ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ
ಭೂತಾಯಿಗೆ ನೀವು ಎಲ್ಲರೂ ಒಗ್ಗಟಾಗಿ ಒಂದು ಹನಿ ನೀರು ಕೊಡಿ ಈ ಬರಡು ಭೂಮಿ ಕ್ಯಾಲಿ ಪೋರ್ನಿಯಾ ಆಗುತ್ತದೆ ಎಂಬ ಅವರ ನುಡಿಗಳಿಂದ ಪುಳಕಿತರಾದ ಜಿಲ್ಲಾ ರಾಜಕೀಯ ಮುಖಂಡರು ಪಕ್ಷ ಭೇದ ಮರೆತು ನೀರಾವರಿಗಾಗಿ ಛಲತೊಟ್ಟು ಬರಡು ಭೂಮಿಗೆ ಇಂದು ನೀರು ಒದಗಿಸಿ ಬಣಗುಟ್ಟುವ ಬಂಜರ ಭೂಮಿಗೆ ನೀರು ಹರಿಸಿರುವುದರಿಂದ ಕ್ಷೀಪ್ರ ಗಿಡಮರಗಳು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

ಸಾವಳಸಂಗ ವನ್ಯಧಾಮ ಚಿತ್ರ.

ಶರಣಬಸಪ್ಪಾ.ಎನ್ ಕೆ,
ಇಂಡಿ: ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ. ನಂಜುಂಡಪ್ಪ ವರದಿಯಂತೆ ವಿಜಯಪೂರ ಜಿಲ್ಲೆಯ ಇಂಡಿ, ಸಿಂದಗಿ ಬರಗಾಲಕ್ಕೆ ತುತ್ತಾಗಿರುವ ಪ್ರದೇಶ ಹನಿ ನೀರಿಗೂ ತಾತ್ಸಾರ ಪಡುವ ಇಂಡಿ ಬಯಲು ಸೀಮೆಯ ಪ್ರಮಖರ ಉಷ್ಣಾತಾಪಮಾನ ಒಂದು ಹಸಿರಿನ ಕರಕಿ ಹುಲ್ಲು (ಗರಿಕೆ) ಸಹಿತ ಕಾಣದೆ ಹಸಿರಿನ ವನಸೀರಿ ಇಲ್ಲದೆ ಬಣಗುಟ್ಟುವಂತಾಗಿತ್ತು. ವಿಶ್ರಾಂತಿಗೆ ನಿಸರ್ಗದ ಪರಿಸರದಲ್ಲಿ ಕಾಲಕಳೆಯಬೇಕು ಎಂಬ ಬಹುತೇಕ ಜನರಿಗೆ ಗಿಡಮರಗಳ , ಸಸ್ಯಸಂಕುಲಗಳ ನೇರಳಿನ ನೆರವು ಇರದೆ ಮನಸ್ಸುಗಳು ಗಿಡಮರಗಳ ನೇರಳಿನ ಆಸರೆಗಾಗಿ ಈ ಭಾಗದ ಸಾರ್ವಜನಿಕರು ಮಮ್ಮಲ ಮರುಗುತ್ತಿದ್ದರು.
ವಿಜಯಪೂರ ಜ್ಞಾನ ಯೋಗಾಶ್ರಮದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಜಿಲ್ಲಾ ಜನಪ್ರತಿನಿಧಿಗಳಿಗೆ ಕಿವಿ ಮಾತಿಗೆ ನೋಡಿ ಈ ಭಾಗಕ್ಕೆ ಏನೂ ಕೂಡಾಬೇಕಾಗಿಲ್ಲ ಭೂತಾಯಿಗೆ ನೀವು ಎಲ್ಲರೂ ಒಗ್ಗಟಾಗಿ ಒಂದು ಹನಿ ನೀರು ಕೊಡಿ ಈ ಬರಡು ಭೂಮಿ ಕ್ಯಾಲಿಪೋರ್ನಿಯಾ ಆಗುತ್ತದೆ ಎಂಬ ಅವರ ನುಡಿಗಳಿಂದ ಪುಳಕಿತರಾದ ಜಿಲ್ಲಾ ರಾಜಕೀಯ ಮುಖಂಡರು ಪಕ್ಷ ಭೇದ ಮರೆತು ನೀರಾವರಿಗಾಗಿ ಛಲತೊಟ್ಟು ಬರಡು ಭೂಮಿಗೆ ಇಂದು ನೀರು ಒದಗಿಸಿ ಬಣಗುಟ್ಟುವ ಬಂಜರ ಭೂಮಿಗೆ ನೀರು ಹರಿಸಿರುವುದರಿಂದ ಕ್ಷೀಪ್ರ ಗಿಡಮರಗಳು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.
ಇದನ್ನೂ ಓದಿ: Chikkaballapur News: ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ
ಹಿಂದೆ ಹೋರ್ತಿ ಭಾಗದ ಸಾವಳಸಂಗ ಗುಡ್ಡ ಅತ್ಯಂತ ಎತ್ತರ ಪ್ರದೇಶ ನೀರೆ ಹೋಗುವುದಿಲ್ಲ ಎಂದು ಕೈಚೇಲಿ ಕುಳಿತ ಭಾಗ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಪರಿಸರ ನಿಸರ್ಗ ಮೇಲಿನ ಪ್ರೀತಿಯನ್ನು ಅರಿತ ಶಾಸಕ ಯಶವಂತರಾಯಗೌಡ ಪಾಟೀಲ, ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಸಭೆ ಕರೇದು ಸಾವಳಸಂಗ ಗುಡ್ಡ ಪ್ರದೇಶ ವನ್ಯಧಾಮವನ್ನಾಗಿ ಮಾಡಿ ಇದಕ್ಕೆ ಬೇಕಾದ ಆರ್ಥಿಕಸಹಾಯ ಮಾಡುವ ಭರವಸೆಯೊಂದಿಗೆ ಅರಣ್ಯ ಇಲಾಖೆಯವರ ಪರೀಶ್ರಮ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳಪರಿಸರದ ಬಗ್ಗೆ ಇದ್ದ ಕಾಳಜಿ ಶಾಸಕ ಪಾಟೀಲರ ಕಾರ್ಯಕ್ಷೇಮತೆ ಎಲರ ಸಹಯೋಗದಲ್ಲಿ ಗುಡ್ಡ ಪ್ರೆದೇಶ ಸಂಪೂರ್ಣ ಅರಣ್ಯೀಕರಣ ಮಾಡಿ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ವೃಕ್ಷ ಧ್ಯಾನ ಎಂದು ನಾಮಕರಣ ಮಾಡಿದ್ದಾರೆ.
*
ವಿಜಯಪೂರ ಜ್ಞಾನಯೋಗಾಶ್ರಮದ ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ವೃಕ್ಷ ಧ್ಯಾನ ಇಂದು ಸ್ಯ ಶ್ಯಾಮಲೆಗಳಿಂದ ಕಂಗೊಳಿಸುವಂತೆ ವಿವಿಧ ಜಾತಿಯ ಸಾವಿರಾರು ಗಿಡಮರಗಳನ್ನು ನೆಟ್ಟು ಸಸ್ಯಕಾಶಿ ಮಾಡಿದ್ದಾರೆ. ನೈಸರ್ಗಿಕವಾದ ಗುಡ್ಡ
ಪ್ರದೇಶ ಕಾಜಾಣಗಳು, ಅಳಿಲು, ಸಾರಂಗ, ಗಿಳಿಗಳು, ಪಾರಿವಾಳ, ಗುಬ್ಬಚ್ಚಿ, ಮೂಲ, ಅನೇಕ ವೈವಿಧ್ಯಮಯ ಪ್ರಭೇದದ ಪಕ್ಷಿಗಳು ಜೀವಸಂಕುಲಗಳು ಚಿಲಿಪಿಲಿ ನೀನಾದ ಹಾಗೂ ಅವುಗಳ ಓಡಾಡುತ್ತಿರುವದರಿಂದ್ದ ದಕ್ಷಿಣ ಕನ್ನಡ ಯಾವುದೂ ಒಂದು ಗಿರಿಶೀಖರದಂಚಿನ ಒಂದು ಭಾಗ ಇದ್ದಂತೆ ಅತ್ಯಂತ ಮನಮೋಹಕವಾಗಿ ರಂಜಿಸುತ್ತಿದೆ.
ಬೇಸಿಗೆ ಬಂತೆಂದರೆ ಸಾರ್ವಜನಿಕರು ಪ್ರವಾಸಿಗರು ನೆರಳಿ ಪ್ರದೇಶ ಹುಡುಕುತ್ತಾರೆ ಇಂದು ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಹೋರ್ತಿ ಸಾವಳಸಂಗ ಗುಡ್ಡ ಹೋರ್ತಿಯ ಪ್ರಸಿದ್ದ ಶ್ರೀರೇವಣಸಿದ್ದೇಶ್ವರ ದೇವಾಲಯ ಕೂಡಾ ಸುತ್ತಮುತ್ತಲೂ ಗಿರಿಶಿಖರ ನಟ್ಟ ನಡುವೆ ಶ್ರೀರೇವಣ ಸಿದ್ದೇಶ್ವರರ ಪ್ರಖ್ಯಾತಿ ಪಡೆದ ಧಾರ್ಮಿಕ ಪುಣ್ಯೆ ಕ್ಷೇತ್ರ ,ದಕ್ಷಿಣ ಕರ್ನಾಟಕದ ಸಮುದ್ರದ ತಟದಲ್ಲಿ ಶ್ರೀಮುರುಡೇಶ್ವ ಪುಣ್ಯಕ್ಷೇತ್ರ ಆಕಾಶದೆತ್ತರಕ್ಕೆ ದೇವಾಲಯದ ಕಳಸ ಕಂಗೊಳಿಸುತ್ತಿದ್ದಂ ತೆ ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಆಕಾಶೇದೇತ್ತರಕ್ಕೆ ಮುಕುಟಪ್ರಾಯವಾಗಿ ಗೋಚರಿಸುತ್ತಿದೆ. ಈ ದೇವಾಲಯ ಕೂಡಾ ೨ನೇ ಮುರುಡೇಶ್ವರ ಅಂದರೆ ತಪ್ಪಾಗುವುದಿಲ್ಲ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಹತ್ತಿರ ಕಾಣುವ ಸಾವಂಸಂಗ ಗುಡ್ಡ ಪ್ರದೇಶ ಪ್ರಖ್ಯಾತ ವನ್ಯಧಾಮವನ್ನಾಗಿ, ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಕೂಡಾ ಪ್ರವಾಸಿಗರ ಅಕರ್ಷಣಿಯ ತಾಣವನ್ನಾಗಿ ಮಾಡಬೇಕು ಎಂಬುದು ಸಾರ್ವಜನಿಕರ ಕೋಟ್ಯಾನು ಕೋಟಿ ಶ್ರೀರೇವಣಸಿದ್ದೇಶ್ವರ ಭಕ್ತರ ಸದಾಶಯವಾಗಿದೆ.
*
ವೃಕ್ಷವನ್ನು ಪ್ರೀತಿಸಿದರೆ ದೇಶವನ್ನು ಪ್ರೀತಿಸಿದಂತೆ .ಭೂಮಂಡಲದಲ್ಲಿ ಸ್ವರ್ಗಮಾಡಬೇಕು ವಿನಹ ಸ್ವರ್ಗಕ್ಕೆ ನಾವೇ ಹೋಗುವುದಲ್ಲ. ವೃಕ್ಷವನ್ನು ಪ್ರೀತಿಸುವುದು ರಕ್ಷಿಸುವುದು ಅದುವೇ ಧರ್ಮ. ನಿಸರ್ಗವನ್ನು ಪ್ರೀತಿಸಿದರೇ ಜೀವನ ಪಾವನವಾಗುತ್ತದೆ. ಪ್ರಕೃತಿಯಲ್ಲಿ ದೇವರಿದ್ದಾನೆ.
ಪೂಜ್ಯ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಆಧಾರಿತ ವಾಣಿ
ಸಾವಂಸಂಗ ಗುಡ್ಡ ಪ್ರದೇಶ ಹನಿ ನೀರು ಇಲ್ಲದ ಗರಿಕೆ ಇದರ ಶಿಖರ ಇಂದು ಪೂಜ್ಯ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಪಾದಸ್ಪರ್ಶದಿಂದ ನೆಲ ಪಾವನವಾಗಿ ಸಾವಿರಾರು ವೈವಿಧ್ಯಮಯ ಸಸ್ಯಗಳು ಗಿಡಮರಗಳು, ಪಕ್ಷಿಸಂಕುಲಗಳು ವಿವಿಧ ಪ್ರಭೇದದ ಪ್ರಾಣಿಗಳು ಅವಾಸ ತಾಣವಾಗಿದ್ದು ಇನ್ನಷ್ಟು ಶಾಸಕರು ,ಜನಪ್ರತಿನಿಧಿಗಳು ಈಪ್ರದೇಶ ಅಭಿವೃದಿ ಪಡಿಸಿದರೆ ಬೆಸಿಗೆಯಲ್ಲಿ ಪ್ರವಾಸಿಗರಿಗೆ ಅಕರ್ಷಿಣಿಯ ತಾಣ ಮಾಡಬಹುದು. ಶಾಸಕ ಯಶವಂತರಾಯಗೌಡ ಪಾಟೀಲರು ಶ್ರೀಸಿದ್ದೇಶ್ವರ ವೃಕ್ಷೆÆÃಧ್ಯಾನ ನಾಮಕರಣ ಮಾಡಿದ್ದಾರೆ. ಸಮೀಪ ಗಿರಿಶಿಖರಗಳ ಮಧ್ಯದಲ್ಲಿ ಹೋರ್ತಿ ಶ್ರೀರೇವಣಸಿದ್ದೇಶ್ವರ ಪುಣ್ಯಕ್ಷೇತ್ರವಿದೆ ಶ್ರೀರೇವಣಸಿದ್ದೇಶ್ವರ ದೇವಸ್ಥಾನ ಕೂದಲೇಳೆಯ ಅಂತರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ ಶ್ರೀಸಿದ್ದೇಶ್ವರ ವೃಕ್ಷ ಧ್ಯಾನ ಹಾಗೂ ಶ್ರೀರೇವಣಸಿದ್ದೇಶ್ವರ ಪುಣ್ಯೆಕ್ಷೇತ್ರ ಎರಡನ್ನು ಸರಕಾರ ಅನುಧಾನ ನೀಡಿ ಅಭಿವೃದ್ದಿಪಡಿಸಿ ಪ್ರವಾಸಿ ತಾಣ ಮಾಡಿದ್ದರೆ ಒಳ್ಳೇಯದಾಗುತ್ತದೆ.
ಅರಣ್ಯ ಇಲಾಖೆಯ ಧನರಾಜ ಮುಜಗೊಂಡ.