ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಡಾ. ಸಾಧನಾಶ್ರೀ ಪಿ,

columnist

drsadhanashree@gmail.com

ಡಾ. ಸಾಧನಾಶ್ರೀ ಪಿ, ಎಂ.ಡಿ. (ಆಯುರ್ವೇದ), ಒಬ್ಬ ವಿಶಿಷ್ಟ ಆಯುರ್ವೇದ ವೈದ್ಯೆ , ಪಂಚಕರ್ಮ ತಜ್ಞೆ ಮತ್ತು ಸಮಗ್ರ ಆರೋಗ್ಯ ತಜ್ಞೆ . 2017 ರಿಂದ ಬೆಂಗಳೂರಿನ ಆರೋಗ್ಯವರ್ಧಿನಿ ಆಯುರ್ವೇದಾಲಯದ ಸಂಸ್ಥಾಪಕ-ನಿರ್ದೇಶಕರಾಗಿ, ಅವರು ವಿಶ್ವಾದ್ಯಂತ ರೋಗಿಗಳಿಗೆ ಆರೋಗ್ಯ ಸಮಾಲೋಚನೆಗಳು ಮತ್ತು ವಿಶೇಷ ಪಂಚಕರ್ಮ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ. ಡಾ. ಸಾಧನ ಅವರು ಯೋಗ ತಜ್ಞರಾಗಿ ಪ್ರಸವಪೂರ್ವ ಮತ್ತು ಪ್ರಸವದ ನಂತರದ ಯೋಗ ಬೋಧಕರಾಗಿಯೂ ಪ್ರಮಾಣೀಕರಿಸಲ್ಪಟ್ಟಿದ್ದಾರೆ . ಇವರು ವಿಶ್ವವಾಣಿ ಪತ್ರಿಕೆಯ ಅಂಕಣಕಾರರಾಗಿದ್ದಾರೆ ಮತ್ತು ಭರತನಾಟ್ಯ ಕಲಾವಿದರಾಗಿದ್ದಾರೆ. ಇವರು ಸಾಧನ ಸಂಗಮ ನೃತ್ಯ ಕೇಂದ್ರವೆಂಬ ತಮ್ಮ ಸಂಸ್ಥೆಯಲ್ಲಿ ನೂರಾರು ಕಲಾಸಕ್ತರಿಗೆ ಭರತ ನಾಟ್ಯವನ್ನು ಹೇಳಿಕೊಡುತ್ತಿದ್ದಾರೆ. ಇವರು ಆಧುನಿಕ ಜೀವನಶೈಲಿಯ ಅಗತ್ಯತೆಗಳೊಂದಿಗೆ ಅಧಿಕೃತ ಆಯುರ್ವೇದ ತತ್ವಗಳನ್ನು ಸಂಯೋಜಿ ಚಿಕಿತ್ಸೆಯನ್ನು ನೀಡುತ್ತಾರೆ. ಇವರು ಪ್ರಿವೆಂಟಿವ್ ಮೆಡಿಸಿನ್, ಮಹಿಳೆಯರ ಆರೋಗ್ಯ, ರೋಗನಿರೋಧಕ ಚಿಕಿತ್ಸೆ, ಮಕ್ಕಳ ಆರೈಕೆ, ಮಾನಸಿಕ ಯೋಗಕ್ಷೇಮ, ಜೀವನಶೈಲಿ ಮತ್ತು ದಿನಚರಿಗಳಲ್ಲಿ ಪರಿಣಿತಿ ಹೊಂದ್ದಿದ್ದಾರೆ. ಇವರು ಕಳೆದ ೨ ವರ್ಷಗಳಿಂದ ಸತತವಾಗಿ ಪ್ರತಿ ತಿಂಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ಹಳ್ಳಿ ಪ್ರದೇಶಗಳಲ್ಲಿ ಆಯೋಜಿಸುತ್ತಾ ಬಂದಿದ್ದಾರೆ ಮತ್ತು ಪಾಡ್ಕಾಸ್ಟ್ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಆಯುರ್ವೇದದ ಜಾಗತಿಕ ಜಾಗೃತಿಯ ಬಗ್ಗೆ ಶ್ರಮಿಸುತ್ತಿದ್ದಾರೆ. ಡಾ. ಸಾಧನಾ ಅವರು ಪಂಚಕರ್ಮದಲ್ಲಿ ಸ್ನಾತಕೋತ್ತರ ಎಂ.ಡಿ ಪರೀಕ್ಷೆಯಲ್ಲಿ (ಕರ್ನಾಟಕದಲ್ಲಿ 2 ನೇ ರ್ಯಾಂಕ್) ಮತ್ತು ಬಿ.ಎ.ಎಂ.ಎಸ್. ಶೈಕ್ಷಣಿಕ ಶ್ರೇಷ್ಠತೆಗಾಗಿ ಪ್ರತಿಷ್ಠಿತ ಜೀವಕ ಪ್ರಶಸ್ತಿಯನ್ನು ತಮ್ಮದಾ ಗಿಸಿಕೊಂಡಿದ್ದಾರೆ.ಅವರು ಭಾರತೀಯ ರಾಯಭಾರ ಕಚೇರಿ, ವಿಯೆಟ್ನಾಂ ಮತ್ತು ಭಾರತದಲ್ಲಿನ ರಾಷ್ಟ್ರೀಯ ಯುವ ಉತ್ಸವಗಳಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆಯುರ್ವೇದವನ್ನು ಪ್ರತಿನಿಧಿಸಿದ್ದಾರೆ. ಐಐಟಿ-ದೆಹಲಿ ಮತ್ತು ಆರ್ಬಿಐ-ಚೆನ್ನೈನಲ್ಲಿ , ರೋಟರಿ ಕ್ಲಬ್- ಶಿಮ್ಲ, ಕೆ ಎಲ್ ಯೂನಿವರ್ಸಿಟಿ- ತೆಲಂಗಾಣ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಹೋಲಿಸ್ಟಿಕ್ ಹೆಲ್ತ್ ಕಾರ್ಯಾಗಾರ ಗಳನ್ನು ನಿರ್ವಹಿಸುವುದು, ಗೌರವಾನ್ವಿತ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡುವುದು ಮತ್ತು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಪ್ರೇರಕ ಉಪನ್ಯಾಸಗಳನ್ನು ಒಳಗೊಂಡಂತೆ ಅವರು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಇವರಿಗೆ ಆರ್ಯಭಟ ಅಂತಾ ರಾಷ್ಟ್ರೀಯ ಯುವ ಪ್ರಶಸ್ತಿಯೂ ಲಭಿಸಿದೆ.

Articles
Dr Sadhanashree Column: ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

ಆಯುರ್ವೇದವು ಸ್ವಾಸ್ಥ್ಯವನ್ನು ಕೇವಲ ರೋಗವಿಲ್ಲದ ಸ್ಥಿತಿಯಾಗಿ ಅಷ್ಟೇ ಕಾಣದೆ, ಕಾಲಕ್ಕೆ ಹೊಂದಿ ಕೊಂಡ ಜೀವನಶೈಲಿಯ ಫಲವಾಗಿ ನೋಡುತ್ತದೆ. ದಿನಚರ್ಯೆ ಮತ್ತು ಋತುಚರ್ಯೆಯಂತೆ ರಾತ್ರಿ ಚರ್ಯೆ ಕೂಡ ಆಯುರ್ವೇದದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಇಂದಿನ ಜೀವನಶೈಲಿಯಲ್ಲಿ ತಡರಾತ್ರಿ ಊಟ, ನಿದ್ರಾಭಂಗ, ಮೊಬೈಲ-ಟಿವಿ-ಲ್ಯಾಪ್‌ಟಾಪ್ ಬಳಕೆ, ಅಸ್ಥಿರ ಮನಸ್ಥಿತಿ ಇವೆಲ್ಲವೂ ರಾತ್ರಿ ಚರ್ಯೆಯ ಸಹಜ ಕ್ರಮವನ್ನು ಭಂಗಗೊಳಿಸುತ್ತಿವೆ.

Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು

Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು

ಆಯುರ್ವೇದದ ತ್ರಿಫಲಾ ನೀರು, ಅಭ್ಯಂಗ ಸ್ನಾನ ಮತ್ತು ಪಿತ್ತಶಾಮಕ ಆಹಾರ ಕ್ರಮಗಳು ತೊಂದರೆ ಯನ್ನು ಹತೋಟಿಗೆ ತಂದವು. ೪೦ ದಿನಗಳಲ್ಲಿ ತುರಿಕೆ ಸಂಪೂರ್ಣವಾಗಿ ನಿಂತು ಚರ್ಮ ಶಾಂತ ವಾಯಿತು. ಮಾಲಿನ್ಯದಿಂದ ಉಂಟಾಗುವ ರಕ್ತದುಷ್ಟಿಗೆ ಸರಳ ಕ್ರಮಗಳೇ ಪರಿಣಾಮಕಾರಿ ಯೆಂದು ಆಕೆ ಅರಿತುಕೊಂಡಳು.

Dr Sadhanashree Column: ಈ ಆರು ಬಗೆಯ ತರಕಾರಿಗಳ ಬಗ್ಗೆ ಬಲ್ಲಿರಾ ?

Dr Sadhanashree Column: ಈ ಆರು ಬಗೆಯ ತರಕಾರಿಗಳ ಬಗ್ಗೆ ಬಲ್ಲಿರಾ ?

ಆಯುರ್ವೇದದ ‘ಭಾವಪ್ರಕಾಶ ನಿಘಂಟು’ ಎಂಬ ಗ್ರಂಥವು ತರಕಾರಿಗಳನ್ನು ಆರು ಮುಖ್ಯ ವರ್ಗ ಗಳಾಗಿ ವಿಂಗಡಿಸುತ್ತದೆ- ಪತ್ರ, ಪುಷ್ಪ, ಫಲ, ನಾಲ, ಕಂದ ಮತ್ತು ಸಂಸ್ವೇದಜ. ಪ್ರತಿಯೊಂದು ವರ್ಗಕ್ಕೂ ತನ್ನದೇ ಆದ ಹಿತ-ಅನಿಷ್ಟ ಗುಣಗಳಿವೆ. ಸರಿಯಾದ ರೀತಿಯಲ್ಲಿ ಸಂಸ್ಕರಿಸಿದ ತರಕಾರಿಯು ಔಷಧ ವಾಗುತ್ತದೆ; ತಪ್ಪಾಗಿ ಬಳಸಿದರೆ ಅದು ದೋಷಗಳನ್ನು ಉತ್ತೇಜಿಸಿ ರೋಗಕ್ಕೆ ಕಾರಣವಾಗುತ್ತದೆ.

Dr Sadhanashree Column: ಆಯುರ್ವೇದ ಹೇಳುವ ಕಿವಿಗಳ ಕಾಳಜಿ

Dr Sadhanashree Column: ಆಯುರ್ವೇದ ಹೇಳುವ ಕಿವಿಗಳ ಕಾಳಜಿ

ಕಿವಿ ಮತ್ತು ವಾತದೋಷ ನಮ್ಮ ದೇಹದಲ್ಲಿ ಕಿವಿಗಳು ಬಹು ಮಹತ್ವದ ಸ್ಥಾನ ಹೊಂದಿವೆ. ಮಾತು ಗಳನ್ನು ಆಲಿಸುವುದರ ಜತೆಗೆ ಸುತ್ತಮುತ್ತಲ ಸದ್ದು-ನಾದ ಗಳನ್ನು ಗ್ರಹಿಸುವ ಮೂಲಕ ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕಿವಿಗಳ ಪಾತ್ರ ಅಪಾರ. ಇಂದಿನ ಯುಗದಲ್ಲಿ ಮೊಬೈಲ, ಇಯರ್ ಫೋನ್, ಜೋರಾದ ಸಂಗೀತ, ಶಬ್ದ ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿ- ಇವುಗಳಿಂದ ಕಿವಿಯ ಸಂಬಂಧಿ ಸಮಸ್ಯೆಗಳು ಎಲ್ಲ ವಯೋಮಾನ ದವರಲ್ಲೂ ಹೆಚ್ಚುತ್ತಿವೆ.

Dr Sadhanashree Column: ಆರೋಗ್ಯದಲ್ಲಿ ವೈಜ್ಞಾನಿಕತೆ ಎಂದರೆ- ವೈಯಕ್ತಿಕತೆ !

ಆರೋಗ್ಯದಲ್ಲಿ ವೈಜ್ಞಾನಿಕತೆ ಎಂದರೆ- ವೈಯಕ್ತಿಕತೆ !

ಇಂದಿನ ಹೆಲ್ತ್ ಇನ್‌ ಫ್ಲ್ಯೂಯೆನ್ಸರ್‌ಗಳಿಂದ ಕೇಳಲಿಕ್ಕೆ ಸಿಗುವ ಸಾಮಾನ್ಯ ಸಲಹೆಗಳು: ದಿನಕ್ಕೆ ೪-೫ ಲೀಟರ್ ನೀರು ಕುಡಿಯಿರಿ, ಪ್ರತಿದಿನ 10000 ಹೆಜ್ಜೆಗಳು ನಡೆಯಿರಿ, ದಿನವೂ ಆಪಲ್ ಸೈಡರ್ ವಿನೆಗರ್ ಸೇವಿಸಿ, ಹಸಿ ಮೊಳಕೆಯ ನಿತ್ಯಸೇವನೆ ಇರಲಿ, ಆಹಾರದಲ್ಲಿ ಹೆಚ್ಚಾಗಿ ಪ್ರೋಟೀನ್ ಇರಲಿ ಇತ್ಯಾದಿ- ಇವೆಲ್ಲವೂ ವೈಜ್ಞಾನಿಕ ಎನಿಸಿದರೂ, ಪ್ರತಿಯೊಬ್ಬ ರಿಗೂ ಸೂಕ್ತ ಎನ್ನಲಾಗುವುದಿಲ್ಲ.

Dr Sadhanashree Column: ಆರೋಗ್ಯವನ್ನು ಗರಿಷ್ಠಗೊಳಿಸುವ ಕಾಲವಿದು

Dr Sadhanashree Column: ಆರೋಗ್ಯವನ್ನು ಗರಿಷ್ಠಗೊಳಿಸುವ ಕಾಲವಿದು

ಹೇಮಂತ ಋತುವು ಆರೋಗ್ಯದ ದೃಷ್ಟಿಯಿಂದ ಮಹತ್ತರವಾದದ್ದು. ಇದು ದೇಹಬಲವು ಗರಿಷ್ಠವಾಗಿರುವ ಕಾಲ ಎನ್ನುತ್ತದೆ ಆಯುರ್ವೇದ. ಪ್ರಕೃತಿಯ ಶೀತಲತೆಯ ಪರಿಣಾಮ ವಾಗಿ ಆಂತರಿಕ ಜಠರಾಗ್ನಿಯು (ಜೀರ್ಣಶಕ್ತಿ) ಅತ್ಯಂತ ಬಲಿಷ್ಠವಾಗುತ್ತದೆ. ಆದ್ದರಿಂದ ದೇಹಕ್ಕೆ ಹೆಚ್ಚಿನ ಆಹಾರ ಬೇಕಾಗುತ್ತದೆ. ಈ ಕಾಲದಲ್ಲಿ ಸೂಕ್ತ ಆಹಾರವನ್ನು ಕೊಟ್ಟರೆ ದೇಹದ ರಸ ಧಾತುವು ಸಮೃದ್ಧವಾಗಿ ರೂಪಗೊಂಡು ಆರೋಗ್ಯವು ಉತ್ತಮವಾಗುತ್ತದೆ.

Dr Sadhanashree Column: ಅಮೃತ ಸಮಾನವೀ ಆಚಾರ ರಸಾಯನ...

ಅಮೃತ ಸಮಾನವೀ ಆಚಾರ ರಸಾಯನ...

ನಿತ್ಯವೂ ಜಪ ಮಾಡುವುದು ರಸಾಯನದ ಒಂದು ಮುಖ್ಯವಾದ ತತ್ವ. ‘ಜಪ’ಎಂದರೆ ಯಾವುದೋ ವಿಷಯದ, ಸರಿಯಾದ ಸತತವಾದ ಹೇಳುವಿಕೆ ಎನ್ನಬಹುದಾದರೂ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಏಕಾಗ್ರತೆಯಿಂದ ವಿಧಿಪೂರ್ವಕವಾಗಿ ಆ ಕಾರ್ಯವನ್ನು ಸಂಪನ್ನಗೊಳಿಸುವುದು ಎಂಬುದು ಇದರ ಸಂಪೂರ್ಣ ಅರ್ಥ. ಇದೇ ಯೋಗ , ಇದೇ ರಸಾಯನ!

Dr Sadhanashree Column: ಹೇಮಂತದ ಧಾವಂತ: ಮುಗ್ಧ ಮನಸು, ಸ್ನಿಗ್ಧ ತಿನಿಸು

Dr Sadhanashree Column: ಹೇಮಂತದ ಧಾವಂತ: ಮುಗ್ಧ ಮನಸು, ಸ್ನಿಗ್ಧ ತಿನಿಸು

ಪ್ರಕೃತಿಮಾತೆಯ ಹೊಸ ರೂಪವನ್ನು ನೋಡಲು ನಾವೆಲ್ಲರೂ ಸಿದ್ಧರಾಗೋಣ. ಅರೆ, ಏನಪ್ಪಾ ಇದು ಎಂದು ಯೋಚಿಸುತ್ತಿದ್ದೀರಾ? ಪ್ರಕೃತಿಯಲ್ಲಿ ಶರತ್ ಋತುವು ಕಳೆದು ಈಗ ಹೇಮಂತ ಋತು ಪ್ರಾರಂಭ ವಾಗುವ ಕಾಲ. ಹೇಮಂತ ಋತು ಎಂದರೆ ಚಳಿಗಾಲದ ಆಗಮನ. ಈ ಸಮಯದಲ್ಲಿ ಹೊರಗಿನ ಶೀತಲತೆ ಯ ಪ್ರಭಾವದಿಂದ ನಮ್ಮ ದೇಹದಲ್ಲಿ ಅಗ್ನಿಯು ಉತ್ತೇಜನಗೊಳ್ಳುತ್ತದೆ.

Dr Sadhanashree Column: ಚರ್ಮದ ಕಾಂತಿಯೆಂದರೆ ಮನಸ್ಸಿನ ಶಾಂತಿ

ಚರ್ಮದ ಕಾಂತಿಯೆಂದರೆ ಮನಸ್ಸಿನ ಶಾಂತಿ

ಸ್ವಸ್ಥಸ್ಯ ಸ್ವಾಸ್ಥ್ಯರಕ್ಷಣಂ ಆತುರಸ್ಯ ವಿಕಾರಪ್ರ ಶಮನಂ ಚ’ ಎಂಬ ಆಯುರ್ವೇದದ ಮೂಲ ತತ್ತ್ವವು ಸ್ವಾಸ್ಥ್ಯದ ರಕ್ಷಣೆಯನ್ನೂ ಹಾಗೂ ರೋಗಗಳ ನಿವಾರಣೆಯನ್ನೂ ಒಟ್ಟಾಗಿ ನೋಡುತ್ತದೆ. ಮಾನವ ಶರೀರದ ಅತ್ಯಂತ ದೊಡ್ಡ ಅಂಗವಾದ ಚರ್ಮವು ದೇಹದ ಒಳಗಿನ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿ ಎಂದರೆ ತಪ್ಪಾಗಲಾರದು. ಆಯುರ್ವೇದದಲ್ಲಿ ಚರ್ಮರೋಗಗಳನ್ನು ‘ಕುಷ್ಠ’ ಎಂಬ ಸಾಮಾನ್ಯ ಶೀರ್ಷಿಕೆಯಡಿಯಲ್ಲಿ ವಿವರಿಸಲಾಗಿದೆ.

Dr Sadhanashree Column: ಮಲ್ನಾಡ್‌ ಅಡಿಕೆ ಮೈಸೂರ್‌ ವೀಳ್ಯದೆಲೆ ಬೆರೆತರೆ ಕೆಂಪು, ಆದರೆ..

ಮಲ್ನಾಡ್‌ ಅಡಿಕೆ ಮೈಸೂರ್‌ ವೀಳ್ಯದೆಲೆ ಬೆರೆತರೆ ಕೆಂಪು, ಆದರೆ..

ಸ್ಕಂದ ಪುರಾಣದಲ್ಲಿ ಹೇಳಿರುವಂತೆ, ಶಿವ ಮತ್ತು ಪಾರ್ವತಿಯರು ಮೊದಲಿಗೆ ಕೈಲಾಸದಲ್ಲಿ ಈ ನಾಗವಲ್ಲಿ ಎಲೆಯನ್ನು ಬೆಳೆಸಿ, ನಂತರ ಅದನ್ನು ಶಿವನಿಗೆ ಅತ್ಯಂತ ಪ್ರಿಯವಾದ ಕಾಶಿಗೆ ತಂದರಂತೆ. ಇದೇ ಪುರಾಣದ ಇನ್ನೊಂದು ಪ್ರಕರಣದಲ್ಲಿ ಉಲ್ಲೇಖಿಸಿರುವಂತೆ ಈ ವೀಳ್ಯದೆಲೆಯೊಳಗೆ ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗಿದೆ. ಈ ಎಲೆಯ ಹೊರಮುಖದಲ್ಲಿ ಶಿವ ಮತ್ತು ಕಾಮದೇವರು ನೆಲೆಸಿದ್ದರೆ, ಇದರ ಎಡಭಾಗದಲ್ಲಿ ಪಾರ್ವತಿ ಮತ್ತು ಮಾಂಗಲ್ಯ ದೇವಿಯರು ವಾಸಿಸುತ್ತಾರಂತೆ.

Dr Sadhanashree Column: ನವರಾತ್ರಿಯ ಶಕ್ತಿ, ಆಯುರ್ವೇದದ ಯುಕ್ತಿ

ನವರಾತ್ರಿಯ ಶಕ್ತಿ, ಆಯುರ್ವೇದದ ಯುಕ್ತಿ

ನವರಾತ್ರಿಯ ವೇಳೆಯಲ್ಲಿ ಆರಾಧಿಸಲ್ಪಡುವ ದೇವಿಯ ನವರೂಪಗಳಲ್ಲಿ ಪ್ರತಿಯೊಂದು ರೂಪವು ಸಹ ಜೀವನದ ಒಂದು ಮೌಲ್ಯವನ್ನು ಪ್ರತಿನಿಧಿಸುತ್ತದೆ. ಆಯುರ್ವೇದವು ಸಹ ದೇಹದ ಮೂರು ದೋಷ ಗಳಾದ ವಾತ, ಪಿತ್ತ, ಕಫಗಳನ್ನು ಸಮತೋಲನದಲ್ಲಿರಿಸಿ, ಇಂದ್ರಿಯ-ಮನಗಳ ಪ್ರಶಾಂತತೆ ಯನ್ನು ಕಾಯ್ದಿರಿಸಲು ಪ್ರೇರೇಪಿಸುತ್ತದೆ. ಈ ಎರಡನ್ನೂ ಹೋಲಿಸಿದರೆ ಒಂದು ಆಳವಾದ ಸಂಬಂಧ ಗೋಚರಿಸುತ್ತದೆ.

Dr Sadhanashree Column: ನವರಾತ್ರಿಯ ನವೋಲ್ಲಾಸಕ್ಕೆ ನವ ನಿಯಮಗಳು

ನವರಾತ್ರಿಯ ನವೋಲ್ಲಾಸಕ್ಕೆ ನವ ನಿಯಮಗಳು

ನವರಾತ್ರಿ ದಿನಗಳಲ್ಲಿ ಹಗಲು ವಿಶ್ರಾಂತಿ, ಸಂಜೆಯ ಭಜನೆ-ಸಂಗೀತ, ಬೆಳದಿಂಗಳಲ್ಲಿ ದೇವಾಲಯದ ವಿಹಾರ- ಇವೆಲ್ಲವೂ ಆಯುರ್ವೇದದ ಶರತ್ ಋತುಚರ್ಯೆಗೆ, ನೈಸರ್ಗಿಕ ನಿಯಮಗಳಿಗೆ ಅನುಗುಣ ವಾಗಿದ್ದವು. ಹೀಗಾಗಿ ನವರಾತ್ರಿ ಹಬ್ಬವು ದೇವಿಯ ಆರಾಧನೆಯಷ್ಟೇ ಆಗದೆ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಜೀವನವನ್ನು ಹೊಂದಿಸಿಕೊಳ್ಳುವ ಸಾಂಪ್ರದಾಯಿಕ ಶ್ರೇಷ್ಠ ಮಾರ್ಗ ವಾಗಿತ್ತು.

Dr Sadhanashree Column: ಕನಸು ಕಾಣಲು ಕಾರಣ: ಆಯುರ್ವೇದದ ಕಣ್ಣುಗಳಲ್ಲಿ

ಕನಸು ಕಾಣಲು ಕಾರಣ: ಆಯುರ್ವೇದದ ಕಣ್ಣುಗಳಲ್ಲಿ

ಸ್ನೇಹಿತರೆ, ಆಯುರ್ವೇದದಲ್ಲಿ ‘ಕನಸು’ ಎಂಬ ವಿಷಯವನ್ನು ನಮ್ಮ ಆಚಾರ್ಯರು ಸವಿಸ್ತಾರವಾಗಿ ತಿಳಿಸಿಕೊಟ್ಟಿzರೆ. ಕಾರಣ, ನಮ್ಮ ಆಂತರ್ಯದ ಆರೋಗ್ಯಕ್ಕೂ ಮತ್ತು ಕನಸುಗಳಿಗೂ ನೇರವಾದ ಸಂಬಂಧವಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಹೃದಯ, ಮನಸ್ಸು, ನಿದ್ದೆ ಮತ್ತು ಕನಸು- ಇವುಗಳಿಗೆ ಬಿಡಿಸಲಾರದ ನಂಟು.

Dr Sadhanashree Column: ಹಬ್ಬದ ನಂತರದ ಸಮತೋಲನಕ್ಕಾಗಿ ಅಜ್ಜಿಯ ಸೂತ್ರಗಳು

ಹಬ್ಬದ ನಂತರದ ಸಮತೋಲನಕ್ಕಾಗಿ ಅಜ್ಜಿಯ ಸೂತ್ರಗಳು

ಮೀರಾಳ ಸ್ಥಿತಿ ಕಂಡು ಅವಳ ಅಜ್ಜಿ ಎಲ್ಲವನ್ನೂ ತಿಳಿದಂತೆ ಮುಗುಳ್ನಕ್ಕಳು. “ಹಬ್ಬಗಳು ರುಚಿರುಚಿ ಯಾದ ಖಾದ್ಯಗಳನ್ನು ಸವಿಯಲೇ ಇರುವುದು, ಮಗು. ಆದರೆ ಹಬ್ಬದ ನಂತರ ನಮ್ಮನ್ನು ಮತ್ತೆ ಸಮತೋಲನದ ಕಡೆ ಕರೆದೊಯ್ಯುವ ಸಮಯ ಬರುತ್ತದೆ. ಆಯುರ್ವೇದವು ಸ್ವಾಸ್ಥ್ಯವೆಂಬ ಸಮತೋಲನವನ್ನು ಹೇಗೆ ಪುನಃ ಅನುಭವಿಸುವುದು ಎಂದು ನಮಗೆ ಕಲಿಸುತ್ತದೆ" ಎಂದು ಹೇಳುತ್ತಾ ಅವಳು ಅಡುಗೆಮನೆಗೆ ನಡೆದಳು.

Dr Sadhanashree Column: ಜೀವನೀಯವಾದ ಹಾಲು, ಹಾಲಾಹಲವಾಗಿದ್ದು ಹೇಗೆ ?

ಜೀವನೀಯವಾದ ಹಾಲು, ಹಾಲಾಹಲವಾಗಿದ್ದು ಹೇಗೆ ?

ಆಯುರ್ವೇದವು ‘ಕ್ಷೀರಂ ಜೀವನೀಯಾನಾಂ ಶ್ರೇಷ್ಠಮ’ ಎಂದು ಶ್ಲಾಘಿಸಿದೆ. ಅಂದರೆ, ನಾವು ಬದುಕಲು ಬೇಕಾದ ಪದಾರ್ಥಗಳಲ್ಲಿ ಹಾಲು ಅತ್ಯಂತ ಶ್ರೇಷ್ಠವಾದದ್ದು ಎಂದರ್ಥ. ಇದಕ್ಕೆ ಹಲವಾರು ಕಾರಣ ಗಳಿವೆ. ಹಾಲು ಎಲ್ಲಾ ಪ್ರಾಣಿಗಳಿಗೂ ಹುಟ್ಟುತ್ತಲೇ ಸಾತ್ಮ್ಯವಾಗಿರುತ್ತದೆ. ಆಯುರ್ವೇದವು ಹೇಳುವಂತೆ ಬದುಕೆಂಬುದು ಶರೀರ-ಇಂದ್ರಿಯ-ಮನಸ್ಸು-ಆತ್ಮ ಈ ನಾಲ್ಕರ ಒಕ್ಕೂಟ.

Dr Sadhanashree Column: ಆಹಾರ ಸೇವಿಸುವ ಮುನ್ನ ಗಮನಿಸಿ ಈ ಆರನ್ನು...

ಆಹಾರ ಸೇವಿಸುವ ಮುನ್ನ ಗಮನಿಸಿ ಈ ಆರನ್ನು...

‘ಬದುಕುವುದಕ್ಕಾಗಿ ತಿನ್ನುವುದು’ ಎಂದು ನಮ್ಮ ಹಿರಿಯರು ತೋರಿಸಿಕೊಟ್ಟ ಮಾರ್ಗವನ್ನು ಮರೆತು ‘ತಿನ್ನುವುದಕ್ಕಾಗಿಯೇ ಬದುಕುವುದು’ ಎಂಬ ಆಧುನಿಕತೆಯ ದಾರಿಯನ್ನು ನಮ್ಮದಾಗಿಸುವ ಪ್ರಯತ್ನ ದಲ್ಲಿದ್ದೇವೆ. ಕೆಲವರಿಗೆ, ನನ್ನ ಮಾತುಗಳು ಅಚ್ಚರಿಯೆನಿಸಬಹುದು. ಅರೆ, ಇವರು ಯಾಕಪ್ಪ ಹೀಗೆ ಮಾತಾಡ್ತಾ ಇದ್ದಾರೆ?! ಈ ರೀತಿ ತಿನ್ನುವುದರಲ್ಲಿ ತಪ್ಪೇನಿಲ್ವಲ್ಲ? ನಾವೆಲ್ಲರೂ ಇದನ್ನೇ ಮಾಡುವು ದಲ್ಲವೇ? ಎಂದೆನಿಸುವುದು ಸಹಜ.

Dr Sadhanashree Column: ಹಬ್ಬದ ನಲ್ಮೆಯ ನಂತರದ ನರಳಾಟ ಅನಿವಾರ್ಯವೇ ?

ಹಬ್ಬದ ನಲ್ಮೆಯ ನಂತರದ ನರಳಾಟ ಅನಿವಾರ್ಯವೇ ?

ಹೂವಿನ ಅಲಂಕಾರ, ಮಾವಿನ ತೋರಣ, ಚೆಂದದ ಮಂಟಪ, ಬಾಳೆ ಕಂಬ, ಬಗೆ ಬಗೆಯ ದೀಪಗಳು- ಇವೆಲ್ಲವೂ ಮನೆ-ಮನಗಳಲ್ಲಿ ದೈವೀಕ ಭಾವವನ್ನು ಜಾಗೃತಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಹಿರಿಯರಿಗೆ ಉಡುಗೊರೆಯನ್ನ ಕೊಟ್ಟು ಆಶೀರ್ವಾದ ಪಡೆಯುವುದರ ಮೂಲಕ ಹೊಸ ಶಕ್ತಿ ಮತ್ತು ಚೈತನ್ಯವನ್ನು ಪಡೆದ ಭಾವ.

Dr Sadhanashree Column: ಸರ್ವರೋಗಕ್ಕೂ ಇದೇ ಕಾರಣ: ಆಗಬೇಕು ಇವುಗಳ ನಿಯಂತ್ರಣ

ಸರ್ವರೋಗಕ್ಕೂ ಇದೇ ಕಾರಣ: ಆಗಬೇಕು ಇವುಗಳ ನಿಯಂತ್ರಣ

ಸಂಪೂರ್ಣ ಸೃಷ್ಟಿಯು ಪಂಚ ಮಹಾಭೂತಗಳಿಂದ ಕೂಡಿದೆ ಎಂದರೆ ತಪ್ಪಾಗಲಾರದು. ಈ ಜಗತ್ತಿನ ಯಾವ ವಸ್ತುವನ್ನು ನಾವು ಉದಾಹರಣೆಯಾಗಿ ತೆಗೆದುಕೊಂಡರೂ ಅದು ಪಂಚ ಮಹಾಭೂತಗಳಿಂದ ಆಗಿರುವಂಥದ್ದು. ಆ ವಸ್ತುವಿಗೆ ತಕ್ಕಂತೆ ಈ ಪಂಚ ಮಹಾಭೂತಗಳ ಪ್ರಮಾಣ ಏರುಪೇರು ಆಗುತ್ತದೆ. ಉದಾಹರಣೆಗೆ, ಒಂದು ಕಲ್ಲನ್ನು ತೆಗೆದುಕೊಂಡರೆ ಅದು ಐದೂ ಮಹಾಭೂತಗಳಿಂದ ಕೂಡಿದೆ.

Dr Sadhanashree Column: ಸ್ವಾಸ್ಥ್ಯದ ಅಳಿವು ಆಗುವುದು ಈ ಮೂರರಿಂದಲೇ !

ಸ್ವಾಸ್ಥ್ಯದ ಅಳಿವು ಆಗುವುದು ಈ ಮೂರರಿಂದಲೇ !

ಹಲವಾರು ರೋಗಗಳು ನಮ್ಮನ್ನು ಬಾಧಿಸದ ರೀತಿಯಲ್ಲಿ ನಮ್ಮ ಸ್ವಾಸ್ಥ್ಯವನ್ನು ಉಳಿಸಿ ಕೊಳ್ಳುವುದು ಹೇಗೆ? ಯಾವ ಕಾರಣಗಳಿಂದ ನಮ್ಮ ಸ್ವಾಸ್ಥ್ಯ ಅಳಿಯುತ್ತದೆ ಎಂಬ ವಿಷಯದ ಬಗ್ಗೆ ಇಂದಿನ ಲೇಖನದಲ್ಲಿ ಅವಲೋಕಿಸೋಣ. ಆಯುರ್ವೇದದ ಪ್ರಕಾರ ಮುಖ್ಯವಾಗಿ 3 ಕಾರಣಗಳಿಂದ ನಮ್ಮ ಸ್ವಾಸ್ಥ್ಯ ಅಳಿಯುತ್ತದೆ. ಅವೆಂದರೆ, 1. ಅಸಾತ್ಮೇಂದ್ರಿಯಾರ್ಥ ಸನ್ನಿಕರ್ಷ, 2. ಪ್ರಜ್ಞಾಪರಾಧ ಮತ್ತು 3. ಪರಿಣಾಮ

Dr Sadhanashree Column: ಕೃಷ್ಣನ ಬೆಣ್ಣೆ ಕಳ್ಳತನದ ಹಿಂದಿರುವ ಗುಟ್ಟು, ಆಯುರ್ವೇದದಲ್ಲಿ ರಟ್ಟು

ಕೃಷ್ಣನ ಬೆಣ್ಣೆ ಕಳ್ಳತನದ ಹಿಂದಿರುವ ಗುಟ್ಟು, ಆಯುರ್ವೇದದಲ್ಲಿ ರಟ್ಟು

ಕೃಷ್ಣನಿಗೆ ಬೆಣ್ಣೆಯ ಮೇಲೆ ಯಾಕೆ ಅಷ್ಟೊಂದು ಒಲವು? ಅವನಿಗೆ ಊಟ ತಿಂಡಿ ಇಲ್ಲದಿದ್ದರೂ ಬೆಣ್ಣೆ ಒಂದೇ ಸಾಕಾಗುತ್ತಿತ್ತಂತೆ. ಇದರ ಹಿಂದಿರುವ ಗುಟ್ಟೇನು? ಎಂಬ ಪ್ರಶ್ನೆಗೆ ಆಯುರ್ವೇದದಲ್ಲಿ ಉತ್ತರ ವನ್ನು ಹುಡುಕಲು ಹೊರಟೆ. ಆಗ ಸಿಕ್ಕ ಕೆಲವು ಸ್ವಾರಸ್ಯಕರ ವಿಷಯ ಗಳನ್ನು ನಿಮ್ಮ ಜತೆ ಈ ಸಂಚಿಕೆ ಯಲ್ಲಿ ಹಂಚಿಕೊಳ್ಳುತ್ತೇನೆ. ಬನ್ನಿ, ಬೆಣ್ಣೆಯ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಆಯುರ್ವೇದದ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದನ್ನು ತಿಳಿದುಕೊಳ್ಳೋಣ.

Dr Sadhanashree Column: ವೈದ್ಯನು ನಾರಾಯಣನಾಗುವ ಬಗೆ ಹೇಗೆ ?

ವೈದ್ಯನು ನಾರಾಯಣನಾಗುವ ಬಗೆ ಹೇಗೆ ?

ರೋಗಿಗಳ ಕಾಯಿಲೆಗಳನ್ನು ಮತ್ತು ನೋವನ್ನು ಶಮನ ಮಾಡುವವ ‘ವೈದ್ಯ’. ಅವನು ಲೋಕಕ್ಕೆ ನೀತಿಯನ್ನು ಬೋಧಿಸುತ್ತಾನೆ. ನಮ್ಮ ಸನಾತನ ಪರಂಪರೆಯು ಒಬ್ಬ ವೈದ್ಯ ಹೇಗಿರಬೇಕು ಎಂಬ ಪ್ರಶ್ನೆಗೆ ‘ಆದಿದೇವ ಧನ್ವಂತರಿ’ ಮತ್ತು ‘ಅಶ್ವಿನಿ ದೇವತೆ’ಗಳ ಆದರ್ಶವನ್ನು ನಮ್ಮ ಮುಂದಿಟ್ಟಿದೆ.

Dr Sadhanashree Column: ಎಳನೀರೆಂಬ ಅಮೃತದಿಂದಲೂ ತೊಂದರೆ ತಪ್ಪಿದ್ದಲ್ಲ !

ಎಳನೀರೆಂಬ ಅಮೃತದಿಂದಲೂ ತೊಂದರೆ ತಪ್ಪಿದ್ದಲ್ಲ !

ಒಮ್ಮೆ ಕುಡಿದ ಎಳನೀರು ಜೀರ್ಣವಾಗುವ ಮುನ್ನ ಇನ್ನೊಮ್ಮೆ ಎಳನೀರನ್ನು ಕುಡಿಯಬಾರದು. ಇದೇ ರೀತಿ ಸಂಜೆ ಸೂರ್ಯಾಸ್ತದ ನಂತರ ಎಳನೀರಿನ ಸೇವನೆ ಪ್ರಶಸ್ತವಾದುದಲ್ಲ. ಜೀರ್ಣಶಕ್ತಿ ಯನ್ನು, ನಮ್ಮ ಆಹಾರ ಕಾಲವನ್ನು ಮತ್ತು ಹಸಿವೆಯನ್ನು ಗಮನಿಸದೆ ಮನಬಂದಂತೆ ಸೇವಿಸುವ ಎಳನೀರು ಸದಾ ನಮ್ಮ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ.

Dr Sadhanashree Column: ನಿಮಗೆ ಸಂಧಿರೋಗ ಯಾಕೆ ಬಂತು ಗೊತ್ತೇ ?

ನಿಮಗೆ ಸಂಧಿರೋಗ ಯಾಕೆ ಬಂತು ಗೊತ್ತೇ ?

ಒಂದು ಮೂಳೆಯ ಭಾಗವು ಮತ್ತೊಂದು ಮೂಳೆಯ ಭಾಗಕ್ಕೆ ಸೇರುವ ವ್ಯವಸ್ಥೆಯನ್ನು ‘ಸಂಧಿ’ ಎಂದು ಕರೆಯುತ್ತೇವೆ. ಆಡುಭಾಷೆಯಲ್ಲಿ ಸಂಧಿಗಳನ್ನು ಕೀಲುಗಳು ಎಂದು ಕರೆಯುವುದುಂಟು. ಸಾಮಾನ್ಯ ವಾಗಿ ಈ ಸಂಧಿಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದು- ಚಲ ಮತ್ತು ಅಚಲ ಸಂಧಿಗಳೆಂದು. ಚಲ ಸಂಧಿ ಅಂದರೆ ಚಲನೆ ಉಳ್ಳಂಥ ಸಂಧಿಗಳು. ಉದಾಹರಣೆಗೆ, ಕೈ ಕಾಲುಗಳಲ್ಲಿ, ಕುತ್ತಿಗೆ, ಸೊಂಟ, ದವಡೆ ಜಾಗಗಳಲ್ಲಿರುವ ಸಂಧಿಗಳು.

Dr Sadhanashree Column: ಆರೋಗ್ಯವಂತರಾಗಿರಲು ಹೀಗಿರಲಿ ನೀವಾಡುವ ಮಾತು !

ಆರೋಗ್ಯವಂತರಾಗಿರಲು ಹೀಗಿರಲಿ ನೀವಾಡುವ ಮಾತು !

‘ಪರುಷ’ ಎಂದರೆ ಕಠೋರವಾದ ಮಾತುಗಳು. ಬೇರೆಯವರ ಮನಸ್ಸನ್ನು ಚುಚ್ಚಿ, ನೋವು ಮಾಡುವಂಥ ಮಾತುಗಳನ್ನು ಪರುಷ ವಚನ ಎಂದು ಹೇಳಬಹುದು. ವಿಷಯ ಎಂಥದ್ದೇ ಇರಲಿ, ಅದರಿಂದ ನಮಗೆ ಎಷ್ಟೇ ಅಸಮಾಧಾನವಿರಲಿ, ಅದನ್ನು ವ್ಯಕ್ತಪಡಿಸುವಾಗ ಬೇರೆಯವರಿಗೆ ನೋವನ್ನು ತರದ ರೀತಿಯಲ್ಲಿ ಮಾತನಾಡುವ ಪ್ರಯತ್ನವು ಸದಾ ನಮ್ಮದಾಗಿರಲಿ.

Loading...