ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

11th Global Achievers Awards Program by Vishwavani at Paris: ಪ್ಯಾರಿಸ್‌ನಲ್ಲಿ ಕನ್ನಡದ ಕಂಪನ್ನು ಸೂಸಿದ ‘ವಿಶ್ವವಾಣಿ’

ಕನ್ನಡ ರಾಜ್ಯೋತ್ಸವದ ಸಂಭ್ರಮದ ಈ ತಿಂಗಳಿನಲ್ಲಿ ದೂರದ ಪ್ಯಾರಿಸ್‌ನಲ್ಲಿ ಕಸ್ತೂರಿ ಕನ್ನಡವು ತನ್ನ ಕಂಪನ್ನು ಸೂಸಿದೆ. ಬಹುತೇಕ ಪ್ರವಾಸಿಗರ ‘ಕನಸಿನ’ ನಗರವಾಗಿರುವ ಪ್ಯಾರಿಸ್‌ಗೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದ 46 ಜನರ ನಿಯೋಗವು ತೆರಳಿ, ಕರ್ನಾಟಕದ ಪತಾಕೆಯನ್ನು ಹಾರಿಸಿದೆ.

ಪ್ಯಾರಿಸ್‌ನಲ್ಲಿ ಕನ್ನಡದ ಕಂಪನ್ನು ಸೂಸಿದ ‘ವಿಶ್ವವಾಣಿ’

-

Ashok Nayak
Ashok Nayak Nov 8, 2025 7:11 AM

-11ನೇ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಕಾರ್ಯಕ್ರಮ 11 ಮಂದಿ ಕನ್ನಡ ನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ

ವಿಶ್ವವಾಣಿ ಸುದ್ದಿಮನೆ ಪ್ಯಾರಿಸ್: ಕನ್ನಡ ರಾಜ್ಯೋತ್ಸವದ ಸಂಭ್ರಮದ ಈ ತಿಂಗಳಿನಲ್ಲಿ ದೂರದ ಪ್ಯಾರಿಸ್‌ನಲ್ಲಿ ಕಸ್ತೂರಿ ಕನ್ನಡವು ತನ್ನ ಕಂಪನ್ನು ಸೂಸಿದೆ. ಬಹುತೇಕ ಪ್ರವಾಸಿ ಗರ ‘ಕನಸಿನ’ ನಗರವಾಗಿರುವ ಪ್ಯಾರಿಸ್‌ಗೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದ 46 ಜನರ ನಿಯೋಗವು ತೆರಳಿ, ಕರ್ನಾಟಕದ ಪತಾಕೆಯನ್ನು ಹಾರಿಸಿದೆ.

‘ವಿಶ್ವವಾಣಿ ಗ್ಲೋಬಲ್ ಫೋರಂ’ವತಿಯಿಂದ ಈ ಬಾರಿ 11ನೇ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫ್ರಾನ್ಸ್ ನ ಪ್ಯಾರಿಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಅಸಾಮಾನ್ಯ ಸಾಧಕರಿಗೆ ‘ಗ್ಲೋಬಲ್ ಅಚೀವರ್ಸ್’ ಪ್ರಶಸ್ತಿ ನೀಡುವ ಜತೆ ಜತೆಗೆ ಎಂಟು ದಿನಗಳ ಪ್ರವಾಸದಲ್ಲಿ ಫ್ರಾನ್ಸ್ ಹಾಗೂ ಸ್ವಿಜರ್ಲೆಂಡ್‌ನ ಐತಿಹಾಸಿಕ, ಪಾರಂಪರಿಕ ಪ್ರವಾಸಿ ತಾಣಗಳಿಗೆ ಈ ನಿಯೋಗ ಭೇಟಿ ನೀಡಲಿದೆ.

ಇದನ್ನೂ ಓದಿ: Vishwavani Global Achievers Award Ceremony at Bhutan: ಭೂತಾನ್‌ನಲ್ಲಿ ಕನ್ನಡ ಭಾವ ಲಹರಿ ಉಕ್ಕಿಸಿದ ವಿಶ್ವವಾಣಿ

ಇದಕ್ಕೂ ಮುನ್ನ ಕಾಂಬೋಡಿಯಾ ಸೇರಿದಂತೆ 10 ದೇಶಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿದ ಬಳಿಕ ಮಂಗಳವಾರದಂದು ಪ್ಯಾರಿಸ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

vishwavani Global Top -1

ಸಮಾರಂಭದಲ್ಲಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಬೈಲಹೊಂಗಲ ಮೂರು ಸಾವಿರ ಮಠದ ಶ್ರೀ ಪ್ರಭು ನೀಲಕಂಠ ಸ್ವಾಮೀಜಿಗಳು ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಂದಿ ಸಾಧಕರನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇದೇ ಮೊದಲ ಬಾರಿಗೆ ಕರ್ನಾಟಕ ಸರಕಾರದ ಪ್ರತಿನಿಧಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಕಾರ್ಯಕ್ರಮದಲ್ಲಿ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪರ್ವ ಗ್ರೂಪ್, ಡಿಯಾಗೋ ಫೈನಾನ್ಸ್, ಅಮೃತ್‌ನೋನಿ ಹಾಗೂ ಎಂಆರ್‌ಜಿ ಗ್ರೂಪ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

vishwavani Global Top -abbapurna T R

ವಿಶ್ವೇಶ್ವರ ಭಟ್ ಅವರ ನೇತೃತ್ವದ ನಿಯೋಗದಲ್ಲಿ 46 ಮಂದಿ ಇದ್ದರು. ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ವಿಶ್ವೇಶ್ವರ ಭಟ್ ಅವರ ಪತ್ನಿ ಸುಷ್ಮಾ ಭಟ್, ವಿಶ್ವವಾಣಿ ಸಿಇಒ ಚಿದಾನಂದ ಕಡಲಾಸ್ಕರ, ಪರ್ವ ಗ್ರೂಪ್ ಸಂಸ್ಥಾಪಕ ನಿಲೇಶ್ ಎಚ್.ಪಿ., ವ್ಯಾಲ್ಯೂ ಪ್ರಾಡಕ್ಟ್ ಎಂಡಿ ಡಾ.ಶ್ರೀನಿವಾಸ್ ಮೂರ್ತಿ, ಡಾ.ಜಿ.ವಿಶ್ವನಾಥ್, ಜಿ.ಎಸ್.ಮಧು ಸೂದನ ರೆಡ್ಡಿ, ಬಿ.ಎಂ.ಸುಕುಮಾರ ಶೆಟ್ಟಿ, ರಾಘವೇಂದ್ರ ನಾಯಕ್, ಎಚ್.ಎಸ್.ಚಂದ್ರ ಮೌಳಿ, ಅರುಣಾ ಕುಮಾರಿ, ಹರಿಣಿ ರಾಮಮೂರ್ತಿ, ವಿಶಾಲ ಶಾನಭಾಗ್, ಆರ್ಯ ವಿಶಾಲ್ ಶಾನಭಾಗ್, ಗಂಧರ್ವ ಮಂಜು, ಡಾ.ಅಜೇಯ್ ಎಂ.ಹೆಗಡೆ, ಡಾ.ಶ್ರೀಶೃತಿ ಎ.ಹೆಗಡೆ, ರವಿ ಎಚ್., ಎಚ್.ಸುರೇಶ್, ಸುನೀತಾ ಸುರೇಶ್, ಸವಿತಾ ನಟರಾಜ್, ಬಸವರಾಜ್, ಮಂಜುನಾಥ ಮಕ್ಕಳಗೇರಿ, ರೇಣುಕಾ ಲಕ್ಷ್ಮಣ ಉಪ್ಪಾರ್, ಸಿದ್ದೇಶ್ ಹಾರನಹಳ್ಳಿ, ನಾಗಾರ್ಜುನ್ ಮೋತಿ ಲಾಲ್, ನಿತಿನ್ ಅಗರ್‌ವಾಲ್, ಮಹಿಮ್ ಮೆಹ್ತಾ ಭಾಗವಹಿಸಿದ್ದರು.

vishwavani Global Top -all achivers with V  R

ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪುರಸ್ಕೃತರು

* ಐವನ್ ಡಿಸೋಜಾ, ವಿಧಾನಪರಿಷತ್ ಸದಸ್ಯರು

* ಅನ್ನಪೂರ್ಣ ತುಕಾರಾಂ, ಶಾಸಕರು, ಸಂಡೂರು ವಿಧಾನಸಭಾ ಕ್ಷೇತ್ರ

* ಅಂಬುಜಾಕ್ಷಿ ಶ್ರೀನಿವಾಸ್ ಮೂರ್ತಿ, ಸಂಸ್ಥಾಪಕ ನಿರ್ದೇಶಕಿ, ವ್ಯಾಲ್ಯೂ ಪ್ರಾಡಕ್ಟ್

* ಎಚ್.ಸುರೇಶ್, ನಿವೃತ್ತ ಮುಖ್ಯ ಎಂಜಿನಿಯರ್, ಲೋಕೋಪಯೋಗಿ ಇಲಾಖೆ

* ರಾಮಮೂರ್ತಿ, ಪ್ರಗತಿಪರ ಕೃಷಿಕ, ಶ್ರೀ ಕೃಷ್ಣ ನರ್ಸರಿ , ಶಿವಮೊಗ್ಗ

* ಲಕ್ಷ್ಮಣ್ ಎಸ್.ಉಪ್ಪಾರ್, ವ್ಯವಸ್ಥಾಪಕ ನಿರ್ದೇಶಕರು, ಕ್ಲಾಸಿಕ್ ಸಮೂಹ ಸಂಸ್ಥೆೆ, ಧಾರವಾಡ

* ಚೈತನ್ಯ ಇ.ತುಕಾರಾಂ, ಯುವ ಕಾಂಗ್ರೆೆಸ್ ನಾಯಕಿ, ಸಂಡೂರು

* ಕಿರಣ್ ಕುಮಾರ್, ಸಂಸ್ಥಾಪಕರು, ಬಸವೇಶ್ವರ ಟೂರ್ಸ್ ಆ್ಯಂಡ್ ಟ್ರಾವೆಲ್ಸ್

* ನಾಗರಾಜ್ ಎ.ಜಿ., ಸಂಸ್ಥಾಪಕರು,ಇಂಟರ್‌ಸೆಕ್ಟ್ ಇಂಡಿಯಾ

* ಪ್ರವೀಣ್ ಪಾಂಡುರಂಗ ಜೋಶಿ, ವಕೀಲರು‌

vishwavani Global Top -AmbujakshiR

ಅವಳಿ ಜಿಲ್ಲೆಗೆ ಸೀಮಿತವಾಗಿದ್ದ ಪತ್ರಿಕೆಗೆ ಇಂದು ಅಂತಾರಾಷ್ಟ್ರೀಯ ಮನ್ನಣೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ‘1958ರಲ್ಲಿ ಕನ್ನಡ ಪತ್ರಿಕೋದ್ಯಮದ ಧೀಮಂತ ವ್ಯಕ್ತಿ ಪಾಟೀಲ್ ಪುಟ್ಟಪ್ಪ ಅವರು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ವಿಶ್ವವಾಣಿಯನ್ನು ಆರಂಭಿಸಿದರು.

ಸತತ ನಾಲ್ಕೂವರೆ ದಶಕಗಳ ಕಾಲ ಏಕಾಂಗಿಯಾಗಿ ಈ ಪತ್ರಿಕೆಯನ್ನು ಮುನ್ನಡೆಸಿದರು. ಹುಬ್ಬಳ್ಳಿ-ಧಾರವಾಡಕ್ಕೆೆ ಸೀಮಿತವಾಗಿದ್ದ ಈ ಪತ್ರಿಕೆಯನ್ನು ಕಳೆದ 10 ವರ್ಷದ ಹಿಂದೆ ನನ್ನ ಕೈಯಲ್ಲಿಟ್ಟರು. ‘ಪಾಪು’ ಅವರಿದ್ದಾಗ ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ವಿಶ್ವವಾಣಿ ಇಂದು, ಆರು ಆವೃತ್ತಿಗಳಲ್ಲಿ ರಾಜ್ಯಾದ್ಯಂತ ಪ್ರಸಾರವಾಗುತ್ತಿದೆ. ಇದರೊಂದಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಕಾರ್ಯಕ್ರಮದ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ ಎಂದು ಹೇಳಲು ಖುಷಿಯಾಗುತ್ತದೆ’ ಎಂದರು.

vishwavani Global Top -H Suresh R

ಓರ್ವ ಪತ್ರಕರ್ತನಿಂದ ಮುನ್ನಡೆಸಲ್ಪಡುತ್ತಿರುವ ರಾಜ್ಯ ಮಟ್ಟದ ಪತ್ರಿಕೆ ಇದ್ದರೆ ಅದು ವಿಶ್ವವಾಣಿ ಮಾತ್ರ. ಇಂದು ವಿಶ್ವವಾಣಿ ಕೇವಲ ದಿನಪತ್ರಿಕೆಯ ಕಾರ್ಯಾಚರಣೆಗೆ ಸೀಮಿತ ವಾಗದೆ ಎಂಟು ಅಂಗಸಂಸ್ಥೆೆಗಳನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ‘ಲೋಕಧ್ವನಿ’ ಪತ್ರಿಕೆಯನ್ನು ಖರೀದಿಸಿ, ಅದನ್ನು ವಿವಿಧ ಜಿಲ್ಲೆೆಗಳಿಗೆ ವಿಸ್ತರಿಸುವ ಕಾರ್ಯ ನಡೆದಿದೆ. ಈಗಾಗಲೇ ಉತ್ತರ ಕನ್ನಡ ಹಾಗೂ ಗಂಗಾವತಿ ಆವೃತ್ತಿಯನ್ನು ಹೊಂದಿರುವ ‘ಲೋಕಧ್ವನಿ’ ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಶಿವಮೊಗ್ಗದಲ್ಲಿಯೂ ಆರಂಭವಾಗಲಿದೆ ಎಂದು ಪ್ರಕಟಿಸಿದರು.

ಇದರೊಂದಿಗೆ, ದಿನಪತ್ರಿಕೆಯೊಂದು ಪ್ರಕಾಶನ ಸಂಸ್ಥೆಯಾಗಿ ಯಶಸ್ವಿಯಾಗಿ ಮುನ್ನಡೆ ಯುತ್ತಿರುವುದು ಸಹ ಇದೇ ಮೊದಲ ಬಾರಿ. ಈಗಾಗಲೇ ವಿಶ್ವವಾಣಿ ಪುಸ್ತಕ ಪ್ರಕಾಶನದಿಂದ ಸುಮಾರು 50 ಪುಸ್ತಕಗಳನ್ನು ಹೊರತಂದಿದ್ದೇವೆ. ಇದರಲ್ಲಿ ಅನೇಕ ಪುಸ್ತಕಗಳು ದಾಖಲೆ ಯ ಮಾರಾಟ ಕಂಡಿವೆ. ವಿಶ್ವವಾಣಿ ಟಿವಿ, ವಿಶ್ವವಾಣಿ ಮಾಧ್ಯಮ ವಿದ್ಯಾಪೀಠ ಸೇರಿದಂತೆ ಹಲವು ಸಾಹಸಕ್ಕೆ ವಿಶ್ವವಾಣಿ ಸಮೂಹ ಕೈ ಹಾಕಿದೆ ಎಂದು ವಿವರಿಸಿದರು.

vishwavani Global Top -Ivan dsouza R

ಇನ್ನು ಕನ್ನಡ ಪತ್ರಿಕೋದ್ಯಮ ಮಾತ್ರವಲ್ಲದೆ, ಇಡೀ ಭಾರತ ಪತ್ರಿಕೋದ್ಯಮದಲ್ಲಿಯೇ ದಾಖಲೆ ಬರೆಯುವಂಥ ಸಾಹಸವೇ ‘ಪ್ರವಾಸಿ ಪ್ರಪಂಚ’ ನಿಯತಕಾಲಿಕೆ. ದೇಶದಲ್ಲಿ ಪ್ರವಾ ಸೋದ್ಯಮಕ್ಕೆೆ ಸಂಬಂಧಿಸಿದ ಹಲವು ಮ್ಯಾಗಜಿನ್‌ಗಳಿವೆ. ಆದರೆ ವಾರಪತ್ರಿಕೆಯ ಸ್ವರೂಪ ದಲ್ಲಿ ಇರುವುದು ‘ಪ್ರವಾಸಿ ಪ್ರಪಂಚ’ ಮಾತ್ರ. ಹೆಚ್ಚಿನ ದರವಿಟ್ಟರೆ ಪತ್ರಿಕೆಯನ್ನು ಕೊಂಡು ಓದುವುದಿಲ್ಲ ಎನ್ನುವ ಅನುಮಾನವನ್ನು ಹುಸಿ ಮಾಡಿರುವ ‘ಪ್ರವಾಸಿ ಪ್ರಪಂಚ’ ದಿನಪತ್ರಿಕೆಗಳಷ್ಟೇ ಪ್ರಸರಣ ಸಂಖ್ಯೆಯನ್ನು ಹೊಂದಿದೆ. ಇದಕ್ಕೂ ಮಿಗಿಲಾಗಿ ತನ್ನ ಮೊದಲ ಸಂಚಿಕೆಯಿಂದಲೇ ಲಾಭದಲ್ಲಿ ನಡೆಯುತ್ತಿರುವ ಏಕೈಕ ಪತ್ರಿಕೆ ಎಂದರೆ ತಪ್ಪಾಗು ವುದಿಲ್ಲ ಎಂದರು.

vishwavani Global Top -Kiran Kumar R

ರಾಜ್ಯ ರಾಜಕಾರಣದ ಧ್ರುವತಾರೆ

ನನ್ನ ಕಾಲೇಜು ದಿನಗಳಿಂದಲೂ ಬಸವರಾಜ ಹೊರಟ್ಟಿ ಅವರನ್ನು ನೋಡಿಕೊಂಡು ಬಂದಿದ್ದೇನೆ. ರಾಜ್ಯ ಮಾತ್ರವಲ್ಲದೆ ದೇಶದ ರಾಜಕಾರಣದಲ್ಲಿಯೇ ಸತತ ಎಂಟು ಬಾರಿಗೆ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ ಸುಮಾರು 45 ವರ್ಷಗಳಿಂದ ವಿಧಾನಪರಿಷತ್ ಸದಸ್ಯ ರಾಗಿರುವ ಬಸವರಾಜ ಹೊರಟ್ಟಿ ಅವರದ್ದು ಪಕ್ಷ ಮೀರಿದ ವ್ಯಕ್ತಿತ್ವ. ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಶಿಕ್ಷಕರು ಹೊರಟ್ಟಿ ಅವರ ಮುಖವನ್ನು ನೋಡಿ ಮತ ಹಾಕು ವುದು ಅವರ ಸ್ವತಂತ್ರ ವ್ಯಕ್ತಿತ್ವಕ್ಕೆ ಸಿಕ್ಕಿರುವ ಮನ್ನಣೆ ಎಂದರೆ ತಪ್ಪಾಗುವುದಿಲ್ಲ. ವಿಧಾನ ಪರಿಷತ್‌ನ ಸಭಾಪತಿ ಹುದ್ದೆೆಗೆ ಮತ್ತಷ್ಟು ಘನತೆ ತಂದುಕೊಟ್ಟಿದ್ದು ಬಸವರಾಜ ಹೊರಟ್ಟಿ ಅವರು ಎಂದರೆ ತಪ್ಪಾಗುವುದಿಲ್ಲ. ಕಳೆದ ನಾಲ್ಕೂವರೆ ದಶಕದಿಂದ ರಾಜಕಾರಣ ದಲ್ಲಿದ್ದರೂ ಎಂದಿಗೂ ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಮೆತ್ತಿಕೊಳ್ಳದ ರೀತಿಯಲ್ಲಿ ರಾಜಕೀಯ ಮಾಡಿರುವ ಅಪರೂಪದ ರಾಜಕಾರಣಿ ಹೊರಟ್ಟಿಯವರು ಎಂದು ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.

vishwavani Global Top -Kumari Chaithaya R

ಕನ್ನಡ ಸಂಸ್ಕೃತಿ ಸಚಿವರಾಗಿ ಮೆಚ್ಚುವಂಥ ಕಾರ್ಯ

ಸದಾ ಸಾಹಿತಿ, ಕಲಾವಿದರು, ಬುದ್ಧಿಜೀವಿಗಳ ಸಾಂಗತ್ಯದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಶಿವರಾಜ್ ತಂಗಡಗಿ ಅವರು ಅಧಿಕಾರ ಸ್ವೀಕರಿಸಿದಾಗ ಈ ಜವಾಬ್ದಾರಿಯನ್ನು ಅವರು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವ ಅನುಮಾನ ಅನೇಕರಲ್ಲಿತ್ತು. ಆದರೆ ಕಳೆದ ಎರಡು ವರ್ಷದಲ್ಲಿ ಈ ಎಲ್ಲ ಅನುಮಾನಗಳನ್ನು ನಿವಾರಿಸ, ಇಲಾಖೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರ ದಲ್ಲಿ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅವರ ರಾಜಕೀಯ ಬಹು ಮಾನ್ಯತೆಗಿರುವ ಸಾಕ್ಷಿ ಎಂದರು.

vishwavani Global Top -Laxman S -R

ಸಮುದಾಯವನ್ನು ಮುನ್ನಡೆಸುವ ಜವಾಬ್ದಾರಿ

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಚಿಕ್ಕ ವಯಸ್ಸಿ ನಲ್ಲಿಯೇ ರಾಜ್ಯದ ಪ್ರಮುಖ ಸಮುದಾಯವಾಗಿರುವ ಭೋವಿ ಸಮಾಜಕ್ಕೆೆ ಧೀಮಂತ ನಾಯಕತ್ವ ಕೊಡುವ ನಿಟ್ಟನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯವನ್ನು ಒಗ್ಗೂಡಿಸುವ, ಆ ಸಮಾಜದ ಶೋಷಿತರನ್ನು ಮುಖ್ಯವಾಹಿನಿಗೆ ತರುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಮುಂದಿನ 20-30 ವರ್ಷದಲ್ಲಿ ಗುರುಪೀಠ ಯಾವ ಹಾದಿಯಲ್ಲಿ ಸಾಗಬೇಕು ಎನ್ನುವ ಸ್ಪಷ್ಟ ನೀಲಿನಕ್ಷೆೆ ಸಿದ್ಧಪಡಿಸುವ ಮೂಲಕ ಸಮಾಜದಲ್ಲಿ ಅವರು ಭರವಸೆ ಮೂಡಿಸಿದ್ದಾರೆ. ಇದೇ ರೀತಿ ಬೈಲಹೊಂಗಲ ಮೂರು ಸಾವಿರ ಮಠದ ಶ್ರೀ ಪ್ರಭು ನೀಲಕಂಠ ಸ್ವಾಮೀಜಿಗಳು ಚಿಕ್ಕವಯಸ್ಸಿನಲ್ಲೇ ಮಹತ್ವದ ಜವಾಬ್ದಾರಿ ಹೊತ್ತು, ತಮ್ಮ ಭಕ್ತರನ್ನು ಮುನ್ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮಲ್ಲಿರುವ ನಾಯಕತ್ವ ಗುಣದ ಮೂಲಕ ಭಕ್ತರಲ್ಲಿ ಭರವಸೆ ಮೂಡಿಸಿದ್ದಾರೆ ಎಂದು ವಿಶ್ವೇಶ್ವರ ಭಟ್ ಅಭಿಪ್ರಾಯ ಪಟ್ಟರು.

vishwavani Global Top -Nagraj R

ಪುಸ್ತಕದ ಆಚೆಗೆ ಒಂದು ಲೋಕಾನುಭವ ಒಂದಿರುತ್ತದೆ. ಅದು ಸ್ವಾನುಭವ ಆಗುತ್ತದೆ. ಕೋಶ ಓದು ದೇಶ ಸುತ್ತು ಎಂದು ಹಿರಿಯರು ಹೇಳಿದ್ದಾರೆ. ಹಾಗೆ ದೇಶ ಸುತ್ತಿ ಲೋಕಾನು ಭವ ಸಂಪಾದಿಸಿದವರು ವಿಶ್ವೇಶ್ವರ ಭಟ್ಟರು. ಅವರ ಜತೆಗಿದ್ದರೆ ವಿಶ್ವಪರ್ಯಟನೆ ಮಾಡಿದ ಅನುಭವ ಸಿಗುತ್ತದೆ. ವಿಶ್ವವಾಣಿ ಓದಿದರೆ ದೇಶ ಹಾಗೂ ಕೋಶ ಎರಡೂ ಅನುಭವ ಸಿಗುವಂಥ ಪತ್ರಿಕೆ. ಈ ಐರೋಪ್ಯ ಸ್ಥಳದಲ್ಲಿ ನಿಂತು ವಿಚಾರ ಮಾಡಿದಾಗ, ಇಲ್ಲಿ ಹಾದು ಹೋದ ಅನೇಕ ನಾಗರಿಕತೆಗಳ ನೆನಪಾಗುತ್ತದೆ. ನಾವು ಕಲಿಯುತ್ತದ್ದ ಗುರುಕುಲದಲ್ಲಿ ಪೂಜೆ, ಪುನಸ್ಕಾರ ಮತ್ತಿತರ ಅಧ್ಯಾತ್ಮಿಕ ವಿಚಾರಗಳು ತಿಳಿಯುತ್ತಿದ್ದವು. ಆದರೆ ಲೋಕ ಜ್ಞಾನ ಬರುತ್ತರುವುದು ಪತ್ರಿಕೆಗಳಿಂದ. ಆಗ ವಿಶ್ವೇಶ್ವರ ಭಟ್ಟರು ಸಂಪಾದಕ ರಾಗಿದ್ದ ವಿಜಯ ಕರ್ನಾಟಕದಿಂದ ಬಹಳಷ್ಟು ಲೋಕಜ್ಞಾನ ಕಲಿತೆವು. ಪತ್ರಿಕೆಯ ಸಂಪಾದಕೀಯ ಓದಿ ಸಮಕಾಲೀನರನ್ನು ಸಮತಾಭಾವದಲ್ಲಿ ನೋಡುವಂತೆ ಆಯಿತು. ಅವರು ಅಲ್ಲಿ ಬಳಸಿದ ಕತೆಗಳು, ಉಪಮೆಗಳನ್ನು ನಮ್ಮ ಭಾಷಣಗಳಲ್ಲಿ ಬಳಸಿದ್ದೇವೆ. ಪತ್ರಿಕೋದ್ಯಮ ಇರುವತನಕ ಭಟ್ಟರ ಛಾಪು ಇರುತ್ತದೆ. ಫ್ರೆಂಚ್ ಕ್ರಾಂತಿಯ ಮೂಲಕ ರಾಜಪ್ರಭುತ್ವ ತೊಲಗಿ ಪ್ರಜಾಪ್ರಭುತ್ವ ಬರಲು ಕಾರಣ ಪುಸ್ತಕಗಳು, ಚಿಂತನೆಗಳು. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತಿರುವ ಎಲ್ಲರನ್ನೂ ವಿಶ್ವವಾಣಿ ಗ್ಲೋಬಲ್ ಅವಾರ್ಡ್ ಮೂಲಕ ಭಟ್ಟರು ಗುರುತಿಸುತ್ತಿದ್ದಾರೆ. ನಿಜವಾದ ಅರ್ಹತೆ ಇರುವವರನ್ನು ಗುರುತಿಸುತ್ತಿ ದ್ದಾರೆ. ಮುಂದಿನ ದಿನಗಳಲ್ಲಿ ಸರಕಾರವೇ ಪ್ರಶಸ್ತಿಗೆ ನೈಜ ಅರ್ಹರ ಬಗ್ಗೆೆ ಭಟ್ಟರಿಂದ ಮಾಹಿತಿ ಪಡೆಯಬೇಕಾಗಬಹುದು.

- ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ

vishwavani Global Top -praveen Panduranga R

ಒಂದು ಕಾಲದಲ್ಲಿ ‘ಎಲ್ಲ ದಾರಿಗಳೂ ಪ್ಯಾರಿಸ್ ಕಡೆಗೆ ಹೋಗುತ್ತವೆ’ ಎಂಬ ನಾಣ್ಣುಡಿ ಯಿತ್ತು. ಅದರಂತೆ ಇಂದು ವಿಶ್ವವಾಣಿ ಪರ್ಯಟನೆ ಸಾಗಿದ್ದು, ನಮ್ಮೆಲ್ಲರ ದಾರಿಗಳು ಪ್ಯಾರಿಸ್‌ಗೆ ಬಂದು ಸೇರಿವೆ. ಪ್ಯಾಾರಿಸ್‌ನಂಥ ನಗರದ ಸೌಂದರ್ಯ ಆಸ್ವಾದನೆ ವಿಶ್ವವಾಣಿ ಯಿಂದ ಸಾಧ್ಯವಾಗಿದೆ. ಇಲ್ಲಿನ ಪ್ರಶಸ್ತಿ ಪುರಸ್ಕೃತರೆಲ್ಲರೂ ಒಂದೊಂದು ರಂಗದಲ್ಲಿ ದೊಡ್ಡ ಸಾಧನೆ ಮಾಡಿದವರು. ಅದರ ಹಿಂದೆ ಅವರ ಕನಸು ಹಾಗೂ ಅದರ ಹಿಂದೆ ದೊಡ್ಡದೊಂದು ಕಷ್ಟಕರ ಪ್ರಯಾಣ ಇದೆ. ತಲುಪಿದ ಮೇಲೆ ಸುಖಕರವಾಗಿದ್ದರೂ ತಲುಪುವರೆಗಿನ ಪ್ರಯಾಣ ಕಷ್ಟಕರ. ನೆಪೋಲಿಯನ್ ಬೋನಾಪಾರ್ಟೆ ವಿದ್ಯಾರ್ಥಿ ಯಾಗಿದ್ದಾಗ, ನಿಮ್ಮ ಗುರಿ ಏನೆಂದು ಆತನ ಶಿಕ್ಷಕರು ಮಕ್ಕಳನ್ನು ಪ್ರಶ್ನಿಸಿದ್ದರು. ಮೂರು ಅಡಿ ಎತ್ತರದ ನೆಪೋಲಿಯನ್, ‘ಈ ದೇಶದ ಸಾಮ್ರಾಟ ಆಗುತ್ತೇನೆ’ ಎಂದಿದ್ದ. ಅವನ ಗೆಳೆಯರು ಅವನನ್ನು ನಕ್ಕು ಅಪಹಾಸ್ಯ ಮಾಡಿದ್ದರು. ಅವರೆಲ್ಲರ ನಗು ನಿಲ್ಲುವವರೆಗೆ ಅದೇ ಮಾತನ್ನು ಆಡಿದ. ಮಾತ್ರವಲ್ಲ ಆ ಕನಸನ್ನು ನನಸು ಮಾಡಿಕೊಂಡ. ಸಾಮ್ರಾಟ ನಾದ. ಮಲಗಿದಾಗ ಕಾಣುವುದು ಮಾತ್ರ ಕನಸಲ್ಲ, ಎಚ್ಚರವಿದ್ದಾಗಲೂ ಕಾಣುವ ಕನಸಿಗೆ ನನಸಾಗುವ ಸಾಧ್ಯತೆ ಇರುತ್ತದೆ. ವಿಶ್ವೇಶ್ವರ ಭಟ್ಟರು ಬಹಳ ಸುಂದರ ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರು ಹಲವರಿಗೆ ಕಿಂಗ್ ಮೇಕರ್. ಹಲವು ರಂಗದಲ್ಲಿ ಸಾಧನೆ ಮಾಡಿದವರನ್ನು, ಎಲೆಮರೆಯ ಕಾಯಿಗಳ ಹಾಗೆ ಇರುವವರನ್ನು ಗುರುತಿಸಿ ಅಸಾಮಾನ್ಯ ಕೆಲಸ ಮಾಡಿದ್ದಾರೆ. ಇದನ್ನು ಕಷ್ಟಕರವಾದರೂ ಮಾಡಿದ್ದಾರೆ. ಎಲ್ಲೆಲ್ಲಿ ಹೊಸ ಕೆಲಸ ಕೈಗೆತ್ತಿಕೊಂಡಿದ್ದಾರೋ ಭಟ್ಟರು ಅಲ್ಲೆಲ್ಲ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಲ್ಲಿನ ಪುರಸ್ಕೃತರೆಲ್ಲರ ಹಿಂದೆಯೂ ಒಂದೊಂದು ಕಥೆ, ವ್ಯಥೆ ಇರಬಹುದು. ಇವರನ್ನು ಭೇಟಿ ಮಾಡಿದ್ದು ಸುಂದರ ಕ್ಷಣ.

- ಶ್ರೀ ಪ್ರಭು ನೀಲಕಂಠ ಮಹಾಸ್ವಾಮೀಜಿ, ಮೂರು ಸಾವಿರ ಮಠ ಬೈಲಹೊಂಗಲ

vishwavani Global Top -Ramamurthy R

ದೈಹಿಕ-ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕಿಂತ ಹೆಚ್ಚು ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಡಿಯಾಗೋ ಫೈನಾನ್ಸ್ ನಿಂದ ಹಲವು ಸಂಶೋಧನೆಗಳನ್ನು ನಡೆಸಿ ಜನರಿಗೆ ತಲುಪಿಸುತ್ತಿದ್ದೇವೆ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಗೆ ನಮ್ಮ ಸಂಸ್ಥೆ ಸಹಯೋಗ ನೀಡಿದೆ ಎನ್ನುವುದಕ್ಕಿಂತ ಹೆಚ್ಚಾಗಿ, ಈ ಕುಟುಂಬದೊಂದಿಗೆ ನಾವು ಸೇರಿಕೊಂಡಿದ್ದೇವೆ ಎನ್ನುವ ಹೆಮ್ಮೆಯಿದೆ. ನನ್ನನ್ನ ಸೇರಿದಂತೆ ಲಕ್ಷಾಂತರ ಜನರಿಗೆ ದ್ರೋಣಾಚಾರ್ಯರಾಗಿರುವ ವಿಶ್ವೇಶ್ವರ ಭಟ್ಟ ರೊಂದಿಗೆ ಸಮಯ ಕಳೆಯುವುದೇ ಒಂದು ಸುಯೋಗ. ರಾಜ್ಯದ ವಿವಿಧ ಭಾಗದಲ್ಲಿ ನೆಲೆಸಿರುವ ವಿವಿಧ ಕ್ಷೇತ್ರದ ಸಾಧಕರನ್ನು ಒಂದೇ ಸೂರಿನಲ್ಲಿ ಸೇರಿಸಿ, ‘ಕುಟುಂಬ’ದ ಅನುಭವ ನೀಡುತ್ತಿರುವ ವಿಶ್ವವಾಣಿಗೆ ಧನ್ಯವಾದ.

- ನೀಲೇಶ್ ಎಚ್.ಪಿ. ಸಂಸ್ಥಾಪಕರು, ಪರ್ವ ಗ್ರೂಪ್

ಇಂದಿನ ಕಾಲಘಟ್ಟದಲ್ಲಿ ಚಿಕ್ಕ ಕಾರ್ಯಕ್ರಮ ಆಯೋಜಿಸುವುದು ಸವಾಲಿನ ಕೆಲಸ. ಆದರೆ ದೂರದ ಪ್ಯಾರಿಸ್‌ನಲ್ಲಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಯಶಸ್ವಿ ನಡೆಯುವುದು ಸಣ್ಣ ಮಾತಲ್ಲ. ಈ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿರುವ ವಿಶ್ವೇಶ್ವರ ಭಟ್ ಹಾಗೂ ವಿಶ್ವವಾಣಿ ಕುಟುಂಬಕ್ಕೆೆ ಅಭಿನಂದನೆ. ಯಾವುದೇ ಸಾಧನೆ ಮಾಡುವುದಕ್ಕೆ ಆರೋಗ್ಯ ಮುಖ್ಯವಾಗುತ್ತದೆ. ಇಂದಿನ ಆಧುನಿಕ ಸಮಾಜದಲ್ಲಿ ಜೀವನಕ್ಕೆೆ ಬೇಕಾಗಿರುವುದನ್ನು ಎಲ್ಲ ಧಕ್ಕಿಸಿಕೊಳ್ಳುತ್ತಿದ್ದೇವೆ. ಆದರೆ ಆರೋಗ್ಯವನ್ನು ಬಿಟ್ಟು. ಆರೋಗ್ಯಯುತ ವ್ಯಕ್ತಿಯಾಗಿರಲು ದೈಹಿಕ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ಕುಟುಂಬ, ವೃತ್ತಿ, ಪ್ರವೃತ್ತಿಯ ಜತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ.

-ಡಾ.ಶ್ರೀನಿವಾಸ್ ಮೂರ್ತಿ, ವ್ಯವಸ್ಥಾಪಕ ನಿರ್ದೇಶಕರು, ವ್ಯಾಲ್ಯೂ ಪ್ರಾಡಕ್ಟ್