Kalaburagi Airport: ಕೇಂದ್ರ-ರಾಜ್ಯ ತಿಕ್ಕಾಟ, ಕಲಬುರಗಿಯಿಂದ ಹಾರದ ವಿಮಾನ
ತುರ್ತು ಪ್ರಯಾಣಕ್ಕೆ ಅನುಕೂಲಕರವಾಗಿದ್ದ ವಿಮಾನ ಸೇವೆ ಸ್ಥಗಿತಗೊಂಡು ಎರಡು ತಿಂಗಳಾ ದರೂ ಜನಪ್ರತಿನಿಧಿಗಳ ದಿವ್ಯ ಮೌನವು ಈ ಭಾಗದ ತೀವ್ರ ಕಡೆಗಣನೆಗೆ ಸಾಕ್ಷಿಯಾಗಿದೆ ಎಂದು ವಿಮಾನ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ವಿಮಾನ ನಿಲ್ದಾಣದಲ್ಲಿ ನೀರವತೆ ಆವರಿಸಿದೆ. ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಜನರಿಗೆ ತೀವ್ರ ನಿರಾಸೆ ಉಂಟು ಮಾಡಿದೆ.
-
ದೇವೇಂದ್ರ ಜಾಡಿ ಕಲಬುರಗಿ
ಜನಪ್ರತಿನಿಧಿಗಳ ಮೌನಕ್ಕೆ ಪ್ರಯಾಣಿಕರ ಹಿಡಿಶಾಪ
ವಿಧಾನಸಭೆ-ಸಂಸತ್ತಿನಲ್ಲಿ ಧ್ವನಿ ಎತ್ತಲು ಆಗ್ರ
ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾದ ಕಲಬುರಗಿ ವಿಮಾನ ನಿಲ್ದಾಣವು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಗುದ್ದಾಟಕ್ಕೆ ಸಿಲುಕಿ ಸಂಪೂರ್ಣ ಬಡಪಾಯಿಯಾಗಿದೆ. ರಾಜ್ಯದಲ್ಲೇ ಎರಡನೇ ಅತಿದೊಡ್ಡ ರನ್‌ವೇ ಹೊಂದಿರುವ ಹೆಗ್ಗಳಿಕೆ ಹೊಂದಿರುವ ಈ ವಿಮಾನ ನಿಲ್ದಾಣದಿಂದ ಕಲಬುರಗಿ - ಬೆಂಗಳೂರು ನಡುವಿನ ವಿಮಾನ ಸೇವೆ ಅಕ್ಟೋಬರ್ 15ರಿಂದ ಸ್ಥಗಿತಗೊಂಡಿದ್ದರೂ ಅದನ್ನು ಪುನರಾರಂಭಿಸಲು ಯಾವುದೇ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡದಿರು ವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತುರ್ತು ಪ್ರಯಾಣಕ್ಕೆ ಅನುಕೂಲಕರವಾಗಿದ್ದ ವಿಮಾನ ಸೇವೆ ಸ್ಥಗಿತಗೊಂಡು ಎರಡು ತಿಂಗಳಾ ದರೂ ಜನಪ್ರತಿನಿಧಿಗಳ ದಿವ್ಯ ಮೌನವು ಈ ಭಾಗದ ತೀವ್ರ ಕಡೆಗಣನೆಗೆ ಸಾಕ್ಷಿಯಾಗಿದೆ ಎಂದು ವಿಮಾನ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ವಿಮಾನ ನಿಲ್ದಾಣದಲ್ಲಿ ನೀರವತೆ ಆವರಿಸಿದೆ. ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಜನರಿಗೆ ತೀವ್ರ ನಿರಾಸೆ ಉಂಟು ಮಾಡಿದೆ.
ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಗೆ ಆದ್ಯತೆ ಕೊಡಲಾಗುತ್ತಿದೆ. ಅಭಿವೃದ್ಧಿಗೆ ಪೂರಕವಾದ ವಿಮಾನ ಸೇವೆಯು ಸ್ಥಗಿತಗೊಂಡು ಎರಡು ತಿಂಗಳಾದರೂ ಸರಕಾರದ ಮಟ್ಟದಲ್ಲಿ ಚರ್ಚೆ ಆಗದಿರುವುದು ಈ ಭಾಗದ ಜನಪ್ರತಿನಿಧಿಗಳ ಜಾಣಮೌನವನ್ನು ಅಣುಕಿಸುವಂತಾಗಿದೆ.
ಇದನ್ನೂ ಓದಿ: Kalaburagi News: ಕಲಬುರಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ. ವಿಜಯೇಂದ್ರ ಭೇಟಿ
ಕೇಂದ್ರ ನಾಗರಿಕ ವಿಮಾನ ಯಾನ ಸಚಿವರು ಹಾಗೂ ರಾಜ್ಯ ಸರಕಾರದ ಸಂಬಂಧಪಟ್ಟ ಸಚಿವರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಕೋಟಿಗಟ್ಟಲೇ ವೆಚ್ಚದಲ್ಲಿ ನಿರ್ಮಾಣ ಆಗಿರುವ ವಿಮಾನ ನಿಲ್ದಾಣದ ರನ್ವೇ ನಲ್ಲಿ ವಿಮಾನಗಳೇ ಓಡಾಡದಿರುವುದು ವಿಪರ್ಯಾಸ.
ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣವನ್ನು ಸೇರ್ಪಡೆ ಗೊಳಿಸಿಲ್ಲ ಎಂಬುದು ರಾಜ್ಯ ಸರಕಾರದ ಆರೋಪ. ಇತ್ತ ಬೆಂಗಳೂರು-ಕಲಬುರಗಿ ನಡುವೆ ಸಂಚಾರ ನಡೆಸುತ್ತಿದ್ದ ವಿಮಾನ ಸಂಸ್ಥೆಯು ದಿಢೀರ್ ಆಗಿ ತನ್ನ ವಿಮಾನ ಸೇವೆ ರದ್ದು ಮಾಡಿ ಬೇರೆ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪ್ರತಿನಿಧಿಗಳು, ಸಂಬಂಧಪಟ್ಟ ಸಚಿವರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತರಿಸಿದೆ.
ಪ್ರವಾಸೋದ್ಯಮಕ್ಕೆ ಪೆಟ್ಟು: ವಿಮಾನ ಸೇವೆ ಸ್ಥಗಿತ ಗೊಂಡ ಪರಿಣಾಮವಾಗಿ ವಿಭಾಗದ ಪ್ರವಾಸೋದ್ಯಮ, ಶಿಕ್ಷಣ, ಕೈಗಾರಿಕೆ, ವೈದ್ಯಕೀಯ ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಹೀಗಾಗಿ, ಕಲಬುರಗಿಯಿಂದ ಬೆಂಗಳೂರು, ಮಂಗಳೂರು, ದೆಹಲಿ, ಮುಂಬೈ, ತಿರುಪತಿ ಮಧ್ಯೆ ವಿಮಾನ ಸೇವೆ ಆರಂಭಿಸಬೇಕು. ಅಲ್ಲದೇ, ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರನ್ನು ಕಡೆಗಣಿಸಿ ಮೋಸ ಮಾಡಿದ ವಿಮಾನ ಸಂಸ್ಥೆಯನ್ನು ಹೊರತುಪಡಿಸಿ, ಇತರ ಖಾಸಗಿಸಂಸ್ಥೆಗಳ ಮೂಲಕ ಕೂಡಲೇ ಬೆಂಗಳೂರು, ಮಂಗಳೂರು, ದೆಹಲಿ, ಮುಂಬೈ ಮತ್ತು ತಿರುಪತಿ ಮಧ್ಯೆ ವಿಮಾಸೇವೆ ಆರಂಭಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜನಪ್ರತಿನಿಧಿಗಳು ಒಗ್ಗಟ್ಟಾಗಿ ಪ್ರಶ್ನಿಸಲಿ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಒಕ್ಕೊರಲಿ ನಿಂದ ರಾಜ್ಯ ಸರಕಾರದ ಮೂಲಭೂತ ಸೌಲಭ್ಯ ಖಾತೆಯ ಸಚಿವರ ಗಮನ ಸೆಳೆದು, ಕೇಂದ್ರವನ್ನು ಒತ್ತಾಯಿಸುವ ಕೆಲಸ ಮಾಡಲಿ. ಹಾಗೆ ಸಂಸತ್ತಿನ ಚಳಿಗಾಲ ಅಧಿವೇಶನ ನಡೆಯು ತ್ತಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಲೋಕಸಭಾ ಸದಸ್ಯರು ಒಗ್ಗಟ್ಟಾಗಿ ಕೂಡಲೇ ಪ್ರಶ್ನೆ ಎತ್ತಿ ಕಲ್ಯಾKalaburagi News: ಕಲಬುರಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ. ವಿಜಯೇಂದ್ರ ಭೇಟಿಣ ಕರ್ನಾಟಕ ಭಾಗಕ್ಕೆ ಆಗುವ ಅನ್ಯಾಯ ಬಗೆಹರಿಸಬೇಕು ಎಂಬುದು ಈ ಭಾಗದ ಜನರ ಆಶಯವಾಗಿದೆ.
*
ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಜಿಐ ಟ್ಯಾಗ್ ಹೊಂದಿದ ತೊಗರಿಯ ಕಣಜವಾಗಿದ್ದು, ಈ ಭಾಗದಿಂದ ದೇಶ, ವಿದೇಶಗಳಿಗೆ ತೊಗರಿಬೇಳೆ ಸಾಗಿಸಲಾಗುತ್ತಿದೆ. ಅದಕ್ಕಾಗಿ ಕಲಬರಗಿ ವಿಮಾನ ನಿಲ್ದಾಣವನ್ನು ಕಾರ್ಗೋ ಸೇವೆಗೂ ಬಳಸುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕ ಭಾಗದ ಇತರ ಕೃಷಿ ವಲಯದ ಉತ್ಪನ್ನಗಳನ್ನು ಸಾಗಾಟ ಮಾಡಲು ವಿಮಾನ ಸೇವೆ ಅನುಕೂಲಕರವಾಗಿದೆ.
-ಡಾ.ಸದಾನಂದ ಪೆರ್ಲ, ಮಾಜಿ ಅಧ್ಯಕ್ಷ ದಕ್ಷಿಣ ಕನ್ನಡ ಸಂಘ
ನವಿ ಮುಂಬಯಿ ನೂತನ ವಿಮಾನ ನಿಲ್ದಾಣ ಕಾರ್ಯಾರಂಭದಿಂದಾಗಿ ಕಲಬುರಗಿ ನವಿ ಮುಂಬಯಿ ನಡುವೆ ವಿಮಾನ ಸಂಚಾರಕ್ಕೆ ಈಗ ಅವಕಾಶವಿದ್ದು, ಈಗಾಗಲೇ ರಾಜಮಂಡ್ರಿ ಮುಂತಾದ ಸಣ್ಣ ನಗರಗಳಿಂದ ನವಿ ಮುಂಬಯಿಗೆ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ುಂಬಯಿ ನಗರಕ್ಕೆ ಕಲಬುರಗಿ ನಗರಕ್ಕೆ ನಿತ್ಯ ನೂರಾರು ಮಂದಿ ತೆರಳುತ್ತಾರೆ. ಇಲ್ಲಿಗೂ ವಿಮಾನ ಸೇವೆ ಒದಗಿಸಿದರೆ ಅನುಕೂಲ ಆಗಲಿದೆ.
-ನರಸಿಂಹ ಮೆಂಡನ್, ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಸದಸ್ಯರು