Ranjith H Ashwath Column: ಹೈಕಮಾಂಡ್ ತೀರ್ಮಾನ ಅಂತಿಮ ಹೌದು, ಆದರೆ..!
ಕೇವಲ ಘೋಷಣೆ ಮಾತ್ರವಲ್ಲದೇ, ನಿತ್ಯ ಹತ್ತಾರು ಸಭೆ, ಗಣ್ಯರ ಭೇಟಿ ಸೇರಿದಂತೆ ಬ್ಯುಸಿ ಶೆಡ್ಯೂಲ್ ಮೂಲಕ ಕರ್ನಾಟಕ ಭಿನ್ನ ರೀತಿಯ ಆಡಳಿತ ನೀಡಬಹುದೇನೋ ಎನ್ನುವ ಮಾತುಗಳನ್ನು ಆಡುವಂತೆ ಮಾಡಿದ್ದರು. ಆದರೆ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ವಾರಗಟ್ಟಲೇ ದೆಹಲಿ ನಾಯಕರ ಹಾದಿ ಕಾದಿದ್ದು, ವಿಸ್ತರಣೆಯ ದಿನಾಂಕವನ್ನು ನಾಲ್ಕೈದು ಬಾರಿ ಮುಂದೂಡಿಕೆ ಮಾಡಿ ಹೈಕಮಾಂಡ್‌ನ ಒಪ್ಪಿಗೆಗೆ ಕಾದು ಕುಳಿತಿದ್ದು, ಸಂಪುಟ ವಿಸ್ತರಣೆಯಾದ ಬಳಿಕ ಖಾತೆ ಹಂಚಿಕೆಗೆ ವಾರಗಟ್ಟಲೇ ಸಮಯ ತೆಗೆದುಕೊಂಡಿದ್ದು ನೋಡಿ ರಾಜ್ಯದ ಜನ ಇಷ್ಟು ದಿನ ಕಂಡಿದ್ದ ಡಿ.ಕೆ.ಶಿವಕುಮಾರ್‌ಗಿಂತ ಭಿನ್ನವಾಗಿ ಕಂಡರು ಎಂದರೆ ತಪ್ಪಾಗುವುದಿಲ್ಲ