ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೀನಾನಾದ್ರೆ ನಾನೀನೇನ: ನಗೆ ಶ್ರೀಮಂತ ನಾಟಕ

ದೂರದರ್ಶನ ಮತ್ತು ಚಲನಚಿತ್ರಗಳ ಬೆಳವಣಿಗೆಯನ್ನು ಒಂದು ಕಾಲದಲ್ಲಿ ರಂಗಭೂಮಿ ಯ ಅಂತ್ಯವೆಂದೇ ಭಾವಿಸಲಾಗಿತ್ತು. ಆದರೆ, ಕಾಲಕ್ರಮೇಣ ಈ ಸಂಬಂಧವು ಕೇವಲ ಸ್ಪರ್ಧೆಯಾಗಿ ಉಳಿಯದೆ, ಒಂದಕ್ಕೊಂದು ಪೂರಕವಾಗಿ ಬೆಳೆದು ಬಂದಿದೆ. 1950ರ ದಶಕದಲ್ಲಿ ದೂರದರ್ಶನ ವು ಮನೆಮಾತಾದಾಗ, ರಂಗಭೂಮಿ ತನ್ನ ಅಸ್ತಿತ್ವದ ಮೊದಲ ಬಿಕ್ಕಟ್ಟನ್ನು ಎದುರಿಸಿತು.

ನೀನಾನಾದ್ರೆ ನಾನೀನೇನ: ನಗೆ ಶ್ರೀಮಂತ ನಾಟಕ

-

Ashok Nayak
Ashok Nayak Feb 18, 2026 9:12 AM

ರಂಗಮಂಚ

ವಿನಾಯಕ, ಓಣಿ ವಿಘ್ನೇಶ್ವರ

ದೂರದರ್ಶನ ಮತ್ತು ಚಲನಚಿತ್ರಗಳ ಬೆಳವಣಿಗೆಯನ್ನು ಒಂದು ಕಾಲದಲ್ಲಿ ರಂಗ ಭೂಮಿಯ ಅಂತ್ಯವೆಂದೇ ಭಾವಿಸಲಾಗಿತ್ತು. ಆದರೆ, ಕಾಲಕ್ರಮೇಣ ಈ ಸಂಬಂಧವು ಕೇವಲ ಸ್ಪರ್ಧೆಯಾಗಿ ಉಳಿಯದೆ, ಒಂದಕ್ಕೊಂದು ಪೂರಕವಾಗಿ ಬೆಳೆದು ಬಂದಿದೆ.

ಮನುಷ್ಯ ತನ್ನ ದಿನನಿತ್ಯದ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಮನಸಿಗೆ ವಿಶ್ರಾಂತಿಯನ್ನು ಹೊಂದಲು ಕಲೆಗಳನ್ನು ಆಸ್ವಾದಿಸುವುದು ಸ್ವಾಭಾವಿಕ. ಅದೇ ಕಾರಣಕ್ಕೆ ಬಹಳ ಹಿಂದಿನ ಕಾಲದಿಂದಲೂ ರಂಗಭೂಮಿ ಮನುಷ್ಯನ ಜೊತೆಜೊತೆಗೆ ಬೆಳೆದು ಬಂದಿದ್ದು. ಮುಂದೆ ಸಾಗುತ್ತಾ, ಹೊಸಹೊಸ ಸಾಧ್ಯತೆಗಳನ್ನು ಮನುಷ್ಯ ಅನ್ವೇಷಿಸಿದ.

ದೂರದರ್ಶನ ಮತ್ತು ಚಲನಚಿತ್ರಗಳ ಬೆಳವಣಿಗೆಯನ್ನು ಒಂದು ಕಾಲದಲ್ಲಿ ರಂಗಭೂಮಿ ಯ ಅಂತ್ಯವೆಂದೇ ಭಾವಿಸಲಾಗಿತ್ತು. ಆದರೆ, ಕಾಲಕ್ರಮೇಣ ಈ ಸಂಬಂಧವು ಕೇವಲ ಸ್ಪರ್ಧೆಯಾಗಿ ಉಳಿಯದೆ, ಒಂದಕ್ಕೊಂದು ಪೂರಕವಾಗಿ ಬೆಳೆದು ಬಂದಿದೆ. 1950ರ ದಶಕ ದಲ್ಲಿ ದೂರದರ್ಶನವು ಮನೆಮಾತಾದಾಗ, ರಂಗಭೂಮಿ ತನ್ನ ಅಸ್ತಿತ್ವದ ಮೊದಲ ಬಿಕ್ಕಟ್ಟನ್ನು ಎದುರಿಸಿತು.

ಮನೆಯ ಕುಳಿತು ಉಚಿತವಾಗಿ ಮನರಂಜನೆ ಪಡೆಯುವ ಸೌಲಭ್ಯವು ರಂಗಮಂದಿರಕ್ಕೆ ಬರುವವರ ಸಂಖ್ಯೆಯನ್ನು ಗಣನೀಯವಾಗಿ ಕುಗ್ಗಿಸಿತು. ಕುಟುಂಬಗಳು ಮನೆಯಲ್ಲಿಯೇ ಟಿವಿ ವೀಕ್ಷಿಸಲು ಬಯಸಿದ್ದರಿಂದ, ಅನೇಕ ಸ್ಥಳೀಯ ನಾಟಕ ಶಾಲೆಗಳು ಮತ್ತು ಕಂಪನಿ ಗಳು ಮುಚ್ಚಲ್ಪಟ್ಟವು.

ಇದನ್ನೂ ಓದಿ: Surendra Pai Column: ಸಂಘಪ್ಪ v/s ನುಂಗಪ್ಪರ ಜಗಳದಲ್ಲಿ ಗಾಂಧಿ ಚಿಂತನೆ ಎಲ್ಲಿ ?!

ಉತ್ತಮ ಸಂಭಾವನೆ ಮತ್ತು ಹೆಚ್ಚಿನ ಜನಪ್ರಿಯತೆಯ ಅವಕಾಶಗಳಿಂದ ಲೇಖಕರು, ನಟರು ಮತ್ತು ನಿರ್ದೇಶಕರು ಸಿನಿಮಾ ಮತ್ತು ಟಿವಿ ಮಾಧ್ಯಮದತ್ತ ಮುಖ ಮಾಡಿದರು. ಈ ಪ್ರಕ್ರಿಯೆಯು ಒಂದು ಧನಾತ್ಮಕ ಪರಿಣಾಮಕ್ಕೆ ನಾಂದಿ ಹಾಡಿತು ಎಂದರೂ ತಪ್ಪಾಗ ಲಿಕ್ಕಿಲ್ಲ. ದೂರದರ್ಶನಕ್ಕೆ ಪೈಪೋಟಿ ನೀಡಲು ರಂಗಭೂಮಿಯು ತನ್ನ ವಿಶಿಷ್ಟತೆಗಳ ಮೇಲೆ ಗಮನ ಹರಿಸಿತು.

ಹೊಸ ಆಲೋಚನೆಗಳ ರಂಗ ಪ್ರದರ್ಶನಗಳು ರಂಗಭೂಮಿಯನ್ನು ಮತ್ತೂ ಶ್ರೀಮಂತ ಗೊಳಿಸತೊಡಗಿದವು. ಪರದೆಯ ಮೇಲೆ ಸಿಗದ ಅನುಭವವನ್ನು ನೀಡಲು ರಂಗಭೂಮಿ ಹೊಸ ಹಾದಿಗಳನ್ನು ಹುಡುಕಿಕೊಂಡಿತು. ನಿರ್ಜೀವವಾದ ಪರದೆಗಳನ್ನು ನೋಡುವು ದಕ್ಕಿಂತ, ಸಜೀವವಾದ ರಂಗಮಂಚದ ಮೇಲಿನ ಪ್ರದರ್ಶನ ಯಾವತ್ತಿಗೂ ಹೆಚ್ಚಿನ ಆನಂದ ನೀಡುವಂತಹುದು.

ಆ ನಿಟ್ಟಿನಲ್ಲಿಯೇ ಕನ್ನಡ ನಾಟಕ ರಂಗಭೂಮಿ ಕೂಡಾ ಗಮನ ಹರಿಸುತ್ತಿರುವುದು ರಂಗ ಪ್ರೇಕ್ಷಕರಿಗೆ ಖುಷಿ ತರುವ ಸಂಗತಿ. ಇಂತಹ ಒಂದು ಆಲೋಚನೆಯ ಪ್ರಸ್ತುತಿಯೇ ನೀನಾ ನಾದ್ರೆ ನಾನೀನೇನ ನಾಟಕ. ವಿಲಿಯಂ ಶೇಕ್ಸ್ ಪಿಯರ್ ಬರೆದ ‘ದ ಕಾಮಿಡಿ ಆಫ್ ಎರರ್ಸ್’ ನಿಂದ ಪ್ರಭಾವಿತವಾಗಿ, ಎಸ್.ಸುರೇಂದ್ರನಾಥ ಕನ್ನಡಕ್ಕೆ ತಂದಿರುವ ಈ ನಾಟಕ ವನ್ನು ಬೆಂಗಳೂರಿನ *VASP ತಂಡವು, ವಿನಯ್ ಶಾಸ್ತ್ರೀ ನಿರ್ದೇಶನದಲ್ಲಿ ಕಳೆದ ವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶಿಸಿತು. ‌

Screenshot_2 ಋ

ಶೇಕ್ಸ್‌ಪಿಯರ್ ಅವರ ಇತರ ನಾಟಕಗಳು ಗಂಭೀರ ವಿಷಯಗಳನ್ನು ಚರ್ಚಿಸಿದರೆ, ಈ ನಾಟಕವು ಸಂಪೂರ್ಣವಾಗಿ ತಪ್ಪು ತಿಳಿವಳಿಕೆ ಮತ್ತು ಹಾಸ್ಯದ ಸುತ್ತ ಸುತ್ತುತ್ತದೆ. ಒಂದು ಗಂಭೀರವಾದ ಕಥೆಯನ್ನು ಅದ್ಧೂರಿ ರಂಗಸಜ್ಜಿಕೆಯಲ್ಲಿ ಪ್ರದರ್ಶಿಸುವ ಸವಾಲಿಗಿಂತ ಇಂಥ ವೇಗದ ಹಾಸ್ಯವನ್ನು ರಂಗಕ್ಕೆ ಅಳವಡಿಸುವುದು ಮತ್ತೂ ಹೆಚ್ಚಿನ ಸವಾಲು ಎನ್ನಿಸು ತ್ತದೆ.

ಭಾವುಕ ನಾಟಕಗಳಲ್ಲಿ ಅಭಿನಯಕ್ಕೆ ಪ್ರಾಶಸ್ತ್ಯ ಸಿಕ್ಕರೆ, ಇಂಥ ನಾಟಕಗಳಲ್ಲಿ ಅಭಿನಯ, ರಂಗ ತಂತ್ರಗಳು, ಟೈಮಿಂಗ್ ಬಹಳ ಮಹತ್ವದ್ದು. ಎಲ್ಲಾ ಒಂಚೂರು ಲೋಪವಾದರೂ ಇಡೀ ಸನ್ನಿವೇಶದ ಹಾಸ್ಯರಸ ಮಾಯವಾಗಿ ಅದು ಅಪಹಾಸ್ಯಕ್ಕೆ ಈಡಾಗುವ ಅಪಾಯವೂ ಇದೆ. ಇವನ್ನೆಲ್ಲಾ ಅದ್ಭುತವಾಗಿ ನಿಭಾಯಿಸಿ ಪ್ರಾರಂಭದಿಂದ ಕೊನೆಯವರೆಗೂ ಪ್ರೇಕ್ಷಕ ರನ್ನು ನಗಿಸಿದ ಕೀರ್ತಿ ಇಡೀ ತಂಡಕ್ಕೆ ಸಲ್ಲಲೇಬೇಕು. ಮೂಲ ಇಂಗ್ಲಿಷ್ ಆದರೂ, ಅದನ್ನು ಕನ್ನಡದ ಸೊಗಡಿಗೆ ಅಳವಡಿಸಿದ್ದು ಲೇಖಕ -ನಿರ್ದೇಶಕರ ರಂಗ ಜ್ಞಾನವನ್ನು ತೋರಿಸು ತ್ತದೆ.

ಯಾವುದೇ ಕನ್ನಡದ ಪ್ರೇಕ್ಷಕನಿಗೂ ಯಾವ ಕ್ಷಣದಲ್ಲಿ ಕೂಡಾ ಇದು ಇಂಗ್ಲಿಷ್ ಪ್ರಭಾವಿತ ನಾಟಕ ಎಂದು ಅನ್ನಿಸಿಕೊಳ್ಳುವುದಿಲ್ಲ. ಪಾತ್ರಗಳು ಮಾತನಾಡುವ ಕರ್ನಾಟಕದ ವಿವಿಧ ಶೈಲಿಯ ಕನ್ನಡಗಳು ಅತ್ಯಂತ ಆಪ್ತವಾಗುತ್ತವೆ. ಸಂಭಾಷಣೆಯಲ್ಲಿ ಬಳಸುವ ಪದಗಳು ಇಡೀ ನಾಟಕಕ್ಕೆ ಮತ್ತಷ್ಟು ಜೀವವನ್ನು ತುಂಬಿವೆ. ಇನ್ನು ಪಾತ್ರಧಾರಿಗಳ ಬಗ್ಗೆ ಹೇಳುವುದೇ ಕಷ್ಟ. ಪದಮಿತಿಯಲ್ಲಿ ವಿವರಿಸಲು ಸಾಧ್ಯವೇ ಇಲ್ಲದ್ದು.

ಪ್ರತಿಯೊಂದೂ ಪಾತ್ರಧಾರಿಯೂ ತನ್ನ ಪಾತ್ರವನ್ನು ನಿರ್ವಹಿಸಿದ ರೀತಿ ಅದ್ಭುತ. ಅವರ ಆ ನಟನೆ, ಟೈಮಿಂಗ್, ಡೈಲಾಗ್ ಡೆಲಿವರಿ ಇಡೀ ಪ್ರೇಕ್ಷಕ ಸಮೂಹವನ್ನೇ ಪ್ರತಿ ಕ್ಷಣಕ್ಕೂ ನಗೆ ಗಡಲಲ್ಲಿ‌ ತೇಲಿಸುತ್ತದೆ. ನಾಟಕದ ಪ್ರಾರಂಭದಿಂದ ಕೊನೆಯವರೆಗೂ ಇರುವ, ಒಂದೇ ಒಂದು ಮಾತು ಇಲ್ಲದ ನಿರ್ಭಾವುಕ ಪಾತ್ರ ಕೂಡಾ ನಗೆಯನ್ನು ಉಕ್ಕಿಸುತ್ತದೆ ಎಂದರೆ ನಾಟಕದ ಶ್ರೇಷ್ಠತೆಯನ್ನು ಅಳೆಯಬೇಕು. ಈ ನಾಟಕದಲ್ಲಿ ಎಲ್ಲವೂ ಇದೆ.

ಯಜಮಾನ-ಆಳಿನ ನಡುವಿನ ಸಂಬಂಧ, ಗಂಡ ಹೆಂಡತಿಯರ ನಡುವಿನ ಸರಸ, ಅಕ್ಕ ತಂಗಿಯರ ಬಾಂಧವ್ಯ, ಅಪ್ಪ-ಮಕ್ಕಳ ಮಮತೆ, ಖಳನಾಯಕನ ಅಬ್ಬರ. ಆದರೆ ಅದೆಲ್ಲವೂ ನಗುವನ್ನೇ ಉಕ್ಕಿಸುವಂತೆ ಹೆಣೆದಿರುವುದು ನಾಟಕದ ಅಗ್ಗಳಿಕೆ. ನಾಟಕ ಅಂತಿಮ ಹಂತ ತಲುಪುತ್ತಿದ್ದಂತೆ ಪಡೆದುಕೊಳ್ಳುವ ವೇಗ.. ವ್ಹಾ. ಅದನ್ನ ನೋಡಿಯೇ ಅನುಭವಿಸಬೇಕು.

ಇಂತಹ ನಾಟಕಗಳ ಪ್ರಯೋಗಗಳು ಹೆಚ್ಚಬೇಕು. ಕನ್ನಡ ಪ್ರೇಕ್ಷಕರನ್ನು ಮತ್ತೆಮತ್ತೆ ರಂಗ ಮಂದಿರಗಳಿಗೆ ಎಳೆಯಬೇಕು. ಕನ್ನಡ ನಾಟಕ ರಂಗಭೂಮಿ ಮತ್ತಷ್ಟು ಪ್ರಕಾಶಿಸ ಬೇಕು. ಮತ್ತೊಂದು ದೃಷ್ಟಿಯಿಂದ ನೋಡಿದಾಗ, ಇಂತಹ ಪ್ರದರ್ಶನಗಳು ಅದೆಷ್ಟೋ ಕಲಾ ವಿದರಿಗೆ ಅನ್ನವನ್ನೂ, ಪ್ರಸಿದ್ಧಿಯನ್ನೂ ತರುತ್ತವೆ.

ಅಭಿನಯಿಸುವ ಕಲಾವಿದರಿಗೆ ಬದುಕನ್ನೂ, ನೋಡುವ ಪ್ರೇಕ್ಷಕರಿಗೆ ನಗುವನ್ನೂ ಕಟ್ಟಿ ಕೊಡುವ ಇಂತಹ ನಾಟಕಗಳ ಪ್ರಯತ್ನಗಳು ಹೆಚ್ಚಲಿ. ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಜನರು ರಂಗಭೂಮಿಗೆ ಹೋಗುವುದು ಅದು ಪರದೆಯಲ್ಲ ಎಂಬ ಕಾರಣಕ್ಕಾಗಿ! ಅಲ್ಲಿನ ಚೈತನ್ಯ ಮತ್ತು ನಟರೊಂದಿಗಿನ ನೇರ ಸಂಪರ್ಕವು ರಂಗಭೂಮಿಯನ್ನು ಇಂದಿಗೂ ಅಮೂಲ್ಯವಾಗಿಸಿವೆ. ರಂಗಭೂಮಿಗೆ ಮತ್ತಷ್ಟು ಮೆರುಗು ಬರಲಿ ಎಂಬುದು ಆಶಯ.

ಸಿನಿಮಾ ಪ್ರಕಾರ ಬೆಳೆಯತೊಡಗಿದಾಗ ರಂಗಭೂಮಿ ಅಳಿಸಿಯೇ ಹೋಗುತ್ತದೆ ಎಂಬ ಆತಂಕ ಹುಟ್ಟಿತ್ತು. ಅದು ಸಹಜವೂ ಆಗಿತ್ತು. ಸಿನಿಮಾದ ಜೊತೆಜೊತೆಗೇ ಟಿವಿಯೂ ಬಂದಾಗಂತೂ ಮುಗಿಯಿತು ಕಥೆ ಎಂಬ ಸ್ಥಿತಿಯಿತ್ತು. ಕಾಲಕ್ರಮೇಣ ಸಿನಿಮಾರಂಗದಲ್ಲಿ ಅಬ್ಬರ, ಶ್ರೀಮಂತಿಕೆ, ತಾಂತ್ರಿಕ ಶ್ರೀಮಂತಿಕೆ, ಪುರಾಣ-ಇತಿಹಾಸವನ್ನೂ ಜೀವಂತಗೊಳಿ ಸುವ ಶಕ್ತಿ ಬಂದಾಗ ರಂಗಭೂಮಿ ಎನ್ನುವುದೊಂದು ಇದೆ ಎನ್ನುವುದೇ ಗೊತ್ತಾಗದ ಸ್ಥಿತಿಗೆ ತಲುಪಿತು. ಅದಕ್ಕೆ ಸರಿಯಾಗಿ ಈಗ ಟಿವಿಯ ಭೀತಿಯನ್ನೂ ದಾಟಿ, ಒಟಿಟಿಗಳೂ ಬಂದಿವೆ.

ಅವಂತೂ ಚಿತ್ರಮಂದಿರಗಳಿಗೇ ಧಕ್ಕೆ ತಂದಿವೆ. ಜನ ಮನೆಬಿಟ್ಟು ಹೊರಡುವ ಅಗತ್ಯ ವಿಲ್ಲದೇ, ಮನೆಯಲ್ಲೇ ಬೃಹತ್ ಪರದೆಯ ಮೂಲಕ ಸಂಭ್ರಮಿಸುವ ಅವಕಾಶವನ್ನು ನೀಡಿವೆ. ವಿಶ್ವದ ಸಿನಿಮಾಗಳೆಲ್ಲ ನಾವಿದ್ದಲ್ಲೇ, ಕೂತಲ್ಲೇ ಕಾಣುವ ಅವಕಾಶ ಸಿಕ್ಕಿರುವಾಗ, ಚಿತ್ರಮಂದಿರಗಳಿಗೆ ಹೋಗುವುದನ್ನೇ ಜನ ನಿಲ್ಲಿಸಿರುವಾಗ, ರಂಗಭೂಮಿಯ ಗತಿ? ನಿರಾಶ ರಾಗುವ ಅಗತ್ಯವಿಲ್ಲ.

ಕಾಲನ ನಿರಂತರ ಹೊಡೆತಕ್ಕೆ ಸಿಕ್ಕಿದರೂ, ತಾಂತ್ರಿಕ ಬದಲಾವಣೆಯ, ಔನ್ನತ್ಯದ ಸವಾಲಿಗೆ ಮುಖಾಮುಖಿಯಾದರೂ ರಂಗಭೂಮಿ ಎದೆಗುಂದ ದೇತಾಳ್ಮೆಯಿಂದ ಮುಂದುವರಿಯು ತ್ತಲೇ ಇದೆ. ತನ್ನದೇ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಈಗಲೂ ನೀನಾಸಂ, ರಂಗಾಯಣಗಳಂತಹ ನಾಟಕ ಸಂಸ್ಥೆಗಳು ಜೀವಂತವಾಗಿವೆ. ಅಲ್ಲಿಂದ ಕಲಾವಿದರು ಹೊರಬರುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತರಾಗಿರುವ ಹಲವರು ಈ ರಂಗಭೂಮಿಯ ಕೊಡುಗೆಯೇ!

ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುತ್ತಿರುವ ರಂಗಪ್ರತಿಭೆಗಳಂತೂ ಇನ್ನೊಂದು ವಿಸ್ಮಯ. ಕಾಂತಾರ, ಸು ಫ್ರಂಮ್ ಸೋನಲ್ಲಿ ನಟಿಸಿದ ಹಲವು ಕಲಾವಿದರು ರಂಗಭೂಮಿಯ ಕೊಡುಗೆ. ಅವರು ಕನ್ನಡ ಚಿತ್ರರಂಗಕ್ಕೆ ಹೊಸ ಆಶಾವಾದ ತುಂಬಿದ್ದಾರೆ. ರಂಗಭೂಮಿ ಯೆನ್ನುವುದು ತನ್ನ ನವೀನತೆಯನ್ನು ಉಳಿಸಿಕೊಂಡು ಗಟ್ಟಿಯಾಗುತ್ತಿದೆ.