ಭಾರತೀಯ ಕಾಫಿ ಮಾರುಕಟ್ಟೆ ವೃದ್ಧಿಗೆ ಪ್ರಯತ್ನ
ಭಾರತದ ಕಾಫಿ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಜನತೆ, ಉದ್ಯಮಿಗಳ ಮನಗೆದ್ದಿದೆ. ಹೀಗಿರುವಾಗ ಭವಿಷ್ಯದಲ್ಲಿಯೂ ಭಾರತದ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕುವುದು ನಿಸ್ಸಂಶ ಯ ಎಂದರು. ದೇಶದ ಜಿಡಿಪಿ ಪ್ರಗತಿಯು ಶೇ.6.5 ರಿಂದ 7ಕ್ಕೆ ಹೆಚ್ಚಾಗಿದೆ. 330 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಲ್ಲಿಯೂ ಪ್ರಗತಿಯಾಗಿದೆ.
-
ಅನಿಲ್ ಎಚ್.ಟಿ. ಬಾಳೆಹೊನ್ನೂರು
ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿದ ಕೇಂದ್ರ ಇಂಧನ ಸಚಿವ ಪ್ರಲ್ಹಾದ್ ಜೋಶಿ
ದೇಶೀಯವಾಗಿ ಮಾತ್ರವಲ್ಲದೇ ಜಾಗತಿಕವಾಗಿಯೂ ಭಾರತೀಯ ಕಾಫಿಗೆ ಬೇಡಿಕೆ ಕಂಡುಕೊಳ್ಳು ವಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಸಂಶೋಧನೆ, ಮಾರುಕಟ್ಟೆ ವಿಸ್ತರಣೆ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ ಎಂದು ಕೇಂದ್ರ ಇಂಧನ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದರು.
ಇಲ್ಲಿನ ರಾಷ್ಟ್ರೀಯ ಕಾಫಿ ಸಂಶೋಧನಾ ಮಂಡಳಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರಕ್ಷಣಾ ಪಡೆಯಂತೆಯೇ ಕಾಫಿ ಸೇರಿದಂತೆ ದೇಶದ ವಾಣಿಜ್ಯ ಬೆಳೆಗಳಿಗೆ ಆತ್ಮ ನಿರ್ಭರ್ ಯೋಜನೆಯಡಿ ಯಾರದ್ದೇ ಹಂಗಿಲ್ಲದ ಸ್ವಾವಲಂಬಿ ವಾತಾ ವರಣ ನಿರ್ಮಾಣ ಮಾಡಲಾಗುತ್ತಿದೆ.
ಭಾರತದ ಕಾಫಿ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಜನತೆ, ಉದ್ಯಮಿಗಳ ಮನಗೆದ್ದಿದೆ. ಹೀಗಿರುವಾಗ ಭವಿಷ್ಯದಲ್ಲಿಯೂ ಭಾರತದ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕುವುದು ನಿಸ್ಸಂಶ ಯ ಎಂದರು. ದೇಶದ ಜಿಡಿಪಿ ಪ್ರಗತಿಯು ಶೇ.6.5 ರಿಂದ 7ಕ್ಕೆ ಹೆಚ್ಚಾಗಿದೆ. 330 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಲ್ಲಿಯೂ ಪ್ರಗತಿಯಾಗಿದೆ.
ಇದನ್ನೂ ಓದಿ: CCRI: ಕಾಫಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ
ವಿದೇಶಕ್ಕೆ ಭಾರತದ ಉತ್ಪನ್ನ ಸಾಗಣೆಗಾಗಿ ದೇಶೀಯ ಬಂದರುಗಳಲ್ಲಿಯೂ ವಿಳಂಬರಹಿತವಾಗಿ ಕ್ಲಿಯರೆನ್ಸ್ ದೊರಕುವ ವ್ಯವಸ್ಥೆಯಾಗಿದೆ. ದೇಶೀಯ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೊಳ್ಳುತ್ತಿದೆ. ಭಾರತ ವಿಶ್ವದಲ್ಲಿಯೇ ೪ನೇ ಆರ್ಥಿಕ ಶಕ್ತಿಶಾಲಿ ದೇಶವಾಗಿ ಹೊರ ಹೊಮ್ಮಿದೆ ಎಂದರು.
ಇಂಧನ ಕ್ಷೇತ್ರದಲ್ಲಿ ಅಂತಾರಾಜ್ಯಗಳ ನಡುವೆ ವಿದ್ಯುತ್ ಹಂಚಿಕೆ ವ್ಯವಸ್ಥೆ ಜಾರಿಯಲ್ಲಿದ್ದು, ಈ ಮೂಲಕ ಒನ್ ನೇಷನ್-ಒನ್ ಸನ್-ಒನ್ ಗ್ರಿಡ್ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ. ದೇಶೀಯ ವಾಗಿ 330 ಕಂಪನಿಗಳು ಮೊಬೈಲ್ ಉತ್ಪಾದನಾ ಘಟಕಗಳನ್ನು ತೆರಿದಿವೆ.
ಕಾಫಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಭಾರತ 7ನೇ ಸ್ಥಾನದಲ್ಲಿದ್ದು ರಫ್ತು ಪ್ರಮಾಣದಲ್ಲಿ 6ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಮಾರುಕಟ್ಟೆ ಬೇಡಿಕೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಲೆನಾಡು ಜಿಲ್ಲೆಯ ಬಿಎಸ್‌ಎನ್‌ಎಲ್ ಟವರ್‌ಗಳಿಗೆ ರಾಜ್ಯ ಸರಕಾರ ವಿದ್ಯುತ್ ಸಂಪರ್ಕ ನೀಡಲು ಮುಂದಾಗಬೇಕು. ಕಾಡಾನೆ ದಾಳಿಯಿಂದ ಕಾಫಿ ಜಿಲ್ಲೆಗಳ ಬೆಳೆಗಾರರರನ್ನು ಪಾರು ಮಾಡುವುದು ನಮ್ಮ ಆದ್ಯತೆ ಎಂದು ಹೇಳಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಕಾಫಿ ಬೆಳೆಗಾರರು ಶ್ರೀಮಂತರು ಎಂದು ಎಲ್ಲರೂ ಹೇಳುತ್ತಾರೆ. ಇಂತಹವರಿಗೆ ಈ ಬೆಳೆಗಾರರ ಸಮಸ್ಯೆಗಳ ಅರಿವಾಗುತ್ತಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವಂದ ಮಾತನಾಡಿ, 280 ಎಕರೆ ವಿಸ್ತಾರದ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರವು ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಾದ್ಯಂತ 10 ಸಾವಿರ ಕಾಫಿ ಕ್ಯೂಯೆಕ್ಸ್ ಪ್ರಾರಂಭಿಸಲಾಗುತ್ತಿದೆ. ರಾಜ್ಯದಲ್ಲಿ 500 ಮಹಿಳೆಯರಿಗೆ ಕಾಫಿ ತಯಾರಿಕೆ ಯ ತರಬೇತಿ ನೀಡಿ ಕ್ಯೂಯೋಕ್ಸ್‌ಗೆ ನೇಮಿಸಲಾಗುತ್ತದೆ. ಪ್ರಸ್ತುತ 1.50 ಲಕ್ಷ ಮೆಟ್ರಿಕ್ ಟನ್ ಆಂತರಿಕ ವಾಗಿ ಬಳಕೆಯಾಗುತ್ತಿರುವ ಕಾಫಿಯನ್ನು ಶೀಘ್ರ 2 ಲಕ್ಷ ಟನ್‌ಗೆ ಹೆಚ್ಚಿಸುವ ಗುರಿ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೀವರಕ್ಷಕ್ ಮತ್ತು ಶತಾಬ್ದಿ ಎಂಬ ಎರಡು ಹೊಸ ಕಾಫಿ ತಳಿಯನ್ನು ಭಾರತೀಯ ಕಾಫಿ ಮಂಡಳಿಯಿಂದ ಬಿಡುಗಡೆ ಮಾಡಲಾಯಿತು. ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಕಾಫಿ ಮಂಡಳಿ ಕೊಡಗು ಉಪ ನಿರ್ದೇಶಕ ಡಾ.ಚಂದ್ರಶೇಖರ್, ಡಾ.ಕೆ.ಶ್ರೀದೇನಿ, ತೋಟಗಾರಿಕಾ ಕೇಂದ್ರದ ನಿರ್ದೇಶಕ ಮುರಳೀಧರ್, ಪ್ಲಾಂಟರ್ ಅಸೋಸಿ ಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ನಿರ್ದೇಶಕ ಮೋಹನ್ ದಾಸ್, ಉಪಾಸಿ ಮಾಜಿ ಅಧ್ಯಕ್ಷ ವಿನೋದ್ ಶಿವಪ್ಪ ಇದ್ದರು.
ಭವಿಷ್ಯದ ಕೃಷಿಯಾಗಿ ಕಾಫಿ
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದು, ಅರೇಬಿಕಾದಿಂದ ಮಾನ್ಸೂನ್ ಮಲಬಾರ್‌ನವರೆಗೂ ಭಾರತದ ಕಾಫಿಯು ವಿಶ್ವದಲ್ಲಿಯೇ ಸ್ವಾದಿಷ್ಟ, ಗುಣಮಟ್ಟದ ಕಾಫಿಯಾಗಿ ಖ್ಯಾತವಾಗಿದೆ. ಇತ್ತೀಚಿಗೆ ಯುನೈಟೆಡ್ ಕಿಂಗ್‌ಡಮ್, ಓಮನ್, ಸೇರಿದಂತೆ ವಿವಿಧ ದೇಶಗಳೊಂದಿಗೆ ಭಾರತೀಯ ಕಾಫಿ ವಹಿವಾಟಿಗೆ ಒಪ್ಪಂದವಾಗಿದೆ.
ಕಾಫಿಯ ಭವಿಷ್ಯದ ದೃಷ್ಟಿಯಿಂದ ಇದೊಂದು ಮಹತ್ವದ ಒಪ್ಪಂದ. ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಯವರು ಕಾಫಿಯನ್ನು ಉಲ್ಲೇಖಿಸಿದ ಬಳಿಕ ಕಾಫಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದ್ದು ಗಮನಾರ್ಹ ವಿಚಾರ.
ಹೊಸ ಜಿಲ್ಲೆಗಳು ಮತ್ತು ಆದಿವಾಸಿ ಜನತೆಯಿರುವ ಪ್ರದೇಶಗಳನ್ನು ಗುರುತು ಮಾಡಲಾಗುತ್ತದೆ. ಕೋಲ್ಡ್ ಬ್ರೀವ್ ಕಾಫಿ ಮತ್ತು ರೆಡಿ ಟು ಡ್ರಿಂಕ್ ಕಾಫಿಯಂತಹ ಯುವಪೀಳಿಗೆಯ ಮೆಚ್ಚುಗೆಯ ಕಾಫಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಮುಂದಿನ ಪೀಳಿಗೆಗೆ ಯಾವುದು ಬೇಕು ಎಂಬುದನ್ನು ಗಮನದಲ್ಲಿರಿಸಿಕೊಂಡು ಕಾಫಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ.
ಇಂಡಿಯನ್ ಬ್ರಾಂಡ್ ಕಾಫಿಗೆ ಉತ್ತಮ ಬೇಡಿಕೆಯಿದೆ. ಭಾರತೀಯ ಕಾಫಿಯನ್ನು ವಿಶ್ವವ್ಯಾಪಿ ರಫ್ತು ಮಾಡಲಾಗುತ್ತದೆ. ಖಂಡಿತವಾಗಿ ಕಾಫಿ ಮುಂದಿನ ಪೀಳಿಗೆಯ ಕೃಷಿಯಾಗುವುದರಲ್ಲಿ ಸಂಶಯ ಬೇಡ ಎಂದು ಹೇಳಿದ್ದಾರೆ.
ಕೊಡಗಿನಲ್ಲಿ ಎಸ್‌ಐಆರ್ ಜಾರಿಗೊಳಿಸಲು ಒತ್ತಾಯ
ಕಾಫಿ ತೋಟಗಳಲ್ಲಿ ಹೆಚ್ಚಾಗುತ್ತಿರುವ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಮತದಾರರ ವಿಶೇಷ ಪರಿಷ್ಕರಣೆ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರಾಗಿ ಬಾಂಗ್ಲಾದೇಶದವರು ಹೆಚ್ಚಾಗಿ ಕಂಡು ಬಂದಿದ್ದು, ಖಂಡಿತವಾಗಿಯೂ ಇದು ಆತಂಕದ ಬೆಳವಣಿಗೆಯಾಗಿದೆ. ಕಳ್ಳದಾರಿಯಲ್ಲಿ ಭಾರತ ಪ್ರವೇಶಿಸಿ ಕಾಫಿ ತೋಟ ಸೇರಿಕೊಂಡವರನ್ನು ಎಸ್‌ಐಆರ್ ವ್ಯವಸ್ಥೆಯಡಿ ಗುರುತಿಸಿ ನಿಯಮಾನು ಸಾರ ರಾಜಮಾರ್ಗ ತೋರಿಸಲೇಬೇಕಾಗಿದೆ ಎಂದು ಹೇಳಿದರು.
*
ನನ್ನ ಕಚೇರಿಗೆ ಬಂದವರಿಗೆ ಕೂರ್ಗ್ ಕಾಫಿಯನ್ನು ನೀಡುತ್ತೇನೆ. ಎಲ್ಲರೂ ಈ ಕಾಫಿ ಸ್ವಾದವನ್ನು ಮೆಚ್ಚುತ್ತಾರೆ. ವಿದೇಶಿ ಗಣ್ಯರು ಬಂದಾಗಲೂ ಕೊಡಗಿನ ಕಾಫಿಯನ್ನೇ ವಿತರಿಸಿದ್ದೇನೆ. ಗಣ್ಯರಿಗೆ ಕಾಫಿ ಪೌಡರ್ ಕೊಡುಗೆಯಾಗಿ ನೀಡುವ ಮೂಲಕ ಕಾಫಿಯ ಪ್ರಮೋಷನ್ ಮಾಡುವವರಲ್ಲಿ ನಾನೂ ಒಬ್ಬ. ನೀವೆಲ್ಲರೂ ಕಾಫಿಯನ್ನೇ ಅತಿಥಿಗಳಿಗೆ ಕೊಡುಗೆಯಾಗಿ ನೀಡಿದ್ದೇ ಆದಲ್ಲಿ ಕಾಫಿಯ ಪ್ರಚಾರ ಸುಲಭ ಸಾಧ್ಯವಾಗಲಿದೆ.
- ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ
ಕಾಫಿಯಲ್ಲಿ ರೋಗನಿರೋಧಕ ತಳಿಗಳು ಹೆಚ್ಚಾಗಬೇಕು. ಮಣ್ಣಿನ -ಲವತ್ತತೆ ನಾಶಗೊಳಿಸುವ ರಾಸಾಯನಿಕಗಳ ಬಳಕೆ ಕಡಮೆಯಾಗಬೇಕು. ವಿದೇಶಗಳಲ್ಲಿಯೂ ಕೊಡಗು, ಚಿಕ್ಕಮಗಳೂರಿ ನಂತಹ ಸುಂದರ ಜಿಲ್ಲೆಗಳು ಬೇರೆಲ್ಲೂ ಇಲ್ಲ. ಕಾಫಿ ಕೃಷಿಯೂ ಇದಕ್ಕೆ ಕಾರಣವಾಗಿರಬಹುದು. ನಾನೂ ಕೊಡಗಿನಿಂದ ಬಂದವನಾಗಿದ್ದು, ಕಾಫಿ ಬಗ್ಗೆ ಹೆಚ್ಚಿನ ಮಾಹಿತಿ ಕೊಡಗಿನಿಂದಲೇ ದೊರಕಿದೆ.
- ಕೆ.ಜೆ.ಜಾರ್ಜ್ ಇಂಧನ ಸಚಿವ