ಇಲ್ಲಿ ವಿಶ್ವಸುಂದರಿಗಿರುವ ಅದೃಷ್ಟ ಮಿ.ಯೂನಿವರ್ಸ್ʼಗಿಲ್ಲ !
ನಮ್ಮೂರ ಎಲ್ಲ ಯುವಕರಿಗೂ ಗುರುಮೂರ್ತಿ ಸ್ಫೂರ್ತಿಯಾಗಿ ಕಂಡಿದ್ದರು. ಬಾಡಿ ಬಿಲ್ಡ್ ಮಾಡುವುದರ ಜೊತೆಗೆ ಕೆಲಸವೂ ಸಿಗುತ್ತದೆಂಬ ಆಸೆ ಹುಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ನಂತರದಲ್ಲಿ ಕೆಲವರಿಗೆ ಪೊಲೀಸ್ ಇಲಾಖೆಯಲ್ಲಿ, ಸೇನೆಯಲ್ಲಿ ಇನ್ನು ಕೆಲವು ರಾಜ್ಯ-ಕೇಂದ್ರ ಸರಕಾರದ ಇಲಾಖೆಗಳಲ್ಲಿ ಕೆಲಸ ಸಿಕ್ಕಿ, ನಮ್ಮ ಆಸೆಯನ್ನು ದುಪ್ಪಟ್ಟುಗೊಳಿಸಿತ್ತು