ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vidyashankar Sharma Column: ಶ್ರೀಕೃಷ್ಣ ಹೇಳಿದ ಎರಡು ಉಪಾಯಗಳು

ಮನದ ನಿಯಂತ್ರಣ ಕಷ್ಟವೇ ಎನ್ನುವ ಜಗದ್ಗುರುವು ಅದಕ್ಕೆ ಉಪಾಯವೊಂದನ್ನು ಹೇಳುತ್ತಾನೆ. ಅಭ್ಯಾಸ ಮತ್ತು ವೈರಾಗ್ಯವೇ ಮನದ ಕುಣಿತವನ್ನು ತಡೆಯಬಲ್ಲುದು ಎಂದು ಕಿವಿಮಾತು ಹೇಳುತ್ತಾನೆ. ಶ್ರೀಕೃಷ್ಣನ ಈ ಮಾತುಗಳನ್ನು ಒಣವೇದಾಂತ ಎಂದು ಮೂಗುಮುರಿಯುವವರೇ ಹೆಚ್ಚು. ಆದರೆ ಸ್ವಲ್ಪ ಒಳಹೊಕ್ಕು ನೋಡಿದರೆ ಇದು ನಮ್ಮ ಅನುದಿನದ ಬದುಕಿಗೆ ಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂಬುದು ತಿಳಿಯುತ್ತದೆ

Vidyashankar Sharma Column: ಶ್ರೀಕೃಷ್ಣ ಹೇಳಿದ ಎರಡು ಉಪಾಯಗಳು

-

Profile
Ashok Nayak Sep 4, 2026 9:48 AM

ವಿದ್ಯಾಶಂಕರ ಶರ್ಮ, ಸಿದ್ದಾಪುರ

ಶ್ರೀಕೃಷ್ಣ ಮತ್ತು ಅರ್ಜುನರ ಸಂಭಾಷಣೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವ ವಿಷಯ ವೆಂದರೆ ಮನಸ್ಸು. ಮನದ ನಿಗ್ರಹವೇ ಬಹು ದೊಡ್ಡ ಸವಾಲಾಗಿ ಪರಿಣಮಿಸಿತ್ತು ಪಾರ್ಥನಿಗೆ. ಮನವನ್ನು ನಿಯಂತ್ರಿಸುವುದು ಗಾಳಿಯನ್ನು ಹಿಡಿಯಲು ಪ್ರಯತ್ನಿಸಿದಂತೆ ಎಂದು ಅರ್ಜುನನು ಹೇಳಿದಾಗ, ಭಗವಂತನು ಅದನ್ನು ಅಲ್ಲಗೆಳೆಯುವುದಿಲ್ಲ!

ಮನದ ನಿಯಂತ್ರಣ ಕಷ್ಟವೇ ಎನ್ನುವ ಜಗದ್ಗುರುವು ಅದಕ್ಕೆ ಉಪಾಯವೊಂದನ್ನು ಹೇಳುತ್ತಾನೆ. ಅಭ್ಯಾಸ ಮತ್ತು ವೈರಾಗ್ಯವೇ ಮನದ ಕುಣಿತವನ್ನು ತಡೆಯಬಲ್ಲುದು ಎಂದು ಕಿವಿಮಾತು ಹೇಳು ತ್ತಾನೆ. ಶ್ರೀಕೃಷ್ಣನ ಈ ಮಾತುಗಳನ್ನು ಒಣವೇದಾಂತ ಎಂದು ಮೂಗುಮುರಿಯುವವರೇ ಹೆಚ್ಚು. ಆದರೆ ಸ್ವಲ್ಪ ಒಳಹೊಕ್ಕು ನೋಡಿದರೆ ಇದು ನಮ್ಮ ಅನುದಿನದ ಬದುಕಿಗೆ ಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂಬುದು ತಿಳಿಯುತ್ತದೆ. ಅಭ್ಯಾಸ ಎಂದರೆ ಮತ್ತೆ ಮತ್ತೆ ಇಡುವುದು. ಸಂಸ್ಕೃತದ ಅಭಿ ಮತ್ತು ಆಸ ಎಂಬ ಉಪಸರ್ಗ ಹಾಗೂ ಧಾತುಗಳಿಂದ ಇದರ ವ್ಯುತ್ಪತ್ತಿ.

ಅಭಿ ಎಂದರೆ ಮತ್ತೆ ಮತ್ತೆ, ಆಸ ಎಂದರೆ ಇಡುವುದು, ಇರುವುದು ಎಂದು. ಪುನಃ ಪುನಃ ಮಾಡು ವುದು ಎಂದರ್ಥ. ಮನಸ್ಸನ್ನು ಮತ್ತೆ ಮತ್ತೆ ತಿದ್ದುವುದು, ಶಿಸ್ತಿಗೆ ತರುವುದನ್ನೇ ಅಭ್ಯಾಸ ಎಂದು ಕರೆದಿzನೆ ಶ್ರೀಕೃಷ್ಣ. ನಮ್ಮ ಯೋಚನೆಗಳು ಹದ್ದು ಮೀರಿದಾಗ ಅವುಗಳನ್ನು ಎಳೆದು ತಂದು ಕೂರಿಸುವ ಪ್ರಯತ್ನ ಸತತವಾಗಿ ಆಗಬೇಕು ಎಂಬುದು ಅವನ ಉಪದೇಶವಾಗಿದೆ. ವೈರಾಗ್ಯ ಎಂಬ ಶಬ್ದವನ್ನು ತಪ್ಪಾಗಿ ಅರ್ಥೈಸುವುದೇ ಹೆಚ್ಚು. ವೈರಾಗ್ಯವೆಂದರೆ ಎಲ್ಲವನ್ನೂ ತ್ಯಜಿಸಿ ಸನ್ಯಾಸಿ ಯಾಗುವುದು ಎಂದಲ್ಲ. ವೈರಾಗ್ಯ ಶಬ್ದದ ಅರ್ಥ ವಿರಾಗ. ರಾಗ ಎಂದರೆ ಮೋಹ, ಆಸೆ, ವಾಂಛೆ, ವಿ ಎಂದರೆ ರಾಗವಿಲ್ಲದಿರುವುದು.

ಇದನ್ನೂ ಓದಿ: Vidyashankar Sharma Column: ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು ?

ಮನದ ಏರಿಳಿತಕ್ಕೆ ಆಸೆಗಳೇ ಮೂಲ ಕಾರಣ. ಹಾಗಾಗಿ ಅವುಗಳನ್ನು ಹತೋಟಿಗೆ ತರುವುದು ಬಹು ಮುಖ್ಯವಾಗಿದೆ. ಏನೇನೋ ಆಸೆಗಳು, ಇಚ್ಛೆಗಳು, ಶ್ರೀಕೃಷ್ಣ ಹೇಳಿದ ಎರಡು ಉಪಾಯಗಳು ಬಯಕೆಗಳು ನಮ್ಮನ್ನು ಕಾಡುವುದುಂಟು. ಹೊರ ಜಗತ್ತಿನ ಆಕರ್ಷಣೆಗಳು, ಖ್ಯಾತಿಯ ಚಾಪಲ್ಯ, ಹಣ, ಅಽಕಾರಗಳ ಮೋಹ ಹೀಗೆ ಮನದ ಒಳಕೋಣೆಯಲ್ಲಿ ರಂಗು ರಂಗಿನ ಮೇಲಾಟಗಳು ಸದಾ ಹುಚ್ಚೆದ್ದು ನಮ್ಮನ್ನು ಆಳುತ್ತವೆ. ಇವುಗಳ ಕಡೆಗೆ ಹರಿಯುವ ಮನಕ್ಕೆ ಕಟ್ಟುಪಾಡುಗಳನ್ನು ರೂಢಿಸಲೇ ಬೇಕಾಗಿದೆ. ಜಗದ ಪ್ರತಿಯೊಂದು ಪರಿಸ್ಥಿತಿಯೂ ಬದಲಾಗುವಂಥದ್ದು ಎಂಬುದನ್ನು ಅರಿಯುವುದು ವೈರಾಗ್ಯಕ್ಕೆ ಬಹು ಅವಶ್ಯವಾಗಿದೆ.

ಇಂತಹ ಆಸೆಗಳಿಂದ ಅತೃಪ್ತಿಯ ಭಾವವು ನಮ್ಮಲ್ಲಿ ಸದಾ ಇರುವಂತಾಗುತ್ತದೆ. ಇವುಗಳೆಡೆಗೆ ಇರುವ ಮೋಹವನ್ನು ವೈರಾಗ್ಯದ ಕಡಿವಾಣದಿಂದ ನಿಯಂತ್ರಿಸಿದಾಗ ಮನದ ಆಟವು ಒಂದು ಶಿಸ್ತಿಗೆ ಒಳಪಡುತ್ತದೆ. ಅಭ್ಯಾಸ ಮತ್ತು ವೈರಾಗ್ಯಗಳೆಂಬ ಶ್ರೀಕೃಷ್ಣನ ಮದ್ದುಗಳು ನಮಗೆ ಬಹು ಹತ್ತಿರವಾಗಿವೆ.

ನಿಯಂತ್ರಣಕ್ಕೆ ಬಾರದ ಬಯಕೆಗಳ ರೋಗಕ್ಕೆ ಅಭ್ಯಾಸ ಮತ್ತು ವೈರಾಗ್ಯಗಳು ಅತ್ಯಂತ ಯೋಗ್ಯ ವಾದ ಪರಿಹಾರಗಳಾಗಿವೆ. ನಮ್ಮ ದೈನಂದಿನ ಜೀವನದಲ್ಲಿ ಇವುಗಳ ಅಳವಡಿಕೆ ಬದುಕಿಗೆ ಉತ್ತಮವಾದ ಬದಲಾವಣೆಗಳನ್ನು ತರಬಲ್ಲವು. ಹೊಸ ಆಸೆ ಅಥವಾ ಬಯಕೆಯು ಮೂಡಿದಾಗ ಅದರಿಂದ ಸಿಗಬಹುದು ಎಂದುಕೊಂಡಿರುವ ಸಂತಸ ಕ್ಷಣಿಕವಾದದ್ದು, ಈ ಬಯಕೆಯನ್ನು. ಸ್ವಲ್ಪ ಕಾಲ ಮುಂದೂಡೋಣ ಎಂದು ಯೋಚಿಸುವುದು ನಮ್ಮ ಅಳವಡಿಕೆಯಲ್ಲಿ ಮೊದಲ ಹೆಜ್ಜೆ. ಇದೇ ತಂತ್ರವನ್ನು ಮತ್ತೆ ಮತ್ತೆ ಯೋಜಿಸುತ್ತ ಅದೇ ಅಭ್ಯಾಸವಾಗುತ್ತದೆ, ನಿಧಾನವಾಗಿ ಆ ಬಯಕೆಯೆಡೆಗೆ ಇರುವ ಒಲವು ಕಡಿಮೆಯಾಗು ತ್ತಾ ಹೋಗುತ್ತದೆ. ಹೀಗೆ ವೈರಾಗ್ಯವೂ ನಮ್ಮದಾಗುತ್ತದೆ.