Safari Ban: ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ
ಸಫಾರಿ ನಿರ್ಬಂಧದಿಂದ ಕರ್ನಾಟಕದೊಳಗಿರುವ ಹಾಗೂ ನೆರೆ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ನಾಗರಹೊಳೆ, ಬಂಡೀಪುರ ಬಿಟ್ಟು ರಾಜ್ಯದ ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ವಿದೇಶದಿಂದ ಆಗಮಿಸುವವರಿಗೆ, ಉತ್ತರ ಭಾರತದಿಂದ ‘ಮಕ್ಕಳ ರಜೆ’ ಎಂಜಾಯ್ ಮಾಡಲು ಬರುವವರು ಈ ಸಫಾರಿಯ ನಿರ್ಬಂಧದಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
-
ರಂಜಿತ್ ಎಚ್.ಅಶ್ವತ್ಥ ಬೆಂಗಳೂರು
ಬಂಡೀಪುರ, ನಾಗರಹೊಳೆ ಸಫಾರಿ ಆರಂಭವಾಗದಿದ್ದರೆ ರಾಜ್ಯದ ವಿವಿಧೆಡೆಯ ಹೋಟೆಲ್ ಗಳಿಗೆ ನಷ್ಟ
ಟ್ಯಾಕ್ಸಿ ಚಾಲಕರಿಗೆ ಉದ್ಯೋಗ ನಷ್ಟ
ಅರಣ್ಯ ಇಲಾಖೆ ಸಚಿವರ ಹಾಗೂ ಅಧಿಕಾರಿಗಳ ‘ಪ್ರತಿಷ್ಠೆ’ಯಿಂದ ವೈಲ್ಡ್ ಲೈಫ್ ಪ್ರವಾಸೋದ್ಯಮದಲ್ಲಿ ತನ್ನದೇಯಾದ ಹೆಸರನ್ನು ಗಳಿಸಿರುವ ಬಂಡೀಪುರ, ನಾಗರಹೊಳೆ ಸಫಾರಿ ಸ್ಥಗಿತವಾಗಿದೆ. ಇದರಿಂದ ಈ ಭಾಗದ ಪ್ರವಾಸೋದ್ಯಮ ನೆಲಕಚ್ಚಿದೆ. ಆದರೀಗ, ಈ ರೀತಿಯ ಅವೈಜ್ಞಾನಿಕ ನಿರ್ಬಂಧದ ಪರಿಣಾಮ ಭವಿಷ್ಯದಲ್ಲಿ ಇಡೀ ರಾಜ್ಯದ ಪ್ರವಾಸೋ ದ್ಯಮದ ಮೇಲೆ ಬೀರುವ ಆತಂಕವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.
ಸಫಾರಿ ನಿರ್ಬಂಧದಿಂದ ಕರ್ನಾಟಕದೊಳಗಿರುವ ಹಾಗೂ ನೆರೆ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ವ್ಯತ್ಯಾಸ ವಾಗುವುದಿಲ್ಲ. ನಾಗರಹೊಳೆ, ಬಂಡೀಪುರ ಬಿಟ್ಟು ರಾಜ್ಯದ ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ವಿದೇಶದಿಂದ ಆಗಮಿಸುವವರಿಗೆ, ಉತ್ತರ ಭಾರತದಿಂದ ‘ಮಕ್ಕಳ ರಜೆ’ ಎಂಜಾಯ್ ಮಾಡಲು ಬರುವವರು ಈ ಸಫಾರಿಯ ನಿರ್ಬಂಧದಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ದೂರದ ದೇಶ ಹಾಗೂ ರಾಜ್ಯದಿಂದ ಬರುವವರು ಬಂಡೀಪುರ ಸಫಾರಿ ಆನಂದಿಸಿ ಬಳಿಕ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳುತ್ತಾರೆ. ಆದರೆ ಇದೀಗ ಸಫಾರಿಯನ್ನು ನಿಲ್ಲಿಸಿ ರುವುದರಿಂದ, ಕರ್ನಾಟಕದ ಬದಲು ಯಾವ ರಾಜ್ಯದಲ್ಲಿ ಸಫಾರಿ ನಡೆಯುತ್ತಿದೆಯೋ ಅಲ್ಲಿಗೆ ಹೋಗಲು ಬಯಸುತ್ತಿದ್ದಾರೆ.
ಈ ರೀತಿ ಮಾಡುವುದರಿಂದ, ಬಂಡೀಪುರ, ನಾಗರಹೊಳೆ ಭಾಗವಷ್ಟೇ ಅಲ್ಲದೇ ರಾಜ್ಯದ ವಿವಿಧ ಪ್ರವಾಸೋದ್ಯಮ ಪ್ರದೇಶಗಳಿಗೂ ಪ್ರವಾಸಿಗರ ಸಂಖ್ಯೆ ಕ್ರಮೇಣ ಕ್ಷೀಣಿಸುವುದು ನಿಶ್ಚಿತ. ಸಂಖ್ಯೆ ಕ್ಷೀಣಿಸಲು ಸಮಯ ಹಿಡಿದರೂ, ಆ ಭಾಗದಲ್ಲಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಕುಟುಂಬಗಳಿಗೆ ಭವಿಷ್ಯದಲ್ಲಿ ಬಹುದೊಡ್ಡ ನಷ್ಟ ಎನ್ನು ವುದು ಸ್ಪಷ್ಟ.
ಇದನ್ನೂ ಓದಿ: Safari for VIPs?: ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?
ಅದರಲ್ಲಿಯೂ ವಿದೇಶಿ ಪ್ರವಾಸಿಗರೊಬ್ಬರು ರಾಜ್ಯಕ್ಕೆ ಬಂದರೆ ಸರಾಸರಿ ಎರಡೂವರೆ ಲಕ್ಷ ರುಪಾಯಿ ಖರ್ಚು ಮಾಡುವುದು ಗೊತ್ತಿರುವ ವಿಷಯ. ಒಂದು ವೇಳೆ ಅವರಿಗೆ ತಮ್ಮಿಷ್ಟದ ಸಫಾರಿ ನಡೆಯುತ್ತಿಲ್ಲ ಎನ್ನುವುದು ತಿಳಿದರೆ ಕರ್ನಾಟಕದ ಬದಲಿಗೆ ಉತ್ತರಾಖಂಡ ದಲ್ಲಿರುವ ಕಾರ್ಬೆಟ್, ಮಧ್ಯಪ್ರದೇಶದಲ್ಲಿರುವ ಕನ್ಹಾದತ್ತ ಹೋಗುತ್ತಾರೆ. ತಮಿಳುನಾಡಿನ ಮದುಮಲೈ, ಕೇರಳದ ವಯನಾಡಿಗೂ ಹೋಗುವುದು ಖಚಿತ. ಇದರಿಂದ ನಷ್ಟ ಕರ್ನಾಟಕಕ್ಕೆ.
ದೇಶೀಯ ಪ್ರವಾಸಿಗರ ಸಂಖ್ಯೆಯೂ ಕುಸಿತ: ವೈಲ್ಡ್ ಲೈಫ್ ಪ್ರವಾಸೋದ್ಯಮ ದೊಂದಿಗೆ ಇಡೀ ರಾಜ್ಯವನ್ನು ಸುತ್ತುವುದು ಕೇವಲ ವಿದೇಶಿಗರಲ್ಲ. ಉತ್ತರ ಭಾರತದ ವಿವಿಧ ರಾಜ್ಯ ಗಳಿಂದ ಬರುವ ಪ್ರವಾಸಿಗರೂ ವಾರದ ಕೆಲ ದಿನ ಪ್ಯಾಕೇಜ್ ಟೂರ್ʼನಲ್ಲಿ ಆಗಮಿಸುತ್ತಾರೆ. ಈ ಪ್ರವಾಸಿಗರು ಇನ್ನು ಅನ್ಯರಾಜ್ಯಗಳ ದಾರಿ ಹಿಡಿಯಬಹುದು. ಇದು ಕೇವಲ ಬಂಡೀಪುರ, ನಾಗರಹೊಳೆಯ ಭಾಗದ ರೆಸಾರ್ಟ್, ಹೋಮ್ ಸ್ಟೇ ಮಾಲೀಕರು, ನೌಕರರು, ಸಫಾರಿ ಚಾಲಕರ ಸಮಸ್ಯೆಯಲ್ಲ.
ಅರಣ್ಯ ಇಲಾಖೆ ಕೂಡಲೇ ಸಫಾರಿಗಳನ್ನು ಆರಂಭಿಸದೇ ಹೋದರೆ, ರಾಜ್ಯದ ಟ್ಯಾಕ್ಸಿ ಮಾಲೀಕರು, ಹೋಟೆಲ್ ಉದ್ಯಮ ಸೇರಿದಂತೆ ಲಕ್ಷಾಂತರ ಜನರಿಗೆ ನೇರ ಹಾಗೂ ಪರೋಕ್ಷ ಹೊಡೆತ ಬೀಳುವುದು ಸ್ಪಷ್ಟ.
ಲಕ್ಷಾಂತರ ಕುಟುಂಬ ಅವಲಂಬನೆ: ಕರ್ನಾಟಕ ಸರಕಾರ ಪ್ರವಾಸೋದ್ಯಮದ ಮೇಲೆ ಹೆಚ್ಚಿನ ನಿಗಾವಹಿಸದಿದ್ದರೂ, ಇಲ್ಲಿನ ವೈವಿದ್ಯತೆಯನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆಗೇನು ಕಡಿಮೆಯಿಲ್ಲ. ಪ್ರವಾಸೋದ್ಯಮದ ಮೇಲೆ ಲಕ್ಷಾಂತರ ಕುಟುಂಬ ಗಳು ಅವಲಂಬಿತವಾಗಿವೆ. ಒಂದು ವೇಳೆ, ಸಫಾರಿಯ ನಿರ್ಬಂಧದಿಂದ ವಿದೇಶಿ ಪ್ರವಾಸಿಗರು ಹಾಗೂ ಇತರೆ ರಾಜ್ಯಗಳ ಪ್ರವಾಸಿಗರು ಕರ್ನಾಟಕದಿಂದ ದೂರಾದರೆ ಇದರ ನೇರ ಪರಿಣಾಮ ಈ ಲಕ್ಷಾಂತರ ಕುಟುಂಬಗಳ ಮೇಲಾಗುತ್ತದೆ. ಈ ಅವೈಜ್ಞಾನಿಕ ನಿರ್ಬಂಧ ತೆರವುಗೊಳಿಸಬೇಕು ಎನ್ನುವ ಒತ್ತಡ ಪ್ರವಾಸೋದ್ಯಮದಿಂದ ಕೇಳಿ ಬರುತ್ತಿದೆ.
ಮಳೆ ಶುರುವಾಗುವ ಮುನ ಆರಂಭಿಸಿ ವೈಲ್ಡ್ ಲೈಫ್ ಪ್ರವಾಸೋದ್ಯಮ ಇತರೆ ಪ್ರವಾಸೋ ದ್ಯಮದ ರೀತಿ ಇಡೀ ವರ್ಷ ಮಾಡಲು ಸಾಧ್ಯವಿಲ್ಲ. ಜೂನ್‌ನಲ್ಲಿ ಮಳೆ ಶುರುವಾದರೆ ಸಫಾರಿಯನ್ನು ನಡೆಸುವುದು ಕಷ್ಟಸಾಧ್ಯ. ಸಫಾರಿಗೆ ನವೆಂಬರ್‌ನಿಂದ ಜನವರಿ ಸೂಕ್ತ ಕಾಲವಾದರೂ, ಮೇವರೆಗೆ ಜನರು ಆಗಮಿಸುತ್ತಿರುತ್ತಾರೆ. ಆದ್ದರಿಂದ ಈಗಾಗಲೇ ಮೂರು ತಿಂಗಳ ನಿರ್ಬಂಧದಿಂದ ಅರ್ಧ ಪ್ರವಾಸೋದ್ಯಮ ನೆಲಕಚ್ಚಿದೆ.
ಇನ್ನುಳಿದಿರುವ ಮೂರು ತಿಂಗಳಿಗಾದರೂ ಅವಕಾಶ ನೀಡಿದರೆ, ರೆಸಾರ್ಟ್, ಹೋಮ್ ಸ್ಟೇ, ಟ್ಯಾಕ್ಸಿ ಚಾಲಕರು ಸೇರಿದಂತೆ ಲಕ್ಷಾಂತರ ಮಂದಿ ನೆಮ್ಮದಿಯ ಉಸಿರು ಬಿಡಲಿದ್ದಾರೆ.