ಆ ನಿರಾಶ್ರಿತೆಯ ಕಣ್ಣೀರ ಕತೆ ಹಲವರಿಗೆ ಆಶ್ರಯ ದಕ್ಕಿಸಿ ಕೊಟ್ಟಿತು
ಆಶ್ರಯ ಯೋಜನೆ ಜಾರಿಗೆ ತರಲು ನಿಮಗಿದ್ದ ಪ್ರೇರಣೆ ಏನು ಅನ್ನುವುದು ಗೊತ್ತಾಯಿತು. ಆದರೆ ಅದರ ವಿವರ ಗೊತ್ತಾಗಲಿಲ್ಲ ಎಂದೆ. ಅಂದ ಹಾಗೆ ಅವತ್ತು ನನ್ನ ಕುತೂಹಲದ ಪ್ರಶ್ನೆಗೆ ನೀರಿನ ಕಾರಂಜಿಯಂತೆ ಉತ್ತರ ಹೊರ ಹೊಮ್ಮಿಸಿದವರು ಬಂಗಾರಪ್ಪ. ತೊಂಭತ್ತರಿಂದ ತೊಂಭತ್ತೆರಡರ ತನಕ ಕರ್ನಾಟಕದ ಮುಖ್ಯ ಮಂತ್ರಿಯಾಗುವ ಅವಕಾಶ ಅವರಿಗೆ ದಕ್ಕಿತ್ತು.