ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಹಾ ಅಂಗಡಿಗೆ ನುಗ್ಗಿದ ಗೂಳಿಗಳು...ಇಲ್ಲಿದೆ ಭಯಾನಕ ವಿಡಿಯೊ

ಬೀದಿ ನಾಯಿ ದಾಳಿಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆದರೆ ಇಲ್ಲಿ ಮಾತ್ರ ಬೀದಿ ಹೋರಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಚಹಾ ಅಂಗಡಿ ಮಾಲೀಕನ ಮೇಲೆ ಏನು ಸಿಟ್ಟೋ ಏನೋ ಈ ಹೋರಿಗಳು ಬೀದಿ ಬದಿಯ ಟೀ ಅಂಗಡಿಯೊಂದನ್ನು ಧ್ವಂಸಗೊಳಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಚಹಾ ಅಂಗಡಿಗೆ ನುಗ್ಗಿದ ಗೂಳಿಗಳು

ಲಖನೌ: ಚಹಾ ಅಂಗಡಿಯವನ ಮೇಲೆ ಏನು ಕೋಪವೋ ಏನೋ? ಕೆಲವು ಬೀದಿ ಹೋರಿಗಳು (Stray Bulls) ಚಹಾ ಅಂಗಡಿಯೊಂದನ್ನು ಧ್ವಂಸಗೊಳಿಸುತ್ತಿರುವ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareli) ನಡೆದಿದ್ದು, ಸ್ಥಳೀಯರಲ್ಲಿ ಭಾರಿ ಆತಂಕವನ್ನು ಉಂಟು ಮಾಡಿದೆ. ಎರಡು ಬೀದಿ ಹೋರಿಗಳು ಸೇರಿ ಚಹಾ ಅಂಗಡಿಯೊಂದನ್ನು ಧ್ವಂಸಗೊಳಿಸುತ್ತಿರುವುದನ್ನು ನೋಡಿದ ಸ್ಥಳೀಯರು ಓಡಿ ಹೋಗುತ್ತಿರುವುದು ಕೂಡ ಸಿಸಿಟಿವಿ (CCTV) ವಿಡಿಯೊದಲ್ಲಿ ಸೆರೆಯಾಗಿದೆ.

ಹೋರಿಗಳು ಚಹಾ ಅಂಗಡಿಯ ಮೇಲೆ ದಾಳಿ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಎರಡು ಬೀದಿ ಹೋರಿಗಳು ಸೇರಿ ಟೀ ಅಂಗಡಿಯನ್ನು ಧ್ವಂಸಗೊಳಿಸಿವೆ. ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಎರಡು ಹೋರಿಗಳು ಹಿಂಸಾತ್ಮಕ ರೀತಿಯಲ್ಲಿ ಕಾದಾಡಿಕೊಂಡಿದ್ದು ಈ ಸಂದರ್ಭದಲ್ಲಿ ಅವು ಹತ್ತಿರವಿದ್ದ ಟೀ ಅಂಗಡಿಯೊಂದಕ್ಕೆ ನುಗ್ಗಿ ಕೆಲವೇ ಸೆಕೆಂಡುಗಳಲ್ಲಿ ಅದನ್ನು ನಾಶಪಡಿಸಿದವು. ಇದನ್ನು ಕಂಡು ಅಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದಾರೆ. ಕೆಲವು ದಿನಗಳಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಬೀದಿ ಹೋರಿಗಳ ಕಾದಾಟ ಹೆಚ್ಚಾಗಿದೆ. ಇದು ಸ್ಥಳೀಯರಲ್ಲಿ ಭಯವನ್ನು ಉಂಟು ಮಾಡಿದೆ.

ಇದನ್ನೂ ಓದಿ: Coolie Trailer Out: ʼಕೂಲಿʼ ಚಿತ್ರದ ಟ್ರೈಲರ್‌ ಔಟ್‌; ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ರಜನಿಕಾಂತ್‌: ರಚಿತಾ ರಾಮ್‌ ಅಭಿಮಾನಿಗಳಿಗಿದೆ ಸಖತ್‌ ಸರ್‌ಪ್ರೈಸ್‌

ನವಾಬ್‌ಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಜುಲೈ 28ರಂದು ರಾತ್ರಿ 10:30ರ ಸುಮಾರಿಗೆ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಎರಡು ಹೋರಿಗಳು ಜನನಿಬಿಡ ರಸ್ತೆಯೊಂದರಲ್ಲಿ ಕಾದಾಡುತ್ತಿರುವುದನ್ನು ಕಾಣಬಹುದು. ಅವುಗಳು ಗಲಾಟೆಯ ಸಂದರ್ಭದಲ್ಲಿ ಸ್ಥಳೀಯ ಟೀ ಅಂಗಡಿಯೊಂದಕ್ಕೆ ನುಗ್ಗಿ, ಕೆಲವೇ ಸೆಕೆಂಡುಗಳಲ್ಲಿ ಅದನ್ನು ನಾಶಪಡಿಸಿದೆ. ಇದು ಗ್ರಾಹಕರಲ್ಲಿ ಭೀತಿಯನ್ನು ಉಂಟು ಮಾಡಿದ್ದು ಅವರು ಸ್ಥಳದಿಂದ ಓಡಿಹೋಗುತ್ತಿರುವುದನ್ನು ಕಾಣಬಹುದು.



ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್ ಗೂಳಿ ಕಾಳಗದಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯತ್‌ಗೆ ಹಲವು ಬಾರಿ ದೂರುಗಳನ್ನು ನೀಡಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.