ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೊರೆಯುವ ಚಳಿಯಲ್ಲಿ ಶಿಶುವನ್ನು ಎಸೆದು ಹೋದ ಪಾಪಿಗಳು; ರಾತ್ರಿಯಿಡೀ ಮಗುವಿಗೆ ಕಾವಲಾದ ಬೀದಿ ನಾಯಿಗಳು!

Viral News : ಕೊರೆಯುವ ಚಳಿಯ ನಡುವೆ ಮಾನವೀಯತೆಯನ್ನು ನಿಬ್ಬೆರಗುಗೊಳಿಸುವ ಘಟನೆಯೊಂದು ಬಯಲಾಗಿದ್ದು, ನವಜಾತ ಶಿಶುವನ್ನು ರಸ್ತೆಯ ಬದಿಯಲ್ಲಿ ಬಿಟ್ಟುಹೋಗಿರುವ ಹೀನ ಕೃತ್ಯಕ್ಕೆ ಬೀದಿ ನಾಯಿಗಳೇ ಕಾವಲುಗಾರರಂತೆ ಕಾದ ಅಪರೂಪದ ದೃಶ್ಯ ಕಂಡುಬಂದಿದೆ. ಈ ನಾಯಿಗಳ ವರ್ತನೆ ಮಾನವೀಯತೆಗೂ ಪಾಠ ಕಲಿಸುವಂತಿದೆ.

ರಾತ್ರಿಯಿಡೀ ಶಿಶುವಿಗೆ ಕಾವಲು ನೀಡಿದ ಬೀದಿ ನಾಯಿಗಳು!

ಸಾಂಧರ್ಬಿಕ ಚಿತ್ರ -

Priyanka P
Priyanka P Dec 3, 2025 12:09 PM

ಕೋಲ್ಕತಾ: ಎಲ್ಲೆಡೆ ತೀವ್ರ ಚಳಿ ಹೆಚ್ಚುತ್ತಿದ್ದು, ಜನತೆ ಬೆಚ್ಚನೆ ಕಂಬಳಿ ಹೊದ್ದು ಮಲಗುತ್ತಿದ್ದಾರೆ. ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯ ನದಿಯ ಪಟ್ಟಣದ ಜನರು ಬೆಚ್ಚನೆ ನಿದ್ದೆ ಮಾಡುತ್ತಿರುವಾಗ, ಬೆಳಗಿನ ಜಾವಕ್ಕೆ ಕೆಲವು ಗಂಟೆಗಳ ಮೊದಲು, ರೈಲ್ವೆ (Viral News) ಕಾರ್ಮಿಕರ ವಸಾಹತು ಪ್ರದೇಶದ ಸ್ನಾನಗೃಹದ ಹೊರಗೆ ನವಜಾತ ಶಿಶುವನ್ನು (infant) ಏಕಾಂಗಿಯಾಗಿ ಬಿಡಲಾಗಿತ್ತು. ಶಿಶು ಹುಟ್ಟಿ ಕೆಲವೇ ಗಂಟೆಗಳಾಗಿದ್ದಿರಬಹುದು. ದೇಹವು ರಕ್ತದಿಂದ ತುಂಬಿತ್ತು. ಕಂಬಳಿ ಇರಲಿಲ್ಲ. ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದರೆ ಮಗು ಸಂಪೂರ್ಣವಾಗಿ ಒಂಟಿಯಾಗಿರಲಿಲ್ಲ. ಈ ದೃಶ್ಯ ಮಾತ್ರ ನೋಡುಗರನ್ನು ಬೆರಗಾಗಿಸಿತ್ತು.

ಹೌದು, ಜನರು ಪ್ರತಿದಿನ ಓಡಿಸುವ ಬೀದಿನಾಯಿಗಳು (stray dogs) ನವಜಾತ ಶಿಶುವಿಗೆ ರಕ್ಷಣೆ ಒದಗಿಸಿತ್ತು. ಬೊಗಳಲಿಲ್ಲ, ಕಚ್ಚಲಿಲ್ಲ, ರಾತ್ರಿಯಿಡೀ ಶಿಶುವಿಗೆ ಕಾವಲು ಕಾಯುತ್ತಿತ್ತು. ರಾತ್ರಿಯಿಡೀ ನಾಯಿಗಳು ಯಾರನ್ನೂ ಹತ್ತಿರ ಬರಲು ಬಿಡಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಬೆಳಗ್ಗೆದ್ದು ನೋಡಿದಾಗ ರೋಮಾಂಚನಕಾರಿಯಾದದ್ದನ್ನು ನೋಡಿದೆವು ಎಂದು ಮಗುವನ್ನು ನೋಡಿದ ಮೊದಲಿಗರಲ್ಲಿ ಒಬ್ಬರಾದ ನಿವಾಸಿ ಸುಕ್ಲಾ ಮಂಡಲ್ ಹೇಳಿದರು. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ ಎಂದು ಅವರು ಹೇಳಿದರು.

Raghavendra E Horabailu Column: ಬೀದಿನಾಯಿ ಹಾವಳಿ: ಬೇಕಿದೆ ತಿಳಿವಳಿಕೆ

ಮತ್ತೊಬ್ಬ ನಿವಾಸಿ ಸುಭಾಷ್ ಪಾಲ್, ಬೆಳಗಿನ ಜಾವ ಸಣ್ಣ ಧ್ವನಿ ಕೇಳಿದ್ದನ್ನು ನೆನಪಿಸಿಕೊಂಡರು. ಹೊರಗೆ ಮಲಗಿದ್ದ ನವಜಾತ ಶಿಶುವಿಗೆ ನಾಯಿಗಳು ಕಾವಲು ಕಾಯುತ್ತಿರುತ್ತವೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅವು ಕಾವಲುಗಾರರಂತೆ ವರ್ತಿಸುತ್ತಿತ್ತು ಎಂದು ಅವರು ಹೇಳಿದರು. ಕೊನೆಗೆ ಮಹಿಳೆಯೊಬ್ಬರು ಹತ್ತಿರ ಬಂದಾಗ ಮಾತ್ರ ನಾಯಿಗಳು ಪಕ್ಕಕ್ಕೆ ಸರಿದವು. ಆಕೆ ಮಗುವನ್ನು ತನ್ನ ದುಪ್ಪಟ್ಟಾದಲ್ಲಿ ಸುತ್ತಿ ನೆರೆಹೊರೆಯವರನ್ನು ಸಹಾಯಕ್ಕಾಗಿ ಕರೆದಳು.

ಶಿಶುವನ್ನು ಮೊದಲು ಮಹೇಶ್‌ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವನ್ನು ಪರೀಕ್ಷಿಸಿದ ವೈದ್ಯರು ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದರು. ತಲೆಯ ಮೇಲಿದ್ದ ರಕ್ತವು ಜನ್ಮ ಗುರುತುಗಳಿಂದಾಗಿರಬಹುದು. ಹೆರಿಗೆಯಾದ ಕೆಲವೇ ಗಂಟೆಗಳ ನಂತರ ಅಲ್ಲ, ನಿಮಿಷಗಳ ನಂತರ ತ್ಯಜಿಸಲಾಗಿದೆ ಎಂದು ವೈದ್ಯರು ಹೇಳಿದರು.

ಕತ್ತಲು ಇದ್ದಿದ್ದರಿಂದ ಯಾರೋ ಮಗುವನ್ನು ಅಲ್ಲಿ ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ನಬದ್ವೀಪ ಪೊಲೀಸರು ಮತ್ತು ಮಕ್ಕಳ ಸಹಾಯ ಸಂಸ್ಥೆಗಳು ವಿಚಾರಣೆ ಆರಂಭಿಸಿದ್ದು, ಮಗುವಿನ ಆರೈಕೆ ಮಾಡಲಾಗುತ್ತಿದೆ.

Stray Dogs: ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬೀದಿನಾಯಿಗಳ ದಾಳಿ; ಮುಂದೇನಾಯ್ತು?

ಇನ್ನು ಶ್ವಾನಗಳ ನಿಯತ್ತಿಗೆ ಜನರು ಬೆರಗಾಗಿದ್ದಾರೆ. ದಿನನಿತ್ಯ ನಾಯಿಗಳಿಗೆ ನೀರೆರೆಚಿ ಓಡಿಸುವುದು, ಹೊಡೆಯುವುದು ಇತ್ಯಾದಿ ಮಾಡಿದರೂ, ಈ ಶ್ವಾನಗಳು ಮಾತ್ರ ಮಗುವನ್ನು ಕಾವಲುಗಾರರಂತೆ ರಕ್ಷಿಸಿದ ರೀತಿ ಎಲ್ಲರಲ್ಲೂ ಅಚ್ಚರಿ ತರಿಸಿದೆ. ಆ ಮಗುವನ್ನು ತ್ಯಜಿಸಿದವರಿಗಿಂತ ಶ್ವಾನಗಳು ಹೆಚ್ಚು ಮಾನವೀಯತೆಯನ್ನು ತೋರಿಸಿದವು ಎಂದು ಸ್ಥಳೀಯರು ಹೇಳಿದರು.

ನವದ್ವೀಪದ ಹಿರಿಯರು ಹೇಳುವ ಪ್ರಕಾರ, ಈ ಪ್ರದೇಶವು ಯಾವಾಗಲೂ ವಿವರಿಸಲಾಗದ ಕರುಣೆಯಿಂದ ಸ್ಪರ್ಶಿಸಲ್ಪಟ್ಟಿದೆ. ಇದು 15ನೇ ಶತಮಾನದ ಸಂತ ಶ್ರೀ ಚೈತನ್ಯ ಮಹಾಪ್ರಭು ಅವರ ಬೋಧನೆಗಳಿಗೆ ಹಿಂದಿನದು. ಅವರು ಈ ನದಿ ಪಟ್ಟಣದಲ್ಲಿ ಜನಿಸಿದರು. ಅವರ ಸಹಾನುಭೂತಿಯ ಸಂದೇಶವು ಇನ್ನೂ ಅದರ ಘಾಟ್‌ಗಳು ಮತ್ತು ದೇವಾಲಯಗಳ ಮೂಲಕ ಪ್ರತಿಧ್ವನಿಸುತ್ತದೆ. ಬಹುಶಃ ಆ ಪ್ರಾಣಿಗಳ ಮೂಲಕ ಆ ಆತ್ಮ ಕೆಲಸ ಮಾಡಿರಬೇಕು ಎಂದು ಒಬ್ಬ ಹಿರಿಯರು ಹೇಳಿದರು.