ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ministry for Kalyana Karnataka: ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವು ದಾಗಿ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದರೂ, ಆ ಸಚಿವಾಲಯಕ್ಕೆ ಅಗತ್ಯವಾದ ಆಡಳಿತಾ ತ್ಮಕ ಶಕ್ತಿ ಇನ್ನೂ ಒದಗಿಲ್ಲ. ಬೆಂಗಳೂರಿನ ಸಚಿವಾಲಯದ ಯಾವುದೋ ಮೂಲೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಕಡತಗಳು ಧೂಳು ಹಿಡಿದು ಮಲಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?

-

Ashok Nayak
Ashok Nayak Jan 12, 2026 11:36 AM

ದೇವೇಂದ್ರ ಜಾಡಿ ಕಲಬುರಗಿ

ಕಲ್ಯಾಣ ಕರ್ನಾಟಕಕೆ ಬೇಕಿದೆ ಪ್ರತ್ಯೇಕ ಸಚಿವಾಲಯದ ಬಲ

ಘೋಷಣೆಗಳ ನಡುವೆ ಕಮರುತ್ತಿವೆ ಜನರ ನೂರಾರು ಕನಸುಗಳು

ಸಂವಿಧಾನದ 371(ಜೆ) ವಿಧಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭಿವೃದ್ಧಿಗೆ ಸಂಜೀವಿನಿಯಂತೆ ಬಂದಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನ ಇನ್ನು ಆಗಿಲ್ಲ. ದಶಕಗಳಿಂದಲೂ ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಕಲ್ಯಾಣ ಕರ್ನಾಟಕ ಸಚಿವಾಲಯ ಕಾಗದಕ್ಕೆ ಸೀಮಿತ ಗೊಂಡಿದ್ದು, ವಾಸ್ತವದಲ್ಲಿ ನೆಲಕಚ್ಚಿದೆ.

‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬ ನಾಣ್ಣುಡಿ ಇಂದಿಗೂ ಈ ಭಾಗದ ಜನರ ದುರಂತವನ್ನು ಪ್ರತಿಬಿಂಬಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವು ದಾಗಿ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದರೂ, ಆ ಸಚಿವಾಲಯಕ್ಕೆ ಅಗತ್ಯವಾದ ಆಡಳಿ ತಾತ್ಮಕ ಶಕ್ತಿ ಇನ್ನೂ ಒದಗಿಲ್ಲ. ಬೆಂಗಳೂರಿನ ಸಚಿವಾಲಯ ದ ಯಾವುದೋ ಮೂಲೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಕಡತಗಳು ಧೂಳು ಹಿಡಿದು ಮಲಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇತರೆ ಸಚಿವಾಲಯಗಳಂತೆ ಸ್ವತಂತ್ರ ನಿರ್ಧಾರಾ ಧಿಕಾರ, ಪ್ರತ್ಯೇಕ ಬಜೆಟ್ ನಿರ್ವ ಹಣೆ, ತ್ವರಿತ ಅನುಷ್ಠಾನ ವ್ಯವಸ್ಥೆ ಇವುಗಳೆಲ್ಲವೂ ಕಲ್ಯಾಣ ಕರ್ನಾಟಕ ಸಚಿವಾಲಯಕ್ಕೆ ಇನ್ನೂ ಕನಸಾಗಿಯೇ ಉಳಿದಿವೆ.

ಇದನ್ನೂ ಓದಿ: Separate Kalyana Karnataka state: ರಾಜ್ಯೋತ್ಸವದಂದೇ ಪ್ರತ್ಯೇಕ 'ಕಲ್ಯಾಣ ಕರ್ನಾಟಕ' ಧ್ವಜಾರೋಹಣಕ್ಕೆ ಯತ್ನ: ಹಲವರ ಬಂಧನ

ಆಡಳಿತಾತ್ಮಕ ಹಿನ್ನಡೆ: 371(ಜೆ)ಗೆ ಬಂದ ಅಡ್ಡಿ: ಪ್ರತ್ಯೇಕ ಸಚಿವಾಲಯದ ಕೊರತೆಯ ಪರಿಣಾಮ ವಾಗಿ, 371(ಜೆ) ಅಡಿಯಲ್ಲಿ ನಡೆಯಬೇಕಾದ ನೇಮಕಾತಿ, ಬಡ್ತಿ ಹಾಗೂ ಅನುದಾನ ಹಂಚಿಕೆ ಪ್ರಕ್ರಿಯೆಗಳು ತೀವ್ರ ವಿಳಂಬಕ್ಕೆ ಒಳಗಾಗಿವೆ. ಸರಕಾರಿ ದೇಶದಂತೆ ‘ಅನುಸೂಚಿ 29ರ’ ಅಡಿ ಯಲ್ಲಿ ವಿಶೇಷ ಇಲಾಖೆ ರಚನೆಯಾಗಬೇಕಿದ್ದರೂ, ಇದಕ್ಕೆ ಅಗತ್ಯ ವಿರುವ ಪ್ರತ್ಯೇಕ ಕಾರ್ಯ ದರ್ಶಿಗಳು, ನಿರ್ದೇಶಕರು ಮತ್ತು ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಇದರಿಂದ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಕಾಮಗಾರಿ ಗಳ ಮೇಲ್ವಿಚಾರಣೆ, ಯೋಜನೆಗಳ ಅನುಷ್ಠಾನ ಹಾಗೂ ಫಲಾನುಭವಿಗಳಿಗೆ ತಲುಪಬೇಕಾದ ಸೌಲಭ್ಯಗಳು ಕುಂಟುತ್ತಾ ಸಾಗುತ್ತಿರುವುದು ಕಠೋರ ಸತ್ಯ.

ಅನುದಾನ ಬಳಕೆಗೆ ಪ್ರತ್ಯೇಕ ಸಚಿವಾಲಯದ ಅಗತ್ಯ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೀಸಲಾದ ಅನುದಾನ ಸಮರ್ಪಕವಾಗಿ ಬಳಕೆಯಾಗ ಬೇಕಾದರೆ, ಬಲಿಷ್ಠ ಹಾಗೂ ಸ್ವತಂತ್ರ ಸಚಿವಾಲಯವೇ ಬೆನ್ನೆಲುಬಾಗಬೇಕು. ಆದರೆ ಸ್ಪಷ್ಟ ಆಡಳಿತಾತ್ಮಕ ವ್ಯವಸ್ಥೆಯಿಲ್ಲದೆ ಅನುದಾನ ಕೇವಲ ಅಂಕಿ-ಅಂಶಗಳಲ್ಲೇ ಸೀಮಿತವಾಗುವ ಭೀತಿ ಎದುರಾಗಿದೆ.

ಘೋಷಣೆಯಿಂದ ಬದುಕು ಬದಲಾಗುವುದಿಲ್ಲ: ಕಲ್ಯಾಣ ಕರ್ನಾಟಕ ಜನರ ಬದುಕು ಸುಧಾರಿಸ ಬೇಕಾದರೆ, ಅದು ಘೋಷಣೆಗಳಿಂದಲ್ಲ. ಕಾರ್ಯ ರೂಪದ ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ.

ಸರಕಾರಕ್ಕೆ ಜನರ ಆಗ್ರಹಗಳೇನು?

ಅಧಿಸೂಚನೆಗೆ ಸೀಮಿತವಾಗದೇ ಬೆಂಗಳೂರಿನಲ್ಲೇ ಪ್ರತ್ಯೇಕ ಕಲ್ಯಾಣ ಕರ್ನಾಟಕ ಸಚಿವಾಲಯದ ಕಚೇರಿ ತಕ್ಷಣ ಆರಂಭವಾಗಬೇಕು.

ಸಮರ್ಥ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರಿಗಳನ್ನು ನೇಮಿಸಿ, ವಾರದೊಳಗೆ ಕಡತ ವಿಲೇವಾರಿಯಾಗುವ ವ್ಯವಸ್ಥೆ ರೂಪಿಸಬೇಕು.

ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿ ಹಾಗೂ ಕೈಗಾರಿಕಾಭಿವೃದ್ಧಿಗೆ ಸಚಿವಾಲಯವೇ ಕೇಂದ್ರ ಬಿಂದುವಾಗಬೇಕು.?

*

ಕಲ್ಯಾಣ ಕರ್ನಾಟಕಕ್ಕೆ 371(ಜೆ) ಸಿಕ್ಕು ಇಷ್ಟು ವರ್ಷ ಗಳಾದರೂ ಇಂದಿಗೂ ಪ್ರತ್ಯೇಕ ಸಚಿವಾಲಯ ಕಾರ್ಯಾರಂಭವಾಗದಿರುವುದು ಸರಕಾರದ ನಿರ್ಲಕ್ಷ್ಯ ವಾಗಿದೆ. ಘೋಷಣೆ ಮಾಡಿದರೆ ಸಾಕು ಎಂಬ ಮನೋಭಾವದಿಂದ ಜನರ ಬದುಕು ಬದಲಾಗುವುದಿಲ್ಲ. ಕಾಗದದ ಸಚಿವಾಲಯ ಬೇಡ, ಕಾರ್ಯ ನಿರ್ವಹಿಸುವ ಸಚಿವಾಲಯ ಬೇಕು. ಶೀಘ್ರ ಸರಕಾರ ಇತರೆ ಸಚಿವಾಲಯಗಳಂತೆ ಕಲ್ಯಾಣ ಕರ್ನಾಟಕಕ್ಕೂ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು.

-ಲಕ್ಷ್ಮಣ ದಸ್ತಿ, ಅಧ್ಯಕ್ಷ , ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ

ದಯೆಯ ಬೇಡಿಕೆ ಇಲ್ಲ, ಸಂವಿಧಾನ ಕೊಟ್ಟ ಹಕ್ಕಿನ ಅನುಷ್ಠಾನ ಬೇಕು. 24 ಸಾವಿರ ಕೋಟಿ ಅನು ದಾನವಿದೆ ಎಂದರೂ, ಪ್ರತ್ಯೇಕ ಸಚಿವಾಲಯವಿಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯ? ಸರಕಾರ ತಕ್ಷಣ ಅಧಿಕಾರಿಗಳನ್ನು ನೇಮಿಸಿ ಸಚಿವಾಲಯವನ್ನು ಸಕ್ರಿಯಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವುದು ಅನಿವಾರ್ಯ.

-ಸಾಯಿಬಣ್ಣ ಜಮಾದಾರ, ಹೋರಾಟಗಾರ