MLA from Thuruvekere: ತುರುವೇಕೆರೆ ಮೂಲದ ಸುನಿಲ್ ಆನಂದ್ ಶಾಸಕ
ಶಾಸಕ ಸುನಿಲ್ ಆನಂದ್ ಅವರು ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನೆಲೆಸಿದ್ದಾರೆ. ಸುನೀಲ್ ಆನಂದ್ ಅವರ ತಾತ(ತಂದೆಯವರ ತಂದೆ) ನಿಂಗೇಗೌಡ. ಇವರ ಊರು ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡಿಕೇಘಟ್ಟ. ಹಲವು ದಶಕಗಳ ಹಿಂದೆ ನಿಂಗೇಗೌಡರ ಅವರು ತಮಿಳು ನಾಡಿಗೆ ವಲಸೆ ಹೋಗಿದ್ದರು. ನಂತರದ ದಿನಗಳಲ್ಲಿ ಅಲ್ಲೇ ತಮ್ಮ ಜೀವನ ಸಾಗಿಸಿದರು.
-
ರಂಗನಾಥ ಕೆ. ಹೊನ್ನಮರಡಿ ತುಮಕೂರು
ನಟ ವಿಜಯ್ ಟಿವಿಕೆ ಪಕ್ಷದಿಂದ ಮೆಟ್ಟುಪಾಳ್ಯಂ ಕ್ಷೇತ್ರದಿಂದ ಸ್ಪರ್ಧಿಸಿ ಜಯ
ಜಿಲ್ಲೆಯ ತುರುವೇಕೆರೆ ಮೂಲದ ವ್ಯಕ್ತಿಯೊಬ್ಬರು ನಟ ವಿಜಯ್ ಪಕ್ಷ ಟಿವಿಕೆಯಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಸುನೀಲ್ ಆನಂದ್ ಟಿವಿಕೆ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
75,664 ಮತ ಪಡೆದು ಇವರು ಡಿಎಂಕೆ ಹಾಗೂ ಎಐಎಡಿಎಂಕೆ ಎರಡೂ ಪಕ್ಷದವರನ್ನು ಮಣಿಸಿ, 7778 ಮತಗಳ ಅಂತರದಿಂದ ವಿಜಯಿಶಾಲಿಯಾಗಿದ್ದಾರೆ.
ತುರುವೇಕೆರೆ ಮೂಲ: ಶಾಸಕ ಸುನಿಲ್ ಆನಂದ್ ಅವರು ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನೆಲೆಸಿದ್ದಾರೆ. ಸುನೀಲ್ ಆನಂದ್ ಅವರ ತಾತ(ತಂದೆಯವರ ತಂದೆ) ನಿಂಗೇಗೌಡ. ಇವರ ಊರು ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡಿಕೇಘಟ್ಟ. ಹಲವು ದಶಕಗಳ ಹಿಂದೆ ನಿಂಗೇಗೌಡರ ಅವರು ತಮಿಳುನಾಡಿಗೆ ವಲಸೆ ಹೋಗಿದ್ದರು. ನಂತರದ ದಿನಗಳಲ್ಲಿ ಅಲ್ಲೇ ತಮ್ಮ ಜೀವನ ಸಾಗಿಸಿದರು.
ನಿಂಗೇಗೌಡರ ಮಗ ಎಚ್.ಎನ್.ನಾಗರಾಜು ಅವರ ಮಗನೇ ಈಗ ಮೆಟ್ಟುಪಾಳ್ಯಂ ಕ್ಷೇತ್ರದ ಶಾಸಕ ಸುನಿಲ್ ಆನಂದ್. ಈಗಲೂ ಸಹ ಸ್ವಂತ ಗ್ರಾಮದಲ್ಲಿ ಯಾವುದಾದರೂ ಧಾರ್ಮಿಕ ಕಾರ್ಯಗಳು ನಡೆದಾಗ ಭಾಗವಹಿಸುವ ಮೂಲಕ ಗ್ರಾಮದ ಋಣ ಉಳಿಸಿಕೊಂಡಿದ್ದಾರೆ. ಆನಂದ್ ಗೆಲುವಿಗಾಗಿ ಮಣ್ಣಿನ ಗುಣ ಉಳಿಸಿಕೊಂಡಿದ್ದಾರೆ ಎಂದು ಗ್ರಾಮದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Tamil Nadu Election: ದಳಪತಿ ವಿಜಯ್‌ಗೆ ವಿಶೇಷ ಸಂದೇಶ ರವಾನಿಸಿದ ವರುಣ್ ಚಕ್ರವರ್ತಿ!
ಶಾಸಕ ಸುನಿಲ್ ಆನಂದ್ ಅವರ ತಾಯಿಯ ತಂದೆಯವರಾದ ಲಿಂಗಪ್ಪ ಮೈಸೂರಿನ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಸ್ಮರಣಾರ್ಥ ಮೈಸೂರಿನ ಒಂಟಿಕೊಪ್ಪಲ್ ಬಳಿ ಮೇಯರ್ ಲಿಂಗಪ್ಪ ವೃತ್ತವನ್ನು ನಿರ್ಮಿಸಲಾಗಿದೆ ಎಂದು ಸುನಿಲ್ ಆನಂದ್ ಅವರ ಸಂಬಂಧಿಕರಾದ ಮಾಜಿ ಶಾಸಕ ಎಚ್.ಬಿ.ನಂಜೇಗೌಡ ತಿಳಿಸಿದರು.
ಸುನಿಲ್ ಆನಂದ್ ಅವರಿಗೆ ರಾಜಕೀಯಕ್ಕೆ ಧುಮುಕಿ ಪ್ರಥಮ ಪ್ರಯತ್ನದಲ್ಲೇ ಶಾಸಕರಾಗಿದ್ದಾರೆ. ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಆನಂದ್ ಅವರು ಸಚಿವ ಸಂಪುಟದಲ್ಲಿ ಮಂತ್ರಿಯಾದರೆ ತಾಲೂಕಿನ ಕುಡಿಯೊಂದು ಬೇರೊಂದು ರಾಜ್ಯ ದಲ್ಲಿ ಮಂತ್ರಿಯಾದ ಹೆಮ್ಮೆ ಆಗುತ್ತದೆ. ತುರುವೇಕೆರೆ ತಾಲೂಕಿನಲ್ಲಿ ಕಳೆದ ಐದಾರು ದಶಕಗಳ ಹಿಂದೆ ತಾಳಕೆರೆ ಸುಬ್ರಹ್ಮಣ್ಯಂ ಅವರು ಸಚಿವರಾಗಿದ್ದು, ಬಿಟ್ಟರೆ ಇವತ್ತಿನವರೆಗೂ ಯಾರೊಬ್ಬರೂ ಮಂತ್ರಿ ಆಗಿಲ್ಲ, ಸುನಿಲ್ ಆನಂದ್ ಅವರಿಗೆ ಮಂತ್ರಿಯಾಗುವ ಭಾಗ್ಯ ಒದಗಿ ಬರಲಿ ಎಂದು ಜಿಲ್ಲೆಯ ಜನತೆ ಆಶಿಸಿದ್ದಾರೆ.
11ನೇ ತರಗತಿ ವ್ಯಾಸಂಗ
ಶಾಸಕ ಸುನಿಲ್ ಆನಂದ್ ಅವರು 11ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿದ್ದು, ತಮಿಳು ನಾಡಿನಲ್ಲಿಯೇ ರಿಯಲ್ ಎಸ್ಟೇಟ್, ಹೋಟೆಲ್ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿ ಕೊಂಡಿದ್ದಾರೆ. ಬಹುದೀರ್ಘಕಾಲ ದಿಂದಲೂ ನಟ ವಿಜಯ್ ಅವರ ಬೆಂಬಲಿಗರಾಗಿದ್ದು, ಹೊಸದಾಗಿ ಆರಂಭವಾದ ಟಿವಿಕೆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟಿಸುವ ಮೂಲಕ ಚುನಾವಣೆಗೆ ಮೊದಲು ಪಕ್ಷದಲ್ಲಿ ತಮ್ಮ ವರ್ಚಸ್ಸು ಬೆಳೆಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಕಲ್ಪತರು ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.