250 Years for USA: ಭಾರತ-ಅಮೆರಿಕ ಬೆಸುಗೆಯ ಸಿಹಿ-ಕಹಿ
ಭಾರತಕ್ಕೆ 1947, ಆ.15ರಂದು ಸ್ವಾತಂತ್ರ್ಯ ಬಂದ ಮೇಲೆ ಎರಡೂ ದೇಶಗಳ ನಡುವೆ ಅಧಿಕೃತ ಬಾಂಧವ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಸಂಬಂಧ ಆಗಾಗ ಬಲಿಷ್ಠಗೊಳ್ಳುತ್ತ, ಆಗಾಗ ವಿಷಮಿಸುತ್ತ ಸಾಗಿದೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕೆಲವು ಏರುಪೇರುಗಳಿದ್ದರೂ, ಒಟ್ಟಾರೆ ಬಲವಾದ ಆಂತರಿಕ ಸಂಬಂಧ ಹೊಂದಿವೆ. ಅಮೆರಿಕದ ಪ್ರಮುಖ ಸ್ಥಾನಗಳಲ್ಲಿ ಭಾರತೀಯರು ಇರುವುದು ಅದಕ್ಕೆ ಕಾರಣ.
-
ನಿರೂಪ (ಕೆ.ಪೃಥ್ವಿಜಿತ್)
ಭಾರತಕ್ಕೆ 1947, ಆ.15ರಂದು ಸ್ವಾತಂತ್ರ್ಯ ಬಂದ ಮೇಲೆ ಎರಡೂ ದೇಶಗಳ ನಡುವೆ ಅಧಿಕೃತ ಬಾಂಧವ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಸಂಬಂಧ ಆಗಾಗ ಬಲಿಷ್ಠಗೊಳ್ಳುತ್ತ, ಆಗಾಗ ವಿಷಮಿಸುತ್ತ ಸಾಗಿದೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕೆಲವು ಏರುಪೇರುಗಳಿದ್ದರೂ, ಒಟ್ಟಾರೆ ಬಲವಾದ ಆಂತರಿಕ ಸಂಬಂಧ ಹೊಂದಿವೆ. ಅಮೆರಿಕದ ಪ್ರಮುಖ ಸ್ಥಾನಗಳಲ್ಲಿ ಭಾರತೀಯರು ಇರುವುದು ಅದಕ್ಕೆ ಕಾರಣ. ಈ ಬಾಂಧವ್ಯದ ಏರಿಳಿತದ ನೋಟ ಇಲ್ಲಿದೆ...
1949-ಅಮೆರಿಕಕ್ಕೆ ನೆಹರೂ ಮೊದಲ ಭೇಟಿ
1947, ಆ.14ರ ತಡರಾತ್ರಿ (ದಿನಾಂಕದ ಪ್ರಕಾರ ಆ.15) ಭಾರತ ಸ್ವತಂತ್ರವಾಯಿತು. ಅದರೊಂದಿಗೆ ಪಾಕಿಸ್ತಾನವೆಂಬ ದೇಶ ಹುಟ್ಟಿಕೊಂಡಿತು. ಲಕ್ಷಾಂತರ ಮಂದಿಯ ಮಾರಣಹೋಮದ ನಡುವೆಯೇ ಭಾರತ ಸ್ವತಂತ್ರಗೊಂಡ ನಂತರ ವಿದೇಶಿ ಬಾಂಧವ್ಯ ವೃದ್ಧಿಗೆ ದೊಡ್ಡಮಟ್ಟದಲ್ಲಿ ಯತ್ನ ಆರಂಭ ವಾಯಿತು.
1194, ಅ.13ರಂದು ಭಾರತದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರೂ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದರು. ಹಲವು ವಾರಗಳ ಈ ಭೇಟಿಯಲ್ಲಿ ಅಮೆರಿಕದ ಅಧ್ಯಕ್ಷ ಹ್ಯಾರಿ ಎಸ್.ಟ್ರೂಮನ್ ಜೊತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದವು. ಈ ವೇಳೆ ರಷ್ಯಾ ಮತ್ತು ಅಮೆರಿಕ ನಡುವೆ ನಡೆಯುತ್ತಿದ್ದ ಶೀತಲ ಸಮರದಲ್ಲಿ ತಾನು ಯಾವ ಬಣಕ್ಕೂ ಸೇರುವುದಿಲ್ಲ ಎಂಬ ಅಲಿಪ್ತ ನೀತಿಯನ್ನು ಭಾರತ ದೃಢವಾಗಿ ಉಚ್ಚರಿಸಿತು.
ಇದು ಎರಡೂ ದೇಶಗಳ ಬಾಂಧವ್ಯವೃದ್ಧಿಗೆ ಅಡ್ಡಿಯಾಯಿತು. ಇನ್ನೊಂದು ಕಡೆ ರಷ್ಯಾದೊಂದಿಗೆ ಭಾರತದ ಶಸ್ತ್ರಾಸ್ತ್ರ ಖರೀದಿಯೂ ಜೋರಾಯಿತು. ಗಾಂಧಿ ತತ್ತ್ವಕ್ಕೆ ಶರಣಾದ ಜೂ.ಮಾರ್ಟಿನ್ ಲೂಥರ್ ಕಿಂಗ್ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುವಾಗ ಮಹಾತ್ಮ ಗಾಂಧೀಜಿ ಅಹಿಂಸೆಯನ್ನೇ ಶಸ್ತ್ರವಾಗಿಸಿಕೊಂಡಿದ್ದರು. ಇದರಿಂದ ಪ್ರಭಾವಿತರಾದ ಅಮೆರಿಕದ ಜ್ಯೂ.ಮಾರ್ಟಿನ್ ಲೂಥರ್ ಕಿಂಗ್ 1949ರಲ್ಲಿ ಭಾರತಕ್ಕೆ ಆಗಮಿಸಿ ಅಹಿಂಸಾ ಸಿದ್ಧಾಂತವನ್ನು ಅಧ್ಯಯನ ಮಾಡಿದರು. ಅಮೆರಿಕದಲ್ಲಿರುವ ವರ್ಣಭೇದ ಸಮಸ್ಯೆಯ ವಿರುದ್ಧ ಅಹಿಂಸಾ ನೀತಿಯನ್ನೇ ಪ್ರಯೋಗಿಸುವುದಾಗಿ ಘೋಷಿಸಿದರು.
1959-ಭಾರತದಲ್ಲಿ ಐಐಟಿ ಸ್ಥಾಪನೆಗೆ ಅಮೆರಿಕ ನೆರವು
ಭಾರತಕ್ಕೆ ಸ್ವಾತಂತ್ರ್ಯ ಬಂದು 12 ವರ್ಷ ಕಳೆದಿದ್ದರೂ ಅಮೆರಿಕದ ಒಬ್ಬನೇ ಒಬ್ಬ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಿರಲಿಲ್ಲ. 1959, ಡಿ.9ರಂದು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಡ್ವೈಟ್ ಐಸೆನ್ ಹೊವರ್ ಭಾರತಕ್ಕೆ ಭೇಟಿ ನೀಡಿ, ನೆಹರೂ ಜೊತೆಗೆ ಮಾತುಕತೆ ನಡೆಸಿದರು. ಜೊತೆಗೆ ಸಂಸತ್ತಿನಲ್ಲಿ ಭಾಷಣ ಮಾಡಿದರು. ಅಮೆರಿಕದ 9 ವಿಶ್ವ ವಿದ್ಯಾಲಯಗಳು ಮತ್ತು ಯುಎಸ್‌ಎಐಡಿ (ಅಂತಾರಾ ಷ್ಟ್ರೀಯ ಅಭಿವೃದ್ಧಿಗೆ ಅಮೆರಿಕದ ಸಂಸ್ಥೆ) ಗಳು ಭಾರತದ ಮೊದಲ ಐಐಟಿಯ ಸ್ಥಾಪನೆಗೆ ನೆರವು ನೀಡಿದವು. ಭಾರತದಲ್ಲಿ ತಾಂತ್ರಿಕ ಶಿಕ್ಷಣ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸಿತು.
ಇದನ್ನೂ ಓದಿ: 250 Years for USA: ಯುದ್ಧವನ್ನೇ ಗೆಲ್ಲದ ಯುದ್ಸೋತ್ಸಾಹಿ ರಾಷ್ಟ್ರ
1962-ಚೀನಾ ದಾಳಿ ವೇಳೆ ಭಾರತಕ್ಕೆ ಬೆಂಬಲ
1962, ಅ.20ರಂದು ಚೀನಾ ಗಡಿಖ್ಯಾತೆ ತೆಗೆದು ಹಠಾತ್ತನೆ ಭಾರತದ ಮೇಲೆ ದಾಳಿ ಮಾಡಿತು. ಆ ವೇಳೆ ಅಂದಿನ ಪ್ರಧಾನಿ ನೆಹರೂ ಅಮೆರಿಕ ಅಧ್ಯಕ್ಷ ಜಾನ್ ಎಫ್.ಕೆನಡಿಗೆ ಪತ್ರ ಬರೆದು ನೆರವಿಗೆ ಮನವಿ ಮಾಡಿದರು. ಆಗ ಅಮೆರಿಕ ಬ್ರಿಟಿಷರ ಕಾಲದ ಮೆಕ್‌ಮೋಹನ್ ರೇಖೆಯನ್ನೇ ಗಡಿಯೆಂದು ಒಪ್ಪಿತಲ್ಲದೇ, ಭಾರತಕ್ಕೆ ಶಸ್ತ್ರಾಸ್ತ್ರಗಳನ್ನೂ ಪೂರೈಸಿತು. 1965ರಲ್ಲಿ ಭಾರತ-ಪಾಕ್ ಯುದ್ಧ ಆಗುವವರೆಗೆ ಈ ಸ್ನೇಹ ಮುಂದುವರಿದಿತ್ತು.
1971: ಪಾಕಿಸ್ತಾನ ಪರ ವಕಾಲತ್ತು
1971ರಲ್ಲಿ ಭಾರತ-ಪಾಕ್ ನಡುವೆ ಯುದ್ಧ ನಡೆದು ಪಾಕಿಸ್ತಾನದ 99000 ಸೈನಿಕರು ಭಾರತದೆದುರು ಮಂಡಿಯೂರಿದ್ದು ಇಡೀ ವಿಶ್ವಕ್ಕೆ ಗೊತ್ತಿದೆ. ಬಾಂಗ್ಲಾದಲ್ಲಿ ನಿರಂತರವಾಗಿ ಹಿಂದೂಗಳ ವಿರುದ್ಧ ವಾಗಿ ದೌರ್ಜನ್ಯ ಎಸಗುತ್ತಿದ್ದ ಪಾಕಿಸ್ತಾನದ ವಿರುದ್ಧ ಸಿಡಿದೆದ್ದ ಇಂದಿರಾಗಾಂಧಿ ನೇತೃತ್ವದ ಅಂದಿನ ಸರಕಾರ, ಪಾಕ್ ಸೇನೆಯನ್ನು ಬಡಿದು ಬಾಂಗ್ಲಾದಿಂದ ಹೊರ ಹಾಕಿತು. ಅದರಿಂದ ಬಾಂಗ್ಲಾ ಎಂಬ ದೇಶವೇ ಸೃಷ್ಟಿಯಾಯಿತು. ಆಗ ಬಾಂಗ್ಲಾವನ್ನು ಪೂರ್ವ ಪಾಕಿಸ್ತಾನವೆಂದೇ ಕರೆಯಲಾಗುತ್ತಿತ್ತು. ತನ್ನದೇ ಜನರ ವಿರುದ್ಧ ಹಿಂಸೆ ಮಾಡುತ್ತಿದ್ದ ಪಾಕನ್ನು ಆಗಿನ ಅಮೆರಿಕ ಸರಕಾರ ಬೆಂಬಲಿಸಿತು. ಈ ವೇಳೆ ಭಾರತ ರಷ್ಯಾದೊಂದಿಗೆ 20 ವರ್ಷಗಳ ಸ್ನೇಹ ಸಂಬಂಧಕ್ಕೆ ಸಹಿ ಮಾಡಿತು. ಪರೋಕ್ಷವಾಗಿ ಅಲಿಪ್ತ ನೀತಿಯನ್ನು ಕೈಬಿಟ್ಟು ರಷ್ಯಾಕ್ಕೆ ಬೆಂಬಲ ಘೋಷಿಸಿತು.
1974-ಭಾರತ ಅಣು ಪರೀಕ್ಷೆ, ಕೆರಳಿದ ಅಮೆರಿಕ
1974ರಲ್ಲಿ ಭಾರತ ಮೊದಲ ಬಾರಿ ಪರಮಾಣು ಪರೀಕ್ಷೆ ನಡೆಸಿತು. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಹೊರತುಪಡಿಸಿ ಅಣ್ವಸ್ತ್ರ ಹೊಂದಿದ ಮೊದಲ ದೇಶವಾಗಿ ಭಾರತ ಹೊರ ಹೊಮ್ಮಿತು. ಇದು ಅಮೆರಿಕನ್ನು ಕೆರಳಿಸಿ ಎರಡೂ ದೇಶಗಳ ಸಂಬಂಧ ಬಿಗಡಾಯಿಸಿತು.
1988-ಅಮೆರಿಕದ ‘ಅಣು’ ಸಲಹೆಗೆ ಭಾರತ ತಿರಸ್ಕಾರ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕದ ಭಾರತದಂತಹ ದೇಶಗಳಿಗಾಗಿ ಅಣ್ವಸ ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಅಮೆರಿಕ ಜಾರಿ ಮಾಡಿತು. ಭಾರತ ತನ್ನ ಅಣುಸ್ಥಾವರಗಳನ್ನು ಅಂತಾರಾಷ್ಟ್ರೀಯ ತಜ್ಞರ ಸಮಿತಿ ಪರಿಶೀಲನೆ ಮಾಡಲು ಅವಕಾಶ ಕೊಡಬೇಕೆಂದು ತಿಳಿಸಿತು. ಅದನ್ನು ಭಾರತ ತಿರಸ್ಕರಿಸಿದಾಗ, ಭಾರತಕ್ಕೆ ಎಲ್ಲ ರೀತಿಯ ಅಣ್ವಸ್ತ್ರ ನೆರವನ್ನು ನಿಲ್ಲಿಸುವುದಾಗಿ ಅಮೆರಿಕ ಘೋಷಿಸಿತು.
1982-ಬಾಂಧವ್ಯವೃದ್ಧಿಗೆ ಇಂದಿರಾ ಯತ್ನ
1982ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿ, ಎರಡೂ ದೇಶಗಳ ಬಾಂಧ ವ್ಯವೃದ್ಧಿಗೆ ಬಲವಾದ ಯತ್ನ ನಡೆಸಿದ್ದರು. ಆಗ ರೊನಾಲ್ಡ್ ರೇಗನ್ ಅಮೆರಿಕದ ಅಧ್ಯಕ್ಷರಾಗಿದ್ದರು. 1984ರಲ್ಲಿ ಇಂದಿರಾ ಹತ್ಯೆಯಾದ ನಂತರ ಈ ಯತ್ನಕ್ಕೆ ಹಿನ್ನಡೆಯಾಯಿತು.
1984-ಭೋಪಾಲ್ ಅನಿಲ ದುರಂತದ ಆಕ್ರೋಶ
ಅಮೆರಿಕದ ಯೂನಿಯನ್ ಕಾರ್ಬೈಡ್ ಕೀಟನಾಶಕ ಕಂಪನಿಯ ಭೋಪಾಲ್ ಘಟಕದಲ್ಲಿ ಅನಿಲ ಮತ್ತು ರಾಸಾಯನಿಕ ಸೋರಿಕೆಯಾಯಿತು. ಇದರಿಂದ 10000ಕ್ಕೂ ಅಧಿಕ ಮಂದಿ ಸಾವಿಗೀಡಾದರು. ಆ ಘಟನೆಯನ್ನು ಈಗಲೂ ಭಾರತೀಯರು ದುಃಖದಿಂದ ನೆನಪಿಸಿಕೊಳ್ಳುತ್ತಾರೆ. ಆ ಕಂಪನಿಯ ಸಿಇಒವನ್ನು ಭಾರತದ ವಶಕ್ಕೆ ಕೊಡಲು ಅಮೆರಿಕ ಒಪ್ಪಲಿಲ್ಲ. ಅದರಿಂದ ಭಾರತ ಸಿಟ್ಟಾಯಿತು.
1998-ಮತ್ತೆ ಅಣ್ವಸ್ತ್ರ ಪರೀಕ್ಷೆ, ಅಮೆರಿಕ ಮತ್ತೆ ಕೆಂಡ ವಾಜಪೇಯಿ ಸರಕಾರದ ಅವಧಿಯಲ್ಲಿ 1998ರಲ್ಲಿ ಭಾರತ ಮತ್ತೆ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಅಮೆರಿಕಕ್ಕೆ ಸುಳಿವೇ ಸಿಗದಂತೆ ಪರೀಕ್ಷೆ ನಡೆಸಿದ್ದರಿಂದ ಅಮೆರಿಕ ದಿಗಿಲಾಯಿತು. ಭಾರತದ ವಿರುದ್ಧ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಿರ್ಬಂಧಗಳನ್ನು ಹೇರಿದರು.
2001-ಭಾರತದ ಮೇಲಿನ ಆರ್ಥಿಕ ನಿರ್ಬಂಧ ತೆರವು
2000ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದರು. 1978ರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿ ನೀಡಿದ ಉದಾಹರಣೆಯಿದು. ಅದರಲ್ಲೂ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ ನಂತರ ತೀವ್ರ ನಿರ್ಬಂಧಗಳನ್ನು ಹೇರಿದ್ದ ಕ್ಲಿಂಟನ್ ಅವರೇ ಭಾರತಕ್ಕೆ ಭೇಟಿ ನೀಡಿ, ಪಾಕ್‌ನಿಂದ ತುಸು ದೂರ ಸರಿಯುವ ಸುಳಿವೊಂದನ್ನು ನೀಡಿದ್ದರು. ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಾರ್ಜ್ ಡಬ್ಲ್ಯೂ. ಬುಷ್ ಭಾರತದ ಮೇಲೆ ಹೇರಲಾಗಿದ್ದ ಎಲ್ಲ ಆರ್ಥಿಕ ನಿರ್ಬಂಧಗಳನ್ನೂ ತೆರವು ಮಾಡಿದರು.
2005-ಅಣು ಸಹಕಾರ ಒಪ್ಪಂದಕ್ಕೆ ಸಿಂಗ್-ಬುಷ್ ಸಹಿ
ಜಾರ್ಜ್ ಬುಷ್ ಮತ್ತು ಮನಮೋಹನ್ ಸಿಂಗ್ ಮಹತ್ವದ ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಪ್ರಕಾರ ಭಾರತ ತನ್ನ ನಾಗರಿಕ ಮತ್ತು ಸೇನಾ ಕಾರಣಗಳ ಅಣು ಸೌಲಭ್ಯ ಗಳನ್ನು ಪ್ರತ್ಯೇಕಗೊಳಿಸಲು ಒಪ್ಪಿತು. ನಾಗರಿಕ ಕೇಂದ್ರಗಳನ್ನು ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ)ಯ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ನಡೆಸಲು ಸಮ್ಮತಿಸಿತು. ಇದಕ್ಕೆ ಬದಲಿಯಾಗಿ ಅಮೆರಿಕ ಭಾರತಕ್ಕೆ ಎಲ್ಲ ರೀತಿ ಅಣು ಸಹಕಾರ ನೀಡುವುದಾಗಿ ಹೇಳಿತು.
2008-ಚಂದ್ರನಲ್ಲಿಳಿದ ಭಾರತದ ಅಂತರಿಕ್ಷ ನೌಕೆ
2008, ನ.8ರಂದು ಇಸ್ರೋ ಚಂದ್ರಯಾನ-1 ಸಾಹಸ ಕೈಗೊಂಡಿತು. ಅಮೆರಿಕದ ನಾಸಾ ಸಿದ್ಧಪಡಿ ಸಿದ್ದ ಉಪಗ್ರಹಗಳು ಭಾರತೀಯ ಅಂತರಿಕ್ಷ ನೌಕೆಯ ಮೂಲಕ ಮೇಲಕ್ಕೆ ಹಾರಿ ಚಂದ್ರನ ಮೇಲಿಳಿ ಯಿತು. ಮೊದಲ ಬಾರಿಗೆ ಭಾರತದ ನೌಕೆಯೊಂದು ಚಂದ್ರನ ಮೇಲಿಳಿದ ಉದಾಹರಣೆ ಯಿದು. ಚಂದ್ರನ ಮೇಲ್ಮೈನಲ್ಲಿ ನೀರಿನ ಕಣಗಳಿರುವುದನ್ನು ಪತ್ತೆ ಹಚ್ಚಿದ್ದು ಇಲ್ಲಿನ ಮಹತ್ವದ ಸಾಧನೆ.
2010-ಮೊದಲ ವ್ಯೂಹಾತ್ಮಕ ಮಾತುಕತೆ
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಭಾರತದ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ನೇತೃತ್ವದ ಉನ್ನತ ನಿಯೋಗ ಅಮೆರಿಕಕ್ಕೆ ಪ್ರವಾಸ ಮಾಡಿತು. ಆಗ ಅಮೆರಿಕದ ವಿದೇಶಾಂಗ ಸಚಿವೆಯಾಗಿದ್ದ ಹಿಲರಿ ಕ್ಲಿಂಟನ್ ಜೊತೆಗೆ ವ್ಯೂಹಾತ್ಮಕ ಮಾತುಕತೆ ನಡೆಸಿದರು. ಇದು ಎರಡು ದೇಶಗಳ ನಡುವೆ ದೀರ್ಘಕಾಲೀನ ಲೆಕ್ಕಾಚಾರದಲ್ಲಿ ಯೋಜಿತವಾಗಿ ನಡೆದ ಮೊದಲ ವ್ಯೂಹಾತ್ಮಕ ಮಾತುಕತೆ. ಅಲ್ಲಿಂದ ನಿರಂತರವಾಗಿ ಈ ಮಾತುಕತೆಗಳು ನಡೆಯುತ್ತಲೇ ಇವೆ.
2010-ಭದ್ರತಾ ಸಮಿತಿ ಕಾಯಂ ಸ್ಥಾನಕ್ಕೆ ಅಮೆರಿಕ ಬೆಂಬಲ
2010, ನ.5ರಂದು ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವುದಕ್ಕೆ ತಮ್ಮ ಬೆಂಬಲ ಸೂಚಿಸಿದರು. ಇದು ಭಾರತದ ದೀರ್ಘಕಾಲೀನ ಬೇಡಿಕೆಗೆ ಸಿಕ್ಕ ದೊಡ್ಡ ಜಯ.
2014-ಅಮೆರಿಕದಲ್ಲಿ ಮೋದಿ ಹವಾ
2014ರಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನಿಯಾದ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದು ಭಾರೀ ಸುದ್ದಿಯಾಯಿತು. ನ್ಯೂಯಾರ್ಕ್‌ನ ಮ್ಯಾಡಿಸನ್ ಚೌಕದಲ್ಲಿ ಅನಿವಾಸಿ ಭಾರತೀ ಯರು, ಉದ್ಯಮಿಗಳೊಂದಿಗೆ ಮೋದಿ ನಡೆಸಿದ ಸಾರ್ವಜನಿಕ ಸಭೆ ವಿಶ್ವಾದ್ಯಂತ ಸುದ್ದಿ ಯಾಯಿತು.
2017-ಭಾರತೀಯ ಎಂಜಿನಿಯರ್ ಹತ್ಯೆ
ಇತ್ತೀಚೆಗೆ ವಿದೇಶಗಳಲ್ಲಿ ಭಾರತೀಯರ ಮೇಲೆ ದ್ವೇಷಪೂರಿತ ದಾಳಿಯಾಗುವುದು ನಡೆಯುತ್ತಲೇ ಇದೆ. 2017ರಲ್ಲೇ ಅಮೆರಿಕದಲ್ಲಿ ಅದು ಆರಂಭವಾಗಿತ್ತು. ಕನ್ಸಾಸ್ ನಗರದ ರೆಸ್ಟೋರೆಂಟ್ ಒಂದರಲ್ಲಿ ಅಮೆರಿಕದ ವ್ಯಕ್ತಿಯೊಬ್ಬ ಇಬ್ಬರು ಭಾರತೀಯ ಎಂಜಿನಿಯರ್‌ಗಳ ಮೇಲೆ ಗುಂಡು ಹಾರಿಸಿ ನನ್ನ ದೇಶದಿಂದ ತೊಲಗಿ ಎಂದು ಕಿರುಚಿದ. ಆಗ ಶ್ರೀನಿವಾಸ ಕುಚಿಭೊಟ್ಲ ಎಂಬ ವ್ಯಕ್ತಿ ಮೃತಪಟ್ಟರು. ಇನ್ನಿಬ್ಬರು ಗಾಯಗೊಂಡರು.
ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ, ಎಚ್-1 ವೀಸಾದಾರರಲ್ಲೂ ಭಾರತೀಯರೇ ಗರಿಷ್ಠ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.
2019-ಭಾರತದ ವಿಶೇಷ ಸ್ಥಾನ ಅಂತ್ಯಗೊಳಿಸಿದ ಟ್ರಂಪ್ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ 2019, ಜೂ.5ರಂದು ಅಮೆರಿಕ ಭಾರತಕ್ಕೆ ನೀಡಿದ್ದ ವಿಶೇಷ ವ್ಯಾಪಾರ ಸ್ಥಾನವನ್ನು ಅಂತ್ಯ ಗೊಳಿಸ ಲಾಯಿತು. ಅಭಿವೃದ್ಧಿ ಹೊಂದುತ್ತಿರುವ ದೇಶವೆಂಬ ಕಾರಣಕ್ಕೆ 1970ರಿಂದಲೂ ಭಾರತದ ಉತ್ಪನ್ನ ಗಳು ಸುಂಕರಹಿತವಾಗಿ ಅಮೆರಿಕವನ್ನು ಪ್ರವೇಶಿಸುತ್ತಿದ್ದವು. ಅಮೆರಿಕದ ಉತ್ಪನ್ನಗಳಿಗೆ ಭಾರತ ಸೂಕ್ತ ವಿನಾಯಿತಿ ನೀಡುತ್ತಿಲ್ಲ ಎಂದು ಹೇಳಿ ಅಮೆರಿಕ ಈ ಘೋಷಣೆ ಮಾಡಿತು.
2021-ಭಾರತ, ಅಮೆರಿಕ ಒಗ್ಗೂಡಿ ಚೀನಾಕ್ಕೆ ಎಚ್ಚರಿಕೆ
ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಹಾಗೂ ಆಸ್ಟ್ರೇಲಿ ಯಾದ ಪ್ರಧಾನಿಗಳು ಅಮೆರಿಕದ ಶ್ವೇತಭವನದಲ್ಲಿ ಕ್ವಾಡ್ ಶೃಂಗ ನಡೆಸಿ, ಭದ್ರತಾ ಮಾತುಕತೆ ನಡೆಸಿದವು. ಚೀನಾದೊಂದಿಗೆ ಭಾರತ ತ್ವೇಷಮಯ ವಾತಾವರಣ ಹೊಂದಿರುವ ಹೊತ್ತಿಗೇ ಈ ಬೆಳವಣಿಗೆ ನಡೆಯಿತು. ಚೀನಾದಿಂದ ಜಪಾನ್, ಆಸ್ಟ್ರೇಲಿಯಾ ಬೆದರಿಕೆ ಎದುರಿಸುತ್ತಿದ್ದ ನಡುವೆ, ಚೀನಾಕ್ಕೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಲಾಯಿತು.
2023-ಭಾರತದಲ್ಲಿ ಯಶಸ್ವಿ ಜಿ20 ಶೃಂಗ
ಭಾರತದ ಆತಿಥೇಯತ್ವದಲ್ಲಿ ನಡೆದ ಪ್ರಬಲ ಜಿ20 ರಾಷ್ಟ್ರಗಳ ಶೃಂಗದಲ್ಲಿ ಪಾಲ್ಗೊಳ್ಳಲು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಭಾರತಕ್ಕೆ ಆಗಮಿಸಿದ್ದರು. ಚೀನಾದ ಒನ್ ಬೆಲ್ಟ್-ಒನ್ ಕಾರಿಡಾರ್ ಯೋಜನೆಗೆ ಸವಾಲೆಸೆಯು ವಂತೆ, ಭಾರತ-ಮಧ್ಯಪ್ರಾಚ್ಯ ದೇಶಗಳು-ಯೂರೋಪ್ ನಡುವೆ ಸಂಬಂಧ ಬೆಸೆಯುವ ರಸ್ತೆ-ಜಲ ಮಾರ್ಗದ ರಚನೆಯನ್ನು ಘೋಷಿಸಿತು. ಇದಕ್ಕೆ ಅಮೆರಿಕ ಬೆಂಬಲ ಸೂಚಿಸಿತು.
2025-ಟ್ರಂಪ್ ಸುಂಕಸಮರ, ಹದಗೆಟ್ಟ ಸಂಬಂಧ
ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಮೆರಿಕದ ಅಧ್ಯಕ್ಷರಾದ ಮೇಲೆ ಭಾರತ-ಅಮೆರಿಕದ ಸಂಬಂಧ ಗರಿಷ್ಠ ಪ್ರಮಾಣದಲ್ಲಿ ಹಾಳಾಯಿತು. ಅದಕ್ಕೆ ಕಾರಣ ಭಾರತದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.50ರಷ್ಟಕ್ಕೆ ಟ್ರಂಪ್ ಏರಿಸಿದ್ದು. ಏಪ್ರಿಲ್ ೨, ೨೦೨೫, ಯುಎಸ್ ಲಿಬರೇಷನ್ ಡೇ ಘೋಷಣೆ ಮೂಲಕ ಜಾಗತಿಕ ಸುಂಕ ಸಮರ ಆರಂಭ ಮಾಡಿದ್ದ ಟ್ರಂಪ್, ಮೊದಲು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ.25ಕ್ಕೆ ಏರಿಸಿದರು. ಅನಂತರ ಅದು ಶೇ.50ಕ್ಕೆ ಹೋಯಿತು. ಭಾರತ ಅಮೆರಿಕದ ಉತ್ಪನ್ನಗಳಿಗೆ ಯಾವುದೇ ರಿಯಾಯ್ತಿ ನೀಡುತ್ತಿಲ್ಲ, ಅಲ್ಲದೇ ರಷ್ಯಾದಿಂದ ಭಾರತ ತೈಲವನ್ನು ತರಿಸಿಕೊಳ್ಳುತ್ತಿದೆ ಎನ್ನುವುದು ಟ್ರಂಪ್ ತಕರಾರು. ಅಮೆರಿಕದ ಸರ್ವೋಚ್ಚ ನ್ಯಾಯಾ ಲಯದ ಆದೇಶ, ಜಾಗತಿಕ ಒತ್ತಡ ಎಲ್ಲವೂ ಸೇರಿ, ಅಂತೂ ಭಾರತದ ಮೇಲಿನ ಸುಂಕವನ್ನು ಶೇ.25ರಿಂದ ಶೇ.18ಕ್ಕೆ ಇಳಿಸಿದ್ದಾರೆ.