ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೃಹ ಸಚಿವರ ತವರಲ್ಲೇ ತಾರಕಕ್ಕೇರಿದ ಅಬಕಾರಿ ಅಕ್ರಮ

ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅಬಕಾರಿ ಅಕ್ರಮ ಕುರಿತು 281489 ದಾಳಿ ನಡೆದಿದೆ. ಆ ಪೈಕಿ 14992 ಘೋರ ಪ್ರಕರಣ ಗಳಾಗಿದ್ದರೆ, 142960 ಕಲಂ 15ಎ ಅಡಿ ದಾಖಲಾಗಿವೆ. ಒಟ್ಟಾರೆ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 1579952 ಪ್ರಕರಣ ದಾಖಲಾ ಗಿವೆ.

ಗೃಹ ಸಚಿವರ ತವರಲ್ಲೇ ತಾರಕಕ್ಕೇರಿದ ಅಬಕಾರಿ ಅಕ್ರಮ

-

Ashok Nayak
Ashok Nayak Dec 14, 2025 12:16 PM

ಕೆ.ಜೆ.ಲೋಕೇಶ್ ಬಾಬು ಬೆಳಗಾವಿ

ರಾಜ್ಯದ ಕಾನೂನು ಸುವ್ಯವಸ್ಥೆ ಜವಾಬ್ದಾರಿ ಹೊತ್ತ ಗೃಹ ಸಚಿವರ ತವರಿನ ಅಬಕಾರಿ ಅಕ್ರಮ ತಾರಕಕ್ಕೇರಿದೆ. ಈ ಅಕ್ರಮದಲ್ಲಿ ಮೊದಲ ಮೂರು ಸ್ಥಾನಗಳ ಪೈಕಿ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಶಿವಮೊಗ್ಗ, ಕೋಲಾರ ಸ್ಥಾನದಲ್ಲಿವೆ. ಬೆಂಗಳೂರು ನಗರ ಜಿಲ್ಲೆ (04) ಕೊನೆಯ ಸ್ಥಾನದಲ್ಲಿರುವುದನ್ನು ಸರಕಾರದ ಅಧಿಕೃತ ಅಂಕಿಅಂಶಗಳು ದೃಢೀಕರಿಸಿವೆ.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಅಬಕಾರಿ ಅಕ್ರಮ ಕುರಿತು ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅಬಕಾರಿ ಸಚಿವರು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅಬಕಾರಿ ಅಕ್ರಮ ಕುರಿತು 281489 ದಾಳಿ ನಡೆದಿದೆ. ಆ ಪೈಕಿ 14992 ಘೋರ ಪ್ರಕರಣ ಗಳಾಗಿದ್ದರೆ, 142960 ಕಲಂ 15ಎ ಅಡಿ ದಾಖಲಾಗಿವೆ. ಒಟ್ಟಾರೆ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 1579952 ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ: Mysore Silk Sarees: ಮೈಸೂರು ಸಿಲ್ಕ್‌ ಸೀರೆಗಳಿಗೆ ಹೆಚ್ಚಿದ ಬೇಡಿಕೆ; ಉತ್ಪಾದನೆ ಹೆಚ್ಚಿಸಲು ಸಿಎಂ ಸೂಚನೆ

ಜಿಲ್ಲಾವಾರು ದಾಖಲಾದ ಪ್ರಕರಣ: ಘೋರ ಹಾಗೂ ಕಲಂ 15ಎ ಪ್ರಕಾರ ಜಿಲ್ಲಾವಾರು ಪೈಕಿ ತುಮಕೂರು 8202 ಪ್ರಕರಣ, ಶಿವಮೊಗ್ಗ 6908, ಕೋಲಾರ 5786, ಹಾಸನ 5306, ಹಾವೇರಿ 5257, ಮಂಡ್ಯ 5085, ಕಲಬುರಗಿ 4991, ಬಳ್ಳಾರಿ 4915, ದಾವಣಗೆರೆ 4907, ದಕ್ಷಿಣ ಕನ್ನಡ 4701, ಉತ್ತರ ಕನ್ನಡ 4472, ಚಿತ್ರದುರ್ಗ 4433, ಬೆಂಗಳೂರು ನಗರ ಜಿಲ್ಲೆ (06) 4277, ವಿಜಾಪುರ 4228, ಬೆಳಗಾವಿ ಉತ್ತರ 4171, ಬೀದರ್ 4263, ಬೆಂಗಳೂರು ನಗರ ಜಿಲ್ಲೆ (08) 4133, ಬೆಳಗಾವಿ ದಕ್ಷಿಣ 3896, ಬಾಗಲಕೋಟೆ 3893, ಮೈಸೂರು ಗ್ರಾಮಾಂತರ 3834, ಧಾರವಾಡ 3805, ಚಿಕ್ಕಬಳ್ಳಾಪುರ 3749, ಬೆಂಗಳೂರು ನಗರ ಜಿಲ್ಲೆ (02) 3724, ಗದಗ 3714, ರಾಯಚೂರು 3691, ಚಿಕ್ಕಮಗಳೂರು 3614, ಬೆಂಗಳೂರು ನಗರ ಜಿಲ್ಲೆ (03) 3517, ಬೆಂಗಳೂರು ದಕ್ಷಿಣ 3260 ಯಾದಗಿರಿ 3088, ಕೊಪ್ಪಳ 2888, ಬೆಂಗಳೂರು ನಗರ ಜಿಲ್ಲೆ(01) 2863, ಚಾಮರಾಜನಗರ 2836, ಬೆಂಗಳೂರು ಗ್ರಾಮಾಂತರ 2821, ಉಡುಪಿ 2677, ಬೆಂಗಳೂರು ನಗರ ಜಿಲ್ಲೆ (07) 2623, ಮೈಸೂರು 2610, ಬೆಂಗಳೂರು ನಗರ ಜಿಲ್ಲೆ(05) 2511, ಕೊಡಗು 2361, ವಿಜಯನಗರ 2035 ಹಾಗೂ ಬೆಂಗಳೂರು ನಗರ ಜಿಲ್ಲೆ (04) 2007 ಪ್ರಕರಣ ದಾಖಲಾಗಿವೆ.

Screenshot_14 ಋ

ನಿರಂತರ ಮದ್ಯಸಾರ ಕಳ್ಳತನ: ನಕಲಿ ಮದ್ಯ ತಯಾರಿಸಲು ಬಳಸುವ ಸ್ಪಿರಿಟ್ ಮತ್ತು ಕಚ್ಚಾ ವಸ್ತುಗಳು ರಾಜ್ಯಕ್ಕೆ ನುಸುಳುತ್ತಿರುವ ಪ್ರಕರಣಗಳನ್ನು ಗುರುತಿಸಲಾಗಿದೆ. ಮಾತ್ರವಲ್ಲ, ಅಕ್ರಮವಾಗಿ ತಯಾರಿಸಲಾಗುವ ಮದ್ಯಕ್ಕೆ ಬೇಕಾಗುವ ಮದ್ಯಸಾರ(ಸ್ಪಿರಿಟ)ವನ್ನು ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಹಾಗೂ ರಾಜ್ಯದ ಮೂಲಕ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಅಧಿಕೃತವಾಗಿ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಮದ್ಯ ಸಾರವನ್ನು ಸಾಗಣೆ ಮಾಡುವ ವಾಹನಗಳಿಂದ ಕಳ್ಳತನ ಮಾಡುತ್ತಿರುವುದನ್ನು ಪತ್ತೆ ಮಾಡ ಲಾಗಿದೆ.

ನಕಲಿ ಮದ್ಯ ತಯಾರಿಸಲು ಬೇಕಾದ ಇತರೆ ಪರಿಕರಗಳಾದ ಲೇಬಲ, ಎಸೆನ್ಸ್, ಕ್ಯಾರಾಮಲ್, ಖಾಲಿ ಬಾಟಲ್‌ಗಳು ಇತ್ಯಾದಿಗಳನ್ನು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬರುತ್ತಿರುವುದನ್ನು ಪತ್ತೆ‌ ಹಚ್ಚಲಾಗಿದೆ. ಅಕ್ರಮ ಮದ್ಯ ತಯಾರಿಸಲು ಬೇಕಾದ ಪರಿಕರಗಳನ್ನು ಹೆಚ್ಚಾಗಿ ಕೊರಿಯರ್ ಮೂಲಕ ಸರಬರಾಜು ಮಾಡುತ್ತಿರುವುದು ಕಂಡುಬಂದಿದೆ.

ನೈಜತೆಯ ಪರೀಕ್ಷೆ

ಮದ್ಯದ ಬಾಟಲ್‌ಗಳಿಗೆ ಅಂಟಿಸುವ ಅಬಕಾರಿ ಭದ್ರತಾ ಚೀಟಿಗಳ ಮೇಲೆ ಮುದ್ರಿತವಾದ ಕ್ಯೂಆ ಕೋಡ್ ಅನ್ನು ಬಳಸಿ ಇಲಾಖಾಧಿಕಾರಿಗಳು ಸನ್ನದು ಮಳಿಗೆ ಗಳಲ್ಲಿ ಅಥವಾ ಅನಧಿಕೃತ ಸ್ಥಳ ಗಳಲ್ಲಿ K-SEAL-EO App ಮೂಲಕ ಮದ್ಯದ ಬಾಟಲುಗಳ ನೈಜತೆಯನ್ನು ತಿಳಿಯುವ ಕಾರ್ಯ ನಡೆಯುತ್ತಿದೆ. ನಕಲಿ ಎಂದು ಪತ್ತೆಯಾದಲ್ಲಿ ಅದನ್ನು ಖಾತ್ರಿಪಡಿಸಿಕೊಳ್ಳಲಾಗುವ ತಾಂತ್ರಿಕ ವ್ಯವಸ್ಥೆಯು ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಕೇಂದ್ರ ಮುಖ್ಯ ರಾಸಾಯನಿಕ ಪ್ರಯೋಗಾಲಯ ಇದೆ. ಅಲ್ಲದೆ, ಎಫ್ಎಸ್‌ಎಸ್‌ಐನ ಪ್ರಾದೇಶಿಕ ಪ್ರಯೋಗಾಲಯಗಳಾದ ರಾಯಚೂರು, ಧಾರವಾಡ ಮತ್ತು ಚಿತ್ರದುರ್ಗ ಸಹ ಮದ್ಯವನ್ನು ಪರೀಕ್ಷಿಸಲಾಗುತ್ತದೆ.