ಸೌದಿ ಅರೇಬಿಯಾದ ಅರಾಮ್ಕೊ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ
ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಕರಣಾಗಾರ ಅರಾಮ್ಕೊ ರಾಸ್ ತನುರಾ ಮೇಲೆ ಇರಾನ್‌ನ ಡ್ರೋನ್‌ಗಳು ದಾಳಿ ನಡೆಸಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟು ಉಂಟಾಗುವ ಆತಂಕ ಎದುರಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಸೌದಿಯ ರಕ್ಷಣಾ ಸಚಿವಾಲಯದ ವಕ್ತಾರರು ರಾಸ್ ತನುರಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಈಗ ಮಧ್ಯಪ್ರಾಚ್ಯ ರಾಷ್ಟ್ರಗಳು ಕೂಡ ಎದುರಿಸುವಂತಾಗಿದೆ. ಅಮೆರಿಕದ ಮೂಲ ಸೌಕರ್ಯವನ್ನು ಗುರಿಯಾಗಿಸಿಕೊಂಡು ಇರಾನ್ ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಕರಣಾಗಾರ ಅರಾಮ್ಕೊ ರಾಸ್ ತನುರಾ ಮೇಲೆ ದಾಳಿ ನಡೆಸಿದೆ. ಇದರಿಂದ ಅರಾಮ್ಕೊವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟು ಉಂಟಾಗುವ ಆತಂಕ ಎದುರಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಸೌದಿಯ ರಕ್ಷಣಾ ಸಚಿವಾಲಯದ ವಕ್ತಾರರು, ರಾಸ್ ತನುರಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಎರಡು ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವದ ವಿವಿಧೆಡೆ ನಡೆಯುತ್ತಿರುವ ಯುದ್ಧಗಳ ಪರಿಣಾಮ ಈಗಾಗಲೇ ಜಾಗತಿಕ ತೈಲ ಮಾರುಕಟ್ಟೆ ತೀವ್ರ ಒತ್ತಡವನ್ನು ಎದುರಿಸುತ್ತಿದೆ. ಈ ನಡುವೆಯೇ ಇದೀಗ ಸೌದಿ ಅರೇಬಿಯಾದ ತೈಲ ಘಟಕದ ಮೇಲೆ ದಾಳಿ ನಡೆದಿದೆ.
ಇರಾನ್ ಪರಮಾಣು ಸ್ಥಾವರವನ್ನೇ ಟಾರ್ಗೆಟ್ ಮಾಡ್ತಾ ಅಮೆರಿಕ, ಇಸ್ರೇಲ್? ಹಾನಿಯಾಗಿದ್ದೆಷ್ಟು?
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ವಿಸ್ತರಣೆಯಾಗುತ್ತಲೇ ಇದ್ದು, ಇದರ ಪರಿಣಾಮವಾಗಿ ವಿಶ್ವದ ದೈನಂದಿನ ತೈಲ ಹರಿವಿನ ಸುಮಾರು ಶೇ. 20ರಷ್ಟನ್ನು ನಿರ್ವಹಿಸುವ ಕಿರಿದಾದ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕಚ್ಚಾ ತೈಲ ಬೆಲೆಗಳು ನಾಲ್ಕು ವರ್ಷಗಳಲ್ಲಿನ ಅತ್ಯಂತ ತೀವ್ರ ಏರಿಕೆಯನ್ನು ದಾಖಲಿಸಿವೆ. ಈಗಾಗಲೇ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 80 ಡಾಲರ್ ಹೆಚ್ಚಳವಾಗಿದೆ. ಇದು ವಿಶ್ವಾದ್ಯಂತ ಹಣದುಬ್ಬರದ ಒತ್ತಡವನ್ನು ಹೇರಲಿದೆ. ಯಾಕೆಂದರೆ ಗಲ್ಫ್ ನಿಂದ ತೈಲ ಆಮದು ಈಗ ಅಪಾಯಕಾರಿಯಾಗಿ ಪರಿಣಮಿಸಿದೆ.
🇸🇦🇮🇷 L’Arabie saoudite a fermé sa gigantesque raffinerie de Ras Tanura (550 000 barils/jour, une des plus grandes au monde) après une frappe de drone iranien.
— DIMÉ (@MakhtarDime) March 2, 2026
Profitez-en pour faire le plein aujourd’hui ! Dans les prochains jours, le prix de l’essence risque de devenir… pic.twitter.com/DaCFY6CSY2
ಈ ದಾಳಿ ಸರಿಯಲ್ಲ: ಸೌದಿ ಅರೇಬಿಯಾ
ಗಲ್ಫ್‌ನಲ್ಲಿ ಹೆಚ್ಚುತ್ತಿರುವ ಸಂಘರ್ಷದಲ್ಲಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಸಾಮ್ರಾಜ್ಯದ ಪೂರ್ವ ಪ್ರದೇಶದ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ. ಟೆಹ್ರಾನ್‌ನ ಈ ದಾಳಿ ಹೇಡಿತನದ್ದಾಗಿದೆ. ಇರಾನ್ ವಿರುದ್ಧದ ಯುಎಸ್ ಅಥವಾ ಇಸ್ರೇಲ್ ಕಾರ್ಯಾಚರಣೆಗಳಲ್ಲಿ ತನ್ನ ಪ್ರದೇಶ ಮತ್ತು ವಾಯುಪ್ರದೇಶವನ್ನು ಬಳಸುತ್ತಿಲ್ಲ. ಹೀಗಿರುವಾಗ ಇರಾನ್ ದಾಳಿ ಖಂಡನೀಯವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ ಪ್ರಧಾನಿ ಕಚೇರಿ ಗುರಿಯಾಗಿರಿಸಿ ಇರಾನ್ ಕ್ಷಿಪಣಿ ದಾಳಿ; ಬೆಂಜಮಿನ್ ನೆತನ್ಯಾಹುಗೆ ಅಪಾಯ?
ಈ ದಾಳಿಗಳನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಇರಾನ್ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಇದು ನಡೆಯಿದೆ. ಈ ದಾಳಿಗಳಿಗೆ ಸಂಬಂಧಿಸಿ ಸೌದಿ ಅಧಿಕಾರಿಗಳು ರಿಯಾದ್‌ನಲ್ಲಿರುವ ಇರಾನ್ ರಾಯಭಾರಿ ಅಲಿರೆಜಾ ಎನಾಯತಿ ಅವರಿಗೆ ಸಮನ್ಸ್ ಜಾರಿ ಮಾಡಿರುವುದಾಗಿ ಹೇಳಿದೆ.