ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari for VIPs?: ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಬಂಡೀಪುರ, ನಾಗರಹೊಳೆ ಭಾಗದಲ್ಲಿ ಸಂಪೂರ್ಣವಾಗಿ ಸಫಾರಿ ನಿರ್ಬಂಧವಾಗಿಲ್ಲ. ಬದಲಿಗೆ ಅಧಿಕಾರಿ ವರ್ಗ, ರಾಜಕೀಯ ನಾಯಕರು, ಅವರ ಕುಟುಂದವರು ಬಂದರೆ ಈಗಲೂ ಅರಣ್ಯ ಇಲಾಖೆಯ ಗೆಸ್ಟ್ ಹೌಸ್‌ನಲ್ಲಿಯೇ ರಾಜಾತಿಥ್ಯ ನೀಡಿ, ಸಫಾರಿಗೆ ಕರೆದುಕೊಂಡು ಹೋಗಲಾಗು ತ್ತಿದೆ ಎನ್ನುವ ಮಾತುಗಳನ್ನು ಸ್ಥಳೀಯರೇ ಹೇಳುತ್ತಿದ್ದಾರೆ.

ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

-

ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ನಿರ್ಬಂಧದ ನಂತರವೂ ಗಣ್ಯರ ಸಫಾರಿ ಅಬಾಧಿತ, ಬಿಗ್ ಕ್ಯಾಟ್ ಪ್ರತಿನಿಧಿಗಳಿಗೂ ಸಫಾರಿ ಸೇವೆ

ಸಂಬಂಧವಿಲ್ಲದ ಹುಲಿ ದಾಳಿಯನ್ನು ಮುಂದಿಟ್ಟುಕೊಂಡು ಸಫಾರಿ ನಿರ್ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಈಗಲೂ ಹಿರಿಯ ಅಧಿಕಾರಿಗಳಿಗೆ, ರಾಜಕಾರಣಿಗಳು, ಅವರ ಕುಟುಂಬದವರನ್ನು ಸಫಾರಿ ಮಾಡುವುದಕ್ಕೆ ರತ್ನಗಂಬಳಿ ಹಾಸಿ ಕರೆಯುತ್ತಿದ್ದಾರೆ.

ಅರಣ್ಯ ಇಲಾಖೆಯ ಅವೈಜ್ಞಾನಿಕ ತೀರ್ಮಾನದಿಂದ ಪ್ರತಿನಿತ್ಯ 25 ಲಕ್ಷ ನಷ್ಟವಾಗುತ್ತಿದೆ ಎನ್ನುವ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದ್ದರೂ, ಅರಣ್ಯ ಇಲಾಖೆ ಸಚಿವರ ಹಾಗೂ ಅಧಿಕಾರಿಗಳ ಕಿವಿ ಮೇಲೆ ಬೀಳುತ್ತಿಲ್ಲ. ಹಾಗೆಂದು, ಬಂಡೀಪುರ, ನಾಗರಹೊಳೆ ಭಾಗದಲ್ಲಿ ಸಂಪೂರ್ಣವಾಗಿ ಸಫಾರಿ ನಿರ್ಬಂಧವಾಗಿಲ್ಲ. ಬದಲಿಗೆ ಅಧಿಕಾರಿ ವರ್ಗ, ರಾಜಕೀಯ ನಾಯಕರು, ಅವರ ಕುಟುಂದವರು ಬಂದರೆ ಈಗಲೂ ಅರಣ್ಯ ಇಲಾಖೆಯ ಗೆಸ್ಟ್ ಹೌಸ್‌ನಲ್ಲಿಯೇ ರಾಜಾತಿಥ್ಯ ನೀಡಿ, ಸಫಾರಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎನ್ನುವ ಮಾತುಗಳನ್ನು ಸ್ಥಳೀಯರೇ ಹೇಳುತ್ತಿದ್ದಾರೆ.

ಇದನ್ನೂ ಓದಿ: Safari: ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ಬಂಡೀಪುರ, ನಾಗರಹೊಳೆ ಸಫಾರಿ ನಿರ್ಬಂಧವಾಗಿರುವುದರಿಂದ ರೆಸಾರ್ಟ್‌ಗೆ ಬರುತ್ತಿರುವ ಕೆಲವೇ ಕೆಲ ಪ್ರವಾಸಿಗರನ್ನು ವಯನಾಡು, ಮದುಮಲೈಗೆ ಕರೆದುಕೊಂಡು ಹೋಗು ತ್ತಿದ್ದಾರೆ. ಈ ರೀತಿ ಕರೆದು ಕೊಂಡು ಹೋಗಿ ಬರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ‘ಪ್ರಭಾವಿ’ಗಳನ್ನು ಕರೆದುಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿ ಕಾಣಿಸುತ್ತಿದೆ ಎನ್ನುವುದನ್ನು ಹೆಸರು ಹೇಳಲು ಇಚ್ಛಿಸದ ರೆಸಾರ್ಟ್ ಮಾಲೀಕರು ಹೇಳುತ್ತಿದ್ದಾರೆ.

ಅಧಿಕಾರಿ, ರಾಜಕಾರಣಿ, ಪ್ರಭಾವಿಗಳನ್ನು ಕರೆದುಕೊಂಡು ಹೋಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಇವರನ್ನು ಕರೆದುಕೊಂಡು ಹೋಗುವಾಗ ಯಾವುದೇ ಸಮಸ್ಯೆ ಇಲ್ಲ ಎನ್ನುವುದಾದರೆ ಸಾಮಾನ್ಯ ಪ್ರವಾಸಿ ಗರಿಗೂ ಅವಕಾಶ ನೀಡಿ. ನೆಲಕಚ್ಚಿರುವ ಪ್ರವಾಸ್ಯೋ ದಮ ಸಂಪೂರ್ಣವಾಗಿ ಹಾಳಾಗುವ ಮೊದಲು ಸಫಾರಿಗೆ ಅವಕಾಶ ನೀಡಿ ಪ್ರವಾಸಿ ಸಂಸ್ಕೃತಿ ಉಳಿಸಿ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ.

ಕ್ಯಾಮರಾ ಹೊತ್ತು ಹೋಗುವ ಪ್ರಭಾವಿಗಳು ಇನ್ನು ಅಧಿಕಾರಿಗಳು, ರಾಜಕಾರಣಿಗಳು ಮಾತ್ರವಲ್ಲದೇ ಸ್ಥಳೀಯ ಮಟ್ಟದಲ್ಲಿ ಪ್ರಭಾವ ಹೊಂದಿರುವ ‘ಕೆಲವರಿಗೆ’ ದಿನದ ಯಾವುದೇ ಸಮಯದ ಲ್ಲಾದರೂ ಸಫಾರಿಗೆ ಹೋಗಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿದ್ದಾರೆ.

ಕೇವಲ ಸಫಾರಿಗೆ ಹೋಗುವುದಷ್ಟೇ ಅಲ್ಲದೇ, ದೊಡ್ಡ ದೊಡ್ಡ ಲೆನ್ಸ್‌ಗಳನ್ನು ಹಿಡಿದು ಕೊಂಡು ಹೋಗುವುದು, ಫೋಟೋ ಶೂಟ್ ಮಾಡುವುದಕ್ಕೂ ಅವಕಾಶ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಸಫಾರಿ ನಿರ್ಬಂಧದಿಂದ ನಿತ್ಯ ಲಕ್ಷಾಂತರ ರುಪಾಯಿ ಸರಕಾರಕ್ಕೆ ನಷ್ಟವಾಗುತ್ತಿದೆ, ರೆಸಾರ್ಟ್ ಮಾಲೀಕರು, ಸಿಬ್ಬಂದಿಗಳು ಬೀದಿಗೆ ಬರುತ್ತಿದ್ದಾರೆ.

ಆದ್ದರಿಂದ ಸಾರ್ವಜನಿಕರು ಸಫಾರಿಗೆ ಹೋಗುವುದಕ್ಕೆ ಅವಕಾಶ ನೀಡಿ ಎನ್ನುವ ’ಬೇಡಿಕೆ’ ಯನ್ನು ಕಿವಿ ಮೇಲೆ ಹಾಕಿಕೊಳ್ಳದ ಅರಣ್ಯ ಇಲಾಖೆ, ಪ್ರಭಾವಿಗಳಿಗೆ ಅವಕಾಶ ನೀಡುತ್ತಿರು ವುದು ಹೇಗೆ? ಈ ರೀತಿ ಅವಕಾಶ ನೀಡುವಂತೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವುದು ಯಾರು ಎನ್ನುವ ಪ್ರಶ್ನೆಗಳನ್ನು ರೆಸಾರ್ಟ್ ಮಾಲೀಕರು ಕೇಳುತ್ತಿದ್ದಾರೆ.

ಬಿಗ್ ಕ್ಯಾಟ್ ಸಮಾವೇಶಕ್ಕೆ ಬಂದವರಿಗೆ ಅವಕಾಶ

ಬಂಡೀಪುರದಲ್ಲಿ ನಡೆಯುತ್ತಿರುವ ಬಿಗ್ ಕ್ಯಾಟ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಹಲವು ದೇಶಗಳ ಪ್ರತಿನಿಧಿಗಳು ಆಗಮಿಸಿದ್ದಾರೆ. ಈ ಪ್ರತಿನಿಧಿಗಳನ್ನು ವಿವಿಧ ಹಂತದಲ್ಲಿ ಸಫಾರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸಫಾರಿಗೆ ಹೋದರೆ ದಾಳಿಯಾಗಲಿದೆ ಎನ್ನುವ ಆತಂಕವಿದ್ದರೆ, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಕರೆದು ಕೊಂಡು ಹೋಗುತ್ತಿರುವುದು ಏಕೆ? ಒಂದು ವೇಳೆ ಅವರ ಮೇಲೆ ಹುಲಿಗಳು ದಾಳಿ ನಡೆದರೆ ಸಮಸ್ಯೆ ಆಗುವುದಿಲ್ಲವೇ? ಅವರು ಹೋಗಲು ಸುರಕ್ಷಿತ ಎನ್ನುವುದಾದರೆ ಜನ ಸಾಮಾನ್ಯ ರಿಗೆ ಅವಕಾಶ ನೀಡುವುದರಲ್ಲಿ ತಪ್ಪೇನಿದೆ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿದೆ.

ಸಮಾವೇಶದಲ್ಲಿ ಭಾಗವಹಿಸಲು ಆಫ್ರಿಕಾ ಖಂಡದಿಂದ ಬಂದಿರುವ ಅನೇಕ ಪ್ರತಿನಿಧಿಗಳು ರೆಸಾರ್ಟ್‌ಗಳಲ್ಲೇ ಉಳಿದಿದ್ದು, ಸಫಾರಿಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಆಸಕ್ತಿ ಇಲ್ಲದಿರು ವವರನ್ನು ಕರೆದುಕೊಂಡು ಹೋಗುವ ಬದಲು ಆಸಕ್ತಿ ತೋರುತ್ತಿರುವ ಪ್ರವಾಸಿಗರಿಗೆ ಅವಕಾಶ ನೀಡುವುದು ಸೂಕ್ತವಲ್ಲವೇ ಎನ್ನುವುದು ಸ್ಥಳೀಯ ರೆಸಾರ್ಟ್ ಮಾಲೀಕರ ಪ್ರಶ್ನೆಯಾಗಿದೆ.