KPSC Recruitment Scam: ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ, ನೇಮಕಾತಿ ಅಕ್ರಮ, ಲಂಚವೇ ಪರಪಂಚ
ಯಲಬುರ್ಗಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಪುತ್ರನೊಬ್ಬ ಇಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಇಡೀ ಅಕ್ರಮದ ಸೂತ್ರಧಾರ ಆತನೇ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲ ಗೊತ್ತಿದ್ದರೂ ಸ್ವತಃ ತಮ್ಮ ಸ್ವಗ್ರಾಮ ದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದ ದಯನೀಯ ಸ್ಥಿತಿಯ ಬಗ್ಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸಂಪೂರ್ಣ ನಿರ್ಲ ಕ್ಷ್ಯ ವಹಿಸಿದ್ದಾರೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
-
ಶರಣಬಸವ ಹುಲಿಹೈದರ, ಕೊಪ್ಪಳ
ಅತಿಥಿ ಉಪನ್ಯಾಸಕರ ನೇಮಕಾತಿ ಹಗರಣ, ಲಂಚ ಪಡೆದು ನೇಮಕ: ಆರೋಪ
ಸ್ವಗ್ರಾಮದ ವಿವಿ ಅಕ ಮಗಳ ಬಗ್ಗೆ ಶಿಕ್ಷಣ ಸಚಿವ ರಾಯರಡ್ಡಿ ಮೌನ: ಜನರ ಬೇಸರ
ಇಡೀ ರಾಜ್ಯದಲ್ಲಿ ಸದ್ಯ ಕೆಪಿಎಸ್‌ಸಿಯಲ್ಲಿನ ಹಗರಣದ್ದೇ ಸದ್ದು. ಇದರ ಆರ್ಭಟದಲ್ಲಿ ಕೆಲವು ವಿಶ್ವ ವಿದ್ಯಾಲಯಗಳು ಹಗರಣಗಳ ಗಣಿಯೇ ಆಗಿದ್ದರೂ ಅದು ಹೊರಜಗತ್ತಿಗೆ ತಿಳಿಯುತ್ತಿಲ್ಲ. ಕೊಪ್ಪಳ ಜಿಲ್ಲೆಯ ತಳಕಲ್‌ನಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದಲ್ಲಂತೂ ನೇಮಕಾತಿ ಯಿಂದ ಹಿಡಿದು ಹಲವು ವಿಚಾರಗಳಲ್ಲಿ ಸರಣಿ ವಂಚನೆಗಳು ನಡೆಯುತ್ತಿದ್ದರೂ ಸದ್ದಾಗುತ್ತಿಲ್ಲ. ಇದೀಗ ಬಂದಿರುವ ಮಾಹಿತಿ ಪ್ರಕಾರ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ.
ಯಲಬುರ್ಗಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಪುತ್ರನೊಬ್ಬ ಇಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಇಡೀ ಅಕ್ರಮದ ಸೂತ್ರಧಾರ ಆತನೇ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲ ಗೊತ್ತಿದ್ದರೂ ಸ್ವತಃ ತಮ್ಮ ಸ್ವಗ್ರಾಮ ದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದ ದಯನೀಯ ಸ್ಥಿತಿಯ ಬಗ್ಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸಂಪೂರ್ಣ ನಿರ್ಲ ಕ್ಷ್ಯ ವಹಿಸಿದ್ದಾರೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಯುಜಿಸಿ (ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ) ನಿಯಮಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ. ಪ್ರತಿಭಾವಂತ ಅತಿಥಿ ಉಪನ್ಯಾಸಕರಿಗೆ ಜಾಗವಿಲ್ಲ. ಅಕ್ರಮಗಳಂತೂ ನಿರಂತರ ನಡೆಯು ತ್ತಿವೆ. ಇಲ್ಲಿನ ಅಕ್ರಮಗಳು ಕೆಪಿಎಸ್‌ಸಿಯನ್ನೂ ಮೀರಿಸಿವೆ ಎಂದು ಅತಿಥಿ ಉಪನ್ಯಾಸಕರು ಆರೋಪಿ ಸಿದ್ದಾರೆ. ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ, 2026-27ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿ ನಡೆದಿದೆ.
ಪ್ರತಿಭಾವಂತರು ಮತ್ತು ಯುಜಿಸಿ ನಿಯಮದಡಿ ಅರ್ಹತೆ ಪಡೆಯುವವರನ್ನು ವ್ಯವಸ್ಥಿತವಾಗಿ ಹೊರಗೆ ಇಡಲಾಗಿದೆ. ಕೇಳಿದಾಗೆಲ್ಲ ಕೈ ಬಿಸಿ ಮಾಡುವುದನ್ನು ಮಾನ ದಂಡವಾಗಿಸಿಕೊಂಡು ಶೇ.60ರಷ್ಟು ನೇಮಕಾತಿ ನಡೆದಿವೆ. ಇದರಿಂದ ಈ ಬಾರಿ ಅನೇಕ ಅರ್ಹರು ಕೆಲಸ ಕಳೆದು ಕೊಂಡು ಬೀದಿಗೆ ಬಂದಿದ್ದಾರೆ ಎಂಬ ಆರೋಪಗಳಿವೆ.
ವೈವಾ ಅಂಕದಲ್ಲಿ ವಂಚನೆ: ಯುಜಿಸಿ ನಿಯಮದಂತೆ, ಅಭ್ಯರ್ಥಿಯ ಸ್ನಾತಕೋತ್ತರ ಪದವಿ ಫಲಿತಾಂಶದ ಶೇ.50ರಷ್ಟು ಅಂಕ ಪರಿಗಣಿಸಬೇಕು. ಜೊತೆಗೆ ನೆಟ್, ಸ್ಲೆಟ್, ಪಿಎಚ್‌ಡಿ, 5 ವರ್ಷದ ಸೇವಾ ಅನುಭವ ಮತ್ತು ಪ್ರಕಟಿತ ಲೇಖನ ಮತ್ತು ಪುಸ್ತಕಗಳಿಗೆ ಪ್ರಾಶಸ್ತ್ಯ ಅಂಕ ನೀಡಬೇಕು. ಈ ಎಲ್ಲದರ ಜೊತೆಗೆ ಅಭ್ಯರ್ಥಿಗಳಿಗೆ 12.5 ಅಂಕಗಳಿಗೆ ಮೌಖಿಕ (ವೈವಾ) ಸಂದರ್ಶನ ನಡೆಸಲಾಗು ತ್ತದೆ. ಸಂದರ್ಶನಕ್ಕೆ ಕೊಡುವ ಅಂಕಗಳನ್ನೇ ಬಂಡವಾಳ ಮಾಡಿಕೊಂಡು, ಲಂಚ ಕೊಡಲು ಒಪ್ಪದ ಅಭ್ಯರ್ಥಿಗಳನ್ನು ಹೊರಗಿಡಲಾಗಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳನ್ನು ಆಹ್ವಾನಿಸಿ ನೇಮಕಾತಿ ಸಂದರ್ಶನ ಮಾಡಿಸಲಾಗುತ್ತದೆ. ಈ ಬಾರಿ ಕೆಲವರಿಂದ ಖಾಲಿ ಹಾಳೆ ಮೇಲೆ ಸಹಿ ಪಡೆದು, ತಮಗೆ ಅನುಕೂಲ ಕ್ಕೆ ತಕ್ಕಂತೆ ಮತ್ತು ಬೇಕಾದ ಅಭ್ಯರ್ಥಿಗಳಿಗೆ ಹೆಚ್ಚು ಅಂಕ ನೀಡಲಾಗಿದೆ ಕೆಲ ಉದ್ಯೋಗಾಕಾಂಕ್ಷಿ ಗಳು ಆರೋಪಿಸಿದ್ದಾರೆ. ಇನ್ನು ಕೆಲವರು ಖಾಲಿ ಹಾಳೆ ಮೇಲೆ ಸಹಿ ಮಾಡಲು ಒಪ್ಪಿಲ್ಲ. ಕೆಲವರನ್ನು ಹೊರಗಿಡಲು ಸಾಧ್ಯವಾಗದಿzಗ ತಜ್ಞರು ನೀಡಿದ ಅಂಕಗಳನ್ನೂ ತಮಗೆ ಅನುಕೂಲಕ್ಕೆ ಬಂದ ರೀತಿಯಲ್ಲಿ ತಿದ್ದುಪಡಿ ಮಾಡಿ ಆಯ್ಕೆ ಪಟ್ಟಿ ಸಿದ್ದಪಡಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಉನ್ನತ ರಾಜಕಾರಣಿಯೊಬ್ಬರ ಬೆಂಬಲ?
ಕೊಪ್ಪಳ ವಿಶ್ವವಿದ್ಯಾಲಯದಲ್ಲಿ 2026-27ನೇ ಸಾಲಿನ ಎಲ್ಲ ಅಕ್ರಮ ನೇಮಕಾತಿಯಲ್ಲಿ ರಾಜ್ಯದ ಉನ್ನತ ರಾಜಕಾರಣಿಯೊಬ್ಬರ ಪಾತ್ರವಿದೆ. ಅವರ ಬೆಂಬಲದಿಂದಲೇ ಇವೆಲ್ಲ ನಡೆಯುತ್ತಿದೆ ಎಂದು ಹೇಳಲಾಗಿದೆ. ಕೊಪ್ಪಳ ವಿವಿಯಲ್ಲಿ ಮೌಲ್ಯಮಾಪನ ಕುಲಸಚಿವರದ್ದು ಮಾತ್ರ ಖಾಯಂ ಹುz. ಬೋಧಕೇತರ ಹುದ್ದೆಗೆ ಹೊರಗುತ್ತಿಗೆ ನೌಕರರೇ ಗತಿ. ಹೊರಗುತ್ತಿಗೆ ನೌಕರನಾಗಿ ಸೇರಿರುವ ಯಲ ಬುರ್ಗಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಮಗ, ಸದ್ಯ ಇಡೀ ಕೊಪ್ಪಳ ವಿವಿಯನ್ನು ನಿಯಂತ್ರಿಸು ತ್ತಿದ್ದಾನೆ ಎಂಬ ಮಾತುಗಳಿವೆ. ಈ ಎಲ್ಲ ಅಕ್ರಮದಲ್ಲಿ ಈ ಹೊರ ಗುತ್ತಿಗೆ ನೌಕರನೇ ಸೂತ್ರಧಾರ. ರಾಜಕಾರಣಿ ಯ ಆಪ್ತರ ಮಗ ಎಂಬ ಕಾರಣಕ್ಕೆ ಕುಲ ಸಚಿವರು ಕೂಡ ಆತನ ಅಣತಿಯಂತೆ ನಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅನೇಕ ಅತಿಥಿ ಉಪನ್ಯಾಸಕರು ರಾಜಕಾರಣಿಯ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ.
ನೊಂದವರ ಆರೋಪಗಳು
ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ, 2026-27ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿ
ಯಲಬುರ್ಗಾ ಕಾಂಗ್ರೆಸ್ ಕಾರ್ಯಕರ್ತೆಯ ಪುತ್ರ, ಹೊರಗುತ್ತಿಗೆ ನೌಕರನೇ ಹಗರಣದ ಸೂತ್ರಧಾರಿ
ಯುಜಿಸಿ ನಿಯಮದಡಿ ಅರ್ಹತೆ ಪಡೆದವರನ್ನು ವ್ಯವಸ್ಥಿತವಾಗಿ ಹೊರಗಿಡಲಾಗಿದೆ
ಲಂಚ ಪಡೆದು ಶೇ.60ರಷ್ಟು ನೇಮಕಾತಿ. ಅರ್ಹರು ಕೆಲಸ ಕಳೆದುಕೊಂಡು ಬೀದಿಗೆ
ಅಭ್ಯರ್ಥಿಯ ಸ್ನಾತಕೋತ್ತರ ಪದವಿ ಅಂಕ, ನೆಟ್, ಪಿಎಚ್‌ಡಿ, ಲೇಖನ ಪರಿಗಣಿಸಿಲ್ಲ
ಅಭ್ಯರ್ಥಿಗಳ 12.5 ಅಂಕಗಳ ಮೌಖಿಕ (ವೈವಾ) ಸಂದರ್ಶನದಲ್ಲೂ ಬೇಕಾಬಿಟ್ಟಿ
ಅಭ್ಯರ್ಥಿಗಳಿಂದ ಖಾಲಿ ಹಾಳೆಯಲ್ಲಿ ಸಹಿ ಪಡೆಯಲಾಗಿದೆ, ಹಣ ಕೊಟ್ಟವರಿಗೆ ಗರಿಷ್ಠ ಅಂಕ ನೀಡಲಾಗಿದೆ: ಅಭ್ಯರ್ಥಿಗಳ ಆಕ್ರೋಶ
![]()
ಅತಿಥಿ ಉಪನ್ಯಾಸಕರ ನೇಮಕ ನಿಯಮಾ ನುಸಾರ ನಡೆದಿದೆ. ಅತಿಥಿ ಉಪನ್ಯಾಸಕರಿಗೆ ಯಾವುದೇ ನೇಮಕಾತಿ ಆದೇಶ ಕೊಡುವುದಿಲ್ಲ. ನೇಮಕಾತಿ ಪ್ರಕ್ರಿಯೆಗೆ ಅಭ್ಯರ್ಥಿಗಳು ನೀಡಿದ್ದ ದಾಖಲಾತಿ ಮತ್ತು ಅರ್ಹತಾಪಟ್ಟಿಯನ್ನು ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಿಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮುಗಿದ ನಂತರ ನಾನು ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಅಪ್‌ಲೋಡ್ ಮಾಡಿಸುವೆ.
-ಪ್ರೊ.ವಾರುಣಿ, ಪ್ರಭಾರ ಕುಲಪತಿ, ಕೊಪ್ಪಳ ವಿವಿ