ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದಿನ ಪಂದ್ಯದಲ್ಲೂ ಕೊಹ್ಲಿಯಿಂದ ಸಿಕ್ಸರ್‌ಗಳ ಸುರಿಮಳೆ ಖಚಿತ; ಅಭ್ಯಾಸದ ವಿಡಿಯೊ ಇಲ್ಲಿದೆ

ಮೊದಲ ಪಂದ್ಯದಲ್ಲಿ ಕೊಹ್ಲಿ 7 ಆಕರ್ಷಕ ಸಿಕ್ಸರ್‌ ಬಾರಿಸಿದ್ದರು. ಇದು ಅವರ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನೊಳಗೊಂಡ ಇನಿಂಗ್ಸ್‌ ಆಗಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿಯೂ ಸಿಕ್ಸರ್‌ ಸುರಿಮಳೆಗೈದು ಅಭಿಮಾನಿಗಳನ್ನು ಮತ್ತೊಮ್ಮೆ ರಂಜಿಸಲು ಕೊಹ್ಲಿ ಸಜ್ಜಾಗಿದ್ದಾರೆ.

Virat Kohli: ಇಂದಿನ ಪಂದ್ಯದಲ್ಲೂ ಕೊಹ್ಲಿಯಿಂದ ಸಿಕ್ಸರ್‌ಗಳ ಸುರಿಮಳೆ ಖಚಿತ

Virat Kohli -

Abhilash BC
Abhilash BC Dec 3, 2025 11:55 AM

ರಾಯ್ಪುರ, ಡಿ.3: ದಕ್ಷಿಣ ಆಫ್ರಿಕಾ(India vs South Africa) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿದ್ದ ವಿರಾಟ್‌ ಕೊಹ್ಲಿ(Virat Kohli) ತಮ್ಮ ಬ್ಯಾಟಿಂಗ್‌ ಪ್ರತಾಪವನ್ನು ಇಂದು(ಬುಧವಾರ) ನಡೆಯುವ ದ್ವಿತೀಯ ಪಂದ್ಯದಲ್ಲಿಯೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಅವರು ಕಠಿಣ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ಟೀಮ್‌ ಇಂಡಿಯಾದ ಅಭ್ಯಾಸದ ವೇಳೆ ವಿರಾಟ್‌ ಕೊಹ್ಲಿ ಸಕ್ಸರ್‌ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಅಭ್ಯಾಸದ ವೇಳೆ ವಿರಾಟ್‌ ಕೊಹ್ಲಿಯವರು ಬಾರಿಸಿದ ಸಿಕ್ಸರ್‌ನ ವಿಡಿಯೊ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಮೊದಲ ಪಂದ್ಯದಲ್ಲಿ ಕೊಹ್ಲಿ 7 ಆಕರ್ಷಕ ಸಿಕ್ಸರ್‌ ಬಾರಿಸಿದ್ದರು. ಇದು ಅವರ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನೊಳಗೊಂಡ ಇನಿಂಗ್ಸ್‌ ಆಗಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿಯೂ ಸಿಕ್ಸರ್‌ ಸುರಿಮಳೆಗೈದು ಅಭಿಮಾನಿಗಳನ್ನು ಮತ್ತೊಮ್ಮೆ ರಂಜಿಸಲು ಕೊಹ್ಲಿ ಸಜ್ಜಾಗಿದ್ದಾರೆ. ಬ್ಯಾಟಿಂಗ್‌ ಅಭ್ಯಾಸದ ವೇಳೆ ಅವರು ಕೇವಲ ಸಿಕ್ಸರ್ ಹೊಡೆತಗಳಿಗೆ ಹೆಚ್ಚಿನ ಗಮನಹರಿಸಿದರು. ಹೀಗಾಗಿ ಈ ಪಂದ್ಯದಲ್ಲೂ ಹಲವು ಸಿಕ್ಸರ್‌ ಬಾರಿಸುವ ಗುರಿ ಹೊಂದಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ನೆಟ್ಸ್‌ನಲ್ಲಿ ರಿಷಭ್‌ ಪಂತ್‌, ಧ್ರುವ್‌ ಜುರೆಲ್‌, ಮತ್ತು ನಿತೀಶ್‌ ಕುಮಾರ್‌ ರೆಡ್ಡಿ ಅವರು ಕೂಡ ಕೆಲಕೊತ್ತು ಅಭ್ಯಾಸ ನಡೆಸಿ ಅತಿರಂಜಿತ ಹೊಡೆತಗಳನ್ನು ಬಾರಿಸಿದರು.



ಇದನ್ನೂ ಓದಿ IND vs SA: ಗುವಾಹಟಿಯಲ್ಲಿ ಏನಾಯ್ತು ಹೇಳಿ? ಗೌತಮ್‌ ಗಂಭೀರ್‌ಗೆ ರವಿ ಶಾಸ್ತ್ರಿ ಪ್ರಶ್ನೆ!

ಮಿಂಚುತ್ತಿರುವ ರೋ-ಕೊ ಜೋಡಿ

ಮೊದಲ ಪಂದ್ಯದಲ್ಲಿ ಶತಕದ ಜತೆಯಾಟ ನಡೆಸಿದ್ದ ಕೊಹ್ಲಿ-ರೋಹಿತ್‌ ಜೋಡಿ ದ್ವಿತೀಯ ಪಂದ್ಯದಲ್ಲಿ ಇದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ರೋ-ಕೊ ಜೋಡಿ 136 ರನ್‌ಗಳ ಜೊತೆಯಾಟವಾಡಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2027ರ ಏಕದಿನ ವಿಶ್ವಕಪ್‌ ಆಡುವ ನಿಟ್ಟಿನಲ್ಲಿ ಕೊಹ್ಲಿ 15 ವರ್ಷಗಳ ಬಳಿಕ ದೇಶಿ ಕ್ರಿಕೆಟ್‌ಗೆ ಮರಳಿದ್ದು, ಈ ಋತುವಿನ ವಿಜಯ್‌ ಹಜಾರೆ ಟ್ರೋಫಿ ಆಡಲಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಹೊರಬಿದ್ದಿದೆ. ರೋಹಿತ್‌ ಶರ್ಮಾ ಕೂಡ ಈ ಪಂದ್ಯಾವಳಿಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.