ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಸಿಬಿಎಸ್‌ಸಿ ಮಾದರಿಯ ಅಳವಡಿಕೆಯಿಂದ ಯಾರಿಗೆ ಲಾಭ ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಕಳೆದ ಹಲವು ವರ್ಷಗಳ ತನ್ನ ಆಡಳಿತ ವೈ-ಲ್ಯವನ್ನು ಮುಚ್ಚಿಹಾಕಲು, ಸಿಬಿಎಸ್‌ಇ ಪರೀಕ್ಷಾ ಮಾದರಿಯನ್ನು ಅಳವಡಿಸಿ ಕೊಳ್ಳುವ ಪ್ರಸ್ತಾವವನ್ನು ಇದೀಗ ಸರಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವದಲ್ಲಿ, ವಿದ್ಯಾರ್ಥಿಯು ಆಂತರಿಕ ಅಂಕ ದೊಂದಿಗೆ ಒಟ್ಟಾರೆ 100ಕ್ಕೆ 33 ಅಂಕ ಪಡೆದರೆ ತೇರ್ಗಡೆ, ಕನ್ನಡ ಸೇರಿದಂತೆ ಪ್ರಥಮ ಭಾಷೆಗೆ 125ಕ್ಕೆ ಬದಲಾಗಿ 120 ಅಂಕಕ್ಕೆ ಪರೀಕ್ಷೆ, ಬಹು ಆಯ್ಕೆ ಹಾಗೂ ಒಂದು ಅಂಕದ ಪ್ರಶ್ನೆಗೆ ಹೆಚ್ಚು ಆದ್ಯತೆ ಎಂಬ ಮೂರು ಪ್ರಮುಖ ಅಂಶಗಳಿವೆ.

ಸಿಬಿಎಸ್‌ಸಿ ಮಾದರಿಯ ಅಳವಡಿಕೆಯಿಂದ ಯಾರಿಗೆ ಲಾಭ ?

Ashok Nayak Ashok Nayak Jul 23, 2025 12:19 PM

ಅವಲೋಕನ

ಸುರೇಂದ್ರ ಪೈ, ಭಟ್ಕಳ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಕಳೆದ ಹಲವು ವರ್ಷಗಳ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು, ಸಿಬಿಎಸ್‌ಇ ಪರೀಕ್ಷಾ ಮಾದರಿಯನ್ನು ಅಳವಡಿಸಿ ಕೊಳ್ಳುವ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವದಲ್ಲಿ, ವಿದ್ಯಾರ್ಥಿಯು ಆಂತರಿಕ ಅಂಕದೊಂದಿಗೆ ಒಟ್ಟಾರೆ 100ಕ್ಕೆ 33 ಅಂಕ ಪಡೆದರೆ ತೇರ್ಗಡೆ, ಕನ್ನಡ ಸೇರಿದಂತೆ ಪ್ರಥಮ ಭಾಷೆಗೆ 125ಕ್ಕೆ ಬದಲಾಗಿ 120 ಅಂಕಕ್ಕೆ ಪರೀಕ್ಷೆ, ಬಹು ಆಯ್ಕೆ ಹಾಗೂ ಒಂದು ಅಂಕದ ಪ್ರಶ್ನೆಗೆ ಹೆಚ್ಚು ಆದ್ಯತೆ ಎಂಬ ಮೂರು ಪ್ರಮುಖ ಅಂಶಗಳಿವೆ.

ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮ ಆಧಾರಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆಯು ದಿನದಿಂದ ದಿನಕ್ಕೆ ಹದಗೆಡುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಒಂದೆಡೆ, ದ್ವಿಭಾಷಾ ಹಾಗೂ ತ್ರಿಭಾಷಾ ಸೂತ್ರದಲ್ಲಿ ಯಾವುದನ್ನು ಅಳವಡಿಸಿಕೊಳ್ಳಬೇಕೆಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯು ತ್ತಿದ್ದರೆ, ಮತ್ತೊಂದೆಡೆ ಎಸ್‌ಎಸ್ ಎಲ್‌ಸಿ ಬೋರ್ಡ್ ಪರೀಕ್ಷೆಯ ವಿಷಯದಲ್ಲಿ ಪ್ರತಿ ವರ್ಷವೂ ಹೊಸ ಹೊಸ ಪ್ರಯೋಗಗಳನ್ನು ಮಾಡುವುದರ ಮೂಲಕ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ವಾಡುವ ಪರಿಪಾಠವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.

ಈ ಹಿಂದೆ 5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ವಿನೂತನ ಪ್ರಯೋಗಕ್ಕೆ ನ್ಯಾಯಾಲಯ ಛೀಮಾರಿ ಹಾಕಿತ್ತು. ಅಷ್ಟೇ ಅಲ್ಲದೆ, ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶದ ಹೆಚ್ಚಳಕ್ಕಾಗಿ 20 ಕೃಪಾಂಕ ನೀಡಿ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳುಮಾಡಲಾಗಿತ್ತು.

ಇದನ್ನೂ ಓದಿ: Surendra Pai Column: ಪುಣ್ಯಕೋಟಿ ಗೋವಿನ ಹಾಡನ್ನು ಮರೆತರೆ ಹೇಗೆ ?

ಇಷ್ಟೆಲ್ಲಾ ಬದಲಾವಣೆ ಮಾಡಿದರೂ, ಪ್ರತಿ ವರ್ಷಕ್ಕಿಂತಲೂ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಲ್ಲಿ 3.15 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡರು. ಪರೀಕ್ಷೆ-2ನ್ನು ನಡೆಸಿದರು ಕೂಡ 22 ಪ್ರತಿಶತ ಮಕ್ಕಳಷ್ಟೇ ಉತ್ತೀರ್ಣಗೊಂಡರು. ಇನ್ನುಳಿದ 2.27 ಲಕ್ಷ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ-3 ಬರೆಯುವಂತಾಯಿತು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಕಳೆದ ಹಲವು ವರ್ಷಗಳ ತನ್ನ ಆಡಳಿತ ವೈ-ಲ್ಯವನ್ನು ಮುಚ್ಚಿಹಾಕಲು, ಸಿಬಿಎಸ್‌ಇ ಪರೀಕ್ಷಾ ಮಾದರಿಯನ್ನು ಅಳವಡಿಸಿ ಕೊಳ್ಳುವ ಪ್ರಸ್ತಾವವನ್ನು ಇದೀಗ ಸರಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವದಲ್ಲಿ, ವಿದ್ಯಾರ್ಥಿಯು ಆಂತರಿಕ ಅಂಕದೊಂದಿಗೆ ಒಟ್ಟಾರೆ 100ಕ್ಕೆ 33 ಅಂಕ ಪಡೆದರೆ ತೇರ್ಗಡೆ, ಕನ್ನಡ ಸೇರಿದಂತೆ ಪ್ರಥಮ ಭಾಷೆಗೆ 125ಕ್ಕೆ ಬದಲಾಗಿ 120 ಅಂಕಕ್ಕೆ ಪರೀಕ್ಷೆ, ಬಹು ಆಯ್ಕೆ ಹಾಗೂ ಒಂದು ಅಂಕದ ಪ್ರಶ್ನೆಗೆ ಹೆಚ್ಚು ಆದ್ಯತೆ ಎಂಬ ಮೂರು ಪ್ರಮುಖ ಅಂಶಗಳಿವೆ.

ಮೇಲ್ನೋಟಕ್ಕೆ, ಶಿಕ್ಷಣ ಇಲಾಖೆಗೆ ಮಕ್ಕಳ ಮೇಲೆ ವಿಶೇಷ ಕಾಳಜಿ ಇದ್ದ ಹಾಗೆ ತೋರುತ್ತದೆ ಯಾದರೂ, ವಾಸ್ತವವಾಗಿ, ಈ ‘ಮಾಸ್ಟರ್ ಪ್ಲಾನ್’ ಹಿಂದಿನ ಸತ್ಯಾಂಶವೇನು ಎಂಬುದರ ಕುರಿತು ನಾವು ಆಲೋಚಿಸಬೇಕಿದೆ. ಮೊದಲ ಅಂಶವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಇಷ್ಟು ದಿನ ನೀಡಲಾಗುತ್ತಿದ್ದ 20 ವಿಶೇಷ ಕೃಪಾಂಕ ಹೇಗೂ ರದ್ದಾಗಿದೆ. ಹಾಗಾಗಿ, ಒಂದು ವೇಳೆ ಒಟ್ಟಾರೆ 33 ಅಂಕ ಪಡೆದರೆ ಉತ್ತೀರ್ಣ ಎಂಬ ನಿಯಮ ಅನುಷ್ಠಾನಕ್ಕೆ ಬಾರದಿದ್ದರೆ, ಈ ಬಾರಿಯೂ ಅತ್ಯಂತ ಕಳಪೆ ಫಲಿತಾಂಶ ದಾಖಲಾಗುವುದು ನಿಶ್ಚಿತ. ಆದ್ದರಿಂದ, ಅನುತ್ತೀರ್ಣರಾಗುವಂಥ ವಿದ್ಯಾರ್ಥಿ ಗಳಿಗೆ 20 ಆಂತರಿಕ ಅಂಕ ನೀಡಿಬಿಟ್ಟರೆ ಕೆಲಸ ಸಲೀಸಾಗುತ್ತದೆ.

Screenshot_2

ಇದರಿಂದ ಫಲಿತಾಂಶವು ಶೇ.62ರಿಂದ ಶೇ.85-90ರ ಆಸುಪಾಸಿಗೆ ತಲುಪುವುದರಲ್ಲಿ ಸಂಶಯವಿಲ್ಲ. ಅಂದರೆ ಹೊಸ ಪ್ರಸ್ತಾವದಿಂದ ಫಲಿತಾಂಶದಲ್ಲಿ ಶೇ.30ರಷ್ಟು ಹೆಚ್ಚಳವಾಗುತ್ತದೆ. ಇನ್ನು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಕನ್ನಡ ಪ್ರಥಮ ಭಾಷೆಯಲ್ಲಿ 1.32 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ನಮ್ಮ ರಾಜ್ಯಭಾಷೆಯಲ್ಲೇ ಇಷ್ಟೊಂದು ವಿದ್ಯಾರ್ಥಿಗಳು ಅನುತ್ತೀರ್ಣರಾದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ವಿರುದ್ಧ ಹಲವು ಟೀಕೆಗಳು ಕೇಳಿಬಂದಿದ್ದವು. ಅದಕ್ಕೆ ಸಮಜಾಯಿಷಿ ಎಂಬಂತೆ, ‘ನಾವು ಮಾತನಾಡುವ ಕನ್ನಡಕ್ಕೂ, ಪಠ್ಯಪುಸ್ತಕದಲ್ಲಿರುವುದನ್ನು ಓದಿ ಅರ್ಥೈಸಿಕೊಂಡು ಪರೀಕ್ಷೆ ಬರೆಯು ವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇನ್ನು ಪರೀಕ್ಷೆಯಲ್ಲಿ ವಿವರಣಾತ್ಮಕ ಪ್ರಶ್ನೆಗಳು ಹೆಚ್ಚಿರುತ್ತವೆ. ಜತೆಗೆ 125 ಅಂಕಗಳಿಗೆ ಉತ್ತರಿಸಲು ಮಕ್ಕಳಿಗೆ ಸಮಸ್ಯೆ ಆಗುತ್ತಿದೆ.

ಪ್ರಶ್ನೆಪತ್ರಿಕೆ ಕ್ಲಿಷ್ಟಕರವಾಗಿರುತ್ತದೆ’ ಎಂಬ ಕೂಗೂ ಕೇಳಿಬಂದಿತ್ತು. ಹಾಗಾಗಿ ಈಗ ಸಲ್ಲಿಸಲಾಗಿರುವ ಪ್ರಸ್ತಾವದಲ್ಲಿ ‘125 ಅಂಕಗಳಿಗೆ ಬದಲಾಗಿ 100 ಅಂಕಗಳಿಗೆ ಪರೀಕ್ಷೆ ಇರಲಿ, ಅದರಲ್ಲೂ 25 ಆಂತರಿಕ ಅಂಕಗಳನ್ನು ನೀಡಿ, ಇನ್ನುಳಿದ 75 ಅಂಕಗಳಿಗೆ ಮಾತ್ರ ಲಿಖಿತ ಪರೀಕ್ಷೆ ಮಾಡಿದರೆ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿ, ಕಳೆದ ಎಲ್ಲಾ ವರ್ಷದ ದಾಖಲೆಯು ಧೂಳೀಪಟವಾಗುತ್ತದೆ’ ಎಂಬ ಉಲ್ಲೇಖವಾಗಿದೆ ಎನ್ನಬಹುದು.

ಒಟ್ಟಾರೆ ವಿಷಯವಾರು, ಶೇಕಡಾವಾರು ಫಲಿತಾಂಶ ಮತ್ತು ಮಕ್ಕಳು ವೈಯಕ್ತಿಕವಾಗಿ 80-90 ಅಂಕ ಗಳನ್ನು ಪಡೆಯುವಂತಾಗಲು ‘ಒಂದು ಅಂಕದ ಪ್ರಶ್ನೆಯ ಹೆಚ್ಚಳ, ಬಹುಆಯ್ಕೆಯ ಪ್ರಶ್ನೆಯ ಹೆಚ್ಚಳ, ಪ್ರತಿ ವಿಭಾಗದಲ್ಲೂ ಹೆಚ್ಚುವರಿ ಆಯ್ಕೆಯ ಪ್ರಶ್ನೆಗಳು ಹಾಗೂ ವಿವರಣಾತ್ಮಕ ಪ್ರಶ್ನೆ ಗಳಲ್ಲೂ ಬಹು ಆಯ್ಕೆಯ ಅಳವಡಿಕೆ’ ಹೀಗೆ ವಿದ್ಯಾರ್ಥಿ-ಸ್ನೇಹಿ ಪ್ರಶ್ನೆಪತ್ರಿಕೆ ರೂಪಿಸಿ ಫಲಿತಾಂಶದ ಹೆಚ್ಚಳಕ್ಕೆ ದಾರಿಮಾಡಿಕೊಡುವ ಆಶಯವಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಈ ಮಾಸ್ಟರ್ ಪ್ಲಾನ್‌ನಿಂದಾಗಿ ಇಲಾಖಾ ಫಲಿತಾಂಶವೇನೋ ಏರಿಕೆ ಆದೀತು. ಆದರೆ ವಾಸ್ತವದಲ್ಲಿ ಗುಣಾತ್ಮಕ ಶಿಕ್ಷಣ ನೀಡಿದಂತಾ ಗುತ್ತದೆಯೇ? ಮಕ್ಕಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದಿನ ಹಂತದ ಶಿಕ್ಷಣ ಪಡೆಯಲು ಸಿಇಟಿ, ನೀಟ್, ಜೆಇಇನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬೇಕಾದ ಜ್ಞಾನ ಲಭಿಸು ತ್ತದೆಯೇ? ಎಂಬ ಸರಳ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

ಅಷ್ಟೇ ಅಲ್ಲ, ಸಿಬಿಎಸ್‌ಇ ಪರೀಕ್ಷಾ ಮಾದರಿಯ ಅಳವಡಿಕೆ ಎಂದು ಹೇಳಿ ಪಾಲಕರನ್ನು ದಿಕ್ಕು ತಪ್ಪಿಸುವ ಮೊದಲು, ಅವರ ಪರೀಕ್ಷಾ ಮಾದರಿಯ ಬಗೆಗಿನ ವಾಸ್ತವದ ಪರಿಚಯವನ್ನು ಒಮ್ಮೆ ಮಾಡಿಕೊಡಬೇಕಲ್ಲವೇ? ಸಿಬಿಎಸ್‌ಸಿ ಪರೀಕ್ಷಾ ಪ್ರಾಧಿಕಾರವು ನಡೆಸುವ ಬೋರ್ಡ್ ಪರೀಕ್ಷೆಯು, ಮಕ್ಕಳು ೯ನೇ ತರಗತಿಯಲ್ಲಿ ಇದ್ದಾಗಲೇ ಶುರು ವಾಗುತ್ತದೆ.

ಅಂದರೆ ಎರಡು ವರ್ಷದ ಮೊದಲೇ ಪೂರ್ವ ನಿರ್ಧಾರಿತ ತಯಾರಿ ಇರುತ್ತದೆ. ಪ್ರಸ್ತುತ ರಾಜ್ಯ ಪಠ್ಯಕ್ರಮದ ವಿಜ್ಞಾನ-ಗಣಿತ ಪುಸ್ತಕಗಳು, ಸಿಬಿಎಸ್‌ಇ ಪುಸ್ತಕಗಳು ಒಂದೇ ಆಗಿದ್ದರು ಸಹ, ಪ್ರಶ್ನೆ ಪತ್ರಿಕೆಯ ಗುಣಮಟ್ಟವನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಅವರು ಗುಣಮಟ್ಟ ದಲ್ಲಿ ಎಲ್ಲೂ ರಾಜಿ ಆಗುವುದಿಲ್ಲ. ತೇರ್ಗಡೆಗೆ 33 ಅಂಕ ಸಾಕು ಅಂದ ಮಾತ್ರಕ್ಕೆ ಕಳಪೆ ಪ್ರಶ್ನೆಪತ್ರಿಕೆ, ಬಹು ಆಯ್ಕೆ, ಒಂದು ಅಂಕದ ಸುಲಭ, ನೇರ ಪ್ರಶ್ನೆಗಳನ್ನು ನೀಡುವುದಿಲ್ಲ.

ಇನ್ನು ಪ್ರಶ್ನೆಪತ್ರಿಕೆಯು ಎ, ಬಿ, ಸಿ ಕ್ರಮಾಂಕದಲ್ಲಿದ್ದು ಪ್ರತಿ ಪ್ರಶ್ನೆಪತ್ರಿಕೆ ಕೂಡ 25 ಅಂಕಗಳಷ್ಟು ಬದಲಾವಣೆಯನ್ನು ಹೊಂದಿರುತ್ತದೆ. ನಿರ್ದಿಷ್ಟ ನೀಲನಕ್ಷೆಯಾಗಲೀ, ಪ್ರಮುಖ ಪ್ರಶ್ನೆಗಳ ಬಗೆಗಿನ ಸುಳಿವನ್ನಾಗಲೀ ನೀಡಿರುವುದಿಲ್ಲ. ಕೇವಲ ಆರು ತಿಂಗಳು ಮುಂಚಿತವಾಗಿ ಮಾದರಿ ಪ್ರಶ್ನೆಪತ್ರಿಕೆ ಯನ್ನಷ್ಟೇ ಪ್ರಕಟಿಸಲಾಗುತ್ತದೆ. 33 ಪಾಸ್ ಅಂಕವಿದ್ದರೂ, ಸ್ಟೇಟ್ ಬೋರ್ಡ್ ಪರೀಕ್ಷೆಯ ಹಾಗೆ ಸಾವಿರಾರು ಮಕ್ಕಳು ನೂರಕ್ಕೆ ನೂರು ಅಂಕ ತೆಗೆಯಲಾರರು.

ಅಷ್ಟರಮಟ್ಟಿಗೆ ಸಂಪೂರ್ಣವಾಗಿ ಜ್ಞಾನಾತ್ಮಕ, ವಿಮರ್ಶಾತ್ಮಕ, ಅನ್ವಯಿಕ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗಾಗಿಯೇ ಸಿಬಿಎಸ್‌ಇಯಲ್ಲಿ ಶೇ.70 ಅಂಕ ಪಡೆದರೂ ನೀಟ್, ಸಿಇಟಿ ಪರೀಕ್ಷೆಯಲ್ಲಿ ಅವರೇ ಹೆಚ್ಚು ಸಾಧನೆ ಮಾಡುವುದು. ಇನ್ನು ವಿದ್ಯಾರ್ಥಿಗಳಿಗೆ ನೀಡಲಾಗುವ 20 ಆಂತರಿಕ ಅಂಕಗಳಿಗೂ, ಲಿಖಿತ ಪರೀಕ್ಷೆಯ 80ರಲ್ಲಿ ಪಡೆದ ಅಂಕಗಳಿಗೂ ತೀರಾ ವ್ಯತ್ಯಾಸ ಕಂಡುಬಂದರೆ, ಅದಕ್ಕೆ ಸಂಬಂಧಿಸಿದಂತೆ ಶಾಲೆಯ ಬಳಿ ಲಿಖಿತ ರೂಪದಲ್ಲಿ ವಿವರಣೆ ಕೇಳಲಾಗುತ್ತದೆ.

ಕೆಲವೊಮ್ಮೆ ಅಂಥ ಶಾಲೆಯ ಫಲಿತಾಂಶವನ್ನು ತಡೆ ಹಿಡಿಯಲಾಗುತ್ತದೆ, ವಿಶೇಷ ತನಿಖಾ ತಂಡ ದಿಂದ ಮೇಲ್ವಿಚಾರಣೆ ನಡೆಯುತ್ತದೆ. ಹಾಗಾಗಿ ಬೇಕಾಬಿಟ್ಟಿ ಆಂತರಿಕ ಅಂಕ ನೀಡುವ ಅವ್ಯವಹಾರ ನಡೆಯುವುದಿಲ್ಲ. ಇನ್ನು ಸಿಬಿಎಸ್‌ಇ ಪರೀಕ್ಷೆಯ ಮೌಲ್ಯಮಾಪನವು ಎಷ್ಟು ನಿಖರವಾಗಿರುತ್ತದೆ ಎಂದರೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಶೇ.5-6ರಷ್ಟು ವಿದ್ಯಾರ್ಥಿ ಗಳಿಗೆ ಮಾತ್ರ 1-4 ಅಂಕಗಳು ಸಿಗುತ್ತವೆ. ಆದರೆ ಸ್ಟೇಟ್ ಬೋರ್ಡ್ ಪರೀಕ್ಷೆಯಲ್ಲಿ ಮರುಮೌಲ್ಯ ಮಾಪನದ ನಂತರ ಹಲವು ವಿದ್ಯಾರ್ಥಿಗಳು ರಾಜ್ಯಕ್ಕೆ ರ‍್ಯಾಂಕ್ ಬಂದಿರುವ ನಿದರ್ಶನಗಳಿವೆ!

ಆದ್ದರಿಂದ, ಸುಮ್ಮನೆ ‘ಸಿಬಿಎಸ್‌ಸಿ ಮಾದರಿ ಅಳವಡಿಕೆ’ ಎಂದು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಮೊದಲು, ಅವರು ಕೈಗೊಳ್ಳುವ ಕಠಿಣ ಕ್ರಮಗಳನ್ನು ರಾಜ್ಯ ಶಿಕ್ಷಣ ಇಲಾಖೆಯು ತೆಗೆದುಕೊಳ್ಳಲು ಶಕ್ಯವೇ ಎಂದು ಪ್ರಶ್ನಿಸಿಕೊಳ್ಳಬೇಕು? ಒಂದೊಮ್ಮೆ ‘ಹೌದು’ ಎಂಬ ಉಡಾಫೆ ಉತ್ತರ ಹೊಮ್ಮಿದರೆ, ಈ ಮೂರು ಅಂಶಗಳನ್ನು ಅಳವಡಿಸಿಕೊಂಡರೆ ಶಿಕ್ಷಣ ಇಲಾಖೆಯು ಇನ್ನಷ್ಟು ಕಳಪೆ ಫಲಿತಾಂಶ ಗಳನ್ನು ನೀಡುವಂಥ ಪರಿಸ್ಥಿತಿ ಉದ್ಭವಿಸಬಹುದು, ಎಚ್ಚರ.

ಆದರೆ ನಮ್ಮ ಶಿಕ್ಷಣ ಇಲಾಖೆಯು ಅವೆಲ್ಲವನ್ನೂ ಖಂಡಿತವಾಗಿಯೂ ಅನುಷ್ಠಾನಕ್ಕೆ ತರುವುದಿಲ್ಲ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವಂತೆ, ಎಲ್ಲರಿಗೂ 20 ಅಂತರಿಕ ಅಂಕ ವನ್ನು ನೀಡಿ, ಸರಳ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಸರಳ ಮೌಲ್ಯಮಾಪನದ ಮೂಲಕ 100ಕ್ಕೂ ಹೆಚ್ಚು ಮಕ್ಕಳು 600ಕ್ಕೆ 600 ಅಂಕ ತೆಗೆಯುವಂತೆ ಮಾಡಿ, ತನ್ನ ಹೆಸರಿನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆಸಿಕೊಳ್ಳುವ ಕಾಲ ಹೆಚ್ಚು ದೂರವಿಲ್ಲ. ಏಕೆಂದರೆ ಈ ಬಾರಿ ೨೨ ಮಕ್ಕಳು 625 ಅಂಕ ಪಡೆದು ‘ಪ್ರಥಮ ರ‍್ಯಾಂಕ್’ ದಕ್ಕಿಸಿಕೊಂಡಿದ್ದಾರೆ. ನಮಗೆ ಕೇಂದ್ರದ ‘ಎನ್‌ಇಪಿ’ ಬೇಡ, ಆದರೆ ಸಿಬಿಎಸ್‌ಇ ‘ಪರೀಕ್ಷಾ ಮಾದರಿ’ ಮಾತ್ರ ಫಲಿತಾಂಶದ ಹೆಚ್ಚಳಕ್ಕೆ ಬೇಕು.

ಇಷ್ಟೆಲ್ಲಾ ನಾಟಕ ಮಾಡುವ ಬದಲು, ಪರೀಕ್ಷೆಯನ್ನು ಬರೆದ ಎಲ್ಲರನ್ನೂ ಉತ್ತೀರ್ಣರಾಗಿಸಿಬಿಟ್ಟರೆ ಕೆಲಸ ಮುಗಿಯಿತಲ್ಲವೇ? ಆಮೇಲೆ ಮಕ್ಕಳು ತಮಗೆ ಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ/ತರಬೇತಿಯನ್ನು ಖಾಸಗಿ ಸಂಸ್ಥೆಯಿಂದ ಪಡೆದುಕೊಳ್ಳುತ್ತಾರೆ ಬಿಡಿ.

ಕೇವಲ ಉತ್ತಮ ಫಲಿತಾಂಶವನ್ನು ಸಾಽಸುವ ಉದ್ದೇಶದಿಂದ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗುವಂತೆ ಶಿಕ್ಷಣ ಕ್ರಮಗಳನ್ನು ರೂಪಿಸುವ ಬದಲು ಅಂಕಗಳ ಪ್ರಮಾಣವನ್ನು ಕುಗ್ಗಿಸುವುದರಿಂದ ಶಿಕ್ಷಣದ ಗುಣಮಟ್ಟವೂ ಕುಗ್ಗುತ್ತದೆ ಎಂಬ ಪ್ರಜ್ಞೆ ಇರಬೇಕಲ್ಲವೇ? ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬ ಮನೋಭಾವನೆಯಿಂದ, ದೂರಗಾಮಿ ಚಿಂತನೆ ಯಿಲ್ಲದೆಯೇ ಪ್ರಾಥಮಿಕ ಹಂತದಲ್ಲೇ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುವುದು ಯಾವ ನ್ಯಾಯ? ಅಂಕಗಳನ್ನು ತಗ್ಗಿಸುವುದರಿಂದಾಗಿ, ‘ಹೇಗೂ 33 ಅಂಕಗಳು ತಾನೇ, 20 ಆಂತರಿಕ ಅಂಕಗಳನ್ನು ಕೊಟ್ಟುಬಿಡೊಣ, ಮಕ್ಕಳು ಪಾಸ್ ಆಗುತ್ತಾರೆ ಬಿಡಿ’ ಎಂಬ ಲಘು ಮನೋಭಾವವು ಶಿಕ್ಷಕರಲ್ಲೂ ಬಂದುಬಿಡುತ್ತದೆ.

ಅದರಿಂದಾಗಿ, ಶಿಕ್ಷಕರು ಸಹಜವಾಗಿ ಇಷ್ಟು ದಿನ ಮಾಡಿದ ಪ್ರಯತ್ನವನ್ನೂ ಮಾಡದೇ ಎಲ್ಲವನ್ನೂ ಕೈಚೆಲ್ಲುತ್ತಾರೆ. ಹೀಗೆ ಯಾವುದೋ ಸ್ವಾರ್ಥಕ್ಕಾಗಿ, ‘ಮಕ್ಕಳ ಹಿತದೃಷ್ಟಿಯಿಂದ’ ಎಂಬ ನೆಪವನ್ನು ಮುಂದುಮಾಡಿ ಪದೇಪದೆ ಪರೀಕ್ಷಾ ನೀತಿಯನ್ನು ಬದಲಿಸಿ, ಅತ್ತ ಮಕ್ಕಳಿಗೂ, ಇತ್ತ ಶಿಕ್ಷಕರಿಗೂ-ಪಾಲಕರಿಗೂ ಮೋಸ ಮಾಡುವ ಪರಿಪಾಠವನ್ನು ಸಂಬಂಧಪಟ್ಟವರು ಕೈಬಿಡಬೇಕಿದೆ.

ಖಾಸಗೀಕರಣದೆಡೆಗಿನ ಒಲವನ್ನು ಬಿಟ್ಟು, ಶಿಕ್ಷಕರ ನೇಮಕಾತಿಯ ಕಡೆಗೆ ಗಮನ ಹರಿಸಬೇಕಿದೆ. ಶಿಕ್ಷಕರಿಗೆ ಇಲಾಖೆಯ ಅನ್ಯ ಕೆಲಸದಿಂದ ಮುಕ್ತಿ ನೀಡಿ, ಶಾಲಾ ಕಟ್ಟಡ ನಿರ್ಮಾಣ/ದುರಸ್ತಿ/ಸುಧಾರಣೆ, ಶಿಕ್ಷಕರಿಗೆ ತರಬೇತಿ, ಪುನಃಶ್ಚೇತನ ಕಾರ್ಯಾಗಾರ, ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಬಗೆಗಿನ ವಿಶೇಷ ತರಗತಿ ಇತ್ಯಾದಿಗಳನ್ನು ಒದಗಿಸುವ ಬಗ್ಗೆ ‘ಮಾಸ್ಟರ್ ಪ್ಲಾನ್’ ಹಾಕಿಕೊಂಡರೆ, ರಾಜ್ಯ ಪಠ್ಯಕ್ರಮವು ಖಂಡಿತವಾಗಿಯೂ ಮಕ್ಕಳಿಗೆ ನ್ಯಾಯವನ್ನು ಒದಗಿಸಿದಂತಾಗುತ್ತದೆ.

(ಲೇಖಕರು ಶಿಕ್ಷಕರು)