ಸಂಗಮದ ಮಾಘಮೇಳದಲ್ಲೊಂದು ಪಲ್ಲಕ್ಕಿ ಪ್ರಹಸನ
“ನಿಮ್ಮ ಪಲ್ಲಕ್ಕಿಯ ಮೆರವಣಿಗೆಯನ್ನು ಅನುಮತಿಸಿದರೆ, ನಿಯಂತ್ರಣ ತಪ್ಪುವ ಸಂದರ್ಭವಿದೆ; ಹಾಗಾಗಿ ಬಹುಜನರ ಹಿತದೃಷ್ಟಿಯಿಂದ ನಾವು ಹಾಗೆ ಮಾಡಲಾರೆವು" ಎನ್ನುತ್ತಾ ಪ್ರಾಧಿಕಾರದ ಅಧಿಕಾರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡು ಪಲ್ಲಕ್ಕಿಯನ್ನು ಅ ತಡೆದು ನಿಲ್ಲಿಸಿದರು. ಪೊಲೀಸ್ ಅಧಿಕಾರಿಗಳ ಮಾತನ್ನು ಧಿಕ್ಕರಿಸಿ, ಅವರ ಶಿಷ್ಯಜನರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ‘ಆಗೇ ಬಢೋ, ಆಗೇ ಬಢೋ’ ಎನ್ನುತ್ತಾ ಮುನ್ನುಗ್ಗುತ್ತಿರುವಾಗ ಪೊಲೀಸರು ಅವರುಗಳನ್ನು ವಶಕ್ಕೆ ಪಡೆದುಕೊಳ್ಳಬೇಕಾ ಯಿತು.