ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

700 ಗ್ರಾಂ ತೂಕ ಹೆಚ್ಚಳ; ಸುಚಿಕಾ ತರಿಯಾಲ್‌ಗೆ ಕೈತಪ್ಪಿದ ಫೈನಲ್‌ ಅವಕಾಶ, ಕಂಚಿಗೆ ತೃಪ್ತಿ

Suchika Tariyal: ನಿರಾಶೆಯ ಹೊರತಾಗಿಯೂ, 36 ವರ್ಷದ ಸುಚಿಕಾ ತರಿಯಾಲ್‌, ಐಚಿ-ನಗೋಯಾದಿಂದ ಐತಿಹಾಸಿಕ ಪದಕದೊಂದಿಗೆ ತವರಿಗೆ ಮರಳಲಿದ್ದಾರೆ. ಭಾನುವಾರ ನಡೆದ ಕ್ವಾರ್ಟರ್-ಫೈನಲ್‌ನಲ್ಲಿ ಮಂಗೋಲಿಯಾದ ಅಲ್ತಾನ್‌ಚಿಮೆಗ್ ಬೈಗಾಲ್ಮಾ ವಿರುದ್ಧ ಸಂಯಮದ ಪ್ರದರ್ಶನ ನೀಡುವ ಮೂಲಕ ತರಿಯಾಲ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದರು.

700 ಗ್ರಾಂ ತೂಕ ಹೆಚ್ಚಳ; ಸುಚಿಕಾಗೆ ಕೈತಪ್ಪಿದ ಫೈನಲ್‌ ಅವಕಾಶ

Suchika Tariyal -

Abhilash BC
Abhilash BC Sep 21, 2026 12:11 PM

ನಗೋಯೊ, ಸೆ.21: ಸೋಮವಾರ ನಡೆದ 2026ರ ಏಷ್ಯನ್ ಗೇಮ್ಸ್‌ನ ಮಹಿಳೆಯರ 60 ಕೆಜಿ ವಿಭಾಗದ 'ಮಿಕ್ಸೆಡ್ ಮಾರ್ಷಲ್ ಆರ್ಟ್ಸ್' (MMA) ಸ್ಪರ್ಧೆಯಲ್ಲಿ ಭಾರತದ ಸುಚಿಕಾ ತರಿಯಾಲ್ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದುಕೊಂಡರು. ಸೆಮಿಫೈನಲ್‌ನಲ್ಲಿ ಸಿಂಗಾಪುರದ ಹುಯಿ ಹೂನ್ ಟಿಯೊ ವಿರುದ್ಧದ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಗೊಂಡು ಡ್ರಾ ಗೊಂಡರೂ ವಿಚಿತ್ರ ನಿಮಯದ ಅನುಸಾರ ಭಾರತೀಯ ಆಟಗಾರ್ತಿಯ ಫೈನಲ್‌ ಪ್ರವೇಶದ ಅವಕಾಶ ಕೈತಪ್ಪಿತು.

ಸೋಲಿನ ಬಳಿಕ ಭಾವುಕರಾದ ಸುಚಿಕಾ ಕಣ್ಣೀರಿಟ್ಟರು ಮತ್ತು ತೀರ್ಪುಗಾರರ ನಿರ್ಧಾರವನ್ನು ಪ್ರಶ್ನಿಸಲು ನಿರ್ಧರಿಸಿದರು. ನಿಯಮಗಳ ಪ್ರಕಾರ, ತೀರ್ಪಿನ ವಿರುದ್ಧ ಆಕ್ಷೇಪಣೆ ಸಲ್ಲಿಸುವ ಕ್ರೀಡಾಪಟುವು 100 ಅಮೆರಿಕನ್ ಡಾಲರ್‌ನಷ್ಟು ಮರುಪಾವತಿಸಲಾಗದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸುಚಿಕಾ ಅವರ ವಿಷಯದಲ್ಲಿ, ಈ ಶುಲ್ಕವನ್ನು ಭಾರತೀಯ ಎಂಎಂಎ (MMA) ಫೆಡರೇಶನ್ ಮತ್ತು ತರಬೇತುದಾರ ನಿಖಿಲ್ ಕುಂದರ್ ಪಾವತಿಸಿದರು.

ಏಷ್ಯನ್​ ಗೇಮ್ಸ್​ ಶೂಟಿಂಗ್‌; ಹಿಮಾಂಶು ಧಿಲ್ಲೋನ್‌ಗೆ ಬೆಳ್ಳಿ, ಕಂಚು ಗೆದ್ದ ರುದ್ರಾಂಕ್ಷ್ ಪಾಟೀಲ್

ಸಾಮಾನ್ಯವಾಗಿ, ಪಂದ್ಯವೊಂದನ್ನು ಮೂವರು ಅಧಿಕಾರಿಗಳ ಸಮಿತಿಯು ನಿರ್ಣಯಿಸುತ್ತದೆ. ಆದರೆ, ತೀರ್ಪಿನ ಮರುಪರಿಶೀಲನೆಗೆ (ಆರ್ಬಿಟ್ರೇಷನ್) ಮನವಿ ಸಲ್ಲಿಸಿದ ಸಂದರ್ಭದಲ್ಲಿ, 10 ಸದಸ್ಯರನ್ನೊಳಗೊಂಡ ಸಮಿತಿಯು ಪಂದ್ಯವನ್ನು ಪರಿಶೀಲಿಸುತ್ತದೆ. ಲಭ್ಯವಿರುವ ಎಲ್ಲಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸಮಿತಿಯು, ಅಂತಿಮವಾಗಿ ಸುಚಿಕಾ ಮತ್ತು ಹುಯಿ ಹೂನ್ ಟಿಯೋ ನಡುವಿನ ಪಂದ್ಯವು 'ಡ್ರಾ' (ಸಮಬಲ) ದಲ್ಲಿ ಕೊನೆಗೊಂಡಿದೆ ಎಂದು ತೀರ್ಮಾನಿಸಿತು.

ಸುಚಿಕಾಗೆ ಏಕೆ ಕಂಚಿನ ಪದಕ ನೀಡಲಾಯಿತು?

ಪಂದ್ಯವು ಸಮಬಲದಲ್ಲಿ ಕೊನೆಗೊಂಡ ನಂತರ, ತೀರ್ಪುಗಾರರು ಸ್ಪರ್ಧೆಯ 'ಟೈ-ಬ್ರೇಕ್' ನಿಯಮವನ್ನು ಅನ್ವಯಿಸಿದರು. ಈ ನಿಯಮದ ಪ್ರಕಾರ ಕಡಿಮೆ ತೂಕವಿರುವ ಆಟಗಾರ್ತಿಯನ್ನು ವಿಜೇತೆ ಎಂದು ಘೋಷಿಸಲಾಗುತ್ತದೆ. ಸುಚಿಕಾಳ ತೂಕವು ತನ್ನ ಎದುರಾಳಿಗಿಂತ 700 ಗ್ರಾಂ ಹೆಚ್ಚಿದ್ದರಿಂದ, ತೀರ್ಪು ಹುಯಿ ಹೂನ್ ಟಿಯೊ ಅವರ ಪರವಾಗಿ ಬಂತು. ಇದರ ಪರಿಣಾಮವಾಗಿ, ಸುಚಿಕಾ ಫೈನಲ್ ತಲುಪುವ ಅವಕಾಶವನ್ನು ಕಳೆದುಕೊಂಡರು ಮತ್ತು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ನಿರಾಶೆಯ ಹೊರತಾಗಿಯೂ, 36 ವರ್ಷದ ಈ ಕ್ರೀಡಾಪಟು ಐಚಿ-ನಗೋಯಾದಿಂದ ಒಂದು ಮಹತ್ವದ ಪದಕದೊಂದಿಗೆ ತವರಿಗೆ ಮರಳಲಿದ್ದಾರೆ. ಭಾನುವಾರ ನಡೆದ ಕ್ವಾರ್ಟರ್-ಫೈನಲ್‌ನಲ್ಲಿ ಮಂಗೋಲಿಯಾದ ಅಲ್ತಾನ್‌ಚಿಮೆಗ್ ಬೈಗಾಲ್ಮಾ ವಿರುದ್ಧ ಸಂಯಮದ ಪ್ರದರ್ಶನ ನೀಡುವ ಮೂಲಕ ತರಿಯಾಲ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದರು.