ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

N‌aveen Sagar Column: ಕ್ರಿಪ್ಟೋ ಕನ್ವರ್ಶನ್ ಎಂಬ ಗುಪ್ತ್ ಗುಪ್ತ್ ಪ್ರಪಂಚ!

ಬ್ಯಾಗಲ್ಲಿ, ಕಾರಲ್ಲಿ ಎಂದರಲ್ಲಿ ಜೀಸಸ್ ಮತ್ತು ಶಿಲುಬೆ. ಬಾಯ್ತುಂಬ ಕ್ರಿಸ್ತಜಪ. ‘ಅವ್ಳು ಎಜುಕೇಟೆಡ್, ಬಡವಳೂ ಏನಲ್ಲ. ಹೀಗಾಗಿ ಬಲವಂತದ ಮತಾಂತರ ಅಲ್ದೇ ಹೋದ್ರೆ ನಾವು ಅದರ ಬಗ್ಗೆ ಮಾತಾ ಡೋದು ತಪ್ಪಾಗುತ್ತೆ. ನೀವು ಕೂಡ ನಿಮಗೆ ಆಗ್ತಿರೋ ತೊಂದರೆಗೆ ಕೌಂಟರ್ ಕೊಡೋಕೆ ಈ ಅಸ್ತ್ರ ಬಳಸೋದು ಸರಿ ಅಲ್ಲ’ ಅಂದೆ. ಆಗ ನಿರ್ದೇಶಕರು ಇದರ ಮುಂದಿನ ಭಾಗ ಹೇಳಿದರು.

ಕ್ರಿಪ್ಟೋ ಕನ್ವರ್ಶನ್ ಎಂಬ ಗುಪ್ತ್ ಗುಪ್ತ್ ಪ್ರಪಂಚ!

-

ಪದಸಾಗರ

ಇತ್ತೀಚೆಗೆ ಒಬ್ಬ ಪತ್ರಕರ್ತ ಮಿತ್ರ ಕರೆ ಮಾಡಿದ್ದರು. ‘ನಮ್ಮ ವಾಹಿನಿಯ ಧ್ವನಿಯೊಂದು ಲವ್ ಜಿಹಾದ್ ಮತ್ತು ಮತಾಂತರವನ್ನು ವಹಿಸಿ ಕಾರ್ಯಕ್ರಮ ಮಾಡ್ತಾ ಇರೋದನ್ನು ನೀವು ಗಮನಿಸಿ ದ್ದೀರಾ’ ಅಂತ ಕೇಳಿದರು. ‘ಹೌದು ಗಮನಿಸಿದ್ದೇನೆ. ಪತ್ರಕರ್ತರೆಲ್ಲರ ಧ್ವನಿ ಒಂದೇ ಇರಬೇಕೆಂದಿಲ್ಲ. ಪರ ವಿರೋಧ ಅಭಿಪ್ರಾಯಗಳಿದ್ದರೆ ತಪ್ಪಿಲ್ಲ. ಆದರೂ ಮತಾಂತರ ಹಾಗೂ ಲವ್ ಜಿಹಾದ್‌ಗೆ ಬೆಂಬಲ ಕೊಡೋದು ಜವಾಬ್ದಾರಿಯುತ ಪತ್ರಕರ್ತರ ಲಕ್ಷಣ ಅಲ್ಲ’ ಅಂದೆ. ಮಿತ್ರ ನನ್ನ ಮಾತನ್ನು ತುಂಡರಿಸಿ ‘ವಿಷಯ ಅದಲ್ಲ ಸರ್, ಆ ಪತ್ರಕರ್ತೆ ಖುದ್ದು ಕ್ರಿಸ್ಚಿಯಾನಿಟಿಗೆ ಕನ್ವರ್ಟ್ ಆಗಿದ್ದಾರ. ಆಕೆಯ ಬ್ಯಾಗಿನಲ್ಲಿ ರೂಮಿನಲ್ಲಿ ಎಲ್ಲೆಡೆ ಜೀಸಸ್ ಫೋಟೋಗಳು, ಕತ್ತಿನಲ್ಲಿ ಶಿಲುಬೆ, ಬಾಯಿಬಿಟ್ರೆ ಜೀಸಸ್, ನಮಸ್ಕಾರದ ಬದಲು ಅಡ್ಡ ಉದ್ದ ಕೈಎಳೆಯುತ್ತಾರೆ.’ ಅಂದರು.

‘ಮತ್ತೆ ಹೆಸರು ಹಾಗೆಯೇ ಇದೆಯಲ್ಲ’ ಅಂತ ಮರುಪ್ರಶ್ನೆ ಎಸೆದೆ. ‘ಅದೇ ಅರ್ಥ ಆಗ್ತಿಲ್ಲ ಸರ್. ಆದರೆ ಹಂಡ್ರೆಡ್ ಪರ್ಸೆಂಟ್ ಅವ್ರು ಕನ್ವರ್ಟ್ ಆಗಿದಾರೆ. ನೀವು ಮನಸು ಮಾಡಿದ್ರೆ ಇದರ ಡೀಟೇಲ್ಸ್ ತೆಗೀಬಹುದು’ ಅಂದ. ಇದೇನೋ ಹೊಸ ವಿಷಯದ ಥರ ಇದೆಯಲ್ಲ ಅಂತನಿಸಿತು. ಇದಾಗಿ ಕೆಲ ದಿನಗಳಲ್ಲಿ ನಿರ್ದೇಶಕರೊಬ್ಬರು ಫೋನ್ ಮಾಡಿದ್ರು. ಡೇಟ್ ವಿಚಾರದಲ್ಲಿ, ಶೂಟ್ ಮತ್ತು ಸಂಭಾವನೆ ವಿಚಾರದಲ್ಲಿ ತಮಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದ ಆಕೆಯ ಬಗ್ಗೆ ಒಂದು ಸೀಕ್ರೆಟ್ ಸುದ್ದಿ ತಿಳಿಸೋದಿದೆ ಅಂತ ಮಾತು ಶುರು ಮಾಡಿದ್ರು.

ಏನು ಅಂತ ಕೇಳಿದ್ರೆ ‘ಸರ್ ಅವಳು ಕ್ರಿಸ್ಚಿಯಾನಿಟಿಗೆ ಮತಾಂತರ ಆಗಿಬಿಟ್ಟಿದ್ದಾಳೆ. ಇದಕ್ಕೆ ಸಾಕ್ಷಿ ಕೊಡ್ತೀನಿ. ನೀವು ಇದನ್ನು ಸುದ್ದಿ ಮಾಡಬೇಕು. ಇಂಥವರು ನಟಿಯಾಗಿ ಮುಂದುವರಿಯಬಾರದು ಸರ್’ ಅಂತ ತುಸು ಆಕ್ರೋಶದಿಂದಲೇ ದೂರು ಹೇಳುತ್ತಿದ್ದರು. ‘ಆಕೆ ಅದೇ ಹೆಸರಲ್ಲೇ ಇದ್ದಾಳಲ್ಲ.. ನಿಮ್ಗೆ ಹೇಗೆ ಗೊತ್ತಾಯ್ತು’ ಅಂತ ಕೇಳಿದ್ರೆ, ಅದೇ ಸ್ಟೋರಿ.

ಇದನ್ನೂ ಓದಿ: Naveen Sagar Column: ನಾವ್ಯಾರೂ ಮನುಷ್ಯರಲ್ಲ.. ಕೇವಲ ಕಂಟೆಂಟ್‌ಗಳು!

ಬ್ಯಾಗಲ್ಲಿ, ಕಾರಲ್ಲಿ ಎಂದರಲ್ಲಿ ಜೀಸಸ್ ಮತ್ತು ಶಿಲುಬೆ. ಬಾಯ್ತುಂಬ ಕ್ರಿಸ್ತಜಪ. ‘ಅವ್ಳು ಎಜುಕೇಟೆಡ್, ಬಡವಳೂ ಏನಲ್ಲ. ಹೀಗಾಗಿ ಬಲವಂತದ ಮತಾಂತರ ಅಲ್ದೇ ಹೋದ್ರೆ ನಾವು ಅದರ ಬಗ್ಗೆ ಮಾತಾಡೋದು ತಪ್ಪಾಗುತ್ತೆ. ನೀವು ಕೂಡ ನಿಮಗೆ ಆಗ್ತಿರೋ ತೊಂದರೆಗೆ ಕೌಂಟರ್ ಕೊಡೋಕೆ ಈ ಅಸ್ತ್ರ ಬಳಸೋದು ಸರಿ ಅಲ್ಲ’ ಅಂದೆ. ಆಗ ನಿರ್ದೇಶಕರು ಇದರ ಮುಂದಿನ ಭಾಗ ಹೇಳಿದರು.

‘ಸಾರ್ ಅವಳು ಯಾವ ಧರ್ಮಕ್ಕೆ ಹೋದ್ರೆ ನಮಗೇನಂತೆ. ಅವಳಿಷ್ಟ. ಆದರೆ ನಾನು ನಿಮ್ಗೆ ಫೋನ್ ಮಾಡಿದ್ದು ಯಾಕೆ ಅಂದ್ರೆ, ಆಕೆ ಕೋತಿ ತಾನು ಕೆಡೋದಲ್ದೇ ವನವನ್ನೆಲ್ಲ ಕೆಡಿಸಿತು ಅನ್ನೋ ಹಾಗೆ, ಸೆಟ್‌ನಲ್ಲಿರೋ ಬಡ ಹುಡುಗರನ್ನೆಲ್ಲ ಸೀಕ್ರೆಟಾಗಿ ಆ ಕಡೆ ಎಳೀತಿದಾಳೆ. ಇದು ಡೇಂಜರ್ ಅಲ್ವಾ ಸಾರ್..?’. ಇದನ್ನು ಕೇಳಿ ನಿಜಕ್ಕೂ ಒಮ್ಮೆ ಬೆಚ್ಚಿದೆ. ಹೌದಲ್ಲ... ಸುಂದರವಾದ ಹುಡುಗಿ, ಹೀರೋಯಿನ್ ಒಬ್ಬಳಿಗೆ, ಹುಡುಗರನ್ನು ತನ್ನ ಜಾಲದಲ್ಲಿ ಸೆಳೆದುಕೊಳ್ಳೋದು ಸುಲಭ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಅನಿಸಿತು.

ದೇಶ ಮುಸಲ್ಮಾನರಿಂದ ನಡೆಯುತ್ತಿರುವ ಲವ್ ಜಿಹಾದ್ ಮತ್ತು ಕ್ರೈಸ್ತರ ನೇರ ಮತಾಂತರಗಳ ವಿರುದ್ಧ ಮಾತ್ರ ಸೆಟೆಯುತ್ತಿದೆ. ಆದರೆ ಈ ಕಡೆ ಗೊತ್ತೇ ಆಗದ ಹಾಗೆ ಗುಪ್ತವಾಗಿ ಮತಾಂತರವಾಗಿ ಬಿಡುತ್ತಿದೆಯಲ್ಲ, ಮತಾಂತರ ಆಗಿದ್ದೂ ಗೊತ್ತಾಗದಂತೆ ಮುಚ್ಚಿಟ್ಟು ರಹಸ್ಯವಾಗಿ ತಮ್ಮ ಮತದ ವಿಸ್ತರಣೆ ನಡೆಸುತ್ತಿದ್ದಾರಲ್ಲ. ಇದರ ಕತೆ ಏನು? ಇದರ ಪರಿಣಾಮ ಏನು ಅಂತೆಲ್ಲ ಯೋಚನೆಗಳು ಹರಿದಾಡಿದವು.

62 ok

ಓಹ್ ಇದು ಇಂದು ನಿನ್ನೆಯದಲ್ಲ.. ಚಿಕ್ಕವರಿದ್ದಾಗಿನಿಂದ ಇದನ್ನು ಕಂಡಿದ್ದೇವೆ. ಹಿಂದೂಗಳಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಯೋ, ಕಷ್ಟವೋ ಬಂತು ಅಂದಾಗ, ಎಲ್ಲಿಂದಲೋ ಒಂದು ಅಡ್ವೈಸ್ ಬರುತ್ತದೆ. ಚರ್ಚಲ್ಲಿ ಆರು ಭಾನುವಾರ ಹೋಗಿ ಕ್ಯಾಂಡಲ್ ಹಚ್ಚು ಅಂತ. ಹಚ್ಚಲು ಹೋಗಿ ವಾಪಸ್ ಬರುವ ಹೊತ್ತಿಗೆ ಕೈಯಂದು ಬೈಬಲ್ ಬಂದಿರುತ್ತದೆ. ಇತ್ತೀಚೆಗೊಬ್ಬ ಆಟೋ ಡ್ರೈವರ್ ಇದೇ ಕೆಲಸ ಮಾಡಿದ. ದಾರಿಯಲ್ಲಿ ತಾನಾಗಿ ಮಾತಿಗೆಳೆದು ಹೆಸರು ಹೇಳಿಕೊಂಡ. ಹಿಂದೂ ಹೆಸರೇ ಅದು. ತಾನೆಷ್ಟು ಕಷ್ಟದಲ್ಲಿದ್ದೆ. ಈಗ ಎಷ್ಟು ಸುಖವಾಗಿದ್ದೇನೆ ಅಂತೆಲ್ಲ ಹೇಳಿ ಕೊಂಡು ಜೀಸಸ್ ಭಜನೆ ಮಾಡ್ತಾ ಬಂದ. ಇಳಿಯುವ ಹೊತ್ತಲ್ಲಿ, ಸೀಟ್ ಹಿಂದ್ಗಡೆ ಒಂದು ಪುಸ್ತಕ ಇದೆ ತಗೊಳಿ ಸರ್. ಅದರಿಂದಾನೇ ನನ್ನ ಕಷ್ಟ ಪರಿಹಾರ ಆಗಿದ್ದು ಅಂದ. ಯಾವ ಪುಸ್ತಕ ಅಂತ ನೋಡಿದ್ರೆ ಬೈಬಲ್!

ಹೆಸರು ಬದಲಿಸಿಕೊಳ್ಳದೇ ಧರ್ಮ ಬದಲಿಸಿಕೊಳ್ಳುವುದರ ಹಿಂದಿನ ಉದ್ದೇಶ ಏನು? ಇದ್ಯಾವ ಥರದ ಕನ್ವರ್ಶನ್ ಅಂತ ಚೂರು ತಿಳಿದುಕೊಳ್ಳುವ ಕುತೂಹಲ ಹುಟ್ಟಿದಾಗ ಕಂಡದ್ದು ಕ್ರಿಪ್ಟೋ ಕನ್ವರ್ಶನ್ ಎಂಬ ಭಯಾನಕ ಜಗತ್ತು. ಇಂಥ ಸೀಕ್ರೆಟ್ ಮತಾಂತರವನ್ನು ಕ್ರಿಪ್ಟೋ ಕನ್ವರ್ಶನ್ ಅನ್ನಬಹುದಾ? ಗೊತ್ತಿಲ್ಲ.

ಆದರೆ ಇದು ಸತ್ಯ. ಈ ದೇಶದಲ್ಲಿ ಇದೀಗ ಲಕ್ಷಾಂತರ.. ಕೋಟ್ಯಂತರ ಕನ್ವರ್ಟೆಡ್ ಕ್ರಿಶ್ಚಿಯನ್ಸ್ ನಮ್ಮ ಮಧ್ಯ ಇದ್ದಾರೆ.. ಆದರೆ ಅವರನ್ನು ಗುರುತು ಹಿಡಿಯಲು ಸಾಧ್ಯವಾಗ್ತಾ ಇಲ್ಲ. ನಮ್ಮ ಸುತ್ತ ಮುತ್ತ ಇದ್ದಾರೆ. ನಾವು ನೋಡೋ ರಾಜಕಾರಣಿಗಳಲ್ಲಿ, ಸಿನಿಮಾ ಸೆಲೆಬ್ರಿಟಿಗಳಲ್ಲಿ ಹಲವಾರು ಮಂದಿ ಹೀಗೆ ಕ್ರೈಸ್ತ ಧರ್ಮಕ್ಕೆ ಕನ್ವರ್ಟ್ ಆಗಿದ್ದಾರೆ. ಆದರೆ ಲೀಗಲ್ ಆಗಿ ಅವರ ಪರ್ಸನಲ್ ರೆಕಾರ್ಡ್ ನೋಡಿದ್ರೆ ನಮಗೆ ಅವ್ರು ಕ್ರಿಸ್ಚಿಯನ್ ಅನ್ನೋದಕ್ಕೆ ದಾಖಲೆ ಸಿಗೋದಿಲ್ಲ. ಅವರನ್ನು ಕ್ರಿಸ್ಚಿಯನ್ ಅಂತ ಸಾಬೀತು ಮಾಡೋದಕ್ಕೆ ಆಗೋದಿಲ್ಲ.‌

ಅದೇ ಕ್ರಿಪ್ಟೋ ಕ್ರಿಸ್ಚಿಯಾನಿಟಿ ಅಥವಾ ಸೀಕ್ರೆಟ್ ಕ್ರಿಸ್ಚಿಯಾನಿಟಿ. ಇದು ಜಗತ್ತಿನ ಅತ್ಯಂತ ಬಲಿಷ್ಠ ನಾಗರೀಕತೆ ಎಂದೇ ಇತಿಹಾಸ ಪ್ರಸಿದ್ಧವಾಗಿದ್ದ ರೋಮನ್ ನಾಗರೀಕತೆಯನ್ನೇ ಬಲಿ ತೆಗೆದುಕೊಂಡ ಮಹಾಜಾಲ. ಈಗ ಹಿಂದೂ ಧರ್ಮವನ್ನು ಮತ್ತು ಹಿಂದೂ ನಾಗರೀಕತೆಯನ್ನೂ ಆಪೋಷನ ತೆಗೆದು ಕೊಳ್ಳಲು ಹೊರಟಿರುವ ವಿಷವರ್ತುಲ.

ಇಷ್ಟಕ್ಕೂ ಈ ಕ್ರಿಪ್ಟೋ ಕ್ರಿಸ್ಚಿಯನ್ಸ್ ಅಂದ್ರೆ ಯಾರು? ಇವರು ಮೂಲದಲ್ಲಿ ಹಿಂದೂಗಳೋ ಅಥವಾ ಬೇರೆ ಧರ್ಮದವರೋ ಆಗಿರ್ತಾರೆ. ಆದರೆ ರಹಸ್ಯವಾಗಿ ಕ್ರೈಸ್ತಧರ್ಮಕ್ಕೆ ಮತಾಂತರ ಆಗಿಬಿಟ್ಟಿರು ತ್ತಾರೆ. ಹೇಗೆ ಅಂದ್ರೆ... ಇವ್ರು ದಾಖಲಾತಿಗಳಲ್ಲಿ ತಮ್ಮನ್ನು ತಾವು ಕ್ರಿಸ್ಚಿಯನ್ ಅಂತ ಹೇಳ್ಕೊಳೋ ದಿಲ್ಲ. ಆದರೆ ಕ್ರೈಸ್ತರು ಪಾಲನೆ ಮಾಡೋ ಎಲ್ಲ ಆಚರಣೆಗಳನ್ನೂ ಫಾಲೋ ಮಾಡ್ತಾರೆ.

ಕ್ರೈಸ್ತದೇವರನ್ನೇ ಪೂಜಿಸುತ್ತಾರೆ. ಅವರ ಆಧಾರ್ ಕಾರ್ಡ್, ವೋಟರ್ ಐಡಿ ಇನ್ಯಾವುದೇ ಡೀಟೇಲ್ಸ್ ತೆಗೆದು ನೋಡಿ. ಅದರ ಪ್ರಕಾರ ಇವರು ಹಿಂದೂನೇ ಆಗಿರ್ತಾರೆ. ಅಥವಾ ನಾನ್- ಕ್ರಿಸ್ಚಿಯನ್ನೇ ಆಗಿರ್ತಾರೆ. ಆದರೆ ಆಚರಣೆಯಲ್ಲಿ ಮಾತ್ರ ಇವರು ಕ್ರೈಸ್ತಧರ್ಮಕ್ಕೆ ಪೂರ್ತಿಯಾಗಿ ಕನ್ವರ್ಟ್ ಆಗಿ ಬಿಟ್ಟಿರುತ್ತಾರೆ. ಮತಾಂತರ ಆಗುವವರು ಸಾಮಾನ್ಯವಾಗಿ ದಾಖಲೆಗಳಲ್ಲೂ ತಮ್ಮ ಹೆಸರು ಧರ್ಮ ಇತ್ಯಾದಿಗಳನ್ನು ಬದಲಿಸುವುದು ವಾಡಿಕೆ. ಆದರೆ ಇವರು ಮಾತ್ರ ಯಾಕೆ ಹೀಗೆ? ಇದರ ಹಿಂದಿನ ಉದ್ದೇಶ ಏನು?

ಉದ್ದೇಶ ಇಷ್ಟೆ. ಹಿಂದೂಗಳ ಮಧ್ಯವೇ ಇದ್ದು, ಹಿಂದೂಗಳನ್ನು ಕ್ರೈಸ್ತ ಧರ್ಮದ ಕಡೆ ಸೆಳೆದು ಮತಾಂತರ ಮಾಡೋದು! ಅಫ್ ಕೋರ್ಸ್ ಕ್ರಿಪ್ಟೋ ಅಂದರೇನೇ ಸೀಕ್ರೆಟ್ ಎಂದರ್ಥವಲ್ಲವೇ. ನಿಜ ಹೇಳುವುದಾದರೆ, ಕ್ರಿಸ್ಚಿಯಾನಿಟಿ ಈ ಜಗತ್ತಿಗೆ ಬಂದು ಎಷ್ಟು ವರ್ಷ ಆಯ್ತೋ.. ಈ ಕ್ರಿಪ್ಟೋ ಕ್ರಿಸ್ಚಿಯಾನಿಟಿ ಬಂದು ಕೂಡ ಅಷ್ಟೇ ವರ್ಷಗಳಾಗಿವೆ. ಇತಿಹಾಸ ತೆಗೆದು ನೋಡಿದರೆ ರೋಮ್ ದೇಶದಲ್ಲಿ ಇದ್ದಿದ್ದು ಪೇಗನ್ ನಾಗರೀಕತೆ. ಅವರದ್ದೇ ದೇವರಿತ್ತು. ಧರ್ಮ ಇತ್ತು. ಹಿಂದೂ ಗಳಂತೆಯೇ ಅವರಲ್ಲೂ ಹಲವಾರು ದೇವರು ಇದ್ದರು. ಹಬ್ಬ ಆಚರಣೆಗಳಿದ್ದವು.

ಆದರೆ ಕ್ರಿಸ್ತಪೂರ್ವ ಆರುನೂರರ ಹೊತ್ತಿಗೆ ಸಮೃದ್ಧ ನಾಗರೀಕತೆ ಹೊಂದಿದ್ದ ರೋಮ್, ಕ್ರಿಸ್ತಶಕ ಐದನೇ ಶತಮಾನ ಬರೋ ಹೊತ್ತಿಗೆ ಕ್ರಿಸ್ಚಿಯಾನಿಟಿಯ ಹಾವಳಿಗೆ ತುತ್ತಾಗಿ ಹೋಯ್ತು. ಹದಿನೈದ ನೆಯ ಶತಮಾನದ ಆರಂಭದ ಸಮಯಕ್ಕೆ ಇಡೀ ನಾಗರೀಕತೆಯೇ ನಾಶವಾಗಿ ರೋಮ್ ಅನ್ನೋದು ಕ್ರಿಸ್ಚಿಯನ್ ದೇಶವಾಗಿ ಬದಲಾಗಿ ಹೋಗಿತ್ತು. ಇದು ಮತಾಂತರ ಎಂಬ ಕಾಯಿಲೆ ಒಂದು ದೇಶವನ್ನು ಹಾಗೂ ಒಂದು ನಾಗರೀಕತೆಯನ್ನು ಬಲಿ ತೆಗೆದುಕೊಂಡ ರೀತಿ!

ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಜೀಸಸ್ ಕ್ರೈ ಜನ್ಮ ತಾಳಿದ ಕೆಲವೇ ವರ್ಷಕ್ಕೆ ಈ ಮತಾಂತರದ ಕೆಲಸ ಆರಂಭ ಆಗುತ್ತದೆ. ತೀರಾ ಬಹಿರಂಗವಾಗಿಯೇ ಈ ಮತಾಂತರ ಶುರುವಾಗಿ ಬಿಡುತ್ತದೆ. ಆದರೆ ರೋಮನ್ ದೊರೆ ಟ್ರಾಜನ್ ಇವರ ಹುನ್ನಾರಗಳನ್ನು ಅರಿತು ಮತಾಂತರದ ಮೇಲೆ ನಿಷೇಧ ಹೇರಿರುತ್ತಾನೆ. ಅಸಲೀ ಆಟ ಆಗ ಶುರುವಾಗುತ್ತದೆ. ಅದೇ ಕ್ರಿಪ್ಟೋ ಕನ್ವರ್ಶನ್! ಸೀಕ್ರೆಟ್ ಆಗಿ ರೋಮನ್ನರನ್ನು ಕ್ರೈಸ್ತ ಧರ್ಮಕ್ಕೆ ಕನ್ವರ್ಟ್ ಮಾಡುವ ಚಟುವಟಿಕೆ.

ಇಲ್ಲಿ ಮಾಡಿದ್ದಾದರೂ ಏನು? ಮೊದಲು ಬಹಳ ತುಂಬ ಗುಪ್ತವಾಗಿ ಮತಾಂತರ ಮಾಡಿ ಕ್ರಿಸ್ಚಿಯಾ ನಿಟಿಗೆ ಸೇರಿಸಲಾಗುತ್ತದೆ. ಹಾಗೆ ಕನ್ವರ್ಟ್ ಆದವರಿಗೆ, ಈ ವಿಚಾರವನ್ನು ಹೊರಗೆಲ್ಲೂ ತಿಳಿಸ ಬಾರದು. ಆದರೆ ನೀವು ನಿಮ್ಮ ಧರ್ಮದಲ್ಲಿದ್ದವರಂತೆಯೇ ಇದ್ದು ಕ್ರಿಸ್ಚಿಯನ್ ಧರ್ಮದ ಪ್ರಚಾರ ಶುರು ಮಾಡ್ಕೋಬೇಕು. ನಮ್ಮ ಹಾಗೆಯೇ ಸೀಕ್ರೆಟ್ ಆಗಿ, ಹೊಸ ಹೊಸ ವಿಧಾನಗಳ ಮೂಲಕ ಸೆಳೆಯಬೇಕು ಎಂದು ಉಪದೇಶಿಸ‌ ಲಾಗುತ್ತದೆ. ಹೀಗೆ ಶುರುವಾದ ಸೀಕ್ರೆಟ್ ಕನ್ವರ್ಶನ್ ಕೇವಲ ನೂರೈವತ್ತು ವರ್ಷಗಳಲ್ಲಿ ಇಡೀ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಡುತ್ತದೆ.

ಈಗ ಭಾರತ ಎದುರಿಸುತ್ತಿರುವುದು ಇದೇ ಅಪಾಯವನ್ನು. ಭಾರತದಲ್ಲಿ ಈ ಸೀಕ್ರೆಟ್ ಕನ್ವರ್ಶನ್ ಅನ್ನೋದು ಶುರುವಾಗಿದ್ದು ಬ್ರಿಟಿಷರು ಬಂದಾಗ. ಸಮಾಜ ಸುಧಾರಕರ ವೇಷದಲ್ಲಿ ಆಗ ಭಾರತಕ್ಕೆ ಬಂದವರೆಲ್ಲ ಮಾಡಿದ್ದು ಈ ರಹಸ್ಯ ಮತಾಂತರವನ್ನೇ. ಹಿಂದೂಗಳಲ್ಲಿ ಮೇಲ್ವರ್ಗ ಕೆಳವರ್ಗ ಅನ್ನೋ ಭೇದ ಇರೋದನ್ನು ಗಮನಿಸುವ ಈ ಬ್ರಿಟಿಷ್ ಕ್ರಿಪ್ಟೋಗಳು, ಕೆಳವರ್ಗದವರನ್ನು ಟಾರ್ಗೆಟ್ ಮಾಡುತ್ತಾರೆ. ಕನ್ವರ್ಶನ್ ಆಟ ಶುರುವಿಡುತ್ತಾರೆ.

ಒಂದೇ ಒಂದು ಬಾರಿ ಇತಿಹಾಸದ ಪುಟ ತೆರೆದು ನೋಡಿದರೆ ಪರಿಣಾಮ ಕಣ್ಣಿಗೆ ರಾಚುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಲ್ಲಿ ಒಂದೇ ಒಂದು ರಾಜ್ಯದಲ್ಲೂ ಕ್ರಿಸ್ಚಿಯನ್ನರ ಪ್ರಾಬಲ್ಯ ಇರಲಿಲ್ಲ. ಆದ್ರೆ ಆನಂತರ ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ಎಲ್ಲ ಕಡೆ ಕ್ರಿಸ್ಚಿಯನ್ನರ ಸಂಖ್ಯೆ ಜಾಸ್ತಿ ಆಗುತ್ತಲೇ ಹೋಯ್ತು. ಈಗ ಈ ಮೂರೂ ಕ್ರಿಸ್ಚಿಯನ್ ಮೆಜಾರಿಟಿ ರಾಜ್ಯಗಳು. ಮಣಿಪುರ ಮತ್ತು ಅರುಣಾಚಲ ಕೂಡ ಶೀಘ್ರದ ಆ ಪಟ್ಟಿ ಸೇರಬಹುದು. ಇನ್ನು ಕೇರಳ ಮತ್ತು ಗೋವಾ ಕೂಡ ಅರ್ಧ ಭಾಗ ಕ್ರಿಸ್ಚಿಯನ್ ಧರ್ಮದಿಂದಾನೇ ತುಂಬಿ ಹೋಗಿದೆ. ತಮಿಳುನಾಡು, ಆಂಧ್ರ, ಪಂಜಾಬ್ ಕೂಡ ಕನ್ವರ್ಶನ್ ಹೊಡೆತಕ್ಕೆ ಸಿಕ್ಕು ನಲುಗುತ್ತಿವೆ. ಕರ್ನಾಟಕದಲ್ಲಿ ಏನಾಗ್ತಿದೆ ಅಂತ ನೋಡಲು ಒಮ್ಮೆ ದಕ್ಷಿಣ ಕನ್ನಡದತ್ತ ಕಣ್ಣು ಹಾಯಿಸಬೇಕು. ಅಧಿಕೃತ ಗಣತಿ ಪ್ರಕಾರ ದೇಶದಲ್ಲಿ ಕ್ರಿಸ್ಚಿಯನ್ ಸಂಖ್ಯೆ 2.3%. ಅಂದ್ರೆ ಸುಮಾರು ಮೂರು ಕೋಟಿ. ಆದರೆ ಸೀಕ್ರೆಟ್ ಕ್ರಿಸ್ಚಿಯ ಸಂಖ್ಯೆ ಸುಮಾರು 12 ಕೋಟಿ ದಾಟುತ್ತಿದೆ.

ಬಡತನದಲ್ಲಿರುವ ದಲಿತರು, ಹಿಂದುಳಿದವರು ಈ ಮತಾಂತರಕ್ಕೆ ಒಳಗಾದ ಪ್ರಮುಖರು. ಆದರೆ ದಾಖಲಾತಿಗಳಲ್ಲಿ ಅವರಿನ್ನೂ ಹಿಂದೂಗಳೇ. ಸರಕಾರಿ ಸೌಲಭ್ಯಗಳನ್ನು ಪಡೆಯಲು ಮತ್ತು ಕೆಲವು ಲಾಭಗಳಿಗಾಗಿ ಹಿಂದೂಧರ್ಮದಲ್ಲಿಯೇ ಇರುತ್ತಾರೆ. ಆಚರಣೆ ಪೂಜೆ ಮಾತ್ರ ಕ್ರೈಸ್ತದೇವರಿಗೆ.

ನಮ್ಮ ಸುತ್ತಮುತ್ತ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹಿಂದೂ ಧರ್ಮವನ್ನು ಬಯ್ದಾಡುವ ಸಾಕಷ್ಟು ಶ್ರೀಮಂತರು, ಪ್ರತಿಷ್ಠಿತ ವ್ಯಕ್ತಿಗಳು, ಸೆಲೆಬ್ರಿಟಿಗಳು, ಸಾಹಿತಿಗಳು ಸೀಕ್ರೆಟ್ ಕ್ರಿಸ್ಚಿಯನ್‌ಗಳೇ ಆಗಿದ್ದಾರೆ ಅನ್ನುವುದು ವಾಸ್ತವ. ಈ ದೇಶದ ಪ್ರಭಾವಿ ಶ್ರೀಮಂತರು, ಮುಖ್ಯಮಂತ್ರಿಗಳು, ಮಂತ್ರಿಗಳು, ನ್ಯಾಯಾಧೀಶರು, ಪತ್ರಕರ್ತರು, ನಟ ನಟಿಯರು ಹೀಗೆ ಕ್ರಿಪ್ಟೋ ಕ್ರಿಸ್ಚಿಯನ್ಸ್ ಆಗಿ ಬದಲಾಗಿದ್ದಾರೆ. ಇವರ ಕೆಲಸ ಇಷ್ಟೇ, ಹಿಂದೂ ಧರ್ಮದ ಅವಹೇಳನ. ಹಿಂದೂ ಧರ್ಮವನ್ನು ಮೌಢ್ಯ ಎಂದು ಬಿಂಬಿಸುವುದು. ಹಿಂದೂಧರ್ಮದಲ್ಲಿ ಜಾತೀಯತೆ ಇದೆ. ಬಡತನ ಇದೆ.

ಕ್ರಿಸ್ಚಿಯಾನಿಟಿಯಲ್ಲಿ ಸಮಾನತೆ ಇದೆ. ಎಲ್ಲ ಕಷ್ಟಗಳಿಗೆ ಪರಿಹಾರವಿದೆ ಎಂದು ನಂಬಿಸುವುದು. ಸೀಕ್ರೆಟ್ ಆಗಿ ಕನ್ವರ್ಟ್ ಮಾಡಿಸುವುದು. ಅಷ್ಟು ಶಕ್ತವಾಗಿದ್ದ ರೋಮನ್ ನಾಗರೀಕತೆಯನ್ನು ಬರೀ ನೂರುವರ್ಷ ದಲ್ಲಿ ನಾಶ ಮಾಡಿ ಕ್ರಿಸ್ಚಿಯಾನಿಟಿಯ ಸ್ಥಾಪನೆ ಮಾಡಿದ್ದ ಈ ಕ್ರಿಪ್ಟೋಗಳಿಗೆ, ಸೆಕ್ಯುಲರಿಸಂ ಭೂತ ಹೊಕ್ಕಿಸಿಕೊಂಡಿರುವ ಭಾರತವನ್ನು ಬದಲಿಸೋದು ದೊಡ್ಡ ವಿಷಯವೇ‌ ನಲ್ಲ.

ಮುಸಲ್ಮಾನರು ಬಿಡಬೇಕಷ್ಟೆ. ಶಾಲೆಗಳ ಮೂಲಕ, ಆಸ್ಪತ್ರೆಗಳ ಮೂಲಕ, ಎನ್‌ಜಿಓ, ಅನಾಥಾಶ್ರಮ ಇತ್ಯಾದಿಗಳ ಮೂಲಕ ಸೆಳೆಯುವುದು ಹಳೆಯ ಸ್ಟೈಲ್. ಸೆಲೆಬ್ರಿಟಿಗಳ ಮೂಲಕ ಪ್ರಭಾವಿ ಪತ್ರಕರ್ತ ರ, ರಾಜಕೀಯ ನಾಯಕರ ಮೂಲಕ ಸೆಳೆಯುವುದು ಹೊಸ ಸ್ಟೈಲ್. ದೇಶದ ಆರ್ಥಿಕ ಸಮತೋಲನ ವನ್ನು, ರಾಜಕೀಯ ಸ್ಥಿತಿಗತಿಯನ್ನು, ಧಾರ್ಮಿಕ ಅಸ್ತಿತ್ವವನ್ನು ಗೊತ್ತೇ ಆಗದಂತೆ ಹೊಡೆದು ಹಾಕುವ ಪ್ರಬಲ ಅಸ್ತ್ರ ಈ ಕ್ರಿಪ್ಟೋ ಕನ್ವರ್ಶನ್. ಇಂಥ ಅಪಾಯಕಾರಿ ಕ್ರಿಮಿಗಳು ನಮ್ಮ ನಿಮ್ಮ ಅಕ್ಕಪಕ್ಕದ ಇದ್ದರೂ ಅಚ್ಚರಿ ಇಲ್ಲ. ಹುಷಾರಾಗಿರಿ ಅನ್ನೋದು ಈ ಕ್ಷಣದ ಎಚ್ಚರಿಕೆ.