ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಡಾ.ನಾ. ಸೋಮೇಶ್ವರ

columnist

info79@vishwavani.news

ಔದ್ಯೋಗಿಕ ವೈದ್ಯಕೀಯ ತಜ್ಞರು. 67 ಆರೋಗ್ಯ ಪುಸ್ತಕಗಳ ಪ್ರಕಟಣೆ. ಪ್ರಸ್ತುತ ವಿಶ್ವವಾಣಿಯಲ್ಲಿ “ಹಿಂದಿರುಗಿ ನೋಡಿದಾಗ’ ಅಂಕಣ ಬರಹ. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಕ್ವಿಜ಼್ ಮಾಸ್ಟರ್. ಸತತವಾಗಿ 4800 ಕಂತುಗಳ ಪ್ರಸಾರ. ಲಿಮ್ಕ ದಾಖಲೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ. ಕ್ವಿಜ಼್ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ.

Articles
Dr N Someshwara Column: ಒಡಲ ಮೇಲಿರುವ ಗಾಯಗಳು, ಹಿಂಸೆಯ ರುಜುವಾತಿನ ಸಹಿಗಳು

ಒಡಲ ಮೇಲಿರುವ ಗಾಯಗಳು, ಹಿಂಸೆಯ ರುಜುವಾತಿನ ಸಹಿಗಳು

ಸೀಸರನ ಆತ್ಮೀಯ ಮಿತ್ರನಾಗಿದ್ದ ಬ್ರೂಟಸ್ ಸಹ ತನ್ನ ಚೂರಿಯಿಂದ ಸೀಸರನ ತೊಂಡೆಸಂದಿಯ ಬಳಿ ಚುಚ್ಚಿದ. ಸೀಸರ್ ಅಲ್ಲೇ ಕುಸಿದುಬಿದ್ದು ಜೀವವನ್ನು ಬಿಟ್ಟ. ಜೂಲಿಯಸ್ ಸೀಸರನ ವೈದ್ಯ ಆಂಟೀಸ್ಟಿ ಯಸ್. ಇವನು ಸೀಸರನ ಮರಣೋತ್ತರ ಶವಪರೀಕ್ಷೆಯನ್ನು ನಡೆಸಿದ. ಸೀಸರನ ದೇಹದ ಮೇಲೆ ಒಟ್ಟು ೨೩ ತಿವಿದ ಗಾಯಗಳಿರುವುದನ್ನು ದಾಖಲಿಸಿದ.

Dr N Someshwara Column: ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಮಾಂಸಾಹಾರಿ ಪ್ರಾಣಿಯೊಂದು ಮರದ ತೊಗಟೆಯನ್ನು ತಿನ್ನುತ್ತಿದೆಯೆಂದರೆ?! ಇದರಲ್ಲಿ ಎನೋ ವಿಶೇಷತೆಯಿರಬೇಕೆಂದು ಆ ಮರದ ತೊಗಟೆಯನ್ನು ಕಿತ್ತು ತನ್ನ ಚರ್ಮದ ಚೀಲದಲ್ಲಿ ತುಂಬಿಕೊಂಡ. ಆ ನಾಯಿಯನ್ನು ಎತ್ತಿಕೊಂಡು ತನ್ನ ಗುಹೆಗೆ ಬಂದ. ಸಂಜೆಯ ವೇಳೆಗೆ ನಾಯಿಯು ಸುಧಾರಿಸಿ ಕೊಂಡಿತ್ತು.

Dr N Someshwara Column: ರಾಮನು ಕಾಡಿಗೆ ಹೋದ ಮೇಲೆ ದಶರಥನೇಕೆ ಸತ್ತ ?

ರಾಮನು ಕಾಡಿಗೆ ಹೋದ ಮೇಲೆ ದಶರಥನೇಕೆ ಸತ್ತ ?

ನಿನ್ನ ಜೊತೆಯಲ್ಲಿ ನಾನೂ ಕಾಡಿಗೆ ಬಂದೆ ಎನ್ನುತ್ತಾ ಹಾಸಿಗೆಯಿಂದ ಮೇಲಕ್ಕೆದ್ದ ದಶರಥ. ಸಾವಿರ ಸಿಡಿಲುಗಳು ಒಮ್ಮೆಲೆ ಸಿಡಿದಂತೆ ಆಯಿತು. ತಕ್ಷಣವೇ ತನ್ನ ಹೃದಯವನ್ನು ಹಿಡಿದು ಕೊಂಡು ರಾಮಾ.... ಎಂದು ಕಿರುಚುತ್ತಾ ದಶರಥನು ಹಾಸಿಗೆಯ ಮೇಲೆ ಕುಸಿದು ಬಿದ್ದ. ಅಯ್ಯೋ... ಸ್ವಾಮಿ! ಏನಾಯಿತು ನಿಮಗೆ ಎಂದು ಕೌಸಲ್ಯೆಯು ದಶರಥನ ಬಳಿ ಬರುವಷ್ಟರಲ್ಲಿ, ದಶರಥನ ಜೀವವು ದೇಹವನ್ನು ಬಿಟ್ಟು ಹೊರಟು ಹೋಗಿತ್ತು.

Dr N Someshwara Column: ವೈದ್ಯವಿಜ್ಞಾನದ ಮಹಾನ್‌ ಉಪಕರಣ: ಇಂಜಕ್ಷನ್‌ ಸಿರಿಂಜ್

ವೈದ್ಯವಿಜ್ಞಾನದ ಮಹಾನ್‌ ಉಪಕರಣ: ಇಂಜಕ್ಷನ್‌ ಸಿರಿಂಜ್

‘ಸಿರಿಂಜ್’ ಎಂಬ ಶಬ್ದದ ಮೂಲ ಗ್ರೀಕ್ ಭಾಷೆಯ ‘ಸಿರಿಂಕ್ಸ್’ ಎಂಬ ಶಬ್ದ. ಇದನ್ನು ಕೊಳಲಿನಂಥ ಗಾಳಿವಾದ್ಯ ಎನ್ನಬಹುದು. ಇದು ಲ್ಯಾಟಿನ್ ಭಾಷೆಗೆ ಬಂದು ‘ಸಿರಿಂಗ’ ಎಂದಾಯಿತು. ಆನಂತರ ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ‘ಸಿರಿಂಜ್’ ಎಂದು ಜನಪ್ರಿಯವಾಯಿತು. ಕನ್ನಡದಲ್ಲೂ ಇದನ್ನು ಸಿರಿಂಜ್ ಎನ್ನುತ್ತೇವೆ.

Dr N Someshwara Column: ಮಿಲಿಟರಿಯಿಂದ ತಾಯಂದಿರ ಆರೋಗ್ಯದವರೆಗೆ...

ಮಿಲಿಟರಿಯಿಂದ ತಾಯಂದಿರ ಆರೋಗ್ಯದವರೆಗೆ...

ಶಬ್ದ ಪ್ರಪಂಚವು ವಿಶಾಲವಾದದ್ದು. ನಾವು ಕೇಳುವ ಶಬ್ದಗಳ ವ್ಯಾಪ್ತಿ 20 ಹರ್ಟ್ಜ್ ಇಂದ 20000 ಹರ್ಟ್ಜ್‌ವರೆಗೆ ಮಾತ್ರ. 20 ಹರ್ಟ್ಜ್‌ಗಿಂತಲೂ ಕಡಿಮೆ ವ್ಯಾಪ್ತಿಯ ಶಬ್ದದ ಅಲೆಗಳಿಗೆ ‘ಅವಶ್ರವಣ ಅಲೆಗಳು’ ಅಥವಾ ‘ಇನ್- ಸೌಂಡ್’ ಎಂದು ಹೆಸರು. ಆನೆ, ಜಿರಾಫೆ, ಹಿಪ್ಪೋಪೊಟೋಮಸ್ ಮುಂತಾದ ಪ್ರಾಣಿಗಳು ಈ ವ್ಯಾಪ್ತಿಯಲ್ಲಿ ನಡೆಸುವ ಸಂವಹನವನ್ನು ನಾವು ಕೇಳಲಾರೆವು.

Dr N Someshwara Column: ಜೀವಗಳನ್ನು ಉಳಿಸುತ್ತಿರುವ ಪ್ರೇಮಪ್ರಸಂಗದ ಫಲ

ಜೀವಗಳನ್ನು ಉಳಿಸುತ್ತಿರುವ ಪ್ರೇಮಪ್ರಸಂಗದ ಫಲ

ಶಸ್ತ್ರವೈದ್ಯರು ತಮ್ಮ ಕೈಗಳನ್ನು, ಉಪಕರಣಗಳನ್ನು ಹಾಗೂ ಶಸ್ತ್ರಚಿಕಿತ್ಸಾ ಅವಧಿಯಲ್ಲಿ ನೂರಕ್ಕೆ ನೂರರಷ್ಟು ಕ್ರಿಮಿರಾಹಿತ್ಯ ಪರಿಸರ (ಏಸೆಪ್ಟಿಕ್ ಕಂಡೀಷನ್) ವನ್ನು ಪರಿಪಾಲಿಸಬೇಕು. ಅಕಸ್ಮಾತ್ ಎಲ್ಲಾದರೂ ದೋಷವುಂಟಾಗಿ ಸೋಂಕು ತಲೆದೋರಿದರೆ, ಆ ಸೋಂಕನ್ನು ಸಕಾಲದಲ್ಲಿ ಪರಿಣಾಮ ಕಾರಿಯಾಗಿ ನಿಗ್ರಹಿಸಲು ಸೂಕ್ತ ಪ್ರಬಲ ಪ್ರತಿಜೈವಿಕ ಔಷಧಿಗಳು ಇರಬೇಕು.

D‌r N Someshwara Column: ವೈದ್ಯ ವಿಜ್ಞಾನದ ಮುಂಗೋಳಿ: ಇಮ್‌ ಹೋಟೆಪ್

ವೈದ್ಯ ವಿಜ್ಞಾನದ ಮುಂಗೋಳಿ: ಇಮ್‌ ಹೋಟೆಪ್

ಸಕ್ಕಾರದಲ್ಲಿರುವ ಜೋಸರ್ ಮೆಟ್ಟಿಲಿನ ಪಿರಮಿಡ್ಡಿನ ವಾಸ್ತುಶಿಲ್ಪಿಯಾಗಿದ್ದ. ಇವುಗಳ ಜತೆಯಲ್ಲಿ ಇವನು ವಿದ್ವಾಂಸನಾಗಿದ್ದ, ಪುರೋಹಿತನಾಗಿದ್ದ ಹಾಗೂ ಸಮಸ್ತ ದೈಹಿಕ-ಮಾನಸಿಕ ಬೇನೆಗಳಿಗೆ ಉಪಶಮನವನ್ನು ನೀಡಬಲ್ಲವನಾಗಿದ್ದ. ‘ಇಮ್‌ಹೋಟೆಪ್’ ಎಂದರೆ ‘ಶಾಂತಿಯ ಜತೆಯಲ್ಲಿ ಬರು ವವನು’ ಎಂಬ ಅರ್ಥವನ್ನು ಧ್ವನಿಸುತ್ತಿತ್ತು.

Dr N Someshwara Column: ಬಿಳಿಚರ್ಮವೇ ಶ್ರೇಷ್ಠ ಎಂಬ ವ್ಯಸನವನ್ನು ಕಳೆದ ಅಧ್ಯಯನ

ಬಿಳಿಚರ್ಮವೇ ಶ್ರೇಷ್ಠ ಎಂಬ ವ್ಯಸನವನ್ನು ಕಳೆದ ಅಧ್ಯಯನ

ಮುರ್ರೆ ದ್ವೀಪದಲ್ಲಿದ್ದ ಪಾಲಿನೇಷಿಯನ್ನರ ಬಣ್ಣವನ್ನು ತಿಳಿಯುವ ಸಾಮರ್ಥ್ಯದ ಪ್ರಯೋಗವನ್ನು ಮಾಡಿದರು. ವಿಲಿಯಮ್ ಹಾಲ್ಸ್ ರಿವರ್ಸ್, ಸೂಕ್ಷ್ಮ ವರ್ಣವೈವಿಧ್ಯಗಳಿದ್ದ ನೀಲಿ ಮತ್ತು ಹಸಿರು ಬಣ್ಣಗಳ ಉಣ್ಣೆಯ ದಾರವನ್ನು ದ್ವೀಪವಾಸಿಗಳಿಗೆ ನೀಡಿದ. ಅವರು ಯುರೋಪಿಯನ್ನರಿಗಿಂತಲೂ ಹೆಚ್ಚು ನಿಖರವಾಗಿ ವಿವಿಧ ಬಣ್ಣಗಳ ಸೂಕ್ಷ್ಮ ಛಾಯಾ ವ್ಯತ್ಯಾಸಗಳನ್ನು ಗುರುತಿಸಿದರು.

Dr N Someshwara Column: ಯೋಜಿತ ಸಿ-ಸೆಕ್ಷನ್‌ ಮಾಡದಿರುವುದೇ ನಮಗಿರುವ ಏಕೈಕ ದಾರಿ

ಯೋಜಿತ ಸಿ-ಸೆಕ್ಷನ್‌ ಮಾಡದಿರುವುದೇ ನಮಗಿರುವ ಏಕೈಕ ದಾರಿ

‘ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹುಟ್ಟಿದ ಮಕ್ಕಳಿಗೆ ಬಾಲ್ಯದ ರಕ್ತಾರ್ಬುದ ಅಥವಾ ಚೈಲ್ಡ್‌ಹುಡ್ ಲ್ಯೂಕೀಮಿಯ ಬರುವ ಸಾಧ್ಯತೆಯು ಹೆಚ್ಚಿರುತ್ತದೆ’ ಎನ್ನುವುದು ಈ ಲೇಖನದ ಒಂದು ಸಾಲಿನ ಸಾರಾಂಶ. ಈ ಸಂಶೋಧನೆಯು ವಿಶ್ವವಿಖ್ಯಾತ ಕರೋಲಿನ್ಸ್ಕ್ ಸಂಸ್ಥೆಯಲ್ಲಿ ನಡೆದಿದೆ. ಇದರ ನೇತೃತ್ವ ವನ್ನು ಕ್ರಿಸ್ಟಿನ-ಇವ್ಮಾರ್ಫಿಯ ಕಂಪಿತ್ಸಿ ಹಾಗೂ ತಂಡದವರು ನಿರ್ವಹಿಸಿದ್ದಾರೆ.

Dr N Someshwara Column: ಸುಮಸುಮ್ಮನೇ ಗರ್ಭಾಶಯವನ್ನು ಛೇದಿಸುತ್ತಾರಂತೆ !...ಹೌದಾ ?

ಸುಮಸುಮ್ಮನೇ ಗರ್ಭಾಶಯವನ್ನು ಛೇದಿಸುತ್ತಾರಂತೆ !...ಹೌದಾ ?

ಗರ್ಭಾಶಯದಲ್ಲಿ ಭ್ರೂಣವು ನಾಟಿ, ಪರಿಪೂರ್ಣ ಬೆಳೆದು, ಸುರಕ್ಷಿತವಾಗಿ ಹೊರಬರುವವರೆಗೂ ಗರ್ಭವೇ ಮಗುವಿನ ಮನೆ. ಈ ಜೀವಜಗತ್ತಿನಲ್ಲಿ ಸಂತಾನವರ್ಧನೆಗೆ ಗರ್ಭಾಶಯ ಅತ್ಯಗತ್ಯವಾದ ಅಂಗ. ಇಂಥ ಅಂಗವನ್ನು ಕೆಲವು ಸಂದರ್ಭಗಳಲ್ಲಿ ಛೇದಿಸಬೇಕಾಗುತ್ತದೆ. ಗರ್ಭಾಶಯದಲ್ಲಿ ಗಡ್ಡೆಗಳು ಬೆಳೆದಾಗ, ಅನಿಯಂತ್ರಿತ ಹಾಗೂ ಅಸಹಜ ರಕ್ತಸ್ರಾವವಾದಾಗ, ಕಿಬ್ಬೊಟ್ಟೆಯಲ್ಲಿ ಸಹಿಸಲಸಾಧ್ಯವಾದ ಸೋಂಕು-ನೋವು ಉಂಟಾದಾಗ, ಗರ್ಭಕೋಶವು ಜಾರಿದಾಗ ಹಾಗೂ ಗರ್ಭಾಶಯದ ಒಳಪೊರೆಯು ಎಡೆತಪ್ಪಿ ಬೆಳೆದಾಗ (ಎಂಡೋಮೆಟ್ರಿಯೋಸಿಸ್) ಗರ್ಭಾಶಯ ಛೇದನವನ್ನು ಮಾಡಬೇಕಾಗಿ ಬರಬಹುದು.

Dr N Someshwara Column: ಮಮ್ಮಿಗಳಿಂದ ಅಸ್ಥಿಭಂಗವನ್ನು ಗುಣಪಡಿಸುವವರೆಗೆ...

ಮಮ್ಮಿಗಳಿಂದ ಅಸ್ಥಿಭಂಗವನ್ನು ಗುಣಪಡಿಸುವವರೆಗೆ...

ಈಜಿಪ್ಷಿಯನ್ನರು ಪಿರಮಿಡ್ಡುಗಳ ಭಿತ್ತಿಯನ್ನು ರೂಪಿಸಲು ಇದೇ ಜಿಪ್ಸಮ್ ಅನ್ನು ಬಳಸುತ್ತಿದ್ದರು. ಜಗತ್ತಿನ ಪ್ರಥಮ ವೈದ್ಯ ಎಂದು ಹೆಸರಾದ ‘ಇಮ್‌ಹೋಟೆಪ್’ನ ಸಮಾಧಿಯಲ್ಲಿ, ಪಿಒಪಿಯಿಂದ ತಯಾ ರಿಸಿದ ಕೆಲವು ಪಾತ್ರೆಗಳು, ಕೆಲವು ಶಸವೈದ್ಯಕೀಯ ಉಪಕರಣಗಳು ಹಾಗೂ ಮಿಶ್ರಣಗಳು ದೊರೆತಿವೆ. ಕೆಲವು ಮಮ್ಮಿಗಳಲ್ಲಿರುವ ಮುರಿದ ಮೂಳೆಗಳು ಹದವಾಗಿ ಕೂಡಿಕೊಂಡಿರುವುದನ್ನು ನಾವು ನೋಡ ಬಹುದು.

Dr N Someswara Column: ಭೂಲೋಕದ ದೇವತೆಗಳೋ, ಯಮನ ಸೋದರರೋ ?

ಭೂಲೋಕದ ದೇವತೆಗಳೋ, ಯಮನ ಸೋದರರೋ ?

‘ಪವಿತ್ರ ವೃತ್ತಿ’, ‘ದೇವರಂತೆ ಜೀವ ಉಳಿಸುವವರು’, ‘ಧರ್ಮ, ಕರುಣೆ’ ಇತ್ಯಾದಿ ಪದಗಳಿಗೆ ಮೋಸ ಹೋಗಬೇಡಿ. ಇವು ಒಂದಾನೊಂದು ಕಾಲಕ್ಕೆ ಮಾತ್ರ ಸೂಕ್ತವಾಗಿದ್ದವು. ಇವತ್ತು ಆರ್ಥಿಕ, ಸಾಮಾ ಜಿಕ ಮತ್ತು ವೈದಕೀಯ ಪರಿಸ್ಥಿತಿಗಳು ಭಿನ್ನವಾಗಿವೆ. ಪ್ರಾಮಾಣಿಕರಾಗಿರಿ, ಆದರೆ ಸತ್ಯಾಂಶವನ್ನು ಒಪ್ಪಿಕೊಳ್ಳಿ.

Dr N Someshwara Column: ಸಾರ್ವಜನಿಕ ನೈರ್ಮಲ್ಯಕ್ಕೆ ಭಾಷ್ಯ ಬರೆದ ಬ್ರಾಡ್‌ ಸ್ಟ್ರೀಟ್‌ ಪಂಪ್‌

ಸಾರ್ವಜನಿಕ ನೈರ್ಮಲ್ಯಕ್ಕೆ ಭಾಷ್ಯ ಬರೆದ ಬ್ರಾಡ್‌ ಸ್ಟ್ರೀಟ್‌ ಪಂಪ್‌

ಲಂಡನ್ ನಗರದ ಸೋಹೋ ಬಡಾವಣೆ. ಆ ಬಡಾವಣೆಯಲ್ಲಿ ಬ್ರಾಡ್‌ಸ್ಟ್ರೀಟ್ (ಈಗ ಬ್ರಾಡ್‌ವಿಕ್ ಸ್ಟ್ರೀಟ್) ಎಂಬ ರಸ್ತೆ. ಅಲ್ಲಿತ್ತು ಒಂದು ಕೈಪಂಪ್. ಆ ಪಂಪಿನ ಕೈಹಿಡಿ ಅಥವಾ ಹ್ಯಾಂಡಲ್, ಲಂಡನ್ ನಗರದ ಆರೋಗ್ಯವನ್ನು ಸುಧಾರಿಸುವುದರಲ್ಲಿ ಮಾತ್ರವಲ್ಲ, ಇಡೀ ಆಧುನಿಕ ಪಿಡುಗು ವಿಜ್ಞಾನದ (ಎಪಿಡೆಮಿಯಾಲಜಿ) ಗತಿಯನ್ನು ಬದಲಿಸುವಲ್ಲಿ ಒಂದು ಮಹಾಪಾತ್ರವನ್ನು ವಹಿಸಿತು.

Dr N Someshwara Column: ಥೀಬ್ಸ್‌ ನಿಂದ ಹಸ್ತಿನಾವತಿಯವರೆಗೆ ಕಾಮ, ಪ್ರೇಮ ಮತ್ತು ಪ್ರೀತಿ !

ಥೀಬ್ಸ್‌ ನಿಂದ ಹಸ್ತಿನಾವತಿಯವರೆಗೆ ಕಾಮ, ಪ್ರೇಮ ಮತ್ತು ಪ್ರೀತಿ !

ಮನುಕುಲದಲ್ಲಿ ಒಳಸಂತಾನ ವರ್ಧನೆಯ ಪ್ರಮುಖ ಪ್ರಸ್ತಾಪವು, ಋಗ್ವೇದದ 10ನೆಯ ಮಂಡಲದ 10ನೆಯ ಮಂತ್ರದಲ್ಲಿ ಬರುತ್ತದೆ. ಸೂರ್ಯ ಮತ್ತು ಸಂಜ್ಞಾದೇವಿಗೆ ‘ಯಮ’ ಮತ್ತು ‘ಯಮಿ’ ಎಂಬ ಅವಳಿ ಮಕ್ಕಳು. ಇವರಿಬ್ಬರೂ ಭೂಮಿಯ ಮೇಲೆ ಹುಟ್ಟಿದ ಮೊದಲ ಮಾನವ ಜೋಡಿಗಳು. ಇಬ್ಬರೂ ವಯಸ್ಸಿಗೆ ಬಂದರು. ಆಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆಯ ಸಾರವು ಹೀಗಿದೆ: “ಸೋದರನೆ! ನಾವಿಬ್ಬರೂ ವಯಸ್ಸಿಗೆ ಬಂದಿದ್ದೇವೆ. ನನಗೆ ಸಂತಾನವರ್ಧನೆಯಲ್ಲಿ ತೊಡಗಿಕೊಳ್ಳುವ ಬಯಕೆ ಉಂಟಾಗಿದೆ. ಬಾ ನಾವಿಬ್ಬರೂ ಸಂಭೋಗಿಸೋಣ. ಮಕ್ಕಳನ್ನು ಪಡೆಯೋಣ" ಎನ್ನುತ್ತಾಳೆ.

Dr N Someshwara Column: ಜೀವಮಾನದ ಗುಟ್ಟುಗಳನ್ನು ರಟ್ಟು ಮಾಡುವ ಸತ್ಯಪ್ರೇರಕ ಮಿಶ್ರಣ

ಜೀವಮಾನದ ಗುಟ್ಟುಗಳನ್ನು ರಟ್ಟು ಮಾಡುವ ಸತ್ಯಪ್ರೇರಕ ಮಿಶ್ರಣ

ಸ್ಕೊಪಾಲಮಿನ್ ಒಂದು ಶಕ್ತಿಶಾಲಿಯಾದ ಆಲ್ಕಲಾಯ್ಡ್. ಹೆನ್ಬೇನ್, ಬೆಲ್ಲಡೊನ್ನ, ದತ್ತೂರಿ ಮುಂತಾದ ಗಿಡಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಮಾನವನ ಇತಿಹಾಸದಲ್ಲಿ, ಅವನೊಡನೆ ಜತೆಜತೆಯಾಗಿ ಹೆಜ್ಜೆಯನ್ನು ಹಾಕಿರುವ ಸ್ಕೊಪಾಲಮಿನ್ ನಾಟಿ ವೈದ್ಯರಿಗೆ, ಕಳ್ಳಕಾಕರಿಗೆ, ಮಂತ್ರವಾದಿಗಳಿಗೆ ಹಾಗೂ ಆಧುನಿಕ ವೈದ್ಯರಿಗೆ ತನ್ನ ದಶಾವತಾರಗಳನ್ನು ತೋರುತ್ತಾ ಬಂದಿದೆ.

Dr N Someshwara Column: ಬದುಕಿರುವವರನ್ನು ಝೂಂಬಿಗಳನ್ನಾಗಿಸುವ ಡೆವಿಲ್ಸ್‌ ಬ್ರೆತ್‌ !

ಬದುಕಿರುವವರನ್ನು ಝೂಂಬಿಗಳನ್ನಾಗಿಸುವ ಡೆವಿಲ್ಸ್‌ ಬ್ರೆತ್‌ !

“ನಾನು ನಿಮಗೆ ಒಂದೇ ಒಂದು ಡ್ರಿಂಕ್ ಕೊಡಿಸಲೇ" ಎಂದ. ಆಕೆಯು ಅವನನ್ನು ಉಪೇಕ್ಷಿಸಿದಳು. ಸರಿಯಿದ್ದ ತನ್ನ ಟೈಯನ್ನು ಮತ್ತೊಮ್ಮೆ ಸರಿಪಡಿಸಿಕೊಂಡು “ಪ್ಲೀಸ್..." ಎಂದ. ಅವನ ಕಡೆ ಕುಡಿ ನೋಟವನ್ನು ಬೀರಿ “ಓಕೇ... ಬಿಯರ್ ಪ್ಲೀಸ್" ಎಂದಳು. ಅವನು ಎದ್ದೆನೋ ಬಿದ್ದೆನೋ ಎಂದು ಎರಡು ಮಗ್ ಪೂರ್ಣ ಬಿಯರ್ ತಂದ. ಮಗ್ಗನ್ನು ಎತ್ತಿಕೊಂಡು ಚಿಯರ್ಸ್ ಎಂದ. ಅವಳೂ ಮಗ್ಗನ್ನು ಎತ್ತಿ ಕೊಂಡು ಚಿಯರ್ಸ್ ಹೇಳಿದಳು.

Dr N Someshwara Column: ಸಮ್ಮೋಹನಗೊಳಿಸಿ 300 ಶಸ್ತ್ರಚಿಕಿತ್ಸೆಗಳನ್ನು ಮಾಡಿದ !

ಸಮ್ಮೋಹನಗೊಳಿಸಿ 300 ಶಸ್ತ್ರಚಿಕಿತ್ಸೆಗಳನ್ನು ಮಾಡಿದ !

ಮೆಸ್ಮರ್ ನಡೆಸುತ್ತಿದ್ದ ಸಮ್ಮೋಹನವನ್ನು ಅಧ್ಯಯನ ಮಾಡಿದ ಇಸಡೈಲ್, 1845ರಲ್ಲಿ ಆಶ್ಚರ್ಯ ಕರ ಫಲಿತಾಂಶಗಳೊಡನೆ ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ. 300 ಶಸ್ತ್ರಚಿಕಿತ್ಸೆಗಳನ್ನು ತನ್ನ ಸಮ್ಮೋಹನದಿಂದ ನಡೆಸಿದ. ರೋಗಿಗಳಿಗೆ ಸ್ವಲ್ಪವೂ ನೋವಾಗಲಿಲ್ಲ. ರಕ್ತಸ್ರಾವವು ಕನಿಷ್ಠ ಪ್ರಮಾಣ ದಲ್ಲಿತ್ತು ಹಾಗೂ ರೋಗಿಗಳು ಸಾಂಪ್ರದಾಯಿಕ ಚಿಕಿತ್ಸಾ ಅವಽಗಿಂತ ತ್ವರಿತವಾಗಿ ಚೇತರಿಸಿ ಕೊಂಡರು.

Dr N Someshwara Column: ಕೋಪನ್‌ ಹೇಗನ್‌ ಹಿಪ್ನಾಸಿಸ್‌ ಡಬಲ್‌ ಮರ್ಡರ್‌ ಕೇಸ್‌

ಕೋಪನ್‌ ಹೇಗನ್‌ ಹಿಪ್ನಾಸಿಸ್‌ ಡಬಲ್‌ ಮರ್ಡರ್‌ ಕೇಸ್

ಡಬಲ್ ಮರ್ಡರ್ ಪ್ರಕರಣವು ಕೆಳಗಿನ ಎಲ್ಲ ನ್ಯಾಯಾಲಯಗಳಲ್ಲಿ ತೀರ್ಪನ್ನು ಕಾಣದೆ ಡ್ಯಾನಿಶ್ ಪರಮೋಚ್ಚ ನ್ಯಾಯಾಲಯಕ್ಕೆ ಹೋಯಿತು. ಅಲ್ಲಿ ಸುದೀರ್ಘ ವಿಚಾರಣೆಯು ನಡೆಯಿತು. ಕೊನೆಗೆ ನ್ಯಾಯಾಲಯವು ಈ ಕೆಳಕಂಡಂತೆ ತೀರ್ಪನ್ನು ನೀಡಿತು: ನೀಲ್ಸನ್ ಪ್ರಜ್ಞಾಪೂರ್ವಕವಾಗಿ ಹಾರ್ಡ್ರ ಪ್‌ನ ಮೇಲೆ ಸಂಮೋಹನವನ್ನು ಪ್ರಯೋಗಿಸಿ ಅವನನ್ನು ವಶಪಡಿಸಿಕೊಂಡಿದ್ದ. ವಶ್ಯಸುಪ್ತ ಸ್ಥಿತಿಯಲ್ಲಿ ಅವನಿಂದ ಬ್ಯಾಂಕ್ ದರೋಡೆ ಹಾಗೂ ಕೊಲೆಯನ್ನು ಮಾಡಿಸಿದ

Dr N Someshwara Column: ಅಲೆದಾಡುವ ಗರ್ಭಕೋಶ ಮತ್ತು ಮಾನಸಿಕ ಅನಾಥರು

ಅಲೆದಾಡುವ ಗರ್ಭಕೋಶ ಮತ್ತು ಮಾನಸಿಕ ಅನಾಥರು

ಹಿಸ್ಟೀರಿಯ, ಮನುಕುಲದ ಅತ್ಯಂತ ಹಳೆಯ ಕಾಯಿಲೆಗಳಲ್ಲಿ ಒಂದು. ಈಜಿಪ್ಷಿಯನ್ ನಾಗರಿಕತೆ ಯಿಂದ ಹಿಡಿದು 20ನೆಯ ಶತಮಾನದ ಆದಿಭಾಗದವರೆಗೆ ಜನರನ್ನು ಮೌಢ್ಯದಲ್ಲಿ ಮುಳುಗಿಸಿದ್ದ ಮಾನಸಿಕ ಸಮಸ್ಯೆ. ನಮ್ಮ ದೇಹ ಮತ್ತು ಮನಸ್ಸುಗಳ ನಡುವೆ ಇರುವ ಸಂಬಂಧ, ಇವೆರಡರ ಅಸ್ವಸ್ಥತೆ ಯಿಂದ ಬರುವ ಕಾಯಿಲೆಗಳು ಇವನ್ನು ನಾವು ಅರ್ಥ ಮಾಡಿಕೊಂಡಿಲ್ಲ.

Dr N Someshwara Column: ಹುಳುಗಳನ್ನು ಔಷಧವನ್ನಾಗಿ ಬಳಸಬಹುದೇ ?

ಹುಳುಗಳನ್ನು ಔಷಧವನ್ನಾಗಿ ಬಳಸಬಹುದೇ ?

ಹುಳುಗಳನ್ನು ಔಷಧವನ್ನಾಗಿ ಬಳಸಬಹುದೋ ಇಲ್ಲವೋ ಎನ್ನುವುದರ ಬಗ್ಗೆ ವಿಚಾರ ಮಾಡುವು ದಕ್ಕೆ ಮೊದಲು, ಕೆಲವು ಮೂಲ ಭೂತ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ವಾಸ್ತವ ದಲ್ಲಿ ನಮ್ಮ ದೇಹವೊಂದು ‘ಜ಼ೂ’ ಎನ್ನುವುದು ನಮಗೆ ತಿಳಿದಿಲ್ಲ. ನಾವು ಊಟ ಮಾಡಿದರೆ, ನಾವೊ ಬ್ಬರು ಮಾತ್ರ ಊಟವನ್ನು ಮಾಡುತ್ತಿಲ್ಲ, ನಮ್ಮ ಜತೆಯಲ್ಲಿ ಲಕ್ಷಕೋಟಿ (ಟ್ರಿಲಿಯನ್) ಗಟ್ಟಲೆ ಜೀವಿಗಳೂ ಊಟವನ್ನು ಮಾಡುತ್ತವೆ ಎಂದರೆ, ಅದು ಖಂಡಿತ ಅತಿಶಯೋಕ್ತಿಯಲ್ಲ

Dr N Someshwara Column: ಕ್ಷಯ ಚಿಕಿತ್ಸೆಯು ನಡೆದು ಬಂದ ದಾರಿ

ಕ್ಷಯ ಚಿಕಿತ್ಸೆಯು ನಡೆದು ಬಂದ ದಾರಿ

ಆಧುನಿಕ ವೈದ್ಯಕೀಯದಲ್ಲಿ ಆಲಿಸು ವಿಕೆ (ಆಸ್ಕಲ್ಟೇಶನ್) ಎಂಬ ಪರೀಕ್ಷಾ ಪದ್ಧತಿಯು ಜಾರಿಗೆ ಬಂದಿತು. ಸ್ಟೆಥೋಸ್ಕೋಪಿನ ಮೂಲಕ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಸ್ವರೂಪವನ್ನು ಆತ ಅಧ್ಯಯನ ಮಾಡಿದ. ಅವುಗಳಲ್ಲಿ ‘ಪಲ್ಮನರಿ ಥೈಸಿಸ್’ ಎಂದು ಹೆಸರಾಗಿದ್ದ ಕ್ಷಯವು ಮುಖ್ಯವಾಗಿತ್ತು.

Dr N Someshwara Column: ಮನೋಚಿಕಿತ್ಸೆಗೆ ಮಹಾ ತಿರುವನ್ನು ಕೊಟ್ಟ ಅನ್ನಾ ಓ

ಮನೋಚಿಕಿತ್ಸೆಗೆ ಮಹಾ ತಿರುವನ್ನು ಕೊಟ್ಟ ಅನ್ನಾ ಓ

ಜೋಸೆಫ್ ಬ್ರೂಯರ್ ಬೆರ್ಥಾಳ ಎಲ್ಲ ರೋಗಲಕ್ಷಣಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದ. ಬೆರ್ಥಾ ಒಳ್ಳೆಯ ಕಥೆಗಾರ್ತಿಯಾಗಿದ್ದಳು. ಆಕೆ ತನ್ನೆಲ್ಲ ಅನುಭವಗಳ ಕಥನವನ್ನು ಸ್ವಾರಸ್ಯವಾಗಿ ಹೇಳುತ್ತಿದ್ದಳು. ಹೀಗೆ ಆಕೆಯ ಹಲವು ಕಥೆಗಳನ್ನು ಕೇಳಿದ ಮೇಲೆ, ಬ್ರೂಯರ್ ಒಂದು ವಿಶೇಷ ಸಂಗತಿಯನ್ನು ಗಮನಿಸಿದ. ಆಕೆ ತನ್ನ ಬಾಲ್ಯದ ಕಹಿ ಘಟನೆಗಳನ್ನು/ನೋವನ್ನು/ಯಾರಲ್ಲೂ ಹೇಳಿಕೊಳ್ಳಲಾಗದ ತನ್ನ ಭಾವನೆ ಗಳನ್ನು ಬ್ರೂಯರ್ ಜತೆಯಲ್ಲಿ ಮುಕ್ತವಾಗಿ ಹಂಚಿಕೊಳ್ಳಲಾರಂಭಿಸಿದಳು. ಬೆರ್ಥಾ ಹೀಗೆ ತನ್ನ ಕಥನವನ್ನು ಹೇಳಿಕೊಂಡ ನಂತರ, ಆಕೆಯ ರೋಗಲಕ್ಷಣಗಳು ಕಡಿಮೆ ಯಾಗುತ್ತಿದ್ದವು.

Dr N Someshwara Column: ಎಂದೆಂದಿಗೂ ʼಮೌಗ್ಲಿʼ ಆಗದ ಅವೆರಾನಿನ ವಿಕ್ಟರ್‌

ಎಂದೆಂದಿಗೂ ʼಮೌಗ್ಲಿʼ ಆಗದ ಅವೆರಾನಿನ ವಿಕ್ಟರ್‌

ಮನುಷ್ಯರ ಮಕ್ಕಳು, ತಮ್ಮ ಹೆತ್ತವರಿಂದ ಹೇಗೋ ತಪ್ಪಿಸಿಕೊಂಡು ಕಾಡಿನಲ್ಲಿ ಪ್ರಾಣಿಗಳ ಸಂಪ ರ್ಕಕ್ಕೆ ಬರುತ್ತವೆ. ಪ್ರಾಣಿಗಳು ಮಕ್ಕಳನ್ನು ಕೊಲ್ಲದೆ ಕಾಪಾಡುತ್ತವೆ. ಆ ಮಗುವು ಪ್ರಾಣಿಗಳ ಜತೆಯಲ್ಲಿದ್ದು ಪ್ರಾಣಿಗಳ ಜೀವನವನ್ನೇ ರೂಢಿಸಿಕೊಳ್ಳುತ್ತವೆ. ಅಕಸ್ಮಾತ್ ಮನುಷ್ಯರ ಕೈಗೆ ಸಿಕ್ಕಿಬೀಳುತ್ತವೆ. ನಾನಾ ರೀತಿಯ ಕಷ್ಟಗಳಿಗೆ ಸಿಲುಕುತ್ತವೆ. ಇದು ಕೇವಲ ಕಥೆಯಲ್ಲ, ವಾಸ್ತವ.

Dr N Someshwara Column: ಓದಿದ್ದನ್ನು ನಾವು ಏಕೆ ಮರೆಯುತ್ತೇವೆ ?

ಓದಿದ್ದನ್ನು ನಾವು ಏಕೆ ಮರೆಯುತ್ತೇವೆ ?

ಆರಂಭದಲ್ಲಿ ಹಾಗೂ ಕೊನೆಯಲ್ಲಿ ಕಲಿತದ್ದು ನೆನಪಿನಲ್ಲಿ ಉಳಿಯುತ್ತವೆ, ಮಧ್ಯದಲ್ಲಿ ಕಲಿತ ದ್ದು ಮರೆತುಹೋಗುತ್ತದೆ. ಹೀಗಾಗದಿರಲು ನಾವು ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿ ಕೊಳ್ಳಬೇಕು. ವೇದ ವಿದ್ಯಾರ್ಥಿಗಳು ಮಂತ್ರಗಳನ್ನು ಮತ್ತೆ ಮತ್ತೆ ಕಲಿಯುತ್ತಾರೆ. ನೆನಪಿನಲ್ಲಿ ದ್ದರೂ, ಮಂತ್ರ ಪಠನವನ್ನು ಪುನರಾ ವರ್ತಿಸುತ್ತಾರೆ. ಹೀಗೆ ಕಲಿತದ್ದು ನೆನಪಿನಲ್ಲಿರುತ್ತದೆ.

Loading...