?" ಜನಕನು ತಕ್ಷಣವೇ ಸಿಂಹಾಸನದಿಂದ ಇಳಿದು ಬಂದು ಅಷ್ಟಾವಕ್ರರ ಪಾದಕ್ಕೆ ಬಿದ್ದನು. ಅಂದು ಆ ಹನ್ನೆರಡು ವರ್ಷದ ಬಾಲಕನಿಂದ ಜನಕನು ಪಡೆದ ಉಪದೇಶವೇ ಮುಂದೆ ‘ಅಷ್ಟಾವಕ್ರ ಗೀತೆ’ಯಾಗಿ ಪ್ರಸಿದ್ಧಿಯಾಯಿತು.

ಒಮ್ಮೆ ಶಿಷ್ಯನೊಬ್ಬ ಅಷ್ಟಾವಕ್ರ ಋಷಿಗಳನ್ನು ಕೇಳುತ್ತಾನೆ, “ನಾವು ಸಂಬಂಧಗಳನ್ನು ಹೇಗೆ ಆರಿಸುತ್ತೇವೆ? ಕೇವಲ ಹೊರಗಿನ ರೂಪ, ಹಣ ಅಥವಾ ಅಂತಸ್ತನ್ನು ನೋಡಿಯೇ?". ಅಷ್ಟಾವಕ್ರರು ಸಂಬಂಧಗಳ ಬಗ್ಗೆ ಮೂರು ಪ್ರಮುಖ ಸೂತ್ರಗಳನ್ನು ನೀಡುತ್ತಾರೆ: ನೀನು ಮುಕ್ತರಾದವರ ಜತೆಗಿದ್ದರೆ ಮುಕ್ತನಾಗುತ್ತೀಯ, ಬದ್ಧರಾದವರ (ಬಂಧನದಲ್ಲಿರುವವರ) ಜತೆಗಿದ್ದರೆ ನೀನೂ ಬಂಧಿಯಾಗುತ್ತೀಯ. ಯಾರು ಸದಾ ದೂರು ನೀಡುತ್ತಾ, ನಕಾರಾತ್ಮಕವಾಗಿ ಮಾತನಾಡುತ್ತಾರೋ ಅಂಥವರ ಸಹವಾಸವು ನಮ್ಮ ಮನಸ್ಸನ್ನು ಮಲಿನಗೊಳಿಸುತ್ತದೆ.

ಯಾರು ನಮಗೆ ನಮ್ಮೊಳಗಿನ ಶಕ್ತಿಯನ್ನು ನೆನಪಿಸುತ್ತಾರೋ, ಅವರೇ ನಿಜವಾದ ಹಿತೈಷಿಗಳು. ಸಂಬಂಧಗಳು ಅಂಟಿಕೊಳ್ಳಬಾರದು ಬದಲಾಗಿ ಹರಿಯುವಂತಿರಬೇಕು. ನಾವು ಇನ್ನೊಬ್ಬರ ಮೇಲೆ ಸಂಪೂರ್ಣವಾಗಿ ಅವಲಂಬಿತರಾದಾಗ ಅಲ್ಲಿ ಭಯ ಹುಟ್ಟುತ್ತದೆ.

ಅಷ್ಟಾವಕ್ರರ ಪ್ರಕಾರ, ಒಬ್ಬ ವ್ಯಕ್ತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಪ್ರೀತಿಸುವುದು ಮತ್ತು ಅವರ ಬೆಳವಣಿಗೆಗೆ ಪೂರಕವಾಗಿರುವುದು ಶ್ರೇಷ್ಠ ಸಂಬಂಧ. ನಿಮ್ಮ ತಪ್ಪುಗಳನ್ನು ಪ್ರೀತಿಯಿಂದ ತಿದ್ದುವ ಮತ್ತು ನಿಮ್ಮ ಅಹಂಕಾರವನ್ನು ಅಳಿಸಿ ಹಾಕುವ ವ್ಯಕ್ತಿಯೇ ನಿಮ್ಮ ಶ್ರೇಷ್ಠ ಸಂಬಂಽ. ಜನಕನು ಅಷ್ಟಾವಕ್ರರನ್ನು ಆರಿಸಿಕೊಂಡಿದ್ದು ಅವರ ರೂಪಕ್ಕಲ್ಲ, ಬದಲಾಗಿ ಅವರು ನೀಡುವ ಜ್ಞಾನಕ್ಕಾಗಿ.

ಅಷ್ಟವಕ್ರ ಶ್ಲೋಕ:

ಯದಾ ಹ್ಯದೈವ ಭವತಿ ಯದಾ ಕಿಮಪಿ ನ ಸ್ಪೃಹಾ |

ತದಾ ಸಂವೇದ್ಯವಿಶ್ರಾಂತೌ ಸುಖೀ ಭವತಿ ಮಾನವಃ ||

ಅಂದರೆ, ಯಾವಾಗ ಮನುಷ್ಯನಲ್ಲಿ ನನ್ನದು-ನಿನ್ನದು ಎಂಬ ಮಮಕಾರ ಮತ್ತು ಅತಿಯಾದ ಹಂಬಲ ಮಾಯವಾಗುತ್ತದೆಯೋ, ಆಗ ಅವನು ತನ್ನ ಅಂತರಾತ್ಮದಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಅಂಥ ಸ್ಥಿತಿಯಲ್ಲಿರುವ ವ್ಯಕ್ತಿಯೊಂದಿಗೆ ಬೆಳೆಸುವ ಸಂಬಂಧವು ನಮಗೆ ಸುಖವನ್ನು ನೀಡುತ್ತದೆ.

ಮ್ಮ ಜೀವನದಲ್ಲಿ ನಾವು ಯಾರನ್ನು ಜತೆಗಿಟ್ಟುಕೊಳ್ಳುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವ ವನ್ನು ನಿರ್ಧರಿಸುತ್ತದೆ. ಸಂಬಂಧಗಳು ನಮ್ಮನ್ನು ಬೆಳೆಸಬೇಕು ಅಥವಾ ಬೆಳಗಬೇಕು; ಬದಲಾಗಿ ನಮ್ಮನ್ನು ಬಂಽಸಿ, ಕತ್ತಲಿಗೆ ತಳ್ಳಬಾರದು. ಸಂಬಂಧಗಳು ಸಂಕೋಲೆ ಗಳಾಗಬಾರದು, ಅವು ನಮ್ಮ ರೆಕ್ಕೆಗಳಿಗೆ ಬಲ ನೀಡುವ ಗಾಳಿಯಾಗಬೇಕು