Vishwavani Impact: ಪಂಪ್ʼಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ
ವಿಶ್ವವಾಣಿಯಲ್ಲಿ ಹೆಸ್ಕಾಂ ಸಿಬ್ಬಂದಿಯ ಪಿತೂರಿ: ಪಂಪ್ʼಸೆಟ್‌ಗಳಿಗೆ ದೊರೆಯದ ವಿದ್ಯುತ್ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಗ್ರಾಮಸ್ಥರು ಹಾಗೂ ಹೆಸ್ಕಾಂ ಉಪ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಆರೋಪದ ಬೆನ್ನಲ್ಲೆ ಗ್ರಾಮಕ್ಕೆ ಆಗಮಿಸಿದ ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿಬ್ಬಂದಿಗಳು ತಮ್ಮ ಮೇಲೆ ವಿನಾಕಾರಣ ಆರೋಪವಿದೆ.
-
ರಾಮದುರ್ಗ: ತಾಲೂಕಿನ ಸುರೇಬಾನ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ಚಿಕ್ಕತಡಸಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ವಿತರಣಾ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಕಿಡಗೇಡಿಗಳನ್ನು ಬಳಕೆ ಮಾಡಿಕೊಂಡು ಹಿಂದೆ ವರ್ಗಾವಣೆಗೊಂಡ ಇಲಾಖೆಯ ಸಿಬ್ಬಂದಿ ಲೈನ್‌ಪಾರ್ಟ ಮಾಡುತ್ತಿರ ಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದೇವು. ಆದರೆ ಹಿಂದಿನ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ರಮೇಶ ಹೊಳೆಯನ್ನವರ ತಿಳಿಸಿದ್ದಾರೆ.
ವಿಶ್ವವಾಣಿಯಲ್ಲಿ ಹೆಸ್ಕಾಂ ಸಿಬ್ಬಂದಿಯ ಪಿತೂರಿ: ಪಂಪ್ʼಸೆಟ್‌ಗಳಿಗೆ ದೊರೆಯದ ವಿದ್ಯುತ್ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಗ್ರಾಮಸ್ಥರು ಹಾಗೂ ಹೆಸ್ಕಾಂ ಉಪ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಆರೋಪದ ಬೆನ್ನಲ್ಲೆ ಗ್ರಾಮಕ್ಕೆ ಆಗಮಿಸಿದ ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿಬ್ಬಂದಿಗಳು ತಮ್ಮ ಮೇಲೆ ವಿನಾಕಾರಣ ಆರೋಪವಿದೆ. ರೈತರ ವಿಷಯದಲ್ಲಿ ನಾವು ತಪ್ಪು ಮಾಡುವುದಿಲ್ಲ. ಲೈನ್‌ಪಾರ್ಟ ನಾವೇ ಮಾಡಿಸುತ್ತಿದ್ದೇವೆ ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು. ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಠೀಕರಣ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: Belagavi News: ಇನ್ಶೂರೆನ್ಸ್ ಹಣದ ಆಸೆಗಾಗಿ ಚಿನ್ನದಂಗಡಿಯಲ್ಲಿ ಕಳ್ಳತನದ ನಾಟಕ; ಮಾಲೀಕ ಅರೆಸ್ಟ್
ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ರೈತರ ಪಂಪ್ʼಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕೆಲಸ ನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಲೈನ್‌ಪಾರ್ಟ ಉದ್ದೇಶಪೂರ್ವಕವಾಗಿ ಮಾಡುವವರನ್ನು ಪತ್ತೆ ಹಚ್ಚಲು ಶಾಖಾಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ, ತಪ್ಪಿತಸ್ಥರ ಮೇಲೆ ಶಿಕ್ಷೆಯಾಗುವಂತೆ ನೋಡಿ ಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ರಮೇಶ ಹೊಳೆಯನ್ನವರ, ಕಲ್ಲನಗೌಡ ಪಾಟೀಲ, ಕಲ್ಮೇಶ ರೋಣದ, ಮಂಜು ಹರನಟ್ಟಿ, ಶಿವಯೋಗಿ ಹರನಟ್ಟಿ, ಶಿವಯೋಗಿ ರೋಣದ, ಮಹೇಶ ಹರನಟ್ಟಿ, ಮಾರುತಿ ಉಪ್ಪಾರ, ಬಸನಗೌಡ ಪಾಟೀಲ, ನಾಗನಗೌಡ ಕುಲಕರ್ಣಿ, ಶಿವನಗೌಡ ಕುಲಕರ್ಣಿ, ಸಂತೋಷ ಹರನಟ್ಟಿ, ಶಿವಪ್ಪ ಹರನಟ್ಟಿ, ಆನಂದ ಬೂದನ್ನವರ, ಈರಣ್ಣ ನಾಯ್ಕರ, ಬೈಲಪ್ಪ ಹರನಟ್ಟಿ, ಫಕೀರಪ್ಪ ರೋಣದ, ಮೈಲಾರಿ ಹಳ್ಳಿ ಸೇರಿದಂತೆ ಇತರರಿದ್ದರು.