ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ

ನಮ್ಮ ಸಮುದಾಯದ ಆರಾಧ್ಯ ದೈವವಾದ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣಕ್ಕಾಗಿ ನಮ್ಮ ಸಮುದಾಯದ ಮುಖಂಡರಾದ ಜಿ.ಟಿ.ಶ್ರೀನಿವಾಸ್ ಎಂಬುವವರು ತಮಗೆ ಸೇರಿದ ಗುಡಿಬಂಡೆ ಸ.ನಂ ೨೫೯/೩ ರಲ್ಲಿ ಜಾಗ ನೀಡಿದ್ದರು. ಈ ಸ.ನಂ ನಲ್ಲಿ ಅ ಖರಾಬು ೯ ಗುಂಟೆ ಹಾಗೂ ಬ ಖರಾಬು ೨ ಗುಂಟೆ ಇದೆ. ಈ ಜಾಗವನ್ನು ಈ ಹಿಂದೆಯೇ ಶ್ರೀ ವೆಂಕಟೇಶ್ವರ ಚಿತ್ರ ಮಂದಿರದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಯಾಗಿರುತ್ತದೆ.

ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ

ಗುಡಿಬಂಡೆ ಪಟ್ಟಣದಲ್ಲಿ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಲಿಜ ಸಂಘದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Ashok Nayak Ashok Nayak Aug 2, 2025 10:52 PM

ಗುಡಿಬಂಡೆ: ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಈ ಸಂಬAಧ ಪುತ್ಥಳಿ ನಿರ್ಮಾಣಕ್ಕೆ ಉದ್ದೇಶಿತ ಜಾಗವನ್ನು ಮೂಲ ಖಾತೆದಾರನಿಗೆ ಮಂಜೂರು ಮಾಡಿಸ ಬೇಕೆಂದು ಬಲಿಜ ಸಂಘದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಬಲಿಜ ಸಮುದಾಯದ ಮುಖಂಡ ಅಂಬರೀಶ್ ಮಾತನಾಡಿ, ನಮ್ಮ ಸಮುದಾಯದ ಆರಾಧ್ಯ ದೈವವಾದ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣಕ್ಕಾಗಿ ನಮ್ಮ ಸಮುದಾಯದ ಮುಖಂಡರಾದ ಜಿ.ಟಿ.ಶ್ರೀನಿವಾಸ್ ಎಂಬುವವರು ತಮಗೆ ಸೇರಿದ ಗುಡಿಬಂಡೆ ಸ.ನಂ ೨೫೯/೩ ರಲ್ಲಿ ಜಾಗ ನೀಡಿದ್ದರು. ಈ ಸ.ನಂ ನಲ್ಲಿ ಅ ಖರಾಬು ೯ ಗುಂಟೆ ಹಾಗೂ ಬ ಖರಾಬು ೨ ಗುಂಟೆ ಇದೆ. ಈ ಜಾಗವನ್ನು ಈ ಹಿಂದೆಯೇ ಶ್ರೀ ವೆಂಕಟೇಶ್ವರ ಚಿತ್ರ ಮಂದಿರದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಯಾಗಿರುತ್ತದೆ. ಜೊತೆಗೆ ಅ ಮತ್ತು ಬ ಖರಾಬು ಸಹ ಮೂಲ ಖಾತೆದಾರನ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ಆದೇಶವಾಗಿರುತ್ತದೆ.

ಇನ್ನೂ ಸರ್ಕಾರಕ್ಕೆ ಕಟ್ಟಬೇಕಾದ ಕಿಮ್ಮತ್ತು ಕಟ್ಟಲು ಸಹ ನಾವು ಮನವಿ ಸಲ್ಲಿಸಿದ್ದೆವು. ಆದರೂ ಸಹ ಇಲ್ಲಿಯವರೆಗೂ ನಮಗೆ ನೊಟೀಸ್ ಸಹ ನೀಡಿರುವುದಿಲ್ಲ. ಆದ್ದರಿಂದ ಕೂಡಲೇ ತಾಲೂಕು ಆಡಳಿತ ನಮ್ಮ ಮನವಿಗೆ ಸ್ಪಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಲಿಜ ಸಂಘದ ವತಿಯಿಂದ ಉಗ್ರ ಹೊರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Chikkaballapur News: ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಬಲಿಜ ಸಮುದಾಯದವರಿಗೆ ಸೇರಿದ ಜಾಗದಲ್ಲಿ ಕೈವಾರ ತಾತಯ್ಯ ನವರ ಪುತ್ಥಳಿ ನೀಡಲು ಬಲಿಜ ಸಂಘದ ವತಿಯಿಂದ ತೀರ್ಮಾನಿಸಿ ಅದರಂತೆ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ ವನ್ನು ಸಹ ನೆರವೇರಿಸಲಾಗಿತ್ತು. ಆದರೆ ಅಂದು ಕೆಲವೊಂದು ಕಾರಣಗಳಿಂದ ಈ ಕಾರ್ಯ ಸ್ಥಗಿತ ಗೊಂಡಿತ್ತು. ಬಳಿಕ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳ ನ್ನೊಳಗೊಂಡ ತಂಡ ಸದರಿ ಜಾಗದ ಸರ್ವೆ ಸಹ ಮಾಡಲಾಗಿತ್ತು. ಸರ್ವೆ ಕಾರ್ಯ ಮುಗಿದು ಎರಡು ತಿಂಗಳು ಕಳೆದಿದೆ. ಆದರೂ ಸಹ ಇನ್ನೂ ಈ ಕುರಿತು ನಮಗೆ ಮಾಹಿತಿ ನೀಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಮ್ಮ ಸಮುದಾಯಕ್ಕೆ ಅನುಕೂಲವಾಗು ವಂತೆ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ತಾಲೂಕು ಬಲಿಜ ಸಂಘದ ಅಧ್ಯಕ್ಷ ವೆಂಕಟರಾಯಪ್ಪ, ಪಪಂ ಅಧ್ಯಕ್ಷ ವಿಕಾಸ್, ಬಲಿಜ ಸಮುದಾಯದ ಶ್ರೀನಿವಾಸ ನಾಯ್ಡು, ಶಾಂಬು ಮೂರ್ತಿ, ಜಗದೀಶ್, ಜಿ.ಟಿ.ಶ್ರೀನಿವಾಸ್, ಪ್ರೆಸ್ ಶಿವಪ್ಪ, ದೇವರಾಜು, ಶ್ರೀನಾಥ್, ರಾಜೇಶ್, ಶ್ರೀನಿವಾಸ್ ಗಾಂಧಿ ಸೇರಿದಂತೆ ಹಲವರು ಇದ್ದರು.