ಮಳೆ ಕೋಂಗಿಲ ಹಕ್ಕಿಗೆ ಹಾಡಲು ಬರುವುದಿಲ್ಲ !
ಸಂಜೆಯ ಹೊತ್ತಿನಲ್ಲಿ ಒಮ್ಮೆಗೇ ಮನೆಯ ಹಿಂದಿನ ಹಾಡಿಯಲ್ಲೋ, ಗದ್ದೆಯಾಚೆಗಿನ ಹಕ್ಕಲಿನಲ್ಲೋ ಆರೆಂಟು ಹಕ್ಕಿಗಳು ಸದ್ದು ಮಾಡುತ್ತಾ ಪ್ರತ್ಯಕ್ಷವಾಗುತ್ತವೆ. ಬರಬರ ಸದ್ದು ಮಾಡುತ್ತಾ ಹಾರುವ ಅವುಗಳ ಸಂಚಾರವನ್ನು ಕಂಡು ‘ಹಾಂ, ಮಳೆ ಕೋಂಗಿಲ ಬಂದೊ ಕಾಣಿ, ನಾಳೆ ಇನ್ನೂ ಜಾಸ್ತಿ ಮಳೆ ಬತ್ತತಾ ಕಾಣತ್’ ಎನ್ನುತ್ತಿದ್ದರು ನಮ್ಮ ಹಳ್ಳಿಯ ಜನ.